HOLY ROSARY CHURCH, KUNDAPUR – 450 th JUBILEE SOUVENIR 2021

ಮೋಗ್, ಸಮಾಧಾನೆಚೊ ಸ್ವಾಸ್.. ನಾಂತ್ ಕೊಣಿಂ: ಜೊಸೇಫ್ ಲುವಿಸಾಚಿಂ ಸಾತ್ ಕವಿತಾಂ

ನಾಂತ್ ಕೊಣಿಂ

ಮ್ಹುಜ್ಯಾ‌ ಕಡೆನ್
ಜಾಯಿತ್ತೆಂ ಆಸಾ
ಮ್ಹುಣ್ತಾಲೊ ತುಂ
ಆಜ್ ತುಜಿ…..
ಪರಿಸ್ಥಿತಿ ಕಸಲಿ ಜಾಲಾ ?

ಪೈಶೆ ಯೇಟ್ಲ್ಯಾರ್ ಗಿ
ಜಿವಾಚೊ ಸ್ವಾಸ್ ಮೆಳಾನಾಂ
ತುಜೊ ಜೀವ್ ತೊ
ಗೆಲೊ ತರ್….
ಲಾಗಿಂ ಕೊಣ್ಣಿಂ ಯೆನಾ
ನಾಂ ತುಕಾ….
ನ್ಹಾಣ್ ಬರೆಂ ನೆಸಾಣ್
ನಾಂ ತುಜ್ಯಾ …
ಪೆಟ್ಯೆಕ್ ಫುಲಾಂ
ನಾಂತ್ ಘಾಂಟಿಂಚೊ ಆವಾಜ್
ನಾಂ ತುಜ್ಯಾ…..
ಅಂತಿಮ್ ಪಯ್ಣಾಕ್ ಬ್ಯಾಂಡ್
ಚಾ, ಕಾಫಿ

ನಾಂ ತುಜ್ಯಾ
ಪೆಟ್ಯೆ ಭೊಂವ್ತಿಂ
ಸೈರಿಂ ಧರ್ಯಿಂ…..
ಶ್ರಧ್ಧಾಂಜಲಿಂಚಿ ಉತ್ರಾಂ ನಾಂತ್
ಭುಜೈತಾಲಿಂ ಕೊಣಿಂ ನಾಂತ್
ಅತ್ಮ್ಯಾಂಚಾ ಮಿಸಾಕ್ ಕೊಣಿಂ ನಾಂತ್
ಕೇಟ್ರಿಂಗ್ ವಾಲ್ಯಾಂಚೆ
ರುಚಿಕ್ ಜೆವಾಣ್ ನಾಂ
ನಿಮಾಣೆಂ….
ಘರ್ಚಾಂಕ್ ಪೊಟ್ಲುನ್
ಧುಃಖಾಂ ಗಳಯ್ತಾಲಿಂ ನಾಂತ್

ಜಾಯ್ತೆಂ ತುಕಾ ಆಸ್ಲ್ಯಾರ್ ಗೀ…
ಅಂತಿಮ್ ತುಜ್ಯಾ….
ಸಾಸ್ಣಾಂಚಾ ಪಯ್ಣ್ಯಾಂಕ್
ಕಿತೆಂಚ್ ನಾಸ್ತಾಂನಾಂ
ಹ್ಯಾ ಭುಂಯ್ಚ್ಯಾ …..
ಗರ್ಭಾಂತ್ ಲಿಪ್ತೆಂ.

✍️. ಜೊಸೆಫ್ ಲುವಿಸ್ ಸಾಸ್ತಾನ್.

ಸಮಾಧಾನೆಚೊ ಸ್ವಾಸ್

ಉಬ್ತಾತ್ ತಿಂ
ಸುಕ್ಣಿಂ ಸೊವ್ಜಾಂ
ಕಿತೆಂಚ್ ಪರ್ವಾನಾಸ್ತಾಂ
ಕಿತೆಂಚ್ ಉಣೆಂ ನಾಸ್ತಾಂ
ರಚ್ನಾರ್ ತಾಂಕಾಂ ಪೊಸ್ತಾ
ರಾಸ್ ತಿಂ ಘಾಲಿನಾಂತ್
ಪುಂಜೊವ್ನ್ ತಿಂ ದವರಿನಾಂತ್
ಭುಕೇಕ್ ತಾಂಕಾಂ
ಉಣೆಂ ಪೊಡ್ಲೆನಾಂ

ಪೋಟ್ ತುಜೆಂ
ಭೊರ್ಲೆಂ ನಾಂ
ತುಪ್ಯಾನಿಂ ಭೊರ್ಚೆಂ
ರಾವಯ್ಲೆಂ ನಾಂ
ಚಡಿತ್ ಆಸ್ಲೆಂ
ದುಸ್ರ್ಯಾಂಕ್ ವಾಂಟ್ಲೆಂ ನಾಂ
ಹೊರ್ಭೊಸ್ ತುಜೊ
ಸೊಡ್ಲೊನಾಯ್
ತ್ಯಾ ಎಕಾ ದಿಸಾ
ತುಕಾ ಖಾಂವ್ಕ್ ಮೆಳ್ಳೆಂ ನಾಂ
ಸಾಸ್ಣಾಚಾ ತುಜ್ಯಾ
ಪಯ್ಣಾಕ್ ವೆತಾನಾಂ

ಮ್ಹುಜೆಂ ಮ್ಹುಳ್ಳೆಂ
ಸ್ವಾರ್ಥ್ ಬಂಧ್ ಕರ್
ಕಿತೆಂ ಆಸಾ ತೆಂ
ವಾಂಟುಂಕ್ ಕರ್
ಭುಕೆಲ್ಲ್ಯಾಂಚಿ ಭೂಕ್
ಥಾಂಬಾಶಿ ಕರ್
ನಿಮಾಣ್ಯಾ ದಿಸಾ
ಸಮಾಧಾನೆಚೊ ಸ್ವಾಸ್
ಸೊಡುಂಕ್ ಪ್ರಯತ್ನ್ ಕರ್.

✍️ ಜೊಸೆಫ್ ಲುವಿಸ್ ಸಾಸ್ತಾನ್.

ಕಾರ್ಕಳ ಮಂಜರಪಲ್ಕೆಯಲ್ಲಿ ಪೆಟ್ರೋಲ್ ಡೀಸೆಲ್ ಬೆಲೆಯೇರಿಕೆ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

ವರದಿ :  ವಾಲ್ಟರ್ ಮೊಂತೇರೊ, ಬೆಳ್ಮಣ್ಣು

ಕಾರ್ಕಳ, ಜೂ,18: ಬ್ಲಾಕ್ ಕಾಂಗ್ರೆಸ್ ಕಾರ್ಕಳ, ಬೋಳ ಕೆದಿಂಜೆ ಗ್ರಾಮೀಣ ಕಾಂಗ್ರೆಸ್ ಸಮಿತಿ, ಹಾಗೂ ಯುವ ಕಾಂಗ್ರೆಸ್ ವತಿಯಿಂದ ಕೇಂದ್ರ 17-6-2021 ರಂದು ಸರ್ಕಾರದ ಪೆಟ್ರೋಲ್ ಡೀಸೆಲ್ ಬೆಲೆಯೇರಿಕೆ ವಿರುದ್ಧ ಮಂಜರಪಲ್ಕೆಯ ಶ್ರೀ ದೇವಿ ಪೆಟ್ರೋಲ್ ಪಂಪ್ ನ ಎದುರು ಸಾಂಕೇತಿಕ ಪ್ರತಿಭಟನೆ ನಡೆಸಲಾಯಿತು.ಈ ಪ್ರತಿಭಟನೆಯನ್ನುದ್ದೇಶಿಸಿ ಕಾರ್ಕಳ ಬ್ಲಾಕ್ ಕಾಂಗ್ರೆಸ್ ನ ಅಧ್ಯಕ್ಷರಾದ ಸದಾಶಿವ ದೇವಾಡಿಗ, ಬೋಳ ಕೆದಿಂಜೆ ಗ್ರಾಮೀಣ ಸಮಿತಿ ಅಧ್ಯಕ್ಷರಾದ ಅವಿನಾಶ್ ಮಲ್ಲಿ ಸೇವಾದಳದ ಅಧ್ಯಕ್ಷರಾದ ಸುಶಾಂತ್ ಸುಧಾಕರ್ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ದೀಪಕ್ ಕೋಟ್ಯಾನ್ ಕಾರ್ಕಳ ಯುವ ಕಾಂಗ್ರೆಸ್  ಕಾರ್ಯದರ್ಶಿಪ್ರದೀಪ್ ಬೇಲಾಡಿ, ಮಾತನಾಡಿದರು.

ಪ್ರತಿಭಟನಾ ಸಭೆಯಲ್ಲಿ ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ರವಿಶಂಕರ್ ಶೇರಿಗಾರ್ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಪ್ರಭಾಕರ ಬಂಗೇರ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾದ ಯೋಗೀಶ್ ನಯನ್ ಇನ್ನಾ,, ಬೋಳ ಗ್ರಾಮ ಪಂಚಾಯಿತಿ ಸದಸ್ಯರಾದ ಯೋಗೇಶ್ ಮೂಲ್ಯ ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಪ್ರವೀಣ್ ಸಾಲ್ಯಾನ್,ಕಾಂತಾವರ ಕಾಂಗ್ರೆಸ್ ಸ್ಥಾನೀಯ ಸಮಿತಿಯ ಅಧ್ಯಕ್ಷರಾದ ಸಂದೀಪ್ ಅಡ್ಯಂತ್ಯಾಯ, ಸಂತೋಷ್ ದೇವಾಡಿಗ ಬೋಳ ನಿರಂಜನ್ ಕೆದಿಂಜೆ ಯುವ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಅಧ್ಯಕ್ಷ ಪವನ್ ಕುಮಾರ್ ಕಾರ್ಕಳ ಐ.ಟಿ ಸೆಲ್ ಅಧ್ಯಕ್ಷರಾದ ಸತೀಶ್ ಕಾರ್ಕಳ ಮತ್ತು ಬೋಳ ಕೆದಿಂಜೆ  ಗ್ರಾಮೀಣ ಸಮಿತಿಯ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಪಾಲ್ಗೊಂಡಿದ್ದರು.

ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಸುಪ್ರೀತ್ ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು ಬೊಳ ಕೆದಿಂಜೆ ಗ್ರಾಮೀಣ ಸಮಿತಿ ಅಧ್ಯಕ್ಷ ಅವಿನಾಶ್ ನಲ್ಲಿ ಧನ್ಯವಾದವಿತ್ತರು.

ಗುಂಡಮತ್ತ ಗ್ರಾಮದ ಮನೆಯೊಂದರ ಮೇಲೆ ಬುಧವಾರ ದಾಳಿ ನಡೆಸಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಮದ್ಯ ವಶ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಇಲ್ಲಿಗೆ ಸಮೀಪದ ಗುಂಡಮತ್ತ ಗ್ರಾಮದ ಮನೆಯೊಂದರ ಮೇಲೆ ಬುಧವಾರ ದಾಳಿ ನಡೆಸಿದ ಅಬಕಾರಿ ಇಲಾಖೆ ಅಧಿಕಾರಿಗಳು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಮದ್ಯವನ್ನು ವಶಪಡಿಸಿಕೊಂಡು, ಘಟನೆಗೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರನ್ನು ಬಂಧಿಸಿದ್ದಾರೆ.

ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ದೂರನ್ನು ಅನುಸರಿಸಿ, ದಾಳಿ ನಡೆಸಿದ ಅಧಿಕಾರಿಗಳು ಮದ್ಯ ಮಾರಾಟದಲ್ಲಿ ತೊಡಗಿದ್ದ ನಾರಾಯಣಸ್ವಾಮಿ ಎಂಬುವವರನ್ನು ಬಂಧಿಸಿ, ಮನೆಯಲ್ಲಿ ದಾಸ್ತಾನು ಮಾಡಿದ್ದ 42 ಲೀಟರ್ ಮದ್ಯ ಹಾಗೂ 34 ಲೀಟರ್ ಬಿಯರ್ ವಶಪಡಿಸಿಕೊಂಡಿದ್ದಾರೆ.

ನಾರಾಯಣಸ್ವಾಮಿ ವಿರುದ್ಧ ಮೊಕದ್ದಮೆ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

ಅಬಕಾರಿ ನಿರೀಕ್ಷಕ ಬಿ.ಎಸ್.ರೋಹಿತ್, ಉಪ ನಿರೀಕ್ಷಕ ಕೃಷ್ಣಪ್ಪ, ಪೇದೆ ಮಂಜುನಾಥ್, ವಾಹನ ಚಾಲಕ ಮಂಜುನಾಥ್ ದಾಳಿಯಲ್ಲಿ ಭಾಗವಹಿಸಿದ್ದರು.

ಕೋಲಾರ ; ಬೂದಿಕೋಟೆ ಮಾರ್ಕಂಡೇಯ ಡ್ಯಾಮ್‍ನಲ್ಲಿ ಮೀನುಗಾರಿಕೆ ಮತ್ತು ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲಾಗುವುದು :ಸಚಿವ ಎಸ್. ಅಂಗಾರ

ಕೋಲಾರ ; ಬೂದಿಕೋಟೆ ಮಾರ್ಕಂಡೇಯ ಡ್ಯಾಮ್‍ನಲ್ಲಿ ಮೀನುಗಾರಿಕೆ ಮತ್ತು ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ಸಂಬಂಧಪಟ್ಟ ಮೀನುಗಾರಿಕೆ ಮತ್ತು ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರವಾಗಿ ಕಾರ್ಯಗತಗೊಳಿಸಲಾಗುವುದು ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಎಸ್. ಅಂಗಾರ ಅವರು ತಿಳಿಸಿದರು.

ಇಂದು ಬೂದಿಕೋಟೆಯ ಮಾರ್ಕಂಡೇಯ ಡ್ಯಾಮ್ ಮತ್ತು ಮಾಕರ್ಂಡೇಯ ಮೀನು ಮರಿ ಉತ್ಪಾದನಾ ಕೇಂದ್ರಕ್ಕೆ ಭೇಟಿಕೊಟ್ಟು ಪರಿಶೀಲನೆ ನಡೆಸಿ ನಂತರ ಅವರು ಮಾತನಾಡಿ ಶ್ರೀಘ್ರದಲ್ಲೇ ವರುಣನ ಕೃಪೆಯಿಂದ ಹಾಗೂ ಕೆಸಿ ವ್ಯಾಲಿ ನೀರಿನಿಂದ ಮಾಕರ್ಂಡೇಯ ಡ್ಯಾಮನ್ನು ತುಂಬಿಸಲಾಗುವುದು ಎಂದು ತಿಳಿಸಿದರು.

ಮೀನುಮರಿ ಉತ್ಪಾದನೆ ಮತ್ತು ಸಾಕಾಣಿಕೆಗೆ ಹೆಚ್ಚಿನ ಆದ್ಯತೆ ಕೊಡಬೇಕು. ಮೀನುಮರಿ ಉತ್ಪಾದನೆಯಲ್ಲಿ ಕರಾವಳಿ ಮತ್ತು ಒಳನಾಡು ಎಂದು ಎರಡು ವಿಧವಾಗಿ ಉತ್ಪಾದಿಸಲಾಗುತ್ತದೆ. ಒಳನಾಡು ಮೀನುಮರಿ ಉತ್ಪಾದನೆಯಲ್ಲಿ ಯಾವ ತಳಿ ಮೀನುಮರಿಗಳನ್ನು ಉತ್ಪಾದಿಸಬಹುದು ಎಂದು ಅಧಿಕಾರಿಗಳೊಂದಿಗೆ ಚರ್ಚಿಸಿ ಅಭಿವೃದ್ಧಿ ಪಡಿಸುತ್ತೇವೆ ಎಂದು ಅವರು ತಿಳಿಸಿದರು.

ಈ ಭಾಗದಲ್ಲಿ ಕರಾವಳಿ ಮೀನಿನ ಬೇಡಿಕೆ ಹೆಚ್ಚಾಗಿದೆ ಆದ್ದರಿಂದ ಗ್ರಾಹಕರಿಗೆ ಉತ್ತಮ ಗುಣ ಮಟ್ಟದ ಮೀನುಗಳನ್ನು ಮಾರಾಟಮಾಡಲು ಹಾಗೂ ಮೀನುಗಾರರಿಗೆ ಅನುಕೂಲವಾಗುವಂತೆ ಶೀತಲ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲಾಗುತ್ತದೆ ಎಂದು ಸಚಿವರು ತಿಳಿಸಿದರು.

ಕೋಲಾರ ಲೋಕಸಭಾ ಕ್ಷೇತ್ರದ ಸಂಸದರಾದ ಎಸ್.ಮುನಿಸ್ವಾಮಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಎರಡು ಸಾವಿರಕ್ಕೂ ಹೆಚ್ಚಿನ ಕೆರೆಗಳಿವೆ. ಕೆಸಿ ವ್ಯಾಲಿ ನೀರಿನಿಂದ ಅನೇಕ ಕೆರೆಗಳು ತುಂಬಿವೆ. ಮಳೆಯು ಚೆನ್ನಾಗಿ ಆಗುತ್ತಿರುವುದರಿಂದ ಮುಂದಿನ ದಿನಗಳಲ್ಲಿ ರೈತರಿಗೆ, ಜನರಿಗೆ ಹಾಗೂ ಸರ್ಕಾರಕ್ಕೆ ಅನುಕೂಲವಾಗುವಂತೆ ಹೆಚ್ಚಿನ ಮೀನು ಸಾಕಾಣಿಕೆ ಮತ್ತು ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಲು ಸಚಿವರಲ್ಲಿ ಮನವಿ ಮಾಡಿದರು.

ಕರೋನಾ ಸಂದರ್ಭದಲ್ಲಿ ಕೆರೆಗಳಲ್ಲಿ ಮೀನು ಸಾಕಾಣಿಕೆ ಮಾಡಿರುವವರಿಗೆ ಮೀನು ಮಾರಾಟ ಮಾಡಲು ಇನ್ನೂ ಸ್ವಲ್ಪ ದಿನ ಕಾಲಾವಕಾಶ ಮಾಡಿಕೊಡುವಂತೆ ಸಚಿವರಲ್ಲಿ ಮನವಿ ಮಾಡಿದರು.

ಮಾಕರ್ಂಡೇಯ ಡ್ಯಾಮನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸುವುದರಿಂದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಇಲ್ಲಿನ ಗತವೈಭವ ಮರುಕಳಿಸಲಿದೆ. ಎಲ್ಲರೂ ಒಟ್ಟಾಗಿ ಸೇರಿ ಜಿಲ್ಲೆಯ ಎಲ್ಲಾ ಕೆರೆಗಳನ್ನು ಅಭಿವೃದ್ಧಿ ಪಡಿಸಬೇಕು ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಮಹೇಶ್, ಜಿಲ್ಲಾ ಮೀನುಗಾರಿಕೆ ಇಲಾಖೆಯ ನಿರ್ದೇಶಕರಾದ ಡಾ|| ಸಿ.ಎಸ್.ಅನಂತ, ಬೇತಮಂಗಲ ಮೀನುಮರಿ ಉತ್ಪಾದನೆ ಕೇಂದ್ರದ ಸಹಾಯಕ ನಿರ್ದೇಶಕರಾದ ಲಕ್ಷ್ಮಿಕಾಂತ್, ಶ್ರೀನಿವಾಸಪುರದ ಮೀನುಮರಿ ಉತ್ಪಾದನೆ ಕೇಂದ್ರದ ಸಹಾಯಕ ನಿರ್ದೇಶಕರಾದ ಮಾನಯ್ಯ, ಮಾರ್ಕಂಡೇಯ ಮೀನು ಮರಿ ಉತ್ಪಾದನೆ ಕೇಂದ್ರದ ಸಹಾಯಕ ನಿರ್ದೇಶಕರಾದ ಸತೀಶ್ ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಜವರೇಗೌಡ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಪರಿಶಿಷ್ಟಜಾತಿಯವರು ಕೊರೊನಾದಿಂದ ಮೃತಪಟ್ಟರೆ 5 ಲಕ್ಷ ಪರಿಹಾರ, ಆದರೆ ಹಲವು ನಿಂಬಂಧನೆಗಳು !!

JANANUDI.COM NETWORK

ಬೆಂಗಳೂರು ಜೂ, 18 :  ಕೊರೊನಾ ಆರ್ಭಟದಿಂದ ಅದೆಷ್ಟೋ ಜನ ಜೀವ ಕಳೆದುಕೊಂಡು, ದುಖದ ಜೊತೆ ಅವರ ಕುಟುಂಬದವರು ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿ, ಸಂಕಷ್ಟಕ್ಕೆ ಇಡಾಗಿದ್ದಾರೆ.  ಈ ಕಾರಣದಿಂದ ರಾಷ್ಟ್ರೀಯ ಪರಿಶಿಷ್ಟ ಜಾತಿ ಹಣಕಾಸು ಅಭಿವೃದ್ಧಿ ನಿಗಮದಿಂದ ಆರ್ಥಿಕ ಸಹಾಯ ನೀಡಲು ಮುಂದಾಗುತ್ತಿದೆ.

   ಪರಿಶಿಷ್ಟಜಾತಿಯಜನರುಕೊರೊನಾದಿಂದಸಾವಿಗೀಡಾದಲ್ಲಿಅವರಿಗೆ ರಾಷ್ಟ್ರೀಯ ಪರಿಶಿಷ್ಟ ಜಾತಿ ಹಣಕಾಸು ಅಭಿವೃದ್ಧಿ ನಿಗಮ 5 ಲಕ್ಷಗಳವರೆಗೆಪರಿಹಾರನೀಡಲುಮುಂದಾಗಿದೆ. ಪ್ರಥಮ ಹಂತದಲ್ಲಿ 1 ಲಕ್ಷಉಚಿತವಾಗಿದ್ದು, ಇನ್ನುಳಿದನಾಲ್ಕುಲಕ್ಷಅವಧಿಸಾಲವಾಗಿದೆ.ಇದನ್ನುಶೇ. 6 % ಬಡ್ಡಿದರದಲ್ಲಿಮರುಪಾವತಿಮಾಡಬೇಕಿದೆ.

ಈಸೌಲಭ್ಯಪಡೆಯಬೇಕಾದರೆನೀವುಏನುಮಾಡಬೇಕು? ಕೊರೊನಾದಿಂದಸಾವಿಗೀಡಾದವ್ಯಕ್ತಿಯಕುಟುಂಬದವಾರ್ಷಿಕಆದಾಯ 3 ಲಕ್ಷದೊಳಗಿರಬೇಕು. ವಯೋಮಿತಿ 18 ರಿಂದ 60 ವರ್ಷಒಳಗಿನವರಾಗಿರಬೇಕು ಕೋವಿಡ್​ನಿಂದಸಾವಿಗೀಡಾದಪ್ರಮಾಣಪತ್ರವನ್ನುಲಗತ್ತಿಸಬೇಕು ಹೆಚ್ಚಿನಮಾಹಿತಿಗೆನಿಮ್ಮಹತ್ತಿರದಡಾಅಂಬೇಡ್ಕರ್​ಅಭಿವೃದ್ಧಿನಿಗಮವನ್ನುಸಂಪರ್ಕಿಸಬಹುದಾಗಿದೆ.

ಮಗು ಮ್ರತ ಪಟ್ಟಿದ್ದಾನೆ ವೈದ್ಯರು ಘೋಷಿಸಿ, ಅಜ್ಜಿ, ತಾಯಿ, ತಂದೆಯ ಕಾರಣದಿಂದ ಜೀವಂತವಾದನು. ಅಚ್ಚರಿ ಏನಿದು!?

JANANUDI.COM NETWORK

ಹರಿಯಾಣ: ಹರಿಯಾಣದ ಜಜ್ಜಾರ್​ ಜಿಲ್ಲೆಯ ಹಿತೇಶ್​ ಎಂಬುವವರ 7 ವರ್ಷದ ಮಗ ಕುನಾಲ್​ ಶರ್ಮಾನಿಗೆ ಕಳೆದ ತಿಂಗಳು ಟೈಫಾಯಿಡ್​ ಜ್ವರ ಕಾಣಿಸಿಕೊಂಡಿತ್ತು. ತೀವ್ರ ಅಸ್ವಸ್ಥನಾಗಿದ್ದ ಕುನಾಲ್​ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಗನ ಚೇತರಿಕೆಗಾಗಿ ಪಾಲಕರು ಆಸ್ಪತ್ರೆ ಬಾಗಿಲಲ್ಲೇ ಕಾಯುತ್ತಿದ್ದರು, ಆದರೆ ಮೇ 26ರಂದು ಮಗು ಮೃತಪಟ್ಟಿದೆ ಎಂದು ದೆಹಲಿ ವೈದ್ಯರು ಘೋಷಿಸಿ ಕುಟುಂಬಸ್ಥರಿಗೆ ಶವ ಹಸ್ತಾಂತರಿಸಿದ್ದರು.

     ಪಾಲಕರು ಕಣ್ಣೀರು ಹಾಕುತ್ತಲೇ ಸ್ವಗ್ರಾಮಕ್ಕೆ ಮೃತದೇಹ ತಂದು ಅಂತ್ಯಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಂಡಿದ್ದರು. ದೂರದೂರಲ್ಲಿದ್ದ ಕುನಾಲ್​ನ ಅಜ್ಜಿ, ಮೊಮ್ಮಗನ ಅಂತಿಮ ದರ್ಶನ ಪಡೆಯಬೇಕೆಂದು ಹಠ ಹಿಡಿದಿದ್ದರಿಂದ ಅವರ ಬರುವಿಕೆಗಾಗಿ ಎಲ್ಲರೂ ಕಾಯುತ್ತಿದ್ದರು. ಈ ನಡುವೆ ಪವಾಡವೇ ನಡೆದಿದೆ.

ಗ್ರಾಮದಲ್ಲಿ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಯುತ್ತಿದ್ದಂತೆ ಹೆತ್ತಮ್ಮನ ಗೋಳಾಟ ಮುಗಿಲು ಮುಟ್ಟಿತ್ತು. ಕಂದನ ದೇಹಕ್ಕೆ ತಲೆ ಚಚ್ಚಿಕೊಳ್ಳುತ್ತಾ ಕಣ್ಣೀರು ಸುರಿಸುತ್ತಿದ್ದ ತಾಯಿ, ‘ಮಗನೇ ಒಮ್ಮೆ ಕಣ್ಣುಬಿಡಪ್ಪಾ, ನಿನ್ನ ದಮ್ಮಯ್ಯ… ನನ್ನ ಬಿಟ್ಟು ಹೋಗ್ಬೇಡಾ…’ ಎಂದು ಕಂದನ ದೇಹವನ್ನ ಅಲ್ಲಾಡಿಸುತ್ತಾ ಪಾಲಕರು ಕಣ್ಣೀರು ಹಾಕುತ್ತಲೇ ಇದ್ದರು.

   ಕುನಾಲ್​ನ ಅಜ್ಜಿ, ಮೊಮ್ಮಗನ ಅಂತಿಮ ದರ್ಶನ ಪಡೆಯಬೇಕೆಂದು ಹಠ ಹಿಡಿದಿದ್ದರಿಂದರಿಂದ ಅಂತೀಮ ಕ್ರಿಯೆ ನಡೆಯಲು ತಡವಾಯಿತು. ಇತ್ನಮಧ್ಯೆ ಕುನಾಲ್ ತಾಯಿ ಅಳ್ಳುತ್ತಾ ಮಗನ ದೇಹದ ಮೇಲೆ ಬಿದ್ದು ಆಕ್ರಂದಿಸುತ್ತಿದ್ದರು. ಎದ್ದೇಳಪ್ಪಾ… ಕಂದಾ… ಅಮ್ಮನ ಮುಖ ನೋಡೋ… ಎಂದು ಮಗನ ದೇಹನ್ನೆಲ್ಲ ಸವರುತ್ತಾ ಎಳೆದಾಡಿದ್ದು, ಆ ವೇಳೆ ಆತನ ದೇಹದಲ್ಲಿ ಚಲನೆ ಕಂಡು ಬಂತು,

     ಕೂಡಲೇ ತಂದೆ ಹಿತೇಶ್, ಮಗುವಿನ ಮೇಲೆ ಹಾಕಿದ್ದ ಬಟ್ಟೆ ತೆಗೆದು ಬಾಯಿಗೆ ಬಾಯಿ ಇಟ್ಟು ಉಸಿರು ಕೊಟ್ಟರು. ಆಗ ಮಗನ ದೇಹದಲ್ಲಿ ಮತ್ತಷ್ಟು ಮತ್ತಷ್ಟು ಚಲನ ಕಂಡು ಬಂದಿದ್ದು, ಎದೆಯ ಬಡಿತವೂ ಶುರುವಾಯಿತು. ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋದ ಪಾಲಕರು ‘ಡಾಕ್ಟ್ರೇ ಮಗ ಬದುಕಿದ್ದಾನೆ, ದಯೆವಿಟ್ಟು​ ಉಳಿಸಿಕೊಡಿ ಎಂದು ಗೋಳಾಡಿದರು. ಪರೀಕ್ಷಿಸಿದ ವೈದ್ಯರು, ಮಗು ಬದುಕುವ ಸಾಧ್ಯತೆ ಶೇ.15 ಮಾತ್ರ ಎಂದು ಹೇಳಿದರೂ, ಪಾಲಕರು ಚಿಕಿತ್ಸೆ ಕೊಡಲು ಹೇಳಿದ್ದರು.

   ಆ ಬಾಲಕನಿಗೆ 20 ದಿನಗಳ ಕಾಲ ಚಿಕಿತ್ಸೆ ಕೊಟ್ಟಿದ್ದು, ಪವಾಡ ಎಂಬಂತೆ ಮಗು ಸಂಪೂರ್ಣವಾಗಿ ಚೇತರಿಸಿಕೊಂಡಿದೆ. ಜೂ.15 ರಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಮಗು ಮನೆಯಲ್ಲಿ ಆರಾಮಾಗಿದೆ.

ಶಾರ್ಜಾದಲ್ಲಿ ಕಟ್ಟಡದ ಕೆಳಗೆ ಭಾರತೀಯನ ಶವ ಪತ್ತೆ, ಕಟ್ಟಡದಿಂದ ದೂಡಿ ಹಾಕಿ ಕೊಲೆ ಮಾಡಿರುವ ಶಂಕೆ

JANANUDI.COM NETWORK

ಶಾರ್ಜಾ, ಜೂ18; ಶಾರ್ಜಾ ಅಬು ಶಾಗರಾದಲ್ಲಿ ಜೂನ್ 15 ರಂದು ಮಂಗಳವಾರ ಮಧ್ಯಾಹ್ನ ಭಾರತೀಯ ವ್ಯಕ್ತಿಯೊಬ್ಬ ಕಟ್ಟಡದ ಕೆಳಗೆ ಶವವಾಗಿ ಪತ್ತೆಯಾದ ಘಟನೆಯ ಬಗ್ಗೆ ನಡೆದಿದೆ. ಶಾರ್ಜಾದ  ಪೊಲೀಸರು ತನಿಖೆ ಆರಂಭಿಸಿದ್ದಾರೆ.

    ಇದೇ ವೇಳೆ ಕನಿಷ್ಠ 13 ನೈಜೀರಿಯಾದ ವಲಸಿಗರು ಗಂಭೀರವಾಗಿ ಗಾಯಗೊಂಡಿದ್ದಾರೆ, ಅವರ ನಡುವೆ ಜಗಳ ನಡೆದಿದೆ ಎಂದು ಶಾರ್ಜಾ ಪೊಲೀಸರು ತಿಳಿಸಿದ್ದಾರೆ. ಆ ಕಟ್ಟಡಕ್ಕೆ ಅಗತ್ಯ ಇರುವ ಸೇವೆಗಳನ್ನು ಸಂಪರ್ಕ ಕಡಿತಗೊಳಿಸಿದರೂ, ನೈಜೀರಿಯನ್ನರು ಈ ಕಟ್ಟಡವನ್ನು ಅಕ್ರಮ ಚಟುವಟಿಕೆಗಳಿಗೆ ಬಳಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಭಾರತೀಯ ವ್ಯಕ್ತಿ ಆ ಕಟ್ಟಡದಲ್ಲಿ ಏಕೆ ಇದ್ದ ಎಂಬುದು ಸ್ಪಷ್ಟವಾಗಿಲ್ಲ.

     ಮ್ರತ ಪಟ್ಟವನು ವಿಷ್ಣು ವಿಜಯನ್ ಎಂದು ಗುರುತಿಸಲ್ಪಟ್ಟ 29 ವರ್ಷದ ಈ ವ್ಯಕ್ತಿ ಕಟ್ಟಡದ ಮೂರನೇ ಮಹಡಿಯಿಂದ ಬಿದ್ದಿದ್ದಾನೆ ಎಂದು ಗಲ್ಫ್ ನ್ಯೂಸ್ ವರದಿ ಮಾಡಿದೆ. ಪೊಲೀಸರಿಗೆ. ಮಧ್ಯಾಹ್ನ 2.30 ರ ಸುಮಾರಿಗೆ ನಮಗೆ ಕರೆ ಬಂದಿದ್ದು, ಅವರ ಪ್ರಕಾರ ಬಿದ್ದ ತಕ್ಷಣವೇ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ನಾವು ಕಂಡುಕೊಂಡಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.

    ಬಳಿಕ ಶವಪರೀಕ್ಷೆಗಾಗಿ ದೇಹವನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಭಾರತದ ಪ್ರಜೆಯನ್ನು ಕಟ್ಟಡದಿಂದ ಎಸೆಯಲಾಗಿತ್ತಾ ಎಂಬುದನ್ನು ನಿರ್ಧರಿಸಲು ಪೊಲೀಸರು ತನಿಖೆ ನಡೆಯುತ್ತದೆ. . ಆತ್ಮಹತ್ಯೆ ಬಗ್ಗೆ ಸಹ ತನಿಖೆ ಮಾಡುತ್ತಿದ್ದಾರೆ. ಕಟ್ಟಡದಲ್ಲಿ ಅವರು ಏನು ಮಾಡುತ್ತಿದ್ದರೆಂಬುವುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಶಾರ್ಜಾ ಪೊಲೀಸರು ತಿಳಿಸಿದ್ದಾರೆ.

ತಜ್ಞರ ಸಮಿತಿ ತೀರ್ಮಾನಿಸುವ ತನಕ ದ್ವಿತೀಯ ಪಿಯು ಫಲಿತಾಂಶ ಪ್ರಕಟಿಸಬಾರದು: ರಾಜ್ಯ ಸರ್ಕಾರಕ್ಕೆ ನ್ಯಾಯಲಯ ನಿರ್ದೇಶನ

JANANUDI.COM NETWORK

ಬೆಂಗಳೂರು, ಜೂ.17: ಈ ಸಾಲಿನ ದ್ವಿತೀಯ ಪಿಯು ವಿದ್ಯಾರ್ಥಿಗಳ ಫಲಿತಾಂಶದ ವಿಷಯದಲ್ಲಿ, ಇಂದು ನಡೆದ ಪ್ರಮುಖ ಬೆಳವಣಿಗೆಯಲ್ಲಿ, ಸರ್ಕಾರವು ರಚಿಸಿದ ತಜ್ಞರ ಸಮಿತಿಯು ತನ್ನ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳುವವರೆಗೆ ಈ ಸಾಲಿನ ದ್ವಿತೀಯ ಪಿಯು ವಿದ್ಯಾರ್ಥಿಗಳ ಫಲಿತಾಂಶವನ್ನು ಪ್ರಕಟಿಸದಂತೆ ಕರ್ನಾಟಕ ಹೈಕೋರ್ಟ್ ಗುರುವಾರ ರಾಜ್ಯ ಸರ್ಕಾರಕ್ಕೆ ಆದೇಶ ನೀಡಿದೆ. 

     ನ್ಯಾಯಲಯ ರಿಪೀಟರ್ ಸೇರಿದಂತೆ ಎಲ್ಲಾ ವರ್ಗದ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಈ ಆದೇಶ ಹೊರಡಿಸಿದೆ.

    ನ್ಯಾಯಮೂರ್ತಿ ಬಿ.ವಿ ನಾಗರತ್ನ ಮತ್ತು ನ್ಯಾಯಮೂರ್ತಿ ಹಂಚಾಟೆ ಸಂಜೀವ್ ಕುಮಾರ್ ಅವರ ವಿಭಾಗೀಯ ಪೀಠವು ಸರ್ಕಾರ ಮತ್ತು ಅರ್ಜಿದಾರರ ​​ವಾದಗಳನ್ನು ಆಲಿಸಿದ ಈ ಆದೇಶವನ್ನು ನೀಡಿತು. ಬೆಂಗಳೂರಿನ ವ್ಯವಸ್ಥಾಪಕ ಟ್ರಸ್ಟಿ ಎಸ್‌.ವಿ.ಸಿಂಗ್ರೇ ಗೌಡ ಪ್ರತಿನಿಧಿಸುವ ಜ್ಞಾನ ಮಂದಿರ ಎಜುಕೇಶನ್ ಟ್ರಸ್ಟ್ ಈ ಅರ್ಜಿಯನ್ನು ಸಲ್ಲಿಸಿದೆ.

    ಖಾಸಗಿ ವಿದ್ಯಾರ್ಥಿಗಳನ್ನು ಹೊರತುಪಡಿಸಿ, ರಿಪೀಟರ್ಸ್ ಗಳ ಪ್ರಥಮ ಪಿಯು ಫಲಿತಾಂಶಗಳನ್ನು ಗಣನೆಗೆ ತೆಗೆದುಕೊಳ್ಳಲು ಸಾಧ್ಯವಾಗುವುದರಿಂದ ಫ್ರೆಶರ್‌ಗಳು ಮತ್ತು ರಿಪೀಟರ್‌ಗಳನ್ನು ಒಂದೇ ಪಟ್ಟಿಯಲ್ಲಿ ಹಾಕುವಂತೆ ನ್ಯಾಯಾಲಯ ಮೌಖಿಕವಾಗಿ ಸರ್ಕಾರಕ್ಕೆ ತಿಳಿಸಿತು. ಅವರ ಪ್ರಥಮ ಪಿಯು ಅಂಕಗಳು ಲಭ್ಯವಿಲ್ಲದ ಕಾರಣ ಕೋವಿಡ್ ಪರಿಸ್ಥಿತಿ ಕಡಿಮೆಯಾದ ನಂತರ ಖಾಸಗಿ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ನಡೆಸಬಹುದು ಎಂದು ನ್ಯಾಯಲಯ ಹೇಳಿದೆ.

   ಕೋವಿಡ್ ಸಾಂಕ್ರಾಮಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು 2020-21ರ ಶೈಕ್ಷಣಿಕ ವರ್ಷಕ್ಕೆ ಪರೀಕ್ಷೆಯಿಲ್ಲದೆ ದ್ವಿತೀಯ ಪಿಯು ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸಲು ಸರ್ಕಾರ ತೆಗೆದುಕೊಂಡ ನಿರ್ಧಾರವು ತಾರತಮ್ಯದಿಂದ ಕೂಡಿದೆ ಎಂಬ ಕಾರಣಕ್ಕೆ ಅರ್ಜಿದಾರರು ನ್ಯಾಯಾಲಯಕ್ಕೆ ಮೊರೆ ಹೋಗಿದ್ದರಿಂದ ನ್ಯಾಯಾಲಯವು ಸರ್ಕಾರದಿಂದ ಪ್ರತಿಕ್ರಿಯೆ ಕೋರಿದೆ.

     ಈ ಸಮಸ್ಯೆಯನ್ನು ತೀರ್ಮಾನಿಸಲು ಮತ್ತು ಶಿಫಾರಸುಗಳನ್ನು ಸಲ್ಲಿಸಲು ರಾಜ್ಯ ಸರ್ಕಾರವು 12 ತಜ್ಞರ ಸಮಿತಿಯನ್ನು ರಚಿಸಿದೆ ಎಂದು ಸರ್ಕಾರದ ವಕೀಲರು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು. ಅಲ್ಲಿಯವರೆಗೆ, ಫಲಿತಾಂಶವನ್ನು ಮುಂದೂಡಬಹುದು, ವಕೀಲರು ನ್ಯಾಯಾಲಯಕ್ಕೆ ಪ್ರಾರ್ಥಿಸಿದರು. ಹಾಗೇ ವಕೀಲರು ಫ್ರೆಶರ್‌ಗಳು, ರಿಪೀಟರ್‌ಗಳು ಮತ್ತು ಖಾಸಗಿ ಅಭ್ಯರ್ಥಿಗಳು ಸೇರಿದಂತೆ ವಿವಿಧ ವರ್ಗಗಳ ವಿದ್ಯಾರ್ಥಿಗಳ ಅಂಕಿ ಅಂಶಗಳನ್ನು ನ್ಯಾಯಾಲಯಕ್ಕೆ ವಿವರ ನೀಡಿದರು

     ಇತನ್ಮಧ್ಯೆ, ಅರ್ಜಿದಾರರ ಪರ ವಕೀಲರು ಈ ನ್ಯಾಯಾಲಯವನ್ನು ಸಂಪರ್ಕಿಸಿ ಮೊದಲ ಪಿಯು ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಮತ್ತು ಮೊದಲ ಪಿಯು ಪರೀಕ್ಷೆಗಳಲ್ಲಿ ಉತ್ತೀರ್ಣರಾಗದ ಖಾಸಗಿ ಅಭ್ಯರ್ಥಿಗಳಿಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಿರುವುದಾಗಿ ಹೇಳಿದ್ದಾರೆ. 

    ಎಲ್ಲಾ ವಾದಗಳನ್ನು ಆಲಿಸಿದ ನಂತರ, ನ್ಯಾಯಾಲಯವು ಎಲ್ಲಾ ವರ್ಗದ ವಿದ್ಯಾರ್ಥಿಗಳ ಹಿತಾಸಕ್ತಿಗಳನ್ನು ಸರಿತೂಗಿಸಿ ಸಮಗ್ರ ನಿರ್ಧಾರ ತೆಗೆದುಕೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತು. ಸಮಗ್ರ ನಿರ್ಧಾರ ಬಾಕಿ ಇರುವಾಗ, ರಾಜ್ಯವು ಫ್ರೆಶರ್‌ಗಳ ಫಲಿತಾಂಶವನ್ನು ಪ್ರಕಟಿಸಬಾರದು ಎಂದು ನ್ಯಾಯಾಲಯವು ಹೇಳಿದೆ.

    ಮುಂದಿನ ವಿಚಾರಣೆಯನ್ನು ಜುಲೈ 5 ಕ್ಕೆ ನ್ಯಾಯಲಯ ಮುಂದೂಡಿದೆ.

ಜೂನ್ 21 ಅನ್ಲಾಕ್ 2 ಮಾಡಬಹುದು; ಸರ್ಕಾರಕ್ಕೆ ತಾಂತ್ರಿಕ ಸಲಹಾ ಸಮಿತಿ

JANANNUDI.COM NETWORK

ಬೆಂಗಳೂರು,ಜೂ 17: ರಾಜ್ಯದಲ್ಲಿ ಕೊರೋನಾ ಸೋಂಕು ಕಡಿಮೆಯಾಗುತಿದ್ದು, ಹಾಗಾಗಿ ಕೆಲ ಆರ್ಥಿಕ ಚಟುವಟಿಕೆಗಳನ್ನು ಆರಂಭಿಸಬಹುದು. ತಾಂತ್ರಿಕ ಸಲಹಾ ಸಮಿತಿ ಸಲಹೆ ನೀಡಿದೆ.

     ಆ ಪ್ರಕಾರ ಮಾಲ್, ರೆಸ್ಟೋರೆಂಟ್, ಮದುವೆ ಮಂಟಪಗಳು, ಶಾಪಿಂಗ್ ಕಾಂಪ್ಲೆಕ್ಸ್’ನ್ನು ಜೂನ್ 21 ರಿಂದ ಪುನರಾರಂಭಿಸಬಹುದು. ನಿಯಂತ್ರಿತ ಸಂಖ್ಯೆಯ ಜನರು ಸೇರುವಂತೆ ನೋಡಿಕೊಳ್ಳಬೇಕು ಎಂದು ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಹೇಳಿದೆ

      ಈ ಕುರಿತು ತಾಂತ್ರಿಕ ಸಲಹಾ ಸಮಿತಿ ಸಭೆ ನಡೆಸಿದ್ದು, ಸಭೆಯಲ್ಲಿ ಅನ್’ಲಾಕ್ 2 ಹಂತದಲ್ಲಿ ರೆಸ್ಟೋರೆಂಟ್, ಮಾಲ್, ಕಟಿಂಗ್ ಶಾಪ್, ಸಲೂನ್, ಸ್ಪಾ, ಮದುವೆ ಮಂಟಪಗಳನ್ನು ತೆರೆಯಬಹುದು. ಆದರೆ, ಶೇ.50ರಷ್ಟು ಜನರು ಸೇರುವಂತೆ ಸೂಚಿಸಬೇಕು. ಅಲ್ಲದೆ, ಅನ್ಲಾಕ್ 2.0 ಮತ್ತು 3.0 ರ ನಡುವೆ ಎರಡು ವಾರಗಳ ಅಂತರ ಇರುವಂತೆಯೂ ಸೂಚಿಸಿದೆ. ಈ ಪ್ರದೇಶಗಳಲ್ಲಿ ಹೆಚ್ಚೆಚ್ಚು ಜನರು ಸೇರುವುದರಿಂದ ಸೋಂಕು ಹೆಚ್ಚಾಗಿ ಹರಡಲಿದ್ದು, ಎಚ್ಚರ ವಹಿಸ ಬೇಕು, ಅನ್ಲಾಕ್ ಎರಡರ ನಡುವೆ  ಅನ್ಲಾಕ್ 3.0 ರ ನಡುವೆ, 2 ವಾರಗಳ ಅಂತರ ಇರಬೇಕೆಂದು ಸರ್ಕಾರಕ್ಕೆ ಸಲಹೆ ನೀಡಿದೆ ಅನ್ಲಾಕ್ 3.0 ಗೂ ಮೊದಲೂ ಆಕ್ಸಿಜನ್ ಹಾಸಿಗೆಗಳು ಶೇ.60ಕ್ಕಿಂತಲೂ ಕಡಿಮೆ ಇರುವ ಜಿಲ್ಲೆಗಳನ್ನು ಪರಿಶೀಲನೆ ನಡೆಸಬೇಕೆಂದು ತಿಳಿಸಿದೆ. 

     ಜೂನ್ ಅಂತ್ಯದವರೆಗೂ ನೈಟ್ ಕರ್ಫ್ಯೂ ಮುಂದುವರೆಸಬೇಕು. ಸಾರ್ವಜನಿಕ ರ್ಯಾಲಿ, ಧರಣಿ, ಜಾತ್ರೆ ಹಾಗೂ ಹಬ್ಬಗಳ ಮೇಲೆ ನಿರ್ಬಂಧ ಹೇರಬೇಕು. ಜೂನ್ 21ರಿಂದ 2ನೇ ಹಂತದ ಅನ್’ಲಾಕ್ ಆರಂಭವಾಗಲಿದ್ದು, ಜೂನ್ 5 ರಿಂದ ಮೂರನೇ ಹಂತದ ಅನ್’ಲಾಕ್ ಆರಂಭವಾಗಲಿದೆ. ಪರಿಸ್ಥಿತಿಗೆ ಅನುಸರಿಸಿ ಜನರ ಓಡಾಟಕ್ಕೆ ಅವಕಾಶ ನೀಡಬೇಕು. ಅನ್’ಲಾಕ್ 3ನೇ ಹಂತದಲ್ಲಿ ಜಿಮ್, ಯೋಗಾ ಕೇಂದ್ರ, ಧಾರ್ಮಿಕ ಕೇಂದ್ರಗಳು, ಚಿತ್ರಮಂದಿರಗಳು, ಸ್ಫೋರ್ಟ್ಸ್ ಕ್ಲಬ್, ಕ್ಲಬ್ ಹೌಸ್, ಸಾರ್ವಜನಿಕ ಶೌಚಾಲಯ ಆರಂಭಿಸಬೇಕು. ನೈಟ್ ಕರ್ಫ್ಯೂ, ಶಾಲಾ ಕಾಲೇಜುಗಳು ಪುನರಾರಂಭ ಕುರಿತು ಪ್ರತ್ಯೇಕವಾಗಿ ನಿರ್ಧಾರ ಕೈಗೊಳ್ಳುವಂತೆ ತಿಳಿಸಿದೆ.