HOLY ROSARY CHURCH, KUNDAPUR – 450 th JUBILEE SOUVENIR 2021

ಕೋಲಾರ ಜಿಲ್ಲೆಯ 44 ಪ್ರಾಥಮಿಕ ಶಾಲೆಗಳಲ್ಲಿ ಆಂಗ್ಲ ಮಾಧ್ಯಮಕ್ಕೆ ದಾಖಲು ಆರಂಭ ; ಸಿ.ಆರ್. ಅಶೋಕ್

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ ಜೂ.25 : ಸ್ಪರ್ಧಾತ್ಮಕ ಯುಗದಲ್ಲಿ ಆಂಗ್ಲ ಭಾಷೆಯ ಅನಿವಾರ್ಯತೆ ಇದ್ದು, ಬಡ ಕುಟುಂಬದ ಪ್ರತಿಯೊಬ್ಬ ಮಕ್ಕಳಿಗೂ ಗುಣಾತ್ಮಕ ಶಿಕ್ಷಣ ಒದಗಿಸುವ ಉದ್ದೇಶದಿಂದ ಜಿಲ್ಲೆಯಲ್ಲಿನ 44 ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ವಿಭಾಗ ತೆರೆಯಲಾಗಿದ್ದು, ಈ ಮೂಲಕ ಒಂದನೇ ತರಗತಿಗೆ ದಾಖಲಾತಿ ಆರಂಭವಾಗಿದೆ ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಣಾಧಿಕಾರಿ ಸಿ.ಆರ್. ಅಶೋಕ್ ತಿಳಿಸಿದರು.
ತಾಲ್ಲೂಕಿನ ಹರಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿಂದು ಏರ್ಪಡಿಸಿದ್ದ ಒಂದನೇ ತರಗತಿಗೆ ಆಂಗ್ಲ ಮಾಧ್ಯಮ ಆರಂಭ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಸರ್ಕಾರಿ ಶಾಲೆಗಳಲ್ಲಿ ಈ ಶೈಕ್ಷಣಿಕ ವರ್ಷದಿಂದಲೇ ಆಂಗ್ಲ ಮಾದ್ಯಮ ಆರಂಭವಾಗುತ್ತಿರುವುದರಿಂದ ಪಾಲಕರಲ್ಲಿ ಜಾಗೃತಿ ಉಂಟು ಮಾಡಬೇಕಾಗಿದೆ. ಆಗ ಮಾತ್ರ ನಿರೀಕ್ಷೆಗೂ ಮೀರಿ ದಾಖಲಾತಿ ಆಗುವ ಸಾದ್ಯತೆ ಇದ್ದು, ಶಾಲೆಗಳಲ್ಲಿ ದೊರೆಯುವ ಸೌಲಭ್ಯ ಶಿಕ್ಷಣದ ಗುಣಮಟ್ಟ ಸೇರಿ ವಿಶೇಷತೆಗಳ ಬಗ್ಗೆ ಪೋಷಕರಲ್ಲಿ ಮನೆ ಮನೆ ಭೇಟಿ, ಜಾಥಾ ಮುಖಾಂತರ ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕಾಗಿದ್ದು, ಇದಕ್ಕೆ ಎಲ್ಲರ ಸಹಕಾರ ಬೇಕಾಗಿದೆ ಎಂದರು.
ಸರ್ಕಾರಿ ಶಾಲೆಗಳಲ್ಲಿ ಈಗಾಗಲೇ ರೇಡಿಯೋ ತರಗತಿ, ಅನುಭವಿ ಶಿಕ್ಷಕರಿಂದ ಬೋಧನೆ, ಆಕರ್ಷಕ ಶಾಲಾ ವಾತಾವರಣ, ಉಚಿತ ಪಠ್ಯ ಪುಸ್ತಕ ವಿತರಣೆ, ಬೆಳಗಿನ ಕ್ಷೀರ ಭಾಗ್ಯ, ಮಧ್ಯಾಹ್ನ ಬಿಸಿಯೂಟ, ಉಚಿತ ಎರಡು ಜೊತೆ ಸಮವಸ್ತ್ರ, ಶೂ, ಸಾಕ್ಸ್, ವಿದ್ಯಾರ್ಥಿ ವೇತನ ಸೇರಿದಂತೆ ಇಂಗ್ಲೀಷ್ ಮಾದ್ಯಮ ಆರಂಭಿಸುತ್ತಿರುವುದು ಸಂತಸದ ವಿಷಯವಾಗಿದ್ದು, ಪೋಷಕರು ಈ ಬಗ್ಗೆ ಚಿಂತನ ಮಂಥನ ನಡೆಸಿ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಿಸಬೇಕು ಎಂದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನರೇಂದ್ರ ಬಾಬು ಮಾತನಾಡಿ ಶಿಕ್ಷಣ ಇಲಾಖೆಯ ಈ ಮಹತ್ವದ ನಿರ್ಧಾರ ಸ್ವಾಗತಾರ್ಹವಾಗಿದ್ದು, ಪೋಷಕರು ಈ ಬಗ್ಗೆ ಜಾಗೃತಿ ಹೊಂದಬೇಕಾಗಿದ್ದು, ತಮ್ಮ ಮನೆಯಲ್ಲಿನ ವಿದ್ಯಾರ್ಥಿಗಳನ್ನು ಸರ್ಕಾರ ನೀಡುವ ಎಲ್ಲಾ ಸೌಲಭ್ಯಗಳನ್ನು ಪಡೆಯಲು ಇದರೊಂದಿಗೆ ಇಂಗ್ಲೀಷ್ ಭಾಷೆಯನ್ನು ಕಲಿಯಲು ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುವಂತಾಗಬೇಕು ಎಂದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಡಿ.ನಾಗರಾಜ್ ಮಾತನಾಡಿ ಗ್ರಾಮ ಪಂಚಾಯಿತಿ ಕೇಂದ್ರದ ಸರ್ಕಾರಿ ಹಿರಿಯ ಮತ್ತು ಪ್ರೌಢ ಶಾಲೆಗಳ ಸಮಗ್ರ ಅಭಿವೃದ್ಧಿಗೆ ಈಗಾಗಲೇ ಸರ್ಕಾರ ಸೂಚನೆಯಂತೆ ಆಯಾ ಮುಖ್ಯೋಪಾದ್ಯಾಯರುಗಳು ಕ್ರಿಯಾ ಯೋಜನೆ ತಯಾರು ಮಾಡಿ ನೀಡಬೇಕಾಗಿದೆ. ಈ ದೆಸೆಯಲ್ಲಿ ಶಾಲೆಗಳು ಚಟುವಟಿಕೆ ಆಧಾರಿತ ಆಕರ್ಷಕ ಕೇಂದ್ರಗಳಾಗುತ್ತದೆ ಎಂದು ಆಶಯ ವ್ಯಕ್ತಪಡಿಸಿದರು.
ಮುಖ್ಯೋಪಾದ್ಯಾಯ ಜಿ. ಶ್ರೀನಿವಾಸ್ ಮಾತನಾಡಿ ಪ್ರಾಥಮಿಕ ಒಂದನೇ ತರಗತಿಗೆ ಇಷ್ಟೂ ದಿನಗಳ ಕಾಲ ಕನ್ನಡ ಮಾಧ್ಯಮ ಬೋಧನೆ ಮಾಡುತ್ತಿದ್ದು, ಇದರೊಂದಿಗೆ ಇಂಗ್ಲೀಷ್ ಮಾದ್ಯಮವನ್ನು ವಿದ್ಯಾರ್ಥಿಗಳಿಗೆ ಪರಿಚಯ ಮಾಡುವ ಪ್ರಾಮಾಣಿಕ ಪ್ರಯತ್ನದಲ್ಲಿ ಶಿಕ್ಷಕರು ಉತ್ಸುಕರಾಗಿದ್ದಾರೆ. ಪೋಷಕರು ಸರ್ಕಾರಿ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಮನೆ,ಮನೆ ಭೇಟಿ ಮತ್ತು ಜಾಥಾ ಮೂಲಕ ಗ್ರಾಮದಲ್ಲಿ ಜಾಗೃತಿ ಮೂಡಿಸಿದ ಇದೇ ಸಂದರ್ಭದಲ್ಲಿ ವಿದ್ಯಾರ್ಥಿ ಸಾರಿಕ ಮತ್ತು ಹರ್ಷಿತ್ ರವರುಗಳಿಗೆ ಇಂದು ಆಂಗ್ಲ ಮಾಧ್ಯಮಕ್ಕೆ ದಾಖಲಾತಿ ನೀಡಲಾಯಿತು. ಗ್ರಾಮ ಪಂಚಾಯಿತಿ ಸದಸ್ಯರಾದ ನಾರಾಯಣಸ್ವಾಮಿ, ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಡಿ.ಮಂಜುನಾಥ್, ಮುಖಂಡರಾದ ಸುಬ್ಬಣ್ಣ, ಸಮೂಹ ಸಂಪನ್ಮೂಲ ವ್ಯಕ್ತಿ ಜಿ.ವಿ. ಗಂಗಾಧರ್, ಶಾಲಾ ಸಹ ಶಿಕ್ಷಕರುಗಳಾದ ಪಿ.ಎಂ.ಗೋವಿಂದಪ್ಪ, ಎಂ.ಆರ್.ಮೀನ, ಕೆ.ಸೊಣ್ಣೇಗೌಡ, ಎಂ.ಮುನಿಯಪ್ಪ, ಕೆ.ಮಮತ, ಅಂಗನವಾಡಿ ಸಹಾಯಕಿ ಚೌಡಮ್ಮ ಮತ್ತಿತರರು ಉಪಸ್ಥಿತರಿದ್ದರು.

ವಿಚಾರಣಾಧೀನ ಖೈದಿಗಳಿಗೆ ಕಾನೂನು ಅರಿವು-ನೆರವು ಕಾರ್ಯಕ್ರಮ ಕೋವಿಡ್‍ನಿಂದ ವೀಡಿಯೋ ಕಾನ್ಫರೆನ್ಸ್‍ನಲ್ಲಿ ವಿಚಾರಣೆ-ಡಿ.ಪವನೇಶ್

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ:- ಕೋವಿಡ್ ಸೋಂಕಿನ ಆತಂಕದಲ್ಲೂ ನ್ಯಾಯ ವಿಲೇವಾರಿ ವಿಳಂಬವಾಗದಂತೆ ವೀಡಿಯೋ ಕಾನ್ಫರೆನ್ಸ್ ಮೂಲಕ ಪ್ರಕರಣಗಳ ವಿಚಾರಣೆ ನಡೆಸುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳುವಂತೆ ಒಂದನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಡಿ.ಪವನೇಶ್ ಕರೆ ನೀಡಿದರು.
ಶುಕ್ರವಾರ ನಗರದ ಜಿಲ್ಲಾ ಕಾರಗೃಹದಲ್ಲಿ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಕಾರಾಗೃಹ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ವಿಚಾರಣಾಧೀನ ಖೈದಿಗಳಿಗಾಗಿ ಹಮ್ಮಿಕೊಂಡಿದ್ದ ಕೋವಿಡ್ ಮಾರ್ಗಸೂಚಿಗಳಡಿ ಪಾಲಿಸಬೇಕಾದ ನಿಯಮಗಳ ಕುರಿತ ಕಾನೂನು ಅರಿವು-ನೆರವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಜನಜೀವನ ಅಸ್ಥವ್ಯಸ್ತಗೊಂಡಿದೆ, ಆರ್ಥಿಕತೆಗೂ ಪೆಟ್ಟು ಬಿದ್ದಿದೆ, ನ್ಯಾಯಾಂಗ ವ್ಯವಸ್ಥೆಯ ಕಾರ್ಯಕಲಾಪಗಳಿಗೂ ಅಡ್ಡಿಯಾಗಿದೆ ಎಂದು ತಿಳಿಸಿದರು.
ಆದರೂ ವಿಚಾರಣಾಧೀನ ಖೈದಿಗಳಿಗೆ ನ್ಯಾಯ ವಿಲೇವಾರಿ ವಿಳಂಬವಾಗದಂತೆ ನ್ಯಾಯಾಲಯ ಕ್ರಮವಹಿಸಿದೆ, ಅನೇಕ ಪ್ರಕರಣಗಳನ್ನು ವೀಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಲಾಗಿದೆ ಮತ್ತು ಹಲವು ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಿದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸಿ.ಹೆಚ್.ಗಂಗಾಧರ್ ಮಾತನಾಡಿ, ಕೋವಿಡ್ ಸೋಂಕು ಇಂದು ಸಮಾಜವನ್ನು ತತ್ತರಿಸುವಂತೆ ಮಾಡಿದೆ, ಇದರ ತಡೆಗೆ ಸರ್ಕಾರ ಸೂಚಿಸಿರುವ ಮಾರ್ಗಸೂಚಿ ನಿಯಮಗಳ ಪಾಲನೆ ಕಡ್ಡಾಯವಾಗಿದೆ ಎಂದು ತಿಳಿಸಿದರು.
ಖೈದಿಗಳು ಕಾರಗೃಹದಲ್ಲೂ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ ಎಂದು ಸಲಹೆ ನೀಡಿದ ಅವರು ಸೋಂಕಿನ ಲಕ್ಷಣ ಕಂಡು ಬಂದರೆ ಜೈಲು ಸಿಬ್ಬಂದಿಯ ಗಮನಕ್ಕೆ ತಂದು ಚಿಕಿತ್ಸೆ ಪಡೆದುಕೊಳ್ಳಿ ಎಂದು ಸಲಹೆ ನೀಡಿದರು.
ಕಾನೂನು ಸೇವಾ ಪ್ರಾಧಿಕಾರ ಉಚಿತ ಕಾನೂನು ನೆರವು ನೀಡುತ್ತಿದೆ, ಮಹಿಳೆಯರು,ವಿಕಲಚೇತನರು, ಆರ್ಥಿಕವಾಗಿ ಹಿಂದುಳಿದ ಎಲ್ಲರಿಗೂ ಈ ಸೌಲಭ್ಯವಿದ್ದು, ವಿಚಾರಣಾಧೀನ ಖೈದಿಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ಜಿ.ಶ್ರೀಧರ್, ಕಾನೂನು ಅರಿವು-ನೆರವು ಕಾರ್ಯಕ್ರಮಗಳಿಗೆ ವಕೀಲರ ಸಂಘ ಸಂಪೂರ್ಣ ಸಹಕಾರ ನೀಡಿದೆ, ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ಕಟಿಬದ್ದವಾಗಿದೆ ಎಂದು ತಿಳಿಸಿದರು.
ವಿಚಾರಣಾಧೀಕಣ ಖೈದಿಗಳು ಕಾನೂನಿನ ಅರಿವು ಪಡೆದುಕೊಳ್ಳಿ, ಇದರಿಂದ ಜೀವನದಲ್ಲಿ ತಪ್ಪು ಮಾಡದೇ ಎಚ್ಚರವಹಿಸಬಹುದು, ನಮ್ಮ ಸಂವಿಧಾನ, ಕಾನೂನುಗಳಿಗೆ ಗೌರವ ನೀಡುವ ಹೊಣೆ ಎಲ್ಲರದ್ದೂ ಆಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾರಾಗೃಹ ಇಲಾಖೆ ಅಧೀಕ್ಷಕರಾದಕೆ.ಎನ್.ಮೋಹನ್ ಕುಮಾರ್, ವಿಚಾರಣಾ ಬಂಧಿಗಳ ಹಕ್ಕುಗಳ ಬಗ್ಗೆ ಮಾತನಾಡಿ, ಖೈದಿಗಳಿಗೂ ಕಾನೂನಿನಲ್ಲಿ ಹಕ್ಕುಗಳಿವೆ, ಅಂತಹ ಹಕ್ಕುಗಳನ್ನು ಪಡೆಯಲು ನೀವು ಪ್ರಾಧಿಕಾರದ ನೆರವು ಪಡೆಯಬಹುದು ಎಂದರು.
ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ರಘುಪತಿಗೌಡ, ಈ ದೇಶದಲ್ಲಿ ಹುಟ್ಟಿದ ಪ್ರತಿಯೊಬ್ಬರೂ ಕನಿಷ್ಟ ದೈನಂದಿನ ಬದುಕಿನಲ್ಲಿ ಅಗತ್ಯವಿರುವ ಕಾನೂನುಗಳ ಅರಿವು ಪಡೆದಿರಬೇಕು, ಕಾನೂನಿನ ಜತೆಗೆ ಮಾನವೀಯತೆಯನ್ನು ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಹಿರಿಯ ವಕೀಲ ಕೆ.ಆರ್.ಧನರಾಜ್ ಖೈದಿಗಳಿಗೆ ಶಿಕ್ಷೆಯಲ್ಲಿ ವಿನಾಯತಿ ಕುರಿತು ಮಾತನಾಡಿ, ಅಪರಾಧಗಳಿಂದ ಮುಕ್ತ ಜೀವನ ನಡೆಸಿ, ಮಾಡಿದ ತಪ್ಪು ಒಪ್ಪಿಕೊಂಡರೆ ಶಿಕ್ಷೆಯ ಪ್ರಮಾಣವೂ ಕಡಿಮೆಯಾಗುತ್ತದೆ, ಮತ್ತೆ ನೀವು ಸಮಾಜದಲ್ಲಿ ಉತ್ತಮ ಜೀವನ ನಡೆಸಲು ಸಹಕಾರಿ ಎಂದರು.
ಕಾರ್ಯಕ್ರಮದಲ್ಲಿ ಕಾರಾಗೃಹದಲ್ಲಿನ ಖೈದಿಗಳು ಪಾಲ್ಗೊಂಡು ಅರಿವು ಪಡೆದುಕೊಂಡರು.

ಎಲ್ಲರೂ ಕೋವಿಡ್ ವಿರುದ್ಧ ಸಲಿಕೆ ಹಾಕಿಸಿಕೊಳ್ಳಬೇಕು. ವಿಶೇಷವಾಗಿ ಶಿಕ್ಷಕ ಸಮುದಾಯ : ಡಾ. ವೈ.ಎ.ನಾರಾಯಣಸ್ವಾಮಿ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಎಲ್ಲರೂ ಕೋವಿಡ್ ವಿರುದ್ಧ ಸಲಿಕೆ ಹಾಕಿಸಿಕೊಳ್ಳಬೇಕು. ವಿಶೇಷವಾಗಿ ಶಿಕ್ಷಕ ಸಮುದಾಯ ಕೋವಿಡ್ ಸೋಂಕು ಹರಡದಂತೆ ಅಗತ್ಯ ಎಚ್ಚರಿಕೆ ವಹಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಾ. ವೈ.ಎ.ನಾರಾಯಣಸ್ವಾಮಿ ಹೇಳಿದರು.
ಪಟ್ಟಣದ ಹೊರವಲಯದ ವಿಐಪಿ ಶಾಲೆ ಆವರಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ತಾಲ್ಲೂಕಿನ ಅನುದಾನ ರಹಿತ ಶಾಲಾ ಶಿಕ್ಷಕರು ಹಾಗೂ ಸಿಬ್ಬಂದಿಗೆ ದಿನಸಿ ಕಿಟ್ ವಿತರಿಸಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೈಗೊಂಡ ಸಕಾಲಿಕ ಕ್ರಮಗಳಿಂದಾಗಿ ಕೊರೊನಾ ನಿಯಂತ್ರಣದಲ್ಲಿದೆ. ಕೊರೊನಾ ಕಾಲದಲ್ಲಿ ಸಂಕಷ್ಟಕ್ಕೆ ಒಳಗಾಗಿರುವ ಶಿಕ್ಷಕರಿಗೆ ತಲಾ ರೂ.5 ಸಾವಿರ ಆರ್ಥಿಕ ನೆರವು ನೀಡಲಾಗುತ್ತಿದೆ. ಈ ನೆರವಿನ ಮೊತ್ತ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಿದರು.
ಶಿಕ್ಷಕರು ಸ್ವಾಭಿಮಾನಿಗಳು. ಅವರು ಕೈಯೊಡ್ಡಲು ಮುಂದಾಗುವುದಿಲ್ಲ. ಆದ್ದರಿಂದಲೇ ಸರ್ಕಾರ ಅನುದಾನ ರಹಿತ ಶಿಕ್ಷಕರ ನೆರವಿಗೆ ಧಾವಿಸಿದೆ. ಶಿಕ್ಷಣ ಸಂಸ್ಥೆಗಳು ಎಲ್ಲ ಅರ್ಹ ಶಿಕ್ಷಕರಿಗೂ ನೆರವು ದೊರೆಯುವಂತೆ ನೊಡಿಕೊಳ್ಳಬೇಕು. ಶಿಕ್ಷಣ ಇಲಾಖೆ ಅಧಿಕರಿಗಳು ಈ ಬಗ್ಗೆ ಗಮನ ಹರಿಸಬೇಕು ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ.ಗೌಡ ಮಾತನಾಡಿ, ಸಮಾಜದಲ್ಲಿ ಶಿಕ್ಷಕರ ಪಾತ್ರ ಹಿರಿದು. ರಾಜ್ಯದಲ್ಲಿ 32 ಸಾವಿರ ಖಾಸಗಿ ಶಿಕ್ಷಣ ಸಂಸ್ಥೆಗಳಿವೆ. 3 ಲಕ್ಷ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. 60 ಲಕ್ಷ ಮಕ್ಕಳು ಕಲಿಯುತ್ತಿದ್ದಾರೆ. ಆದರೆ ಲಾಕ್ ಡೌನ್ ಹಾಗೂ ಕೊರೊನಾ ಸಂಕಷ್ಟ ಈ ಸಮುದಾಯವನ್ನು ಕಷ್ಟಕ್ಕೆ ನೂಕಿದೆ ಎಂದು ಹೇಳಿದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಕೆ.ಎನ್.ವೇಣುಗೋಪಾಲ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಕೈಗೊಂಡ ಬಿಗಿ ಕ್ರಮಗಳಿಂದಾಗಿ ಕೋವಿಡ್ ಹಾವಳಿ ಕಡಿಮೆಯಾಗಿದೆ. ರಾಜ್ಯದಲ್ಲಿ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಂಕಷ್ಟಕ್ಕೆ ಸ್ಪಂದಿಸಿ ವಿವಿಧ ಸಮುದಾಯದ ಬಡವರಿಗೆ ಪ್ಯಾಕೇಜ್ ಪ್ರಕಟಿಸಿ ನೆರವಾಗಿದ್ದಾರೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯರಾದ ವೈ.ಎ.ನಾರಾಯಣಸ್ವಾಮಿ, ಚಿದಾನಂದ ಎಂ. ಗೌಡ ಅವರು ಕೊರೊನಾ ಸಂಕಷ್ಟದಕೆ ಸ್ಪಂದಿಸಿ ವಿವಿಧ ನೆರವನ್ನು ನೀಡುತ್ತಿದ್ದಾರೆ. ಈಗ ಶಿಕ್ಷಕರಿಗೆ ದಿನಸಿ ಕಿಟ್ ವಿತರಿಸುವುದರ ಮೂಲಕ ಮಾನವೀಯತೆ ಮೆರೆದಿದ್ದಾರೆ ಎಂದು ಹೇಳಿದರು.
ಮುಖಂಡರಾದ ಎ.ಅಶೋಕ್ ರೆಡ್ಡಿ, ಎಂ.ನಾಗರಾಜ್, ಜಯರಾಮರೆಡ್ಡಿ, ಕೆ.ಕೆ.ಮಂಜು, ಎಸ್.ವಿ.ಮುನಿವೆಂಕಟಪ್ಪ, ಜಿ.ಎನ್.ಗೋವಿಂದರೆಡ್ಡಿ, ರಾಮಕೃಷ್ಣ, ಬಿಇಒ ಉಮಾದೇವಿ, ಸುಬ್ರಮಣಿ, ಕಲಾ ಶಂಕರ್ ಇದ್ದರು
.

ಕೊರೊನಾ ಪರಿಹಾರದ ಹಣವನ್ನು ಸಾಲದ ಕಂತಿಗೆ ಜಮೆ ಮಾಡಿದ್ದ ಕೆನರಾ ಬ್ಯಾಂಕ್: ಜಾಲತಾಣದ ಟೀಕೆಗೆ ಗುರಿಯಾಗಿ ಖಾತೆಗೆ ಮರಳಿಸಿದ ಬ್ಯಾಂಕ್.

JANANUDI.COM NETWORK

ಮಂಗಳೂರು: ಬಡ ಆಟೊ ಚಾಲಕ ಬಶೀರ್ ಗೆ ಕೊವೀಡ್ ಲಾಕ್ ಡೌನ್ ಪರಿಹಾರವೆಂದು ಸರಕಾರ ನೀಡಿರುವ 3 ಸಾವಿರ ರೂ. ಸಹಿತ ಬ್ಯಾಂಕ್ ಖಾತೆಯಲ್ಲಿದ್ದ 2,700ನ್ನೂ ಎಲ್ಲವನ್ನು ಬಶೀರ್ ಮನೆ ಸಾಲದ ಕಂತಿಗಾಗಿ ಕೊರೊನಾ ತೆಗೆದುಕೊಂಡಿದ್ದಕ್ಕೆ ಎನನ್ನು ಪರಿಹಾರ ಕೊಡದೆ, ಮುರಿದುಕೊಂಡಿದೆ, ಬ್ಯಾಂಕ್​ನ ವರ್ತನೆಗೆ ನೆಟ್ಟಿಗರು ಕಟು ಟೀಕೆ ವ್ಯಕ್ತಪಡಿಸಿದ್ದರು. ಈ ಕುರಿತು ದೊಡ್ಡ ಚರ್ಚೆಯನ್ನೇ ಅದು ಹುಟ್ಟುಹಾಕಿತು. ಯೂನಿಯನ್ ಪದಾಧಿಕಾರಿಗಳು ಬಶೀರ್​ಗೆ ಹಾಗೂ ಈ ರೀತಿ ಸಂಕಷ್ಟಕ್ಕೆ ಸಿಲುಕಿದವರಿಗೆ ಪರಿಹಾರದ (ರೀ ಷೆಡ್ಯೂಲ್ ಅವಕಾಶದ) ದಾರಿಗಳನ್ನು ವಿವರಿಸಿದರು. ಇದರಿಂದ ಎಚ್ಚೆತ್ತ ಕೆನರಾ ಬ್ಯಾಂಕ್, ಸರಕಾರದ ಪರಿಹಾರ ಧನ ಮೂರು ಸಾವಿರ ರೂ.ಗಳನ್ನು ಬಶೀರ್ ಖಾತೆಗೆ ಮರಳಿಸಿದೆ

.

ಸುರತ್ಕಲ್ ಸೂರಿಂಜೆ ನಿವಾಸಿಯಾದ ಆಟೋ ಚಾಲಕ ಬಶೀರ್ ಮನೆ ಸಾಲದ ಮೇ ತಿಂಗಳ ಕಂತುನ್ನು ಕಟ್ಟಲು ಲಾಕ್ ಡೌನ್, ಕೊರೊನಾ ಬಿಕ್ಕಟ್ಟಿನಿಂದಾಗಿ ಅಸಾಧ್ಯವಾಗಿತ್ತು. ಸಾಲ ಕೊಟ್ಟ ಕೆನರಾ ಬ್ಯಾಂಕ್ ಬೈಕಂಪಾಡಿ ಬ್ರಾಂಚ್​ನ ಅಧಿಕಾರಿಗಳಲ್ಲಿ 3/4 ತಿಂಗಳು ಕಂತು ಪಾವತಿಗೆ ವಿನಾಯತಿ ಕೇಳಿದ್ದರು. ಅಲ್ಲಿ ಸಕಾರಾತ್ಮಕ ಸ್ಪಂದನೆ ಸಿಗದೆ ಅವರ ಖಾತೆಯಲ್ಲಿದ್ದ 2700 ರೂ. ಹಾಗೂ ಆಟೋ ಚಾಲಕರಿಗೆ ಕೊರೊನಾ ಪರಿಹಾರವಾಗಿ ಸರಕಾರ ನೀಡಿದ 3 ಸಾವಿರ ರೂ‌.ವನ್ನು ಬ್ಯಾಂಕ್ ಸಾಲಕ್ಕೆ ಜಮಾ ಮಾಡಿಕೊಂಡಿತ್ತು.

ಈ ಕುರಿತು ಆಟೋ ಚಾಲಕ ಬಶೀರ್ ಸಾಮಾಜಿಕ ಜಾಲತಾಣದಲ್ಲಿ ಕೆನರಾ ಬ್ಯಾಂಕ್​ ಆಡಳಿತದ ನಡೆಯ ಕುರಿತು ಮಾಹಿತಿ ಬಿಚ್ಚಿಟ್ಟಿದ್ದರು. ಬ್ಯಾಂಕ್​ನ ವರ್ತನೆಗೆ ನೆಟ್ಟಿಗರು ಕಟು ಬೇಸರ ಟೀಕೆಗಳನ್ನು ವ್ಯಕ್ತಪಡಿಸಿದ್ದರು. ಈ ಕುರಿತು ದೊಡ್ಡ ಚರ್ಚೆಯನ್ನೇ ಅದು ಹುಟ್ಟುಹಾಕಿತು. ಯೂನಿಯನ್ ಪದಾಧಿಕಾರಿಗಳು ಬಶೀರ್​ಗೆ ಹಾಗೂ ಈ ರೀತಿ ಸಂಕಷ್ಟಕ್ಕೆ ಸಿಲುಕಿದವರಿಗೆ ಪರಿಹಾರದ (ರೀ ಷೆಡ್ಯೂಲ್ ಅವಕಾಶದ) ದಾರಿಗಳನ್ನು ವಿವರಿಸಿದರು.

ಹೀಗಾಗಿ ಎಚ್ಚೆತ್ತ ಕೆನರಾ ಬ್ಯಾಂಕ್, ಸರಕಾರದ ಪರಿಹಾರ ಧನ ಮೂರು ಸಾವಿರ ರೂ.ಗಳನ್ನು ಬಶೀರ್ ಖಾತೆಗೆ ಮರಳಿಸಿದೆ. ರೀಷೆಡ್ಯೂಲ್ ಆಫರನ್ನೂ ನೀಡಿದೆ. ಈ ಮಾಹಿತಿ ಇಲ್ಲದ ಉಳಿದ ದೊಡ್ಡ ಸಂಖ್ಯೆಯ ಸಾಲಗಾರರಿಗೂ ಇದರ ಲಾಭ ಸಿಕ್ಕಿದೆ. ಸರಕಾರ ಪರಿಹಾರವಾಗಿ ನೀಡಿದ ಮೊತ್ತವನ್ನು ಸಾಲಕ್ಕೆ ಮುರಿಯುವ ಬ್ಯಾಂಕಗಳ ಕೆಟ್ಟ ಅಮಾನುಷ ಕ್ರಮಕ್ಕೂ ಕಡಿವಾಣ ಬೀಳಬೇಕಿದೆ.

ಕೋವಿಡ್ ರೋಗಿಗಳ ಸೇವೆ ಸಲ್ಲಿಸುತ್ತಿರುವ ದಾದಿಯರು ಮಾತೃ ಸ್ವರೂಪಿಗಳು

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ


ಶ್ರೀನಿವಾಸಪುರ:- ಕೊರೋನಾ ರೋಗಿಗಳನ್ನು ಆರೈಕೆ ಮಾಡುವಲ್ಲಿ ದಾದಿಯರ ಪಾತ್ರ ಬಹಳ ದೊಡ್ಡದು ಅವರ ಕಾರ್ಯವನ್ನು ಸಮಾಜ ಗುರುತಿಸಬೇಕಾದ ಅವಶ್ಯಕತೆ ಇದೆ, ಕೋವಿಡ್ ರೋಗಿಗಳು ಬಳಸುವಂತ ವಸ್ತುಗಳನ್ನು ಹೊರ ಹಾಕಿ ಕೋಠಡಿಗಳನ್ನು ಸ್ವಚ್ಚಮಾಡುವಂತ ದಾದಿಯರು ಮಾತೃ ಸ್ವರೂಪಿಗಳು ನಿಷ್ಕಳಂಕರಾಗಿ ರೋಗಿಗಳ ಆರೈಕೆಯಲ್ಲಿ ತೊಡಗುವ ಅವರ ಸೇವೆ ಅನನ್ಯ ಎಂದು ಎಸ್.ಎಸ್.ವಿ.ಎಸ್ ಟ್ರಸ್ಟ್ ಕಾರ್ಯದರ್ಶಿ ಶ್ರೀನಿವಾಸಮೂರ್ತಿ ಹೇಳಿದರು ಅವರು ಮ್ಯಾಂಗೋಸ್ ಹೇವೆನ್ ವ್ಯಾಟ್ಸಾಪ್ ಗ್ರೂಪ್ ಸದಸ್ಯರು ಎಸ್.ಎಸ್.ವಿ.ಎಸ್ ಟ್ರಸ್ಟ್ ಸಹಯೋಗದೊಂದಿಗೆ ಶ್ರೀನಿವಾಸಪುರದ ಸರ್ಕಾರಿ ಆಸ್ಪತ್ರೆಯಲ್ಲಿ “ಡಿ” ಗ್ರೂಪ್ ನೌಕರರಾಗಿ ದುಡಿಯುತ್ತಿರುವ ಸುಮಾರು ಇಪ್ಪತ್ತೇಂಟು ಮಂದಿ ನೌಕರರಿಗೆ ಗೌರವನಗದು ನೀಡಿ ಗೌರವಿಸಿ ಮಾತನಾಡಿದರು.
ಸರ್ಕಾರಿ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಶ್ರೀನಿವಾಸ್ ಮಾತನಾಡಿ ಆಸ್ಪತ್ರೆಯ “ಡಿ” ಗ್ರೂಪ್ ನೌಕರರು ದಾದಿಯರ ಸೇವೆ ಗುರುತಿಸಿ ಅವರನ್ನು ಗೌರವಿಸಿರುವಂತ ಮ್ಯಾಂಗೋಸ್ ಹೇವೆನ್ ವ್ಯಾಟ್ಸಾಪ್ ಗ್ರೂಪ್ ಸದಸ್ಯರ ನಡೆ ನಿಜಕ್ಕೂ ಶ್ಲಾಘನೀಯ ಇದೊಂದು ಮಾದರಿ ತಿರ್ಮಾನ ಎಂದರು.
ಕೋವಿಡ್ ರೋಗಿಗಳಿಗೆ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ಡಾ.ಉಮಾಶಂಕರ್,ಡಾ.ಶ್ರೀನಿವಾಸ್ ಹಾಗು ಶುಶ್ರುಶಾ ಅಧಿಕಾರಿ ಶ್ರಿಮತಿ ಲಿಡಿಯಾ ಅವರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮ್ಯಾಂಗೋ ಫಾರಮರ್ಸ್ ಸಂಸ್ಥೆಯ ಕಾರ್ಯನಿರ್ವಣಾಧಿಕಾರಿ ಶಿವಕುಮಾರ್,ನಿರ್ದೇಶಕ ರಮೇಶಬಾಬು,ಮ್ಯಾಂಗೋಸ್ ಹೇವೆನ್ ವ್ಯಾಟ್ಸಾಪ್ ಗ್ರೂಪ್ ಸದಸ್ಯ ವಾಸವಿರಾಮು,ಕೆ.ವಿ.ಸಿ.ರೆಡ್ಡಿ ಇದ್ದರು
ಸುದ್ದಿಗೆ ಸಂಬಂದಿಸಿದ ಫೋಟೋ 23062021.1 ಅಂಕಣದಲ್ಲಿ ಕಳಿಸಿದೆ

ಮಲೇರಿಯಾ ಸೊಳ್ಳೆಗಳಿಂದ ಹರಡುವ ಸಾಂಕ್ರಾಮಿಕ ರೋಗ,ನಮ್ಮ ಪರಿಸರದ ಸ್ಚಚ್ಚತೆ ಕಾಪಾಡಿಕೊಂಡರೆ, ಆರೋಗ್ಯ ತಂತಾನೆ ವೃದ್ದಿಸುತ್ತದೆ : ಡಾ| ಶಂಕರ್ ಪ್ರಸಾದ್.

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ರಾಯಲ್ಪಾಡು 1 : ಮಲೇರಿಯಾ ಸೊಳ್ಳೆಗಳಿಂದ ಹರಡುವ ಸಾಂಕ್ರಾಮಿಕ ರೋಗವಾಗಿದ್ದು, ನಮ್ಮ ಸುತ್ತಮುತ್ತಲ ಪರಿಸರದಲ್ಲಿ ಸ್ವಚ್ಚತೆಯನ್ನು ಕಾಪಾಡಿಕೊಂಡರೆ ನಮ್ಮ ಆರೋಗ್ಯ ತಂತಾನೆ ವೃದ್ದಿಸುತ್ತದೆ ಎಂದು ಡಾ|| ಶಂಕರ್ ಪ್ರಸಾದ್ ತಿಳಿಸಿದರು.
ರಾಯಲ್ಪಾಡಿನ ಗ್ರಾಮಪಂಚಾಯಿತಿ ಕಚೇರಿಯಲ್ಲಿ ಬುಧವಾರ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಗ್ರಾ.ಪಂ. ಸಂಯುಕ್ತಾಶ್ರಯದಲ್ಲಿ ಮಲೇರಿಯಾ ಮಾಸಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಪಿಡಿಒ ಕೆ.ವಿ.ನರೇಂದ್ರಬಾಬು ಮಾತನಾಡಿ ಮಾನವನ ದಿನ ನಿತ್ಯ ಬಳಕೆಯ ಆಹಾರ ಪದ್ದತಿ ಹಾಗೂ ಆರೋಗ್ಯ ಕಾಳಜಿ ನಿರ್ಲಕ್ಷ್ಯತೆ ಪರಿಣಾಮ ಹಲವಾರು ಸಾಂಕ್ರಾಮಿಕ ರೋಗಗಳು ವ್ಯಾಪಕವಾಗಿ ಹರಡುತ್ತಿದ್ದು, ಆದ್ದರಿಂದ ನಾಗರೀಕರು ಜಾಗೃತಿರಾಗಿ ತಮ್ಮ ತಮ್ಮ ಆರೋಗ್ಯದ ಕಡೆ ಹೆಚ್ಚಿನ ಕಾಳಜಿ ವಹಿಸಬೇಕಾಗಿದೆ ಎಂದರು.
ಗ್ರಾ.ಪಂ. ಅಧ್ಯಕ್ಷರಾದ ಅರುಣವೆಂಕಟ್ ಮಾತನಾಡಿ ಆರೋಗ್ಯ ಇಲಾಖೆ ಹಾಗು ಗ್ರಾ.ಪಂ. ಸಿಬ್ಬಂದಿ ಎಲ್ಲರೂ ಒಗ್ಗೂಡಿ ಸಾಂಕ್ರಮಿಕ ರೋಗಗಳನ್ನು ತಡೆಗಟ್ಟು ಸಲುವಾಗಿ ಗ್ರಾಮಗಳಿಗೆ ಬೇಟಿ ನೀಡಿ ರೋಗಗಳ ಬಗ್ಗೆ ಅರಿವು ನೀಡಬೇಕಾಗಿದೆ ಎಂದರು.
ತಾಲೂಕು ಯುವ ಕಾಂಗ್ರೆಸ್ ಉಪಾಧ್ಯಕ್ಷ ಸಿ.ಎಸ್.ವೆಂಕಟರಮಣಪ್ಪ, ಆರೋಗ್ಯ ಇಲಾಖೆಯ ಸಿಬ್ಬಂದಿಗಳಾದ ವಿಶ್ವನಾಥಚಾರಿ , ಲಲಿತಮ್ಮ, ಪದ್ಮಾವತಿ,ಸುಜಾತ,ಹಾಗು ಆಶಾ ಕಾರ್ಯಕತೇಯರು,ಜಲಗಾರರು , ಅಂಗನವಾಡಿ ಕಾರ್ಯಕರ್ತೆಯರು ಇದ್ದರು.
ಪೋಟು 1 : ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಗ್ರಾ.ಪಂ. ಸಂಯುಕ್ತಾಶ್ರಯದಲ್ಲಿ ಮಲೇರಿಯಾ ಮಾಸಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಅಭಿಯಾನಕ್ಕೆ ಅರುಣವೆಂಕಟ್,ನರೇಂದ್ರಬಾಬು,ಶಂಕರ್ ಪ್ರಸಾದ್ ಚಾಲನೆ ನೀಡಿದರು

ಬೆಂಗಳೂರು ಮಾಜಿ ಲೇಡಿ ಕಾರ್ಪೊರೇಟರಳ ಬರ್ಭರ ಹತ್ಯೆ ಮಾರಕಾಸ್ತ್ರದಿಂದ ದಾಳಿ ಮಾಡಿ ಕೊಲೆ – ಗಂಡನನ್ನು ಕೊಲೆ ಮಾಡಲಾಗಿತ್ತು

JANANUDI.COM NETWORK

ರೇಖಾ ಕದಿರೇಶ್

ಬೆಂಗಳೂರು.ಜೂ.24: ಬೆಂಗಳೂರಿನ ಮಾಜಿ ಲೇಡಿ ಕಾರ್ಪೊರೇಟರ್ ಒಬ್ಬಳನ್ನು ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಬರ್ಬರವಾಗಿ ಹತ್ಯೆ ಹತ್ಯೆ ಮಾಡಲಾದ ದಾರುಣಕರ ಘಟನೆ ನಡೆದಿದೆ.

   ಬೆಂಗಳೂರು ಛಲವಾದಿ ಪಾಳ್ಯದ ಫವರ್ ಗಾರ್ಡನ್  ಬಿಬಿಎಂಪಿ ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಅವರೇ ದುಷ್ಕರ್ಮಿಗಳು ಹತ್ಯೆಯಾದ ನತದ್ರಷ್ಟೆ.  ದುಷ್ಕರ್ಮಿಗಳು ಅವರನ್ನು ಮನೆಯಿಂದ ಹೊರ ಕರೆಸಿಕೊಂಡು ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ.

     ಮನೆಯಲ್ಲಿದ್ದ ರೇಖಾ ಕದಿರೇಶ್ ಅವರನ್ನು ಹೊರ ಬರುವಂತೆ ಕರೆದ ದುಷ್ಕರ್ಮಿಗಳು ಬಳಿಕ ಮಾರಕಾಸ್ತ್ರಗಳಿಂದ ಅವರ ಮೇಲೆ ದಾಳಿ ನಡೆಸಿದದ್ದು, ರಕ್ತದ ಮಡುವಲ್ಲಿ ಬಿದ್ದಿದ್ದ ರೇಖಾ ಅವರನ್ನು ಕೆಂಪೇಗೌಡ ಆಸ್ಪತ್ರೆಗೆ ದಾಖಲಿಸಲಾಗಿಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದಾರೆ.

ಕದಿರೇಶ್

    ಅವರ ಪತಿಯನ್ನು ಕೂಡ ಈ ಹಿಂದೆ ದುಷ್ಕರ್ಮಿಗಳು ಕೊಲೆ ಮಾಡಿದ್ದರು. ಈ ಹಿಂದೆ 2018 ರ ಫೆಬ್ರವರಿ 8 ರಂದು ರೇಖಾ ಪತಿ ಕದಿರೇಶ್ ಅವರನ್ನು ಮುನೇಶ್ವರ ದೇವಸ್ಥಾನದ ಬಳಿ ದುಷ್ಕರ್ಮಿಗಳು ಹತ್ಯೆ ಮಾಡಿದ್ದರು. ಶೋಬನ್ ಗ್ಯಾಂಗ್, ಕದಿರೇಶ್ ಅವರನ್ನು ಕೊಚ್ಚಿ ಕೊಲೆಗೈದಿತ್ತು. ಇದೀಗ ಅದೇ ಗ್ಯಾಂಗ್ ರೇಖಾ ಮೇಲೆ ದಾಳಿ ನಡೆಸಿ ಹತ್ಯೆ ಮಾಡಿರುವ ಶಂಕೆ ವ್ಯಕ್ತಪಡಿಸಲಾಗಿದೆ. ಹಳೇ ದ್ವೇಷದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ ಘಟನಾ ಸ್ಥಳಕ್ಕೆ ಚಿಕ್ಕಪೇಟೆ ಎಸಿಪಿ ಹಾಗೂ ಕಾಟನ್‌ಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

ರೋಶನ್ ಬೆಳ್ಮಣ್ ಇವರನ್ನು ಗುರುವಾಗಿ ಸ್ವೀಕರಿಸಿ, ಮ್ಯಾನ್ ಕ್ಯೆನ್ಡ್ ಟ್ರಸ್ಟ್ ರಚಿಸಿ ಜನಸೇವೆ ಮಾಡಿ ಜನಮೆಚ್ಚುಗೆ ಪಡೆದ ರಾಜು ಆರ್.

ಮನುಷ್ಯನಿಗೆ ಛಲ, ಆತ್ಮ ವಿಶ್ವಾಸ, ಧ್ಯೇಯ, ಇಚ್ಚಾಸಕ್ತಿ ಇದ್ದರೆ ತಮ್ಮ ಗುರಿಯನ್ನು ಸಾಧಿಸಬಹುದು ಎಂಬುದಕ್ಕೆ ಈ ಲೇಖನದ ಪ್ರಧಾನರಾದ ರಾಜು ಎಂಬ ಅಲೆಮಾರೀ ಪಂಗಡದ ಯವಕನಾದ ರಾಜು ಅರ್. ಎಂಬವರ, ಸಾಧನೆ ಯಾಕೆಂದರೆ ರಾಜು ಅವರ  ಜಾತಿ  ದೊಂಬಿದಾಸ ಕುಟುಂಬದ ಮೂಲ ಕಸುಬು  ಊರು ಊರು ಊರು ತಿರುಗಿ ಸ್ಟೇಷನರಿ ವಸ್ತುಗಳಾದ ಸೂಜಿ, ಪೀನ, ಕರೆಮಾಣೆ, ಕರೆಮಾಣಿದಾರ, ಉಡುದಾರ, ಟೇಪ್, ದಬ್ಲ, ರಬ್ಬರ್, ಬಾಚ್ಚಣಿಗೆ ಇತ್ಯಾದಿ ವಸ್ತುಗಳನ್ನು ಮಾರಾಟ ಮಾಡಿ ಜೀವನ ನಡೆಸುವ ಅಲೇಮಾರಿಯ ಬಡ ಕುಟುಂಬ.ಆ ಕುಟುಂಬದಿದಂದ ಬಂದತ್ತ ರಾಜು, ತನ್ನ ಸಮಾಜ ಸೇವೆಯ ಗುಣದಿಂದ, ಮ್ಯಾನ್ ಕ್ಯೆನ್ಡ್ ಟ್ರಸ್ಟ್ ನ್ನು ಹುಟ್ಟು ಹಾಕಿ, ಹಲವು  ಸಾಧನೆಯನ್ನು ಮಾಡಿ ಸಮಾಜದಲ್ಲಿ ಉನ್ನತ ಮಟ್ಟದ ಹೆಸರು ಪಡೆದುಕೊಂಡಿದ್ದಾನೆ. ಅಲ್ಲದೆ ರಾಜು ಇವತ್ತು, ಕರ್ನಾಟಕ ಅಲೆಮಾರಿ ದೊಂಬಿದಾಸ ಯುವಸೇನೆ (ರಿ) ಬೆಂಗಳೂರು.ಇದರ ರಾಜ್ಯಾಧ್ಯಕ್ಷರಾಗಿದ್ದಾರೆ. ಇವರ ಸಾಧನೆಯನ್ನು ಮೆಚ್ಚಿ ಹತ್ತು ಹಲವು ಸಂಘ ಸಂಸ್ಥೆಗಳು ಗೌರವಿಸಿದ್ದಾರೆ ಹಲವು ಪತ್ರಿಕೆ ಮತ್ತು ಮಾಧ್ಯಮದವರು ಇವರ ಪರಿಚಯವನ್ನು ಪರಿಚಯಿಸಿದ್ದಾರೆ. ನಾವು ಕೂಡ ಇವರ ಜನ ಸೇವೆಯನ್ನು ಮೆಚ್ಚಿ  ಇವರದೊಂದು ಕಿರು ಪರಿಚಯ ಮತ್ತು ಅವರು ಮಾಡಿದ ಸಮಾಜ ಸೇವೆಯ ಪರಿಚಯ ನೀಡುತಿದ್ದೇವೆ. – ಬರ್ನಾಡ್ ಡಿಕೋಸ್ತಾ, ಸಂಪಾದಕರು .

       ಅನಾಧಿಕಾಲದಿಂದಲೂ ಪ್ರತಿಯೊಂದು ಧರ್ಮಗಳು ಮಾನವೀಯತೆಗೆ ವಿಶೇಷ ಸ್ಥಾನವನ್ನು ನೀಡುತ್ತಾ ಬಂದಿವೆ, ಕೆಲವರು ಅದರಲ್ಲಿ ವಿಶೇಷ  ಛಾಪು ಮೂಡಿಸುವುದರ ಮೂಲಕ ವಿಭಿನ್ನವಾಗಿ ಜನ ಸೇವೆಯಲ್ಲಿ ತೊಡಗುತ್ತಾರೆ, ಜನಗಳಿಂದ ಆಯ್ಕೆಯಾದ ಜನಪ್ರತಿನಿದಿನಗಳೇ ಜನರ ಕಷ್ಟಗಳಿಗೆ ಸ್ವಂದಿಸಲು 10 ಬಾರಿ ಯೋಚಿಸುವ ಈ ಕಾಲದಲ್ಲಿ, ಕಷ್ಟ ಅಂತ ಬರುವ ನೂರಾರು ಜೀವಗಳಿಗೆ ಆಸರೆಯಾದ ಶಿವಮೊಗ್ಗದ ಯುವಕ ರಾಜು ಆರ್ ರವರು.

    ರಾಜು ಆರ್. ನೋಡಲು ಒರಟು, ಮಾತಿನಲ್ಲಿ ಬಿರುಸು, ಮಾನವೀಯತೆಯಲ್ಲಿ ನಿಜವಾದ ರಾಜ ಎಂಬುದರಲ್ಲಿ ಎರಡು ಮಾತಿಲ್ಲ. ಈ ಲೇಖನದ ಮುಖ್ಯ ಪಾತ್ರದಾರಾಗಿದುವ ರಾಜು ಆರ್. ಹ್ಯೂಮನಿಟಿ ಸಂಸ್ಥೆಯ ಸಂಸ್ಥಾಪಕರಾದ ರೋಷನ್ ಬೆಳ್ಮಣ್  ಇವರ ಶಿಸ್ಯರಾಗಿದ್ದಾರೆ. ರೋಷನ್ ಬೆಳ್ಮಣ್  ಇವರ ಸಾಮಾಜಿಕ ಕಳಕಳಿ, ಅವರ ಕಾರ್ಯ ವೈಖರಿಗೆ ಮನ ಸೋತು ತಾನೂ ಇವರಂತೆ ಸಮಾಜಕ್ಕೆಮಾನವೀಯತೆ ದ್ರಷ್ಠಿಯಿಂದ ಸೇವೆ ನೀಡಬೇಕು,  ಮನಗಂಡು ಮ್ಯಾನ್ ಕ್ಯೆನ್ಡ್ ಟ್ರಸ್ಟ್ ನ್ನು ಹುಟ್ಟು ಹಾಕಿ, ಈ ಸಂಸ್ಥೆಯಿಂದ ಅನೇಕರಿಗೆ ಸಹಾಯ ನೀಡಿದ್ದಾರೆ, ಕೆಲವರ ಮನೆ ಬೆಳಕಾಗಿದ್ದಾರೆ. ಈ ಲೇಖನವು ಮ್ಯಾನ್ ಕ್ಯೆನ್ಡ್ ಟ್ರಸ್ಟ್ ನ್ನು ಹುಟ್ಟು ಹಾಕಿದ ರಾಜು ಅವರ ಕಥೆ. ಇವರ ಜೀವನ ಮಾನವೀಯತೆಯಿಂದ  ಸಮಾಜಕ್ಕೆ ನೆರವಾಗಲು ಆದರ್ಶಪ್ರಾಯ ಎಂಬುದರಲ್ಲಿ ಸಂದೇಹವಿಲ್ಲ.

ಮೂಲತಃ ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೋಕಿನ ಎಸ್ ತಿಮ್ಮನಹಳ್ಳಿ ಗ್ರಾಮದ ಸಣ್ಣರಂಗಪ್ಪ ಮತ್ತು ಮಲ್ಲಮ್ಮರವರ  ಒಂಬತ್ತು ಜನ ಮಕ್ಕಳಲ್ಲಿ ರಾಜು ರವರು ಎಂಟನೆಯವರು, “ರಾಜು ರವರು ಚಿಕ್ಕ ವಯಸ್ಸಿನಲ್ಲಿ ಊರಿನಲ್ಲಿ ಅತಿ ಹೆಚ್ಚು ತರ್ಲೆ ಮಾಡುವ ಹುಡುಗರಲ್ಲಿ ಮೊದಲಿಗರು”  ಎಂದು ಅವರೆ ಹೇಳಿಕೊಳ್ಳುತ್ತಾರೆ. ಇವರು ತಮ್ಮ  ತಂದೆ ತೀರಿಹೋದ ನಂತರ 7 ನೇ ತರಗತಿ ಸ್ಕೂಲ್ ಬಿಟ್ಟು ತಾಯಿಯವರ ಜೊತೆ ಊರೂರು ತಿರುಗಿ ಸೂಜಿ, ಪೀನ, ಕರೆಮಾಣೆ, ಮಾರಾಟ ಮಾಡುತಿದ್ದರು.

        ಆಮೇಲೆ ತಾಯಿಯ ಒತ್ತಾಯಕ್ಕೆ ಮತ್ತೆ ಶಾಲೆಗೆ ಸೇರಿ 7ನೇ ತರಗತಿ ಪಾಸ್ ಮಾಡಿದರು, ನಂತರ ಎಸ್, ಎಸ್, ಎಲ್, ಸಿ ಪಾಸ್ ಮಾಡಿ ಆಮೇಲೆ ಶಿವಮೊಗ್ಗದ ಆಯನೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜ್ ಕಲಿಯುವ ಸಮಯದಲ್ಲಿ ಸಮಾಜಸೇವೆಯ ಬಗ್ಗೆ ಆಸಕ್ತಿ ಬೆಳೆಯಿತು ಅಂತಾ ರಾಜು ಹೇಳುತ್ತಾರೆ. ಅಂದಿನಿಂದಲೂ ರಾಜು ಎಲೆಮಾರೆ ಕಾಯಿಯಂತೆ ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಬಂದಿದ್ದಾರೆ.

     ಗುರಿ ಮತ್ತು ಗುರುಗಳು ಇಲ್ಲದಿದ್ದರೆ ಯಶಸ್ಸು ಕಷ್ಟ ಎನ್ನುತ್ತಾರೆ ರಾಜು, ಸಮಾಜ ಸೇವೆಗೆ ಮುಂದಡಿ ಇಡಲು ಇವರಿಗೆ ಗುರುವಾಗಿ ನಿಂತಿದ್ದು ಬೆಳ್ಮಣ್ ನ ಹ್ಯೂಮನಿಟಿ ಸಂಸ್ಥೆಯ ಸಂಸ್ಥಾಪಕರಾದ ರೋಷನ್ ಬೆಳ್ಮಣ್ ರವರು,ಎಂದು ಸಂತೋಷದಿಂದ ಹೇಳಿಕೊಳ್ಳುತ್ತಾರೆ. ಹಾಗೇ ಗುರಿಗಳಾಗಿ ನಿಂತಿದ್ದು,  ಸರ್ಕಾರಿ ಶಾಲೆಗಳನ್ನು ಉಳಿಸುವುದು, ವಿದ್ಯಾಭ್ಯಾಸದಿಂದ ವಂಚಿತವಾದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವುದು, ವೈದ್ಯಕೀಯ ಚಿಕಿತ್ಸೆ ವಂಚಿತ ಬಡವರಿಗೆ ಸಹಕಾರ ನೀಡುವುದು 

     ಸ್ನೇಹಿತರಾದ ನಾಗರಾಜ್, ದರ್ಶನ್, ರೇಣುಕಾ ಕಹಾರ್ ಸಿಂಗ್ ರವರ ಜೊತೆಯಲ್ಲಿ 2018 ಹ್ಯೂಮಾನಿಟಿ ಟ್ರಸ್ಟ್ ನ ಆರ್ಥಿಕ ಸಹಾಯದಿಂದ ಮ್ಯಾನ್ ಕ್ಯೆನ್ಡ್ ಟ್ರಸ್ಟ್ 2019 ಚಿಕ್ಕಮಗಳೂರು ಜಿಲ್ಲೆಯ ಸಮಾನ ಮನಸ್ಕರು ಸೇರಿ ಬಣಕಲ್ ಮ್ಯಾನ್ ಕ್ಯೆನ್ಡ್ ಕ್ಲಬ್ ಸ್ಥಾಪಿಸಲು ನೆರವಾದರೂ.

      “ಶಿವಮೊಗ್ಗ  ಮೆಗ್ಗಾನ್ ಹಾಸ್ಪಿಟಲ್ ಆವರಣದಲ್ಲಿ ಪ್ಲಾಸ್ಟಿಕ್ ಪುನರ್ ಬಳಕೆ ಕಾರ್ಯಕ್ರಮ. ಹ್ಯೂಮಾನಿಟಿ ಟ್ರಸ್ಟ್ ನ ಸಹಕಾರದಿಂದ ಶಿವಮೊಗ್ಗ ಗಾಜನೂರು ಅಗ್ರಹಾರ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಗೆ ಸ್ಮಾರ್ಟ್ ಕ್ಲಾಸ್ ಮಾಡಲು ಲ್ಯಾಪ್ ಟಾಪ್, ಭದ್ರಾವತಿಯ ದಡಮಘಟ್ಟ ಹೆಣ್ಣು ಮಕ್ಕಳ ಉರ್ದು ಶಾಲೆಗೆ ಶೌಚಾಲಯ ದುರಸ್ಥಿ ಮತ್ತು ಕುಡಿಯುವ ನೀರಿನ ವ್ಯವಸ್ಥೆ, ನ್ಯೂ ಟೌನ್ ಉರ್ದು ಶಾಲೆಗೆ ಕುಡಿಯುವ ನೀರಿನ ವ್ಯವಸ್ಥೆ, ಚಿಕ್ಕಬಳ್ಳಾಪುರ ಗೌರಿಬಿದನೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಅತಿಥಿ ಶಿಕ್ಷಕರ ಗೌರವ ವೇತನ, ಹಾಸನ ಜಿಲ್ಲೆಯ ಅರಸೀಕೆರೆಯ ಶ್ರೀ ಕಾಲಬೈರವೇಶ್ವರ ಪ್ರೌಡಶಾಲೆಗೆ ಡೆಸ್ಕ್ ಟಾಪ್ ಮತ್ತು ಪ್ರಿಂಟರ್, ಡಿ ಕಾರೇಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಗೆ ಒಂದು ವರ್ಷದ ಸಂಪೂರ್ಣ ನೋಟ್ ಪುಸ್ತಕಗಳು ಮತ್ತು ಕ್ಯಾನ್ಸರ್, ಹೃದಯ ಸಂಬಂದಿ ಖಾಯಿಲೆ, ತುರ್ತು ರಕ್ತದ ಅವಶ್ಯಕತೆ, ವಿದ್ಯಾರ್ಥಿಗಳ ಜೊತೆ ಸಂವಾದ, ಕೊರೋನಾ ಲಾಕ್ ಡೌನ್ ಸಮಯದಲ್ಲಿ ಹಸಿವಿನಿಂದ ನರಳುತ್ತಿರುವ ನೂರಾರು ಕುಟುಂಬಳನ್ನು ಗುರುತಿಸಿ ದಾನಿಗಳ ನೆರವಿನಿಂದ ದಿನಸಿ ಕಿಟ್, ತಯಾರಿಸಿದ ಆಹಾರ ಕಿಟ್ ವಿತರಣೆ, ಪೊಲೀಸ್ ಇಲಾಖೆಗೆ ಮಾಸ್ಕ್ ಮತ್ತು ಸ್ಯಾನಿಟೈಸರ್ ವಿತರಣೆ, ಇಂತಹ ನೂರಾರು ಪುಣ್ಯ ಕಾರ್ಯಗಳನ್ನು ಮಾಡಲು ಹ್ಯೂಮನಿಟಿ ಟ್ರಸ್ಟ್ ನ ರೋಷನ್, ದಾನಿಗಳ ಮತ್ತು ಅಭಿಮಾನಿಗಳ ಸಹಕಾರದಿಂದ ಇಂತಹ ಹಲವಾರು ಯಶಸ್ವಿ ಕಾರ್ಯಕ್ರಮ ನಡೆಸಲು ಸಾಧ್ಯವಾಯಿತ್ತು” ಎಂದು ಹೇಳುತ್ತಾರೆ ರಾಜು ಅವರು.

     ರಾಜು ಅವರ ಜೀವನ ಸಮಾಜದಲ್ಲಿ ಇಂದು ಕೆಲವು ಯುವಕರು ಅವರ ಹತ್ತಿರ ಅಪಾರ ಪ್ರತಿಭೆ ಇದ್ದರೂ ತಮ್ಮ ಜೀವನವನ್ನು  ಮೋಜು ಮಸ್ತಿಗೆಂದೇ ಮೀಸಲಿಟ್ಟು ಕಾಲಹರಣ ಮಾಡುವ ಯುವ ಪೀಳಿಗೆಗೆ ರಾಜು ರವರ ಸೇವಾ ಗುಣ, ಸೇವಾ ಶೈಲಿ ಮಾರ್ಗದರ್ಶನವಾಗಲಿ ಏಂದು ಹಾರೈಸುತ್ತೇವೆ.

    ಬಣಕಲ್ ಮ್ಯಾನ್ ಕ್ಯೆನ್ಡ್ ಕ್ಲಬ್ ಸ್ಥಾಪಿಸಿ ಸಮಾಜಕ್ಕೆ ಒಳಿತದಾದ ಹತ್ತು ಹಲವು ರೀತಿಯಿಂದ ಸಮಾಜ ಸೇವೆ ಮಾಡಿದ, ಮಾಡುತ್ತೀರುವ ರಾಜು ಆರ್. ಮತ್ತು ಅವರ ಸ್ನೇಹಿತರಿಗೆ, ಬಳಗದವರಿಗೆ ಜನನುಡಿ.ಕಾಮ್ ಅಭಿನಂದಿಸುತ್ತದೆ  ಮತ್ತು ಇನ್ನೂ ಹೆಚ್ಚಿನೆ ಯಶಸ್ಸು ಸಾಧಿಸಲೆಂದು ಹಾರೈಸುತ್ತದೆ.

       .

ವಿದ್ಯಾರ್ಥಿಗಳು ಸರ್ಕಾರದ ಸೌಲಭ್ಯದಿಂದ ಶೈಕ್ಷಣಿಕ ಅಭಿವೃಧ್ಧಿ ಹೊಂದಿ ಗುಣ ಮಟ್ಟದ ಫಲಿತಾಂಶ ಪಡೆದು ಉತ್ತಮ ಬದುಕು ಕಟ್ಟಿಕೊಳ್ಳಬೇಕು : ಕೆ.ಆರ್.ರಮೇಶ್ ಕುಮಾರ್

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ವಿದ್ಯಾರ್ಥಿಗಳು ಸರ್ಕಾರದ ಸೌಲಭ್ಯ ಸದುಪಯೋಗ ಪಡಿಸಿಕೊಂಡು ಶೈಕ್ಷಣಿಕ ಅಭಿವೃಧ್ಧಿ ಹೊಂದಬೇಕು. ಗುಣ ಮಟ್ಟದ ಫಲಿತಾಂಶ ಪಡೆದು ಉತ್ತಮ ಬದುಕು ಕಟ್ಟಿಕೊಳ್ಳಬೇಕು ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಸಮಗ್ರ ಕಲಿಕಾ ಯೋಜನೆಯಡಿ, ಪ್ರಥಮ ಪದವಿ ವಿದ್ಯಾರ್ಥಿಗಳಿಗೆ ಲ್ಯಾಪ್ ಟ್ಯಾಪ್ ವಿತರಿಸಿ ಮಾತನಾಡಿ, ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾಥಿಗಳು, ಖಾಸಗಿ ಸಂಸ್ಥೆಗಳ ವಿದ್ಯಾರ್ಥಿಗಳಿಗಿಂತ ಯಾವುದೇ ರೀತಿಯಲ್ಲಿ ಕಡಿಮೆಯಿಲ್ಲ. ಸರ್ಕಾರಿ ಕಾಲೇಜಿನಲ್ಲಿ ಓದುತ್ತಿರುವುದಕ್ಕೆ ಹೆಮ್ಮೆ ಪಡಬೇಕು. ಎರಡೂ ಕಡೆ ಒಂದೇ ಪಠ್ಯ ಬೋಧನೆ ಇರುವುದರಿಂದ ವಿದ್ಯಾರ್ಥಿಗಳು ಸರ್ಕಾರಿ ಶಾಲಾ ಕಾಲೇಜಿಗೆ ಸೇರಬೇಕು ಎಂದು ಹೇಳಿದರು.
ಕಾಲೇಜಿಗೆ ಕಾಂಪೌಂಡ್ ಹಾಗೂ ಮಹಾದ್ವಾರ ನಿರ್ಮಿಸಲಾಗುವುದು. ವಿದ್ಯಾರ್ಥಿಗಲ ಕಲಿಕೆಗೆ ಕೊರತೆ ಆಗದಂತೆ, ಅಗತ್ಯವಾದ ಎಲ್ಲ ಸೌಕರ್ಯ ಕಲ್ಪಿಸಲಾಗುವುದು ಎಂದು ಹೇಳಿದರು.
ಪ್ರಾಂಶುಪಾಲ ಪ್ರೊ. ಕೆ.ವಿ.ವೆಂಕಟೇಶ್, ಪ್ರಧ್ಯಾಪಕರಾದ ವೆಂಕಟರಾಮಯ್ಯ, ಮಂಜುನಾಥ್, ಪದ್ಮ, ಮುಖಂಡ ಕೆ.ಕೆ.ಮಂಜು, ತೊಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಎಂ.ಶ್ರೀನಿವಾಸ್ ಇದ್ದರು
.