HOLY ROSARY CHURCH, KUNDAPUR – 450 th JUBILEE SOUVENIR 2021

ಜನವರಿ 01 , 2022 ಕ್ಕೆ 18 ವರ್ಷ ತುಂಬುವ ಯುವಕ – ಯುವತಿಯರು ಮತದಾರರ ಪಟ್ಟಿಗೆ ಹೆಸರು ನೊಂದಾಯಿಸಿಕೊಳ್ಳಿ -ಡಾ || ಆರ್.ಸೆಲ್ವಮಣಿ

ವರದಿ : ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಕೋಲಾರ: ಭಾವಚಿತ್ರವುಳ್ಳ ಮತದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ 2022 ಕಾರ್ಯಕ್ರಮವನ್ನು ನವೆಂಬರ್ 08 ರಿಂದ ಡಿಸೆಂಬರ್ 08 ರವರೆಗೆ ಹಮ್ಮಿಕೊಳ್ಳಲಾಗಿದ್ದು , ಮತದಾರರ ಪಟ್ಟಿಗೆ ಸೇರ್ಪಡೆ , ಬಿಡತಕ್ಕವುಗಳು ಮತ್ತು ತಿದ್ದುಪಡಿಗಳನ್ನು ಮಾಡಲಾಗುವುದು , ಜನವರಿ 01,2022 ಕ್ಕೆ 18 ವರ್ಷ ವರ್ಷ ತುಂಬುವ ಯುವಕ ಯವತಿಯರು ಮತದಾರರ ಪಟ್ಟಿಗೆ ಮೊದಲ ಬಾರಿಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಾದ ಡಾ || ಆರ್.ಸೆಲ್ವಮಣಿ ಅವರು ತಿಳಿಸಿದರು .

ಇಂದು ತಮ್ಮ ಕಛೇರಿಯ ನ್ಯಾಯಾಂಗ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಭಾವಚಿತ್ರವುಳ್ಳ ಮತದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ 2022 ರ ಕಾರ್ಯಕ್ರಮದ ಅನುಷ್ಠಾನ ಹಾಗೂ ನಿರ್ವಹಿಸುವ ಕಾರ್ಯ ಚಟುವಟಿಕೆಗಳ ಕುರಿತು ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು . ಸಾರ್ವಜನಿಕರು ಭಾರತ ಚುನಾವಣಾ ಆಯೋಗದ Voter Helpline App ಮೂಲಕ ನಮೂನೆ 6 , 7 , 8 ಮತ್ತು 8 ಎ ಅರ್ಜಿಗಳನ್ನು ಆನ್‌ಲೈನ್ ಮೂಲಕ ದಾಖಲೆಗಳನ್ನು ಅಪ್‌ಲೋಡ್ ಮಾಡಿ ಹೆಸರುಗಳನ್ನು ನೋಂದಾಯಿಸಿಕೊಳ್ಳಬಹುದು ಹಾಗೂ ಮುಖ್ಯ ಚುನಾವಣಾಧಿಕಾರಿಗಳು , ಕರ್ನಾಟಕ ಬೆಂಗಳೂರು ರವರ http://www.voterreg.kar.nic.in ಹಾಗೂ http://www.nvsp.in ರಲ್ಲಿ ನೋಂದಾಯಿಸಿಕೊಳ್ಳಬಹುದು ಎಂದು ಅವರು ತಿಳಿಸಿದರು .

ಸಾರ್ವಜನಿಕರು ನಮೂನೆ -6 ಸೇರ್ಪಡೆಗಾಗಿ ಮತ್ತು ನಮೂನೆ -8 ತಿದ್ದುಪಡಿಗಾಗಿ ಸಲ್ಲಿಸವಾಗ ಹಟ್ಟಿದ ದಿನಾಂಕದ ಆಧಾರಕ್ಕಾಗಿ ಜನನ ಮತ್ತು ಮರಣ ನೋಂದಣಾಧಿಕಾರಿಗಳಿಂದ ನೀಡುವ ಜನನ ಪ್ರಮಾಣ ಪತ್ರ , ಆಧಾರ್ ಕಾರ್ಡ್ , ಪ್ಯಾನ್ ಕಾರ್ಡ್ , ಚಾಲನ ಪರವಾನಿಗೆ , 10 ನೇ ತರಗತಿ ಹಾಗೂ ದ್ವಿತೀಯ ಪಿ.ಯು.ಸಿ ಅಂಕಪಟ್ಟಿ ಅಥವಾ ಭಾರತದ ಭಾರತದ ಪಾಸ್ಪೋರ್ಟ್ ಮತ್ತು ನಿವಾಸದ ಆಧಾರಕ್ಕಾಗಿ ಅದೇ ವಿಳಾಸವುಳ್ಳ ಕನಿಷ್ಠ 1 ವರ್ಷ ನೀರು , ವಿದ್ಯುತ್ , ಗ್ಯಾಸ್ ಸಂಪರ್ಕ ಬಿಲ್ , ಆಧಾರ್ ಕಾರ್ಡ್ , ಚಾಲ್ತಿಯಲ್ಲಿರುವ ಬ್ಯಾಂಕಿನ ಪಾಸ್ ಬುಕ್ ಅಥವಾ ಪೋಸ್ಟ್ ಆಫೀಸ್ ಪುಸ್ತಕ , ಭಾರತದ ಪಾಸ್ಪೋರ್ಟ್ , ನೋಂದಾಯಿತಿ ಬಾಡಿಗೆ ಕರಾರು ಪತ್ರ ಹಾಗೂ ನೋಂದಾಯಿತಿ ಮಾರಾಟ ಕರಾರು ಪತ್ರ ಇವುಗಳಲ್ಲಿ ಯಾವುದಾದರು ಒಂದು ದಾಖಲೆಗಳನ್ನು ನೀಡಬೇಕು ಎಂದು ಅವರು ತಿಳಿಸಿದರು . ಮತದಾರರ ಪಟ್ಟಿಯಲ್ಲಿ ಹೆಸರುಗಳನ್ನು ಸೇರಿಸಿಕೊಳ್ಳದೇ ಇರುವವರು ನಮೂನೆ 6 ರಲ್ಲಿ ಅರ್ಜಿಗಳನ್ನು ಸಲ್ಲಿಸಬಹುದು . ಮತದಾರರ ಪಟ್ಟಿಯಲ್ಲಿ ವಿವರಗಳು ತಪ್ಪಿದ್ದಲ್ಲಿ ನಮೂನೆ 8 ರಲ್ಲಿ ಅರ್ಜಿ ಸಲ್ಲಿಸಿ ತಿದ್ದುಪಡಿ ಮಾಡಿಕೊಳ್ಳಬಹುದು . ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಮತ ಪ್ರದೇಶದ ವರ್ಗಾವಣೆ ಬಯಸುವವರು ನಮೂನೆ 8 ಎ ರಲ್ಲಿ ಅರ್ಜಿ ಸಲ್ಲಿಸಿ ವರ್ಗಾವಣೆ ಮಾಡಿಕೊಳ್ಳಬಹುದು . ಮತದಾರರ ಪಟ್ಟಿಯಲ್ಲಿ ಭಾವಚಿತ್ರವಿಲ್ಲದಿರುವವರು ನಮೂನೆ 8 ರೊಂದಿಗೆ ಭಾವಚಿತ್ರ ಸಹಿತ ಅರ್ಜಿ ಸಲ್ಲಿಸಬಹುದು . ಮೃತ ಹಾಗೂ ಶಾಶ್ವತವಾಗಿ ಸ್ಥಳಾಂತರಗೊಂಡಿರುವವರು ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಲು ನಮೂನೆ 7 ರಲ್ಲಿ ಅರ್ಜಿಯನ್ನು ಸೂಕ್ತ ದಾಖಲೆಗಳೊಂದಿಗೆ ಸಲ್ಲಿಸಬಹುದು ಎಂದು ಅವರು ತಿಳಿಸಿದರು . ವಿಶೇಷ ಅಭಿಯಾನ ಕಾರ್ಯಕ್ರಮವನ್ನು ಭಾನುವಾರಗಳಾದ ನವೆಂಬರ್ 07 , 14 , 21 ಮತ್ತು 28 ರಂದು ನಡೆಸಲಾಗುವುದು . ಹಕ್ಕು ಮತ್ತು ಆಕ್ಷೇಪಣೆಗಳನ್ನು ಸ್ವೀಕರಿಸಲು ಮತಗಟ್ಟೆ ಹಂತದ ಅಧಿಕಾರಿಗಳು ತಮ್ಮ ಮತಗಟ್ಟೆಗಳಲ್ಲಿ ಬೆಳಿಗ್ಗೆ 10.00 ಗಂಟೆಯಿಂದ ಸಂಜೆ 5.00 ಗಂಟೆಯವರೆಗೆ ಉಪಸ್ಥಿತರಿರುತ್ತಾರೆ . ಹೆಚ್ಚಿನ ಸಹಕಾರ ಮತ್ತು ಮಾಹಿತಿಗಾಗಿ ಸಂಬಂಧಪಟ್ಟ ಮತಗಟ್ಟೆ ಪ್ರದೇಶದ ಬಿ.ಎಲ್.ಒ ಹಾಗೂ ಸಹಾಯಕ ಮತದಾರರ ನೋಂದಣಾಧಿಕಾರಿಗಳ ಕಛೇರಿಯನ್ನು ಸಾರ್ವಜನಿಕರು ಸಂಪರ್ಕಿಸಬೇಕು ಎಂದು ಅವರು ತಿಳಿಸಿದರು .

೫ ದಶಕಗಳ ಗುರುಭವನದ ಕನಸು ನನಗಾಗಿಸಲು ಸರ್ವ ಪ್ರಯತ್ನ ನ .೧೪ ಶಂಕುಸ್ಥಾಪನೆ , ೨೦೨೩ ಕ್ಕೆ ಉದ್ಘಾಟನೆಯ ಗುರಿ ಡಿಡಿಪಿಐ ನಾಗೇಶ್

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಕೋಲಾರ : ಗುರುಭವನ ನಿರ್ಮಾಣದ ೫ ದಶಕಗಳ ಕನಸು ನನಸಾಗಿಸಲು ಪ್ರತಿಯೊಬ್ಬರೂ ಕೈಜೋಡಿಸಿ , ನ .೧೪ ಕ್ಕೆ ಶಂಕುಸ್ಥಾಪನೆ ಮತ್ತು ೨೦೨೩ ರ ಸೆ .೫ ಕ್ಕೆ ಉದ್ಘಾಟನೆಗೆ ಕಾಲಮಿತಿಯಡಿ ಕೆಲಸ ಮಾಡೋಣ , ಈ ಸಂಬಂಧ ನ .೨ ರಂದು ಜಿಲ್ಲಾಧಿಕಾರಿಗಳನ್ನು ಭೇಟಿಯಾಗೋಣ ಎಂದು ಡಿಡಿಪಿಐ ಎಸ್.ಜಿ.ನಾಗೇಶ್ ತಿಳಿಸಿದರು .
ಶನಿವಾರ ನಗರದ ಸೌಟ್ ಭವನದಲ್ಲಿ ನಡೆದ ಜಿಲ್ಲಾ ಗುರುಭವನ ನಿರ್ಮಾಣ ಹಾಗೂ ನಿರ್ವಹಣಾ ಸಮಿತಿ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು . ಯಾವುದೇ ಒಳ್ಳೆಯ ಕೆಲಸ ಮಾಡಲು ಕಾಲಮಿತಿ ಮುಖ್ಯ ಈ ನಿಟ್ಟಿನಲ್ಲಿ ಎಲ್ಲಾ ಅಡ್ಡಿ , ಆತಂಕಗಳನ್ನು ನಿವಾರಿಸಿ ನ .೧೪ ಮಕ್ಕಳ ದಿನಾಚರಣೆಯಂದು ಬ್ರಾಹ್ಮ ಮಹೂರ್ತದಲ್ಲಿ ಗುದ್ದಲಿ ಪೂಜೆ ನೆರವೇರಿಸುವ ಸಂಕಲ್ಪ ಮಾಡಿ ಎಂದು ಸಮಿತಿಯ ಎಲ್ಲಾ ಸದಸ್ಯರಿಗೆ ಕಿವಿಮಾತು ಹೇಳಿದರು .

೧೦ ಕೋಟಿ ಅಂದಾಜು ನ .೨ ರಂದು ಡಿಸಿ ಭೇಟಿ

ಸುಸಜ್ಜಿತ ಗುರುಭವನ ನಿರ್ಮಾಣಕ್ಕೆ ೧೦ ಕೋಟಿ ರೂ ಅಂದಾಜು ವೆಚ್ಚವಾಗಲಿದ್ದು , ಈ ಸಂಬಂಧ ನ .೨ ರಂದು ಸಮಿತಿ ಕಾರ್ಯದರ್ಶಿ , ಸದಸ್ಯರೊಂದಿಗೆ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಭವನ ನಿರ್ಮಾಣದ ಕುರಿತು ಚರ್ಚಿಸಲು ವಿಧಾನಪರಿಷತ್ ಸದಸ್ಯರು ಹಾಗೂ ಶಾಸಕರ ಸಭೆ ನಡೆಸಲು ಮನವಿ ಮಾಡೋಣ ಎಂದರು .
ಜತೆಗೆ ಡಿಸಿಯವರ ಅಧ್ಯಕ್ಷತೆಯಲ್ಲಿ ಜಿಲ್ಲೆಯಲ್ಲಿರುವ ಕೈಗಾರಿಕೆಗಳ ಮುಖ್ಯಸ್ಥರ ಸಭೆ ನಡೆಸುವ ಮೂಲಕ ಸಿಎಸ್‌ಆರ್‌ ನಿಧಿ ಸಂಗ್ರಹಿಸಿ ಗುರುಭವನ ನಿರ್ಮಾಣದ ಕನಸು ನನಸಾಗಿಸೋಣ , ಶಿಕ್ಷಕರ ಕಲ್ಯಾಣ ನಿಧಿಯ ನೆರವು ಪಡೆಯೋಣ , ಇದಕ್ಕೆ ಎಲ್ಲಾ ಶಿಕ್ಷಕ ಸಂಘಟನೆಗಳ ಸಹಕಾರ ಅಗತ್ಯವಾಗಿದೆ ಎಂದು ತಿಳಿಸಿದರು . ಒಳ್ಳೆಯ ಕೆಲಸಕ್ಕೆ ವ್ಯಕ್ತಿ ಮುಖ್ಯವಲ್ಲ , ವ್ಯವಸ್ಥೆ ಮುಖ್ಯ , ಈಗಾಗಲೇ ಗುರುಭವನ ನಿರ್ಮಿಸುವ ಸ್ಥಳದಲ್ಲಿರುವ ಮರಗಳನ್ನು ಕಡಿಯಲು ಅರಣ್ಯ ಇಲಾಖೆ ಒಪ್ಪಿಗೆ ಸಿಕ್ಕಿದೆ , ಅಲ್ಲಿನ ಹಳೆ ಕಟ್ಟಡ ಕೆಡವಲೂ ಲೋಕೋಪಯೋಗಿ ಇಲಾಖೆ ಅನುಮತಿ ನೀಡಿದೆ , ಆ ಕಟ್ಟಡದಲ್ಲಿನ ಮರ , ಹಲಗೆಗಳನ್ನು ನಿಯಮಾನುಸಾರ ಹರಾಜು ಪ್ರಕ್ರಿಯೆ ನಡೆಸಿ ಅದರಿಂದ ಬಂದ ಹಣವನ್ನು ಸರ್ಕಾರಕ್ಕೆ ಸಂದಾಯ ಮಾಡುವ ಕಾರ್ಯ ಪಾರದರ್ಶಕವಾಗಿರುವಂತೆ ನೋಡಿಕೊಳ್ಳಿ ಎಂದು ಕಿವಿಮಾತು ಹೇಳಿದರು .
ಶಿಕ್ಷಣಾಧಿಕಾರಿ ಸಿ.ಆರ್‌.ಅಶೋಕ್ ಸ್ವಾಗತಿಸಿ , ಡಿಡಿಪಿಐ ಅವರ ಕ್ರಿಯಾಶೀಲತೆಯಿಂದ ಗುರುಭವನ ನಿರ್ಮಿಸುವ ಸಂಕಲ್ಪ ಇಂದು ಎಲ್ಲರಲ್ಲೂ ಮೂಡಿದೆ , ಈ ಕನಸು ನನಸಾಗಿಸಲು ಸಂಘಟನೆಗಳು ಕೆಲಸ ಮಾಡಬೇಕು ಎಂದರು . ಜಿಲ್ಲಾ ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಚೌಡಪ್ಪ ಮಾತನಾಡಿ , ಡಿಸಿಯವರಿಗೆ ಮನವಿ ಮಾಡಿ ಗುರುಭವನ ಕಟ್ಟಲು ಕೈಗಾರಿಕೆಗಳ ಸಿಎಸ್‌ಆರ್ ನಿಧಿ ಪಡೆಯಬೇಕು , ವಿಧಾನಪರಿಷತ್ ಸದಸ್ಯರ ಕ್ಷೇತಾಭಿವೃದ್ಧಿಯ ನೆರವು , ಕೆಲವು ಶಿಕ್ಷಕರು ತಮ್ಮ ತಂದೆ , ತಾಯಿ ಹೆಸರಿನಲ್ಲಿ ಭವನ ಕಾಮಗಾರಿಗೆ ಅಜೀವ ಸದಸ್ಯತ್ವದ ಹೆಸರಲ್ಲಿ ತಲಾ ೧ ಲಕ್ಷ ನೀಡಲು ಮುಂದ ಬಂದಿದ್ದು , ಅದನ್ನು ಸಂಗ್ರಹಿಸಬೇಕು ಎಂದರು .
ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಪ್ಪಯ್ಯಗೌಡ , ಗುರುಭವನ ನಿರ್ಮಾಣಕ್ಕೆ ಸಂಕಲ್ಪ ಮಾಡಿದ್ದೇವೆ , ಎಲ್ಲರನ್ನು ಒಟ್ಟಾಗಿ ಕರೆದೊಯ್ದು , ಯಾವುದೇ ಗೊಂದಲಕ್ಕೆ ಅವಕಾಶವಿಲ್ಲದಂತೆ ಕಾಮಗಾರಿ ಆರಂಭಿಸಲು ಸರ್ವರೀತಿಯಲ್ಲೂ ಪ್ರಯತ್ನಿಸವುದಾಗಿ ತಿಳಿಸಿ , ತಾವೂ ಒಂದು ಲಕ್ಷ ದೇಣಿಗೆ ನೀಡುವುದಾಗಿ ನುಡಿದರು . ಸಮಿತಿ ಕಾರ್ಯದರ್ಶಿ ಹಾಗೂ ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ನಾಗರಾಜ್ , ಡಿಡಿಪಿಐ ಎಸ್.ಜಿ.ನಾಗೇಶ್ ಅವರು ಇತರೆಲ್ಲಾ ಅಧಿಕಾರಿಗಳಿಗಿಂತ ಭಿನ್ನವಾಗಿದ್ದು , ಗುರುಭವನ ನಿರ್ಮಾಣಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ , ಅವರ ಈ ಪ್ರಯತ್ನ ಶ್ಲಾಘನೀಯವಾಗಿದೆ ಎಂದು ಅಭಿನಂದಿಸಿ , ಅಗತ್ಯವಾದಲ್ಲಿ ಶಿಕ್ಷಕರ ಒಂದು ದಿನದ ವೇತನ ಭವನ ನಿರ್ಮಾಣಕ್ಕೆ ದೇಣಿಗೆಯಾಗಿ ನೀಡೋಣ ಎಂದರು . ಶಿಕ್ಷಕರ ಸಂಘದ ಚಾಮುಂಡೇಶ್ವರಿ , ತಮ್ಮ ತಂದೆ ಹೆಸರಲ್ಲಿ ೧ ಲಕ್ಷ ರೂ ದೇಣಿಗೆ ನೀಡುವುದಾಗಿ ತಿಳಿಸಿದರೆ , ನೌಕರರ ಕ್ರೀಡಾಸಾಂಸ್ಕೃತಿಕ ಸಂಘದ ಕಾರ್ಯದರ್ಶಿ ಇಂಚರನಾರಾಯಣಸ್ವಾಮಿ , ನಾಟಕ ಪ್ರದರ್ಶನದ ಮೂಲಕ ಬಂದ ಆಧಾಯವನ್ನು ಭವನಕ್ಕೆ ನೀಡುವುದಾಗಿ ಭರವಸೆ ನೀಡಿದರು . ಸಿ.ಬೈರೇಗೌಡ ಇಂಜಿನಿಯರಿಂಗ್ ಕಾಲೇಜಿನ ಡಾ.ಶಿವರಾಜ್ , ಗುರುಭವನ ನಿರ್ಮಾಣಕ್ಕೆ ನಕ್ಷೆ ಮಾಡಿಕೊಡುವುದರ ಜತೆಗೆ ಎಲ್ಲಾ ರೀತಿಯ ಸಹಕಾರ ನೀಡುವ ಭರವಸೆ ನೀಡಿದರು . ಸಭೆಯಲ್ಲಿ ಇಲಾಖೆಯ ಅಧೀಕ್ಷಕರಾದ ಮಂಜುನಾಥಗೌಡ , ವಿವಿಧ ತಾಲ್ಲೂಕುಗಳ ಗುರುಭವನ ಸಮಿತಿಯ ಪದಾಧಿಕಾರಿಗಳಾದ ರಾಜಪ್ಪಮಾಲೂರು ಸುಧಾಕರ್ , ಮುಳಬಾಗಿಲು ಜಗದೀಶ್ , ಮುಳಬಾಗಿಲು ಜಿ.ಸಿ.ನಾಗರಾಜ್ , ಶ್ರೀನಿವಾಸಪುರದ ವರದರೆಡ್ಡಿ , ನಿವೃತ್ತ ಶಿಕ್ಷಕ ನಂಜುಂಡಪ್ಪ ಮತ್ತಿತರರು ಗುರುಭವನ ನಿರ್ಮಾಣಕ್ಕೆ ಎಲ್ಲಾ ರೀತಿಯಲ್ಲೂ ಸಹಕಾರ ನೀಡುವ ಭರವಸೆ ನೀಡಿ , ಈ ನಿಟ್ಟಿನಲ್ಲಿ ಡಿಡಿಪಿಐ ನಾಗೇಶ್ ಅವರ ಬದ್ಧತೆ , ಇಚ್ಚಾಶಕ್ತಿಯನ್ನು ಶ್ಲಾಘಿಸಿದರು .
ಸಭೆಯಲ್ಲಿ ಡಿಡಿಪಿಐ ಕಚೇರಿಯ ಸಾಂಖ್ಯಿಕ ಅಧಿಕಾರ ರವೀಂದ್ರ , ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ವಿ.ಮುರಳಿಮೋಹನ್ , ಕಚೇರಿ ಅಧೀಕ್ಷಕ ಗೋವಿಂದಗೌಡ , ವಿವಿಧ ಶಿಕ್ಷಕ ಸಂಘಟನೆಗಳ ಪದಾಧಿಕಾರಿಗಳಾದ ಎಂ.ಎನ್.ಶ್ರೀನಿವಾಸಮೂರ್ತಿ , ಎಸ್.ನಾರಾಯಣಸ್ವಾಮಿ , ನಾಗರಾಜ್ , ಮಾರ್ಕಂಡೇಶ್ವರ್ , ಮುರಳಿ , ಶರಣಪ್ಪ , ಅಧಿಕಾರಿಗಳಾದ ಸುಲೋಚನಾ , ವಸಂತ , ಕೆ.ವಿ.ನಾರಾಯಣಸ್ವಾಮಿ , ಮದಿಅಳಗನ್ ಮತ್ತಿತರರು ಉಪಸ್ಥಿತರಿದ್ದರು .

ಕೋಲಾರ ಜಿಲ್ಲಾ ಕಾಂಗ್ರೆಸ್‌ನಿಂದ ಪುನೀತ್ ರಾಜ್‌ಕುಮಾರ್‌ಗೆ ಶ್ರದ್ಧಾಂಜಲಿ

ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಕೋಲಾರ : ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಟ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್‌ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು . ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಎಸ್ಸಿಘಟಕದ ಅಧ್ಯಕ್ಷ ಕೆ.ಜಯದೇವ್ , ತಮ್ಮ ನಟನೆ , ಸಜ್ಜನಿಕೆ , ಹೃದಯವಂತಿಕೆಯ ಮೂಲಕ ಕರ್ನಾಟಕದ ಜನರ ಹೃದಯ ಗೆದ್ದಿದ್ದ ಪವರ್ ಸ್ಟಾರ್ ನಿಧನ ನಾಡಿಗೆ ತುಂಬಲಾರದ ನಷ್ಟ ಎಂದು ಕಂಬನಿ ಮಿಡಿದರು . ನ ಕನ್ನಡ ನಾಡು , ನುಡಿಗೆ ರಾಜ್‌ಕುಮಾರ್‌ ಅವರ ಕುಟುಂಬ ನೀಡಿರುವ ಕೊಡುಗೆ ಅಪಾರ , ಅದರಲ್ಲೂ ಪುನೀತ್ ರಾಜ್‌ಕುಮಾರ್‌ ಅವರ ಸಮಾಜಮುಖಿ ಕಾರ್ಯಗಳು ಅವರ ಹಿರಿಮೆಯನ್ನು ಮತ್ತಷ್ಟು ಹೆಚ್ಚಿಸಿದೆ , ಕನ್ನಡ ನಾಡು ಇಂದು ಓರ್ವ ಧೀಮಂತ ನಟನನ್ನು ಕಳೆದುಕೊಂಡು ದುಃಖಿಸುತ್ತಿದೆ ಎಂದರು .
ಈ ಸಂದರ್ಭದಲ್ಲಿ ಮುಖಂಡರಾದ ಇಟ್ಬಾಲ್ ಅಹಮದ್‌ , ಊರುಬಾಗಿಲು ಶ್ರೀನಿವಾಸ್ , ಕೆಪಿಸಿಸಿ ಸದಸ್ಯ ಕುಮಾರ್‌ , ಮುಖಂಡರಾದ ಪ್ರಸಾದ್‌ಬಾಬು , ಗಂಗಮ್ಮನಪಾಳ್ಯ ರಾಮಯ್ಯ ಲಾಲ್‌ಬಹುದ್ದೂರು ಶಾಸ್ತ್ರಿ , ವೆಂಕಟಪತಿ , ಬಾಬು ಸೇರಿದಂತೆ ಹಲವಾರು ಮಂದಿ ಹಾಜರಿದ್ದರು .

ಮನುಕುಲಕ್ಕೆ ಮಾರಕವಾಗುವ ಕುಲಾಂತರಿ ಬೀಜಗಳ ಕ್ಷೇತ್ರ ಪ್ರಯೋಗಕ್ಕೆ ಯಾವುದೇ ಕಾರಣಕ್ಕೂ ಕೇಂದ್ರ ಸರ್ಕಾರ ಅನುಮತಿ ನೀಡಬಾರದು

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಕೋಲಾರ : ಮನುಕುಲಕ್ಕೆ ಮಾರಕವಾಗುವ ಕುಲಾಂತರಿ ಬೀಜಗಳ ಕ್ಷೇತ್ರ ಪ್ರಯೋಗಕ್ಕೆ ಯಾವುದೇ ಕಾರಣಕ್ಕೂ ಕೇಂದ್ರ ಸರ್ಕಾರ ಅನುಮತಿ ನೀಡಬಾರದೆಂದು ರೈತ ಸಂಘದಿಂದ ಉಪ ವಿಭಾಗಧಿಕಾರಿಗಳ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ನೀಡಿ ಒತ್ತಾಯಿಸಲಾಯಿತು . | ಮನುಕುಲಕ್ಕೆ ಮಾರಕವಾಗುವ ಕುಲಾಂತರಿ ಬೀಜಗಳ ಪ್ರಯೋಗಕ್ಕೆ ಅನುಮೋದನೆ ನೀಡಿದರ ದೇಶದಲ್ಲಿ ಮತ್ತೆ ರೈತ ಕಾಂತಿ ಚಳುವಳಿ ನಡೆಸುವ ಎಚ್ಚರಿಕೆಯನ್ನು ಕೇಂದ್ರ ಸರ್ಕಾರಕ್ಕೆ ಮಹಿಳಾ ಜಿಲ್ಲಾದ್ಯಕ್ಷೆ ಎ . ನಳಿನಿಗೌಡ ನೀಡಿದರು . ಭಾರತದ ದೇಶದ ಪರಂಪರಿಕ ಕೃಷಿಯನ್ನೇ ನಾಶ ಮಾಡುವ ಆಹಾರ ಸಂಸ್ಕೃತಿಯ ಮೇಲೆ ಕೆಟ್ಟ ಪರಿಣಾಮ ಬೀರುವ ಬಿ.ಟಿ ಕುಲಾಂತರಿ ತಂತ್ರಜ್ಞಾನವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಕ್ಷೇತ್ರ . ಪ್ರಯೋಗ ಮಾಡಲು ಹೊರಟಿದೆ . ಈಗಾಗಲೇ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ತಮ್ಮ ದೇಶದಿಂದಲೇ ಈ ಪದ್ಧತಿಯನ್ನು ಒಡಿಸಿವೆ . ಆದರೆ ಭಾರತ ಮಾತ್ರ ಇದನ್ನು ಸ್ವೀಕರಿಸುತ್ತಿರುವುದು ಅತ್ಯಂತ ಆತಂಕಕಾರಿ ವಿಷಯವಾಗಿದೆ . ಕೂಡಲೇ ಈ ಪದ್ದತಿಯನ್ನು ಕೈಬಿಟ್ಟು ಯಾವುದೇ ಕಾರಣಕ್ಕೂ ರಾಲಿಸ್ ಕಂಪನಿಗೆ ಕ್ಷೇತ್ರ ಪ್ರಯೋಗಕ್ಕೆ ಅನುಮೋದನೆ ನೀಡಬಾರದೆಂದು ಅಗ್ರಹಿಸಿದರು . ಜಿಲ್ಲಾಧ್ಯಕ್ಷ ಐತಾಂಡಹಳ್ಳಿ ಮಂಜುನಾಥ್‌ ಮಾತನಾಡಿ ಈಗಾಗಲೇ ದೇಶದಲ್ಲಿ ರೈತರು ಬೆಳೆದ ಬೆಳೆಗೆ ಬೆಲೆ ಇಲ್ಲ , ಸರಿಯಾದ ಮಾರುಕಟ್ಟೆ ವ್ಯವಸ್ಥೆಯಿಲ್ಲದ ಪರಿಸ್ಥಿತಿ ಇದೆ . ಈಗ ಮತ್ತೆ ಕುಲಾಂತರಿ ಪದ್ಧತಿ ಬಂಡವಾಳ ಶಾಹಿಗಳಿಗೆ ಮಣೆ ಹಾಕಿದಂತೆ ಹಣದ ದಾಹಕ್ಕೆ ದಾಸ್ಯಕ್ಕೆ ಗುಲಾಮಗಿರಿಗೆ ಸರಕಾರ ಶರಣಾಗುತ್ತಿರುವುದು ಸರಿಯಲ್ಲ , ಈ ಕುಲಾಂತರಿ ಬೀಜದ ಪದ್ಧತಿ ಭಾರತದ ಪ್ರಕೃತಿ , ಪರಿಸರ , ಆಹಾರ , ನೀರು ವಾಯು ಸಂಪೂರ್ಣವಾಗಿ ನಾಶವಾಗುತ್ತವೆ . ಜೊತೆಗೆ ಇಡೀ ಮನುಕುಲಕ್ಕೆ ತೊಂದರೆಯಾಗುತ್ತದೆಂದು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು . ಯುರೋಪ್‌ನ 28 ಕ್ಕೂ ಹೆಚ್ಚು ದೇಶಗಳು ಇದನ್ನು ಒಪ್ಪಿಲ್ಲ ಮತ್ತು ನಮ್ಮ ದೇಶದ ಕೇರಳ ತಮಿಳುನಾಡು ಬಿಹಾರ ಪಶ್ಚಿಮ ಬಂಗಾಳ , ಮದ್ಯಪ್ರದೇಶ , ಒರಿಸ್ಸಾ , ಛತ್ತೀಸ್‌ಗಡ್ , ಗುಜರಾತ್ , ರಾಜ್ಯಗಳು ಈ ಪದ್ದತಿಯನ್ನು ವಿರೋದಿಸಿವೆ . ಕರ್ನಾಟಕ ಸರ್ಕಾರವೂ ಸಹ ಈ ಪದ್ಧತಿಯನ್ನು ತಿರಸ್ಕರಿಸಬೇಕು . ಒಂದು ವೇಳೆ ಇದನ್ನು ಪ್ರಯೋಗ ಮಾಡಲು ಅನುಮತಿ ನೀಡಿ ಜಾರಿ ಮಾಡಲು ಹೊರಟರೆ ಇಡೀ ದೇಶದ ಬೃಹತ್ ಹೋರಾಟ ಮಾಡುವ ಎಚ್ಚರಿಕೆಯನ್ನು ನೀಡಿದರು .
ಮನವಿ ಸ್ವೀಕರಿಸಿದ ಉಪವಿಭಾಗಧಿಕಾರಿಗಳಾದ
ಆನಂದ್ ಪ್ರಕಾಶ್ ಮೀನಾ ರವರು ಮನವಿಯನ್ನು ಸರ್ಕಾರಕ್ಕೆ ಕಳುಹಿಸುವ ಭರವಸೆ ನೀಡಿದರು .
ಮನವಿ ನೀಡುವಾಗ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ , ತಾ.ಅದ್ಯಕ್ಷ ಈಕಂಬಳ್ಳಿ ಮಂಜುನಾಥ , ಕೆ.ಶ್ರೀನಿವಾಸಗೌಡ , ಬಂಗವಾದಿ ನಾಗರಾಜ್‌ಗೌಡ , ಮೂರಂಡಹಳ್ಳಿ ಶಿವಾರಡ್ಡಿ , ಯಲ್ಲಪ್ಪ , ಹರೀಶ್ , ಹ.ಸೆ.ಜಿಲ್ಲಾಧ್ಯಕ್ಷ ಕಿರಣ್ , ರಾಮಕೃಷ್ಣಪ್ಪ , ಚಂದ್ರಪ್ಪ , ಮಂಗಸಂದ್ರ ನಾಗೇಶ್ , ತಿಮ್ಮಣ್ಣ , ಅಶ್ವಥಪ್ಪ , ನಳಿನಿ.ವಿ , ಚೌಡಮ್ಮ , ಹೆಬ್ಬಣಿ ಆನಂದರೆಡ್ಡಿ , ಸುಪ್ರೀಂಚಲ , ಚಾಂದ್‌ಪಾಷ , ಕೆಹಳ್ಳಿ ಆಂಜಿನಪ್ಪ , ರಾಮಕೃಷ್ಣಪ್ಪ , ಚೆನ್ನಬಸಪ್ಪ , ಮುನಿಯಮ್ಮ , ಶಾಂತಮ್ಮ , ನಾಗವೇಣಿ , ಭಾಗ್ಯ , ಮುಂತಾದವರು ಇದ್ದರು .

ತ್ರಿಪುರಾ ಹಿಂಸಾಚಾರದಲ್ಲಿ ಬಿಜೆಪಿಯೇತರ ಪಕ್ಷಗಳ ಮೌನ ಅಪಾಯಕಾರಿ ಎಸ್.ಡಿ.ಪಿ.ಐ ಆಕ್ರೋಶ

ವರದಿ : ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಕೋಲಾರ : ಈಶಾನ್ಯ ರಾಜ್ಯದಲ್ಲಿ ಅಲ್ಪಸಂಖ್ಯಾತ ಮುಸ್ಲಿಮರನ್ನು ಗುರಿಯಾಗಿಸಿ ನಡೆಯುತ್ತಿರುವ ವ್ಯಾಪಕ ಹಿಂಸಾಚಾರದ ವಿಷಯದಲ್ಲಿ ಬಿಜೆಪಿಯೇತರ ಪಕ್ಷಗಳ ದಿವ್ಯ ಮೌನ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಪಾಯಕಾರಿ ಬೆಳವಣಿಗೆ ಎಂದು ಎಸ್.ಡಿ.ಪಿ.ಐ ಜಿಲ್ಲಾಧ್ಯಕ್ಷ ಷಾ ಉಸ್ ಜಮಾ ತಿಳಿಸಿದ್ದಾರೆ .
ನಗರದ ತಾಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ಮಾತನಾಡಿದ ಅವರು , ಹಿಂದುಳಿದ , ದೀನದಲಿತ ದಲಿತ ಅಲ್ಪಸಂಖ್ಯಾತ ಸಮುದಾಯ ಪರವಾಗಿ ನಿಲ್ಲಬೇಕಾದ ಮುಖ್ಯವಾಹಿನಿ ಜಾತ್ಯತೀತ ಪಕ್ಷಗಳ ಮೌನ ಅಘಾತಕಾರಿ ಎಂದು ಬಣ್ಣಿಸಿದ ಅವರು , ತ್ರಿಪುರಾದಲ್ಲಿ ಮುಸ್ಲಿಮರ ಮೇಲೆ ಸಂಘಪರಿವಾರ ಪ್ರೇರಿತ ಫ್ಯಾಶಿಸ್ಟ್ ಹಿಂಸಾಚಾರ ಶೋಚನೀಯ ಎಂದು ತಿಳಿಸಿದ್ದಾರೆ . ಮಾತ್ರವಲ್ಲ ನೆರೆಯ ಬಾಂಗ್ಲಾದೇಶದಲ್ಲಿ ಹಿಂದೂ ಸಮುದಾಯದ ಮೇಲಿನ ಹಿಂಸಾಚಾರಕ್ಕೆ ಪ್ರತಿಕಾರವಾಗಿ ಭಾರತದ ಮುಸ್ಲಿಮರ ಮೇಲೆ ದಾಳಿ ನಡೆಸುವಾಗ ಬಿಜೆಪಿಯೇತರ ಪಕ್ಷಗಳು ಕಣ್ಣುಮುಚ್ಚಿ ಕುಳಿತಿರುವುದು ಸಂವಿಧಾನ ಮೌಲ್ಯಕ್ಕೆ ಅಪಚಾರವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು .
ದೇಶದಲ್ಲಿ ಅಸ್ತಿತ್ವದಲ್ಲಿರುವ ಜಾತ್ಯತೀತ ಮುಖವಾಡದ ಪಕ್ಷಗಳು ಮುಸ್ಲಿಮರನ್ನು ಕೇವಲ ಮತಬ್ಯಾಂಕ್ ಆಗಿ ಉಪಯೋಗಿಸುತ್ತಿರುವುದು ದುರಂತ ಮತ್ತು ಪ್ರಜಾಪಭುತ್ವ ವ್ಯವಸ್ಥೆಗೆ ನೀಡುವ ಕೊಡಲಿಯೇಟು ಎಂದು ವಿಷಾದಿಸಿದರು .
ಕಳೆದ ವಾರ ನೆರೆಯ ಬಾಂಗ್ಲಾದೇಶದ ದುರ್ಗಾ ಪೂಜೆಯಲ್ಲಿ ಮೂರ್ತಿಯೊಂದರ ಪದತಳದಲ್ಲಿ ಕು‌ ಆನ್ ಇಟ್ಟ ಹಿನ್ನೆಲೆಯಲ್ಲಿ ಉಂಟಾದ ಗಲಭೆಯಲ್ಲಿ ಅಲ್ಲಿನ ಅಲ್ಪಸಂಖ್ಯಾತ ಹಿಂದೂ ಸಮುದಾಯದ ಮೇಲಿನ ದಾಳಿಯನ್ನು ಮುಂದಿಟ್ಟುಕೊಂಡು ತಿಮರಾದ ಮುಸ್ಲಿಮರ ಮೇಲಿನ ದಾಳಿ ಖಂಡನೀಯ . ಈ ನಿಟ್ಟಿನಲ್ಲಿ ಮರಾ ಸರ್ಕಾರ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ .
ಎಸ್.ಡಿ.ಪಿ.ಐ ಪ್ರಧಾನ ಕಾರ್ಯದರ್ಶಿ ಶಾರೂಕ್‌ ಪಾಷ , ಉಪಾಧ್ಯಕ್ಷ ಯಾಸೀನ್‌ಖಾನ್ , ಮೌಲಾನಾ ವಜೀರ್‌ ಅಹಮದ್‌ , ಪಿರದೋಸ್‌ಪಾಷ , ರಹಮತ್ತುಲ್ಲಾಖಾನ್ ಇನ್ನಿತರರು ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು .


ಶ್ರೀನಿವಾಸಪುರ ಪ್ರತಿ ಮನೆ ಮನೆಗೆ ಅಗತ್ಯವಾದ ಕುಡಿಯುವ ನೀರು ಪೂರೈಕೆ ಮಾಡುವ ಗುರಿ ಹೊಂದಲಾಗಿದೆ:ಅಮಿತ್ ಶುಕ್ಲಾ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ ಪ್ರತಿ ಮನೆ ಮನೆಗೆ ಅಗತ್ಯವಾದ ಕುಡಿಯುವ ನೀರು ಪೂರೈಕೆ ಮಾಡುವ ಗುರಿ ಹೊಂದಲಾಗಿದೆ ಎಂದು ರಾಷ್ರ್ಟಿಯ ಜಲ ಜೀವನ್ ಮಿಷನ್ ನಿರ್ಧೇಶಕರಾದ ಅಮಿತ್ ಶುಕ್ಲಾ ತಿಳಿಸಿದರು.
ತಾಲ್ಲೂಕಿನ ಹೊದಲಿ ಗ್ರಾಮ ಪಂಚಾಯತಿ ಸೇರಿದ ಆವಲಕುಪ್ಪ ಗ್ರಾಮಕ್ಕೆ ಬೇಟಿ ನೀಡಿ ಸರ್ಕಾರಿ ಶಾಲೆಯಲ್ಲಿ ಅಳವಡಿಸಿರುವ ನೀರಿನ ಗುಣಮಟ್ಟ ಹಾಗೂ ಶುದ್ಧ ಕುಡಿಯುವ ನೀರಿನ ಘಟಕದ ನೀರಿನ ಪ್ರಾಮುಖ್ಯತೆ ನೀರಿನ ಗುಣಮಟ್ಟವನ್ನು ಪರಿಶೀಲಿಸಿ ಮಾತನಾಡಿದ ಅಮಿತ್ ಶುಕ್ಲಾ ನಮ್ಮ ಉದ್ದೇಶ ಪ್ರತಿಯೊಂದು ಮನೆ ಮನೆಗೂ ಶುದ್ಧ ಕುಡಿಯುವ ನೀರನ್ನ ಪೂರೈಸಿ ಜನರ ಆರೋಗ್ಯವನ್ನ ಕಾಪಾಡುವುದೆ ನಮ್ಮ ಉದ್ದೇಶ ಪ್ಲೋರಿಡ್ ರಹಿತ ನೀರಿನ್ನ ಗ್ರಾಮದ ಜನತೆಗೆ ಒದುಗಿಸುವ ಜೊತೆಗೆ ಪ್ರತಿಯೊಬ್ಬರೂ ಶುದ್ಧವಾದ ನೀರನ್ನು ಕುಡಿಯ ಬೇಕು ಎಂದರು.
ಹೊದಲಿ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಯಾದ ಕೃಷ್ಣ ಹಾಗೂ ಜಲಗಾರರಿಂದ ಸಂಪೂರ್ಣವಾಗಿ ನೀರಿನ ಮಾಹಿತಿಯನ್ನು ಪಡೆದು ದಿನಕ್ಕೆ ಎಷ್ಟು ಬಾರಿ ನೀರನ್ನು ಗ್ರಾಮಕ್ಕೆ ಬಿಡುತ್ತಿದ್ದೀರಿ ನೀರು ಶುದ್ಧವಾಗಿದೆಯೇ ಎಂದು ಸಂಪೂರ್ಣವಾಗಿ ಮಾಹಿತಿಯನ್ನು ಪಡೆದು. ಅಂತರ್ಜಲ ಮಟ್ಟವನ್ನು ಅಭಿವೃದ್ಧಿಪಡಿಸಲಾಗುವುದು ಎಲ್ಲ ಇಲಾಖೆಗಳು ಸೇರಿ ಯೋಜನೆಯನ್ನು ರೂಪಿಸಬೇಕು ಮುಂದಿನ 30-40 ವರ್ಷಗಳಿಗೆ ನೀರಿನ ಲಭ್ಯತೆಯ ಬಗ್ಗೆ ಗಮನ ಅರಿಸಬೇಕು ಬರಪೀಡತÀ ಪ್ರದೇಶವಾಗಿರುವುದರಿಂದ ಇಸ್ರೇಲ್‍ನ ಮಾದರಿ ಹನಿ ನೀರಾವರಿ ಪದ್ಧತಿಯನ್ನು ರೈತರು ಅಳವಡಿಸಿಕೊಂಡು ಉತ್ತಮವಾಗಿ ಕೃಷಿಯನ್ನ ಮಾಡುತ್ತಿರುವುದು ತುಂಬಾ ಸಂತೋಷವಾಗಿದೆ. ಬೋರ್‍ವೆಲ್‍ಗಳ ಮರು ಪೂರ್ಣ ಮಾಡಲು ಯೋಜನೆಗಳನ್ನ ರೂಪಿಸಿಕೊಳ್ಳಬೇಕು ಪ್ಲೋರಿಡ್ ಅಂಶ ಇರುವಕಡೆ ಚೆಕ್ಕು ಡ್ಯಾಮ್‍ಗಳನ್ನು ನಿರ್ಮಿಸಿ ನೀರನ್ನ ಇಂಗಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಾಷ್ಟ್ರಿಯ ಜಲಜೀವನ್ ಮಿಷನ್ ಯೋಜನೆಯ ಮ್ಯಾನೇಜರ್ ಹಾಗೂ ಸ್ಪೆಷಲಿಸ್ಟ್ ಅನೂಪ್ ದ್ವಿವೇದಿ, ಸ್ವಚ್ಛ ಭಾರತ್ ಜಿಲ್ಲಾ ಸಂಯೋಜಕ ಜಗದೀಶ್, ಇ.ಇ.ಮಂಜುನಾಥ್, ಹೊದಲಿ ಗ್ರಾಮ ಪಂಚಾಯತಿ ಅಧ್ಯಕ್ಷಿಣಿ ಗೀತಾ ರಾಮಚಂದ್ರ, ಗ್ರಾಮ ಪಂಚಾಯತಿ ಸದಸ್ಯ ಗೋವಿಂದರೆಡ್ಡಿ, ಡಿ ಪಿ ಎಂ ಹರೀಶ್, ಎ ಇ ಇ ನಾರಾಯಣಸ್ವಾಮಿ, ನರೇಗ ಯೋಜನೆ ನಿರ್ದೇಶಕ ರಾಮಪ್ಪ, ಇಂಜಿನಿಯರ್‍ಗಳಾದ ಸಂತೋಷ್, ಜೆ ಇ ಕೃಷ್ಣಾಚಾರಿ, ಕೆ ಟಿ ನಾಗರಾಜ್, ಜಲಮಿಷನ್ ಅಧಿಕಾರಿಗಳಾದ ಕೃಷ್ಣಮೂರ್ತಿ ಆವಲಕುಪ್ಪ ಶಾಲೆಯ ಮುಖ್ಯ ಶಿಕ್ಷಕ ರವೀಂದ್ರ ಸಿಂಗ್, ಆವಲಕುಪ್ಪ ಗ್ರಾಮದ ಹಿರಿಯ ಮುಖಂಡ ಜಯರಾಮರೆಡ್ಡಿ, ಕೃಷ್ಣಾರೆಡ್ಡಿ, ಬಾಲಾಂಜಿ, ನರೇಶ್, ಜಲಗಾರ ಶ್ರೀನಿವಾಸ್, ಅಂಗನವಾಡಿ ಕಾರ್ಯಕರ್ತೆ ಪ್ರೇಮ, ಆಶಾ ಕಾರ್ಯಕರ್ತೆ ವೆಂಕಟರತ್ನಮ್ಮ, ಹಾಗೂ ಗ್ರಾಮ ಪಂಚಾಯತಿ ಸಿಬ್ಬಂದಿ ಹಾಜರಿದ್ದರು.

ಕುಂದಾಪುರ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಾಳೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪುಣ್ಯತಿಥಿ ಕಾರ್ಯಕ್ರಮ ಜರುಗಲಿದೆ.

JANANUDI.COM NETWORK

ದಿನಾಂಕ 31-10-2021 ಆದಿತ್ಯವಾರ ಬೆಳಿಗ್ಗೆ 9-30ಕ್ಕೆ ಸರಿಯಾಗಿ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪುಣ್ಯತಿಥಿ ಕಾರ್ಯಕ್ರಮ ಜರುಗಲಿದೆ ಎಂದುಬ್ಲಾಕ್ ಕಾಂಗ್ರೆಸ್ ಸಮಿತಿ ಕುಂದಾಪುರ ತಿಳಿಸಿದೆ. ಈ ಕಾರ್ಯಕ್ರಮದಲ್ಲಿ ಪಕ್ಷದ ಮುಖಂಡರು ,ಪದಾಧಿಕಾರಿಗಳು ,ಜನಪ್ರತಿನಿಧಿಗಳು, ಕಾರ್ಯಕರ್ತರು ಬಾಗವಹಿಸಬೇಕಾಗಿ ವಿನಂತಿಸಿ ಕೊಂಡಿದೆ

(ಕಾರ್ಯಕ್ರಮ ಕ್ಲಪ್ತ ಸಮಯದಲ್ಲಿ ಜರುಗಲಿದೆ )

ಸಂತ ಲಾರೆನ್ಸ್ ಪದವಿಪೂರ್ವ ಕಾಲೇಜಿನಲ್ಲಿ ದೀಪಾವಳಿ ಹಬ್ಬ ಆಚರಣೆ- ಗೂಡುದೀಪ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ

JANANUDI.COM NETWORK

ಮೂಡುಬೆಳ್ಳೆ: ಬೆಳಕಿನ ಹಬ್ಬ ದೀಪಾವಳಿಯು ಎಲ್ಲರೂ ಸೌಹಾರ್ದತೆಯಿಂದ ಆಚರಿಸುವ ಹಬ್ಬವಾಗಿದೆ ಇದು ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುವ ಮಾತ್ರವಲ್ಲದೆ ಸ್ನೇಹ ಸಂಬಂಧವನ್ನು ಬಲಪಡಿಸುವ ಅವಕಾಶವನ್ನು ನೀಡುತ್ತದೆ ಇಂದಿನ ಕಾರ್ಯಕ್ರಮ ಎಲ್ಲರಿಗೂ ಮಾದರಿ ಕಾರ್ಯಕ್ರಮವಾಗಿದೆ ಎಂದು ಕಾಪು ಕ್ಷೇತ್ರದ ಶಾಸಕರಾದ ಶ್ರೀ ಲಾಲಾಜಿ ಆರ್ ಮೆಂಡನ್ ಹೇಳಿದರು ಅವರು ಮೂಡುಬೆಳ್ಳೆ ಸಂತ ಲಾರೆನ್ಸ್ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಗೂಡುದೀಪ ಸ್ಪರ್ಧೆ ಬಹುಮಾನ ವಿತರಣೆ ದೀಪಾವಳಿ ಹಬ್ಬದ ಆಚರಣೆ ಮತ್ತು ಪ್ಲಾಸ್ಟಿಕ್ ಮುಕ್ತ ಮೂಡುಬೆಳ್ಳೆ ಕಾರ್ಯಕ್ರಮದ ಕರಪತ್ರ ಬಿಡುಗಡೆ ಮಾಡಿ ಮಾತನಾಡುತ್ತಿದ್ದರು.

ಸಂತ ಲಾರೆನ್ಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ವಂದನೀಯ ಜೊರ್ಜ್ ಡಿಸೋಜರವರು ಆಶೀರ್ವಚನ ನೀಡಿದರು .ಕಾಪು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಪುಂಡಲೀಕ ಮರಾಟೆ ಅವರು ದೀಪಾವಳಿ ಹಬ್ಬದ ಮಹತ್ವವನ್ನು ವಿವರಿಸಿದರು. ಸಂತ ಲಾರೆನ್ಸ್ ಚರ್ಚಿನ ಸಹಾಯಕ ಧರ್ಮಗುರುಗಳಾದ ವಂದನೀಯ ಸಿರಿಲ್ ಲೋಬೊರವರು ಹಾಡಿನ ಮೂಲಕ ಸಂದೇಶ ನೀಡಿದರು. ಲಯನ್ ರಾಜೇಂದ್ರ ಶೆಟ್ಟಿಯವರು ಬಹುಮಾನ ವಿತರಿಸಿದರು. ಬೆಳ್ಳೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಸುಧಾಕರ ಪೂಜಾರಿಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಎಡ್ವರ್ಡ್ ಲಾರ್ಸನ್ ಡಿಸೋಜ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಗ್ರಾಮ ಪಂಚಾಯತ್ ಪಿಡಿಒ ಶ್ರೀಮತಿ ವಸಂತಿ ಬಾಯಿ ಸ್ವಾಗತಿಸಿ ಶ್ರೀಮತಿ ಸುನೀತಾ ಕಾಮತ್ ವಂದಿಸಿದರು .ಆಂಗ್ಲಭಾಷೆ ಉಪನ್ಯಾಸಕಿ ಶ್ರೀಮತಿ ಸುಧಾ ಭಟ್ ನಿರೂಪಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಯಾರಿಸಿದ ಗೂಡುದೀಪಗಳನ್ನು ಪ್ರದರ್ಶಿಸಲಾಯಿತು . ಸಂತ ಲಾರೆನ್ಸ್ ಚರ್ಚಿನ ಪಾಲನ ಮಂಡಳಿಯ ಉಪಾಧ್ಯಕ್ಷರಾದ ಶ್ರೀ ಜೆರಾಲ್ಡ್ ಫರ್ನಾಂಡಿಸ್ ಶಿರ್ವ ಠಾಣಾಧಿಕಾರಿ ಶ್ರಿಶೈಲ, ಗ್ರಾಮ ಪಂಚಾಯತ್ ನ ಉಪಾಧ್ಯಕ್ಷರು, ಸದಸ್ಯರು ,ಲಯನ್ಸ್ ಕ್ಲಬ್ ಪದಾಧಿಕಾರಿಗಳು ಎಸ್ಎಲ್ಆರ್ ಎಂ ಘಟಕದ ಸಿಬ್ಬಂದಿಗಳು ಹಳೆ ವಿದ್ಯಾರ್ಥಿಗಳು ಹಾಗೂ ಸ್ಥಳೀಯ ಜ್ಞಾನಗಂಗಾ ಮತ್ತು ನಾರಾಯಣ ಗುರು ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ನಂದಳಿಕೆ : ವರಕವಿ ಮುದ್ದಣನ ಹುಟ್ಟೂರಲ್ಲಿ ಮೊಳಗಿದ ಲಕ್ಷ ಕಂಠ ಸಾಮೂಹಿಕ ಕನ್ನಡ ಗೀತ ಗಾಯನ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ


ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕøತಿ ಹಾಗೂ ಇಂಧನ ಸಚಿವರಾದ ವಿ. ಸುನಿಲ್ ಕುಮಾರ್ ಅವರ ನೇತೃತ್ವದಲ್ಲಿ ಕನ್ನಡ ಸಂಸ್ಕøತಿ ಇಲಾಖೆಯ ವತಿಯಿಂದ ಆಯೋಜಿಸಿದ ಮಾತಾಡ್ ಮಾತಾಡ್ ಕನ್ನಡ ಅಭಿಯಾನದ ಅಂಗವಾಗಿ ಲಕ್ಷ ಕಂಠಗಳ ಸಾಮೂಹಿಕ ಕನ್ನಡ ಗೀತ ಗಾಯನ ಕಾರ್ಯಕ್ರಮವು ಕಾರ್ಕಳ ತಾಲೂಕಿನ ನಂದಳಿಕೆ ವರಕವಿ ಮುದ್ದಣನ ಹುಟ್ಟೂರಲ್ಲಿ ನಂದಳಿಕೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಂಜರಪಲ್ಕೆ ಬೋಳಾಸ್ ಅಗ್ರೊ ಪ್ರೈವೇಟ್ ಲಿಮಿಟೆಡ್ ಕಂಪೆನಿಯಲ್ಲಿ 520ಕ್ಕೂ ಹೆಚ್ಚು ಸಿಬ್ಬಂದಿಗಳೊಂದಿಗೆ ನಂದಳಿಕೆ ಗ್ರಾಮ ಪಂಚಾಯತ್, ಕೆದಿಂಜೆ ಬೋಳಾಸ್ ಆಗ್ರೊ ಪ್ರೈವೇಟ್ ಲಿಮಿಟೆಡ್ ಹಾಗೂ ರಾಜ್ಯ ಮತ್ತು ಜಿಲ್ಲಾ ಪ್ರಶಸ್ತಿ ಪುರಸ್ಕøತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ ಸಹಯೋಗದಲ್ಲಿ ಅತ್ಯಂತ ಯಶಸ್ವಿಯಾಗಿ ಜರಗಿತು.
ಈ ಸಂದರ್ಭದಲ್ಲಿ ನಂದಳಿಕೆ ಗ್ರಾಮ ಪಂಚಾಯತ್ ಅಧ್ಯಕ್ಷ ನಿತ್ಯಾನಂದ ಅಮೀನ್, ಉಡುಪಿ ಜಿಲ್ಲಾ ಪಂಚಾಯತ್ ಸದಸ್ಯೆ ರೇಷ್ಮಾ ಉದಯ ಶೆಟ್ಟಿ, ಕಾರ್ಕಳ ತಾಲೂಕು ಪಂಚಾಯತ್ ಸದಸ್ಯೆ ಪುಷ್ಪ ಸತೀಶ್ ಪೂಜಾರಿ, ಕೆದಿಂಜೆ ಸೂರ್ಯಕಾಂತ್ ಶೆಟ್ಟಿ, ಧೀರಜ್ ನಂದಳಿಕೆ, ಬೋಳಾಸ್ ಅಗ್ರೊ ಪ್ರೈವೇಟ್ ಲಿಮಿಟೆಡ್ ಕಂಪೆನಿಯ ದಾಮೋದರ್ ಕಾಮತ್, ರಾಹುಲ್ ಕಾಮತ್, ನಂದಳಿಕೆ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಪುಷ್ಪ, ಸದಸ್ಯರಾದ ಪ್ರಸಾದ್ ಶೆಟ್ಟಿ, ಗಿರೀಶ್ ಶೆಟ್ಟಿ, ಸಂತೋಷ್ ಶೆಟ್ಟಿ, ಸುಧಾಕರ್, ಪದ್ಮಶ್ರೀ ಸತೀಶ್ ಪೂಜಾರಿ, ಯಶೋಧ ದೇವಾಡಿಗ, ಸುಜಾತ ರಾಕೇಶ್ ಕೋಟ್ಯಾನ್, ಅನ್ನಪೂರ್ಣ ಗಂಗಾಧರ್, ಪಂಚಾಯತ್ ಕಾರ್ಯದರ್ಶಿ ಸಂಜೀವ ಪೂಜಾರಿ, ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ ಅಧ್ಯಕ್ಷ ಪ್ರಶಾಂತ್ ಪೂಜಾರಿ, ಸಂಚಾಲಕ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ, ಪೂವಾಧ್ಯಕ್ಷರಾದ ರಾಜೇಶ್ ಕೋಟ್ಯಾನ್, ಅಬ್ಬನಡ್ಕ ಸತೀಶ್ ಪೂಜಾರಿ, ಕಾರ್ಯದರ್ಶಿ ಸುರೇಶ್ ಕಾಸ್ರಬೈಲು, ಜೊತೆ ಕಾರ್ಯದರ್ಶಿ ಪುಷ್ಪ ಕುಲಾಲ್, ಕೋಶಾಧಿಕಾರಿ ವೀಣಾ ಪೂಜಾರಿ, ಸದಸ್ಯರಾದ ರಾಜೇಂದ್ರ ಶೆಟ್ಟಿಗಾರ್, ರಂಜಿತ್ ಕಲ್ಯಾ ಹಾಗೂ ನಮಿತಾ ಬೋಳ, ಸುಶ್ಮಿತಾ, ಮಂಜುಳಾ, ನಂದಿತಾ ಮೊದಲಾದವರಿದ್ದರು.