HOLY ROSARY CHURCH, KUNDAPUR – 450 th JUBILEE SOUVENIR 2021

ಕುಂದಾಪುರದ ಲಯನ್ಸ್ ಕ್ಲಬ್ ಆಶ್ರಯದಲ್ಲಿಅಂತರಾಷ್ಟ್ರೀಯ ವೈದ್ಯರ ದಿನಾಚರಣೆ

JANANUDI.COM NETWORK


ಕುಂದಾಪುರ: ಅಂತರಾಷ್ಟ್ರೀಯ ವೈದ್ಯರ ದಿನಾಚರಣೆ ಪ್ರಯುಕ್ತ ಕುಂದಾಪುರದ ಲಯನ್ಸ್ ಕ್ಲಬ್ ಆಶ್ರಯದಲ್ಲಿ ನಗರದ ಹೆಸರಾಂತ ವೈದ್ಯರಾದ ಡಾ. ಚಂದ್ರಶೇಖರರವರನ್ನು ಸನ್ಮಾನಿಸಲಾಯಿತು. ಲಯನ್ಸ್ ಕ್ಲಬ್‍ನ ಮುಖಂಡರಾದ ಲ. ಚಂದ್ರಶೇಖರ ಕಲ್ಪತರು ಅವರು ವೈದ್ಯರನ್ನು ಸನ್ಮಾನಿಸುತ್ತಾ ಈ ಕೋವಿಡ್ ಸಂದರ್ಭದಲ್ಲಿ ವೈದ್ಯರು ತಮ್ಮನ್ನು ತಾವು ರೋಗಿಗಳ ಸೇವೆಯಲ್ಲಿ ತೊಡಗಿಸಿಕೊಂಡ ಬಗ್ಗೆ ಶ್ಲಾಘಿಸಿ ವೈದ್ಯರನ್ನು ಅಭಿನಂದಿಸಿದರು.
ಸನ್ಮಾನ ಸ್ವೀಕರಿಸಿದ ಡಾ. ಚಂದ್ರಶೇಖರರವರು ಮಾತನಾಡುತ್ತಾ ಈ ವೃತ್ತಿ ಅತೀ ಶ್ರೇಷ್ಠವಾದುದು ಈ ಮಾರಣ ಕೋವಿಡ್ ಸಂದರ್ಭದಲ್ಲೂ ಕೇವಲ ವೈದ್ಯರ ಸೇವೆ ಮಾತ್ರ ಪ್ರಮುಖವಲ್ಲ ಸಾರ್ವಜನಿಕರ ಜವಾಬ್ದಾರಿಯು ಮುಖ್ಯ ಎನ್ನುತ್ತಾ ಕಳೆದ ವರ್ಷ ಕೋವಿಡ್ ಸಂದರ್ಭದಲ್ಲಿ ಕುಂದಾಪುರದ ಲಯನ್ಸ್ ಕ್ಲಬ್ ಮಾಡಿರುವ ಸೇವಾ ಚಟುವಟಿಕೆಗಳನ್ನು ಕೊಂಡಾಡಿದರು. ಲಯನ್ಸ್ ಕ್ಲಬ್ ಕುಂದಾಪುರದ ನೂತನ ಅಧ್ಯಕ್ಷರಾದ ರಾಧಾಕೃಷ್ಣ ನಾಯಕರವರು ವೈದ್ಯರಿಗೆ ತಮ್ಮ ಶುಭಶಯಗಳನ್ನು ಹೇಳಿದರು. ಲಯನ್ ನವೀನಕುಮಾರ ಶೆಟ್ಟಿ, ಪ್ರಜ್ಞೇಶ್ ಪ್ರಭು, ಡಾ. ರವೀಂದ್ರರವರು ಉಪಸ್ಥಿತರಿದ್ದರು.

ಮಾನ್ಯ ಗೋಪಾಲ್ ಭಂಡಾರಿಯವರ ಪುಣ್ಯ ಸ್ಮರಣೆ ಕಾರ್ಯಕ್ರಮ ಬೆಲ್ಮನ್ ಗ್ರಾಮೀಣ ಸಮಿತಿ ಅಧ್ಯಕ್ಷರ ಮನೆಯಲ್ಲಿ ನಡೆಯಿತು

ವರದಿ :  ವಾಲ್ಟರ್ ಮೊಂತೇರೊ, ಬೆಳ್ಮಣ್ಣು

ಮಾನ್ಯ ಗೋಪಾಲ್ ಭಂಡಾರಿಯವರ ಪುಣ್ಯ ಸ್ಮರಣೆ ಕಾರ್ಯಕ್ರಮ ಬೆಲ್ಮನ್ ಗ್ರಾಮೀಣ ಸಮಿತಿ ಅಧ್ಯಕ್ಷರ ಮನೆಯಲ್ಲಿ ನಡೆಯಿತು. ಸುಮಾರು 20ಕ್ಕೂ ಮೇಲ್ಪಟ್ಟ ಕಾರ್ಯಕರ್ತರು ಮತ್ತು ಹಿತೈಷಿಗಳು ಹಾಜರಿದ್ದರು. ಎಲ್ಲರೂ ಗೋಪಾಲ್ ಭಂಡಾರಿ ಅವರ ಭಾವಚಿತ್ರಕ್ಕೆ ಪುಷ್ಪ ಅರ್ಚನೆ ಮಾಡಿ ನಮನ ಸಲ್ಲಿಸಿದರು. ಅನಿತಾ ಡಿಸೋಜ ಸ್ವಾಗತ ಕೋರಿದರು. ಅಧ್ಯಕ್ಷರು ಫ್ಲೋರಾ ಮೆಂಡೋನ್ಸಾ ನುಡಿ ನಮನ ಸಲ್ಲಿಸಿದರು.   ಜಗಧೀಶ್ ಕುಡ್ವ ಧನ್ಯವಾದಗಳನ್ನು ಸಲ್ಲಿಸಿದರು.

ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜು: ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಹೊಸ ಇಂಜಿನಿಯರಿಂಗ್ ಕೋರ್ಸ್ ಆರಂಭ

JANANUDI.COM NETWOROK


ಕುಂದಾಪುರದ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜಿನಲ್ಲಿ ಆಧುನಿಕ ತಂತ್ರಜ್ಞಾನ ಭರಿತ  ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮತ್ತು ಮಷೀನ್ ಲರ್ನಿಂಗ್ ತಂತ್ರಜ್ಞಾನ ದ ಹೊಸ ಕೋರ್ಸ್ ಅನ್ನು ಪ್ರಾರಂಭಿಸಲು ಅನುಮೋದನೆ ದೊರಕಿದ್ದು, ಇದೇ ಸಾಲಿನಲ್ಲಿ ಪ್ರವೇಶ ಪಡೆಯಲು ಅವಕಾಶವಿರುತ್ತದೆ. ಇವಾಗಿನ ಆಧುನಿಕ ಯುಗದಲ್ಲಿ ಇಂಜಿನಿಯರಿಂಗ್ ಒಳಗೊಳ್ಳುವಿಕೆ ಇಲ್ಲದೆ ಇರುವುದನ್ನು ಊಹಿಸಲೇ ಕಷ್ಟವಾಗಿದ್ದು, ಸ್ವಯಂಚಾಲಿತವಾಗಿ ಕಾರ್ಯ ನಿರ್ವಹಿಸುವ ಉತ್ಪನ್ನಗಳಿಗೆ  ಬಹಳ ಬೇಡಿಕೆ ಇರುವುದರಿಂದ ಕೃತಕ ಬುದ್ದಿಶಕ್ತಿ ತಂತ್ರಜ್ಞಾನ ಕಲಿಕೆ ಪ್ರಮುಖ ಪಾತ್ರವಹಿಸುತ್ತದೆ. ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಾನಿಕ್ಸ್ ಅಂಡ್ ಕಂಮ್ಯುನಿಕೇಷನ್ಸ್, ಸಿವಿಲ್ ಇಂಜಿನಿಯರಿಂಗ್, ಮೆಕ್ಯಾನಿಕಲ್ ಇಂಜಿನಿಯರಿಂಗ್ ಕೋರ್ಸ್ ಗಳು ಈಗಾಗಲೇ ಕಾರ್ಯ ನಿರ್ವಹಿಸುತ್ತಿದ್ದು, ಇವಾಗ ಹೊಸ ಕೋರ್ಸ್ ನ ಸೇರ್ಪಡೆ ಯಿಂದ ವಿದ್ಯಾರ್ಥಿಗಳಿಗೆ ಮತ್ತೊಂದು ಅವಕಾಶ ಸಿಕ್ಕಂತಾಗಿದೆ. ವಿದ್ಯಾರ್ಥಿಗಳಿಗೆ ಕಂಪನಿಯಲ್ಲಿ ಉದ್ಯೋಗವಕಾಶಕ್ಕೆ ಅನುಕೂಲವಾಗುವ ಸಲುವಾಗಿ ಕಾಲೇಜು ಈಗಾಗಲೇ ಮೈಕ್ರೋಸಾಫ್ಟ್ ನ ಟ್ರೈನಿಂಗ್ ಪಾರ್ಟ್ನರ್ ಮತ್ತು ಎಡೆಕ್ಸ್ ಕಂಪನಿಗಳ ಜೊತೆ ಒಪ್ಪಂದ ಮಾಡಿ ಕೊಂಡಿದ್ದು, ವಿದ್ಯಾರ್ಥಿಗಳು ಇದರ ಪ್ರಯೋಜನ ಕೂಡ ಪಡೆಯಲು ಅವಕಾಶ ಇರುತ್ತದೆ.
2020-2021 ಸಾಲಿನಲ್ಲಿ ಎಲ್ಲಾ ಅರ್ಹ ವಿದ್ಯಾರ್ಥಿಗಳು ಉದ್ಯೋಗ ಮೇಳ ಮತ್ತು ಕ್ಯಾಂಪಸ್ ಸಂದರ್ಶನ ದ ಮೂಲಕ ಉದ್ಯೋಗ ಪಡೆದದ್ದು ಮತ್ತೊಂದು ಗಮನಾರ್ಹ ವಿಷಯವಾಗಿದೆ

ಸರಳ ಪತ್ರಿಕಾ ದಿನಾಚರಣೆ ಎಂ.ಜಿ.ಪ್ರಭಾಕರ್‌ಗೆ ಸನ್ಮಾನ ಪತ್ರಕರ್ತರು ವೃತ್ತಿ ಧರ್ಮ ಮರೆಯಬಾರದು ಮುನಿರಾಜು

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಕೋಲಾರ : – ಪತ್ರಿಕಾ ವೃತ್ತಿ ಅತ್ಯಂತ ಪವಿತ್ರವಾಗಿದ್ದು , ಜನತೆಗೆ ಸತ್ಯ ಸಂಗತಿ ತಿಳಿಸುವಾಗ ನಾವು ನಿಷ್ಟೂರತೆಯಿಂದ ಇರಬೇಕು , ಸಮಾಜಕ್ಕಾಗಿ ನಾವು ಎಂಬ ಭಾವನೆ ಇರಬೇಕು ಎಂದು ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಿ.ಮುನಿರಾಜು ತಿಳಿಸಿದರು . ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ಕೋವಿಡ್ ಹಿನ್ನೆಲೆ ಸರಳವಾಗಿ ಆಚರಿಸಲಾದ ಕನ್ನಡ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಎಂ.ಜಿ.ಪ್ರಭಾಕರ್ ಅವರನ್ನು ಸನ್ಮಾನಿಸಿ ಅವರು ಮಾತನಾಡುತ್ತಿದ್ದರು . ಪತ್ರಕರ್ತರ ಕಲ್ಯಾಣಕ್ಕಾಗಿ ಸರ್ಕಾರ ಮತ್ತಷ್ಟು ಕಾರ್ಯಕ್ರಮಗಳನ್ನು ಜಾರಿಗೆ ತರಬೇಕು , ಗ್ರಾಮೀಣ ಪತ್ರಕರ್ತರ ನೆರವಿಗೂ ಬರಬೇಕು , ಪತ್ರಕರ್ತರನ್ನು ಕೋವಿಡ್ ವಾರಿಯರ್ ಎಂದು ಪರಿಗಣಿಸಬೇಕು ಎಂದು ಮನವಿ ಮಾಡಿದರು . ಕೋವಿಡ್ ಸಂದರ್ಭದಲ್ಲಿ ಸರಳವಾಗಿ ಪತ್ರಿಕಾ ದಿನಾಚರಣೆ ಆಚರಿಸಲಾಗುತ್ತಿದ್ದು , ಮುಂದಿನ ದಿನಗಳಲ್ಲಿ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮತ್ತು ಹಿರಿಯ ಪತ್ರಕರ್ತರಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗುವುದು ಎಂದು ಹೇಳಿದರು . ಆತ್ಮಾವಲೋಕನ ಪತ್ರಕರ್ತರಿಗೆ ಅಗತ್ಯ ಪತ್ರಕರ್ತರು ಸಾಮಾಜಿಕ ಬದ್ದತೆ ಹೊಂದಿ ಪತ್ರಿಕೆಗಳ ವಿಶ್ವಾಸಾರ್ಹತೆಯನ್ನು ಮುಂದುವರೆಸಿಕೊಂಡು ಹೋಗುವ ನಿಟ್ಟಿನಲ್ಲಿ ಆತ್ಮಾವಲೋಕನ ಮಾಡಿಕೊಳ್ಳಬೇಕೆಂದು ಹಿರಿಯ ಪತ್ರಕರ್ತ ಎಂ.ಜಿ.ಪಭಾಕರ ಹೇಳಿದರು .
ಸಾಮಾಜಿಕ ಜಾಲ ತಾಣಗಳ ಅಬ್ಬರದಲ್ಲೂ ಪತ್ರಿಕೆಗಳು ಇನ್ನು ಜನರ ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡಿವೆ ಎಂದು ಅಭಿಪ್ರಾಯಪಟ್ಟ ಅವರು , ಇದನ್ನು ಜತನದಿಂದ ಕಾಪಾಡಿಕೊಂಡು ಉಳಿಸಿಕೊಳ್ಳಬೇಕಾದ ಜವಾಬ್ದಾರಿ ಪ್ರತಿಯೊಬ್ಬ ಪತ್ರಕರ್ತ ಮೇಲಿದೆಯೆಂದರು . ಕೋಲಾರ ಚಿಕ್ಕಬಳ್ಳಾಪುರ ಕಾರ್ಯನಿರತ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘ ನಿಯಮಿತದ ಅಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ , ಪತ್ರಕರ್ತರ ಜೀವನ ನಿರ್ವಹಣೆ , ಪತ್ರಿಕೆಗಳ ಮೇಲ್ವಿಚಾರಣೆ ಸವಾಲು ಎದುರಿಸುವುದರ ಜೊತೆಗೆ ಓದುಗರ ನಂಬಿಕೆ ವಿಶ್ವಾಸಗಳನ್ನು ಉಳಿಸಿಕೊಳ್ಳಬೇಕಾದ ಜವಾಬ್ದಾರಿ ಪತ್ರಕರ್ತರ ಮೇಲಿದೆ . ಸಾಮಾಜಿಕ ಜಾಲ ತಾಣದ ಸುದ್ದಿಗಳಿಗಿಂತಲೂ ನಂಬಿಕೆಗೆ ಅರ್ಹವಾದ ಸುದ್ದಿಗಳನ್ನು ಧ್ವನಿ ಇಲ್ಲದವರಿಗೆ ಧ್ವನಿಯಾಗುವ ಪರಂಪರೆಯನ್ನು ಪತ್ರಿಕೆಗಳು ಮುಂದುವರೆಸಿಕೊಂಡು ಹೋಗದಿದ್ದರೆ ಪತ್ರಿಕೋದ್ಯಮದ ಸರ್ವನಾಶ ಖಂಡಿತ ಎಂದರು . ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಚಂದ್ರಶೇಖರ್ ಮಾತನಾಡಿ , ಕೋಲಾರ ಜಿಲ್ಲೆಯಲ್ಲಿ ಕೋವಿಡ್‌ನಿಂದ ಮೃತಪಟ್ಟಿರುವ ಪತ್ರಕರ್ತರಿಗೆ ಸರಕಾರದಿಂದ ಪರಿಹಾರ ಒದಗಿಸಲು ಹಾಗೂ ಸಂಘದ ಎಲ್ಲಾ ಸದಸ್ಯರಿಗೆ ವಿಮಾ ಸೌಲಭ್ಯವನ್ನು ಕಲ್ಪಿಸಲು ಪ್ರಯತ್ನ ನಡೆದಿದೆ ಎಂದರು . ಪತ್ರಕರ್ತರ ಸಂಘದ ಖಜಾಂಚಿ ಎ.ಜಿ.ಸುರೇಶ್‌ಕುಮಾರ್ ಕಾರ್ಯಕ್ರಮವನ್ನು ನಿರೂಪಿಸಿದರು . ಕಾರ್ಯಕ್ರಮಕ್ಕೂ ಮುನ್ನ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ , ಕವಿ ಡಾ . ಸಿದ್ದಲಿಂಗಯ್ಯ , ಜಿಲ್ಲಾ ಪತ್ರಕರ್ತರಾದ ವೆಂಕಟೇಶ್ , ಎಂ.ಎ. ರವಿ , ಎನ್.ಎಸ್.ಮೂರ್ತಿ ನಿಧನಕ್ಕೆ ಮೌನ ಆಚರಿಸಲಾಯಿತು . ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಪಾ.ಶ್ರೀ.ಅನಂತರಾಮ್ , ಪತ್ರಕರ್ತರ ಸಹಕಾರ ಸಂಘದ ಉಪಾಧಕ ಕೆ.ಮಂಜುನಾಥ್ ಸೇರಿದಂತೆ ಜಿಲ್ಲೆಂರು ಹಲವಾರು ಪತ್ರಕರ್ತರು ಭಾಗವಹಿಸಿದ್ದರು.

ಅನ್ನ ನೀಡುವ ಬ್ಯಾಂಕಿನ ಕೆಲಸಕ್ಕೆ ಬದ್ದತೆ ಇರಲಿ-ಸಿಬ್ಬಂದಿಗೆ ತಾಕೀತು ಠೇವಣಿ ಸಂಗ್ರಹಿಸಿ ನಿಷ್ಟೇ ಸಾಕ್ಷೀಕರಿಸಿ-ಬ್ಯಾಲಹಳ್ಳಿ ಗೋವಿಂದಗೌಡ ಕರೆ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ:- ಅನ್ನ ನೀಡುತ್ತಿರುವ ಬ್ಯಾಂಕಿನ ಕೆಲಸ ಬದ್ದತೆಯಿಂದ ಮಾಡಿ ಇಲ್ಲವಾದರೆ ಬೀದಿಗೆ ಬೀಳುತ್ತೀರಿ, ಠೇವಣಿ ಸಂಗ್ರಹಕ್ಕೆ ನಿಮಗೆ ನೀಡಿರುವ ಗುರಿ ಸಾಧನೆ ಮಾಡಿ ನಿಮ್ಮ ಕರ್ತವ್ಯ ನಿಷ್ಟೆ ಸಾಕ್ಷೀಕರಿಸಿ ಎಂದು ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಸಿಬ್ಬಂದಿಗೆ ತಾಕೀತು ಮಾಡಿದರು.
ಭಾನುವಾರ ಜಿಲ್ಲಾ ಸಹಕಾರಿ ಯೂನಿಯನ್ ಸಭಾಂಗಣದಲ್ಲಿ ನಡೆದ ಬ್ಯಾಂಕಿನ ಪ್ರಗತಿಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಳೆದ ಏಳೂವರೆ ವರ್ಷಗಳ ಹಿಂದೆ ಬ್ಯಾಂಕಿನ ಸ್ಥಿತಿ ನೆನಪು ಮಾಡಿಕೊಳ್ಳಿ, ಆರೇಳು ಸಾವಿರವೂ ಸಂಬಳ ಸಿಗದೇ ಅನುಭವಿಸಿರುವ ನೋವು ಮತ್ತೆ ಇಣುಕಿ ನೋಡಬಾರದು ಎಂದರೆ ನಿಮ್ಮ ಬದ್ದತೆಯ ಕೆಲಸ ಅತಿ ಮುಖ್ಯ ಎಂದು ಎಚ್ಚರಿಸಿದರು.
ನೋವುಂಡ ದಿನಗಳ ಸ್ಮರಣೆ ಅಗತ್ಯ, ಈಗ 40-50 ಸಾವಿರ ಸಂಬಳ ಪಡೆಯುತ್ತಿದ್ದೀರಿ, ಅನ್ನ ತಿಂದ ಮನೆಗೆ ದ್ರೋಹ ಮಾಡಬಾರದು ಎಂಬುದನ್ನು ಅರಿತು ಬ್ಯಾಂಕನ್ನು ಉಳಿಸಿ ಎಂದರು.


ಪ್ರತಿ ಬ್ಯಾಂಕ್ ಶಾಖೆಗೆ 10ಕೋ.ಠೇವಣಿ ಗುರಿ


ಕೋಲಾರ,ಚಿಕ್ಕಬಳ್ಳಾಪುರ ಜಿಲ್ಲೆಗಳ ಪ್ರತಿ ಡಿಸಿಸಿ ಬ್ಯಾಂಕ್ ಶಾಖೆಗೆ ತಲಾ 10 ಕೋಟಿ ರೂಗಳ ಠೇವಣಿ ಸಂಗ್ರಹದ ಗುರಿ ನೀಡಿದ್ದೇವೆ, ವೈಯಕ್ತಿಕವಾಗಿಯೂ ತಲ ಕನಿಷ್ಟ 5 ಲಕ್ಷ ಸಂಗ್ರಹಿಸಿ ಜುಲೈ ಅಂತ್ಯದೊಳಗೆ ಈ ಸಾಧನೆ ಮಾಡಿ ತೋರಿಸಿ ಎಂದು ಸೂಚನೆ ನೀಡಿದ ಅವರು ಬ್ಯಾಂಕಿನ ಕೆಲಸ ಮರೆತರೆ ನಿಮಗೆ ಅನ್ನ ಸಿಗೊಲ್ಲ ಎಂದರು
ನಾನು ಕಠಿಣವಾಗಿಯೇ ಮಾತನಾಡುತ್ತೇನೆ ಏಕೆಂದರೆ ದಿವಾಳಿಯಾಗಿದ್ದ ಬ್ಯಾಂಕನ್ನು ನಾನು ನಮ್ಮ ಆಡಳಿತ ಮಂಡಳಿ ಕಷ್ಟಪಟ್ಟು ಉಳಿಸಿ ಬೆಳೆಸಿದ್ದೇವೆ, ನಾನು ತಪ್ಪು ಮಾಡಿದ್ದರೆ ನೇರವಾಗಿ ಹೇಳಿ, ಅದು ಬಿಟ್ಟು ಕೆಲಸ ಮಾಡಲಾಗದೇ ಬ್ಯಾಂಕಿನ ವಿರುದ್ದ ಅಪಪ್ರಚಾರ ನಡೆಸದಿರಿ, ನಿಮ್ಮ ಮಕ್ಕಳಂತೆ ಬ್ಯಾಂಕನ್ನು ಪೋಷಿಸಿ ಇಲ್ಲವಾದರೆ ನಿಮ್ಮ ಕುಟುಂಬಗಳಿಗೆ ಅನ್ಯಾಯ ಮಾಡಿದಂತೆ ಎಂದು ಎಚ್ಚರಿಸಿ, ಗುರಿಸಾಧನೆಯಲ್ಲಿ ವಿಫಲರಾದವರಿಗೆ ವರ್ಗಾವಣೆ ಶಿಕ್ಷೆ ಕಟ್ಟಿಟ್ಟ ಬುತ್ತಿ ಎಂದು ತಿಳಿಸಿದರು.


ಕೋವಿಡ್ ಸಾವು ಪಟ್ಟಿ ಮಾಡಿಕೊಡಿ


ಅವಿಭಜಿತ ಜಿಲ್ಲೆಯಲ್ಲಿ ನಮ್ಮ ಬ್ಯಾಂಕಿನಿಂದ ಸಾಲ ಪಡೆದಿರುವ ರೈತ ಕೋವಿಡ್ ಸಾವಿಗೆ ತುತ್ತಾಗಿದ್ದರೆ ಅಂತಹವರ ಕೋವಿಡ್ ಸಾವಿನ ಪ್ರಮಾಣಪತ್ರ, ಆಧಾರ್ ಕಾರ್ಡ್, ಪಡಿತರ ಕಾರ್ಡ್ ಸಾಲ ಪಡೆದ ದಾಖಲೆಯನ್ನು ಜು.1 ರೊಳಗೆ ಬ್ಯಾಂಕಿನ ಕೇಂದ್ರ ಕಚೇರಿಗೆ ತಲುಪಿಸಿ ಇವರಿಗೆ ಪರಿಹಾರ ನೀಡಲು ಅಪೆಕ್ಸ್ ಬ್ಯಾಂಕ್ ಮುಂದೆ ಬಂದಿದೆ ಎಂದರು.
ಎರಡೂ ಜಿಲ್ಲೆಗಳಲ್ಲಿ ಸುಮಾರು 100 ಮಂದಿ ಸಾಲ ಪಡೆದಿರುವ ರೈತರ ಕೋವಿಡ್‍ಗೆ ಬಲಿಯಾಗಿರುವ ಕುರಿತು ಮಾಹಿತಿ ಇದೆ, ಶೀಘ್ರ ಮಾಹಿತಿ ಸಂಗ್ರಹಿಸಿ ಎಂದು ಸಲಹೆ ನೀಡಿದರು. ಈಗಾಗಲೇ ಎಲ್ಲಾ ಬ್ಯಾಂಕ್ ಶಾಖೆಗಳ ಆಡಿಟ್ ನಡೆಯುತ್ತಿದ್ದು, ದಾಖಲಿಸಿರುವ ಲೋಪಗಳನ್ನು ಸರಿಪಡಿಸಿಕೊಳ್ಳಿ ಎಂದರು.


ಗಣಕೀಕೃತ ಆಡಿಟ್ಶೀ ಶೀಘ್ರ ಮುಗಿಸಿ


ಇದೇ ಸಂದರ್ಭದಲ್ಲಿ ಗಣಕೀಕೃತ ಆಡಿಟ್ ಕಾರ್ಯ ವಿಳಂಬ ಮಾಡುತ್ತಿರುವ ವಿ-ಸಾಫ್ಟ್ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಅಧ್ಯಕ್ಷರು, ಕನಿಷ್ಟ 12 ಪ್ಯಾಕ್ಸ್‍ಗಳಿಗೆ ಒಬ್ಬರಂತೆ ಸಿಬ್ಬಂದಿ ನೇಮಿಸಿ ಗಣಕೀಕೃತ ಆಡಿಟ್ ಜು.30ರೊಳಗೆ ಮುಗಿಸಿಕೊಡಿ ಇಲ್ಲವಾದರೆ ಸಹಿಸಲ್ಲ ಎಂದು ಎಚ್ಚರಿಸಿದರು.
ವಿವಿಧೋದ್ಧೇಶ ಸೇವಾ ಕೇಂದ್ರಗಳಡಿ ಸೊಸೈಟಿಗಳು ಗೋದಾಮು ನಿರ್ಮಾಣಕ್ಕೆ ಕೂಡಲೇ ಎಸ್ಟಿಮೇಟ್,ನಕ್ಷೆ ನೀಡಲು ತಾಕೀತು ಮಾಡಿದ ಅವರು, ಜು.1 ರಿಂದ ಎಸ್‍ಎಸ್‍ಜಿಗಳ ಸಾಲ ವಸೂಲಿ ಪ್ರಕ್ರಿಯೆ ಆರಂಭಿಸಿ, ಯಾವುದೇ ಸಾಲ ಎನ್‍ಪಿಎ ಆಗದಂತೆ ಎಚ್ಚರವಹಿಸಿ ಎಂದರು.
ಸಭೆಯಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಹನುಮಂತರೆಡ್ಡಿ, ಕೆ.ವಿ.ದಯಾನಂದ್, ಬ್ಯಾಂಕಿನ ಎಜಿಎಂಗಳಾದ ಬೈರೇಗೌಡ, ಶಿವಕುಮಾರ್, ದೊಡ್ಡಮುನಿ,ನಾಗೇಶ್, ಖಲೀಮುಲ್ಲಾ ಸೇರಿದಂತೆ ಎರಡೂ ಜಿಲ್ಲೆಗಳ ಬ್ಯಾಂಕ್ ಶಾಖೆಗಳ ಎಲ್ಲಾ ವ್ಯವಸ್ಥಾಪಕರು,ಸಿಬ್ಬಂದಿ ಹಾಜರಿದ್ದರು.

ಸರ್ಕಾರಿ ಕೆಲಸ ದೇವರ ಕೆಲಸ ಎಂಬ ಭಾವನೆಯೊಂದಿಗೆ ನಾನು ಕಳೆದ 31 ವರ್ಷಗಳ ಕಾಲ ನಿರ್ವಹಿಸಿದ್ದೇನೆ. ಕೃಷ್ಣಮೂರ್ತಿ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು.

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ರಾಯಲ್ಪಾಡು : ಸರ್ಕಾರಿ ಕೆಲಸ ದೇವರ ಕೆಲಸ ಎಂಬ ಭಾವನೆಯೊಂದಿಗೆ ನಾನು ಕಳೆದ 31 ವರ್ಷಗಳ ಕಾಲ ನಿರ್ವಹಿಸಿದ್ದೇನೆ. ನನಗೆ ಕೆಲಸ ಸಮಯದಲ್ಲಿ ಸಹಕರಿಸಿದ ಎಲ್ಲಾ ಹಿರಿಯ ಅಧಿಕಾರಿಗಳಿಗೆ ಹಾಗು ಸಹುದ್ಯೋಗಿ ಮಿತ್ರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಕೃಷ್ಣಮೂರ್ತಿ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು.
ರಾಯಲ್ಪಾಡಿನ ಪೋಸ್ಟ್ ಆಫೀಸ್‍ನ ಕೃಷ್ಣಮೂರ್ತಿಯವರು ಎಬಿಪಿಎಂ ಆಗಿ 31ವರ್ಷ ಕಾರ್ಯನಿರ್ವಹಿಸಿರುವ ನಿವೃತ್ತರಾಗಿರುವ ಹಿನ್ನೆಲೆಯಲ್ಲಿ ಇಲಾಖೆವತಿಯಿಂದ ಹಾಗು ಗ್ರಾಮದ ಮುಖಂಡರು ಸನ್ಮಾನಿಸಿದರು.
ಅಧೀಕ್ಷಕರಾದ ಅವದೇಶ್‍ಸಿಂಗ್,ಮೆಲ್ವರಿಸಿಗಳಾದ ರಘುನಾಥ್,ಕೃಷ್ಣಪ್ಪ ಹಾಗು ಪೋಸ್ಟ್‍ಮಾಸ್ಟರ್ ಎಂ.ಕರುಣಾಕರ ಹಾಗು ಗ್ರಾ.ಪಂ. ಸದಸ್ಯರಾದ ಆರ್.ಗಂಗಾದರ್,ಅಶೋಕ್,ನಾಗೇಶ್,ಗ್ರಾಮದ ಮುಖಂಡರಾದ ಮದನಮೋಹನರೆಡ್ಡಿ,ಬ್ರಹ್ಮಯ್ಯ,ದೇವರಾಜ್, ವೆಂಕಟೇಶ್,ಸತೀಶ್, ಮಂಜುನಾಥರೆಡ್ಡಿ ಸುರೇಶ್ ಇದ್ದರು

ರಾಯಲ್ಪಾಡು : ಕೊರೋನಾ ಮಾಹಮಾರಿ ವೈರಸ್ ಹರಡದಂತೆ ನಿತ್ಯ ಜನಸಾಮಾನ್ಯರಿಗೆ ಅರಿವು; ಮೂಡಿಸಿವೈ.ಆರ್. ರಾಮಾಜನೇಯ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ರಾಯಲ್ಪಾಡು : ಕೊರೋನಾ ಮಾಹಮಾರಿ ವೈರಸ್ ಹರಡದಂತೆ ನಿತ್ಯ ಜನಸಾಮಾನ್ಯರಿಗೆ ಅರಿವು ಮೂಡಿಸಿ , ಜನರ ಆರೋಗ್ಯ ರಕ್ಷಣೆಗೆ ಪಣ ತೊಟ್ಟಿರುವ ಕೊರೋನಾ ವಾರಿಯರ್ಸ್‍ಗಳು ನಿಸ್ವಾರ್ಥ ಸೇವೆಯನ್ನು ಮಾಡುತ್ತಿದ್ದಾರೆಂದು ಎಂದು ಮುಖಂಡ ವೈ.ಆರ್. ರಾಮಾಜನೇಯ ತಿಳಿಸಿದರು.
ಅಡ್ಡಗಲ್‍ನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗುರುವಾರ ಆಶಾ ಕಾರ್ಯಕರ್ತೆಯರಿಗೆ ಡಿಸಿಸಿ ಬ್ಯಾಂಕ್ ವತಿಯಿಂದ ನೀಡಲಾದ ದಿನಸಿಕಿಟ್ ಹಾಗು ಸೀರೆಗಳನ್ನು ವಿತರಿಸಿ ಮಾತನಾಡಿದರು.
ಡಿಸಿಸಿ ಬ್ಯಾಂಕ್‍ವತಿಯಿಂದ ನೀಡಲಾದ ದಿನಸಿಕಿಟ್ ಹಾಗು ಸೀರೆಗಳನ್ನು ಶಾಸಕ ಕೆ.ಆರ್.ರಮೇಶ್‍ಕುಮಾರ್‍ರವರ ಮಾರ್ಗದರ್ಶನದಲ್ಲಿ ಹೋಬಳಿಯ ಎಲ್ಲಾ ಸರ್ಕಾರಿ ಆಸ್ಪತ್ರೆಗಳ ಆಶಾ ಕಾರ್ಯಕರ್ತೆಯರಿಗೆ ವಿತರಿಸಲಾಯಿತು ಎಂದರು.
ಡಾ||ಕೆ.ಆರ್.ಕವಿತ ಮಾತನಾಡಿ ಕೊರೋನಾ ನಿರ್ಮೂಲನೆ ಮಾಡಲು ಪ್ರತಿಯೊಬ್ಬರು ಕೈಜೋಡಿಸಬೇಕು . ಕೊರೋನಾ ತಡೆಗಟ್ಟಲು ಹಗಲಿರಲು ಶ್ರಮಿಸುತ್ತಿರುವ ಆಶಾ ಕಾರ್ಯಕರ್ತೆಯರು ತಮ್ಮ ಆರೋಗ್ಯದ ಬಗ್ಗೆಯು ಕಾಳಜಿ ವಹಿಸುತ್ತಾ, ಜನರ ಸೇವೆ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಸಾಮಾಜಿಕ ಜಾಲತಾಣದ ತಾಲೂಕು ಅಧ್ಯಕ್ಷ ಮರಿಮಾಕಲಪಲ್ಲಿ ವೇಣು, ಕಾರ್ಯಕರ್ತರಾದ ಶಿವರಾಜ್,ಹರಿ ಆರೋಗ್ಯ ಕೇಂದ್ರ ಸಿಬ್ಬಂದಿ ನಾಗರಾಜ್ ಇತರರು ಇದ್ದರು.

ಕೆಥೊಲಿಕ್ ಸಭಾ ಕುಂದಾಪುರ – ಪಡಿತರ ಕಿಟ್ ವಿತರಣೆ

ಕುಂದಾಪುರ: ಕೆಥೊಲಿಕ್ ಸಭಾ ಕುಂದಾಪುರ ಘಟಕ ವತಿಯಿಂದ ಕಿಟ್ ವಿತರಣಾ ಕಾರ್ಯಕ್ರಮವು ಇಲ್ಲಿನ ಹೋಲಿ ರೋಸರಿ ಚರ್ಚ್ ಸಭಾಂಗಣದಲ್ಲಿ ನಡೆಯಿತು.

ಹೋಲಿ ರೋಸರಿ ಚರ್ಚ್ ನ ಪ್ರಧಾನ ಧರ್ಮಗುರುಗಳಾದ ಅತಿವಂದನೀಯ ಸ್ಟ್ಯಾನಿ ತಾವ್ರೋ ಮಾತನಾಡಿ, ಕೊರೋನ ಸಂಕಷ್ಟದ ಸಮಯದಲ್ಲಿ ಜನಸಾಮಾನ್ಯರ ಕಷ್ಟಕ್ಕೆ ಸ್ಪಂದಿಸಿದ ಕೆಥೊಲಿಕ್ ಸಭಾದ ಸೇವೆ ಶ್ಲಾಘನೀಯ ಎಂದರು.

ಈ ಸಂದರ್ಭದಲ್ಲಿ ಸಹಾಯಕ ಧರ್ಮಗುರುಗಳಾದ ವಂ. ವಿಜಯ ಡಿಸೋಜ, ಕೆಥೊಲಿಕ್ ಸಭಾ ಘಟಕದ ಅಧ್ಯಕ್ಷರಾದ ಬರ್ನಾರ್ಡ್ ಡಿಕೋಸ್ಟಾ, ಪದಾಧಿಕಾರಿಗಳಾದ ಡಾ. ಸೋನಿ ಡಿಕೋಸ್ಟಾ, ವಿನ್ಸೆಂಟ್ ಡಿಸೋಜ, ಶೈಲಾ ಅಲ್ಮೇಡಾ, ಪ್ರೇಮಾ ಡಿಕುನ್ಹಾ, ಮಾರ್ಕ್ ಡಿಸೋಜಾ, ಉಲ್ಲಾಸ್ ಕ್ರಾಸ್ತಾ, ಲೋನಾ ಡಿಸೋಜ, ವಿನೋದ್ ಕ್ರಾಸ್ಟೋ ಮತ್ತು ಪಾಲನಾ ಮಂಡಳಿಯ ಪದಾಧಿಕಾರಿಗಳಾದ ಲೂವಿಸ್ ಫರ್ನಾಂಡೀಸ್, ಆಶಾ ಕಾರ್ವಾಲ್ಲೊ ಉಪಸ್ಥಿತರಿದ್ದರು.

ಕೆಥೋಲಿಕ್ ಸಭಾ ನಿಯೋಜಿತ ಅಧ್ಯಕ್ಷರಾದ ಜೂಲಿಯಟ್ ಪಾಯ್ಸ್ ಸ್ವಾಗತಿ, ವಿಲ್ಸನ್ ಅಲ್ಮೇಡಾ ನಿರೂಪಿಸಿ ಕಾರ್ಯದರ್ಶಿ ಆಲ್ಡ್ರಿನ್ ಡಿಸೋಜಾ ವಂದಿಸಿದರು.

ಕಠಾರಿಪಾಳ್ಯ ಶ್ರೀ ಧರ್ಮರಾಯಸ್ವಾಮಿ ದೇವಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ಕೊವಿಡ್-19 ಲಸಿಕಾ ಅಭಿಯಾನಕ್ಕೆ ಕೋಲಾರ ನಗರಸಭೆ ಅಧ್ಯಕ್ಷೆ ಶ್ವೇತ ಶಬರೀಶ್ ರವರು ಚಾಲನೆ ನೀಡಿದರು.

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ:- ನಗರದ ಕಠಾರಿಪಾಳ್ಯ ಶ್ರೀ ಧರ್ಮರಾಯಸ್ವಾಮಿ ದೇವಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ಕೊವಿಡ್-19 ಲಸಿಕಾ ಅಭಿಯಾನಕ್ಕೆ ಕೋಲಾರ ನಗರಸಭೆ ಅಧ್ಯಕ್ಷೆ ಶ್ವೇತ ಶಬರೀಶ್ ರವರು ಚಾಲನೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಕುಡಾ ಅಧ್ಯಕ್ಷ ಓಂ ಶಕ್ತಿ ಚಲಪತಿ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಮಂಜುನಾಥ್, ವಿಶ್ವೇಶ್ವರಯ್ಯ ಇಂಟರ್ ನಾಷನಲ್ ಶಾಲೆಯ ಕಾರ್ಯದರ್ಶಿ ಶಬರೀಶ್ ಯಾದವ್, ಮುಖಂಡರಾದ ಟಿಲ್ಲಿ ಮಂಜುನಾಥ್, ಮು.ರಾಘವೇಂದ್ರ, ಮಹೇಂದ್ರ ಗಾಣಿಗ, ಹರೀಶ್, ಅಂಚೆ ವಿಜಿ, ಆರೋಗ್ಯ ಇಲಾಖೆಯ ಶುಶ್ರೂಷಕಿ ಮಂಜುಳ, ಪುಷ್ಪ, ರೇಣುಕಾ, ಕಾವ್ಯಾ, ಆಶಾ ಕಾರ್ಯಕರ್ತೆ ಶಾಂತಿ ಮತ್ತಿತರರು ಭಾಗವಹಿಸಿದ್ದರು.
ಈ ಲಸಿಕಾ ಅಭಿಯಾನದಲ್ಲ್ಲಿ 18 ವರ್ಷ ಹಾಗೂ 45 ವರ್ಷ ಮೇಲ್ಪಟ್ಟ ನೂರಾರು ಮಂದಿಗೆ ಕೋವಿಶೀಲ್ಡ್ ಲಸಿಕೆ ಹಾಕಲಾಯಿತು.