HOLY ROSARY CHURCH, KUNDAPUR – 450 th JUBILEE SOUVENIR 2021

ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಎಂ ಐ ಟಿ ಮೂಡ್ಲಕಟ್ಟೆಯ ಶಶಾಂಕ್ ರಾಜ್ಯಮಟ್ಟದಲ್ಲಿ 9ನೇ ಸ್ಥಾನ

JANANUDI.COM NETWORK


ಕುಂದಾಪುರ,ಎ.23; ಸೈಬರ್ ಸೆಕ್ಯೂರಿಟಿ ಉತ್ಕೃಷ್ಟತೆಯ ಕೇಂದ್ರ, ಕರ್ನಾಟಕ ಮತ್ತು ರಾಷ್ಟ್ರೀಯ ಸಾಫ್ಟ್ವೇರ್ & ಸರ್ವಿಸ್ ಕಂಪನಿಗಳ ಅಸೋಸಿಯೇಷನ್ ವತಿಯಿಂದ ನಡೆಸಲ್ಪಟ್ಟ ‘ಮಾರ್ಚ್ ಫಾರ್ ಸೆಕ್ಯೂರ್ ಕೋಡ್’  ಎಂಬ ಅತೀ ಬೇಗ ಕೋರ್ಸ್ ಮುಗಿಸುವ ಸ್ಪರ್ಧೆಯಲ್ಲಿ  ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ವಿದ್ಯಾರ್ಥಿ ಶಶಾಂಕ್ ರಾಜ್ಯಮಟ್ಟದಲ್ಲಿ 9ನೇ ಸ್ಥಾನ ಪಡೆದು ಅಗ್ರ ಹತ್ತು ವಿಜೇತರಲ್ಲಿ ಒಬ್ಬರಾಗಿದ್ದಾರೆ. ಹಾಗೆಯೇ ಭಾರತ ಸರ್ಕಾರದ ನ್ಯಾಷನಲ್ ಕ್ರಿಟಿಕಲ್ ಇನ್ಫಾರ್ಮಶನ್ ಇನ್ಫ್ರಾಸ್ಟ್ರುಕ್ಚರ್ ಪ್ರೊಟೆಕ್ಷನ್ ಸೆಂಟರ್ ವತಿಯಿಂದ ನೀಡಾಲ್ಪಡುವ ಇಂಟರ್ನ್ಶಿಪ್ ಗೂ ಆಯ್ಕೆಯಾಗಿದ್ದಾರೆ. ಅಡ್ವಾನ್ಸಡ್ ಸ್ಕಿಲ್ ಡೆವಲಮೆಂಟ್ ತರಬೇತಿ ಕೇಂದ್ರವು ಈ ಕೋರ್ಸ್ ನ ಗ್ರ್ಯಾಂಡ್ ಫೈನಲ್ ನಡೆಸಿತ್ತು. ಮೂಡ್ಲಕಟ್ಟೆ ಎಂ ಐ ಟಿ  ಕಾಲೇಜು ಈ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಮೊದಲ ಹತ್ತು ವಿಜೇತರೊಳಗೆ ಸ್ಥಾನ ಪಡೆದವರಲ್ಲಿ ಉಡುಪಿ ಜಿಲ್ಲೆಯ ಏಕೈಕ ಕಾಲೇಜು ಆಗಿದೆ. 

827 ವಿದ್ಯಾರ್ಥಿಗಳಿಗೆ ನಡೆಸಿದ ಫೈನಲ್ ಸ್ಪರ್ಧೆಯಲ್ಲಿ ಆಗ್ರ ಹತ್ತು  ವಿಜೇತರೊಳಗೆ ಸ್ಥಾನ ಪಡೆಯೋದು ಹೆಮ್ಮೆಯ ವಿಷಯವಾಗಿದ್ದು, ಇಂತಹ ಮತ್ತಷ್ಟು ಸಾಧನೆ ಮಾಡಲಿ ಅಂತ ಶುಭಹಾರೈಸುತ್ತೇನೆ ಅಂತ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀ ಸಿದ್ದಾರ್ಥ್ ಜೆ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಲೇಜಿನ ಪ್ರಾಂಶುಪಾಲರಾದ ಡಾ. ಚಂದ್ರರಾವ್ ಮದಾನೆ, ಉಪ ಪ್ರಾಂಶುಪಾಲ ಪ್ರೊ. ಮೆಲ್ವಿನ್ ಡಿ ಸೋಜಾ, ಎಲ್ಲಾ ಡೀನ್, ವಿಭಾಗದ ಮುಖ್ಯಸ್ಥರು ಮತ್ತು ಸಿಬ್ಬಂದಿಗಳು ಎಲ್ಲಾ ಶುಭ ಹಾರೈಸಿದ್ದಾರೆ.

ರಾಮ ರಾಜ್ಯದ ಕಲ್ಪನೆ ಸಾಕಾರಗೊಂಡಾಗ ಸಮ ಸಮಾಜದ ಕಲ್ಪನೆ ಸಾಕಾರಗೊಳ್ಳುತ್ತದೆ ; ಟಿ.ಎಸ್.ಮಾಯಾ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ರಾಮ ರಾಜ್ಯದ ಕಲ್ಪನೆ ಸಾಕಾರಗೊಂಡಾಗ ಸಮ ಸಮಾಜದ ಕಲ್ಪನೆ ಸಾಕಾರಗೊಳ್ಳುತ್ತದೆ ಎಂದು ತಾಲ್ಲೂಕು ದಾಸ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಟಿ.ಎಸ್.ಮಾಯಾ ಬಾಲಚಂದ್ರ ಹೇಳಿದರು.
ಪಟ್ಟಣದ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿ ಗುರುವಾರ ಶ್ರೀರಾಮ ನವಮಿ ಪ್ರಯುಕ್ತ ಏರ್ಪಡಿಸಲಾಗಿದ್ದ, ರಾಮನ ಕುರಿತ ಉಪನ್ಯಾಸ ಮಾಲಿಕೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಶಿಷ್ಟರಿಗೆ, ಸಜ್ಜನರಿಗೆ ಮನೋಬಲ ನೀಡುವಲ್ಲಿ, ದುರ್ಮಾರ್ಗಿಗಳ ಮನಃಪರಿವರ್ತನೆಯಲ್ಲಿ, ಎಲ್ಲರಿಗೂ ಸನ್ಮಾರ್ಗ ತೋರುವಲ್ಲಿ ಶ್ರೀರಾಮನ ವ್ಯಕ್ತಿತ್ವ ಅತ್ಯಂತ ಪ್ರಸ್ತುತ. ಇಂತಹ ಅನನ್ಯ ಸಂದೇಶವನ್ನು ಭಕ್ತಿಪಂಥದ ಮೂಲಕ, ದಾಸ ಸಾಹಿತ್ಯದ ಮೂಲಕ ಸಮಾಜಕ್ಕೆ ನೀಡಿದ ಸಂತರನ್ನು ಸ್ಮರಿಸಬೇಕು. ರಾಮನ ಆದರ್ಶಗಳನ್ನು ಅರ್ಥೈಸಿಕೊಳ್ಳಲು ದಾಸಸಾಹಿತ್ಯ ಸಹಕಾರಿ ಎಂದು ಹೇಳಿದರು.
ಜಿಲ್ಲಾ ವಿಶ್ವ ಹಿಂದೂ ಪರಿಷತ್ತಿನ ಉಪಾಧ್ಯಕ್ಷ ಎಂ.ವೇಮಣ್ಣ ಮಾತನಾಡಿ, ರಾಮ ನವಮಿ ರಾಮನ ಆದರ್ಶ ಪಾಲನೆಗೆ ಚಾಲನೆ ನೀಡುವ ಕಾಲ. ಪ್ರತಿಯೊಬ್ಬರೂ ರಾಮ ಚರಿತೆಯನ್ನು ಓದಬೇಕು. ಅರ್ಥ ಮಾಡಿಕೊಂಡು ಅನುಸರಿಸಬೇಕು. ಆಧ್ಯಾತ್ಮ ಬಹುದೊಡ್ಡ ಶಕ್ತಿ. ಪುರಾಣ ಪುರುಷರ ಜೀವನ ದರ್ಶನದಿಂದ ಮನೋಬಲ ಹೆಚ್ಚುತ್ತದೆ ಎಂದು ಹೇಳಿದರು.
ಚಿಂತಕ ಎ.ವೆಂಕಟರೆಡ್ಡಿ ಅಯೋಧ್ಯಾ ಕಾಂಡ, ಸುಂದರ ಕಾಂಡದ ಬಗ್ಗೆ ಉಪನ್ಯಾಸ ನೀಡಿದರು. ಟಿ.ಎಸ್.ಮಾಯಾ ಬಾಲಚಂದ್ರ ರಾಮನ ಆದರ್ಶ ಕುರಿತು ಮಾತನಾಡಿದರು.
ತಾಲ್ಲೂಕು ವಿಶ್ವಹಿಂದೂ ಪರಿಷತ್ತಿನ ಮುಖಂಡರಾದ ಕೆ.ದಿವಾಕರ್, ಮೋಹನ್, ಗೋವಿಂದಯ್ಯ, ಜಯರಾಮರೆಡ್ಡಿ, ಡಾ. ರಮಾನಂದ್, ಮಂಜುಳಮ್ಮ, ಸತೀಶ್‍ರೆಡ್ಡಿ ಇದ್ದರು
,

ಕರ್ನಾಟಕ ರಾಜ್ಯ ಸರಕಾರ ಗಳಿಗೆಗೊಂದು ಮಾರ್ಗಸೂಚಿ ನೀಡುತ್ತದೆ; ಯು.ಟಿ.ಖಾದರ್ ಅಸಮಾಧಾನ

JANANUDI.COM NETWORK

ಮಂಗಳೂರು, ಎ.22: ಕರ್ನಾಟಕ ರಾಜ್ಯ ಸರಕಾರ ಕೋವಿಡ್ 19 ರ ಬಗ್ಗೆ ಗಳಿಗೆಗೊಂದು ಮಾರ್ಗಸೂಚಿ ನೀಡುವ ಮೂಲಕ ಜನತೆಗೆ ಗೊಂದಲ ಹಾಗೂ ಭಯದ ವಾತವರಣವನ್ನು ಮೂಡಿಸುತ್ತದೆ’ ಎಂದು ಮಂಗಳೂರಿನ ಶಾಸಕ ಇವತ್ತು ತೀವ್ರವಾದ ಅಸಮಾಧಾನವನ್ನು ವ್ಯಕ್ತ ಪಡಿಸಿದರು.
‘ಲಾಕ್ ಡೌನ್ ಮಾಡುವ ಪ್ರಶ್ನೆಯೇ ಇಲ್ಲವೆಂದು ಹೇಳುತ್ತಾ ಬಂದಿರುವ ಸರಕಾರ, ಇದೀಗ ಧೀಡಿರ್ ಬಂದ್ ಆದೇಶ ನೀಡುವ ಮೂಲಕ ಜನರ ಬದುಕಿನಲ್ಲಿಚೆಲ್ಲಾಟವಾಡಿಸಿ ಜನರ ತಮಾಶೆ ನೋಡುತಿದೆ’ ಎಂದು ಅವರು ಟ್ವೀಟ್ ಮೂಲಕ ಗರಂ ಆಗಿದ್ದಾರೆ.
‘ಈ ಸರ್ಕಾರದ್ದು ಹಿಂಬಾಗಿಲ ಲಾಕ್ ಡೌನ್ ಇದರ ಬದಲು ಸರಕಾರ ಸ್ಪಷ್ಟವಾದ ಆದೇಸವನ್ನು ನೀಡಿ, ಕಠಿಣವಾದ ಕ್ರಮಗಳನ್ನು ಕೈಗೊಳ್ಳ ಬೇಕು’ ಎಂದು ಯು.ಟಿ.ಖಾದರ್ ಆಗ್ರಹಿಸಿದ್ದಾರೆ.
ಕೆಳಗೆ ರಾಜ್ಯ ಸರಕಾರ ಇನ್ನೂ ಹಲವು ಕ್ರಮಗಳನ್ನು ಬದಲಿಸಿದವುಗಳನ್ನು ತೋರಿಸಲಾಗಿದೆ.

ಉಲ್ಲಾಳದಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿ ರಥೋತ್ಸವ ; ದೇವಸ್ಥಾನದ ಮಂಡಳಿ ವಿರುದ್ಧ ಪ್ರಕರಣ ದಾಖಲು

JANANUDI.COM NETWORK

ಉಲ್ಲಾಳ,22: ಸಾವಿರಾರು ಭಕ್ತರು ಭಾಗವಹಿಸಿದ್ದ, ಧಾರ್ಮಿಕ ಕಾರ್ಯಕ್ರಮವೊಂದನ್ನು ಆಯೋಜಿಸುವ ಮೂಲಕ ಕೋವಿಡ್ -19 ರ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಮಂಗಳೂರಿನ ಉಲ್ಲಾಳ ಸೋಮನಾಥ ದೇವಾಲಯದ ಆಡಳಿತ ಮಂಡಳಿ ವಿರುದ್ಧ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.

ಬ್ರಹ್ಮಕಳಶೋತ್ಸವದ ಅಂಗವಾಗಿ ದೇವಾಲಯದ ಆಡಳಿತ ಮಂಡಳಿ ಸೋಮವಾರ ರಥೋತ್ಸವ ಮತ್ತು ‘ಹೋರೆ ಕಾಣಿಕೆ’ ಆಯೋಜಿಸಿದ್ದರು. ರಥೋತ್ಸವದಲ್ಲಿ ವಿವಿಧ ಸ್ಥಳಗಳಿಂದ ಸಾವಿರಾರು ಭಕ್ತರು ಸೇರಿದ್ದು ಅವರಲ್ಲಿ ಹಲವರು ಮಾಸ್ಕ್ ಧರಿಸಲಿಲ್ಲ ಹಾಗೇ ಸಾಮಾಜಿಕ ಅಂತರ ಕಾಯ್ದುಕೊಂಡಿರದೆ ನಿಯಮ ಉಲಂಘನೆಯಾಗತ್ತು.

ಕೋವಿಡ್ ನಿಯಮ ಉಲ್ಲಂಘಿಸಿ ಜಾತ್ರೆ ಹಾಗೂ ರಥೋತ್ಸವ ನಡೆಸಿದ್ದ ದೇವಸ್ಥಾನ ಆಡಳಿತ ಮಂಡಳಿಗೆ ಮಂಗಳೂರು ತಹಶೀಲ್ದಾರ್ ಗುರುಪ್ರಸಾದ್ ಅವರು ಉತ್ತರ ಕೋರಿ ನೋಟಿಸ್ ನೀಡಿದ್ದರು. ಇದೀಗ ರಾಜ್ಯ ಸರ್ಕಾರದ ಆದೇಶವನ್ನು ಉಲ್ಲಂಘಿಸಿ ಜಾತ್ರೋತ್ಸವ ಆಯೋಜಿಸಿದ್ದಕ್ಕಾಗಿ ಉಲ್ಲಾಳ ಪೊಲೀಸರು ಮಂಗಳವಾರ ಸಾಂಕ್ರಾಮಿಕ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 269 ರ ಅಡಿಯಲ್ಲಿ ಕೇಸನ್ನು ದಾಖಲಿಸಿಕೊಂಡಿದ್ದಾರೆ.

ಸಾರ್ವಜನಿಕರಿಗೆ ಕರೋನಾ 2 ನೇ ಅಲೆಯ ಬಗ್ಗೆ ಜಾಗೃತಿ ಮೂಡಿಸಿ -ಎಸ್.ಮುನಿಸ್ವಾಮಿ

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಕೋಲಾರ : ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಭೆ – ಸಮಾರಂಭ , ಮದುವೆ ಮೊದಲಾದ ಆಚರಣೆಗಳಿಗಾಗಿ ಸರ್ಕಾರದ ಹೊಸ ಮಾರ್ಗಸೂಚಿಯನ್ನು ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳಿಸಿ , ಕರೋನಾ ಸೋಂಕಿತರಿಗೆ ಧೈರ್ಯ ತುಂಬಿ ಸಾರ್ವಜನಿಕರಿಗೆ ಕರೋನಾ 2 ನೇ ಅಲೆಯ ಬಗ್ಗೆ ಜಾಗೃತಿ ಮೂಡಿಸಿ ಎಂದು ಮೂಡಿಸಿ ಎಂದು ಕೋಲಾರ ಲೋಕಸಭಾ ಕ್ಷೇತ್ರದ ಸಂಸದರಾದ ಎಸ್.ಮುನಿಸ್ವಾಮಿ ಅವರು ತಿಳಿಸಿದರು . ಇಂದು ಜಿಲ್ಲಾಧಿಕಾರಿಗಳ ನ್ಯಾಯಾಂಗಣ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ , ಕೋವಿಡ್ -19 ವೈರಾಣು ಹರಡದಂತೆ ತೆಗೆದುಕೊಂಡಿರುವ ಮುಂಜಾಗ್ರತಾ ಕ್ರಮಗಳ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು . ಹೋಬಳಿ ಕೇಂದ್ರ ಸ್ಥಾನಗಳಲ್ಲಿ ಆಂಬುಲೆನ್ಸ್ ಸೇವೆ ಶೀಘ್ರವಾಗಿ ಸಾರ್ವಜನಿಕರಿಗೆ ಸಿಗುವಂತಾಗಬೇಕು . ಎಲ್ಲಾ ಆಂಬುಲೆನ್ಸ್‌ಗಳಲ್ಲಿ ಜಿ.ಪಿ.ಎಸ್ ವ್ಯವಸ್ಥೆ ಹೊಂದಿರಬೇಕು . ಖಾಸಗಿ ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಚಿಕಿತ್ಸೆಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು . ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು . ಕರೋನಾ ರೋಗಿಗಳ ಜೊತೆ ನಾವು ನಡೆದುಕೊಳ್ಳುವ ರೀತಿ ಉತ್ತಮವಾಗಿರಬೇಕು . ಜನರೇ ಸ್ವಯಂಪ್ರೇರಿತರಾಗಿ ಬಂದು ಲಸಿಕೆ ಪಡೆಯುವಂತೆ ಅವರನ್ನು ಪ್ರೇರೇಪಿಸಬೇಕು ಎಂದು ತಿಳಿಸಿದರು . ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ರಮೇಶ್ ಕುಮಾರ್ ಅವರು ಮಾತನಾಡಿ , ಜಿಲ್ಲೆಯಲ್ಲಿ ಬಡವರು , ನಿರ್ಗತಿಕರು ಎಲ್ಲರಿಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಅಥವಾ ಖಾಸಗಿ ಆಸ್ಪತ್ರೆಯಲ್ಲಿ ಸೂಕ್ರೀತಿಯ ಚಿಕಿತ್ಸೆ ಸಿಗುವಂತಾಗಬೇಕು . ರೆಟ್ಟಸಿವಿಯರ್‌ ಲಸಿಕೆ ಅವಶ್ಯಕವಾಗಿ ಬೇಕಾಗಿರುವ ಕರೋನಾ ಸೋಂಕಿತರಿಗೆ ಸಿಗುವಂತಾಗಬೇಕು ಎಂದು ತಿಳಿಸಿದರು . ಜಿಲ್ಲಾಧಿಕಾರಿಗಳಾದ ಡಾ || ಆರ್.ಸೆಲ್ವಮಣಿ ಅವರು ಮಾತನಾಡಿ , ಜಿಲ್ಲೆಯಲ್ಲಿ ಇಂದಿನಿಂದ ಸರ್ಕಾರದ ಮಾನದಂಡದಂತೆ ನೈಟ್ ಕರ್ಪ್ಯೂ ಮತ್ತು ವೀಕೆಂಡ್ ಕರ್ಮ್ಯೂ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು . ಅಂತರಾಜ್ಯ ಗಡಿ ಭಾಗದಲ್ಲಿ ಥರ್ಮಲ್ ಸ್ಮಿನಿಂಗ್ ಮಾಡಿಸಲಾಗುವುದು . ಜಿಲ್ಲೆಯಲ್ಲಿ ಜಿಲ್ಲಾಸ್ಪತ್ರೆ , ತಾಲ್ಲೂಕು ಆಸ್ಪತ್ರೆಗಳಲ್ಲಿ ಬೆಡ್‌ಗಳ , ಆಕ್ಸಿಜನ್ ವ್ಯವಸ್ಥೆ , ಐ.ಸಿ.ಯು ಬೆಡ್‌ಗಳ ಸ್ಥಿತಿಗತಿಗಳ ಬಗ್ಗೆ ಪರಿಶೀಲಿಸಲು ಅಧಿಕಾರಿಗಳಿಗೆ ಸೂಚಿಸಲಾಗುವುದು . ಎ ಸಿಸ್ಟಮ್ಯಾಟಿಕ್ ಇರುವವರಿಗೆ ಕರೋನಾ ಕೇರ್ ಸೆಂಟರ್‌ನಲ್ಲಿ ಚಿಕಿತ್ಸೆ ನೀಡುವುದಕ್ಕೆ ಸೂಚಿಸಲಾಗುವುದು ಎಂದು ತಿಳಿಸಿದರು . ಜಿಲ್ಲೆಯಲ್ಲಿ ಕರೋನಾ ಟೆಸ್ಟಿಂಗ್‌ಗಳ ಸಂಖ್ಯೆ ಹೆಚ್ಚಿಸುವಂತೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು . ಜಿಲ್ಲೆಯಲ್ಲಿ ಇದುವರೆಗೂ 1,70,000 ಜನರು ಲಸಿಕೆ ಪಡೆದಿದ್ದಾರೆ . ಕೇಂದ್ರ ಸರ್ಕಾರದ ಆದೇಶದಂತೆ ಮೇ 1 ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತವಾಗಿ ಲಸಿಕೆಯನ್ನು ಹಾಕಲ ಜಿಲ್ಲೆಯಲ್ಲಿ ಸೋಂಕಿತರಿಗೆ ಆ್ಯಕ್ಸಿಜನ್ ಕೊರತೆಯಾಗದಂತೆ ಅಧಿಕಾರಿಗಳಿಗೆ ಸೂಚನೆ ಕೊಡಲಾಗುವುದು . ಜಿಲ್ಲೆಯಲ್ಲಿ ಆಂಬುಲೆನ್ಸ್‌ಗಳು ಚಾಲ್ತಿಯಲ್ಲಿ ಇರಬೇಕು . ಕೊರತೆ ಕಂಡರೆ ಖಾಸಗಿ ವತಿಯಿಂದ ಆಂಬುಲೆನ್ಸ್ ಸೇವೆಯನ್ನು ತೆಗೆದುಕೊಂಡು ಬಳಕೆ ಮಾಡುತ್ತೇವೆ ಎಂದು ತಿಳಿಸಿದರು . ಜಿಲ್ಲೆಯಲ್ಲಿ ಕರೋನಾ ಸೋಂಕಿತರಿಗೆ 2200 ಬೆಡ್‌ಗಳ ವ್ಯವಸ್ಥೆ ಮಾಡಲಾಗಿದೆ . ಖಾಸಗಿ ಆಸ್ಪತ್ರೆಗಳಲ್ಲಿ ಶೇಕಡ 50 ರಷ್ಟು ಬೆಡ್‌ಗಳನ್ನು ಮೀಸಲಿಡಲಾಗಿದೆ . ಪ್ರತಿ ತಾಲ್ಲೂಕು ಆಸ್ಪತ್ರೆಯಲ್ಲೂ 5 ಐಸಿಯು ಬೆಡ್ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ತಿಳಿಸಿದರು . ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಕಾರ್ತಿಕ್ ರೆಡ್ಡಿ ಅವರು ಮಾತನಾಡಿ , ಸರ್ಕಾರದ ಮಾರ್ಗಸೂಚಿಯಂತೆ ಈಜುಕೊಳ , ಚಿತ್ರಮಂದಿರ , ಆಟದ ಮೈದಾನ ಕೇಂದ್ರಗಳನ್ನು ಬಂದ್ ಮಾಡಲಾಗುವುದು . ಬಾರ್ , ರೆಸ್ಟೋರೆಂಟ್‌ಗಳಲ್ಲಿ ಪಾರ್ಸಲ್‌ಗೆ ಮಾತ್ರ ಅವಕಾಶವಿರುತ್ತದೆ . ಕಂಪನಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಐಡಿ ಕಾರ್ಡ್ ಕಡ್ಡಾಯವಾಗಿರುತ್ತದೆ . ಎಲ್ಲಾ ಧಾರ್ಮಿಕ ಸ್ಥಳಗಳು , ಪೂಜಾ , ಪ್ರಾರ್ಥನಾ ಮಂದಿರಗಳಿಗೆ ಭಕ್ತರಿಗೆ ಅವಕಾಶವಿಲ್ಲ . ಆದರೆ , ಪೂಜಾ ಕಾರ್ಯಗಳು ನಡೆಸಲು ಅರ್ಚಕರಿಗೆ ಅವಕಾಶ ಇದೆ . ಸಾರ್ವಜನಿಕರು ಸರ್ಕಾರದ ಕಟ್ಟು ನಿಟ್ಟಿನ ಕ್ರಮಗಳನ್ನು ಪಾಲಿಸಬೇಕು ಎಂದು ತಿಳಿಸಿದರು . ಸಭೆಯಲ್ಲಿ ಮುಳಬಾಗಿಲು ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಡಾ || ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಹೆಚ್.ನಾಗೇಶ್ , ಬಂಗಾರಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಸ್.ಎನ್.ನಾರಾಯಣಸ್ವಾಮಿ , ಮಾಲೂರು ವಿಧಾನಸಭಾ ಕ್ಷೇತ್ರದ ಶಾಶಕರಾದ ಕೆ.ವೈ.ನಂಜೇಗೌಡ , ಕೆ.ಜಿ.ಎಫ್ ವಿಧಾನಸಭಾ ಕ್ಷೇತ್ರದ ಶಾಸಕರಾದ ರೂಪಕಲಾ ಶಶಿಧರ್ , ವಿಧಾನ ಪರಿಷತ್ ಸದಸ್ಯರಾದ ಗೋವಿಂದರಾಜು , ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಣಾಧಿಕಾರಿಗಳಾದ ಎನ್.ಎಂ.ನಾಗರಾಜ್ , ಕೆ.ಜಿ.ಎಫ್ ಪೊಲೀಸ್ ವರಿಷ್ಠಾಧಿಕಾರಿಗಳಾದ ಇಲಕ್ಕಿಯಾ ಕರುಣಾಕರನ್ , ಅಪರ ಜಿಲ್ಲಾಧಿಕಾರಿಗಳಾದ ಡಾ || ಸ್ನೇಹಾ , ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಎಸ್.ಎನ್.ವಿಜಯಕುಮಾರ್ , ಜಿಲ್ಲಾ ಶಸ್ತ್ರಚಿಕಿತ್ಸಕರಾದ ನಾರಾಯಣಸ್ವಾಮಿ , ಜಿಲ್ಲಾ ಸರ್ವೇಕ್ಷಣಾಧಿಕಾರಿಗಳಾದ ಡಾ || ಚಾರಿಣಿ , ಉಪ ವಿಭಾಗಾಧಿಕಾರಿಗಳಾದ ಸೋಮಶೇಖರ್ , ಎಲ್ಲಾ ತಾಲ್ಲೂಕು ತಹಶೀಲ್ದಾರ್‌ ಹಾಗೂ ತಾಲ್ಲೂಕು ಆರೋಗ್ಯ ಅಧಿಕಾರಿಗಳು ಸೇರಿದಂತೆ ಮತ್ತಿತ್ತರರು ಉಪಸ್ಥಿತರಿದ್ದರು.


ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಕೊರೊನಾ ಭಯದ ನಡುವೆ ಶ್ರೀರಾಮ ನವಮಿಯನ್ನು ಸರಳವಾಗಿ ಆಚರಿಸಲಾಯಿತು

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ತಾಲ್ಲೂಕಿನಲ್ಲಿ ಕೊರೊನಾ ಭಯದ ನಡುವೆ ಶ್ರೀರಾಮ ನವಮಿಯನ್ನು ಸರಳವಾಗಿ ಆಚರಿಸಲಾಯಿತು. ಬಹುತೇಕ ದೇವಾಲಯಗಳಲ್ಲಿ ಆಚರಣೆ ಪೂಜೆಗೆ ಸೀಮಿತವಾಗಿತ್ತು.
ಪಟ್ಟಣದ ರಾಮ ಮಂದಿರದಲ್ಲಿ ಧರ್ಮದರ್ಶಿ ಕೆ.ಮೋಹನಾಚಾರಿ ರಾಮ ದೇವರ ಪಟಕ್ಕೆ ಪೂಜೆ ಸಲ್ಲಿಸಿ ಪಾನಕ ಪನಿಯಾರ ವಿತರಿಸಿದರು. ಪುರಸಭೆಯ ಮಾಜಿ ಸದಸ್ಯೆ ರಾಧಮ್ಮ ಇದ್ದರು.
ಪಟ್ಟಣದ ಹೊರ ವಲಯದಲ್ಲಿನ ಪನಸಮಾಕನಹಳ್ಳಿ ಗ್ರಾಮದಲ್ಲಿ ರಾಮ ದೇವರ ಮೆರವಣಿಗೆ ಏರ್ಪಡಿಸಲಾಗಿತ್ತು. ಗ್ರಾಮಸ್ಥರು ಸರಳವಾಗಿ ಮೆರವಣಿಗೆ ಆಚರಿಸಿದರು.
ತಾಲ್ಲೂಕಿನ ಹನುಮ ದೇವಾಲಯಗಳಲ್ಲಿ ವಿಶೇಷ ಪೂಜೆ ಬಳಿಕ ಪಾನಕ ಪನಿಯಾರ ವಿತರಿಸಲಾಯಿತು. ದೇವಾಲಯಗಳ ಸಮೀಪ ಪಾನಕ, ಕೋಸಂಬರಿ ವಿತರಣೆಗೆ ಸಿದ್ಧತೆ ನಡೆದಿತ್ತಾದರೂ, ಕೊರೊನಾ ಭಯದಿಂದಾಗಿ ಹೆಚ್ಚಿನ ಸಂಖ್ಯೆಯ ಭಕ್ತರು ಸ್ವೀಕರಿಸಲು ಮುಂದಾಗಲಿಲ್ಲ. ಕೆಲವು ಕಡೆ ಸ್ಯಾನಿಟೈಸರ್ ಹಾಗೂ ಹ್ಯಾಡ್ ವಾಷ್ ಸೌ¯ಭ್ಯ ಕಲ್ಪಿಸಲಾಗಿತ್ತು. ಆದರೂ ದೇವಾಲಯಗಳಿಗೆ ಭೇಟಿ ನೀಡುವ ಭಕ್ತರ ಸಂಖ್ಯೆ ತೀರಾ ವಿರಳವಾಗಿತ್ತು.

ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘ: 22 ಉಪನಯನ ವಟುಗಳಿಗೆ ಸಾಮೂಹಿಕ ಉಪನಯನ

JANANUDI.COM NETWORK


ಕುಂದಾಪುರ: ಇಲ್ಲಿನ ತಾಲೂಕು ಗಾಣಿಗ ಸೇವಾ ಸಂಘದ ಆಶ್ರಯದಲ್ಲಿ ಕುಂದಾಪುರ ವ್ಯಾಸರಾಜ ಕಲಾ ಮಂದಿರದಲ್ಲಿ ಬುಧವಾರ ಸಾಮೂಹಿಕ ಉಪನಯನ, ಸತ್ಯನಾರಾಯಣ ಪೂಜೆ, ರಾಮ ನವಮಿಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಸಮಾಜದ 22 ವಟುಗಳಿಗೆ ಸಾಮೂಹಿಕ ಉಪನಯನ ನಡೆಯಿತು. ಮಠದ ಅರ್ಚಕ ವಿಜಯ ಪೆಜತ್ತಾಯ ಪೂಜಾ ವಿಧಿ ವಿಧಾನ ನಡೆಸಿದರು.ಸಮಾರಂಭದ ಅಧ್ಯಕ್ಷತೆಯನ್ನು ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘದ ಅಧ್ಯಕ್ಷ ಪ್ರಭಾಕರ ಬಿ.ಕುಂಭಾಶಿ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜತೆ ಕಾರ್ಯದರ್ಶಿ ರಾಜೇಶ್ ಗಾಣಿಗ ಅಚ್ಲಾಡಿ ಆಗಮಿಸಿದರು.ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘದ ಗೌರವಾಧ್ಯಕ್ಷ ಕೆ.ಎಂ.ಲಕ್ಷ್ಮಣ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ನಾಗರಾಜ ಗಾಣಿಗ ಬಸ್ರೂರು ಸ್ವಾಗತಿಸಿದರು. ಕೋಶಾಧಿಕಾರಿ ನಾಗರಾಜ ಗಾಣಿಗ ಹಿಲ್ಕೋಡು ವಂದಿಸಿದರು. ಆಡಳಿತ ಮಂಡಳಿಯ ಸದಸ್ಯರಾದ ಚಂದ್ರಶೇಖರ ಬೀಜಾಡಿ ಪರಿಚಯಿಸಿ, ಸುಬ್ರಹ್ಮಣ್ಯ ಜಿ.ಉಪ್ಪುಂದ ಕಾರ್ಯಕ್ರಮ ನಿರೂಪಿಸಿದರು.

ಮುಂಬಯಿನ ಕೊಂಕಣಿ, ಸಂಸ್ಕ್ರತಿಯ ನೇತಾರ, ಸಂಘಟಕ ಎಸ್.ಜೆ.ಕೆ.ಡಬ್ಲ್ಯೂ.ಎ ಮಾಜಿ ಅಧ್ಯಕ್ಷ ಜಾನ್ ಕ್ರಾಸ್ತಾ ಅಗ್ರಾರ್ ನಿಧನ

JANANUDI.COM NETWORK


ಮುಂಬಯ್, ಎಪ್ರಿಲ್ 21; :ಸಂತ ಜೋಸೆಫ್ ಕೊಂಕಣಿ ಕಲ್ಯಾಣ ಸಂಘದ (ಎಸ್.ಜೆ.ಕೆ.ಡಬ್ಲ್ಯೂ.ಎ) ಮಾಜಿ ಅಧ್ಯಕ್ಷ ಜಾನ್ ಕ್ರಾಸ್ತಾ ಅಗ್ರಾರ್ ಅವರು ಏಪ್ರಿಲ್ 19 ರ ಸೋಮವಾರ ನಿಧನರಾದರು.
ಅವರು ಮೂಲತಃ ದಕ್ಷಿಣ ಕನ್ನಡದ ಬಂಟ್ವಾಳ ತಾಲ್ಲೂಕಿನ ಆಗ್ರಾರ್ ನವರಾಗಿದ್ದರು. ಅವರು ಮುಂಬಯ್ನ ಮೀರಾ ರೋಡ್ ಪ್ರದೇಶದಲ್ಲಿ ಕೊಂಕಣಿ, ಸಂಸ್ಕ್ರತಿಯ ನೇತಾರರಾಗಿದ್ದರು, ಅವರು ಮುಂಬಯಲ್ಲಿ ಕೊಂಕಣಿ ಸಂಸ್ಕ್ರತಿಯ ಉಳಿವು ಮತ್ತುಬೆಳಣಿಗೆಗಾಗಿ ಬಹಳಷ್ಟು ಶ್ರಮಿಸಿದವರಾಗಿದ್ದ್ರು. ಎಸ್.ಜೆ.ಕೆ.ಡಬ್ಲ್ಯೂ.ಎ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಮುಂಬಯಲ್ಲಿ ಕೊಂಕಣಿ ಸಂಸ್ಕ್ರ್ರತಿಯ ಹಲವು ಕಾರ್ಯಕ್ರಮಗಳನ್ನು ಸಂಘಟಿಸಿ ಯಶಸ್ವಿಯಾಗಿ ನೇರವೆರಿಸಿದ ಉತ್ತಮ ಸಂಘಟಕ ಸಮಾಜ ಸೇವಕರಾಗಿ ಖ್ಯಾತಿ ಪಡೆದವರಾಗಿದ್ದರು.
ಅವರು ಮೀರಾ ರಸ್ತೆಯಲ್ಲಿ ಶಾನ್ ಟೂರ್ಸ್ & ಟ್ರಾವೆಲ್ಸ್ ಸಂಸ್ಥೆಯನ್ನು ನಿರ್ವಹಿಸುತ್ತಿದ್ದರು. ಈ ಹಿಂದೆ, ಪ್ರಾಚೀನ ಕರಾವಳಿ ಕರ್ನಾಟಕದಲ್ಲಿ ಕ್ರಿಶ್ಚಿಯನ್ ಸಮುದಾಯದ ಪೂರ್ವಜರ ಜೀವನವನ್ನು ನೆನಪಿಸುವ ಎರಡು ದಿನಗಳ ಕೊಂಕಣಿ ಆಹಾರ ಉತ್ಸವವನ್ನು ಮೀರಾ ರಸ್ತೆಯಲ್ಲಿ ನಡೆಸಿದಾಗ, ಎಸ್ಜೆಕೆಡಬ್ಲ್ಯೂಎ ಅದ್ಭುತವಾಗಿ ಪ್ರದರ್ಶನವನ್ನು ಮಾಡಿತ್ತು ‘ಮಾಟೋವ್ ಶೋಭಣಾಚಿ ವಸ್ತು’ (ವಿವಾಹ ಪ್ರಾರ್ಥನಾ ಮಂದಿರಗಳ ವಸ್ತುಗಳನ್ನು ಹೊಂದಿರುವ ವಸ್ತು ಸಂಗ್ರಹಾಲಯ). ಇದು ಮಂಗಳೂರಿನ ಪೂರ್ವಜ ಕ್ರೈಸ್ತರ ಸಂಸ್ಕೃತಿಯನ್ನು ನೆನಪಿಸುವ ವಿಶಿಷ್ಟ ವಸ್ತುಗಳ ಸಂಗ್ರಹವಾಗಿತ್ತು. ಕರಾವಳಿ ಕರ್ನಾಟಕ ಮತ್ತು ಮುಂಬೈನಾದ್ಯಂತ ಕ್ರಿಶ್ಚಿಯನ್ ಸಮುದಾಯದ ರೋಸ್ ಕಾರ್ಯಕ್ರಮಗಳ ಪ್ರವರ್ತಕರಾಗಿ,ಪುರಾತನ ಕ್ರಿಶ್ಚಿಯನ್ ವಿವಾಹ ಪರಂಪರೆಯನ್ನು ಪರಿಚಯಿಸಿದವರಾಗಿದ್ದರು.

ಕರ್ನಾಟಕ ಜನರ ಏಕತೆಯನ್ನು ಉತ್ತೇಜಿಸುವ ಸಲುವಾಗಿ ಮೀರಾ ರೋಡ್ ಪ್ರದೇಶದಲ್ಲಿ ಪ್ರದರ್ಶನ ನೀಡಲು ಕೊಂಕಣಿ, ತುಳು ಮತ್ತು ಕನ್ನಡ ನಾಟಕ ತಂಡಗಳನ್ನು ಆಹ್ವಾನಿಸುತ್ತಿದ್ದು ಮೀರಾ ರೋಡ್ ಪ್ರದೇಶದಲ್ಲಿ ಕರ್ನಾಟಕ ಸಾಂಸ್ಕ್ರತಿಕ ರಾಯಭಾರಿಯಂತೆ ಅವರು ಕೆಲಸ ನಿರ್ವಹಿಸಿದ್ದರು.
ಜಾನ್ ಕ್ರಾಸ್ತಾ ಅವರು ಪತ್ನಿ, ಮಗ, ಮಗಳು ಮತ್ತು ಸಂಬಂಧಿಕರನ್ನು ಅಗಲಿದ್ದಾರೆ
ಸೇಂಟ್ ಜೋಸೆಫ್ಸ್ ಕೊಂಕಣಿ ಕಲ್ಯಾಣ ಸಂಘದ ಮಿರರೋಡ್ನ ಕಾರ್ಯದರ್ಶಿ ಜೆರಾಲ್ಡ್ ಡಿಸೋಜಾವರು ಜಾನ್ ಕ್ರಾಸ್ತಾರಿಗೆ ಹೃತ್ಪೂರ್ವಕ ಗೌರವ ಪೂರ್ವಕ ಶ್ರದ್ದಾಂಜಲಿಯನ್ನು ಅರ್ಪಿಸಿದರು.

Former president of SJKWA  Mumbai John Crasta Agrar passes away

Mumbai, April 21; : John Crasta Agrar, former president of the Saint Joseph Konkani Welfare Association (SJKWA), died on Monday, April 19.

He was originally from Agra in the Bantwal taluk of Dakshina Kannada. He was a leader of Konkani and cultures in the Mira Road area of ​​Mumbai. Had served as president of the SJKWA.

  He was a well-known organizer and successful social worker who organized and successfully administered many programs of Konkani cultures in Mumbai.

  He managed Shan Tours & Travels on Mira Road. Previously, when the two-day Konkani food festival commemorating the ancestral life of the Christian community in ancient coastal Karnataka was held on Meera Road, the SJKWA performed a spectacular ‘Matov Shobhanachi Object’ (a museum containing rose program). It was a collection of unique objects reminiscent of the ancestral culture of Mangalore. As a pioneer of Christian community Rose programs across coastal Karnataka and Mumbai, he introduced the ancient Christian wedding tradition.

    John Crasta is survived by his wife, son, daughter and relatives

    Gerald D’Souza, secretary of the St. Joseph’s Konkani Welfare Association, Mirrod, offered a heartfelt tribute to John crasta.

ತಲ್ಲೂರು ಫ್ಯಾಮಿಲಿ ಟ್ರಸ್ಟ್ ಪ್ರಾಯೋಜಿತ ನಾರಾಯಣ ವಿಶೇಷ ಶಾಲೆಯ ಮಕ್ಕಳ ಷೋಷಕರಿಗಾಗಿ ವಿಶೇಷ ಮಾಹಿತಿ ಅರಿವು ಕಾರ್ಯಕ್ರಮ

JANANUDI.COM NETWORK

ಕುಂದಾಪುರ,ಎ.21; ತಲ್ಲೂರು ಫ್ಯಾಮಿಲಿ ಟ್ರಸ್ಟ್ ಪ್ರಾಯೋಜಿತ ನಾರಾಯಣ ವಿಶೇಷ ಶಾಲೆಯ ಮಕ್ಕಳ ಷೋಷಕರಿಗಾಗಿ ವಿಶೇಷ ಮಾಹಿತಿ ಅರಿವು ಕಾರ್ಯಕ್ರಮವನ್ನು ಪಾಲಕರ ಸಭೆಯಲ್ಲಿ ದಿನಾಂಕ16.04.2021 ರಂದು ಮಧ್ಯಾಹ್ನ 3.00ಕ್ಕೆ ನಡೆಸಲಾಯಿತು.
ಈ ಕಾರ್ಯಕ್ರಮದಲ್ಲಿ ಡಾ. ಪಿ.ವಿ.ಭಂಡಾರಿ, ವೈದ್ಯಕೀಯ ನಿರ್ದೇಶಕರು,ಡಾ ಎ.ವಿ ಬಾಳಿಗ ಆಸ್ಪತ್ರೆ ದೂಡ್ಡಣಗುಡ್ಡೆ ಇವರು ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮದಲ್ಲಿ ಪ್ರಮುಖವಾಗಿ ಅಂಗವಿಕಲತೆ ಮತ್ತು ಅದರ ವಿಧಗಳು, ಬುದ್ಧಿಮಾಂಧ್ಯತೆ ಎಂದರೇನು ಮತ್ತು ಅದಕ್ಕೆ ಕಾರಣಗಳು ಹಾಗೂ ವಿಶೇಷ ಮಕ್ಕಳ ಪಾಲನೆ ಮಾಡುವಲ್ಲಿ ಪೋಷಕರಲ್ಲಿ ಇರಬೇಕಾದ ಕೌಶಲ್ಯಗಳೂಂದಿಗೆ ವಿಕಲತೆಯನ್ನು ಶೀಘ್ರ ಗುರುತಿಸುವಿಕೆ ಮತ್ತು ಪರಿಹಾರ ಕಂಡುಕೊಳ್ಳುವಿಕೆ ಮತ್ತು ವಿಶೇಷವಾಗಿ ಆಟಿಸಂನ ಕುರಿತು ಮಾಹಿತಿಯನ್ನು ನೀಡಿದರು. ಅಲ್ಲದೇ ಪೋಷಕರ ವಿವಿಧ ಪ್ರಶ್ನೆಗಳಿಗೆ ಸೂಕ್ತವಾದ ಉತ್ತರವನ್ನು ನೀಡಿದರು.
ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಹಿತೈಷಿಗಳಾದ ಹಟ್ಟಿಯಂಗಡಿ ಸಿದ್ದಿವಿನಾಯಕ ದೇವಸ್ಥಾನದ ಧರ್ಮದರ್ಶಿ ಶ್ರೀ ಬಾಲಚಂದ್ರ ಭಟ್ ರವರು ಸಂಸ್ಥೆಯ ಕಾರ್ಯಚಟುವಟಿಕೆಗಳನ್ನು ಶ್ಲಾಘಿಸಿದರು. ಇನ್ನೋರ್ವ ಅತಿಥಿ ಪ್ಲಸಂಟ್ ಕುಂದಾಪುರ ಇದರ ಮಾಲಕರಾದ ಅಬ್ದುಲ್ ಬಶೀರ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸುರೇಶ್ ತಲ್ಲೂರು ಸ್ವಾಗತಿಸಿದರು, ಟ್ರಸ್ಟೀ ವಸಂತ ಶಾನುಭಾಗರವರು ವಂದಿಸಿದರು. ಮುಖ್ಯ ಶಿಕ್ಷಕಿ ಪ್ರೇಮಾರವರು ಕಾರ್ಯಕ್ರಮ ನಿರೂಪಿಸಿದರು
.