HOLY ROSARY CHURCH, KUNDAPUR – 450 th JUBILEE SOUVENIR 2021

ಹಾಲು ಉತ್ಪಾದಕರು ಕಡ್ಡಾಯವಾಗಿ ಕೋವಿಡ್ ನಿಯಮ ಪಾಲಿಸಬೇಕು ಕೋಚಿಮುಲ್ ನಿರ್ದೇಶಕ ಎನ್.ಹನುಮೇಶ್

ವರದಿ ಶಬ್ಬೀರ್ ಅಹ್ಮದ್ ಶ್ರೀನಿವಾಸಪುರ

ಶ್ರೀನಿವಾಸಪುರ : ಹಾಲು ಉತ್ಪಾದಕರು ಕಡ್ಡಾಯವಾಗಿ ಕೋವಿಡ್ ನಿಯಮ ಪಾಲಿಸಬೇಕು ಎಂದು ಕೋಚಿಮುಲ್ ನಿರ್ದೇಶಕ ಎನ್.ಹನುಮೇಶ್ ಹೇಳಿದರು .
ಶಿಬಿರ ಕಚೇರಿ ಸಭಾಂಗಣದಲ್ಲಿ ಹಾಲು ಉತ್ಪಾದಕರಿಗೆ ಮೃತಪಟ್ಟ ರಾಸುಗಳ ವಿಮಾ ಪರಿಹಾರ ಚೆಕ್ ವಿತರಿಸಿ ಮಾತನಾಡಿ , ೧೨ ಫಲಾನುಭವಿಗಳಿಗೆ ರೂ .೬.೫೦ ಲಕ್ಷ ಮೌಲ್ಯದ ಚೆಕ್ ವಿತರಿಸಲಾಗಿದೆ ಎಂದು ಹೇಳಿದರು.
ಕಚೇರಿ ಉಪ ವ್ಯವಸ್ಥಾಪಕ ಕೆ.ಎಸ್. ನರಸಿಂಹಯ್ಯ ಮಾತನಾಡಿ , ಹಾಲಿನ ಗುಣಮಟ್ಟ ಹೆಚ್ಚಿಸಲು ಹಸಿರು ಮತ್ತು ಒಣ ಮೇವಿನ ಜತೆಗೆ ಪಶು ಆಹಾರ , ಖನಿಜ ಮಿರ್ಶಣ , ಗೋಧಾರ ಶಕ್ತಿ ಮತ್ತು ಟ್ರಿಯೋ ಎನ್‌ ಬಿ ಸ್ಯಾಕ್ ಪುಡಿ ನೀಡಬೇಕು . ಕೆಚ್ಚಲು ಬಾವು ಹಾಗೂ ಕಾಲುಬಾಯಿ ಜ್ವರ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಉಪ ಕಚೇರಿ ವಿಸ್ತರಣಾಧಿಕಾರಿಗಳಾದ ಎಂ.ಜಿ. ಶ್ರೀನಿವಾಸ್ , ಎನ್ . ಶಂಕರ್ , ಸಿಂಹರಾಜು , ಎಸ್.ವಿನಾಯಕ , ಕೆ.ಪಿ. ಶ್ವೇತ ಇದ್ದರು .

ಅರ್ಹ ಶಿಕ್ಷಕರಿಗೆ ಫಾತಿಮಾ ಷೇಕ್ ಪ್ರಶಸ್ತಿ ಸಿಗಲಿ – ರೇವಣ್ಣ ಸಿದ್ದೇಶ್ವರ

ವರದಿ ಶಬ್ಬೀರ್ ಅಹ್ಮದ್ ಶ್ರೀನಿವಾಸಪುರ

ಕೋಲಾರ: ಶೈಕ್ಷಣಿಕ ರಂಗದಲ್ಲಿ ಗಣನೀಯ ಸಾಧನೆ ಮಾಡಿದವರನ್ನು ಗುರುತಿಸಿ ಅಕ್ಷರದವ್ವ ಫಾತಿಮಾ ಷೇಕ್‌ರ ಸ್ಮರಣಾರ್ಥ ಪ್ರಶಸ್ತಿ ಪ್ರದಾನ ನಡೆಯುವಂತಾಗಲಿ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯಉಪ ನಿರ್ದೇಶಕ ರೇವಣ್ಣ ಸಿದ್ದಪ್ಪ ಹೇಳಿದರು.
ಪತ್ರಕರ್ತರ ಭವನದಲ್ಲಿ ಕರ್ನಾಟಕ ರಾಜ್ಯಶಿಕ್ಷಕರ ಸಾಹಿತ್ಯ ಪರಿಷತ್ ಹಾಗೂ ಅಕ್ಷರದವ್ವ ಫಾತಿಮಾ ಶೇಕ್‌ರ ಪ್ರತಿಷ್ಠಾನ ಬಂಗಾರಪೇಟೆ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಫಾತಿಮಾ ಶೇಕ್ ಪುಸ್ತಕ ಬಿಡುಗಡೆ, ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸುಮಾರು ೧೯೧ ವರ್ಷಗಳ ಹಿಂದೆ ಜನಿಸಿ ಮೊದಲ ಶಿಕ್ಷಕಿ ಸಾವಿತ್ರಿ ಬಾಯಿ ಫುಲೆ ಜೊತೆಯಲ್ಲಿ ಅಲ್ಪಸಂಖ್ಯಾತ ಹಿಂದುಳಿದ ಶೋಷಿತ ವರ್ಗದ ಮಕ್ಕಳಿಗಾಗಿ ಮೊದಲ ಶಾಲೆ ತೆರೆದವರ ಹೆಸರಿನಲ್ಲಿ ಪ್ರಶಸ್ತಿ ನೀಡುವಾಗ ಅರ್ಹತೆಯೇ ಮಾನದಂಡವಾಗಿರಲಿ ಎಂದು ಕಿವಿಮಾತು ಹೇಳಿದರು.
ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಕ್ರಾಂತಿಕಾರಕ ಹೆಜ್ಜೆಗಳನ್ನಿಟ್ಟ ಮಹಿಳೆಯರನ್ನು ಸಮಾಜ ಸರಿಯಾಗಿ ಸ್ಮರಿಸುತ್ತಿಲ್ಲವೆಂದು ವಿಷಾದಿಸಿದ  ಅವರು, ಇಂತ ಸಂದರ್ಭದಲ್ಲಿ ಫಾತಿಮಾ ಷೇಕ್ ಪುಸ್ತಕ ಬಿಡುಗಡೆಯಾಗುತ್ತಿರುವುದು ಸ್ವಾಗತಾರ್ಹ ಎಂದರು.
ಫಾತಿಮಾ ಷೇಕ್ ಪುಸ್ತಕವನ್ನು ತೆಲುಗಿನಿಂದ ಕನ್ನಡಕ್ಕೆ ಅನುವಾದಿಸಿದ ಕಾಹು ಚಾನ್ ಪಾಷಾ ಮಾತನಾಡಿ, ಕನ್ನಡದಲ್ಲಿ ಎರಡು ಪತ್ರಿಕೆಗಳಲ್ಲಿ ಪ್ರಕಟವಾಗಿದ್ದ ಲೇಖನಗಳು ಮಾತ್ರವೇ ಫಾತಿಮಾ ಷೇಕ್‌ರ ಜೀವನ ಚರಿತ್ರೆಕುರಿತು ಬೆಳಕು ಚೆಲ್ಲಿತ್ತು. ಇದರಿಂದ ಆಸಕ್ತಿನಾಗಿ ತಾವು ತೆಲುಗಿನಲ್ಲಿ ಪ್ರಕಟವಾಗಿದ್ದ ಸೈಯದ್ ನಸೀರ್ ಅಹಮ್ಮದ್‌ರ ಫಾತಿಮಾ ಶೇಕ್ ಆಧುನಿಕ ಭಾರತದ ಮೊದಲ ಮುಸ್ಲಿಂ ಶಿಕ್ಷಕಿ ಎಂದು ಒಂದು ವರ್ಷಕಾಲ ಕಷ್ಟಪಟ್ಟು ಕನ್ನಡಕ್ಕೆ ಅನುವಾದಿಸಿ ಲೋಕಾರ್ಪಣೆ ಮಾಡಿದ್ದಾಗಿ ವಿವರಿಸಿ, ಈ ಪುಸ್ತಕ ಬಿಡುಗಡೆ ನೆಪದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಫಾತಿಮಾ ಶೇಕ್‌ರ ಜನ್ಮ ದಿನಾಚರಣೆ ನಡೆಯುತ್ತಿದೆಯೆಂದರು.
ಪುಸ್ತಕ ಬಿಡುಗಡೆ ಮಾಡಿದ ಕೋಲಾರ ಮತ್ತು ಚಿಕ್ಕಬಳ್ಳಾಪುರ ಕಾರ್ಯನಿರತ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ, ಜ.೩ರ ಸಾವಿತ್ರಿಬಾಯಿ ಫುಲೆ ಜನ್ಮದಿನದಿಂದ ಜ.೯ ಫಾತಿಮಾ ಶೇಕ್‌ರ ಜನ್ಮದಿನದವರೆವಿಗೂ ದೇಶಾದ್ಯಂತ ಮಹಿಳಾ ಶೈಕ್ಷಣಿಕ ಸಬಲೀಕರಣ ಸಪ್ತಾಹದಡಿ ವೈವಿಧ್ಯಮ ಕಾರ್ಯಕ್ರಮ ನಡೆಯುವಂತಾಗಿ ಇಬ್ಬರು ಮಹಾನ್ ಮಹಿಳೆಯರನ್ನು ಸ್ಮರಿಸುವಂತಾಗಲಿ ಎಂದು ಆಶಿಸಿದರು.
ಪುಸ್ತಕ ಕುರಿತು ಮಾತನಾಡಿದ ನಿರ್ಗಮಿತ ಕಸಾಪ ಜಿಲ್ಲಾಧ್ಯಕ್ಷ ನಾಗಾನಂದ ಕೆಂಪರಾಜ್ ಮಾತನಾಡಿ, ಕಾ.ಹು.ಚಾನ್‌ಪಾಷಾರ ಮೂಲಕ ಕನ್ನಡಿಗರಿಗೆ ಫಾತಿಮಾ ಶೇಕ್ ಪರಿಚಯವಾಗುತ್ತಿರುವುದು ಹೆಮ್ಮೆಯಸಂಗತಿ ಪ್ರತಿ ವಿದ್ಯಾರ್ಥಿನಿ ಈ ಪುಸ್ತಕ ಓದಿ ಪ್ರೇರಿತರಾಗಲಿ ಎಂದರು.
ಕರ್ನಾಟಕ ರಾಜ್ಯ ಶಿಕ್ಷಕ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಶಿವಕುಮಾರ್ ಮಾತನಾಡಿ, ಮರೆಯಾದ ನಕ್ಷತ್ರಗಳನ್ನು ಹುಡುಕಿ ಯುವ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಈ ಕಾರ್ಯಕ್ರಮಆಯೋಜಿಸಿ ಫಾತಿಮಾ ಶೇಕ್ ನೆನಪಿನಲ್ಲಿ ಸಾಧಕರನ್ನು ಸನ್ಮಾನಿಸಲಾಗುತ್ತಿದೆಯೆಂದು ಹೇಳಿದರು.
ಅಧ್ಯಕ್ಷತೆವಹಿಸಿದ್ದ ಶಿಕ್ಷಕರ ಸಾಹಿತ್ಯ  ಪರಿಷತ್ ಜಿಲ್ಲಾಧ್ಯಕ್ಷ ಎಂ.ವೆಂಕಟೇಶಪ್ಪ ಮಾತನಾಡಿ, ಕಣ್ಮರೆಯಾಗಿರುವ ಸಾಧಕಿಯರ ಸ್ಮರಣೆಯಿಂದ ಮಾನವೀಯತೆ ಶಿಕ್ಷಣವನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳೋಣ ಎಂದರು.
ವೇದಿಕೆಯಲ್ಲಿ ಗಮನ ಮಹಿಳಾ ಸಮೂಹದ ಸಮನ್ವಯಾಧಿಕಾರಿ ಶಾಂತಮ್ಮ, ಜನವಾದಿ ಮಹಿಳಾ ಸಂಘಟನೆಯ ಕಾರ್ಯದರ್ಶಿ ಆರ್.ವಿಜಯಕುಮಾರಿ ಮಾತನಾಡಿ, ಫಾತಿಮಾ ಶೇಕ್ ಮತ್ತು ಸಾವಿತ್ರಿ ಬಾಯಿ ಫುಲೆ ಸಮಸ್ತ ಮಹಿಳಾ ಲೋಕಕ್ಕೆ ಪರಿಚಯಿಸುವ ಕಾರ್ಯವನ್ನು ಕೈಗೆತ್ತಿಕೊಳ್ಳುವುದಾಗಿ ಘೋಷಿಸಿದರು.
ವೇದಿಕೆಯಲ್ಲಿ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಎನ್.ಎಂ.ಶಂಕರಪ್ಪ, ನೂತನಸರಕಾರಿ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲ ವಿ.ರುದ್ರಪ್ಪ ಇತರರು ಉಪಸ್ಥಿತರಿದ್ದರು.
ಫಾತಿಮಾ ಶೇಕ್ ಪ್ರಶಸ್ತಿಯನ್ನು ಶಿಕ್ಷಕಿಯರಾದ ಸರ್ವತ್ ಉನ್ನೀಸ, ಶಾಜಿಯಾ ಹೈದರ್, ಎನ್.ಮಂಜುಳ, ಎಂ.ಎನ್.ಉಮಾದೇವಿ ಹಾಗೂ ಎಂ.ರಾಧಾಮಣಿಯವರನ್ನು ಸನ್ಮಾನಿಸಲಾಯಿತು.
ಕೊಂಡರಾಜನಹಳ್ಳಿ ಮಂಜುಳ ಕಾರ್ಯಕ್ರಮ ನಿರೂಪಿಸಿದರು.

ಸಂತ ಲಾರೆನ್ಸ್ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಯುವ ದಿನಾಚರಣೆ

JANANUDI.COM NETWORK

ಮೂಡುಬೆಳ್ಳೆ : ಇಲ್ಲಿಯ ಸಂತ ಲಾರೆನ್ಸ್ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಯುವ ದಿನ, ಸ್ವಾಮಿ ವಿವೇಕಾನಂದರ 159ನೇ ಜನ್ಮದಿನಾಚರಣೆಯನ್ನು ಆಚರಿಸಲಾಯಿತು .ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಶಿರ್ವ ಸಂತ ಮೇರಿ ಪದವಿ ಕಾಲೇಜಿನ ಕನ್ನಡ ಉಪನ್ಯಾಸಕಿ ಡಾ. ಗುಲಾಬಿ ಪೂಜಾರಿ ಭಾಗವಹಿಸಿ ” ಸ್ವಾಮಿ ವಿವೇಕಾನಂದರ ಜೀವನ ನಮ್ಮೆಲ್ಲರಿಗೂ ಸದಾ ಪ್ರೇರಣೆ. ಇಂದಿನ ಯುವ ಜನಾಂಗ ಸ್ವಾಮಿ ವಿವೇಕಾನಂದರ ವಾಣಿಗಳಿಂದ ಪ್ರೇರಿತರಾಗಿ ಸದೃಢ ರಾಷ್ಟ್ರ ನಿರ್ಮಾಣವನ್ನು ಮಾಡಲು ಮಾಡುವತ್ತ ಮುನ್ನಡೆಯಬೇಕು” ಎಂದು ಸಂದೇಶ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಎಡ್ವರ್ಡ್ ಲಾರ್ಸನ್ ಡಿಸೋಜ ವಹಿಸಿದ್ದರು. ದೈಹಿಕ ಶಿಕ್ಷಣ ನಿರ್ದೇಶಕರಾದ ಜೋಸೆಫ್ ಡಿಸೋಜ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರೌಢಶಾಲಾ ವಿಭಾಗದ ಶಿಕ್ಷಕ ಜಾನ್ ಕ್ಯಾಸ್ಟಲಿನೊ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಪದವಿಪೂರ್ವ ಮತ್ತು ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳು ಹಾಜರಿದ್ದರು.

ರಾಷ್ಟ್ರೀಯ ಸೇವಾ ಯೋಜನಾ ಘಟಕದ ಯೋಜನಾಧಿಕಾರಿ ಶ್ರೀಮತಿ ಜೆಸಿಂತಾ ನತಾಲಿಯಾ ಲೋಬೋ ಸ್ವಾಗತಿಸಿ ,ಪ್ರೌಢಶಾಲಾ ವಿಭಾಗದ ಹಿರಿಯ ಶಿಕ್ಷಕಿ ಶ್ರೀಮತಿ ಸುನೀತಾ ಕಾಮತ್ ವಂದಿಸಿದರು.

ಕೋಟೇಶ್ವರದ ಶ್ರೀಕೋಟಿಲಿಂಗೇಶ್ವರ ದೇವಾಲಯ: ಧ್ವಜಮರ ಪ್ರತಿಷ್ಠಾಪನೆ, ಬ್ರಹ್ಮಕಲಶಾಭಿಷೇಕ,ಶ್ರೀಮನ್ ಮಹಾರಥೋತ್ಸವಗಳ ಸೇವೆಗಳ ಕೂಪನ್ ಪುಸ್ತಿಕೆಗಳ ಬಿಡುಗಡೆ

ವರದಿ : ಕೆ.ಜಿ.ವೈದ್ಯ,ಕುಂದಾಪುರ

ಕುಂದಾಪುರ : ಕರಾವಳಿಯ ಪ್ರಸಿದ್ಧ ಪುಣ್ಯಕ್ಷೇತ್ರ ಕೋಟೇಶ್ವರದ ಶ್ರೀ ಕೋಟಿಲಿಂಗೇಶ್ವರ ದೇವಾಲಯದಲ್ಲಿ ಇದೇ ಫೆಬ್ರವರಿ 7 ರಿಂದ 17 ರವರೆಗೆ ನಡೆಸಲುದ್ದೇಶಿಸಿರುವ ನೂತನ ಧ್ವಜಮರ ಪ್ರತಿಷ್ಠಾಪನೆ, ಬ್ರಹ್ಮಕಲಶಾಭಿಷೇಕ ಮತ್ತು ಶ್ರೀಮನ್ ಮಹಾರಥೋತ್ಸವಗಳ ಅಂಗವಾಗಿ, ವಿವಿಧ ಕಲಶಾಶಾಭಿಷೇಕ ಸೇವೆಗಳ ಕೂಪನ್ ಗಳ ಪುಸ್ತಿಕೆಗಳನ್ನು ಬಿಡುಗಡೆಗೊಳಿಸಲಾಯಿತು.- –ಶ್ರೀ ಕೋಟಿಲಿಂಗೇಶ್ವರ ದೇವಳ ವಠಾರದಲ್ಲಿ ನಡೆದ ಆಯ್ದ ಸಮಿತಿಗಳ ಅನೌಪಚಾರಿಕ ಸಭೆಯಲ್ಲಿ ಬ್ರಹ್ಮ ಕಲಶೋತ್ಸವ ಸಮಿತಿ ಅಧ್ಯಕ್ಷ ಗೋಪಾಡಿ ಶ್ರೀನಿವಾಸ ರಾವ್ ಪುಸ್ತಿಕೆಗಳನ್ನು ಬಿಡುಗಡೆಗೊಳಿಸಿ, ಸರ್ಕಾರದ ಕೋವಿಡ್ ರಕ್ಷಣಾ ನಿಯಮಗಳನ್ನು ಪಾಲಿಸಿ ಉತ್ಸವಗಳನ್ನು ನಡೆಸಲಾಗುತ್ತಿದೆ. 62 ವರ್ಷಗಳ ನಂತರ ನಮ್ಮ ಜೀವಮಾನದಲ್ಲಿ ಒದಗಿಬಂದಿರುವ ಈ ಅಪೂರ್ವ ಸಂದರ್ಭದಲ್ಲಿ ಶ್ರೀ ದೇವರ ಸೇವೆಯಲ್ಲಿ ತೊಡಗಿಸಿಕೊಂಡು ಭಗವಂತನಿಗೆ ಕೃತಜ್ಞತೆ ಸಲ್ಲಿಸಿ, ಕೃಪೆಗೆ ಪಾತ್ರರಾಗುವ ಒಂದು ಸದವಕಾಶ ಇದು ಎಂದು ವಿವರಿಸಿ, ಸರ್ವರೂ ಸಹಕರಿಸುವಂತೆ ಮನವಿ ಮಾಡಿದರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೋಣಿ ಕೃಷ್ಣದೇವ ಕಾರಂತ ಮಾತನಾಡಿ, ದೇವಳ ಜೀರ್ಣೋದ್ಧಾರ ಪ್ರಕ್ರಿಯೆಗಳು ಮುಕ್ತಾಯದ ಹಂತ ತಲುಪಿದ್ದು, ಊರ – ಪರವೂರ ಪ್ರತಿಯೊಬ್ಬರೂ ಈ ಸಂದರ್ಭದಲ್ಲಿ ತಮ್ಮ ಕುಟುಂಬದ ವತಿಯಿಂದ ಕನಿಷ್ಠ ಒಂದು ಕಲಶವನ್ನು ಶ್ರೀ ದೇವರ ಅಭಿಷೇಕಕ್ಕೆ ಒದಗಿಸಿ ಪುನೀತರಾಗಬೇಕು ಎಂದು ವಿನಂತಿಸಿದರು.
ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ಸುರೇಶ್ ಬೆಟ್ಟಿನ್ ಕಲಶ ಸೇವೆಗಳ ಬಗ್ಗೆ ಮಾಹಿತಿ ನೀಡಿ, ಬೆಳ್ಳಿ (ರಜತ)ಕಲಶ ಒಂದಕ್ಕೆ 30,000 ರೂ., ತಾಮ್ರದ ಅಷ್ಟಲಕ್ಷ್ಮೀ ಕಲಶ ರೂ.5,005 ಹಾಗೂ ತೀರ್ಥಪ್ರಸಾದ ಮತ್ತು ಕಲಶ ರೂ. 1,005. ಅಲ್ಲದೇ, ಹೆಚ್ಚಿನ ಮೌಲ್ಯವನ್ನು ಹಣದ ರೂಪದಲ್ಲೂ ನೀಡಬಹುದು ಎಂದು ತಿಳಿಸಿದರು.
ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಂ. ಪ್ರಭಾಕರ ಶೆಟ್ಟಿ ಮಾತನಾಡಿ, ಬ್ರಹ್ಮಕಲಶೋತ್ಸವ ಸಮಾರಂಭಕ್ಕೆ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು, ಸ್ವಾಮೀಜಿಗಳು ಹಾಗೂ ಗಣ್ಯಮಾನ್ಯರು, ಜನಪ್ರತಿನಿಧಿಗಳು ಆಗಮಿಸಲಿದ್ದಾರೆ. ಹೊರೆಕಾಣಿಕೆ ಸಲ್ಲಿಸಲು ಭಕ್ತರಿಗೆ ಅವಕಾಶವಿದೆ.

ಮನೆ ಮನೆಗೆ ಭೇಟಿ ನೀಡಿ ಏಡ್ಸ್ ಕುರಿತು ಅರಿವು ಅಭಿಯಾನ -ಡಾ.ಆರ್.ಸೆಲ್ವಮಣಿ

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಕೋಲಾರ : ಕೋಲಾರ ಜಿಲ್ಲೆಯ ಕೆ.ಜಿ.ಎಫ್ ತಾಲ್ಲೂಕಿನಾದ್ಯಂತ ಮನೆ ಮನೆಗೆ ಜನವರಿ 17 ಮತ್ತು 18 ರಂದು ಆರೋಗ್ಯ ಕಾರ್ಯಕರ್ತರು ಭೇಟಿ ನೀಡಿ ಹೆಚ್.ಐ.ವಿ / ಏಡ್ಸ್ ಕುರಿತು ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಡಾ.ಆರ್.ಸೆಲ್ವಮಣಿ ಅವರು ತಿಳಿಸಿದರು . 2 ಇಂದು ತಮ್ಮ ಕಛೇರಿಯ ನ್ಯಾಯಾಂಗ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು . ಜನಸಾಮಾನ್ಯರಿಗೆ ಹೆಚ್‌ಐವಿ / ಏಡ್ಸ್ ನಿಯಂತ್ರಣ , ಕಳಂಕ ಮತ್ತು ತಾರತಮ್ಯ , ಸಾಮಾಜಿಕ ಸವಲತ್ತು ಇತ್ಯಾದಿಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದ್ದು . ಇದರಿಂದ ಇತ್ತೀಚಿನ ವರ್ಷಗಳಲ್ಲಿ ಹೆಚ್‌ಐವಿ ಸೋಂಕಿನ ಪ್ರಮಾಣ ಗಣನೀಯವಾಗಿ ಕಡಿಮೆಯಾಗುತ್ತಿದೆ . ಆದಾಗ್ಯೂ ಹೆಚ್ಐವಿ ಸೋಂಕನ್ನು ಶೂನ್ಯಕ್ಕೆ ತರುವ ಸಲುವಾಗಿ ಕಳೆದ ವರ್ಷದಲ್ಲಿ ಜಿಲ್ಲೆಯ ಕೋಲಾರ ತಾಲ್ಲೂಕಿನಲ್ಲಿ ಮನೆ ಮನೆ ಮಾಹಿತಿ ಅಭಿಯಾನ ಕಾರ್ಯಕ್ರಮವನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲಾಗಿತ್ತು . ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯ ಕೆಜಿಎಫ್ ತಾಲ್ಲೂಕಿನಲ್ಲಿ ಮನೆ ಮನೆ ಮಾಹಿತಿ ಅಭಿಯಾನವನ್ನು ( Door to Door Campaign ) ಹಮ್ಮಿಕೊಳ್ಳಲಾಗಿದೆ ಎಂದರು . ಈ ಅಭಿಯಾನದಲ್ಲಿ ಆಟೋಗಳ ಮೂಲಕ ಪ್ರಚಾರ ಆಂದೋಲನ , ಜಾನಪದ ಕಲಾತಂಡಗಳ ಮೂಲಕ ತಾಲ್ಲೂಕಿನ 15 ಗ್ರಾಮಗಳಲ್ಲಿ ದಿನಾಂಕ : 17.01.2022 ರಿಂದ 31.01.2022 ರವರೆಗೆ ಹೆಚ್‌ಐವಿ / ಏಡ್ಸ್ ಕುರಿತು ಬೀದಿನಾಟಕದ ಮೂಲಕ ಪ್ರದರ್ಶನ ನಡೆಸಲಾಗುತ್ತಿದೆ . ಕೆಜಿಎಫ್ ಸರ್ಕಾರಿ ಬಸ್ ನಿಲ್ದಾಣದಲ್ಲಿ ಧ್ವನಿಸುರಳಿಯ ಮುಖಾಂತರ ಸಾರ್ವಜನಿಕರಿಗೆ ಹೆಚ್ ಐವಿ / ಏಡ್ಸ್ ಬಗ್ಗೆ ಅರಿವು ಹಾಗೂ ಸ್ಥಳೀಯ ಬಸ್ಸುಗಳಲ್ಲಿ ಹೆಚ್‌ಐವಿ / ಏಡ್ಸ್ ಬಗ್ಗೆ ಮಾಹಿತಿ ಇರುವ ಫಲಕಗಳನ್ನು ಅಳವಡಿಸಲಾಗುವುದು . ವಿವಿಧ ಗ್ರಾಮಗಳಲ್ಲಿ ಭಿತ್ತಿಚಿತ್ರವನ್ನು ಅಂಟಿಸುವುದು ಹಾಗೂ ಪ್ರತಿಮನೆಗೆ ಕರಪತ್ರ ವಿತರಣೆ ಮಾಡಲಾಗುವುದು ಎಂದರು .
ಮನೆ ಮನೆ ಮಾಹಿತಿ ಅಭಿಯಾನದಲ್ಲಿ ಒಟ್ಟು 57143 ಮನೆಗಳನ್ನು ತಲುಪುವ ಉದ್ದೇಶವನ್ನು ಹೊಂದಿದ್ದು , ಆಶಾ ಕಾರ್ಯಕರ್ತೆಯರು ಮನೆ ಮನೆ ಭೇಟಿ ನೀಡಿ ಹೆಚ್‌ಐವಿ / ಏಡ್ಸ್ ನಿಯಂತ್ರಣ , ಚಿಕಿತ್ಸೆ ಹಾಗೂ ಸೇವೆಗಳ ಬಗ್ಗೆ ಅರಿವನ್ನು ಮೂಡಿಸಿ , ಕರಪತ್ರವನ್ನು ವಿತರಿಸಿ ನಂತರ ಹೆಚ್‌ಐವಿ / ಏಡ್ಸ್ ಮಾಹಿತಿ ಸ್ಟಿಕರ್‌ನ್ನು ಅಂಟಿಸಲಾಗುವುದು . ಈ ಎಲ್ಲಾ ಚಟುವಟಿಕೆಗಳನ್ನು ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಮೇಲ್ವಿಚಾರಣೆ ಮಾಡುತ್ತಾರೆ ಎಂದರು . ಕೋಲಾರ ಜಿಲ್ಲೆಯಲ್ಲಿ 2019-20 ನೇ ಸಾಲಿನಲ್ಲಿ 391 ಪಾಸಿಟೀವ್ ಪ್ರಕರಣಗಳು , 2020-21 ನೇ ಸಾಲಿನಲ್ಲಿ 274 ಪಾಸಿಟೀವ್ ಪ್ರಕರಣಗಳು ಕಂಡುಬಂದಿದ್ದವು . ಪ್ರತಿ ವರ್ಷ ಪಾಸಿಟೀವ್ ಪ್ರಕರಣಗಳು ಕಡಿಮೆಯಾಗುತ್ತಿವೆ . ಕೋಲಾರ ಜಿಲ್ಲೆಯಲ್ಲಿ 4868 ಪುರುಷರು , 4299 ಮಹಿಳೆಯರು , 173 ಮಕ್ಕಳು ಸೇರಿದಂತೆ 9543 ಹೆಚ್.ಐ.ವಿ ಸೋಂಕಿತರು ಎಆರ್‌ಟಿ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದರು . ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ.ಜಗದೀಶ್ , ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿಗಳಾದ ಡಾ.ಕಮಲ ಅವರು ಉಪಸ್ಥಿತರಿದ್ದರು .


ಜಿಲ್ಲೆಯ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲಾಗುವುದು – ಡಿ.ದೇವರಾಜ್

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಕೋಲಾರ : ಜಿಲ್ಲೆಯಲ್ಲಿ ನಡೆಯುವಂತಹ ಅಕ್ರಮ ಚಟುವಟಿಕೆಗಳಾದ ಮಟ್ಕಾ ದಂದೆ , ಕ್ರಿಕೇಟ್ ಬೆಟ್ಟಿಂಗ್ , ಸಾಮಾಜಿಕ ಜಾಲತಾಣಗಳ ದುರ್ಬಳಕೆ , ಜೂಜೂಟ , ಗಾಂಜಾ , ಅಕ್ರಮ ಮರಳು ಸಾಗಾಣಿಕೆ , ಅಕ್ರಮ ಗಣಿಗಾರಿಕೆ ಮುಂತಾದ ಕಾನೂನು ಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಲಾಗುವುದು ಎಂದು ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಿ.ದೇವರಾಜ್ ಅವರು ತಿಳಿಸಿದರು . ಇಂದು ತಮ್ಮ ಕಛೇರಿಯಲ್ಲಿ ಹಮ್ಮಿಕೊಂಡಿದ್ದ , ಪತ್ರಿಕಾಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದ ಅವರು ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಸಮಸ್ಯೆಗಳು ಬಗೆಹರಿಯದಿದ್ದರೆ . ತಾವುಗಳು ಧೈರ್ಯವಾಗಿ ನಮ್ಮ ಕಛೇರಿಗೆ ಖುದ್ದು ಭೇಟಿ ನೀಡಿ ಮಾಹಿತಿ ನೀಡಬಹುದು ಎಂದು ತಿಳಿಸಿದರು . ಜೂಜಿಗೆ ದಾಸರಾಗಿ ನಿಮ್ಮ ಮಕ್ಕಳ ವಿದ್ಯಾಭಾಸ್ಯಕ್ಕೆ ದಕ್ಕೆ ಉಂಟು ಮಾಡಬೇಡಿ . ಯಾವುದೇ ರೀತಿಯ ಪ್ರತಿಭಟನೆಗಳು , ಸಂಘಟನೆ ಮಾಡುವುದಾದರೆ ಅದಕ್ಕೆ ಸೂಕ್ತ ರೀತಿಯಲ್ಲಿ ಪೊಲೀಸ್ ಅನುಮತಿಯನ್ನು ಪಡೆಯಬೇಕು . ಅನುಮತಿ ಪಡೆಯದೆ ಪ್ರತಿಭಟನೆ ನಡೆಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು . ಸಾಮಾಜಿಕ ಜಾಲತಾಣಗಳ ದುರ್ಬಳಿಕೆ ವಿರುದ್ಧ ಕ್ರಮ ಕೈಗೊಳ್ಳಲಾಗುವುದು . ವಾಟ್ಸ್ ಆಫ್ ಗುಂಪಿನಲ್ಲಿ ಯಾವುದೇ ವ್ಯಕ್ತಿಯ ವಿರುದ್ಧ ಮಾನಹಾನಿ ಪೋಸ್ಟ್ ಮಾಡಿದರೆ ಗುಂಪಿನ ಆಡ್ಮಿನ್‌ಗಳನ್ನು ಹೊಣೆ ಮಾಡಲಾಗುತ್ತದೆ ಎಂದು ತಿಳಿಸಿದರು . ವಾಹನಗಳ ಮೇಲೆ ಯಾವುದೇ ಸಂಘಟನೆಯ ಹೆಸರು ಮುಂತಾದವುಗಳನ್ನು ಆರ್.ಟಿ.ಓ ನಿಂದ ಅನುಮತಿ ಇಲ್ಲದೆ ಬಳಸಿಕೊಳ್ಳುವಂತಿಲ್ಲ ಇದು ಕಾನೂನು ಬಾಹಿರ . ಗ್ರಾಮೀಣ ಪ್ರದೇಶಗಳ ದಿನಸಿ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟಮಾಡುವ ಕುರಿತು ಅಬಕಾರಿ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆ . ಮುಂದುವರಿದು ಅಕ್ರಮ ಮದ್ಯ ಮಾರಾಟ ಅಂಗಡಿಗಳ ಮೇಲೆ ದಾಳಿ ಮಾಡಿ ಮಧ್ಯವನ್ನು ವಶಪಡಿಸಿಕೊಂಡು ಲೇಬಲ್ ಸಂಖ್ಯೆ ಆಧಾರದ ಮೇಲೆ ಸಂಬಂಧ ಪಟ್ಟ ಬಾರ್ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು . ಅಕ್ರಮ ಮರಳು ದಂದೆಯನ್ನು ನಿಲ್ಲಿಸಲಾಗುವುದು . ಜಿಲ್ಲೆಯಲ್ಲಿ ಎಲ್ಲಾ ಪೊಲೀಸ್ ಠಾಣೆಗಳಿಗೆ ಬಿಳಿ ಬಣ್ಣ ಹೊಡಿಸಲಾಗುವುದು . ಬಡ್ಡಿ ವ್ಯವಹಾರ ನಡೆಸುವವರು ಪರವಾನಿಗಿ ಹೊಂದಿದ್ದರೂ ಪರಿಶೀಲನೆ ನಡೆಸಿ ಅಕ್ರಮ ಬಡ್ಡಿ ವ್ಯವಹಾರವನ್ನು ತಡೆಯಲಾಗುತ್ತದೆ ಎಂದು ತಿಳಿಸಿದರು . ಪೊಲೀಸ್ ಠಾಣೆಗಳಲ್ಲಿ ಸಾರ್ವಜನಿಕರಿಗೆ ಸರಿಯಾಗಿ ಪೊಲೀಸ್ ಅಧಿಕಾರಿಗಳು ಸ್ಪಂದಿಸದಿದ್ದರೆ ನನ್ನ ದೂರವಾಣಿ ಸಂಖ್ಯೆ 9480802601 ಗೆ ಕರೆ ಮಾಡಿ ಮಾಹಿತಿ ನೀಡಬಹುದು ಎಂದು ತಿಳಿಸಿದರು . ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಸಚಿನ್ ಘೋರ್ಪಡೆ ಅವರು ಉಪಸ್ಥಿತರಿದ್ದರು .

ಕೋವಿಡ್‌ ಹಿನ್ನಲೆಯಲ್ಲಿಅತ್ತೂರು ಸಂತ ಲಾರೆನ್ಸ್‌ ಪುಣ್ಯಕ್ಷೇತ್ರದ ಮಹೋತ್ಸವ ಮುಂದೂಡಿಕೆ

JANANUDI.COM NETWORK

ಉಡುಪಿ: ರಾಜ್ಯದಲ್ಲಿ ಕೋವಿಡ್-19 ಸೋಂಕು ಉಲ್ಬಣಗೊಳ್ಳುತ್ತಿರುವುದರಿಂದ, ಜನಸಾಮಾನ್ಯರ ಆರೋಗ್ಯ ಹಾಗೂ ಸುರಕ್ಷತೆಯನ್ನು ಕಾಪಾಡುವ ನಿಟ್ಟಿನಲ್ಲಿ 2022 ಜನವರಿ 16 ರಿಂದ 27 ರವರೆಗೆ ನೆರವೇರಬೇಕಿದ್ದ ಅತ್ತೂರು-ಕಾರ್ಕಳ ಸಂತ ಲಾರೆನ್ಸ್ ಪುಣ್ಯಕ್ಷೇತ್ರ ಬಸಿಲಿಕದ ವಾರ್ಷಿಕ ನವೇನ ಪ್ರಾರ್ಥನೆ ಹಾಗೂ ಮಹೋತ್ಸವ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿದೆ ಎಂದು ಬಸಿಲಿಕಾದ ನಿರ್ದೇಶಕರಾದ ವಂ|ಆಲ್ಬನ್‌ ಡಿʼಸೋಜಾ ತಿಳಿಸಿದ್ದಾರೆ.

ಮುಂದೂಡಲ್ಪಟ್ಟ ವಾರ್ಷಿಕ ಮಹೋತ್ಸದ ದಿನಗಳನ್ನು ಸೂಕ್ತ ಸಮಯದಲ್ಲಿ ಭಕ್ತಾದಿಗಳಿಗೆ ತಿಳಿಸಲಾಗುವುದು, ಭಕ್ತಾದಿಗಳು ಮತ್ತು ಸಾರ್ವಜನಿಕರು ಸಹಕರಿಸಬೇಕಾಗಿ ಅವರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

ನಾಳೆಯಿಂದ ರಾಜ್ಯಾದ್ಯಂತ ಕೊರೋನಾ ನಿಯಂತ್ರಣ ಕಠಿಣ ಕ್ರಮ ಜಾರಿ: ಮಾಸ್ಕ್ ಇಲ್ಲದೇ ರಸ್ತೆಗಿಳಿದರೆ ದಂಡ

JANANUDI.COM NETWORK

ಬೆಂಗಳೂರು:ಜ.11: ರಾಜ್ಯದ ವಸತಿ ಶಾಲೆಗಳಲ್ಲಿ ಕೊರೋನಾ ಹೆಚ್ಚಾದ್ರೆ ಆ ಶಾಲೆಗಳನ್ನು ಬಂದ್ ಮಾಡುವಂತ ನಿರ್ಧಾರವನ್ನು ಆಯಾಯಾ ಜಿಲ್ಲಾಧಿಕಾರಿಗಳು ನಿರ್ಧಾರ ಕೈಗೊಳ್ಳಬೇಕು. ವೈಕುಂಠ ಏಕಾದಶಿ, ಮಕರ ಸಂಕ್ರಾಂತಿ ಜಾತ್ರೆಗಳಿಗೆ ಹಾಲಿ ಇರುವಂತ ಕಠಿಣ ಮಾರ್ಗಸೂಚಿ ಕ್ರಮಗಳನ್ನೇ ಅನುಸರಿಸಬೇಕು.
ಸದ್ಯಕ್ಕೆ ಲಾಕ್ ಡೌನ್ ಬಗ್ಗೆ ಚರ್ಚೆ ನಡೆದ್ಲಿಲ್ಲ. ಕೊರೋನಾ ಹೆಚ್ಚಳ ಆದಲ್ಲಿ ನಿರ್ಧಾರ ಕೈಗೊಳ್ಳೊ ಬೇಕಾಗುವುದು. ಮಾಸ್ಕ್ ಹಾಕದವರ ವಿರುದ್ಧ ಪೆÇಲೀಸರು ಕ್ರಮ ಕೈಗೊಳ್ಳುವಂತ ನಿರ್ಧಾರವನ್ನು ಇಂದು ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಯಿತು.
ಇಂದಿನ ಸಭೆಯ ಬಳಿಕ ಸುದ್ಧಿಗೋಷ್ಠಿ ನಡೆಸಿ ಮಾಹಿತಿ ನೀಡಿದಂತ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು, ಮೊದಲನೆಯ ಅಂಶವೆಂದ್ರೇ.. ಕೊರೋನಾ ಏರಿಕೆಯ ಹಿನ್ನಲೆಯಲ್ಲಿ ಕೊರೋನಾ ಕಡಿವಾಣಕ್ಕೆ, ಕೊರೋನಾ ಟೆಸ್ಟ್ ಸಂಖ್ಯೆಯನ್ನು ಹೆಚ್ಚಿಸುವಂತೆ ಮಾಡೋದಾಗಿದೆ. 1.50 ಲಕ್ಷ ಟೆಸ್ಟ್ ಸಂಖ್ಯೆನ್ನು ಬೆಂಗಳೂರಿನಲ್ಲಿ ಪ್ರತಿದಿನ ಮಾಡಬೇಕು ಎಂದು ನಿರ್ಧಾರ ಕೈಗೊಳ್ಳಲಾಗಿದೆ” ಎಂದು ಅವರು ತಿಳಿಸಿದರು.
ಹೋಂ ಐಸೋಲೇಷನ್ ನಲ್ಲಿ ಯಾರಿದ್ದಾರೆ. ಅವರ ಬಗ್ಗೆ ಹೆಚ್ಚು ಗಮನ ಕೊಡಬೇಕಾಗಿ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸುಮಾರು ಶೇ.90ರಷ್ಟು ಮಂದಿ ಹೋಂ ಐಸೋಲೇಷನ್ ನಲ್ಲಿ ಇದ್ದಾರೆ ಎಂದು ತಿಳಿಸಿ, ಬೂಸ್ಟರ್ ಡೋಸ್ ಲಸಿಕೆಯನ್ನು ತ್ವರಿತಗೊಳಿಸೋದರ ಬಗ್ಗೆ ನಿರ್ಧರಿಸಲಾಗಿದೆ ಎಂದರು.
ಶಾಲೆ-ವಸತಿ ಶಾಲೆಗಳಲ್ಲಿ ಕೊರೋನಾ ಸಂಖ್ಯೆ ಹೆಚ್ಚಾಗುತ್ತಿದೆ. ಆ ಶಾಲೆ, ವಸತಿ ಶಾಲೆಗಳನ್ನು ಬಂದ್ ಮಾಡೋ ಸಂಬಂಧ ಜಿಲ್ಲಾಧಿಕಾರಿಗಳು ತೀರ್ಮಾನ ಕೈಗೊಳ್ಳೋದಕ್ಕೆ ಸೂಚಿಸಲಾಗಿದೆ ಎಂದರು.
ಮಕ್ಕಳಲ್ಲಿ ಕೊರೋನಾ ಸೋಂಕಿನ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು. ಮಕ್ಕಳಿಗೆ ಚಿಕಿತ್ಸೆಗಾಗಿ ಔಷಧಿಯನ್ನು ಖರೀದಿಸಿ, ಸಂಗ್ರಹಿಸಿಡೋದಕ್ಕೆ ಸೂಚಿಸಲಾಗಿದೆ. ಮಕ್ಕಳ ವಾರ್ಡ್ ಬೆಡ್ ಕಾಯ್ದಿರಿಸಲು ಸೂಚಿಸಲಾಗಿದೆ ಎಂದರು.
ಯಾವುದೇ ಕಾರಣಕ್ಕೂ ಪ್ರತಿಭಟನೆ, ಜನ ಸೇರುವಂತ ಕಾರ್ಯಕ್ರಮಗಳನ್ನು ಪೆÇಲೀಸರು ಮೊದಲೇ ಮಾಹಿತಿ ಸಂಗ್ರಹಿಸಿ, ಅದಕ್ಕೆ ಅವಕಾಶ ನೀಡದಂತೆ ಕ್ರಮ ಕೈಗೊಳ್ಳೋದಕ್ಕೆ ಸೂಚಿಸುವಂತ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕೂಡ ಅವರುತಿಳಿಸಿದರು.
ಜನರು ಕಡ್ಡಾಯವಾಗಿ ಮಾಸ್ಕ್ ಬಳಕೆ ಮಾಡಬೇಕು. ಮಾಸ್ಕ್ ಧರಿಸದೇ ಇರೋರ ವಿರುದ್ಧ ಪೆÇಲೀಸರು ಹೆಚ್ಚಿನ ಕ್ರಮ ಕೈಗೊಳ್ಳಲು ತಿಳಿಸಲಾಗುತ್ತದೆ. ಜನವರಿ 14ರಂದು ಪ್ರಧಾನಿ ನರೇಂದ್ರ ಮೋದಿಯವರು ಸಭೆ ನಡೆಸಲಿದ್ದಾರೆ. ಆ ಸಭೆಯ ಬಳಿಕ ವೀಕೆಂಡ್ ಕಪ್ರ್ಯೂ, ನೈಟ್ ಕಪ್ರ್ಯೂ ಬಗ್ಗೆ ಮತ್ತೊಂದು ಸಭೆ ನಡೆಸಿ ತೀರ್ಮಾನ ಕೈಗೊಳ್ಳೋಳಲಾಗುದು ಎಂದು’ ಅವರು ತಿಳಿಸಿದರು.

ಉಡುಪಿ ಪರ್ಯಾಯ – ಶ್ರೀ ಕ್ಷೇತ್ರ ಧ. ಗ್ರಾ. ಅ. ಯೋಜನೆಯ ಹೊರೆಕಾಣಿಕೆ

ವರದಿ : ಕೆ.ಜಿ.ವೈದ್ಯ,ಕುಂದಾಪುರ

ಕುಂದಾಪುರ : ಕೋಟೇಶ್ವರದ ಶ್ರೀ ಕೋಟಿಲಿಂಗೇಶ್ವರ ದೇವಾಲಯ ವಠಾರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಕುಂದಾಪುರ ತಾಲೂಕು, ಕೋಟೇಶ್ವರ ವಲಯದ ವತಿಯಿಂದ ಉಡುಪಿ ಶ್ರೀ ಕೃಷ್ಣಾಪುರ ಮಠದ ಪರ್ಯಾಯೋತ್ಸವದ ಅಂಗವಾಗಿ ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆಗೆ ಮಂಗಳವಾರ ಬೆಳಿಗ್ಗೆ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಗೋಪಾಲಕೃಷ್ಣ ಶೆಟ್ಟಿ, ವಿಶ್ವನಾಥ್ ಆಚಾರ್, ಶ್ರೀನಿವಾಸ್ ಗಾಣಿಗ, ಹೆರಿಯಣ್ಣ, ಪ್ರಭಾಕರ್ ಶೆಟ್ಟಿ, ಸುರೇಶ್ ಬೆಟ್ಟಿನ್, ಗೋಪಾಡಿ ಶ್ರೀನಿವಾಸ್ ರಾವ್, ಕೋಣಿ ಕೃಷ್ಣದೇವ ಕಾರಂತ್, ವಾಹನದ ಮಾಲಕರಾದ ಉಮೇಶ್, ಮಾಧವ ಆಚಾರ್, ಯೋಜನಾ ಕೃಷಿ ಅಧಿಕಾರಿ ಚೇತನ್ ಹಾಗೂ ಮೇಲ್ವಿಚಾರಕ ನಾಗರಾಜ್ ಎಚ್, ಸೇವಾಪ್ರತಿನಿಧಿಗಳು, ತರಬೇತಿ ಸಹಾಯಕರು, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರು, ವಿಪತ್ತು ನಿರ್ವಹಣಾ ತಂಡದ ಸದಸ್ಯರು, ಒಕ್ಕೂಟದ ಅಧ್ಯಕ್ಷರು ಪದಾಧಿಕಾರಿಗಳು ಉಪಸ್ಥಿತರಿದ್ದರು.