HOLY ROSARY CHURCH, KUNDAPUR – 450 th JUBILEE SOUVENIR 2021

ನೆರೆ ಹೊರೆಯವರನ್ನು ಪ್ರೀತಿಸಿ, ಮನುಷ್ಯನಿಗೆ ಮನುಷ್ಯತ್ವ ಮುಖ್ಯ, ಮನುಷ್ಯತ್ವದಿಂದ ಬಾಳೋಣ – ಫಾ. ವಿಜಯ್

JANANUDI.COM NETWOR


ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕ್ರಿಸ್ಮಸ್ ಕಾರ್ಯಕ್ರಮ


ಕುಂದಾಪುರ, ಡಿ.23: “ನಾವು ದೇವರನ್ನು ಪೀತಿಸಬೇಕು ಮತ್ತು ನಮ್ಮ ನೆರೆಹೊರೆಯವರನ್ನು ಪ್ರೀತಿಸಬೇಕು. ನಾವು ಯೇಸು ಕ್ರಿಸ್ತರು ತೋರಿದ ಮಾರ್ಗದಲ್ಲಿ ನಡೆದು ಜಾತಿ, ಮತ, ಧರ್ಮ ಎಂಬ ಬೇಧಭಾವವನ್ನು ತೋರದೆ ಒಂದಾಗಿ ಬಾಳಿ ಉತ್ತಮ ಮನುಷ್ಯತ್ವದ ಹಾದಿಯಲ್ಲಿ ಮುನ್ನೆಡೆಯಬೇಕು” ಎಂದು ಕುಂದಾಪುರ ಹೋಲಿ ರೋಸರಿ ಮಾತಾ ಇಗರ್ಜಿಯ ಸಹಾಯಕ ಧರ್ಮಗುರು ವಂ|ವಿಜಯ್ ಜೊಯ್ಸನ್ ಡಿಸೋಜಾರವರು ಹೇಳಿದರು.
ಅವರು ಸ್ಥಳಿಯ ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಕ್ರಿಸ್ಮಸ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಸಂದೇಶ ನೀಡಿ, ವಿದ್ಯಾರ್ಥಿಗಳಿಗೆ ಏರ್ಪಡಿಸಿದ ಸ್ಪರ್ಧೆಯ ವಿಜೇತರಿಗೆ ಬಹುಮಾನವನ್ನು ನೀಡಿದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾದ್ಯಾಯಿನಿ ಸಿಸ್ಟರ್ ತೆರೆಜ್ ಶಾಂತಿ ಎಸಿ ವಹಿಸಿದ್ದು, ವಿದ್ಯಾರ್ಥಿ ನಾಯಕಿ ರಿಷಿಕಾ ಮೊಂತೆರೋ ಸ್ವಾಗತಿಸಿದರು. ವಿದ್ಯಾರ್ಥಿ ಉಪನಾಯಕಿ ದಶಮಿ ಧನ್ಯವಾದ ಸಮರ್ಪಿಸಿದರು. ವಿದ್ಯಾರ್ಥಿನಿ ಇಶಾನಾರವರು ಕಾರ್ಯಕ್ರಮವನ್ನು ನಿರೂಪಿಸಿದರು.

ಪ್ರಭಾವಿ ನಾಯಕ ರಿಯಾಜ್ ಪಟೇಲ್ ಮತ್ತು ಇತರರು ಕೈ ಪಾಲು

JANANUDI.COM NETWORK


ಬೆಳಗಾವಿ :ಜೆಡಿಎಸ್ ನಾಯಕ ಹಾಗೂ ಖಾನಾಪುರ ಸಕ್ಕರೆ ಕಾರ್ಖಾನೆ ಮಾಜಿ ಅಧ್ಯಕ್ಷ ರಿಯಾಜ್ ಪಟೇಲ್ ಹಾಗೂ ಇತರೆ ಜೆಡಿಎಸ್ ಮುಖಂಡರು ಕಾಂಗ್ರೆಸ್ ಸೇರ್ಪಡೆಗೊಂಡರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು. ಬೆಳಗಾವಿಯ ಗಾಂಧಿಭವನದಲ್ಲಿ ಬುಧವಾರ (೨೨-೧೨-೨೧) ನಡೆದ ಅಲ್ಪಸಂಖ್ಯಾತರ ಸಮಾವೇಶದಲ್ಲಿ “ನಮ್ಮ ನಡೆ ಐಕ್ಯತೆ ಮತ್ತು ವಿಶ್ವಾಸದ ಕಡೆ” ಕಾರ್ಯಕ್ರಮದಲ್ಲಿ ಈ ನಾಯಕರು ಕೈ ಪಕ್ಷಕ್ಕೆ ಸೇರ್ಪಡೆಗೊಂಡರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ಸತೀಶ್ ಜಾರಕಿಹೊಳಿ, ಶಾಸಕರಾದ ಲಕ್ಷ್ಮೀ ಹೆಬ್ಬಾಳ್ಕರ್, ಅಂಜಲಿ ನಿಂಬಾಳ್ಕರ್, ರಿಜ್ವಾನ್ ಅರ್ಶದ್, ಖನೀಜ್ ಫಾತಿಮಾ, ರಹೀಂ ಖಾನ್, ಎಂಎಲ್ಸಿಗಳಾದ ನಜೀರ್ ಅಹಮದ್, ಚನ್ನರಾಜ್ ಹಟ್ಟಿಹೊಳಿ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಅಬ್ದುಲ್ ಜಬ್ಬಾರ್, ಮಾಜಿ ಸಚಿವರಾದ ತನ್ವೀರ್ ಸೇಠ್, ಎ.ಬಿ. ಪಾಟೀಲ್, ವೀರಕುಮಾರ್ ಪಾಟೀಲ್, ಮುಖಂಡರಾದ ಫಿರೋಜ್ ಸೇಠ್, ನಿಕೇತ್ ರಾಜ್, ರಾಜು ಸೇಠ್, ಸಿಖ್ ಸಮುದಾಯದ ಓಂಕಾರ್ ಸಿಂಗ್ ಭಾಟಿಯಾ, ಕ್ರೈಸ್ತ ಧರ್ಮಗುರು ಬಿಷಪ್ ಡೆರಿಕ್ ಫರ್ನಾಂಡಿಸ್ ಮತ್ತಿತರ ಮುಖಂಡರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ಅಧ್ಯಕ್ಷರಾಗಿ ಮುನಾಫ್ ಕೋಡಿ ನೇಮಕ

JANANUDI.COM NETWORK


ಕುಂದಾಪುರ: ಮುನಾಫ್ ಕೋಡಿ ಇವರನ್ನು ವಿಧಾನ ಪರಿಷತ್ ಮಾಜಿ ಸಭಾಪತಿ, ಸದಸ್ಯ ಕೆ. ಪ್ರತಾಪಚಂದ್ರ ಶೆಟ್ಟಿಯವರ ಸೂಚನೆ ಮೇರೆಗೆ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾನ್ಮಕ್ಕಿ ಹರಿಪ್ರಸಾದ ಶೆಟ್ಟಿಯವರ ಶಿಫಾರಸ್ಸಿನ ಮೇರೆಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕುಮಾರ ಕೊಡವೂರರವರ ಅನುಮೋದನೆಯೊಂದಿಗೆ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರನ್ನಾಗಿ ನೇಮಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಇಸ್ಮಾಯಿಲ್ ಆತ್ರಾಡಿ ಆದೇಶಿಸಿರುತ್ತಾರೆ.

ಮುನಾಫ್ ಕೋಡಿಯವರು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ಕಾರ್ಯಕಾರಿ ಸದಸ್ಯರಾಗಿದ್ದು, ಯುವ ಕಾಂಗ್ರೆಸ್ ಮತ್ತು ಕಾಂಗ್ರೆಸ್ ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯರಾಗಿ ಕಾರ್ಯ ನಿರ್ವಹಿಸಿದ್ದರು.

ಕುಂದಾಪುರ ಬ್ಲಾಕ್ ಕಾಂಗ್ರೆಸ್ ಸೇವಾದಳ ಘಟಕ ಅಧ್ಯಕ್ಷರಾಗಿ ದರ್ಮ ಪ್ರಕಾಶ್ ಕುಂದಾಪುರ ನೇಮಕ

JANANUDI.COM NETWORK

ಕುಂದಾಪುರ: ದರ್ಮ ಪ್ರಕಾಶ್ ಕುಂದಾಪುರ ಇವರನ್ನು ವಿಧಾನ ಪರಿಷತ್ ಮಾಜಿ ಸಭಾಪತಿ ಕೆ. ಪ್ರತಾಪಚಂದ್ರ ಶೆಟ್ಟಿಯವರ ಸೂಚನೆ ಮೇರೆಗೆ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾನ್ಮಕ್ಕಿ ಹರಿಪ್ರಸಾದ್ ಶೆಟ್ಟಿಯವರ ಶಿಫಾರಸ್ಸಿನ ಮೇರೆಗೆ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕುಮಾರ ಕೊಡವೂರರವರ ಅನುಮೋದನೆಯೊಂದಿಗೆ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಸೇವಾದಳ ಘಟಕದ ಅಧ್ಯಕ್ಷರನ್ನಾಗಿ ನೇಮಿಸಿ, ಜಿಲ್ಲಾ ಕಾಂಗ್ರೆಸ್ ಸೇವಾದಳದ ಮುಖ್ಯ ಸಂಘಟಕ ಕಿಶೋರ್ ಕುಮಾರ್ ಎರ್ಮಾಳ ಆದೇಶ ಮಾಡಿರುತ್ತಾರೆ. ದರ್ಮ ಪ್ರಕಾಶ್ ರವರು ಕಾಂಗ್ರೆಸ್ ಪಕ್ಷದ ಕ್ರಿಯಾಶೀಲ ಕಾರ್ಯಕರ್ತರಾಗಿದ್ದು, ಕುಂದಾಪುರ ಬ್ಲಾಕ್ ಕಾಂಗ್ರೆಸ್ ಸಂಘಟನಾ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದು, ಅನೇಕ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದಾರೆ

ಸಹಪಾಠಿಯನ್ನು ಕೊಂದು ಹೂತಿಟ್ಟ ಇಬ್ಬರು 10ನೇ ತರಗತಿಯ ವಿದ್ಯಾರ್ಥಿನಿಯರು: ಕೊಂದದ್ದು ಯಾಕೆ!?

JANANUDI.COM NETWORK

ಚೆನ್ನೈ : ಇಬ್ಬರು ವಿದ್ಯಾರ್ಥಿನಿಯರು ಸೇರಿ ತಮ್ಮ ಸಹಪಾಠಿ ವಿದ್ಯಾರ್ಥಿಯನ್ನು ಕೊಲೆ ಮಾಡಿ ಹೂತಿಟ್ಟಿರುವ ಭಯಾನಕ ಘಟನೆ ತಮಿಳುನಾಡಿನ ತಿರುವಳ್ಳೂರ್ ಜಿಲ್ಲೆಯ ಈಚಿಂಗಾಡು ಗ್ರಾಮದಲ್ಲಿ ನಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ 10ನೇ ತರಗತಿಯ ಇಬ್ಬರು ವಿದ್ಯಾರ್ಥಿನಿಯರನ್ನು ಪೆÇಲೀಸರು ವಶಕ್ಕೆ ಪಡೆದಿದ್ದಾರೆ. ಈಚಿಂಗಾಡು ಗ್ರಾಮದಲ್ಲಿ ವ್ಯಕ್ತಿಯೊಬ್ಬನ ರಕ್ತಸಿಕ್ತ ಹಲ್ಲು ಮತ್ತು ಕೂದಲು ಸಿಕ್ಕಿದ ಬಗ್ಗೆ ತನಿಖೆ ನಡೆಸಿದಾಗ ಪಕ್ಕದಲ್ಲೇ ಶವವನ್ನು ಹೂತಿಟ್ಟಿರುವುದು ಕಂಡು ಬಂದಿದೆ.
ಪ್ರೇಮ್ ಕುಮಾರ್ ಹತ್ಯೆಯಾದ ವಿದ್ಯಾರ್ಥಿ. ಈತ ಇಬ್ಬರು ಆರೋಪಿತ ವಿದ್ಯಾರ್ಥಿನಿಯರ ಜೊತೆ ಅಕ್ರಮ ಸಂಬಂಧ ಹೊಂದಿದ್ದ. ಬಳಿಕ ದುಡ್ಡಿನ ಆಸೆಗಾಗಿ ಅವರ ಖಾಸಗಿ ಪೆÇೀಟೋ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ. ಇವನ ಕಿರುಕುಳ ತಡೆಯಲಾರದೆ, ಇದನ್ನು ವಿದ್ಯಾರ್ಥಿನಿಯರು ತಮ್ಮ ಇನ್ನೋರ್ವ ಸ್ನೇಹಿತನಿಗೆ ತಿಳಿಸಿದ್ದಾರೆ. ಆತನ ಸ್ಕೆಚ್ ನಂತೆ ಮೂವರು ಸೇರಿ ಬಾಲಕನನ್ನು ಕೊಲೆ ಮಾಡಿದ್ದಾರೆ. ತನಿಖೆ ಮುಂದುವರಿದಿದೆ.

ಎಂಇಎಸ್ ಕಾರ್ಯಕರ್ತರ ಪುಂಡಾಟಿಕೆ ವಿರೋಧಿಸಿ ಡಿಸೆಂಬರ್ 31ಕ್ಕೆ ಕರ್ನಾಟಕ ಬಂದ್

JANANUDI.COM NETWORK


ಬೆಂಗಳೂರು: ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ ಕಾರ್ಯಕರ್ತರು ನಡೆಸಿರುವ ಪುಂಡಾಟಿಕೆ ವಿರೋಧಿಸಿ ವಿವಿಧ ಕನ್ನಡ ಪರ ಸಂಘಟನೆಗಳು ಡಿಸೆಂಬರ್ 31ಕ್ಕೆ ಕರ್ನಾಟಕ ಬಂದ್ ಮಾಡಲು ನಿರ್ಧರಿಸಿವೆ. ಬೆಂಗಳೂರಿನ ಖಾಸಗಿ ಹೋಟೆಲ್‍ನಲ್ಲಿ ಇಂದು ಸಭೆ ಸೇರಿ ಬಂದ್ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ.
ಸುಮಾರು 35ಕ್ಕೂ ಅಧಿಕ ಸಂಘಟನೆಗಳಿಂದ ಕರ್ನಾಟಕ ಬಂದ್‍ಗೆ ಬೆಂಬಲ ಸಿಕ್ಕಿದೆಯೆಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗಾರಾಜ್ ಹೇಳಿದರು.
ಡಿಸೆಂಬರ್ 31ರಂದು ಕನ್ನಡಪರ ಸಂಘಟನೆಗಳಿಂದ ಕರ್ನಾಟಕ ಬಂದ್‍ಗೆ ನಿರ್ಧಾರ ಮಾಡಲು ಮುಂದಾಗಿದ್ದವು. ಆದರೆ, ಈ ಬಗ್ಗೆ ಕನ್ನಡಪರ ಸಂಘಟನೆಗಳಲ್ಲಿ ಒಮ್ಮತ ಮೂಡಿರಲಿಲ್ಲ. ಎಂಇಎಸ್ ಪುಂಡಾಟಿಕೆ ಹಿನ್ನೆಲೆಯಲ್ಲಿ ಎಂಇಎಸ್ ಸಂಘಟನೆ ನಿμÉೀಧಕ್ಕೆ ಆಗ್ರಹಿಸಿ ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್‍ಗೆ ನಿರ್ಧಾರ ಮಾಡಲು ಸಭೆ ಸೇರಲು ನಿರ್ಧರಿಸಿದ್ದವು.
ಅದರಂತೆ, ಇಂದು ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಸಭೆ ನಡೆಸಲಾಗಿದ್ದು, ಡಿಸೆಂಬರ್ 31 ರಂದು ಕರ್ನಾಟಕ ಬಂದ್ ಬಗ್ಗೆ ಅಧಿಕೃತ ಘೋಷಣೆ ಮಾಡಲಾಗಿದೆ. ಬೆಳಗ್ಗೆ 6 ರಿಂದ ಸಂಜೆ 6 ರ ತನಕ ಎಲ್ಲಾ ಚಟುವಟಿಕೆ ಬಂದ್ ಆಗಲಿವೆ..
ಎಂಇಎಸ್ ಸಂಘಟನೆ ನಿμÉೀಧಕ್ಕೆ ಆಗ್ರಹಿಸಲಾಗಿದೆ. ಆದರೆ, ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಮುಂದಿನ ಹೋರಾಟದ ಬಗ್ಗೆ ಇಂದು ಮಹತ್ವದ ಸಭೆ ನಡೆಸಲಾಗಿದೆ. ಸದ್ಯಕ್ಕೆ ಡಿಸೆಂಬರ್ 31ರಂದು ಕರ್ನಾಟಕ ಬಂದ್ ಆಚರಿಸಲು ಕರೆ ನೀಡಲಾಗಿದೆ. ಅಂದು ಬೃಹತ್ ಜಾಥಾ, ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗುತ್ತದೆ ಎಂದು ವಾಟಾಳ್ ನಾಗರಾಜ್ ಹೇಳಿದರು.
ಲಾರಿ ಮಾಲೀಕರ ಸಂಘ, ಆಟೋ ಚಾಲಕರು, ಟ್ಯಾಕ್ಸಿ ಮಾಲೀಕರು, ಹೋಟೆಲ್ ಮಾಲೀಕರು, ಶಿಕ್ಷಣ ಸಂಸ್ಥೆ, ದಲಿತ ಸಂಘರ್ಷ ಸಮಿತಿ, ಕೈಗಾರಿಕಾ, ಬೀದಿಬದಿ ವ್ಯಾಪರಿಗಳು, ಸಾರಿಗೆ ನೌಕರರು, ಸಿನಿಮಾ, ಅಂಗಡಿ ಮಾಲೀಕರು, ಗಾಮೆರ್ಂಟ್ಸ್ ನೌಕರರು, ಸರ್ಕಾರಿ ನೌಕರರು, ಅಖಿಲ ಭಾರತ ಚಾಲಕರ ಸಂಘ, ಕಟ್ಟಡ ಕಾರ್ಮಿಕರ ಸಂಘ ಸೇರಿದಂತೆ ಸುಮಾರು 35 ಸಂಘಟನೆಗಳಿಂದ ಕರ್ನಾಟಕ ಬಂದ್‍ಗೆ ಬೆಂಬಲ ಸಿಕ್ಕಿದೆ ಎಂದು ತಿಳಿಸಲಾಗಿದೆ.

ಮಳೆ ಚಳಿ ಗಾಳಿ ಎನ್ನದೆ ಪತ್ರಿಕೆ ವಿತರಿಸುವರ ಸೇವೆ, ಪತ್ರಿಕೆಗಳ ಅಬಿವೃದ್ದಿಯಲ್ಲಿ ಮಹತ್ವದ ಪಾತ್ರವಹಿಸುತ್ತದೆ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

filter: 0; fileterIntensity: 0.0; filterMask: 0; module: h; hw-remosaic: 0; touch: (-1.0, -1.0); modeInfo: ; sceneMode: Night; cct_value: 0; AI_Scene: (-1, -1); aec_lux: 347.99847; hist255: 0.0; hist252~255: 0.0; hist0~15: 0.0;

ಮಳೆ ಚಳಿ ಗಾಳಿ ಎನ್ನದೆ ಪತ್ರಿಕೆ ವಿತರಿಸುವ ಪತ್ರಿಕಾ ವಿತರಕರ ಸೇವೆ ಪತ್ರಿಕೆಗಳ ಅಬಿವೃದ್ದಿಯಲ್ಲಿ ಮಹತ್ವದ ಪಾತ್ರವಹಿಸುತ್ತದೆ ಎಂದು ರೋಟರಿ ಸೆಂಟ್ರಲ್ ಅಧ್ಯಕ್ಷ ಡಾ|| ವೈ.ವಿ. ವೆಂಕಟಾಚಲ ತಿಳಿಸಿದರು.
ಪಟ್ಟಣದ ಪತಂಜಲಿ ಯೋಗ ಮಂದಿರದಲ್ಲಿ ರೋಟರಿ ಸಂಸ್ಥೆಯಿಂದ ಆಯೋಜಿಸಿದ್ದ ಪತ್ರಿಕಾ ವಿತರಕರಿಗೆ ಜರ್ಕಿನ್ ವಿತರಿಸಿ ಮಾತನಾಡಿದ ವೆಂಕಟಾಚಲ ಪ್ರತಿನಿತ್ಯ ಬೆಳಗಾಗುವಷ್ಟರಲ್ಲಿ ಮಳೆ ಚಳಿ ಯಾವುದನ್ನೂ ಲೆಕ್ಕಿಸದೆ ಪ್ರತಿದಿನ ಮನೆ ಮನೆಗೂ ಪತ್ರಿಕೆಯನ್ನು ತಲುಪಿಸುತ್ತಿರುವುದು ಇವರ ಕಾರ್ಯ ಶ್ಲಾಘೀನಿಯವಾಗಿದೆ. ಒಂದು ಕಾಲದಲ್ಲಿ ದಿವಂಗತ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಂ ರವರು ಸಹ ಮನೆಮನೆಗೂ ನಿತ್ಯ ಪತ್ರಿPಗಳನ್ನು ಹಂಚಿಕೆ ಮಾಡುತ್ತಿದ್ದರು ಅವರು ಸಹ ರಾಷ್ಟ್ರಪತಿ ಉನ್ನತ ಹುದ್ದೆಗೆ ಏರಿದವರು ಯಾರೂ ಸಹ ಎದೆಗುಂದದೆ ಛಲ ಮತ್ತು ವಿಶ್ವಾಸದಿಂದ, ಶ್ರದ್ದಾಭಕ್ತಿಯಿಂದ ಕೆಲಸ ಮಾಡಿದರೆ ಉನ್ನತ ಸ್ಥಾನಕ್ಕೆ ಏರಲು ಯಾವುದು ಅಡ್ಡಿ ಬರುವುದಿಲ್ಲ. “ಲರ್ನಿಂಗ್ ವಿತ್ ಅರ್ನಿಂಗ್” ಎಂಬ ಗಾದೆ ಮಾತಿನಂತೆ ತಾವು ಎಲ್ಲರೂ ಕೆಲಸ ಮಾಡುತ್ತಿದ್ದೀರಿ ಹಣ ಗಳಿಕೆಯ ಮಹತ್ವ ತಿಳಿದಿರುವ ನಿಮಗೆ ಬದುಕಿನಲ್ಲಿ ಸಾದನೆ ಮಾಡುವ ಛಲ ಸಹಜವಾಗಿ ಮೂಡತ್ತದೆ ಎಂದರು.
ಪತ್ರಿಕೆಯನ್ನು ತಮ್ಮ ನಿತ್ಯ ಕಾಯಕದಲ್ಲಿ ಓದಿ ಸಾಕಷ್ಟು ಜನ ಕೆ.ಎ.ಎಸ್, ಐ.ಎ.ಎಸ್ ಉನ್ನತ ಹುದ್ದೆಯಲ್ಲಿ ಇದ್ದಾರೆ ನೀವು ಸಹ ಇಂತಹ ವ್ಯಕ್ತಿಯಾಗಿ ರೂಪಗೊಳ್ಳಬೇಕು. ನಮ್ಮ ರೋಟರಿ ಸಂಸ್ಥೆಯಿಂದ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಪ್ರೋತ್ಸಾಹಿಸುವ ಕೆಲಸ ಮಾಡುತ್ತೇವೆ ಎಂದರು.
ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಎಂ. ಬೈರೇಗೌಡ ಮಾತನಾಡಿ ಈ ರೋಟರಿ ಸಂಸ್ಥೆ ಯಾವುದೇ ಅಪೇಕ್ಷೆ ಇಲ್ಲದೆ ಸಾಮಾಜಿಕಮುಖಿ ಕೆಲಸಗಳನ್ನು ಮಾಡಿಕೊಂಡು ಬರುತ್ತದೆ. ಇಂದು ಪತ್ರಿಕಾ ವಿತರಕರಿಗೆ ಜರ್ಕಿನ್‍ನ್ನು ವಿತರಣೆ ಮಾಡುತ್ತಿರುವುದು ತುಂಬಾ ಸಂತೋಷವಾಗಿದೆ ಕರೋನಾ ಸಮಯದಲ್ಲಿ ಯಾವುದನ್ನೂ ಲೆಕ್ಕಿಸದೆ ಪ್ರತಿಯೊಂದು ಮನೆಗೊ ಪತ್ರಿಕೆಯನ್ನು ವಿತರಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಸಮಾಜ ಇವರ ಕಷ್ಟ-ಸುಖಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು. ಕನ್ನಡದಲ್ಲಿ ಪತ್ರಿಕೋದ್ಯಮ ಬೆಳೆದಂತೆ ಉದ್ಯೋಗÀ ಅವಕಾಶ ಸೃಷ್ಠಿಯಾಗುತ್ತದೆ ಅದರಲ್ಲೂ ಪತ್ರಿಕೆ ವಿತರಣೆ ಕೆಲಸದಿಂದ ಅನೇಕ ಬಡಕುಟುಂಬ ಮಕ್ಕಳಿಗೆ ಉದ್ಯೋಗ ಅವಕಾಶ ದೊರೆಯುತ್ತಿದೆ.. ಚಳಿಗಾಲದಲ್ಲಿ ಅವರ ಕಷ್ಟ-ಸುಖ ಹೇಳಿಕೊಳ್ಳಲು ಸಾಧ್ಯವಿಲ್ಲ ಇದನ್ನು ಮನಗೊಂಡು ರೋಟರಿ ಸಂಸ್ಥೆ ಬೆಚ್ಚನಿಯ ಜರ್ಕಿನ್‍ಗಳನ್ನು ವಿತರಿಸುತ್ತಿರುವುದು ಒಳ್ಳೆಯ ಕೆಲಸ ಇದೇ ರೀತಿ ದಾನಿಗಳು, ಸಂಘ ಸಂಸ್ಥೆಗಳು. ನೇರವಾಗಬೇಕೆಂದು ಕೋರಿದರು.
ಇದೇ ಸಂದರ್ಭದಲ್ಲಿ ರೋಟರಿ ಡಿಸ್ಟಿಕ್ ಅಸಿಸ್ಟೆಂಟ್ ಗರ್ವನರ್ ಹೆಚ್. ರಾಮಚಂದ್ರಪ್ಪ, ಕಾರ್ಯದರ್ಶಿ ಹೆಚ್.ಆರ್. ನಾರಾಯಣಸ್ವಾಮಿ, ಕನ್ನಡ ಸಾಹಿತ್ಯ ಪರಿಷತ್‍ನ ಜಿಲ್ಲಾಧ್ಯಕ್ಷ ಗೋಪಾಲಗೌಡ, ರೋಟರಿ ಸೆಂಟ್ರಲ್‍ನ ಮಾಜಿ ಅಧ್ಯಕ್ಷ ಶಿವಮೂರ್ತಿ, ರೋಟರಿ ಸೆಂಟ್ರಲ್‍ನ ಸದಸ್ಯರಾದ ಸೀತಾರೆಡ್ಡಿ, ಶ್ರೀನಿವಾಸರೆಡ್ಡಿ, ಸುಬ್ರಮಣಿ, ಮುದುವಾಡಿ ಟಿ.ಮಂಜುನಾಥರೆಡ್ಡಿ, ವಿಶ್ವನಾಥರೆಡ್ಡಿ, ಮಂಜು, ಹಾಗೂ ಪತ್ರಿಕಾ ವಿತರಕರು ಹಾಜರಿದ್ದರು.

ಉಡುಪಿ ಜಿಲ್ಲಾ ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ಉಪಾಧ್ಯಕರಾಗಿ ಬಿ.ಹಾರೂನ್ ಸಾಹೇಬ್

ವರದಿ : ಮಝರ್, ಕುಂದಾಪುರ

ಕುಂದಾಪುರ:ಉಡುಪಿ ಜಿಲ್ಲಾ ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ಉಪಾಧ್ಯಕ್ಷರಾಗಿ ಬಿ.ಹಾರೂನ್ ಸಾಹೇಬ್ ನೇಮಕ ಗೊಂಡಿದ್ದಾರೆ. ವಿಧಾನ ಪರಿಷತ್ ಸದಸ್ಯ,ಮಾಜಿ ಸಭಾಪತಿ ಕೆ.ಪ್ರತಾಪ್ ಚಂದ್ರ ಶೆಟ್ಟಿ ಅವರ ಸೂಚನೆಯ ಮೇರೆಗೆ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ  ಕಾನ್ಮಕ್ಕಿ ಹರಿಪ್ರಸಾದ್ ಶೆಟ್ಟಿಯವರ ಶಿಫಾರಸ್ಸಿ ನಂತೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಅವರ ಅನುಮೋದನೆಯ ಮೂಲಕ ಅವರನ್ನು ಉಡುಪಿ ಜಿಲ್ಲಾ ಕಾಂಗ್ರೆಸ್ ಘಟಕದ ಅಲ್ಪ ಸಂಖ್ಯಾತ  ಉಪಾಧ್ಯಕ್ಷರಾಗಿ ನೇಮಿಸಿ ಜಿಲ್ಲಾ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಜನಾಬ್ ಇಸ್ಮಾಯಿಲ್ ಆತ್ರಾಡಿ ಆದೇಶಿಸಿದ್ದಾರೆ . ಏಳವೆಯಿಂದಲೂ ಕಟ್ಟಾ ಕಾಂಗ್ರೆಸ್ ಕಾರ್ಯಕರ್ತ ನಾಗಿ ಗುರುತಿಸಿ ಕೊಂಡಿರುವ ಹಾರೂನ್ ಸಾಹೇಬರು ಮಾಜಿ ಪುರಸಭಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ

ತ್ಯಜಿಸಿ ಹೋಗಿದ್ದ ನವಜಾತ ಶಿಶುವನ್ನು ನಾಯಿಯೊಂದು ರಾತ್ರಿಯಿಡಿ ಕಾವಲು ಕಾದು ರಕ್ಷಿಸಿದೆ.

JANANUDI.COM NETWORK

ರಾಯ್ ಪುರ: ಎಷ್ಟೋ ಭಾರಿ ಪ್ರಾಣಿಗಳು ಮನುಷ್ಯರಿಗಿ೦ತ ಮೇಲು ಎಂದು ಶ್ರುತವನ್ನಾಗಿಸಿದೆ, ಅದರಲ್ಲಿ ನಾಯಿ ಪ್ರಮುಖ, ಇದು ಸತ್ಯವೆಂಬತ್ತೆ ರಾಯ್ ಪುರ ವೆಂಬಲ್ಲಿ ನಾಯೊಂದು ಶ್ರುತಪಡಿಸಿವೆ . ಅಂತಹ ಒಂದು ಘಟನೆ
ಛತ್ತೀಸ್ ಗಢ ರಾಯ್ ಪುರದಲ್ಲಿ ನಡೆದಿದೆ. ಗದ್ದೆಯೊಂದರಲ್ಲಿ ಉಪೇಕ್ಷೇಸಿ (ತ್ಯಜಿಸಿ ಹೋದ) ಹೋಗಿದ್ದ ನವಜಾತ ಶಿಶುವನ್ನು ಹೆಣ್ಣು ನಾಯಿಯೊಂದು ರಾತ್ರಿಯಿಡಿ ಕಾವಲು ಕಾದು ರಕ್ಷಿಸಿದೆ. ಅದು ಕೂಡ ತನ್ನ ಆರು ಏಳು ನಾಯಿ ಮರಿಗಳ ಜತೆ ಈ ನಾಯಿ ಮಗುವನ್ನು ರಕ್ಷಿಸುವಲ್ಲಿ ಯಶಸ್ವಿಯಾದದ್ದು ವಿಶೇಷವಾಗಿದೆ ಮಗು ನವಜಾತ ಶಿಶುವಾಗಿದ್ದು , ಮೈ ಮೇಲೆ ಯಾವುದೇ ಬಟ್ಟೆ ಕೂಡ ಇರಲಿಲ್ಲ. ಇದೀಗ ಸ್ವಯಂ ಸೇವಾ ಸಂಘಟನೆಯೊಂದು ಮಗುವನ್ನು ರಕ್ಷಿಸಲು ಮುಂದಾಗಿದೆ