HOLY ROSARY CHURCH, KUNDAPUR – 450 th JUBILEE SOUVENIR 2021

ಕೋಲಾರ“ಅಂತರರಾಷ್ಟ್ರೀಯ ಸಿರಿಧಾನ್ಯಗಳ ವರ್ಷ 2023” ಹಾಗೂ “ಪೋಷಣ ಮತ್ತು ವೃಕ್ಷಾರೋಹಣ ಅಭಿಯಾನ”

ವರದಿ:ಶಬ್ಬೀರ್ಅಹಮ್ಮದ್,ಶ್ರೀನಿವಾಸಪುರ

“ಅಂತರರಾಷ್ಟ್ರೀಯ ಸಿರಿಧಾನ್ಯಗಳ ವರ್ಷ 2023” ಹಾಗೂ “ಪೋಷಣ ಮತ್ತು ವೃಕ್ಷಾರೋಹಣ ಅಭಿಯಾನ”
ಉತ್ತಮ ಆರೋಗ್ಯಕ್ಕಾಗಿ ಸಿರಿಧಾನ್ಯಗಳ ಬಳಕೆಯ ಪ್ರಾಮುಖ್ಯತೆ
ಕೋಲಾರ ; ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ, ಕೋಲಾರ, ಆತ್ಮ ಯೋಜನೆ, ಕೃಷಿ ಇಲಾಖೆ, ಕೋಲಾರ ಹಾಗೂ ಇಂಡಿಯನ್ ಫಾರ್ಮರ್ಸ್ ಫರ್ಟಿಲೈಜರ್ಸ್ ಕೋ-ಆಪರೇಟಿವ್ ಸಂಸ್ಥೆ (Iಈಈಅಔ) ಇವರ ಸಂಯುಕ್ತಾಶ್ರಯದಲ್ಲಿ ಭಾರತದ ಅಮೃತ ಮಹೋತ್ಸವ 75ನೇ ಸ್ವಾತಂತ್ರ್ಯೋತ್ಸವದ ಸ್ಮರಣಾರ್ಥ ರೈತರಿಗಾಗಿ “ಅಂತರರಾಷ್ಟ್ರೀಯ ಸಿರಿಧಾನ್ಯಗಳ ವರ್ಷ 2023” ಹಾಗೂ “ಪೋಷಣ ಮತ್ತು ವೃಕ್ಷಾರೋಹಣ ಅಭಿಯಾನ” ವನ್ನು ದಿನಾಂಕ 17.09.2021 ರಂದು ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ, ಟಮಕ, ಕೋಲಾರದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಅಂತರರಾಷ್ಟ್ರೀಯ ಸಿರಿಧಾನ್ಯಗಳ ವರ್ಷ 2023 ಆಚರಿಸಲು ಕಾರಣ, ನಮ್ಮ ಪೂರ್ವಿಕರು ಹಿಂದಿನ ಕಾಲದಲ್ಲಿ ಮನೆಗೆ ಬೇಕಾದ ಸಿರಿಧಾನ್ಯಗಳನ್ನು, ತರಕಾರಿಗಳನ್ನು ಮತ್ತು ಹಣ್ಣುಗಳನ್ನು ತಮ್ಮ ತೋಟಗಳಲ್ಲಿ ಬೆಳೆದುಕೊಳ್ಳುತ್ತಿದ್ದರು. ಆದರೆ ಜನಸಂಖ್ಯೆ ಹೆಚ್ಚಳ, ಜಾಗತೀಕರಣ, ನಗರೀಕರಣ ಮತ್ತು ಕೈಗಾರೀಕರಣದಿಂದ ಜನರು ಆರೋಗ್ಯದ ಕಡೆಗೆ ಗಮನ ಕೊಡದೆ ಸಮತೋಲಿತ ಆಹಾರ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ನಮ್ಮ ದೇಶದಲ್ಲಿ ಶೇ.42 ರಷ್ಟು ಜನರು ಗುಪ್ತ ಹಸಿವಿನಿಂದ ಅಂದರೆ ಸೂಕ್ಷ್ಮ ಪೋಷಕಾಂಶಗಳ ಕೊರತೆಯಿಂದ ಬಳಲುತ್ತಿದ್ದಾರೆ. ಮತ್ತೊಂದು ಕಡೆಗೆ, ಕೃಷಿಯಲ್ಲಿ ಉತ್ಪಾದನೆ ಹೆಚ್ಚಿಸಲು ಬಳಸುವ ರಾಸಾಯನಿಕ ಬಳಕೆ ಹೆಚ್ಚಾಗಿದ್ದು ಇದು ಮಾನವನ ಆರೋಗ್ಯದ ಮೇಲೆ ದುಷ್ಟಪರಿಣಾಮ ಬೀರುವುದರ ಜೊತೆಗೆ ರೋಗಗಳು ಹೆಚ್ಚಾಗುತ್ತವೆ. ಇದನ್ನೆಲ್ಲಾ ಮನಗಂಡು ವಿಶ್ವ ಸಂಸ್ಥೆ, 2023ನ್ನು ಅಂತರಾಷ್ಟ್ರೀಯ ಸಿರಿಧಾನ್ಯಗಳ ವರ್ಷ ಎಂದು ಗುರುತಿಸಿವೆ. ಕೆಲ ದಿನಗಳ ಹಿಂದೆ ಈ ಧಾನ್ಯಗಳು ಅಂದರೆ ಉದಲು, ಆರಕ, ಸಾಮೆ, ನವಣೆ, ಕೊರಲು, ರಾಗಿ, ಬರಗು, ಸಜ್ಜೆ, ಜೋಳ ಅಭಿವೃದ್ಧಿ ಹೊಂದುತ್ತಿರುವ ಹಾಗೂ ಬಡ ಜನರ ಆಹಾರ ಎಂದು ಗುರುತಿಸಲಾಗುತ್ತಿತ್ತು. ಆದರೆ ಈಗ ಇವುಗಳ ಪ್ರಾಮುಖ್ಯತೆ ತಿಳಿದು ಅಭಿವೃದ್ಧಿ ಹೊಂದಿದ ಹಾಗೂ ಉಳ್ಳವರ ಆಹಾರವಾಗುತ್ತಿದೆ. ಮತ್ತೊಂದೆಡೆ ನೀರಿನ ಅಭಾವ ಮತ್ತು ಏರುತ್ತಿರುವ ಉಷ್ಣತೆ ಹಾಗೂ ಕುಂದುತ್ತಿರುವ ಮಣ್ಣಿನ ಫಲವತ್ತತೆಯಲ್ಲೂ ಬೆಳೆಯಬಹುದಾದ ಈ ಬೆಳೆಗಳ ಕುರಿತು ಜನರಿಗೆ ಅರಿವು ಮೂಡಿಸುವುದು ಈ ಕಾರ್ಯಕ್ರಮವಾಗಿದೆ. ಈ ವರ್ಷದಿಂದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು 2023ಕ್ಕೆ ವಿಶ್ವದ ಪ್ರತಿಯೊಬ್ಬರಿಗೂ ಈ ಧಾನ್ಯಗಳ ಮಹತ್ವ ತಿಳಿಯಬೇಕು ಮತ್ತು ಅದನ್ನು ಉಪಯೋಗಿಸಬೇಕು. ಇದನ್ನು ತಿನ್ನುವವರಿಗೆ ಆರೋಗ್ಯ ಲಭಿಸುತ್ತೇ ಮತ್ತು ಬೆಳೆ ಬೆಳೆಯುವವರಿಗೆ ಆರ್ಥಿಕ ಪ್ರಗತಿಯಾಗುತ್ತದೆ ಎನ್ನುವುದೇ ಈ ಕಾರ್ಯಕ್ರಮದ ಉದ್ದೇಶ.
ತೋಟಗಾರಿಕೆ ವಿಶ್ವವಿದ್ಯಾಲಯದ ಸಹ ವಿಸ್ತರಣಾ ನಿರ್ದೇಶಕರಾದ ಡಾ. ಟಿ.ಬಿ. ಬಸವರಾಜುರವರು ಉದ್ಘಾಟನೆಯನ್ನು ನೇರವೇರಿಸಿ ಮಾತನಾಡಿ, ಮೊದಲು ಉದಲು, ಆರಕ, ಸಾಮೆ, ನವಣೆ, ಕೊರಲು, ರಾಗಿ, ಬರಗು, ಸಜ್ಜೆ, ಜೋಳಗಳನ್ನು ಕಿರುಧಾನ್ಯಗಳೆಂದು ಕರೆಯುತ್ತಿದ್ದು, ಅವುಗಳ ಪ್ರಾಮುಖ್ಯತೆಯನ್ನು ಕಂಡುಕೊಂಡು ಈಗ ಸಿರಿಧಾನ್ಯಗಳೆಂದು ಕರೆಯುತ್ತಾರೆ. ಹಲವು ಪ್ರದೇಶಗಳಲ್ಲಿ ಹೆಚ್ಚಾಗಿ ಭತ್ತ ಗೋಧಿಯನ್ನು ಬೆಳೆಯುತ್ತಿದ್ದು, ಒಣಪ್ರದೇಶಗಳಲ್ಲಿ ಭತ್ತ, ಗೋಧಿಯನ್ನು ಬೆಳೆಯಲು ಆಗುವುದಿಲ್ಲ ಆದರೆ ಕಿರುಧಾನ್ಯಗಳನ್ನು ಬೆಳೆದು ರೈತರು ತಮ್ಮ ಆದಾಯವನ್ನು ವೃದ್ಧಿಸಿಕೊಳ್ಳಬಹುದು.
ಸಿರಿಧಾನ್ಯಗಳಲ್ಲಿ ಕ್ಯಾಲ್ಸಿಯಂ, ಕಬ್ಬಿಣ, ಜಿಂಕ್, ರಂಜಕ, ಪೊಟ್ಯಾಷ್, ಮೆಗ್ನಿಷಿಯಂ ಪ್ರೋಟಿನ್‍ನಂತಹ ಪೋಷಕಾಂಶಗಳಿರುತ್ತವೆ. ರಾಗಿಯು ಹೆಚ್ಚು ಕ್ಯಾಲ್ಸಿಯಂ, ಕಬ್ಬಿಣದ ಅಂಶ ಹೊಂದಿದೆ. ರಾಗಿಯು ನಿಧಾನವಾಗಿ ಜೀರ್ಣವಾಗುತ್ತದೆ. ಸಕ್ಕರೆ ಖಾಯಿಲೆಗೆ ರಾಗಿ ಉತ್ತಮ ಆಹಾರ. ಸಿರಿಧಾನ್ಯಗಳನ್ನು ಬೆಳೆಯುವುದರಿಂದ ಒಣಪ್ರದೇಶದಲ್ಲಿ ಆಹಾರ ಭದ್ರತೆಯನ್ನು ಒದಗಿಸುತ್ತದೆ. ನಮಗೆ ಬೇಕಾದ ಆಹಾರ ಬೆಳೆದರೆ, ಆಹಾರ ಭದ್ರತೆ ದೊರಕುತ್ತದೆ. ಸಾವಯವ ಪದ್ಧತಿಯಿಂದ ಸಿರಿಧಾನ್ಯ ಉತ್ಪಾದನೆ ಮಾಡುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಹಾರಕವು ಬರನಿರೋಧಕ ಶಕ್ತಿ ಇದ್ದು, ಒಳ್ಳೆಯ ಇಳುವರಿ ಕೊಡುತ್ತದೆ. ಆದುದರಿಂದ ರೈತರಿಗೆ ಸಿರಿಧಾನ್ಯಗಳನ್ನು ಬೆಳೆಯಲು ಉತ್ತೇಜನ ಕೊಡಬೇಕು ಎಂದು ತಿಳಿಸಿದರು.
ಡಾ. ಬಿ.ಎಫ್. ಹುಲಗೂರು, ನಿವೃತ್ತ ಪ್ರಧಾನ ವ್ಯವಸ್ಥಾಪಕರು, ನಬಾರ್ಡ್‍ರವರು, ಮುಖ್ಯ ಅಥಿತಿಗಳಾಗಿ ಭಾಗವಹಿಸಿ ಮಾತನಾಡಿ, ಬಡವರ ಬಂಧು ಸಿರಿಧಾನ್ಯಗಳು. ಬರಗಾಲದಲ್ಲಿ ರೈತರಿಗೆ ಇಳುವರಿ ಕೊಡುತ್ತದೆ. ಸಿರಿಧಾನ್ಯಗಳನ್ನು ಹೆಚ್ಚಾಗಿ ಬೆಳೆಯಬೇಕು. ಸಿರಿಧಾನ್ಯಗಳಲ್ಲಿ ಹಲವು ರೀತಿಯ ಪೋಷಕಾಂಶಗಳಿದ್ದು, ನಾರಿನ ಅಂಶವು ಸಹ ಇದ್ದು ಇದು, ಸಕ್ಕರೆ ಖಾಯಿಲೆಗೆ ತುಂಬಾ ಒಳ್ಳೆಯದು. ಸಾವಯವ ಪದ್ಧತಿ ಮೂಲಕ ಬೇಸಾಯ ಮಾಡಿ ಮನೆಯ ಬಳಕೆಗೆ ಬಳಸುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ಕೆ. ತುಳಸಿರಾಮ್, ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರು, ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಹಿಂದೆ ಸಿರಿಧಾನ್ಯಗಳನ್ನು ಹೆಚ್ಚಾಗಿ ಬೆಳೆಯುತ್ತಿದ್ದರು. ಇತ್ತೀಚೆಗೆ ಬೆಳೆಯುವುದನ್ನು ಕಡಿಮೆ ಮಾಡಿದ್ದು, ಮತ್ತೇ ಸಿರಿಧಾನ್ಯಗಳನ್ನು ಬೆಳೆಯುವ ಪ್ರವೃತ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ಸಿರಿಧಾನ್ಯಗಳನ್ನು ಕಡಿಮೆ ಖರ್ಚಿನಲ್ಲಿ ಬೆಳೆಯಬಹುದಾಗಿದ್ದರಿಂದ ರೈತರು ಇದರತ್ತ ಒಲವು ತೋರಿಸಬೇಕೆಂದು ತಿಳಿಸಿದರು.
ಪ್ರಾಸ್ತಾವಿಕ ನುಡಿಯಲ್ಲಿ ಸಿರಿಧಾನ್ಯಗಳೆಂದರೆ ಸಾಮೆ, ನವಣೆ, ಊದಲು, ರಾಗಿ, ಬರಗು, ಸಜ್ಜೆ, ಅರ್ಕಾ, ಜೋಳ ಇವು ಪೋಷಕಾಂಶಭರಿತವಾಗಿದ್ದು, ಒಣಬೇಸಾಯಕ್ಕೆ ಸೂಕ್ತವಾಗಿದ್ದು, ಅಲ್ಲದೇ ಇತ್ತೀಚಿನ ವರ್ಷಗಳಲ್ಲಿ ಆಗುತ್ತಿರುವ ಜಾಗತಿಕ ಹವಾಮಾನ ವೈಪರಿತ್ಯದಲ್ಲಿ ಕೂಡ ಯಾವುದೇ ನಷ್ಟ ಇಲ್ಲದೇ ರೈತರು ಬೆಳೆಯಬಹುದಾದ ಬೆಳೆಗಳಾಗಿದ್ದು, ಇದರ ಪ್ರಾಮುಖ್ಯತೆಯನ್ನು ಜನಗಳಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಕರ್ನಾಟಕ ಸರ್ಕಾರದ ಕೃಷಿ ಸಚಿವರಾಗಿದ್ದ ಶ್ರೀ. ಕೃಷ್ಣ ಬೈರೆಗೌಡರವರು ‘ಅಂತರಾಷ್ಟ್ರೀಯ ಸಿರಿಧಾನ್ಯಗಳ ಮೇಳ’ ಆಯೋಜಿಸಿದ್ದು, ಇದರ ಪ್ರಾಮುಖ್ಯತೆಯನ್ನು ಅರಿತ ಭಾರತ ಸರ್ಕಾರ ಇದನ್ನು ಕೃಷಿ ಮತ್ತು ಆಹಾರ ಸಂಸ್ಥೆಗೆ ಪ್ರಸ್ತಾವನೆಯನ್ನು ಇಟ್ಟಾಗ ಭಾರತ ದೇಶದೊಂದಿಗೆ ಸುಮಾರು 70 ದೇಶಗಳು ಇದರಲ್ಲಿ ಪಾಲ್ಗೊಂಡು ‘2023ರ ವರ್ಷವನ್ನು ಅಂತರಾಷ್ಟ್ರೀಯ ಸಿರಿಧಾನ್ಯಗಳ’ ವರ್ಷವೆಂದು ಆಚರಿಸಲು ನಿರ್ಧರಿಸಿದವು ಎಂದು ಡಾ. ಅಂಬಿಕಾ ಡಿ.ಎಸ್, ವಿಜ್ಞಾನಿ (ಸಸ್ಯ ಸಂರಕ್ಷಣೆ) ಇವರು ವಿವರಿಸಿದರು.
ನಂತರ, ಎಲ್ಲ ರೈತ ಮತ್ತು ರೈತಮಹಿಳೆಯರಿಗೆ ಸೀಡ್ ಕಿಟ್ ಹಾಗೂ ಸಸಿಗಳನ್ನು ವಿತರಣೆ ಮಾಡಲಾಯಿತು.
ತದನಂತರ ತಾಂತ್ರಿಕ ಅಧಿವೇಶನದಲ್ಲಿ ಕೃಷಿ ವಿಜ್ಞಾನ ಕೇಂದ್ರ, ಕೋಲಾರದ ಗೃಹ ವಿಜ್ಞಾನದ ವಿಜ್ಞಾನಿಗಳಾದ ಡಾ. ಚಿಕ್ಕಣ್ಣ ಜಿ.ಎಸ್ ರವರು ಮಾನವನ ಆರೋಗ್ಯ ಕಾಪಾಡುವಲ್ಲಿ ಸಿರಿಧಾನ್ಯಗಳ ಪಾತ್ರದ ಕುರಿತು ರೈತರಿಗೆ ವಿವರಿಸಿದರು. ಡಾ. ಬಿ.ಎಫ್. ಹುಲಗೂರು, ನಿವೃತ್ತ ಪ್ರಧಾನ ವ್ಯವಸ್ಥಾಪಕರು, ನಬಾರ್ಡ್‍ರವರು ಸುಸ್ಥಿರ ಕೃಷಿಯ ಪ್ರಾಮುಖ್ಯತೆ ಕುರಿತು ವಿವರಿಸಿದರು.
ಕೃಷಿ ವಿಜ್ಞಾನ ಕೇಂದ್ರದ ಮಣ್ಣು ವಿಜ್ಞಾನದ ಡಾ. ಅನಿಲಕುಮಾರ್ ಎಸ್, ತೋಟಗಾರಿಕೆಯ ವಿಜ್ಞಾನಿ ಡಾ. ಜ್ಯೋತಿ ಕಟ್ಟೇಗೌಡರ, ಸಸ್ಯರೋಗ ಸಂರಕ್ಷಣೆ ವಿಜ್ಞಾನಿ ಡಾ. ಡಿ. ಎಸ್. ಅಂಬಿಕಾ, ಡಾ. ಶಶಿಧರ್ ಕೆ.ಆರ್, ಶ್ರೀ. ಉಮೇಶ್ ನಾಯ್ಕ, ಕ್ಷೇತ್ರ ವ್ಯವಸ್ಥಾಪಕರು ಮತ್ತು ಕೆವಿಕೆಯ ಬೋಧಕೇತರ ಸಿಬ್ಬಂದಿಗಳು, ಶ್ರೀ. ಮೋಹನÀ, ಕ್ಷೇತ್ರ ನಿರ್ವಹಣಾ ಅಧಿಕಾರಿ, ಇಫ್ಕೋ ಈ ಅಭಿಯಾನದಲ್ಲಿ ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದಲ್ಲಿ 72 ರೈತರು ಮತ್ತು ರೈತ ಮಹಿಳೆಯರು ಭಾಗವಹಿಸಿದ್ದರು.

ಕಾರ್ಕಳ ಬ್ಲಾಕ್ ಕಾಂಗ್ರೆಸ್ ನಿಂದ ಆಸ್ಕರ್ ರವರಿಗೆ ಶ್ರದ್ಧಾಂಜಲಿ

ವರದಿ :  ವಾಲ್ಟರ್ ಮೊಂತೇರೊ, ಬೆಳ್ಮಣ್ಣು

ಕಾರ್ಕಳ, ಅಜಾತಶತ್ರು, ಹಿರಿಯ ರಾಜಕೀಯ ಧುರೀಣ, ಸರಳ, ಸಜ್ಜನ, ಮಾನವೀಯತೆಯ ದ್ಯೋತಕವಾಗಿದ್ದಂತಹ ಮಾಜಿ ಕೇಂದ್ರ ಸಚಿವ, ಹಾಲಿ ರಾಜ್ಯಸಭಾ ಸದಸ್ಯ ದಿವಂಗತ ಆಸ್ಕರ್ ಫರ್ನಾಂಡಿಸ್ ರವರ ಬಾಳು ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತರಿಗೂ ಅನುಕರಣೆಯವಾಗಿದ್ದು ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆಯುವುದೇ ಅವರಿಗೆ ನೀಡಿದಂತಹ ಶ್ರದ್ಧಾಂಜಲಿಯಾಗುತ್ತದೆ ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ ಸದಾಶಿವ ದೇವಾಡಿಗ ನುಡಿನಮನ ಸಲ್ಲಿಸಿದರು.
ದಿನಾಂಕ: 17/09/21 ರಂದು ಬಾ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಹಮ್ಮಿಕೊಂಡ ಆಸ್ಕರ್ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಅವರ ಬಾಳು ಬದುಕಿನ ಬಗ್ಗೆ, ರಾಜಕೀಯ ಜೀವನದ ಸಾರ್ಥಕತೆಯ ಬಗ್ಗೆ ಜಾರ್ಜ್ ಕ್ಯಾಸ್ಟಲಿನೊ, ಸುಧಾಕರ್ ಕೋಟ್ಯಾನ್, ಸುಶಾಂತ್ ಸುಧಾಕರ್, ವಿಜಯಕುಮಾರ್ ಜೈನ್ ಈದು, ಅಶ್ಫಾಕ್ ಅಹ್ಮದ್ ರವರು ನುಡಿನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಶಿರಿಯಣ್ಣ ಶೆಟ್ಟಿ, ಮಾಲಿನಿ ರೈ ಥಾರನಾತ್ ಶೆಟ್ಟಿ ಶ್ರೀಧರ್ ಸನಿಲ್ ಮುಂಡ್ಕೂರು ಸುರೇಶ್ ಅಚಾರ್ಯ ಈದು ಜಯರಾಮ ಆಚಾರ್ಯ ನಕ್ರೆ ಉದಯ ವಿ ಶೆಟ್ಟಿ ಅಣ್ಣಪ್ಪ ನಕ್ರೆ ಶುಭದ ರಾವ್  ಪ್ರಕಾಶ್ ಆಚಾರ್ಯ ಕುಂಟಾಡಿ ವಿನ್ನಿ ಬೊಲ್ಟ್ ಮೆಂಡೊನ್ಸಾ ಮೊಹಮ್ಮದ್ ಅಸ್ಲಾಂ ವಿವೇಕಾನಂದ ಶೆಣೈ ಆರೀಫ್ ಕಲ್ಲೋಟ್ಟೆ ಹಿರಿಯ ಕಾಂಗ್ರೆಸ್ಸಿಗರಾದ ಸಾಣೂರು ಸುಂದರ ಗೌಡ ಕಾಂತಿ ಶೆಟ್ಟಿ ಜಯಂತಿ ಈದು ಶಾಂತಿ, ಶೋಭಾಪ್ರಸಾದ್, ರೀನಾ ಟೀಚರ್ ಸುಮನ ನಾಯ್ಕ್, ಅಪರ್ಣ, ಸುನಿಲ್ ಭಂಡಾರಿ, ಸದಾನಂದ ಭಂಡಾರಿ, ಇನಾಸ್ ಲೂಯಿಸ್, ಸತೀಶ್ ಕಾರ್ಕಳ ಉಪಸ್ಥಿತರಿದ್ದರು ಪ್ರಧಾನ ಕಾರ್ಯದರ್ಶಿ ಪ್ರಭಾಕರ ಬಂಗೇರ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

ನೂತನ ತಂತ್ರಜ್ಞಾನದ ಬ್ರೇಕ್ ಡಿಸ್ಕ್ ಫೇಸಿಂಗ್ ಮತ್ತು ಡ್ರಮ್ ಬೋರಿಂಗ್ ಮೇಷಿನರಿ ಉದ್ಘಾಟನೆ.

JANANUDI.COM NETWORK

ಕುಂದಾಪುರ, ಸೆ. 17: ಇಂದು ಕ್ರಾಸ್ಟೊ ಸನ್ಸ್ ಸಂಸ್ಥೆಯಲ್ಲಿ ನೂತನ ತಂತ್ರಜ್ಞಾನ ಹೊಂದಿರುವ ಬ್ರೇಕ್ ಡಿಸ್ಕ್ ಫೇಸಿಂಗ್ ಮತ್ತು ಡ್ರಮ್ ಬೋರಿಂಗ್ ಮೇಷಿನರಿಯನ್ನು ದುರ್ಗಾಂಬಾ ಮೋಟಾರ್ಸ್ ಸಂಸ್ಥೆಯ ಮಾಲಕರಾದ ಸದಾನಂದ ಚಾತ್ರಾರವರು ಉದ್ಘಾಟಿಸಿದರು .
ಈ ಸಂದರ್ಭದಲ್ಲಿ ಮಾತನಾಡಿದ ಅವರು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಉಡುಪಿ ಜಿಲ್ಲೆಯಲ್ಲೆ ಮೊಟ್ಟ ಮೊದಲ ಭಾರಿಗೆ ತಂತ್ರಜ್ಞಾನಕ್ಕೆ ಅನುಗುಣವಾಗಿ ವಾಹನಗಳ ಇಂಜಿನ್ ರೀ-ಕಂಡೀಷನ್ ಮಾಡಲು ಅಗತ್ಯವಾದ ಎಲ್ಲಾ ಯಂತ್ರಗಳನ್ನು ಹೊಂದಿದ ಸಂಸ್ಥೆಯು ಕ್ರಾಸ್ಟೋ ಇಂಜಿನಿಯರಿಂಗ್ ವರ್ಕ್ ಆಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಮಾಲೀಕರಾದ ವಿವಿಯನ್ ಕ್ರಾಸ್ಟೋ, ಲಿಯೋನಿಲ್ಲಾ ಕ್ರಾಸ್ಟೋ, ವಿನೋದ್ ಕ್ರಾಸ್ಟೋ, ಸಂಸ್ಥೆಯ ಸಿಬ್ಬಂದಿಗಳು , ಗ್ರಾಹಕರು ಮತ್ತು ವಾಹನ ಮಾಲೀಕರು ಉಪಸ್ಥಿತರಿದ್ದರು
.

ಬೀಜಾಡಿಯಲ್ಲಿ ಕೋವಿಶೀಲ್ಡ್ ವ್ಯಾಕ್ಸಿನೇಶನ್ ಶಿಬಿರ

JANANUDI.COM NETWORK


ಬೀಜಾಡಿ: ಬೆಳ್ಳಿ ಹಬ್ಬದ ಸಂಭ್ರಮದಲ್ಲಿರುವ ಬೀಜಾಡಿ-ಗೋಪಾಡಿ ಮಿತ್ರ ಸಂಗಮದ ಸಾರಥ್ಯದಲ್ಲಿ ಕುಂಭಾಶಿ ಪ್ರಾಥಮಿಕ ಆರೋಗ್ಯ ಕೇಂದ್ರ, ಬೀಜಾಡಿ ಗ್ರಾಮ ಪಂಚಾಯಿತಿ, ರೋಟರಿ ಸಮುದಾಯ ದಳ ಬೀಜಾಡಿ-ಗೋಪಾಡಿ ಆಶ್ರಯದಲ್ಲಿ 2ನೇ ಬಾರಿ ಬೀಜಾಡಿ ಮಿತ್ರಸೌಧದಲ್ಲಿ ಕೋವಿಶೀಲ್ಡ್ ವ್ಯಾಕ್ಸಿನೇಶನ್ ಶಿಬಿರ ಶುಕ್ರವಾರ ನಡೆಯಿತು.
ಬೀಜಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಮತಿ ನಾಗರಾಜ ಶಿಬಿರಕ್ಕೆ ಚಾಲನೆ ನೀಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಬೀಜಾಡಿ ಗ್ರಾಮ ಪಂಚಾಯಿತಿ ಸದಸ್ಯ ಬಿ.ವಾದಿರಾಜ ಹೆಬ್ಬಾರ್ ವಹಿಸಿದ್ದರು.
ಈ ಸಂದರ್ಭದಲ್ಲಿ ಬೀಜಾಡಿ ಗ್ರಾಮ ಪಂಚಾಯಿತಿ ಸದಸ್ಯರಾದ ಚಂದ್ರ ಬಿ.ಎನ್, ಮಂಜುನಾಥ್ ಕುಂದರ್, ಶೇಖರ ಛಾತ್ರಬೆಟ್ಟು, ಮಾಜಿ ಸದಸ್ಯ ಶಂಕರನಾರಾಯಣ ಗಾಣಿಗ ಮೊದಲಾದವರು ಉಪಸ್ಥಿತರಿದ್ದರು. ಶಿಬಿರದ ಯಶಸ್ವಿಗೆ ಕುಂಭಾಶಿ ಪ್ರಾಥಮಿಕ ಆರೋಗ್ಯ ಕೇಂದ್ರದ ಶುಶ್ರೂಷಕಿಯರಾದ ಅಶ್ವಿನಿ, ಆಶಾ ಕಾರ್ಯಕರ್ತೆಯರಾದ ಸರೋಜಾ, ಚೇತನಾ, ನಾಗಶ್ರೀ, ಗೀತಾ, ಅನಿತಾ, ನೇತ್ರಾವತಿ, ಶೋಭಾ, ಸುವಾಸಿನಿ,ವೈಲೆಟ್ ಬರೆಟ್ಟೋ,ಬೀಜಾಡಿ ಗ್ರಾಮ ಪಂಚಾಯಿತಿ ಸಿಬಂದಿ ನಾರಾಯಣ, ಮಿತ್ರ ಸಂಗಮದ ಸದಸ್ಯರಾದ ನಾಗರಾಜ ಬೀಜಾಡಿ, ವಿನಯ ಹೆಬ್ಬಾರ್, ವಿವೇಕ್ ಹೆಬ್ಬಾರ್, ಪ್ರದೀಪ್ ದೇವಾಡಿಗ, ಗಜೇಂದ್ರ, ರಾಜೇಶ್ ಆಚಾರ್ಯ,ಅರುಣ್ ದೇವಾಡಿಗ, ಬೀಜಾಡಿ ರೋಟರಿ ಸಮುದಾಯ ದಳದ ಅಧ್ಯಕ್ಷ ಗಿರೀಶ್ ಕೆ.ಎಸ್,ಬೀಜಾಡಿ ಗೆಳೆಯರ ಬಳಗದ ಸುಕೇಶ್ ಮೊಗವೀರ ಮೊದಲಾದವರು ಸಹಕರಿಸಿದರು. ಈ ಶಿಬಿರದಲ್ಲಿ 163 ಮಂದಿಗೆ ಕೋವಿಶೀಲ್ಡ್ ವ್ಯಾಕ್ಸಿನೇಶನ್ ಮಾಡಲಾಯಿತು.

ಕೋಲಾರ: ಮಕ್ಕಳಲ್ಲಿ ಹೆಚ್ಚಾಗುತ್ತಿರುವ ವೈರಲ್ ಫೀವರ್ ತಡೆಗೆ ವಿಶೇಷ ವೈದ್ಯರ ತಂಡ ರಚಿಸಿ- ಜೊತೆಗೆ ನಕಲಿ ಕ್ಲಿನಿಕ್‍ಗಳಿಗೆ ಕಡಿವಾಣ ಹಾಕಿ

ವರದಿ:ಶಬ್ಬೀರ್ಅಹಮ್ಮದ್,ಶ್ರೀನಿವಾಸಪುರ

ಕೋಲಾರ: ಮಕ್ಕಳಲ್ಲಿ ಹೆಚ್ಚಾಗುತ್ತಿರುವ ವೈರಲ್ ಫೀವರ್ ತಡೆಗೆ ವಿಶೇಷ ವೈದ್ಯರ ತಂಡ ರಚಿಸುವ ಜೊತೆಗೆ ಜಿಲ್ಲೆಯಲ್ಲಿನ ನಕಲಿ ಕ್ಲಿನಿಕ್‍ಗಳಿಗೆ ಕಡಿವಾಣ ಹಾಕುವಂತೆ ಆಗ್ರಹಿಸಿ ರೈತಸಂಘದಿಂದ ಆರೋಗ್ಯ ಇಲಾಖೆಯ ವೈದ್ಯಾಧಿಕಾರಿ ಡಾ.ಚಂದನ್‍ಗೆ ಮನವಿ ಸಲ್ಲಿಸಲಾಯಿತು.
ಮನವಿ ಸಲ್ಲಿಸಿ ಮಾತನಾಡಿದ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಕೊರೊನಾ 1ನೇ, 2ನೇ ಅಲೆಗಳಿಂದ ತತ್ತರಿಸಿದ್ದ ಜನರು ಇದೀಗ ಕೊಂಚ ಮಟ್ಟಿಗೆ ಚೇತರಿಕೆ ಕಾಣುತ್ತಿರುವ ಸಂದರ್ಭದಲ್ಲಿ ಈಗಾಗಲೇ ತಜ್ಞರು ನೀಡಿರುವ ಮೂರನೇ ಅಲೆಗೆ ಸಂಬಂಧಿಸಿದ ವರದಿಯು ಎಚ್ಚರಗೊಳಿಸುತ್ತಿದೆ.
ಮೂರನೇ ಅಲೆಯು ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರಲಿರುವುದಾಗಿ ವರದಿಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಇಂತಹ ಸಂದರ್ಭದಲ್ಲಿ ಜಿಲ್ಲೆಯಲ್ಲಿ ವೈರಲ್ ಫೀವರ್ ಮಕ್ಕಳಲ್ಲಿ ಕಾಣಿಸಿಕೊಂಡಿರುವುದು ಪೋಷಕರಲ್ಲಿ ಮತ್ತಷ್ಟು ಆತಂಕವನ್ನು ಉಂಟು ಮಾಡಿದೆ ಎಂದು ತಿಳಿಸಿದರು.
ಈಗಾಗಲೇ ನೂರಾರು ಮಕ್ಕಳು ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಆದರೆ, ಆರೋಗ್ಯ ಇಲಾಖೆಯಿಂದ ಯಾವುದೇ ಕ್ರಮಕೈಗೊಳ್ಳದೇ ಇರುವುದು ಖಂಡನೀಯವಾಗಿದ್ದು, ಕೂಡಲೇ ವಿಶೇಷ ವೈದ್ಯರ ತಂಡವನ್ನು ರಚಿಸಿ ಮಕ್ಕಳ ರಕ್ಷಣೆಗೆ ಅಗತ್ಯ ಕ್ರಮಕೈಗೊಳ್ಳಬೇಕಿದೆ ಎಂದು ಆಗ್ರಹಿಸಿದರು.
ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ ಮಾತನಾಡಿ, ಇನ್ನು ಜಿಲ್ಲೆಯಲ್ಲಿ ನಕಲಿ ಕ್ಲಿನಿಕ್‍ಗಳ ಹಾವಳಿ ಬಗ್ಗೆ ಸಾಕಷ್ಟು ಬಾರಿ ಮನವಿ ಮೂಲಕ ದೂರು ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಗಡಿ ಭಾಗಗಳಲ್ಲಂತೂ ಪರಿಸ್ಥಿತಿ ಹೇಳತೀರದಾಗಿದ್ದು, ಜನರ ಜೀವಗಳ ಜೊತೆ ಚೆಲ್ಲಾಟವಾಡುತ್ತಿದ್ದರೂ ಸಂಬಂಧಪಟ್ಟ ಇಲಾಖೆಯವರು ಮೌನಕ್ಕೆ ಶರಣಾಗಿರುವುದು ಸರಿಯಲ್ಲ.
ಈಗಾಗಲೇ ಮಕ್ಕಳಲ್ಲಿ ವೈರಲ್ ಫೀವರ್ ಕಾಣಿಸಿಕೊಂಡಿದ್ದು, ಆರೋಗ್ಯ ಇಲಾಖೆಯಿಂದ ಸೂಕ್ತ ಕ್ರಮಕೈಗೊಳ್ಳದ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದ ಜನರು ವಿಧಿಯಿಲ್ಲದೆ ನಕಲಿ ಕ್ಲಿನಿಕ್‍ಗಳ ಮೊರೆ ಹೋಗಬೇಕಾಗಿದೆ. ಹೀಗಾಗಿ ವಿಶೇಷ ವೈದ್ಯರ ತಂಡ ರಚನೆ ಮಾಡುವ ಜೊತೆಗೆ ನಕಲಿ ಕ್ಲಿನಿಕ್‍ಗಳಿಗೆ ಕಡಿವಾಣ ಹಾಕಿ ಜನರ ಆರೋಗ್ಯ ರಕ್ಷಣೆಗೆ ಮುಂದಾಗಬೇಕೆಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಡಾ.ಚಂದನ್, ತಮ್ಮ ಮನವಿಯನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಅಗತ್ಯ ಕ್ರಮಕೈಗೊಳ್ಳುವ ಭರವಸೆ ನೀಡಿದರು.
ಮನವಿ ನೀಡುವಾಗ ಜಿಲ್ಲಾಧ್ಯಕ್ಷ ಐತಾಂಡಹಳ್ಳಿ ಮಂಜುನಾಥ್, ತಾಲೂಕು ಅಧ್ಯಕ್ಷ ಈಕಂಬಳ್ಳಿ ಮಂಜುನಾಥ್, ವಕ್ಕಲೇರಿ ಹನುಮಯ್ಯ, ಮಂಗಸಂದ್ರ ನಾಗೇಶ್, ತಿಮ್ಮಣ್ಣ, ಮಾಲೂರು ತಾಲೂಕು ಅಧ್ಯಕ್ಷ ಮಾಸ್ತಿ ವೆಂಕಟೇಶ್, ಬೂದಿಕೋಟೆ ಅಧ್ಯಕ್ಷ ನಾಗಯ್ಯ ಮತ್ತಿತರರು ಉಪಸ್ಥಿತರಿದ್ದರು.

ಪ್ರತಿಯೊಬ್ಬರೂ ತಮ್ಮ ಕ್ಷೇತ್ರದಲ್ಲಿ ಶ್ರದ್ಧೆಯಿಂದ ಕಾರ್ಯನಿರ್ವಹಿಸಿದರೆ ಆಗ ಸಾಮಾಜಿಕ ಮನ್ನಣೆ ದೊರೆಯುತ್ತದೆ: ತಹಶೀಲ್ದಾರ್ ಎಸ್.ಎಂ.ಶ್ರೀನಿವಾಸ್

ವರದಿ:ಶಬ್ಬೀರ್ಅಹಮ್ಮದ್,ಶ್ರೀನಿವಾಸಪುರ

ಶ್ರೀನಿವಾಸಪುರ: ಪ್ರತಿಯೊಬ್ಬರೂ ತಮ್ಮ ಕ್ಷೇತ್ರದಲ್ಲಿ ಶ್ರದ್ಧೆಯಿಂದ ಕಾರ್ಯನಿರ್ವಹಿಸಬೇಕು. ಆಗ ಸಾಮಾಜಿಕ ಮನ್ನಣೆ ದೊರೆಯುತ್ತದೆ ಎಂದು ತಹಶೀಲ್ದಾರ್ ಎಸ್.ಎಂ.ಶ್ರೀನಿವಾಸ್ ಹೇಳಿದರು.
ಪಟ್ಟಣದ ಸರ್ಕಾರಿ ನೌಕರರ ಭವನದ ಸಭಾಂಗಣದಲ್ಲಿ ಸ್ನೇಹ ಸಂಗಮ ಟ್ರಸ್ಟ್ ವತಿಯಿಂದ ಗುರುವಾರ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭ ಹಾಗೂ ವಿಶ್ವ ಎಂಜಿಯರ್‍ಗಳ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ವಿಶ್ವ ಖ್ಯಾತ ಎಂಜಿನಿಯರ್ ಸರ್.ಎಂ.ವಿಶ್ವೇಶ್ವರಯ್ಯ ಅವರು ತಮ್ಮ ಅಪ್ರತಿಮ ಪ್ರತಿಭೆಯಿಂದ ವಿಶ್ವಮಾನ್ಯರಾಗಿದ್ದಾರೆ ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಉಮಾದೇವಿ ಮಾತನಾಡಿ, ತಾಲ್ಲೂಕಿನಲ್ಲಿ ಉತ್ತಮ ಶೈಕ್ಷಣಿಕ ವಾತಾವರಣವಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತಾಲ್ಲೂಕು ರಾಜ್ಯಕ್ಕೆ ಎರಡನೇ ಸ್ಥಾನ ಬಿಟ್ಟುಕೊಟ್ಟಿಲ್ಲ. ಇದು ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರ ಸಾಂಘಿಕ ಪ್ರಯತ್ನದ ಫಲ. ಮುಂದೆ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆಯಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್.ಆನಂದ್ ಮಾತನಾಡಿ, ಸ್ನೇಹ ಸಂಗಮ ಟ್ರಸ್ಟ್ ಒಂದು ಸಮಾನ ಮನಸ್ಕರ ಸೇವಾ ಸಂಸ್ಥೆಯಾಗಿದೆ. ಟ್ರಸ್ಟ್ ಮೂಲ ಸಮಾಜ ಮುಖಿಯಾಗಿ ಕಾರ್ಯನಿರ್ವಹಿಸಲಾಗುತ್ತಿದೆ. ಒಂದು ಪ್ರೋತ್ಸಾಹದ ಮಾತು ಮಕ್ಕಳ ಸಾಮಥ್ರ್ಯವನ್ನು ದ್ವಿಗುಣಗೊಲಿಸುತ್ತದೆ. ಈ ಕಾರ್ಯದಲ್ಲಿ ಕೈಜೋಡಿಸಿರುವ ಎಲ್ಲರೂ ಅಭಿನಂದನಾರ್ಹರು ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿರುವ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ನೆನೆಪಿನ ಕಾಣಿಕೆ ನೀಡಲಾಯಿತು.
ಟ್ರಸ್ಟ್ ಅಧ್ಯಕ್ಷೆ ನಾಗವೇಣಿ ರೆಡ್ಡಿ, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ನಾಗರಾಜ್, ಕಾರ್ಯಪಾಲಕ ಎಂಜಿನಿಯರ್‍ಗಳಾದ ಎಂ.ಕೆ.ಹುಸೇನ್ ಸಭಾಬ್, ನಾರಾಯಣಸ್ವಾಮಿ, ಕೆವಿಸಿ ರೆಡ್ಡಿ, ರಾಮು ಇದ್ದರು.

ತಾಡಿಗೋಳ್ನಲ್ಲಿ ವಿದ್ಯಾರ್ಥಿನಿಯರ ಹಾಗೂ ಪೋಷಕರ ಮೇಲೆ ದೌರ್ಜನ್ಯವೆಸಿಗಿದವರ ಮೇಲೆ ಶೀಘ್ರ್ರವೇ ಶಿಕ್ಷೆಯಾಗಬೇಕು

ವರದಿ:ಶಬ್ಬೀರ್ಅಹಮ್ಮದ್,ಶ್ರೀನಿವಾಸಪುರ

ಶ್ರೀನಿವಾಸಪುರ: ತಾಡಿಗೋಳ್ ಕ್ರಾಸ್‍ನಲ್ಲಿ ವಿದ್ಯಾರ್ಥಿನಿಯರ ಹಾಗೂ ಅವರ ಪೋಷಕರ ಮೇಲೆ ದೌರ್ಜನ್ಯವೆಸಿಗಿದವರ ಮೇಲೆ ಶೀಘ್ರ್ರವೇ ಶಿಕ್ಷೆಯಾಗಬೇಕು ಸಮಾಜದಲ್ಲಿ ಮಹಿಳೆಯರು ಸ್ವತಂತ್ರವಾಗಿ ಬದಕಲು ವಾತವರಣವನ್ನು ಸೃಷ್ಠಿಸಬೇಕು ಎಂದು ಒತ್ತಾಯಿಸಿ ಜಿಲ್ಲಾ ಪ್ರಗತಿಪರ ಮಹಿಳಾ ಸಂಘಟನೆಗಳ ಒಕ್ಕೂಟದಿಂದ ತಾಲ್ಲೂಕು ಕಛೇರಿಯ ಮುಂದೆ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.
ತಾಲ್ಲೂಕಿನ ಗೌನಿಪಲ್ಲಿ, ತಾಡಿಗೋಳ್ ಕ್ರಾಸ್, ಇಂದಿರಾಭವನ ವೃತ್ತ ತಾಲ್ಲೂಕು ಕಛೇರಿಯ ಮುಂದೆ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಮುಖಂಡರಾದ ಶಾಂತಮ್ಮ ಸಮಾಜದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತವೆ. ಇದರಿಂದ ಹೆಣ್ಣು ಮಕ್ಕಳು ಭಯಬೀತರಾಗಿ ಹೋರಾಡುವ ಸ್ಥಿತಿ ನಿರ್ಮಾಣವಾಗಿದೆ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಹೆಣ್ಣು ಮಕ್ಕಳ ರಕ್ಷಣೆಯ ಹೊಣೆ ಹೊತ್ತಿರುವಂತಹ ಜನಪ್ರತಿನಿಧಿಗಳು ಮೌನಕ್ಕೆ ಶರಣಾಗಿದ್ದಾರೆ. ಇತ್ತೀಚಿಗೆ ತಾಡಿಗೋಳ್ ಕ್ರಾಸ್‍ನಲ್ಲಿ ನಡೆದ ಘಟನೆ ಸಮಾಜ ತಲೆ ತಗ್ಗಿಸುವಂತಾಗಿದೆ ಎಂದರು.
ಹೆಣ್ಣು ಮಕ್ಕಳ ಮೇಲೆ ಸುಮಾರು 50 ರಿಂದ 60 ಜನರು ಗುಂಪು ಕಟ್ಟಿಕೊಂಡು ಸ್ಕೂ ಡೈವರ್, ದೊಣ್ಣೆಗಳು, ಮುಂತಾದ ಮಾರಕಾಸ್ತುಗಳಿಂದ ಹಲ್ಲೆ ಮಾಡಿ ಹೆಣ್ಣು ಮಕ್ಕಳಿಗೆ ಕೂದಲು ಹಿಡಿದು ಎಳೆದಾಡಿ ಮುಖ-ಮೂತಿ ನೋಡದೆ ಹಿಗ್ಗಾ-ಮುಗ್ಗಾ ಥಳಿಸಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ ಮಾಡಿರುತ್ತಾರೆ. ಜಿಮ್ ಅನಿಲ್ ಎಂಬ ವ್ಯಕ್ತಿ ಗ್ರಾಮ ಪಂಚಾಯಿತಿ ಸದಸ್ಯಳ ಮಗನಾಗಿದ್ದು ತನ್ನ ತಾಯಿಯ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಜಿಮ್‍ನಲ್ಲಿ ಸಧೃಡ ಯುವಕರನ್ನು ತೆಯಾರು ಮಾಡಿ ದೇಶಕ್ಕೆ ನೀಡುವ ಬದಲು ಇಂತಹ ಕ್ರೂರ ಹೇಯ ಕೃತ್ಯಗಳನ್ನು ನಡೆಸಲು ಗುಂಪು ಮಾಡಿರುವುದು ವಿಪರ್ಯಾಸ ಆಗಿದೆ. ಕೂಡಲೆ ಜಿಮ್ ಅನಿಲ್ ಎಂಬ ವ್ಯಕ್ತಿಯ ಜಿಮ್ ಲೈಸ್ಸ್‍ನ್ನು ರದ್ದು ಮಾಡಬೇಕು ಬಸ್‍ನಲ್ಲಿ ಪ್ರಯಾಣ ಮಾಡಲು ಎಲ್ಲಾ ಬಸ್‍ಗಳಲ್ಲಿ ಸಿಸಿ ಟಿ ವಿ ಕ್ಯಾಮರ್ ಆಳವಡಿಸಬೇಕು. ಬಸ್‍ಗಳಲ್ಲಿ ಮಹಿಳೆಯರಿಗೆ ಮಹಿಳಾ ಸೀಟ್‍ಗಳನ್ನು ಮಹಿಳೆಯರಿಗೆ ಮೀಸಲಿಡಬೇಕು ಹಾಗೆಯೇ ನೊಂದ ಹೆಣ್ಣು ಮಕ್ಕಳಿಗೆ ಅವರ ವಿದ್ಯಾಭ್ಯಾಸ ಮುಂದುವರಿಯಲು ಬೇಕಾದ ಎಲ್ಲಾ ಸುರಕ್ಷತಾ ವ್ಯವಸ್ತೆಯನ್ನು ಒದಗಿಸಿಕೊಡಬೇಕು.
ಕಾಲೇಜುಗಳ ಹಾಗೂ ಬಸ್ ನಿಲ್ದಾಣಗಳ ಬಳಿ ಹೆಣ್ಣು ಮಕ್ಕಳ ರಕ್ಷಣೆಗಾಗಿ ಚುಡಾಯಿಸಿ ಕಿರುಕುಳ ನೀಡುವ ಪುಂಡ ಪೋಕಿರಿಗಳ ಸದೆಬಡಿಯಲು ಕೋಲಾರಮ್ಮ ಪಡೆ ಮತ್ತು ಓಬವ್ವ ಪಡೆಗಳಂತಹ ರಕ್ಷಣಾ ಪಡೆಗಳನ್ನು ಸಮರ್ಪಕವಾಗಿ ರೂಪಿಸಿ ಜಾರಿಗೆ ತರಬೇಕು ನೊಂದವರಿಗೆ ಪರಿಹಾರವಾಗಿ ಅರ್ಥಿಕ ಸಹಾಯ ವಷ್ಟೆ ಅಲ್ಲದೆ ಮಾನಸಿಕವಾಗಿ ಅವರಿಗೆ ದೈರ್ಯವನ್ನು ತುಂಬುವ ಕೆಲಸ ಮಾಡಬೇಕು ಸರ್ಕಾರದಿಂದ ಬರುವ ಸೌಲಭ್ಯಗಳನ್ನು ಕೂಡಲೆ ಒದಗಿಸಬೇಕು ಈ ಘಟನೆಯಲ್ಲಿ ಬಾಗಿಯಾಗಿರುವ ಆರೋಪಿಗಳಿಗೆ ಕಠಿಣ ಕಾನೂನುಕ್ರಮ ಜರುಗಿಸಬೇಕು. ಮಹಿಳೆಯರ ರಕ್ಷಣೆಗೆ ಪ್ರಮುಖ್ಯತೆ ನೀಡಿ ಸುರಕ್ಷಿತ ಸಮಾಜ ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿದರು. ಇದೇ ಸಮಯದಲ್ಲಿ ತಹಶಿಲ್ದಾರ್ ಎಸ್.ಎಂ.ಶ್ರೀನಿವಾಸ್ ಮನವಿ ಪತ್ರ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ವಿವಿಧ ಸಂಘಟನೆಯ ಮುಖಂಡರಾದ ವೆಂಕಟಾಚಲಪತಿ, ಎ. ನಳನಿಗೌಡ, ಲಕ್ಷ್ಮೀ, ಶಿಲ್ಪ, ನೇತ್ರ. ಕೋಲಾರ ಮಹಿಳಾ ಸಮಾಖ್ಯಾ ಸಿಬ್ಬಂದಿಯಾದ ಕೆ.ಅರುಣ, ಪದ್ಮ, ರುಚಿತ, ಶ್ಯಾಮಲ, ಅನುಷ, ಶಶಿರಾಜ್, ಶ್ರೀನಾಥ, ವೇಣು, ಪವನ್, ಇನ್ನೀತರರು ಉಪಸ್ಥಿತರಿದ್ದರು.

ಅಂಗವಿಕಲ ಹಕ್ಕುಗಳ ಕಾಯಿದೆಯು ಅಂಗವಿಕಲರ ಹಕ್ಕುಗಳ ರಕ್ಷಣೆಗೆ ಸಹಕಾರಿ- ಎಸ್.ಕೆ ಪದ್ಮನಾಭ್

JANANUDI.COM NETWORK

ಜಿಲ್ಲಾ ಮಟ್ಟದ ವಿಶೇಷ ಶಾಲಾ ಶಿಕ್ಷಕರ ಪುನಶ್ಚೇತನ ತರಬೇತಿ ಕಾರ್ಯಾಗಾರ

ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಮತ್ತು ಲಯನ್ಸ್ ಕ್ಲಬ್ ವಡೆರಹೋಬಳಿ, ಕುಂದಾಪುರ ಹಾಗೂ ನಾರಾಯಣ ವಿಶೇಷ ಮಕ್ಕಳ ಶಾಲೆ ತಲ್ಲೂರು ಇವರುಗಳ ಜಂಟಿ ಆಶ್ರಯದಲ್ಲಿ ಉಡುಪಿ ಜಿಲ್ಲೆಯ ವಿಶೇಷ ಶಾಲೆಗಳ ಶಿಕ್ಷಕರಿಗಾಗಿ ಒಂದು ದಿನದ ಪುನಶ್ಚೇತನ ತರಬೇತಿ ಕಾರ್ಯಾಗಾರವನ್ನು ದಿನಾಂಕ ೧೫.೦೯.೨೦೨೧ ರ ಬುಧವಾರ ಹಮ್ಮಿಕೊಳ್ಳಲಾಯಿತು.
ಕಾರ್ಯಾಗಾರದ ಉದ್ಘಾಟನೆಯನ್ನು ಡಿಸ್ಯಾಬಿಲಿಟಿ ಎನ್ ಜಿ ಒ ಅಲಯನ್ಸ್ ನ ಮ್ಯಾನೇಜರ್ ಶ್ರೀಮತಿ ರೂಪಲಕ್ಷ್ಮೀಯವರು ನಡೆಸಿದರು. ಮುಖ್ಯ ಅತಿಥಿ ಮತ್ತು ಸಂಪನ್ಮೂಲ ವ್ಯಕ್ತಿಗಳಾಗಿ ಕುಂದಾಪುರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ. ಎಸ್.ಕೆ ಪದ್ಮನಾಭರವರು ವಿಶೇಷ ಶಾಲಾ ಶಿಕ್ಷಕರಿಗೆ ಅಂಗವಿಕಲರ ಹಕ್ಕುಗಳ ಅಧಿನಿಯಮ -೨೦೧೬ರ ಕುರಿತು ಮಾಹಿತಿಯನ್ನು ನೀಡಿದರು. ಈ ಕಾಯಿದೆಯು ಅಂಗವಿಕಲರ ಹಕ್ಕುಗಳ ರಕ್ಷಣೆಯೊಂದಿಗೆ ವಿವಿಧ ಸವಲತ್ತುಗಳನ್ನು ನೀಡಿದೆ. ವಿಶೇಷವಾಗಿ ಈ ಕಾಯಿದೆಯು ಅಂಗವಿಕಲರ ಬದುಕನ್ನು ಉತ್ತಮಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು ಮತ್ತು ಕಾಯಿದೆಯಲ್ಲಿರುವ ಪ್ರಮುಖ ಅಂಶಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಾಗಾರದಲ್ಲಿ ಲಯನ್ಸ್ ಕ್ಲಬ್ ವಡೆರಹೋಬಳಿ, ಕುಂದಾಪುರ ಇದರ ಅಧ್ಯಕ್ಷರಾದ ಶ್ರೀ ಜಗದೀಶ್ ಶೇರೆಗಾರ್, ಸದಸ್ಯರಾದ ಪ್ರವೀಣ್ ಶೆಟ್ಟಿಯವರು ಮತ್ತು ತಲ್ಲೂರು ಫ್ಯಾಮಿಲಿ ಟ್ರಸ್ಟ್ನ ಮ್ಯಾನೇಜಿಂಗ್ ಟ್ರಸ್ಟಿ ಸುರೇಶ್ ತಲ್ಲೂರು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದಲ್ಲಿ ಸಂಸ್ಥೆಯು ಆಯೋಜಿಸಿದ ಯಶೋಗಾನ ಲೇಖನ ಸ್ಪರ್ಧೆಯಲ್ಲಿ ಆಯ್ಕೆಯಾದ ಲೇಖಕರಿಗೆ ನಗದು ಪುರಸ್ಕಾರ ಮತ್ತು ತಲ್ಲೂರು ಪ್ರೌಢ ಶಾಲೆಯಲ್ಲಿ ಎಸ್.ಎಸ್.ಎಲ್ಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಕಾರ್ಯಕ್ರಮದಲ್ಲಿ ತಲ್ಲೂರು ಫ್ಯಾಮಿಲಿ ಟ್ರಸ್ಟಿನ ಮ್ಯಾನೇಜಿಂಗ್ ಟ್ರಸ್ಟಿ ಸುರೇಶ್ ತಲ್ಲೂರು ಸ್ವಾಗತಸಿದರು. ಇನ್ನೊರ್ವ ಟ್ರಸ್ಟಿ ವಸಂತ ಶ್ಯಾನುಬೋಗ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಡಳಿತಾಧಿಕಾರಿ ಚಂದ್ರಶೇಖರರವರು ವಂದಿಸಿದರು. ಸಹ ಶಿಕ್ಷಕಿ ಶ್ರೀಮತಿ ದೀಪಾ ಕಾರ್ಯಕ್ರಮ ನಿರೂಪಿಸಿದರು. ನಂತರ ಕಾರ್ಯಾಗಾರದಲ್ಲಿ ವಿವಿಧ ವಿಷಯಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳು ಮಾಹಿತಿ ಮತ್ತು ಗುಂಪು ಚರ್ಚೆ ನಡೆಯಿತು.

ಡಾ ಸೋನಿಯವರಿಗೆ ಜೆಸಿಐನ ಜೇಸಿ ‘ಕಮಲ ಪತ್ರ’ ಪುರಸ್ಕಾರ

JANANUDI.COM NETWORK

ಕುಂದಾಪುರ: ಜೆಸಿಐ ನ ಅತ್ಯುನ್ನತ ವಾದ ಗೌರವ ಗಳಲ್ಲಿ ಒಂದಾದ ಜೇಸಿ ಕಮಲ ಪತ್ರ ಪುರಸ್ಕಾರವನ್ನು ಜೆಸಿಐ ಕುಂದಾಪುರ ಸಿಟಿ ಯಾ ಜೇಸಿರೇಟ್ ವಿಭಾಗದ ಅಧ್ಯಕ್ಷೆ ಯಾದ ಡಾ ಸೋನಿ ಯವರಿಗೆ ಜೆಸಿಐ ಕುಂದಾಪುರ ಸಿಟಿ ಯಾ ಪರವಾಗಿ ವಲಯ 15ರ ವಲಯಧ್ಯಕ್ಷೆ ಸೌಜನ್ಯ ಹೆಗ್ಡೆ ಯವರು ಪ್ರಶಸ್ತಿ ಪ್ರದಾನ ಮಾಡಿದರು
ಈ ಸಂದರ್ಭದಲ್ಲಿ ಮಾತನಾಡಿ ಯುವ ಜನತೆಗೆ ತನ್ನ ವೆಕ್ತಿತ್ವ ವಿಕಸನಕ್ಕೆ ಬೇಕಾಗುವ ಅವಕಾಶ ವನ್ನು ಕಲ್ಪಿಸಿ ಅವರನ್ನು ಸಮಾಜದ ಕ್ರಿಯಾಶೀಲ ನಾಗರೀಕ ರನ್ನಾಗಿ ಮಾಡುವ ಕಾರ್ಯದಲ್ಲಿ ತೋಡುಗುವಂತೆ ಉದ್ದೇಶ ವನ್ನು ಹೊಂದಿರುವ ಜೆಸಿಐ ಸಂಸ್ಥೆ ವಲಯ 15 ರ ಜೆಸಿಐ ಕುಂದಾಪುರ ಸಿಟಿ ಯಾ ಮೂಲಕ ಹಲವಾರು ನಾಯಕರು ಗಳನ್ನು ವಲಯಕ್ಕೆ ಪರಿಚಯಿಸಿದೆ ಎಂದು ನುಡಿದರು
ಜೆಸಿಐ ಇಂಡಿಯಾ ದ ರಾಷ್ಟ್ರೀಯ ನಿರ್ದೇಶಕ ರಾದ ಕೆ ಕಾರ್ತಿಕೇಯ ಮಧ್ಯಸ್ಥ ಮಾತನಾಡಿ ಯುವ ಜನರಲ್ಲಿ ಗುಣಾತ್ಮಕ ಬದಲಾವಣೆ ತರಬಲ್ಲ ನಾಯಕತ್ವ ಸಾಮಾಜಿಕ ಜವಾಬ್ದಾರಿ ವ್ಯಾವಹಾರಿಕತೆ ಹಾಗು ಸ್ನೇಹತ್ವದ ಗುಣಗಳನ್ನು ಬೆಳೆಸುವುದೇ ಜ್ಯೂನಿಯರ್ ಛೇ0ಬರ್ ನ ಉದ್ದೇಶ ವಾಗಿದೆ ಎಂದು ನುಡಿದರು
ಸಮಾರಂಭ ದಲ್ಲಿ ವಲಯ 15 ರ ಉಪಾಧ್ಯಕ್ಷ ನಾಗೇಶ್ ನಾವಡ
ವಲಯ ನಿರ್ದೇಶಕ ಅಬ್ದುಲ್ ಸಮದ್ ಖಾನ್ ವಲಯಾಧಿಕಾರಿ ಪ್ರಶಾಂತ್ ಹವಾಲ್ದಾರ್
ಜೆಸಿಐ ಕುಂದಾಪುರ ಸಿಟಿ ಯಾ ಸ್ಥಾಪಕ ಅಧ್ಯಕ್ಷ ಹುಸೇನ್ ಹೈಕಾಡಿ ಪೂರ್ವ ಅಧ್ಯಕ್ಷ ರಾದ ಗಿರೀಶ್ ಹೆಬ್ಬಾರ್ ರಾಘವೇಂದ್ರ ಚರಣ್ ನಾವಡ ಜಯಚಂದ್ರ ಶೆಟ್ಟಿ ಶ್ರೀಧರ್ ಸುವರ್ಣ ಚಂದ್ರಕಾಂತ್ ಯುವ ಜೇಸಿ ಅಧ್ಯಕ್ಷ ಸ್ಯಾಮ್ಯುಯೆಲ್ ಸದ್ಯಸ್ಯರು ಗಳಾದ ಮಹೇಶ್ ಶೇಟ್ ಸಂದೇಶ್ ಶೆಟ್ಟಿ ದಿನೇಶ್ ಪುತ್ರನ್ ದಿನೇಶ್ ಬಸ್ರೂರ್ ಸಾಯಿನಾಥ ಶೇಟ್ ಸೋಹನ್ ಶೆಟ್ಟಿ ಇನ್ನಿತರರು ಉಪಸ್ಥಿತರಿದ್ದರು
ಜೆಸಿಐ ಕುಂದಾಪುರ ಸಿಟಿ ಯಾ 2022ರ ಅಧ್ಯಕ್ಷರಾಗಿ ಅಭಿಲಾಶ್ ಇವರನ್ನು ಅಭಿನಂದಿಸಲಾಯಿತು
ಜೆಸಿಐ ಕುಂದಾಪುರ ಸಿಟಿ ಅಧ್ಯಕ್ಷ ವಿಜಯ್ ಭಂಡಾರಿ ಸ್ವಾಗತಿಸಿ ಕಾರ್ಯದರ್ಶಿ ಗುರುರಾಜ್ ಕೊತ್ವಾಲ್ ವಂದಿಸಿದರು
.