HOLY ROSARY CHURCH, KUNDAPUR – 450 th JUBILEE SOUVENIR 2021

ಮೂಡ್ಲಕಟ್ಟೆ ಎಂ ಐ ಟಿ : ಇಂಜಿನಿಯರ್ ದಿನಾಚರಣೆ

JANANUDI.COM NETWORK

ಕುಂದಾಪುರದ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸರ್ ಎಂ ವಿಶ್ವೇಶ್ವರಯ್ಯ ಅವರ ಜನ್ಮಚಾರಣೆ ದಿನ ಅಂಗವಾಗಿ ಇಂಜಿನಿಯರ್ ದಿನವನ್ನು ಆಚರಿಸಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಡಾ. ಚಂದ್ರರಾವ್ ಮದಾನೆ ಮತ್ತು ಉಪ ಪ್ರಾಂಶುಪಾಲ ಪ್ರೊ. ಮೆಲ್ವಿನ್ ಡಿ ಸೋಜ ರವರು ವಿಶ್ವೇಶ್ವರಯ್ಯ ರವರ ಮೂರ್ತಿಗೆ ಮಾಲಾರ್ಪಣೆ ಮಾಡಿ ನಮನ ಸಲ್ಲಿಸಿದರು. ಸರ್ ಎಂ ವಿ ರವರು ಪ್ರಾಮಾಣಿಕತೆ ಮತ್ತು ಸಾಧನೆಯ ವಿಷಯಗಳ ಮೇಲೆ ಪ್ರಾಂಶುಪಾಲರು ಹಲವು ಸನ್ನಿವೇಶಗಳನ್ನ ವಿವರಿಸಿದರು. ಕಾರ್ಯಕ್ರಮದ ಅಂಗವಾಗಿ ಕಾಲೇಜಿನ ಸಂಸ್ಥಾಪಕಧ್ಯಕ್ಷ ರಾದ ದಿವಂಗತಾ ಐ ಎಂ ಜಯರಾಮ ಶೆಟ್ಟಿ ಅವರು ಒಬ್ಬ ಇಂಜಿನಿಯರ್ ಆಗಿದ್ದು, ಅವರ ಪ್ರತಿಮೆಗೆ ಕೂಡ ಮಾಲಾರ್ಪಣೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಕಾಲೇಜಿನ ಡೀನ್, ಎಲ್ಲಾ ವಿಭಾಗದ ಮುಖ್ಯಸ್ಥರು ಉಪಸ್ಥಿತರಿದ್ದರು. ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಪ್ರೊ. ಪ್ರಸನ್ನಕುಮಾರ್ ಸ್ವಾಗತಿಸಿ, ಗಣಿತ ಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ ದೀಪಕ್ ಶೆಟ್ಟಿ ಧನ್ಯವಾದ ಅರ್ಪಿಸಿದರು.

130 ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು:ಕೊನೆಗೂ ಕೊರೊನಾದಿಂದ ಗೆದ್ದ ಮೀರತ್‌ನ ವಿಶ್ವಾಸ್‌ ಸೈನಿ

JANANUDI.COM NETWORK

ಉತ್ತರ ಪ್ರದೇಶದ ಮೂಲದ ವಿಶ್ವಾಸ್‌ ಸೈನಿ(39) ಸತತ 130 ದಿನಗಳ ಕಾಲ ಕೊರೊನಾ ವೈರಸ್‌ನೊಂದಿಗೆ ಆಸ್ಪತ್ರೆಯಲ್ಲಿ ಹೋರಾಡಿ ಕೊನೆಗೂ ಕೊರೊನಾ ಗೆದ್ದು ಮನೆಗೆ ಬಂದಿದ್ದಾರೆ. ವಿಶ್ವಾಸ್‌ ಸೈನಿ ಕೊರೊನಾ ಪಾಸಿಟಿವ್‌ ಆದ ಹಿನ್ನೆಲೆ ಆಸ್ಪತ್ರೆಯಲ್ಲಿ ದಾಖಲಾಗಿದ್ದರು ಕೊರೊನಾ ಗುಣವಾಗದ ಹಿನ್ನೆಲೆಯಲ್ಲಿ ಸತತ 130 ದಿನಗಳ ಕಾಲ ಚಿಕಿತ್ಸೆ ಪಡೆಯ ಬೇಕಾಯ್ತು. ಇದೀಗ ಕೊರೊನಾ ವಿರುದ್ಧದ ಹೋರಾಟದಲ್ಲಿ ಅವರು ಗೆದ್ದಿದ್ದಾರೆ.

ಸೈನಿ ಅವರು ಕೊರೊನಾದಿಂದ ಮುಕ್ತವಾಗಿದ್ದಾರೆ. ಎಪ್ರಿಲ್‌ 28 ರಂದು ಅವರಿಗೆ ಕೊರೊನಾ ಪರೀಕ್ಷೆ ನಡೆಸಿದಾಗ ಪಾಸಿಟಿವ್‌ ಇರುವುದು ತಿಳಿದುಬಂದಿತ್ತು. ಆದರೆ ಆರಂಭದಲ್ಲಿ ಅವರಿಗೆ ಮನೆಯಲ್ಲಿ ಅವರ ಆರೋಗ್ಯ ಸ್ಥಿತಿ ತೀರ ಹದಗೆಟ್ಟು ಮೀರತ್‌ನ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಪ್ರಮುಖವಾಗಿ ಅವರಿಗೆ ವೆಂಟಿಲೇಟರ್‌ ಮೂಲಕವೇ ಚಿಕಿತ್ಸೆ ನೀಡಲಾಗುತ್ತಿತ್ತು, ಹೀಗೆ ಸತತ 130 ದಿನಗಳ ಕಾಲ ಅವರಿಗೆ ಚಿಕಿತ್ಸೆ ನೀಡಿದ ಬಳಿಕ ಇದೀಗ ಅವರು ಗುಣಮುಖರಾಗಿದ್ದಾರೆ. ಸದ್ಯ ಕೊರೊನಾದ್ದಿಂದ ಅವರು ಮುಕ್ತರಾಗಿದ್ದಾರೆ, ಆದರೆ ಈಗಾಲೂ ಅವರಿಗೆ ಉಸಿರಾಟದ ಸಮಸ್ಯೆ ಇದೆ.

ಜಾತಿ , ಧರ್ಮ , ಮತ ಬೇಧ ಬಿಟ್ಟು ಎಲ್ಲರಿಗೂ ಅಕ್ಷರ ಕಲಿಸಿ ಸಂಪೂರ್ಣ ಸಾಕ್ಷರ ಗ್ರಾಮಗಳಾಗಿಸಿ ಅಪರ ಡಿಸಿ ಸ್ನೇಹಾ ಕರೆ

ವರದಿ : ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಕೋಲಾರ : – ಜಾತಿ , ಧರ್ಮ , ಮತ ಬೇಧ ಬಿಟ್ಟು ಪ್ರತಿ ಅನಕ್ಷರಸ್ಥರಿಗೂ ಅಕ್ಷರ ಕಲಿಸುವ ಮೂಲಕ ಸಂಪೂರ್ಣ ಸಾಕ್ಷರ ಗ್ರಾಮಗಳನ್ನಾಗಿಸವಂತೆ ಅಪರ ಜಿಲ್ಲಾಧಿಕಾರಿ ಹಾಗೂ ತಾಪಂ ಆಡಳಿತಾಧಿಕಾರಿ ಡಾ.ಸಿ.ವಿ.ಸ್ನೇಹಾ ಕರೆ ನೀಡಿದರು . ನಗರದ ತಾಪಂ ಕಚೇರಿ ಮುಂಭಾಗ ಅಂತರರಾಷ್ಟ್ರೀಯ ಸಾಕ್ಷರತಾ ಧ್ವಜಾರೋಹಣ ನೆರವೇರಿಸಿ , ಸಾಕ್ಷರತಾ ಪ್ರತಿಜ್ಞೆ ಬೋಧಿಸಿ ಮಾತನಾಡಿದ ಅವರು , ಸಾಕ್ಷರತೆಯಿಂದ ಮಾತ್ರವೇ ದೇಶದ ಸಮಗ್ರ ಅಭಿವೃದ್ಧಿ ಸಾಧ್ಯ ಎಂಬುದನ್ನು ಅರಿತು ಪ್ರತಿಯೊಬ್ಬರಿಗೂ ಅಕ್ಷರ ಜ್ಞಾನ ಮೂಡಿಸಿ ಎಂದು ಸಲಹೆ ನೀಡಿದರು . ಹೆಣ್ಣೆಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಮಾತಿನಂತೆ ಪ್ರತಿಮನೆಯ ಅಕ್ಷರಕಲಿಕಾ ಕೇಂದ್ರವಾಗಲಿ , ಪ್ರತಿಯೊಬ್ಬರೂ ಅಕ್ಷರಸ್ಥರಾಗಲಿ ಎಂಬ ಧೈಯದೊಂದಿಗೆ ಸಾಕ್ಷರತಾ ಪ್ರೇರಕರು ಕೆಲಸ ಮಾಡಬೇಕು ಎಂದರು . ಸರ್ಕಾರದ ಯೋಜನೆಗಳ ಕುರಿತು ಅರಿವು ಪಡೆಯಲು ಅಕ್ಷರ ಜ್ಞಾನದ ಅಗತ್ಯವಿದೆ ಎಂದ ಅವರು , ಇದೀಗ ತಂತ್ರಜ್ಞಾನ ಮುಂದುವರೆದಿದ್ದು , ಅಕ್ಷರದ ಜತೆಗೆ ಡಿಜಿಟಲ್ ಕಲಿಕೆಗೂ ಒತ್ತು ನೀಡಬೇಕಾಗಿದೆ ಎಂದು ಸೂಚಿಸಿದರು . ಸರ್ಕಾರದ ಅನೇಕ ಯೋಜನೆಗಳು ಅನಕ್ಷರಸ್ತರಿಗೆ ತಲುಪುವುದೇ ಇಲ್ಲ . ಇದರಿಂದ ಸಮಾಜದಲ್ಲಿ ಆರ್ಥಿಕ ಅಸಮಾನತೆ ತೊಡೆದು ಹಾಕಲು ಸಾಧ್ಯವಿಲ್ಲ ಎಂದ ಅವರು , ಪ್ರತಿಯೊಬ್ಬರೂ ಸಾಕರರಾಗುವ ಗತ್ಯವಿದೆ ಎಂದು ತಿಳಿಸಿದರು .
ಲೋಕಶಿಕ್ಷಣ ಸಮಿತಿ ಕಾರ್ಯಕ್ರಮ ಸಹಾಯಕ ಡಿ.ಆರ್‌.ರಾಜಪ್ಪ ಮಾತನಾಡಿ , ಪ್ರತಿಯೊಬ್ಬರೂ ಸಾಕ್ಷರರಾದರೆ ಅಕ್ಷರದ ಜೊತೆಗೆ ಆರೋಗ್ಯ ಮತ್ತು ಅಭಿವೃದ್ದಿಯೂ ಜತೆಯಲ್ಲೇ ಅವರದ್ದಾಗುತ್ತದೆ ಎಂದು ತಿಳಿಸಿ ಅಕ್ಷರಜ್ಞಾನದಿಂದ ಬದುಕು ಉಜ್ವಲವಾಗುತ್ತದೆ ಎಂದು ತಿಳಿಸಿದರು . ಇದೇ ಸಂದರ್ಭದಲ್ಲಿ ಅಪರ ಡಿಸಿ ಡಾ.ಸ್ನೇಹಾ ಸಾಕ್ಷರತಾ ಪ್ರತಿಜ್ಞಾವಿಧಿ ಬೋಧಿಸಿದರು . ಕಾರ್ಯಕ್ರಮದಲ್ಲಿ ರತ್ನಮಾಲಾ ಮಹಿಳಾ ಮಂಡಳಿ ಕಾರ್ಯದರ್ಶಿ ರತ್ನಮಾಲಾ , ಸ್ತ್ರೀಶಕ್ತಿ ಸಂಘಗಳ ಒಕ್ಕೂಟದ ಅಧ್ಯಕ್ಷೆ ನಳಿನಿ , ತಾಲ್ಲೂಕು ಸಂಯೋಜಕ ಸಿ.ಅಶ್ವಥ್ , ಶ್ರೀರಾಮ್ , ಅರಾಬಿಕೊತ್ತನೂರು ರಾಮಚಂದ್ರಪ್ಪ , ಸಿಬ್ಬಂದಿ , ಕಲಿಕಾರ್ಥಿಗಳು , ಬೋಧಕರು ಹಾಜರಿದ್ದರು .

ಶ್ರೀನಿವಾಸಪುರದ ದಲಿತ ವಿದ್ಯಾರ್ಥಿನಿಯರ ಮತ್ತು ಪೋಷಕರ ಮೇಲೆ ಹಲ್ಲೆ ಆರೋಪಿಗಳ ಗಡಿಪಾರಿಗೆ ಭಾರತೀಯರ ಸೇವಾ ಸಮಿತಿ ಒತ್ತಾಯ

ವರದಿ :ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಕೋಲಾರ : ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿನಿಯರು ಹಾಗೂ ಅವರ ಪೋಷಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಭಾರತೀಯರ ಸೇವಾ ಸಮಿತಿ ಸಂಸ್ಥಾಪಕ ರಾಜ್ಯ ಅಧ್ಯಕ್ಷ ಡಾ.ಹೆಚ್.ಎಂ.ರಾಮಚಂದ್ರ ( ಹೂಡಿ ಚಿನ್ನಿ ) ಹಾಗೂ ಜೆಡಿಎಸ್ ರಾಜ್ಯ ವಕ್ತಾರರ ಅಮರ್ ಚಿಂತಾಮಣಿ ಹಾಗೂ ರಾಜ್ಯ ಪದಾಧಿಕಾರಿಗಳು ಜಿಲ್ಲಾ ಪದಾಧಿಕಾರಿಗಳು ಶ್ರೀನಿವಾಸಪು ತಹಶೀಲ್ದಾರ್ ರವರಿಗೆ ಮನವಿ ನೀಡಿ ಒತ್ತಾಯಿಸಿದ್ದಾರೆ . ಎರಡು ಗುಂಪುಗಳ ನಡುವೆ ನಡೆದ ಘರ್ಷಣೆ ಸಂದರ್ಭದಲ್ಲಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿನಿಯರ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿರುವುದು ಖಂಡನೀಯ . ಈ ಘಟನೆಯಿಂದ ಪೋಷಕರು ಹೆಣ್ಣುಮಕ್ಕಳನ್ನು ಶಾಲಾ , ಕಾಲೇಜಿಗೆ ಕಳುಹಿಸಲು ಹೆದರುವಂತಾಗಿದೆ ಎಂದು ತಹಶೀಲ್ದಾರ್‌ಗೆ ನೀಡಿದ ಮನವಿ ಪತ್ರದಲ್ಲಿ ತಿಳಿಸಲಾಗಿದೆ . ವಿದ್ಯಾರ್ಥಿನಿಯರ ಮೇಲೆ ಹಲ್ಲೆ ನಡೆಸಿರುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು . ಹಾಗೂ ಗಡಿಪಾರು ಮಾಡಬೇಕು . ಸಂಬಂಧಪಟ್ಟ ಅಧಿಕಾರಿಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಆಯಾ ಪ್ರದೇಶದ ಸಬ್ ಇನ್ಸ್‌ಪೆಕ್ಟರ್ ರವರು ಶಾಲಾ , ಕಾಲೇಜುಗಳಲ್ಲಿ ಕುಂದುಕೊರತೆ ವಿಚಾರಣಾ ಸಭೆ ನಡೆಸಬೇಕು . ಸಮಸ್ಯೆಗಳಿಗೆ ಸ್ಪಂದಿಸಿ ಸಮಸ್ಯೆಗಳನ್ನು ಆಗಿಂದಾಗ್ಗೆ . ಬಗೆಹರಿಸಬೇಕು ಎಂದು ಒತ್ತಾಯಿಸಿ , ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು ತಹಶೀಲ್ದಾರ್‌ಗೆ ನೀಡಲಾಯಿತು .
ಈ ಸಂದಭ್ರದಲ್ಲಿ ಪದಾಧಿಕಾರಿಗಳಾದ ಸಂತೋಷ್ ಕುಮಾರ್ , ವಿ.ಶ್ರೀನಿವಾಸ್ , ವೆಂಕಟೇಶಪ್ಪ , ಪೂಜೇಶ್ , ವೆಂಕಟಸ್ವಾಮಿ , ಪ್ರಶಾಂತ್ , ವರದರಾಜ್ , ಮುನಿಯಪ್ಪ , ಪ್ರಭಾಕರ್ , ಶೈಲಜಾ , ಗುರುಮೂರ್ತಿ , ಮುರಳಿ , ನಾರಾಯಣಸ್ವಾಮಿ , ಮಂಜುಳ , ಮುನಿಯಪ್ಪ , ಅಶ್ವಥ್ , ಕೃಷ್ಣಪ್ಪ ಚಿಂತಾಮಣಿ , ಲಕ್ಷ್ಮೀ ಇನ್ನು ಮುಂತಾದವರು ಭಾಗವಹಿಸಿದ್ದರು .

ರೋಟರಿ ಸೆಂಟ್ರಲ್‍ನಿಂದ ಮಾಸ್ಕ್, ಸ್ಯಾನಿಟೈಸರ್ ವಿತರಣೆ ಸರ್‍ಎಂ.ವಿಶ್ವೇಶ್ವರಯ್ಯನವರ ಆದರ್ಶ ಪಾಲಿಸಲು ಶ್ರೀನಾಥ್ ಕರೆ

ವರದಿ:ಶಬ್ಬೀರ್ಅಹಮ್ಮದ್,ಶ್ರೀನಿವಾಸಪುರ

ಕೋಲಾರ:- ನಮ್ಮ ನಾಡಿನ ಹೆಮ್ಮೆಯ ಪುತ್ರ ಸರ್ ಎಂ ವಿಶ್ವೇಶ್ವರಯ್ಯ ಅವರಿಗೆ ನಮಿಸೋಣ ಅವರು ಕಲಿಸಿಕೊಟ್ಟು ಶ್ರಮ ಪ್ರಾಮಾಣಿಕತೆಯ ಪಾಠವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ .ದೇಶದ ಅಭಿವೃದ್ಧಿಗೆ ನಮ್ಮ ಕೊಡುಗೆಯನ್ನು ನೀಡುವತ್ತ ಚಿಂತಿಸೋಣ ಎಂದು ರೋಟರಿ ಸೆಂಟ್ರಲ್ ಅಧ್ಯಕ್ಷ ಸಿ.ಎಂ.ಆರ್.ಶ್ರೀನಾಥ್ ತಿಳಿಸಿದರು .
ನಗರದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿಂದು ಕೋಲಾರ ರೋಟರಿ ಸೆಂಟ್ರಲ್ ಮತ್ತು ಜಿಲ್ಲಾ ಭಾರತ ಸೇವಾದಳ ಏರ್ಪಡಿಸಿದ್ದ ಸರ್ ಎಂ ವಿಶ್ವೇಶ್ವರಯ್ಯ ಜಯಂತಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಸಾನಿಟೈಸರ್ ಮಾಸ್ಕ್‍ಗಳನ್ನು ನೀಡಿ ಅವರು ಮಾತನಾಡುತ್ತಿದ್ದರು
ಕರುನಾಡಿನ ಹೆಮ್ಮೆಯ ಪುತ್ರರಾಗಿದ್ದ ಸರ್.ಎಂ.ವಿಶ್ವೇಶ್ವರಯ್ಯ ದೇಶದ ಶ್ರೇಷ್ಠÀ್ಠ ಆಸ್ತಿ. ಭಾರತ ಕಂಡ ಅಪ್ರತಿಮ ಇಂಜಿನಿಯರ್ ಆಗಿದ್ದ ಅವರ ಕೌಶಲ್ಯ ದೂರದರ್ಶಿತ್ವದ ಯೋಜನೆಗಳು ಎಂದಿಗೂ ಶಾಶ್ವತ ಎಂದರು. ಜ್ಞಾನ ಎಲ್ಲವೂ ಅದ್ಭುತ ನಮ್ಮ ನೆಲದ ಸಾಕ್ಷಿಪ್ರಜ್ಞೆ ಯಾಗಬೇಕಿದ್ದ ರವರು. ಅವರ ಜೀವನ ಆದರ್ಶ ಸಂದೇಶಗಳು ಇಂದಿಗೂ ಎಲ್ಲರಿಗೂ ದಾರಿದೀಪವಾಗಿದೆ ಎಂದು ಅವರು ತಿಳಿಸಿದರು
ಭಾವಚಿತ್ರಕ್ಕೆ ಪುಷ್ಪಾಂಜಲಿ ಅರ್ಪಿಸಿ ಭಾರತ ಸೇವಾದಳ ಜಿಲ್ಲಾಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ ಒಬ್ಬ ವ್ಯಕ್ತಿ ಇನ್ನೊಬ್ಬರ ಜೀವನವನ್ನು ರೂಪಿಸಲು ಸಾಧ್ಯವಿಲ್ಲ. ನಿಮ್ಮ ಮನಸ್ಸು ಮತ್ತು ಸಂತೋಷ ನಿಮ್ಮ ಮೇಲೆ ಅವಲಂಬಿತವಾಗಿರುತ್ತದೆ ನೀವೇ ಯೋಚಿಸಿ ಮತ್ತು ಜೀವನವನ್ನು ರೂಪಿಸಿ ಎಂದು ತಿಳಿಸಿದ ವಿಶ್ವೇಶ್ವರಯ್ಯ ರವರ ಆದರ್ಶಗಳು ಯುವ ಜನಾಂಗ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುತ್ತಿವೆ ಎಂದರು .
ನಮ್ಮ ಕೆಲಸದಲ್ಲಿ ಯಶಸ್ಸು ಗಳಿಸಬೇಕಾದರೆ ಮೊದಲು ಆ ಕೆಲಸವನ್ನು ಪ್ರೀತಿಸಬೇಕು ಹಾಗಾಗಿ ಇಂಜಿನಿಯರ್‍ಗಳ ಶಿಲ್ಪಿ ಎಂದು ಖ್ಯಾತರಾಗಿದ್ದ ಮೈಸೂರು ದಿವಾನ್ ಸರ್ ಎಂ ವಿಶ್ವೇಶ್ವರಯ್ಯ ಅವರು ನಮ್ಮ ಜಿಲ್ಲೆಯವರು ಎಂದು ಹೇಳಲು ಹೆಮ್ಮೆಯಾಗುತ್ತದೆ ಎಂದು ಜಿಲ್ಲಾ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಜಿ ಶ್ರೀನಿವಾಸ್ ತಿಳಿಸಿದರು .
ರೋಟರಿ ಸೆಂಟ್ರಲ್ ಕಾರ್ಯದರ್ಶಿ ಸುಧಾಕರ್ ಮಾತನಾಡಿ ಹಣದಿಂದ ಖರೀದಿಸಬಹುದಾದ ಅಥವಾ ಅಳೆಯುವಂತಹದ್ದನ್ನು ಹೊರತುಪಡಿಸಿ ಬೇರೆ ಏನನ್ನಾದರೂ ಸಾಧಿಸಿದರೆ ಮಾತ್ರ ನಿಜವಾದ ಸೇವೆ ನೀಡಬಹುದು. ಈಗಾಗಲೇ ನಮ್ಮ ವ್ಯಾಪ್ತಿಯಲ್ಲಿ ಸರ್ಕಾರಿ ಶಾಲೆಗಳನ್ನು ಸೇರಿದಂತೆ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಕೋವಿಡ್‍ಗೆ ಸಂಬಂಧಪಟ್ಟ ಸಲಕರಣೆ ವಸ್ತುಗಳನ್ನು ರೋಟರಿ ಸೆಂಟ್ರಲ್ ನೀಡುತ್ತಿದೆ ಎಂದು ತಿಳಿಸಿದರು . ಸಮಾರಂಭದ ಅಧ್ಯಕ್ಷತೆಯನ್ನು ಪ್ರೌಢಶಾಲಾ ಮುಖ್ಯೋಪಾದ್ಯಾಯಿನಿ ಕೆ. ಸುನಂದಮ್ಮ ವಹಿಸಿದ್ದು. ಭಾರತ ಸೇವಾದಳದ ಸಂಘಟಕ ದಾನೇಶ್, ರೋಟರಿ ಸೆಂಟ್ರಲ್ ನಿರ್ದೇಶಕರಾದ ಕದಂಬ ಸೋಮಶೇಖರ್ ಶಾಲಾ ಅಧ್ಯಾಪಕರುಗಳಾದ ಲೋಕೇಶಪ್ಪ ದಟ್ಟರ, ಭಾಗ್ಯ ,ಸಂತೋಷಕುಮಾರಿ, ಕೆ ನಾರಾಯಣ ರೆಡ್ಡಿ, ಕೆ.ವಿ.ಪ್ರಭಾವತಿ, ಪ್ರಮೀಳಾ, ಫರಿದಾ ಬೇಗಂ ಸಿಬ್ಬಂದಿ ಮತ್ತಿತರರು ಹಾಜರಿದ್ದರು ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಸ್ಯಾನಿಟೈಜರ್ ಮಾಸ್ಕ್ ಗಳನ್ನು ವಿತರಿಸಲಾಯಿತು.

ಪ್ರಾಮಾಣಿಕತೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳೋಣ ; ಶ್ರೀನಾಥ್

ವರದಿ:ಶಬ್ಬೀರ್ಅಹಮ್ಮದ್,ಶ್ರೀನಿವಾಸಪುರ

ಕೋಲಾರ ಸೆ. 15 : ನಮ್ಮ ನಾಡಿನ ಹೆಮ್ಮೆಯ ಪುತ್ರ ಸರ್ ಎಂ ವಿಶ್ವೇಶ್ವರಯ್ಯ ಅವರಿಗೆ ನಮಿಸೋಣ ಅವರು ಕಲಿಸಿಕೊಟ್ಟು ಶ್ರಮ ಪ್ರಾಮಾಣಿಕತೆಯ ಪಾಠವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ .ದೇಶದ ಅಭಿವೃದ್ಧಿಗೆ ನಮ್ಮ ಕೊಡುಗೆಯನ್ನು ನೀಡುವತ್ತ ಚಿಂತಿಸೋಣ ಎಂದು ರೋಟರಿ ಸೆಂಟ್ರಲ್ ಅಧ್ಯಕ್ಷ ಸಿ ಎಂ ಆರ್ ಶ್ರೀನಾಥ್ ತಿಳಿಸಿದರು .
ನಗರದ ಸರ್ಕಾರಿ ಬಾಲಕಾ ಪ್ರೌಢಶಾಲೆಯಲ್ಲಿಂದು ಕೋಲಾರ ರೋಟರಿ ಸೆಂಟ್ರಲ್ ಮತ್ತು ಜಿಲ್ಲಾ ಭಾರತ ಸೇವಾದಳ ಏರ್ಪಡಿಸಿದ್ದ ಸರ್ ಎಂ ವಿಶ್ವೇಶ್ವರಯ್ಯ ಜಯಂತಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಸಾನಿಟೈಸರ್ ಮಾಸ್ಕ್‍ಗಳನ್ನು ನೀಡಿ ಅವರು ಮಾತನಾಡುತ್ತಿದ್ದರು
ಕರುನಾಡಿನ ಹೆಮ್ಮೆಯ ಪುತ್ರರಾಗಿದ್ದ ಸರ್.ಎಂ.ವಿಶ್ವೇಶ್ವರಯ್ಯ ದೇಶದ ಶ್ರೇಷ್ಠÀ್ಠ ಆಸ್ತಿ. ಭಾರತ ಕಂಡ ಅಪ್ರತಿಮ ಇಂಜಿನಿಯರ್ ಆಗಿದ್ದ ಅವರ ಕೌಶಲ್ಯ ದೂರದರ್ಶಿತ್ವದ ಯೋಜನೆಗಳು ಎಂದಿಗೂ ಶಾಶ್ವತ ಎಂದರು. ಜ್ಞಾನ ಎಲ್ಲವೂ ಅದ್ಭುತ ನಮ್ಮ ನೆಲದ ಸಾಕ್ಷಿಪ್ರಜ್ಞೆ ಯಾಗಬೇಕಿದ್ದ ರವರು. ಅವರ ಜೀವನ ಆದರ್ಶ ಸಂದೇಶಗಳು ಇಂದಿಗೂ ಎಲ್ಲರಿಗೂ ದಾರಿದೀಪವಾಗಿದೆ ಎಂದು ಅವರು ತಿಳಿಸಿದರು
ಭಾವಚಿತ್ರಕ್ಕೆ ಪುμÁ್ಪಂಜಲಿ ಅರ್ಪಿಸಿ ಭಾರತ ಸೇವಾದಳ ಜಿಲ್ಲಾಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ ಒಬ್ಬ ವ್ಯಕ್ತಿ ಇನ್ನೊಬ್ಬರ ಜೀವನವನ್ನು ರೂಪಿಸಲು ಸಾಧ್ಯವಿಲ್ಲ. ನಿಮ್ಮ ಮನಸ್ಸು ಮತ್ತು ಸಂತೋಷ ನಿಮ್ಮ ಮೇಲೆ ಅವಲಂಬಿತವಾಗಿರುತ್ತದೆ ನೀವೇ ಯೋಚಿಸಿ ಮತ್ತು ಜೀವನವನ್ನು ರೂಪಿಸಿ ಎಂದು ತಿಳಿಸಿದ ವಿಶ್ವೇಶ್ವರಯ್ಯ ರವರ ಆದರ್ಶಗಳು ಯುವ ಜನಾಂಗ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುತ್ತಿವೆ ಎಂದರು .
ನಮ್ಮ ಕೆಲಸದಲ್ಲಿ ಯಶಸ್ಸು ಗಳಿಸಬೇಕಾದರೆ ಮೊದಲು ಆ ಕೆಲಸವನ್ನು ಪ್ರೀತಿಸಬೇಕು ಹಾಗಾಗಿ ಇಂಜಿನಿಯರ್‍ಗಳ ಶಿಲ್ಪಿ ಎಂದು ಖ್ಯಾತರಾಗಿದ್ದ ಮೈಸೂರು ದಿವಾನ್ ಸರ್ ಎಂ ವಿಶ್ವೇಶ್ವರಯ್ಯ ಅವರು ನಮ್ಮ ಜಿಲ್ಲೆಯವರು ಎಂದು ಹೇಳಲು ಹೆಮ್ಮೆಯಾಗುತ್ತದೆ ಎಂದು ಜಿಲ್ಲಾ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಜಿ ಶ್ರೀನಿವಾಸ್ ತಿಳಿಸಿದರು .
ರೋಟರಿ ಸೆಂಟ್ರಲ್ ಕಾರ್ಯದರ್ಶಿ ಸುಧಾಕರ್ ಮಾತನಾಡಿ ಹಣದಿಂದ ಖರೀದಿಸಬಹುದಾದ ಅಥವಾ ಅಳೆಯುವಂತಹದ್ದನ್ನು ಹೊರತುಪಡಿಸಿ ಬೇರೆ ಏನನ್ನಾದರೂ ಸಾಧಿಸಿದರೆ ಮಾತ್ರ ನಿಜವಾದ ಸೇವೆ ನೀಡಬಹುದು. ಈಗಾಗಲೇ ನಮ್ಮ ವ್ಯಾಪ್ತಿಯಲ್ಲಿ ಸರ್ಕಾರಿ ಶಾಲೆಗಳನ್ನು ಸೇರಿದಂತೆ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಕೋವಿಡ್‍ಗೆ ಸಂಬಂಧಪಟ್ಟ ಸಲಕರಣೆ ವಸ್ತುಗಳನ್ನು ರೋಟರಿ ಸೆಂಟ್ರಲ್ ನೀಡುತ್ತಿದೆ ಎಂದು ತಿಳಿಸಿದರು .
ಸಮಾರಂಭದ ಅಧ್ಯಕ್ಷತೆಯನ್ನು ಪ್ರೌಢಶಾಲಾ ಮುಖ್ಯೋಪಾದ್ಯಾಯಿನಿ ಕೆ. ಸುನಂದಮ್ಮ ವಹಿಸಿದ್ದು. ಭಾರತ ಸೇವಾದಳದ ಸಂಘಟಕ ದಾನೇಶ್, ರೋಟರಿ ಸೆಂಟ್ರಲ್ ನಿರ್ದೇಶಕರಾದ ಕದಂಬ ಸೋಮಶೇಖರ್ ಶಾಲಾ ಅಧ್ಯಾಪಕರುಗಳಾದ ಲೋಕೇಶಪ್ಪ ದಟ್ಟರ, ಭಾಗ್ಯ ,ಸಂತೋಷ ಕುಮಾರಿ, ಕೆ ನಾರಾಯಣ ರೆಡ್ಡಿ, ಕೆ.ವಿ.ಪ್ರಭಾವತಿ, ಪ್ರಮೀಳಾ, ಫರಿದಾ ಬೇಗಂ ಸಿಬ್ಬಂದಿ ಮತ್ತಿತರರು ಹಾಜರಿದ್ದರು ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಸ್ಯಾನಿಟೈಜರ್ ಮಾಸ್ಕ್ ಗಳನ್ನು ವಿತರಿಸಲಾಯಿತು

ಕುಂದಾಪುರದ ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ‘ ಹಿಂದಿ ದಿವಸ್ ‘ ಆಚರಣೆ.

JANANUDI.COM NETWORK

” ಪ್ರತಿ ದಿನವೂ ಒಂದೊಂದು‌ ಹೊಸ ಹಿಂದಿ ಶಬ್ಧವನ್ನು ಕಲಿಯುವುದರ ಮೂಲಕ ರಾಷ್ಟ್ರಭಾಷಾಸಂಪತ್ತನ್ನು ಹೆಚ್ಚಿಸಿಕೊಳ್ಳಬೇಕು. ದಿನನಿತ್ಯದ ಸಂವಹನದಲ್ಲಿ ಬಳಸುವ ಮೂಲಕ ಮಾತ್ರ ಭಾಷೆಯೊಂದು ಸದಾಜೀವಂತವಾಗಿರುವುದಲ್ಲದೇ, ಸತತ ವೃದ್ಧಿಗೊಳ್ಳುವುದು. ” ಎಂದು   ಕುಂದಾಪುರದ ಆರ್.ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ  ಆಯೋಜಿಸಲಾದ ‘ ಹಿಂದಿ ದಿವಸ್ ‘ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಬಸ್ರೂರಿನ ನಿವೇದಿತಾ ಪ್ರೌಢ ಶಾಲೆಯ ಮಾಜಿ ಮುಖ್ಯೋಪಾಧ್ಯಾಯರೂ, ಹಿಂದಿ ಶಿಕ್ಷಕರೂ ಆದ ಶ್ರೀ ದಿನಕರ್ ಆರ್. ಶೆಟ್ಟಿಯವರು ಕರೆ ನೀಡಿದರು. ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥೆ ಶ್ರೀಮತಿ ಜಯಶೀಲಾ ಪೈಯವರು ಅತಿಥಿಗಳನ್ನು ಸ್ವಾಗತಿಸಿ, ತಮ್ಮ ಪ್ರಸ್ತಾವನಾ ನುಡಿಗಳಲ್ಲಿ ನಮ್ಮೆಲ್ಲರ ಅಭಿಮಾನದ ರಾಷ್ಟ್ರಭಾಷೆ ಹಿಂದಿಯ  ಬೆಳವಣಿಗೆಯ ಅಗತ್ಯತೆಯನ್ನು ತಿಳಿಸಿದರು‌. ಸಮಾರಂಭದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ನವೀನ ಕುಮಾರ ಶೆಟ್ಟಿಯವರು ಹಿಂದಿ ಭಾಷೆಯು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಯಶಸ್ವಿಯಾಗಲು ಹೇಗೆ ಸಹಕಾರಿಯಾಗುವುದೆಂದು ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ಹೇಳಿದರು.

ಈ ಸಂದರ್ಭದಲ್ಲಿ ಹಿಂದಿ ದಿನಾಚರಣೆಯ ಪ್ರಯುಕ್ತ ಹಮ್ಮಿಕೊಳ್ಳಲಾದ ಹಿಂದಿ ಪ್ರಬಂಧ ಮತ್ತು ಭಾಷಣ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಸಮಾರಂಭದಲ್ಲಿ ಮುಖ್ಯ ಅತಿಥಿಯವರಾದ ಶ್ರೀ ದಿನಕರ್. ಆರ್ . ಶೆಟ್ಟಿಯವರನ್ನು ಸನ್ಮಾನಿಸಲಾಯಿತು.
ದ್ವಿತೀಯ ಪಿ.ಯು ತರಗತಿಯ ಸಮೃದ್ಧಿ ಕಿಣಿ ವಿವಿಧ ಹಿಂದಿ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳ ಬಹುಮಾನ ವಿತರಣಾ ಪಟ್ಟಿಯನ್ನು ವಾಚಿಸಿದರು. ದ್ವಿತೀಯ ಪಿ.ಯು.ಸಿ ಯ ವಿದ್ಯಾರ್ಥಿ ಪವನ್ ಧನ್ಯವಾದ ಸಲ್ಲಿಸಿದರು‌. ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿನಿ ಸಮೃದ್ಧಿ ಕಾರ್ಯಕ್ರಮ ನಿರೂಪಿಸಿದರು‌.

ಹೆಣ್ಣು ಮಕ್ಕಳು ನಿರ್ಭಯವಾಗಿ ಶಾಲಾ ಕಾಲೇಜಿಗೆ ಬರುವಂತಹ ವಾತಾವರಣ ಕಲ್ಪಿಸಿ – ನೆಹರು ಚ ಓಲೇಕಾರ

ವರದಿ:ಶಬ್ಬೀರ್ಅಹಮ್ಮದ್,ಶ್ರೀನಿವಾಸಪುರ

ಕೋಲಾರ : ಹೆಣ್ಣು ಮಕ್ಕಳ ಮೇಲೆ ನಡೆದಿರುವ ಹಲ್ಲೆಯಿಂದ ಪೋಷಕರು ತಮ್ಮ ಮಕ್ಕಳನ್ನು ಶಾಲಾ ಕಾಲೇಜುಗಳಿಗೆ ಕಳುಹಿಸಲು ಹಿಂಜರಿಯುತ್ತಾರೆ . ಆದ್ದರಿಂದ ಯಾವುದೇ ಹೆಣ್ಣು ಮಕ್ಕಳು ನಿರ್ಭಯವಾಗಿ ಶಾಲಾ ಕಾಲೇಜಿಗೆ ಬರುವಂತಹ ವಾತಾವರಣ ಕಲ್ಪಿಸಿ ಎಂದು ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳ ಹಾಗೂ ಅನುಸೂಚಿತ ಬುಡಕಟ್ಟುಗಳ ಆಯೋಗದ ಅಧ್ಯಕ್ಷರಾದ ನೆಹರು ಚ ಓಲೇಕಾರ ಅವರು ಅಧಿಕಾರಿಗಳಿಗೆ ಸೂಚಿಸಿದರು .
ಇಂದು ಶ್ರೀನಿವಾಸಪುರ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ಥರ ಯೋಗಕ್ಷೇಮ ವಿಚಾರಿಸಿ ಅವರಿಗೆ ಧೈರ್ಯ ತುಂಬಿದ ನಂತರ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು .
ಶ್ರೀನಿವಾಸಪುರ ತಾಲ್ಲೂಕಿನಲ್ಲಿ ವಿದ್ಯಾರ್ಥಿನಿಯರ ಮೇಲೆ ನಡೆದಿರುವ ಹಲ್ಲೆಯಿಂದ ಪರಿಶಿಷ್ಟ ಜಾತಿ , ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗದ ಪೋಷಕರು ತಮ್ಮ ಹೆಣ್ಣು ಮಕ್ಕಳನ್ನು ಶಾಲೆ ಕಾಲೇಜುಗಳಿಗೆ ಕಳುಹಿಸಲು ಭಯ ಪಡುವಂತಹ ಸಂದರ್ಭ ನಿರ್ಮಾಣವಾಗಿದೆ .
ಇದು ಅಹಿತಕಾರಕ ಘಟನೆ . ಇಂತಹ ಘಟನೆಗಳು ಮರುಕಳಿಸಬಾರದು , ಈ ಘಟನೆಯನ್ನು ಗಂಭೀರವಾಗಿ ಪರಿಗಣಿಲಾಗಿದೆ ಎಂದು ಅವರು ತಿಳಿಸಿದರು . ಹಲ್ಲೆಗೊಳಗಾದ 5 ಜನ ಸಂತ್ರಸ್ಥರಿಗೆ ತಲಾ 50 ಸಾವಿರ ಪರಿಹಾರ ಧನವನ್ನು ಜಿಲ್ಲಾಡಳಿತ ವತಿಯಿಂದ ನೀಡಲಾಗಿದೆ . ಉಳಿದ 3 ಜನ ಸಂತ್ರಸ್ಥರಿಗೆ ಶೀಘ್ರದಲ್ಲಿ ಪರಿಹಾರ ಧನ ನೀಡಲಾಗುವುದು .
ಈ ಘಟನೆಯಲ್ಲಿ 11 ಜನರ ಮೇಲೆ ಪ್ರಕರಣ ದಾಖಲಾಗಿದ್ದು 7 ಜನರನ್ನು ಅರೆಸ್ಟ್ ಮಾಡಲಾಗಿದೆ . ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅವರು ತಿಳಿಸಿದರು .
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳ ಹಾಗೂ ಅನುಸೂಚಿತ ಬುಡಕಟ್ಟುಗಳ ಆಯೋಗದ ಸದಸ್ಯರಾದ ವೆಂಕಟೇಶ ದೊಡೇರಿ , ಕಾರ್ಯದರ್ಶಿಗಳಾದ ಜಯಪಾಲಯ್ಯ , ಜಿಲ್ಲಾಧಿಕಾರಿಗಳಾದ ಡಾ | ಆರ್ , ಸೆಲ್ವಮಣಿ , ಪೊಲೀಸ್ ವರಿಷ್ಠಾಧಿಕಾರಿಗಳಾದ ಡೆಕ್ಕ ಕಿಶೋರ್ ಬಾಬು , ತಶೀಲ್ದಾರ್ ಶ್ರೀನಿವಾಸ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು .

೧೮ ಪ್ರಾಥಮಿಕ ಆರೋಗ್ಯ ಕೇಂದ್ರ , ಪೊಲೀಸ್‌ ಠಾಣೆ ಸಿಬ್ಬಂದಿಗೆ ರೋಟರಿ ಸೆಂಟ್ರಲ್‌ನಿಂದ ಮಾಸ್ಕತಂಪುಪಾನೀಯ – ಶ್ರೀನಾಥ್

ವರದಿ:ಶಬ್ಬೀರ್ಅಹಮ್ಮದ್,ಶ್ರೀನಿವಾಸಪುರ

ಕೋಲಾರ : – ಕೋವಿಡ್ ವಾರಿಯರ್ ಆಗಿ ಜೀವದ ಹಂಗು ತೊರೆದು ದುಡಿದವರನ್ನು ಸ್ಮರಿಸುವ ಅಗತ್ಯವಿದೆ , ಅವರ ಸೇವೆಯನ್ನು ಮರೆಯಲಾಗದು ಎಂದು ರೋಟರಿ ಸೆಂಟ್ರಲ್ ಅಧ್ಯಕ್ಷ ಸಿ.ಎಂ.ಆರ್.ಶ್ರೀನಾಥ್ ಅಭಿಪ್ರಾಯಪಟ್ಟರು . ನಗರದಲ್ಲಿ ಪ್ರಂಟ್ ಲೈನ್‌ನಲ್ಲಿ ಕೆಲಸ ಮಾಡಿರುವ ಪತ್ರಕರ್ತರು ಸೇರಿದಂತೆ ತಾಲ್ಲೂಕಿನ ೧೮ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ , ನಗರದ ಎಲ್ಲಾ ಪೊಲೀಸ್ ಠಾಣೆಗಳ ಸಿಬ್ಬಂದಿಗೆ ತಂಪು ಪಾನೀಯಾ ಹಾಗೂ ಎನ್ -೯೫ ಮಾಸ್ಟ್ಗಳನ್ನು ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು . ಇಂತಹ ಒಳ್ಳೆಯ ಕಾರ್ಯವನ್ನು ಪತ್ರಕರ್ತರಿಗೆ ತಂಪುಪಾನೀಯ , ಮಾಸ್ಕ್ ನೀಡುವ ಮೂಲಕವೇ ಆರಂಭಿಸುತ್ತಿರುವುದಾಗಿ ತಿಳಿಸಿದ ಅವರು , ಕೊವಿಡ್ ಸಂದರ್ಭದಲ್ಲಿ ಅನೇಕರು ಸಾವಿನ ಭಯದಿಂದ ಮನೆಯಿಂದ ಹೊರಬರಲು ಹೆದರಿದ್ದನ್ನು ಕಂಡಿದ್ದೇವೆ ಎಂದರು . ಆದರೆ ಪತ್ರಕರ್ತರು , ವೈದ್ಯರು.ಶುಶಕಿಯರು , ಪೂಲೀಸರು ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸಿದ್ದಾರೆ . ಅವರ ಸೇವೆಯನ್ನು ಮರೆಯುವಂತಿಲ್ಲ ಎಂದು ತಿಳಿಸಿ , ಈ ನಿಟ್ಟಿನಲ್ಲಿ ರೋಟರಿ ಸಂಟ್ಟಲ್ ಅವರ ಸೇವೆಗೆ ಸದಾ ಸಿದ್ಧವಿದೆ ಎಂದು ತಿಳಿಸಿದರು . ರೋಟರಿ ಸಂಟ್ಟಲ್ ಕಾರ್ಯದರ್ಶಿ ಎಸ್‌.ಸುಧಾಕರ್ , ಈಗಾಗಲೇ ಕೋವಿಡ್ ಸಂಕಷ್ಟದಲ್ಲಿ ಅನೇಕ ರೀತಿಯಲ್ಲಿ ನಾವು ಕೆಲಸ ಮಾಡಿದ್ದೇವೆ . ಆಮ್ಲಜನಕ ಸಿಗದೇ ಅನೇಕರು ಸಾವನ್ನಪ್ಪಿದ್ದನ್ನು ಮನಗಂಡು ತಾಲ್ಲೂಕಿನ ಎಲ್ಲಾ ಪ್ರಾಥಮಿಕ ಆರೋಗ್ಯಕೇಂದಗಳಿಗೂ ಆಮ್ಲಜನಕ ಸಾಂದ್ರಕಗಳನ್ನು ಒದಗಿಸುವ ಕೆಲಸ ಮಾಡಿದ್ದೇವೆ ಎಂದರು .
ಶಾಲೆಗಳಲ್ಲಿ ಮಕ್ಕಳಿಗೆ ಮಾಸ್ಕ್ ವಿತರಿಸಲಾಗಿದೆ , ಪರೀಕ್ಷಾ ಸಂದರ್ಭದಲ್ಲೂ ಮಾಸ್ ಒದಗಿಸಲಾಗಿದೆ ಎಂದು ತಿಳಿಸಿ , ಕೋವಿಡ್ ಸಂದರ್ಭದಲ್ಲಿ ರೋಗಿಗಳ ಮನೆಗಳಿಗೆ ಹೋಗಿ ಔಷಧಿ ಕಿಟ್ ನೀಡಿದ ದಿಟ್ಟತನ ನಮ್ಮ ರೋಟರಿ ಅಧ್ಯಕ್ಷರು ಮಾಡಿದ್ದಾರೆ ಎಂದು ತಿಳಿಸಿದರು . ಕಾರ್ಯಕ್ರಮದಲ್ಲಿ ರೋಟರಿ ಸೆಂಟ್ರಲ್ ನಿರ್ದೇಶಕ ಸೋಮಣ್ಣ , ಜಿಲ್ಲಾ ಸೇವಾದಳ ಅಧ್ಯಕ್ಷ ಕೆ.ಎಸ್.ಗಣೇಶ್ , ಕೋ.ನಾ.ಮಂಜುನಾಥ್ , ಪತ್ರಕರ್ತರ ಸಂಘದ ಖಜಾಂಚಿ ಎ.ಜಿ.ಸುರೇಶ್‌ಕುಮಾರ್ ಮತ್ತಿತರರಿದ್ದರು