HOLY ROSARY CHURCH, KUNDAPUR – 450 th JUBILEE SOUVENIR 2021

ನೇಪಾಳ-ಭೂತಾನ್​ನಲ್ಲಿ ಭಾರಿ ಮಳೆ ಪ್ರವಾಹದಿಂದ 17 ಮಂದಿ ಸಾವು, ಹಲವರ ನಾಪತ್ತೆ

JANANUDI.COM NETWORK

ಕಠ್ಮಂಡು, ಜೂ.17: ನೇಪಾಳ ಮತ್ತು ಭೂತಾನ್​ನಲ್ಲಿ ಕಳೆದ ಮೂರು ದಿನದಿಂದ ಭಾರೀ ಮಳೆಯಾಗುತ್ತಿದ್ದು, ಪ್ರವಾಹದಿಂದ 17 ಮಂದಿ ಸಾವಗಿಡಾಗಿದ್ದು, ಹಲವರ ನಾಪತ್ತೆಯಾಗಿದ್ದಾರೆ, ಜನರು ಭಾರೀ ಮಳೆಯಿಂದ ಅಲ್ಲಿನ ಜನರುತತ್ತರಿಸಿ ಹೋಗಿದ್ದಾರೆ.

    ಸುಮಾರು 200 ಮನೆಗಳು ಸಂಪೂರ್ಣವಾಗಿ ನಾಶವಾಗಿವೆ. ಅನೇಕರು ಗಾಯಗೊಂಡಿದ್ದು, ಹೆಲಿಕಾಪ್ಟರ್‌ಗಳ ಮೂಲಕ ಗಾಯಾಳುಗಳನ್ನು ಸ್ಥಳಾಂತರಿಸಲಾಗಿದೆ. ನೇಪಾಳ ಹಾಗೂ ಭೂತಾನ್​ನ​ ಅನೇಕ ಪ್ರದೇಶಗಳು ಗುಡ್ಡ ಪ್ರದೇಶಗಳಿಂದ ಕೂಡಿರುವುದರಿಂದ ಭಾರೀ ಮಳೆಯ ಕಾರಣ ಪ್ರವಾಹ-ಭೂ ಕುಸಿತವಾಗಿದ್ದು, ಸೇತುವೆಗಳು ಕೂಡ ನಾಶವಾಗಿವೆ, ಜನರಿಗೆ ಅನೇಕ ಸಮಸ್ಯೆಗಳು ಎದುರಾಗುತ್ತಿರುತ್ತವೆ.

ಜಗತ್ತಿನ ಅತ್ಯಂತ ದುಬಾರಿ 16 ಕೋಟಿ ರೂಪಾಯಿಯ, ಪುಟ್ಟ ಮಗನ ಔಷಧಕ್ಕೆ ಹಣ ಸಂಗ್ರಹಣ ಆಯಿತು

JANANUDI.COM NETWORK

ಹೈದರಾಬಾದ್‌, ಜೂ.16. ಹೈದರಾಬಾದಿನ ಯೋಗೇಶ್‌ ಮತ್ತು ರೂಪಲ್ ದಂಪತಿಯ ಮಗ ಅಯಾಂಶ್ ವಂಶವಾಹಿ ಸಮಸ್ಯೆಯಾದ ಸ್ಪೈನಲ್ ಮಸ್ಕುಲರ್‌ ಅಟ್ರೋಫಿ (ಎಸ್‌ಎಂಎ) ಎಂಬ ಕಾಯಿಲೆಯಿಂದ ಬಳಲುತ್ತಿದ್ದ.  ಈ ಸಮಸ್ಯೆಯಿಂದಾಗಿ ಮಗು ನಡೆದಾಡುವುದು ಕಷ್ಟವಾಗಿತ್ತು. ಒಂದು ವೇಳೆ ಚಿಕಿತ್ಸೆ ನೀಡದಿದ್ದರೇ, ಜೀವಕ್ಕೇ ಅಪಾಯವಿತ್ತು. ಆದರೆ ಈ ಸಮಸ್ಯೆಗೆ ಭಾರತ ಸೇರಿದಂತೆ ಬಹುತೇಕ ರಾಷ್ಟ್ರಗಳಲ್ಲಿ ಔಷಧವಿಲ್ಲ. ಆದ್ದರಿಂದ ಅಮೆರಿಕದಿಂದ ಔಷಧವನ್ನು ಖರೀದಿ ಮಾಡಬೇಕಿತ್ತು. ಆದರೆ ಇದರ ಸಿಂಗಲ್‌ ಡೋಸ್ ಔಷಧಿಗೆ ಜೆಎಸ್‌ಟಿ ಹೊರತಾಗಿ 16 ಕೋಟಿ ರೂಪಾಯಿ ಆಗುತಿತ್ತು.

       ಜಗತ್ತಿನ ಅತ್ಯಂತ ದುಬಾರಿ ಮೆಡಿಕಲ್ ಡ್ರಗ್‌ ಎಂದೇ ಪರಿಗಣಿತವಾದ  ಜ಼ಾಲ್ಗೆನ್‌ಸ್ಮಾದ ಸಿಂಗಲ್-ಡೋಸ್ನನ್ನು ಬಾಲಕನಿಗೆ ಚಿಕಿತ್ಸೆಗಾಗಿ  ಇಷ್ಟೊಂದು ಹಣ ಅವರು ವ್ಯವಸ್ಥೆ ಮಾಡಲಾಗದೆ ಚಿಂತಿತರಾಗಿದ್ದರು.  

     ನಂತರ ಈ ದಂಪತಿಗಳು ಗೋಫಂಡ್‌ಮೀ ಮುಖಾಂತರ ಕ್ರೌಡ್‌ ಫಂಡಿಂಗ್‌ಗೆ ಮುಂದಾಗಿದ್ದಾರೆ. ಅಚ್ಚರಿಯ ಸಂಗತಿ ಎಂದರೆ ಈ ಮಗುವಿನ ಚಿಕಿತ್ಸೆಗಾಗಿ ಸುಮಾರು 65 ಸಾವಿರ ಮಂದಿ ದೇಣಿಗೆ ಹಣ ನೀಡಲು ಮುಂದೆ ಬಂದು, ಇದೀಗ ಅವರ ಮಗುವಿನ ಚಿಕಿತ್ಸೆಯ ಔಷಧದ ಸಂಪೂರ್ಣ ವೆಚ್ಚ ಸಿಕ್ಕಿದ್ದಕ್ಕೆ ದಂಪತಿಗಳು ಖುಷಿ ಪಟ್ಟಿದ್ದಾರೆ.

ಲಾರಿ-ಕಾರಿನ ನಡುವೆ ಭೀಕರ ಅವಘಡ:ಕಾರಿನಲ್ಲಿದ್ದ 10 ಜನರ ದುರ್ಮರಣ

JANANUDI.COM NETWORK

ಆನಂದ್, ಜೂ.16: ಗುಜರಾತ್​ ರಾಜ್ಯದ ಆನಂದ್​ ಜಿಲ್ಲೆಯ ಇಂದ್ರಾನಾಜ್​ ಎಂಬ ಗ್ರಾಮದ ಬಳಿ ಲಾರಿ​ ಮತ್ತು ಕಾರಿನ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ, ಕಾರಿನಲ್ಲಿದ್ದ 10 ಜನರು ಸ್ಥಳದಲ್ಲೇ ಮೃತಪಟ್ಟಿದ್ದ ದಾರುಣ ಘಟನೆ ನಡೆದಿದೆ

    ತಾರಾಪುರ ಮತ್ತು ಅಹಮದಾಬಾದ್ ಜಿಲ್ಲೆಯ ವಟಮಾನ್​​ ’ಎಂಬ ಉರಿಗೆ ಸಂಪರ್ಕಿಸುವ ರಾಜ್ಯ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ.ಲಾರಿಯು ಬಹಳ ವೇಗವಾಗಿ ಬಂದು  ಕಾರಿಗೆ ಡಿಕ್ಕಿ ಹೊಡೆದಿದೆ.

   ಕಾರಿನೊಳಗಿದ್ದ ಮೃತದೇಹಗಳು ನಜ್ಜುಗುಜ್ಜಾಗಿದ್ದು, ಕಾರಿನಿಂದ ಹೊರತೆಗೆಯುವ ಮತ್ತು ಮೃತರನ್ನು ಗುರುತಿಸುವ ಕೆಲಸ ನಡೆಯುತ್ತಿದೆ ಎಂದು ಅಧಿಕಾರಿಗಳಿಂದ ತಿಳಿದು ಬಂದಿದೆ.

ಶ್ರೀನಿವಾಸಪುರ: ತಾಲ್ಲೂಕಿನ ಶೀಗಹಳ್ಳಿ ಗ್ರಾಮದ ಮಾವಿನ ತೋಟವೊಂದರಲ್ಲಿ ಬಂದೂಕಿನಿಂದ ಹಾರಿದ ಗುಂಡಿಗೆ ವ್ಯಕ್ತಿಯೊಬ್ಬ ಬಲಿ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ತಾಲ್ಲೂಕಿನ ಶೀಗಹಳ್ಳಿ ಗ್ರಾಮದ ಮಾವಿನ ತೋಟವೊಂದರಲ್ಲಿ ಬಂದೂಕಿನಿಂದ ಹಾರಿದ ಗುಂಡಿಗೆ ವ್ಯಕ್ತಿಯೊಬ್ಬ ಬಲಿಯಾಗಿರುವ ಘಟನೆ ಸೋಮವಾರ ರಾತ್ರಿ ಸಂಭವಿಸಿದೆ.
ಮೃತ ವ್ಯಕ್ತಿಯನ್ನು ಯಲ್ದೂರು ಗ್ರಾಮದ ಶಂಕರಪ್ಪ (35) ಎಂದು ಗುರುತಿಸಲಾಗಿದೆ.
ಶಂಕರಪ್ಪ ಮಾವಿನ ತೋಟಗಳ ಕಾವಲುಗಾರನಾಗಿ ಕಾರ್ಯನಿರ್ವಹಿಸುತ್ತಿದ್ದರು. ಸೋಮವಾರ ರಾತ್ರಿ ಸುಮಾರು 8 ಗಂಟೆಯಲ್ಲಿ, ಅವರು ತಮ್ಮ ಸಹಚರರಾದ ಕೋದಂಡಪ್ಪ, ಚೌಡಪ್ಪ ಹಾಗೂ ಶ್ರೀನಿವಾಸ್ ಅವರೊಂದಿಗೆ ಬಂದೂಕು ಹಿಡಿದು ಬೇಟೆಗೆ ಹೋಗಿದ್ದರು. ಬೆಳಿಗ್ಗೆ ಗ್ರಾಮದ ಹೊರವಲಯದಲ್ಲಿನ ಪೂಜಾರಿ ಯಲ್ಲಪ್ಪ ಅವರ ಮಾವಿನ ತೊಟದಲ್ಲಿ ಗುಂಟೇಟು ತಗುಲಿ ಬಂದೂಕಿನೊಂದಿಗೆ ಶವವಾಗಿ ಬಿದ್ದಿದ್ದರು. ಸಹಚರರು ತಲೆ ಮರೆಸಿಕೊಂಡಿದ್ದಾರೆ ಎಂದು ಮೃತನ ಪತ್ನಿ ಕವಿತಾ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಬಂದೂಕಿನಿಂದ ಆಕಸ್ಮಿಕವಾಗಿ ಗುಂಡು ಹಾರಿದ ಪರಿಣಾಮವಾಗಿ ಹಣೆಗೆ ಗಾಯವಾಗಿ ಶಂಕರಪ್ಪ ಮೃತಪಟ್ಟಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡೆಕ್ಕಾ ಕಿಶೋರ್ ಬಾಬು, ಹೆಚ್ಚುವರಿ ವರಿಷ್ಠಾಧಿಕಾರಿ ನಾರಾಯಣಸ್ವಾಮಿ, ಡಿವೈಎಸ್‍ಪಿ ಗಿರಿ, ಪೊಲೀಸ್ ಇನ್ಸ್‍ಪೆಕ್ಟರ್ ಸಿ.ರವಿಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು

ಕೋಲಾರದಲ್ಲಿ ದಿನಸಿ ಕಿಟ್ ಮತ್ತು ಆರೋಗ್ಯ ಕಿಟ್‍ಗಳನ್ನು ವಿತರಿಸಿದ ವಿಸ್ಟ್ರಾನ್

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ,ಜೂ.15: ವಿಸ್ಟ್ರಾನ್ ಮ್ಯಾನ್ಯೂಫ್ಯಾಕ್ಚರಿಂಗ್ ಇಂಡಿಯಾ ಸಂಸ್ಥೆಯ ವೀಕೇರ್ ಸಿಎಸ್‍ಆರ್ ಕಾರ್ಯಕ್ರಮದ ಅಂಗವಾಗಿ ಇಂದು ಸಂಸ್ಥೆಯ ಕಾರ್ಖಾನೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿರುವ 400 ಮಂದಿ ಅತ್ಯಂತ ಬಡ ಮತ್ತು ಮಧ್ಯಮ ವರ್ಗದ ಕುಟುಂಬಕ್ಕೆ ಆಹಾರ ಪಡಿತರ ಕಿಟ್‍ಗಳನ್ನು ವಿತರಿಸಿತು.
ಕೋಲಾರದ ಶಾಸಕ ಕೆ. ಶ್ರೀನಿವಾಸಗೌಡ, ವಿಸ್ಟ್ರಾನ್ ಇಂಡಿಯಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ನಾಗರಾಜ್ ಎಂ ರವರು ಕಿಟ್‍ಗಳನ್ನು ಫಲಾನುಭವಿಗಳಿಗೆ ವಿತರಿಸಿದರು.
ಮಾಲೂರು, ನರಸಾಪುರ ಮತ್ತು ಬೆಳ್ಳೂರು ತಾಲ್ಲೂಕುಗಳಿಂದ ಆಗಮಿಸಿದ್ದ ಬಡ ಹಾಗೂ ಮಧ್ಯಮ ವರ್ಗದ ಕುಟುಂಬದ ಸದಸ್ಯರು ಆಹಾರ ಹಾಗೂ ವೈದ್ಯಕೀಯ ಕಿಟ್‍ಗಳನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಆಯಾ ಪಂಚಾಯಿತಿ ಸದಸ್ಯರು ಮತ್ತು ಪಿಡಿಒಗಳು ಉಪಸ್ಥಿತರಿದ್ದರು. ವಿತರಣಾ ಕಾರ್ಯಕ್ರಮದಲ್ಲಿ ವಿಸ್ಟ್ರಾನ್ ಇಂಡಿಯಾದ ಪ್ರಧಾನ ವ್ಯವಸ್ಥಾಪಕ ಸೆಂಥಿಲ್‍ಕುಮಾರ್ ಭಾಗವಹಿಸಿದ್ದರು.
ವಿಸ್ಟ್ರಾನ್ ವೀಕೇರ್ ಸಿಎಸ್.ಆರ್ ಕಾರ್ಯಕ್ರಮದಡಿ ಕಂಪನಿಯು ಈಗಾಗಲೇ 1000 ಮುಖಗವುಸುಗಳನ್ನು ಮತ್ತು 10000 ಮಾಸ್ಕ್‍ಗಳನ್ನು ಜಿಲ್ಲಾ ಪೆÇಲೀಸರಿಗೆ ವಿತರಿಸಿದೆ. ಪಿಎಚ್‍ಸಿ ಮತ್ತು ಸಿಎಚ್‍ಸಿಗಳಲ್ಲಿ ವಿತರಣೆಗಾಗಿ 10 ಆಮ್ಲಜನಕ ಸಾಂದ್ರಕಗಳನ್ನು ಇತ್ತೀಚೆಗೆ ಕೋಲಾರ ಜಿಲ್ಲಾಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ. ಮಾಲೂರು ಆಸ್ಪತ್ರೆಯಲ್ಲಿ ಹೆಚ್ಚಿನ ಸಾಮಥ್ರ್ಯದ ಆಮ್ಲಜನಕ ಉತ್ಪಾದಕ ಘಟಕವನ್ನು ಶೀಘ್ರದಲ್ಲೇ ಸ್ಥಾಪಿಸಲಾಗುವುದು. ಈಗಾಗಲೇ ಸಾವಿರಾರು ಆರೋಗ್ಯ ಕಿಟ್‍ಗಳನ್ನು ನೌಕರರು ಮತ್ತು ಅವರ ಕುಟುಂಬಗಳಿಗೆ ವಿತರಿಸಲಾಗಿದೆ. ಸಮುದಾಯದ ಬದ್ಧತೆಯ ಭಾಗವಾಗಿ ವಿಸ್ಟ್ರಾನ್, ಬೆಂಬಲ ಮತ್ತುಪರಿಹಾರವನ್ನು ವಿಸ್ತರಿಸಲು ಮತ್ತು ಸಮುದಾಯದಲ್ಲಿ ಆರೋಗ್ಯ ಮೂಲಸೌಕರ್ಯ ಮತ್ತು ಸಂಪನ್ಮೂಲ ಲಭ್ಯತೆಯನ್ನು ಸುಧಾರಿಸಲು ಒಂದು ತಿಂಗಳ ಕಾಲ ಸಿಎಸ್‍ಆರ್ ಕಾರ್ಯಕ್ರಮವನ್ನು ಪ್ರಾರಂಭಿಸಿದೆ ಮತ್ತು ಅಗತ್ಯವುಂಟಾದಂತೆ ಪ್ರಯತ್ನಗಳನ್ನು ಇನ್ನಷ್ಟು ವಿಸ್ತರಿಸುವ ಭರವಸೆ ನೀಡಿದೆ.

ದಲಿತ ಯುವಕನನ್ನು ಜೀತ ಪದ್ದತಿಯಿಂದ ಮುಕ್ತಿಗೊಳಿಸಿದ:- ಅಂಬೇಡ್ಕರ್ ಸೇವಾ ಸಮಿತಿ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ,ಜೂ.15: ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ತಿರುಮಲಹಟ್ಟಿ ಗ್ರಾಮದ ದಲಿತ ಯುವಕನಿಗೆ 75 ಸಾವಿರ ದುಡ್ಡು ಕೊಟ್ಟು, ಸುಮಾರು 5 ವರ್ಷದಿಂದ ದಿನ್ನೇರಿ ಹಾರೋಹಳ್ಳಿ ಗ್ರಾಮದ ವಕ್ಕಲಿಗ ಸಮುದಾಯಕ್ಕೆ ಸೇರಿದ ನವೀನ್ ಎಂಬುವ ವ್ಯಕ್ತಿ ಅವರು ಇಟ್ಟಿಗೆ ಕಾರ್ಖಾನೆಯಲ್ಲಿ, ಜಮೀನಿನಲ್ಲಿ ಕೆಲಸ ಮಾಡಿಸಿಕೊಂಡು, ದಬ್ಬಾಳಿಕೆ ನಡೆಸಿ, ಮನಬಂದಂತೆ ಹೊಡೆದು, ಮಾನಸಿಕ ಹಿಂಸೆ ನೀಡಿ, ಜೀತದ ಮೂಲಕ ಮನಬಂದಂತೆ ನಡೆಸಿಕೊಳ್ಳುತ್ತಿದ್ದರು.
ಈ ವಿಚಾರ ಅಂಬೇಡ್ಕರ್ ಸೇವಾ ಸಮಿತಿಗೆ ತಿಳಿದ ತಕ್ಷಣ ಆ ಯುವಕನನ್ನು ಜೀತ ಪದ್ದತಿಯಿಂದ ಮುಕ್ತಗೊಳಿಸಲಾಯಿತು ಎಂದು ಅಂಬೇಡ್ಕರ್ ಸೇವಾ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಕೆ.ಎಂ ಸಂದೇಶ್ ಹೇಳಿದರು.

ಮನೆ ಮಗನ ಶವ ಬಿಟ್ಟು ರೋಗಿಯ ಬದುಕಿಸಲು ಕರ್ತವ್ಯಕ್ಕೆ ಧಾವಿಸಿದ ಆಂಬುಲೆನ್ಸ್ ಚಾಲಕ – ಚಾಲಕನಿಗೆ ಜನರಿಂದ ಬಾರೀ ಪ್ರಶಂಸೆ

JANANUDI.COM NETWORK

(ಮನುಷತ್ವ ಎಂಬುದು ಕೆಲವರಿಗೆ ಜಾತಿ ಮತ ಕ್ಕೆ ಸೀಮಿತವಲ್ಲ, ಕಾಲ ಸಂದರ್ಭ ಅವರಿಗೆ ಸೀಮಿತವಲ್ಲ, ಅದೇ ಮಾನವತ್ವ, ಇಂತಹದೊಂದು ಘಟನೆ  ತನ್ನ ಮಗ ಮನೆಯಲ್ಲಿ ಸತ್ತು  ಬಿದ್ದಿದ್ದರು, ಬೇರೆಯವರ ಜೀವ ಉಳಿಸಲು ತನ್ನ ಕರ್ತವ್ಯಕ್ಕೆ ಧಾವಿಸಿದ ಚಾಲಕ, ಅತನ ಈ ಕರ್ತವ್ಯಕ್ಕೆ ಜನ ಮೆಚ್ಚಿ ಸಲಾಂ ಮಾಡಿದ್ದಾರೆ)   

ಮೈಸೂರು: ಮನೆಯಲ್ಲಿ ತನ್ನ  ಮಗ ಮೃತಪಟ್ಟಿದ್ದಾನೆ, ಆದರೆ ಅಂಬೆಲೆನ್ಸ್ ಚಾಲಕನಿಗೆ ಬೇರೊಬ್ಬ ರೋಗಿಗೆ ಆಸ್ಪತ್ರೆಗೆ ಕೊಂಡಯ್ಯಲು ತುರ್ತು  ಕರೆಯೊಂದು ಬರುತ್ತೆ, ಚಾಲಕ ಅದಕ್ಕೆ ಸ್ಪಂದಿಸಿ, ಮಗನ ಶವವನ್ನು ಮನೆಯಲ್ಲಿಯೇ ಬಿಟ್ಟು ಕರ್ತವ್ಯ ಕರೆಗೆ ಓಗೊಟ್ಟು ರೋಗಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದ ಘಟನೆ ಮೈಸೂರಿನಲ್ಲಿ ನಡೆದಿದೆ.

    ಸಹಾಯವಾಣಿ ಕೇಂದ್ರದ ಆಯಂಬುಲೆನ್ಸ್‌ ಡ್ರೈವರ್‌ ಆಗಿರುವ ಮುಬಾರಕ್ ಅವರಿಗೆ ಎಲ್ಲೆಡೆಯಿಂದ ಜನರು ಕೊಂಡಾಡುತ್ತಿದ್ದಾರೆ. ಮೈಮೇಲೆ ಬಿಸಿನೀರು ಬಿದ್ದ ಕಾರಣ ಇವರ ಮಗುವು ಮೃತಪಟ್ಟ ದಾರುಣ ಘಟನೆ ನಿನ್ನೆ ತಡರಾತ್ರಿ ನಡೆದಿದೆ. ಮಗುವಿನ ಸಾವಿನಿಂದ ಪರಿತಪಿಸುತಿದ್ದ  ನಡುವೆಯೇ ಸಹಾಯವಾಣಿಯಿಂದ ರೋಗಿಯೊಬ್ಬರಿಗೆ ಆಸ್ಪತ್ರೆಗೆ ಸಾಗಿಸುವಂತೆ ಕರೆ ಬಂದಿದೆ.   

ಜಾತಿ ಧರ್ಮ ಎಂದು ಗುದ್ದಾಡುತ್ತಿರುವಾಗ ಒರ್ವ ಚಾಲಕ ತನ್ನ ಒಡಲ ಉರಿ ಲೆಕ್ಕಿಸದೆ, ಇತರ ಪ್ರಾಣ ಉಳಿಸಲು ಹೋರಾಡಿದ ಈ ಚಾಲಕನಿಂದ, ದೊಡ್ಡವರು, ಚಾಣಾಕ್ಷರು, ಪಾಂಡಿತ್ಯ ಉಳ್ಳವರು ಕಲಿಯುವುದು ಬಹಳಷ್ಟಿದೆ.

ಮೂಡ್ಲಕಟ್ಟೆ ಎಂಐಟಿ- ಮೈಕ್ರೋಸಾಫ್ಟ್ ಟ್ರೈನಿಂಗ್ ಪಾರ್ಟ್ನರ್ ಜೊತೆ ಒಪ್ಪಂದ

JANANUDI.COM NETWORK


ಕುಂದಾಪುರ, ಜೂ.15: ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜು  ಮತ್ತು ಪ್ರಸಿದ್ದ ಮೈಕ್ರೋಸಾಫ್ಟ್ ನ ಟ್ರೈನಿಂಗ್ ಪಾರ್ಟ್ನರ್ ಕಂಪನಿಯು ಒಂದು ಮಹತ್ವದ ಒಪ್ಪಂದಕ್ಕೆ ಸಹಿ ಮಾಡುವ ಮೂಲಕ ತನ್ನ ಬೆಳವಣಗೆಯ ಚಟುವಟಿಕೆಗೆ ಸಾಕ್ಷಿಯಾಯ್ತು.  ಈ ಒಪ್ಪಂದದಿಂದ ವಿದ್ಯಾರ್ಥಿಗಳು ಉನ್ನತ ಶ್ರೇಣಿಯ ಮತ್ತು ಹೊಸ ತಂತ್ರಜ್ಞಾನ ಭರಿತ ಕೋರ್ಸ್ ಗಳನ್ನು ಕಲಿತು, ವಿಶ್ವದ ಪ್ರಸಿದ್ಧ ಸಾಫ್ಟ್ವೇರ್ ಕಂಪೆನಿಯಾದ ಮೈಕ್ರೋಸಾಫ್ಟ್ ನಿಂದ ಪ್ರಮಾಣಪತ್ರ ಪಡೆಯುವ ಅವಕಾಶವಿರುತ್ತದೆ.      

ವಿದ್ಯಾರ್ಥಿಗಳು ಅಂಕಗಳಿಗೆ ಮಾತ್ರ ಸೀಮಿತರಾಗದೆ, ಉದ್ಯೋಗವಕಾಶಕ್ಕೆ ಮುಖ್ಯವಾಗಿರುವ, ಜ್ಞಾನವನ್ನ ವೃದ್ಧಿಗೊಳಿಸುವ ಚಟುವಟಿಕೆಗಲ್ಲಿ ಒಳಗೊಂಡು ಅಧ್ಯಯನ ಮಾಡುವ ಉದ್ದೇಶದಿಂದ ಈ ಒಪ್ಪಂದ ಬಹಳ ಪ್ರಮುಖ ಪಾತ್ರ ವಹಿಸಿದೆ ಎಂದು ಕಾಲೇಜಿನ ಪ್ರಾಂಶುಪಾಲರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಕಂಪನಿಯ ವತಿಯಿಂದ ಶ್ರೀ ಸಂದೀಪ್ ಜಿಯಾನ್ ಜತೇನಿ ಸಹಿ ಮಾಡಿದರು. ಕಾಲೇಜು ವತಿಯಿಂದ ಪ್ರಾಂಶುಪಾಲ ಡಾ. ಚಂದ್ರರಾವ್ ಮದಾನೆ ಸಹಿ ಮಾಡಿದರು.            

ಕಾಲೇಜಿನಲ್ಲಿ ಬಹಳ ವೇಗದಲ್ಲಿ ಆಗುತ್ತಿರುವ ಬೆಳವಣಿಗೆ, ಮತ್ತು ಇದಕ್ಕೆ ಅನುಗುಣವಾಗಿ ಈ ವರ್ಷದಲ್ಲಿ ಕ್ಯಾಂಪಸ್ ಸಂದರ್ಶನದ ಮೂಲಕ ವಿದ್ಯಾರ್ಥಿಗಗೆ ದೊರಕಿದ ಉದ್ಯೋಗವಕಾಶಕ್ಕೆ ಕಾಲೇಜಿನ ಅಧ್ಯಕ್ಷ ಶ್ರೀ ಸಿದ್ದಾರ್ಥ ಜೆ ಶೆಟ್ಟಿ ಸಂತೋಷ ವ್ಯಕ್ತಪಡಿಸುತ್ತ, ಎಲ್ಲಾ ಸಿಬ್ಬಂದಿವರ್ಗ ಮತ್ತು ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದರು

ಶ್ರೀನಿವಾಸಪುರ: ಅಂಗಡಿ ಮುಚ್ಚಿರುವುದರಿಂದ ಆರ್ಯ ವೈಶ್ಯ ಜನಾಂಗದ ಜೀವನ ದುಸ್ತರವಾಗಿದೆ;ಎಸ್.ಆರ್.ಅಮರನಾಥ್

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಅಂಗಡಿ ಮುಚ್ಚಿರುವುದರಿಂದ ಆರ್ಯ ವೈಶ್ಯ ಜನಾಂಗದ ಜೀವನ ದುಸ್ತರವಾಗಿದೆ. ಸಣ್ಣ ಪುಟ್ಟ ವ್ಯಾಪಾರ ಮಾಡುತ್ತಿದ್ದವರಿಗಂತೂ ಸಂಕಷ್ಟ ಎದುರಾಗಿದೆ ಎಂದು ಮುಖಂಡ ಎಸ್.ಆರ್.ಅಮರನಾಥ್ ಹೇಳಿದರು.
ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಸೋಮವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ದಾನಿಗಳಾದ ಎಂ.ಎಸ್.ಶಾಂತಮ್ಮ , ಎನ್.ಎಸ್.ಲಕ್ಷ್ಮೀಪತಿ ಶೆಟ್ಟಿ ಅವರು ಆರ್ಯ ವೈಶ್ಯ ಜನಾಂಗದ ಬಡವರಿಗೆ ನೀಡಿದ ದಿನಸಿ ಕಿಟ್ ವಿತರಿಸಿ ಮಾತನಾಡಿದ ಅವರು, ಈ ದಂಪತಿಗಳು ಸಂಕಷ್ಟದ ಸಂದರ್ಭದಲ್ಲಿ ಬಡವರ ನೆರವಿಗೆ ಬಂದಿರುವುದು ಸ್ತುತ್ಯಾರ್ಹ ಸಂಗತಿಯಾಗಿದೆ ಎಂದು ಹೇಳಿದರು.
ದಾನಿ ಎನ್.ಎಸ್.ಲಕ್ಷ್ಮೀಪತಿ ಶೆಟ್ಟಿ ಮಾತನಾಡಿ, ಕಷ್ಟದಲ್ಲಿರುವ ವ್ಯಕ್ತಿಗೆ ನೆರವಾಗುವುದು ಮಾನವ ಧರ್ಮ. ಅದರಲ್ಲೂ ಹಸಿದವರಿಗೆ ಅನ್ನ ಹಾಕುವುದು ಪುಣ್ಯದ ಕೆಲಸ. ಹಾಗಂತಲೇ ಪಟ್ಟಣದ 35 ಕುಟುಂಬಗಳಿಗೆ ತಲಾ ರೂ.5 ಸಾವಿರ ಮೌಲ್ಯದ ದಿನಸಿ ಕಿಟ್ ವಿತರಿಸಲಾಗಿದೆ ಎಂದು ಹೇಳಿದರು.
ಮುಖಂಡರಾದ ಎಸ್.ಜಿ.ಆದೆಪ್ಪಯ್ಯ ಶೆಟ್ಟಿ, ಎಸ್.ಸಿ.ಅಮರನಾಥ್ ಇದ್ದರು.