HOLY ROSARY CHURCH, KUNDAPUR – 450 th JUBILEE SOUVENIR 2021

ನಾಗಲಾಪುರದಲ್ಲಿ ಮಾಸ್ಕ್ ವಿತರಿಸಿದ ಗ್ರಾ.ಪಂ ಸದಸ್ಯೆ ರೂಪ ಕೋವಿಡ್ ತಡೆಗೆ ಮಾಸ್ಕ್ ಧರಿಸಿ, ಅಂತರ ಪಾಲಿಸಲು ಕರೆ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ:- ಕೋವಿಡ್ ಗ್ರಾಮೀಣ ಪ್ರದೇಶದಲ್ಲೂ ವ್ಯಾಪಕವಾರಿ ಹರಡುತ್ತಿದ್ದು, ಜನತೆ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ತಾಲ್ಲೂಕಿನ ನಾಗಲಾಪುರ ಗ್ರಾಮ ಪಂಚಾಯಿತಿ ಸದಸ್ಯೆ ಎಸ್.ಎಂ.ರೂಪ ಕರೆ ನೀಡಿದರು.
ಗ್ರಾಮದಲ್ಲಿ ನಿನ್ನೆ ಸಂಜೆ ಗ್ರಾಮದ ಎಲ್ಲಾ ಜನತೆಗೂ ಮಾಸ್ಕ್ ವಿತರಿಸಿ, ಕೋವಿಡ್ ಜಾಗೃತಿ ಮೂಡಿಸಿ ಅವರು ಮಾತನಾಡಿ, ಕೋವಿಡ್ ಮಾರಿಗೆ ಹಳ್ಳಿ,ನಗರವೆಂಬ ಬೇಧವಿಲ್ಲ, ಬಡವರು,ಶ್ರೀಮಂತರು ಎಂಬ ತಾರತಮ್ಯವೂ ಇಲ್ಲ, ನಮ್ಮ ಎಚ್ಚರಿಕೆಯಲ್ಲಿ ನಾವು ಇರಬೇಕು ಎಂದರು.
ಕೋವಿಡ್ 2ನೇ ಅಲೆ ಕೋಲಾರ ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡುತ್ತಿದೆ, ಅನೇಕ ಗ್ರಾಮಗಳಲ್ಲಿ ವ್ಯಾಪಿಸಿ ಗ್ರಾಮೀಣ ಜನತೆಯಲ್ಲಿ ಆತಂಕ ಸೃಷ್ಟಿಸಿದೆ ಎಂದ ಅವರು ನೀವು ಎಚ್ಚರ ತಪ್ಪಿದರೆ ತೊಂದರೆಗೆ ಒಳಗಾಗುತ್ತೀರಿ ಎಂದು ತಿಳಿಸಿದರು.
ವಿನಾಕಾರಣ ನಗರಗಳಿಗೆ ಹೋಗದಂತೆ ಸಲಹೆ ನೀಡಿದ ಅವರು, ಸೋಂಕು ತಡೆಯಲು ಅದಷ್ಟು ಗ್ರಾಮದಲ್ಲೇ ಉಳಿದುಕೊಳ್ಳಿ, ಗ್ರಾಮದಾದ್ಯಂತ ಸ್ವಚ್ಚತೆಗೆ ಒತ್ತು ನೀಡೋಣ, ಶುದ್ದ ಕುಡಿಯುವ ನೀರು ಸೇವಿಸೋಣ, ಮಾಸ್ಕ್ ಧರಿಸಿ ಕೋವಿಡ್ ಮಾರಿಯಿಂದ ರಕ್ಷಣೆ ಪಡೆಯೋಣ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಜಿಲ್ಲಾ ಖಜಾಂಚಿ ವಿಜಯ್, ಮುಖಂಡರಾದ ಮುನಿಕೃಷ್ಣ, ಶ್ರೀನಿವಾಸ್, ಗಜೇಂದ್ರ, ರಾಜೇಶ್, ಶ್ರೀಧರ್,ಕೆಂಪರಾಜು, ಮುರಳಿ, ಅರ್ಜುನ್, ಪ್ರಸಾದ್ ಮುಂತಾದವರಿದ್ದರು
.

ಶ್ರೀನಿವಾಸಪುರ ಕಿತ್ತೂರು ರಾಣಿ ಚೆನ್ನಮ್ಮ ಶಾಲೆಯಲ್ಲಿ 100 ಹಾಸಿಗೆ ಸಾಮಥ್ರ್ಯದ ಕೊರೊನಾ ಚಿಕಿತ್ಸಾ ಕೇಂದ್ರ ತೆರೆಯಲಾಗುವುದು

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ತಾಲ್ಲೂಕಿನ ಚಲ್ದಿಗಾನಹಳ್ಳಿ ಗ್ರಾಮದ ಹೊರವಲಯದಲ್ಲಿನ ಕಿತ್ತೂರು ರಾಣಿ ಚೆನ್ನಮ್ಮ ಶಾಲೆಯಲ್ಲಿ 100 ಹಾಸಿಗೆ ಸಾಮಥ್ರ್ಯದ ಕೊರೊನಾ ಚಿಕಿತ್ಸಾ ಕೇಂದ್ರ ತೆರೆಯಲಾಗುವುದು ಎಂದು ಉಪ ವಿಭಾಗಾಧಿಕಾರಿ ವಿ.ಸೋಮಶೇಖರ್ ಹೇಳಿದರು.
ತಾಲ್ಲೂಕಿನ ಚಲ್ದಿಗಾನಹಳ್ಳಿ ಗ್ರಾಮದ ಹೊರವಲಯದಲ್ಲಿನ ಕಿತ್ತೂರು ರಾಣಿ ಚೆನ್ನಮ್ಮ ಶಾಲೆಗೆ ಶನಿವಾರ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಮಾತನಾಡಿ, ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳು ಹೆಚ್ಚುತ್ತಿದ್ದು, ಚಿಕಿತ್ಸಾ ಕೇಂದ್ರಗಳ ಮೇಲೆ ಹೆಚ್ಚಿನ ಒತ್ತಡ ಉಂಟಾಗಿದೆ. ಆದ್ದರಿಂದ ಹೆಚ್ಚಿನ ಸಂಖ್ಯೆಯ ರೋಗಿಗಳಿಗೆ ಚಿಕಿತ್ಸಾ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ನಿಗದಿತ ಸ್ಥಳಗಳಲ್ಲಿ ಹೊಸ ಕೊರೊನಾ ಚಿಕಿತ್ಸಾ ಕೇಂದ್ರಗಳನ್ನು ತೆರೆಯಲಾಗುತ್ತಿದೆ ಎಂದು ಹೇಳಿದರು.
ತಹಶೀಲ್ದಾರ್ ಎಸ್.ಎಂ.ಶ್ರೀನಿವಾಸ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್.ಆನಂದ್, ಕಂದಾಯ ನಿರೀಕ್ಷಕರಾದ ಬಿ.ವಿ.ಮುನಿರೆಡ್ಡಿ, ಗುರುರಾಜರಾವ್ ಇದ್ದರು
.

KATHAPATT-2 (Webinar series on focused study of Konkani Stories)

JANANUDI.COM NETWORK

The other side of the ‘Challenges’ is the ‘Opportunity’.

Ashawadi Prakashan, All India Konkani Parishad & Uzvaad Fortnightly jointly organises (Associated with Dalgado Konkani Academy Goa, Thomas Stephens Konknni Kendr Goa, Milagres College Mangalore, Padua College Mangalore, Dhempe College Goa, Carmel College Goa, Shree Mallikarjuna College Goa, Fr.Agnel College Pilar Goa, Veez e-Weekly USA) the second webinar series ‘KATHAPATT-2’, a focused study of fabulous Konkani stories written by the evergreen, the legand Wilfy Rebimbus.

The series includes 5 webinars to be conducted on every Saturday of May 2021 from 4:30pm to 6:00pm (Indian Standard Time), the inaugural webinar to be organised on coming Saturday (1 May 2021) at 4:30pm IST. The inauguration will be done by Award winning Mr.Ronald Colaco Dubai. Felix Lobo Qatar, Joseph Mathias, Veena Rebimbus Pais and Usha Rane will be the guests.

Dr.Prakash Perienkar (National Award Winning writer), Dr.Jayanti Naik (Sahitya Akademi Award winning writer), Gokuldas Prabhu (Sahitya Akademi Award winning writter), HM Pernal (Editor, Kittall.com), Fr.Allwyn Serrao (Principal of Padua College Mangalore), Vincy Quadros (President of Dalgado Konkani Akademi Goa), Basti Vaman Shennoy (Konkani Sardar), Fr.Michael Santhumayer (Principal of Milagres College Mangalore), Dr.Austin DSouza Prabhu (Editor of Veez e-weekly from USA), Dr.Purnanda Chari (HOD of Shree Mallikarjuna College Goa), Anju Sakhardande (HOD, Dhempe College Goa), Dr.Jayavanta Nayak (Co-ordinator, Konkani Adhyayana Peetha Mangalore University) amongst the speakers during the inaugural webinar to be hosted by Shailendra Mehta Mumbai.

All those who wish to join may use the following url on the specified webinar date/time: https://meet.google.com/oyb-wnzg-reb

[Konkani story lovers across the globe interested in taking part may join the WhatsApp group: https://chat.whatsapp.com/Biupd4iLmWG58DXXjIijBr ]

ಶ್ರೀನಿವಾಸಪುರ: ಪಟ್ಟಣದಲ್ಲಿ ಶನಿವಾರ ಅನಗತ್ಯವಾಗಿ ಓಡಾಡುವ ವಾಹನ ಚಾಲಕರಿಗೆ ಬಿಸಿ ಮುಟ್ಟಿಸಿದರು

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಪಟ್ಟಣದಲ್ಲಿ ಶನಿವಾರ ಅನಗತ್ಯವಾಗಿ ಓಡಾಡುವ ವಾಹನ ಚಾಲಕರಿಗೆ ಬಿಸಿ ಮುಟ್ಟಿಸಿದರು. ನಿಗದಿತ ಸಮಯ ಮುಗಿದ ಬಳಿಕ ಪಟ್ಟಣದಲ್ಲಿಸಂಚರಿಸುತ್ತಿದ್ದ ಬೈಕ್ ಮತ್ತಿತರ ವಾಹನಗಳನ್ನು ತಡೆದು ಪ್ರಯಾಣದ ಕಾರಣ ಕೇಳಿ ಬಿಡುತ್ತಿದ್ದರು.
ಕೆಲವು ವಾಹನ ಚಾಲಕರು ತಾವು ಹೊಂದಿದ್ದ ಪಾಸ್ ತೋರಿಸಿ ಹೊರಟರೆ, ಪಾಸ್ ಇಲ್ಲದವರು ಶಿಸ್ತು ಕ್ರಮವನ್ನು ಎದುರಿಸಬೇಕಾಯಿತು. ಪಟ್ಟಣದಲ್ಲಿ ಅಂಗಡಿ ಮುಂಗಟ್ಟು ಮುಚ್ಚಲಾಗಿತ್ತು. ರಸ್ತೆಗಳು ಜನರಿಲ್ಲದೆ ಬಿಕೋ ಎನ್ನುತ್ತಿದ್ದವು. ವಾಹನ ಸಂಚಾರ ವಿರಳವಾಗಿತ್ತು.
ಗ್ರಾಮೀಣ ಪ್ರದೇಶದಿಂದ ಅಗತ್ಯ ವಸ್ತು ಖರೀದಿಸಲು ಬೆಳಿಗ್ಗೆಯೇ ಬಂದಿದ್ದ ಜನರು, ಖರೀದಿ ಬಳಿಕ ಹಿಂದಿರುಗಿದರು. ಪೊಲೀಸರು ಅನಗತ್ಯ ಓಡಾಟಕ್ಕೆ ಕಡಿವಾಣ ಹಾಕಿದ ಪ್ರಯುಕ್ತ ದ್ವಿಚಕ್ರ ವಾಹನಗಳು ರಸ್ತೆಗೆ ಇಳಿಯಲಿಲ್ಲ.
ಇದೇ ಮೊದಲ ಬಾರಿಗೆ ಹೆಚ್ಚಿನ ಸಂಖ್ಯೆಯ ನಾಗರಿಕರು ಮಾಸ್ಕ್ ಧರಿಸಿದ್ದುದು ಕಂಡುಬಂದಿತು. ಕೆಲವರು ಕರವಸ್ತ್ರ, ಟವಲ್, ಸೆರಗಿನಿಂದ ಬಾಯಿ, ಮೂಗು ಮುಚ್ಚಿಕೊಂಡು ಸಂಚರಿಸುತ್ತಿದ್ದರು. ಪೊಲೀಸರು ಅಂಥ ವ್ಯಕ್ತಿಗಳನ್ನು ಗುರುತಿಸಿ ಸೂಕ್ತ ಮಾಸ್ಕ್ ಧರಿಸುವಂತೆ ತಿಳುವಳಿಕೆ ನೀಡಿದರು.
ಪಡಿತರ ಹೆಚ್ಚಿಸಲು ಮನವಿ: ಕೊರೊನಾ ಸಂಕಷ್ಟದ ನಡುವೆ ಬಡವರ ಜೀವನ ನಿರ್ವಹಿಸುವುದು ಕಷ್ಟವಾಗಿದ್ದು, ಸರ್ಕಾರ ಪಡಿತರ ಪ್ರಮಾಣವನ್ನು ಹೆಚ್ಚಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲ್ಲೂಕು ಅಧ್ಯಕ್ಷ ತೆರ್ನಹಳ್ಳಿ ಆಂಜಿನಪ್ಪ ಸರ್ಕಾರವನ್ನು ಕೋರಿದ್ದಾರೆ.
ಬಿಪಿಎಲ್ ಕಾರ್ಡುದಾರರಿಗೆ ತಲಾ 7 ಕೆಜಿ ಅಕ್ಕಿ, 3 ಕೆಜಿ ಗೋದಿ, 1ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ತಲಾ ತಲಾ 5 ಕೆಜಿ ಅಕ್ಕಿ ವಿತರಿಸಬೇಕು ಎಂದು ಪತ್ರಿಕಾ ಹೇಳಿಕೆಯಲ್ಲಿ ಮನವಿ ಮಾಡಿದ್ದಾರೆ.
ಬದಲಾದ ಸಮಯ: ಕೊರೊನಾ ತಡೆ ದೃಷ್ಟಿಯಿಂದ ಗೊಬ್ಬರದ ಅಂಗಡಿಗಳನ್ನು ಬೆಳಿಗ್ಗೆ 7 ರಿಂದ 12 ಗಂಟೆ ವರೆಗೆ ತೆರೆಯಲಾಗುವುದು. ಅಗತ್ಯ ಇರುವ ರೈತರು ನಿಗದಿತ ಸಮಯದೊಳಗೆ ಅಗತ್ಯವಾದ ಔಷಧಿ ಹಾಗೂ ಗೊಬ್ಬರವನ್ನು ಖರೀದಿಸಬೇಕು ಎಂದು ಗೊಬ್ಬರ ಮಾರಾಟಗಾರರ ಸಂಘದ ಅಧ್ಯಕ್ಷ ಕೋಟೇಶ್ ತಿಳಿಸಿದ್ದಾರೆ.
ಪಟ್ಟಣದಲ್ಲಿ ಆಭರಣದ ಅಂಗಡಿಗಳನ್ನು ಬೆಳಿಗ್ಗೆ 9 ರಿಂದ 2 ಗಂಟೆ ವರೆಗೆ ತೆರೆಯಲಾಗುವುದು ಎಂದು ಆಭರಣ ಮಾರಾಟಗಾರರ ಸಂಘದ ಅಧ್ಯಕ್ಷ ಕೆ.ಆರ್.ಕೇದಾರ್‍ನಾಥ್ ತಿಳಿಸಿದ್ದಾರೆ
.

‘ಬಡವರ ವೈದ್ಯ’ ಡಾ ಕ್ಲೆಮೆಂಟ್ ಕುಟಿನ್ಹೋ ಕಿನ್ನಿಗೊಳ್ಳಿ ನಿಧನರಾದರು

“ಡಾ ಕ್ಲೆಮೆಂಟ್ ಕುಟಿನ್ಹೋ ಅವರು ಅವರ ಚಿಕಿತ್ಸೆ ಮತ್ತು ಸ್ನೇಹಪರ, ಸಹಾಯ ಹಸ್ತದ ಮನೋಭಾವದಿಂದ ಅವರು ‘ಬಡವರ ವೈದ್ಯ’ ಎಂದೇ ಕಿನ್ನಿಗೊಳ್ಳಿಯಲ್ಲಿ ಖ್ಯಾತರಾಗಿದ್ದರು“


ಮಂಗಳೂರು, ಎಪ್ರಿಲ್ 24: ‘ಬಡವರ ಡಾಕ್ಟರ್’ ಎಂದೇ ಖ್ಯಾತರಾಗಿದ್ದ ಡಾ. ಕ್ಲೆಮೆಂಟ್ ಕಟಿನ್ಹೋ ಏಪ್ರಿಲ್ 24 ರ ಶನಿವಾರ ನಿಧನರಾದರು. ಅವರಿಗೆ 80 ವರ್ಷವಾಗಿತ್ತು
ಕಾರ್ಕಳ ತಾಲೂಕಿನ ಮುಂಡ್ಕೂರಿನಲ್ಲಿ ಜನಿಸಿದ ಅವರು ಸ್ಥಳೀಯ ಸರ್ಕಾರಿ ಶಾಲೆಯಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಕಲಿತರು. ನಂತರ ಪೊಂಪೈ ಪ್ರೌಢ ಶಾಲೆಯಲ್ಲಿ ಪ್ರೌಢ ಶಿಕ್ಷಣವನ್ನು ಕಲಿತು, ಅಲೋಶಿಯಸ್ ಕಾಲೇಜಿನಲ್ಲಿ ಪದವಿ ಶಿಕ್ಷಣವನ್ನು ಪಡೆದು, ಅವರು ಕಸ್ತೂರ್ಬಾ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಕೀಯ ಅಧ್ಯಯನ ಮಾಡಿದರು.
1976 ರಲ್ಲಿ, ಅವರು ಕಿನ್ನಿಗೋಳ್ಳಿಯಲ್ಲಿ ತಮ್ಮ ವೈದ್ಯಕೀಯ ಸೇವೆಯನ್ನು ಪ್ರಾರಂಭಿಸಿದರು. ಡಾ. ಕ್ಲೆಮೆಂಟ್ ಅವರು ಅವರ ಚಿಕಿತ್ಸೆ ಮತ್ತು ಸ್ನೇಹಪರ, ಸಹಾಯ ಹಸ್ತದ ಮನೋಭಾವದಿಂದ ಅವರು ಬಹಳ ಜನಪ್ರಿಯರಾದರು. ಬಹಳ ದುರ್ಗಮ ಪ್ರದೇಶಗಳಿಂದ ಹಾಗೇ ಬಡವರಾದ ರೋಗಿಗಳನ್ನು ನಗರದ ವಿವಿಧ ಆಸ್ಪತ್ರೆಗಳಿಗೆ ಸ್ಥಳಾಂತರಿಸಲು ಅವರು ತಮ್ಮ ಕಾರನ್ನೆ ಬಳಸುತಿದ್ದರು.
ಅವರು ಬಹಳ ಅಲ್ಪ ಶುಲ್ಕವನ್ನು ತೆಗೆದುಕೊಂಡು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದರು.ಹಾಗೆಯೇ ಓಷಧಿಗಳನ್ನು ಖರೀದಿಸಲು ಸಾಧ್ಯವಾಗದವರಿಗೆ ಓಷಧಿಗಳನ್ನು ನೀಡಿ ಸಹಾಯ ಮಾಡುತ್ತಿದ್ದರು.
ಅವರ 51 ವರ್ಷಗಳ ವೈದ್ಯಕೀಯ ಸೇವೆಯಲ್ಲಿ, ಅವರು ಅನೇಕ ಪ್ರಸಿದ್ಧ ಸಂಘ ಸಂಸ್ಥೆಗಳಿಂದ ಅನೇಕ ಪ್ರಶಸ್ತಿ ಸನ್ಮಾನಗಳನ್ನು ಪಡೆದವರಾಗಿದ್ದರು.
ಡಾ. ಕ್ಲೆಮೆಂಟ್ ಅವರ ಶವವನ್ನು ಏಪ್ರಿಲ್ 30 ಶುಕ್ರವಾರ ಮಧ್ಯಾಹ್ನ 2: 30 ಕ್ಕೆ ಕಿನ್ನಿಗೋಳ್ಳಿಯ ಅವರ ನಿವಾಸಕ್ಕೆ ತರಲಾಗುವುದು ಮತ್ತು ಮಧ್ಯಾಹ್ನ 3: 30 ಕ್ಕೆ ಅವರ ನಿವಾಸದಿಂದ ಕಿನ್ನಿಗೋಳ್ಳಿಯ ಇಮ್ಮಾಕ್ಯುಲೇಟ್ ಕಾನ್ಸೆಪ್ಟ್ ಚರ್ಚ್ಗೆ ತೆಗೆದುಕೊಂಡು ಹೋಗಲಾಗುವುದು, ಸಂಜೆ 4:00 ಕ್ಕೆ ಅಂತ್ಯಕ್ರಿಯೆಯನ್ನು ಜರಗಿಸಲಾಗುವುದು.

ಕುವೈಟ್ ನಲ್ಲಿ ಭಾರತೀಯರಿಗೆ ನೇರ ಪ್ರವೇಶ ನಿಷೇಧ- ಶರತ್ತು

JANANUDI.COM NETWORK

ಕುವೈಟ್: ಏಪ್ರಿಲ್ 24 ರಿಂದ ಜಾರಿಗೆ ಬರುವಂತೆ ಮತ್ತು ಮುಂದಿನ ಸೂಚನೆ ನೀಡುವ ವರೆಗೆ ಭಾರತದಿಂದ ಬರುವ ಎಲ್ಲಾ ನೇರ  ವಾಣಿಜ್ಯ ವಿಮಾನಯಾನಗಳನ್ನು ಸ್ಥಗಿತಗೊಳಿಸಲಾಗಿದೆ, ಹಾಗೇಯೆ ಇತರ ದೇಶಗಳಿಂದ ಬರುವ ನಾಗರಿಕರಿಗೆ ಶರತ್ತುಗಳನ್ನು ವಿಧಿಸಿದೆ’ ಎಂದು ಕುವೈಟ್‌ನ ನಾಗರಿಕ ವಿಮಾನಯಾನ ನಿರ್ದೇಶನಾಲಯ ಶನಿವಾರ ಪ್ರಕಟಿಸಿದೆ.

       ಜಾಗತಿಕ ಕೋವಿಡ್ 19ರ ಸ್ಥಿತಿಯ ಬಗ್ಗೆ ಕುವೈಟ್ ಆರೋಗ್ಯ ಅಧಿಕಾರಿಗಳ ಮೌಲ್ಯಮಾಪನದ ಬಳಿಕ ಇದನ್ನು ಜ್ಯಾರಿಗೊಳಿಸಲಾಗಿದೆ. ಭಾರತದಿಂದ ಆಗಮಿಸುವ ಎಲ್ಲ ಪ್ರಯಾಣಿಕರಿಗೆ ಕುವೈಟ್ ದೇಶಕ್ಕೆ ಕನಿಷ್ಠ 14 ದಿನಗಳ ಮೊದಲು ಭಾರತ ದೇಶದ ಹೊರಗೆ(ವಿದೇಶದಲ್ಲಿ) ವಾಸವಾಗದ ಹೊರತು ನೇರವಾಗಿ ಅಥವಾ ಬೇರೆ ದೇಶದ ಮೂಲಕ ಕುವೈಟ್ ಗೆ ಪ್ರವೇಶಿಸಲು ಅನುಮತಿ ಇಲ್ಲ’  ಎಂದು ಕುವೈಟ್  ನಾಗರಿಕ ವಿಮಾನಯಾನ ನಿರ್ದೇಶನಾಲಯ ನಿರ್ಣಯವನ್ನು ತೆಗೆದುಕೊಂಡಿದ್ದಾರೆ.

ರೋಜರಿ ಸೊಸೈಟಿ ನಿರಂತರ್ ಅಭಿವ್ರದ್ದಿ : ಬಸ್ರೂರ್ ಶಾಖ್ಯಾಚೆ ಸ್ವಂತ್ ಬಾಂದಾಪ್ ಎ.27 ವೆರ್ ಉದ್ಘಾಟನ್

JANANUDI.COM NETWORK


ರೋಜರಿ ಕ್ರೇಡಿಟ್ ಕೋ ಆಪರೇಟಿವ್ ಸೊಸೈಟಿ ಲಿ.

ರೋಜರಿ ಕ್ರೇಡಿಟ್ ಕೋ ಆಪರೇಟಿವ್ ಸೊಸೈಟಿ ಲಿ. ಸಂಸ್ಥೊ ಉಡುಪಿ ಜಿಲ್ಲ್ಯಾಂತ್‍ಚ್ ಏಕ್ ಖ್ಯಾತ್ ಸಹಕಾರಿ ಸಂಸ್ಥೊ. ಹಾಂಚೆಂ ಬಸ್ರೂರ್ ಶಾಖ್ಯಾಚೆ ಸ್ವಂತ್ ಬಾಂದಪ್ ರೋಜರಿ ಕ್ರೌನ್, ಬಸ್ರೂರ್ ಹಾಂಗಾಂಸರ್ 2021 ಎಪ್ರಿಲಾಚ್ಯಾ 27 ತಾರೀಕೆರ್ ಮಂಗ್ಳಾರಾ ಸಾಕಾಳಿ 9.00 ವೊರಾರ್ ಉದ್ಘಾಟನ್ ಕಾರ್ಯೆ ಜಾತಾಲೆಂ.ಹಾಚ್ಯಾ ಪಯ್ಲೆಂ ಎಪ್ರಿಲ್ 25 ಆಯ್ತಾರ ದಿಸಾ ಉದ್ಘಾಟನ್ ಮ್ಹಣುನ್ ಆಸಲ್ಲೆಂ, ಕೋವಿಡ್ 19 ಖಾತಿರ್ ಹಿ ಬದ್ಲಾವಣ್ ಕೆಲ್ಯಾ.
ಕುಂದಾಪುರ್ ವಾರಾಡ್ಯಾಚೊ ವಿಗಾರ್ ವಾರ್ ಭೋ|ಮಾ|ಬಾ| ಸ್ಟ್ಯಾನಿ ತಾವ್ರೊ ಹ್ಯಾ ಬಾಂದ್ಪಾಚೆಂ ಉದ್ಘಾಟನ್ ಕರ್ತೆಲೆಂ ಆನಿ ಬಸ್ರೂರ್ಚೊ ವಿಗಾರ್ ಮಾ|ಬಾ| ಚಾಲ್ರ್ಸ್ ನೊರೊನ್ಹಾ ಆಶಿರ್ವಚನ್ ಕರ್ತೆಲೆಂ. ಕಾರ್ಯಾಚೆ ಅಧ್ಯಕ್ಷ್‍ ರೋಜರಿ ಕ್ರೇಡಿಟ್ ಕೋ ಆಪರೇಟಿವ್ ಸೊಸೈಟಿ ಲಿ. ಚೊ ಅಧ್ಯಕ್ಷ್ ಜೋನ್ಸನ್ ಡಿಆಲ್ಮೇಡಾ ಜಾವ್ನಾಸ್ತಾಲೊ.

ಆಡಳಿತ್ ಮಂಡಳೆಚೆಂ ನಿರ್ದೇಶಕ್


ಸ್ಥಾಪಿತ್ ಚರಿತ್ರಾ
1992 ಡಿಸೆಂಬರ್ 26 ವೆರ್ ಕಥೊಲಿಕ್ ಸಭಾ ಕುಂದಾಪುರ್ ವಾರಾಡೊ ಥಾವ್ನ್ ಆರಂಭ್ ಜಾಲ್ಲೊ ರೋಜರಿ ಕ್ರೇಡಿಟ್ ಕೋ ಆಪರೇಟಿವ್ ಸೊಸೈಟಿ ಲಿ. ಆಜ್ ಹೊ ಸಂಸ್ಥೊ 29 ವರ್ಸಾಂ ನಿರಂತರ್ ಅಭಿವ್ರದ್ದಿ ಜಾವ್ನ್, ಉಡುಪಿ ಜಿಲ್ಯಾಂತ್‍ಯಿ ವಿಸ್ತಾರುನ್ ಹಾಂಚ್ಯಾ ಉತ್ತಮ ಮಟ್ಟಾಚ್ಯಾ ಸೆವೆ ವರ್ವಿಂ ಆಜ್ ಉಡುಪಿ ಜಿಲ್ಯಾಂತಚ್ ಹೊ ಸಂಸ್ಥೊ ಲೋಕಾ ಮೊಗಾಳ್ ಜಾಲ್ಯಾ.

ಪ್ರಧಾನ್ ಕಾರ್ಯಲಯ್ ಕುಂದಾಪುರ್,ಉದ್ಘಾಟನ್


ಸೊಸೈಟಿಚಿ ವಿಶೇಷತಾಂ
30 ಹಜಾರ್ ಫ್ರಾಸ್ ಚಡ್ತಿಕ್ ಗ್ರಾಹಕ್ ಹ್ಯಾ ಸಹಕಾರಿ ಸಂಸ್ಥ್ಯಾಕ್ ಆಸೊನ್ ಹಾಂಚೆಂ ಪ್ರಧಾನ್ ಕಾರ್ಯಲಯ್ ಕುಂದಾಪುರ್ ಶಹರಾ ಮಧೆಂ ಸ್ವಂತ್ ಬಾಂದ್ಪಾಂತ್ ಆಸಾ. ತಸೆಂಚ್ ಕುಂದಾಪುರ್, ಬೈಂದೂರ್, ಪಡುಕೋಣೆ, ಬಸ್ರೂರ್, ,ಶಿರ್ವಾಂ, ಪಿಯುಸ್ ನಗರ್/ಕೋಟೇಶ್ವರ, ಗಂಗೊಳ್ಳಿ/ತ್ರಾಸಿ, ಕಲ್ಯಾಣಪುರ/ಸಂತೆಕಟ್ಟೆ ಮ್ಹಣುನ್ 8 ಶಾಖೆ ಆಸಾತ್.
ಕುಂದಾಪುರ್ ಶಾಖೊ, ಪಡೊಕೋಣೆ, ಸಂತೆಕಟ್ಟೆ ಶಾಖೆಂ ಆಪ್ಲ್ಯಾ ಸ್ವಂತ್ ಬಾಂದ್ಪಾ ಆಸೊನ್ ಕಾರ್ಯಚರಣ್ ಕರಿಚ್ ಆಸಾತ್, ಆತಾಂ ಬಸ್ರೂರ್ ಶಾಖೆಚೆಂ ಬಾಂದಾಪ್ ತಯಾರ್ ಜಾವ್ನ್, ತಾಚೆಂ ಉಗ್ತಾವಣ್ ಜಾವ್ನ್ ಕಾರ್ಯಚರಣ್ ಆರಂಭ್ ಕರುಂಕ್ ಆಯ್ತೆಂ ಜಾಲ್ಯಾಸ್ತಾಂ, ಬೈಂದೂರ್ ಶಾಖೆಚ್ಯಾ ಸ್ವಂತ್ ಬಾಂದ್ಪಾಚೆಂ ಕಾಮ್ ಭರಾನ್ ಚಲ್ತೆಂ ಆಸಾ. ಪುಡ್ಲ್ಯಾ ದಿಸಾನಿಂ ಸರ್ವ್ ಬ್ರಾಂಚ್ಯಾಕ್ ಸ್ವಂತ್ ಬಾಂದ್ಪಾ ಬಾಂದುನ್ ಸ್ವಂತ್ ಬಾಂದ್ಪಾ ಥಾವ್ನ್ ಕಾರ್ಭಾರ್ ಚಲಂವ್ಚೆ ಯೋಜನ್ ಸೊಸೈಟಿಚ್ಯಾ ಆಡಳಿತ್ ಮಂಡಳೆಚೆ ಜಾವ್ನಾಸಾ.

ಸುಸಜ್ಜಿತ್ ಪ್ರಧಾನ್ ಕಾರ್ಯಲಯ್ ಕುಂದಾಪುರ್ (ಆಲ್ಬಮ್)


ಸೊಸೈಟಿಂತ್ ಲಾಭ್ಚಿಂ ಸೌಲತಾಯ್
ಸೊಸೈಟಿಂತ್ ಪಿಗ್ಮಿ ಸೌಲತ್ ಆಸೊನ್, ಘರಾಕ್/ ಬಾಂದ್ಪಾಕ್ ರೀಣ್, ಕೈಗಾರಿಕ್ ರೀಣ್, ವಾಹನ್ ರೀಣ್, ಲಗ್ನಾಕ್ ರೀಣ್, ಬಾಂಗಾರ್ ಇಡ್ ದವರ್ಚೆಂ ರೀಣ್, ವ್ಯಾಪರ್ ವ್ಯಹವಾರ್ ರೀಣ್ ಅಶೆಂ ಸರ್ವ್ ರೀತಿಚಿಂ ರಿಣಾಚಿಂ ಸೌಲತ್ ಸೊಸೈಟಿ ದಿವ್ನ್ ಆಸಾ.
“ಹ್ಯಾ ಸೊಸೈಟಿಂತ್ 83 ಕೊರೋಡ್ ಮುಗಂಡ್ ರೀಣ್ ಸೌಲತ್ ಆಸೊನ್, 106 ಕೊರೋಡಾ ಫ್ರಾಸ್ ಚಡ್ ಠೇವ್ಣಿ ಆಸಾ” ಮ್ಹಣುನ್ ಸೊಸೈಟಿಚೊ ಅಧ್ಯಕ್ಷ್ ಜೋನ್ಸನ್ ಡಿಆಲ್ಮೇಡಾನ್ ಮಾಹೆತ್ ದಿಲ್ಯಾ. ಸೊಸೈಟಿ ನಿರಂತರ್ ಮುನಾಪೆÇ ಜೋಡ್ನ್ ಯೆಂವ್ನ್ 1993 ಥಾವ್ನ್ ಸೊಸೈಟಿಚ್ಯಾ ಹಿಸ್ಸೆದಾರಾಂಕ್ ಲಾಭಾಂಶ್ (ಡಿವಿಡೆಂಡ್) ದಿವ್ನಚ್ ಆಸಾ. ಪಾಟ್ಲ್ಯಾ ಆರ್ಥಿಕ್ ವರ್ಸಾಂ ಶೇ. 17.5 ಲಾಭಾಂಶ್ ದಿಲ್ಯಾ.


ಉಂಚ್ ಮಟ್ಟಾಚಿ ಸೆವಾ
ಅತ್ಯುತ್ತಮ್ ಸೆವಾ ದಿವ್ನ್ ಖ್ಯಾತ್ ಜಾಲ್ಯಾ ರೋಜರಿ ಸೊಸೈಟಿಕ್ 2019 ಇಸ್ವೆಂತ್ ರಾಜ್ಯ್ ಮಟ್ಟಾಚ್ಯಾ 66 ವ್ಯಾ ಅಖೀಲ್ ಭಾರತ ಸಹಕಾರ ಸಪ್ತಾಹ ಉಡುಪಿ ಹಾಂಚೆಂ ಥಾವ್ನ್ ‘ಉತ್ತಮ್ ಸಹಕಾರಿ ಸಂಘ್ ಪ್ರಶಸ್ತಿ’ ಲಾಭ್ಲ್ಯಾ. ತಶೆಂಚ್ ಉಂಚ್ ಮಟ್ಟಾಚ್ಯಾ ವ್ಯವಹಾರಾಕ್ ಆನಿ ಸರ್ವ್ ಥರಾಂಚ್ಯಾ ಪ್ರಗತೆಚೆಂ ಸಾಧನ್ ಕೆಲ್ಯಾ ಖಾತಿರ್, ದ.ಕನ್ನಡ ಜಿಲ್ಲಾ ಕೇಂದ್ರ ಸಹಾಕಾರಿ ಬ್ಯಾಂಕಾ ಥಾವ್ನ್ “ಸಾಧನಾ ಪ್ರಶಸ್ತಿ” ಪತ್ರ್ ಆನಿ ಫಲಕ್ ಪ್ರಶಸ್ತಿ ಲಾಬ್ಲ್ಯಾ.


ನಿರ್ದೇಶಕ್ ಆನಿ ಕಾರ್ಯನಿರ್ವಹಣಾಧಿಕಾರಿ
ಸಂಸ್ಥ್ಯಾಚೊ ಉಪಾಧ್ಯಕ್ಷ್ ಕಿರಣ್ ಲೋಬೊ, ಆಡಳಿತ್ ಮಂಡಳೆಚೆಂ ನಿರ್ದೇಶಕ್ ಜಾವ್ನಾಸ್ಲೆಂ ಫಿಲಿಫ್ ಡಿಕೋಸ್ತಾ, ವಿನೋದ್ ಕ್ರಾಸ್ಟೊ, ಡಯಾನಾ ಡಿಆಲ್ಮೇಡ, ಶಾಂತಿ ಕರ್ವಾಲ್ಲೊ , ಶಾಂತಿ ಡಾಯಸ್, ಜಾಕೋಬ್ ಡಿಸೋಜ, ಬ್ಯಾಪ್ಟಿಸ್ಟ್ ಡಾಯಸ್, ಪ್ರಕಾಶ್ ಲೋಬೊ, ಓಝ್ಲಿನ್ ರೆಬೆಲ್ಲೊ, ಡೆರಿಕ್ ಡಿಸೋಜಾ, ವಿಲ್ಸನ್ ಡಿಸೋಜಾ, ಸಂತೋಷ್ ಓಜ್ವಲ್ಡ್ ಡಿಸಿಲ್ವಾ, ವಿಲ್ಫ್ರೆಡ್ ಮಿನೇಜೆಸ್, ಟೆರೆನ್ಸ್ ಸುವಾರಿಸ್, ತಿಯೋದೊರ್ ಒಲಿವೆರಾ ತಶೆಂಚ್ ಪ್ರಧಾನ್ ಕಾರ್ಯನಿರ್ವಹಣಾಧಿಕಾರಿ ಪಾಸ್ಕಲ್ ಡಿಸೋಜಾ ಆನಿ ಸಹಾಯಕ್ ಕಾರ್ಯನಿರ್ವಹಣಾಧಿಕಾರಿ ಮೇಬಲ್ ಡಿಆಲ್ಮೇಡಾ ಆನಿ ಸಿಬ್ಬಂದಿ ರೋಜರಿ ಸೊಸೈಟಿ ಆನಿಕಿ ಚಡ್ ಮಾಫಾನ್ ಅಭಿವ್ರದ್ದಿ ಪಾಂವ್ಚ್ಯಾ ಪಾಸೊತ್ ಮಿನತ್ ಕಾಡ್ನ್ ಆಸಾ
.

ಬಸ್ರೂರ್ ಶಾಖ್ಯಾಚೆ ಬೂನ್ಯಾದ್
ಬೈಂದೂರ್ ಶಾಖ್ಯಾಚೆ ಬೂನ್ಯಾದ್

ವಾರಾಂತ್ಯ ಲಾಕ್ ಡೌನ್; ಬೆಂಗಳೂರಿನಲ್ಲಿ ರಾತ್ರಿಯಿಂದ ನಮ್ಮ ಮೆಟ್ರೋ ರೈಲು, ಬಿಎಂಟಿಸಿ ಬಸ್ ಸಂಚಾರ ಸ್ಥಗಿತ

JANANUDI.COM NETWORK

ಬೆಂಗಳೂರು,23: ರಾಜ್ಯದಲ್ಲಿ ಮಹಾಮಾರಿ ಕೊರೋನಾ ವೈರಸ್ ಹರಡದಂತೆ ಜಾಗ್ರತೆ ಮಾಡಲು, ಇವತ್ತು ಶುಕ್ರವಾರ ರಾತ್ರಿಯಿಂದಲೇ ವಾರಾಂತ್ಯ ಲಾಕ್ ಡೌನ್ ಜಾರಿಯಾಗುತ್ತಿದ್ದು, ಶನಿವಾರ ಮತ್ತು ಭಾನುವಾರ ಕರ್ಣಾಟ್ಕ ಸಂಪೂರ್ಣ ಸ್ತಬ್ದವಾಗಲಿದೆ.
ವಾರಾಂತ್ಯ ಲಾಕ್ ಡೌನ್ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಇಂದು ರಾತ್ರಿ 9 ಗಂಟೆಯಿಂದ ಸೋಮವಾರ ಬೆಳಗ್ಗೆ 6 ಗಂಟೆಯವರೆಗೆ ಯಾವುದೇ ಬಿಎಂಟಿಸಿ ಬಸ್ ಗಳು ಮತ್ತು ನಮ್ಮ ಮೆಟ್ರೋ ರೈಲುಗಳು , ಸಂಚರಿಸುವುದಿಲ್ಲ. ತುರ್ತು ಸೇವೆಗಾಗಿ ಮಾತ್ರ 500 ಬಸ್ ಗಳು ಸಂಚರಿಸಲಿವೆ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸಿ ಸಿಖಾ ಅವರು ಮಾಹಿತಿ ನೀಡಿದ್ದಾರೆ.
ಬೆಂಗಳೂರು ನಗರದಲ್ಲಿ ನಮ್ಮ ಮೆಟ್ರೋ ಸಂಚಾರ ಸಹ ಸಂಪೂರ್ಣ ಬಂದ್ ಆಗಲಿದ್ದು, ಇಂದು ಸಂಜೆ 7.30 ರಿಂದ ಸೋಮವಾರ ಬೆಳಗ್ಗೆ 7 ಗಂಟೆಯವರೆಗೆ ಯಾವುದೇ ಮೆಟ್ರೋ ರೈಲು ಸಂಚರಿಸುವುದಿಲ್ಲ. ಇಂದು ಸಂಜೆ 7.30ಕ್ಕೆ ಮೈಸೂರು ರಸ್ತೆ, ಬೈಯಪ್ಪನಹಳ್ಳಿ, ನಾಗಸಂದ್ರ ಮತ್ತು ಸಿಲ್ಕ್ ಸಂಸ್ಥೆಯಿಂದ ಕೊನೆಯ ರೈಲು ಹೊರಡಲಿದೆ ಎಂದು ಬಿಎಂಆರ್ ಸಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ. ಸೋಮವಾರ ಬೆಳಗ್ಗೆ 7ರಿಂದ ಎಂದಿನಂತೆ ಮೆಟ್ರೋ ರೈಲು ಸಂಚಾರ ಆರಂಭವಾಗಲಿದೆ ಎಂದು ಬಿಎಂಆರ್ ಸಿಎಲ್ ತಿಳಿಸಲಾಗಿದೆ.
ದೀಡಿರ್ ಇಂತಹ ಬದಲಾವಣೆಗಳಿಂದ ತೊಂದರೆಯಾಗುವ ಸಂಭವ ಇದೆ.

ಕೊರೊನಾ ಸೋಂಕಿತನ ಶವ ಸಾಗಿಸಲು 60 ಸಾವಿರ ಬೇಡಿಕೆಯಿಟ್ಟ ಆ್ಯಂಬುಲೆನ್ಸ್ ಚಾಲಕ, ಮಾಲೀಕನ ಬಂಧನ

JANANUDI.COM NETWORK

ಬೆಂಗಳೂರು, 23: ಕೊರೊನಾ ಸೋಂಕಿತ ಆರ್.ವಿ. ಪ್ರಸಾದ ಕುಟುಂಬದ 55 ವರ್ಷದ ವ್ಯಕ್ತಿಗೆ ಸಕಾಲದಲ್ಲಿ ಐಸಿಯು ಬೆಡ್ ಸಿಗದೆ ಮೃತಪಟ್ಟರು. ಈ ಮೃತ ಶವವನ್ನು ಸಾಗಿಸಲು ಹೆಬ್ಬಾಳ ಫ್ಲೈಓವರ್ ಬಳಿ ಇರುವ ನಂದನ ಇಂಟರ್ ಆಂಬ್ಯುಲೆನ್ಸ್ ಇಂಟರ್ನ್ಯಾಷನಲ್ ಆ್ಯಂಬುಲೆನ್ಸ್ ಚಾಲಕ ಮ್ರತ 60 ವ್ಯಕ್ತಿಯ ಮಗಳ ಹತ್ತಿರ 60 ಸಾವಿರ ರೂಪಾಯಿ ಬೇಡಿಕೆ ಇಟ್ಟು ಸತಾಯಿಸಿದ್ದ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆ್ಯಂಬುಲೆನ್ಸ್ ಚಾಲಕನನ್ನು ಬಂಧನಕ್ಕೊಳಪಡಿಸಿದ್ದಾರೆ.
ಏಪ್ರಿಲ್ 20 ರಂದು ಈ ಘಟನೆ ನಡೆದಿದ್ದು. ಭವ್ಯಾ ಎಂಬ ಮಹಿಳೆಯ ತಂದೆ ಪ್ರಸಾದ್ ಎಂಬುವವರು ಕೊರೋನಾ ಸೋಂಕಿನಿಂದಾಗಿ ಖಾಸಗಿ ಆಸ್ಪತ್ರೆಯಲ್ಲಿ ಮ್ರತಪಟ್ಟಿದ್ದಾರೆ. ತಂದೆಯ ಮೃತದೇಹವನ್ನು ಚಿತಾಗಾರಕ್ಕೆ ಸಾಗಿಸಲು ಮುಂದಾದ ಭವ್ಯಾ ಅವರ ಬಳಿ ಆ್ಯಂಬುಲೆನ್ಸ್ ಚಾಲಕ ಮಾಲೀಕ ರೂ.60 ಸಾವಿರ ಬೇಡಿಕೆ ಇಟ್ಟು. ದುಡ್ಡು ಕೊಟ್ಟರಷ್ಟೇ ಮೃತದೇಹ ಸಾಗಿಸುತ್ತೇವೆ. ಇಲ್ಲವಾದರೆ, ರಸ್ತೆಯ ಮೇಲೆ ಮೃತದೇಹ ಬಿಟ್ಟು ಹೋಗುತ್ತೇವೆಂದು ಬೆದರಿಸಿದ ಪ್ರಕರಣ ಇದಾಗಿದೆ..
ಈ ವೇಳೆ ಭವ್ಯಾ ತಮ್ಮ ಬಳಿ ಇದೀಗ ಅಷ್ಟೊಂದು ಹಣವಿಲ್ಲ.ನನ್ನ ಮಾಂಗಲ್ಯ ಸರ ಮಾರಿ ಹಣ ನೀಡುತ್ತೇನೆ. ಈಗ ಮೃತದೇಹ ಸಾಗಿಸಲು ಸಹಾಯ ಮಾಡುವಂತೆ ಬೇಡಿಕೊಂಡಿದ್ದೇನೆ. ಆದರೆ, ಇದಕ್ಕೆ ಆ್ಯಂಬುಲೆನ್ಸ್ ಮಾಲೀಕ ನಿರಾಕರಿಸಿದ್ದು, ನಂತರ ಭವ್ಯಾ ಮಾಧ್ಯದವರಿಗಳ ಮೂಲಕ ಪೊಲೀಸರಿಗೆಮಾಹಿತಿ ಬಳಿಕ ಪರಿಸ್ಥಿತಿಯ ಗಂಭೀರತೆ ಅರಿತ ಆ್ಯಂಬುಲೆನ್ಸ್ ಮಾಲೀಕ ಹರೀಶ್ ಅಶ್ವತ ನಾರಾಯಣ ರೂ.16,000ಕ್ಕೆ ಮೃತದೇಹ ಸಾಗಿಸಲು ಒಪ್ಪಿದ್ದಾನೆ.
ಬಳಿಕ ಭವ್ಯಾ ಅವರು ಹಣವನ್ನು ನೀಡಿ ಮೃತದೇಹವನ್ನು ಸಾಗಿಸಿದ್ದಾರೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಅಮೃತಹಳ್ಳಿ ಪೊಲೀಸರು ಆ್ಯಂಬುಲೆನ್ಸ್ ನ್ನು ವಶಕ್ಕೆ ಪಡೆದು ಚಾಲಕ ಹನುಮಂತಪ್ಪ ಸಿಂಗ್ರಿ (30) ಮತ್ತು ಮಾಲೀಕ ಹರೀಶ್ ಅಶ್ವತ ನಾರಯಣ ಇವರನ್ನು ಬಂಧಿಸಿದ್ದಾರೆ.