HOLY ROSARY CHURCH, KUNDAPUR – 450 th JUBILEE SOUVENIR 2021

ಹಿಜಾಬ್‌ ಹಾಕುವುದಕ್ಕೆ ವಿರೋಧ ಮಾಡಿದಕ್ಕೆ ಕೋರ್ಟ್‌ಗೆ ಹೋಗಲು ನಾವೇ ಹೇಳಿದ್ದು – ಅಮೃತ್ ಶೆಣೈ

JANANUDI.COM NETWORK

ಉಡಪಿ: ಹಿಜಾಬ್‌ಗೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ನಾವೇ ಕೋರ್ಟ್ ಮೊರೆ ಹೋಗಲು ತಿಳಿಸಿದೆನೆಂದು ಸಹಬಾಳ್ವೆ ಅಧ್ಯಕ್ಷ ಅಮೃತ್ ಶೆಣೈ ತಿಳಿಸಿದ್ದಾರೆ.
“ಹಿಜಾಬ್‌ವಿರೋಧ ಆರಂಭವಾದ ಬಳಿಕ ನಾವು ಕಾಲೇಜಿಗೆ ಭೇಟಿ ನೀಡಿದೆವು. ಆಗ ಅಲ್ಲಿ ಹಿಜಾಬ್‌ ಅವಕಾಶ ಇರಲಿಲ್ಲ ಎಂದು
ತಿಳಿಯಿತು . ಅದಕ್ಕೆ ವಿದ್ಯಾರ್ಥಿಗಳಿಗೆ ಕೋರ್ಟ್‌ಗೆ ನಾವೇ ಹೋಗಲು ಹೇಳಿರುವುದು. ನಾವೇ ಅವರಿಗೆ ವಕೀಲರ ವ್ಯವಸ್ಥೆ ಮಾಡಿರುವುದು ಕೂಡ ನಾವೇ. ಕೋರ್ಟ್ ಹೋಗುವುದು ಅವರ ಹಕ್ಕು” ಎಂದು ಅಮೃತ್ ಶೆಣೈ ತಿಳಿಸಿದ್ದಾರೆ
.

ಉಡುಪಿ ತಾಲೂಕು ಸೌಧದಲ್ಲಿ ನಡೆದ ಶಾಂತಿ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶೆಣೈ, ನಮಗೆ ಕುಂದಾಪುರ, ಉಡುಪಿ ಕಾಲೇಜುಗಳಲ್ಲಿ ನಡೆದ ಘಟನೆಗಳ ಬಗ್ಗೆ ನಮಗೆ ಅಸಮಾಧಾನ ಇದೆ. ಆ ಕಾಲೇಜುಗಳಲ್ಲಿ ಎಷ್ಟೋ ವರ್ಷಗಳಿಂದ ಮುಸ್ಲಿಂ ಹೆಣ್ಣು ಮಕ್ಕಳು ಹಿಜಾಬ್ ಹಾಕಿಕೊಂಡು ಬಂದು ಕಲಿತು ಡಾಕ್ಟರ್, ಇಂಜಿನಿಯರ್ ಆದವರು ಇದ್ದಾರೆ. ಅಲ್ಲಿ ಇಷ್ಟು ದಿನ ಸಮಸ್ಯೆ ಇರಲಿಲ್ಲ. ಈಗ ಏಕಾಏಕಿ ಕೆಲವು ಹುಡುಗರು ಕೇಸರಿ ಶಾಲು ಹಾಕಿಕೊಂಡು ಪುಂಡಾಟಿಕೆ, ಮಾಡಿ ಸಮಸ್ಯೆ ತಂದೊಡ್ಡಿದ್ದಾರೆ
ಕೇಸರಿ ಬಣ್ಣ ಎಂಬುದು ಧಾರ್ಮಿಕತೆಗೆ ಸಂಬಂಧ ಪಟ್ಟ ಪವಿತ್ರ ಬಣ್ಣ. ಈ ರೀತಿ ಕಾನೂನು ಉಲ್ಲಂಘನೆ ಚಟುವಟಿಕೆಗಳಿಗೆ ಬಳಸುವುದು ಸರಿಯಲ್ಲ. ಇಂತಹ ಘಟನೆಗಳು ಮುಂದೆ ಆಗದಂತೆ ಎಚ್ಚರ ವಹಿಸಬೇಕೆಂದು ನಾವು ಸರಕಾರವನ್ನು ಒತ್ತಾಯಿಸಿದ್ದೇವೆ ಎಂದು ಅವರು ಹೇಳಿದರು.

ಟೋಲ್ ಗೇಟ್ ಬಂದ್ ಮಾಡಲು ವಿಶಿಷ್ಟ ರೀತಿಯ ಪ್ರತಿಭಟನೆ ಮಾಡುತ್ತಿರುವ ಅಸಿಫ್, ಅನಾರೋಗ್ಯ ಸ್ಥಿತಿಯಲ್ಲಿ !

JANANUDI.COM NETWORK

ಮಂಗಳೂರು: ಸುರತ್ಕಲ್ ಟೋಲ್ ಗೇಟ್ ಮುಚ್ಚುವಂತೆ ಆಗ್ರಹಿಸಿ ಆಪತ್ಭಾಂಧವ ಎಂದೇ ಕರೆಯಲ್ಪಡುವ ಆಸೀಫ್ ನಡೆಸುತ್ತಿರುವ ಪ್ರತಿಭಟನೆ 7 ನೇ ದಿನಕ್ಕೆ ಕಾಲಿಟ್ಟಿದೆ.
ದಿನಾಲು ವಿವಿಧ ವಿಶಿಷ್ಠ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಅಸಿಫ್ ಇಂದು ತನ್ನ ದೇಹಕ್ಕೆ ಕಬ್ಬಿಣದ ಸರಪಳಿಯನ್ನು ಕಟ್ಟಿಕೊಂಡು 2 ಗಂಟೆಗಳ ಕಾಲ ಕಂಬಕ್ಕೆ ಕಟ್ಟಿಕೊಂಡಿದ್ದ ಆಸಿಫ್ ಅವರ ಆರೋಗ್ಯ ಬಿಸಿಲಿನಿಂದ ಹದಗೆಟ್ಟಿದ್ದು, ಸುರತ್ಕಲ್ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ತೆರಳಿ ಚಿಕಿತ್ಸೆ ಪಡೆಯುವಂತೆ ಮನವಿ ಮಾಡಿದರೂ ಆಸೀಫ್ ಚಿಕಿತ್ಸೆ ನಿರಾಕರಿಸಿದ್ದಾರೆ. ಟೋಲ್ ಗೇಟ್ ಮುಚ್ಚುವವರೆಗೂ ನಾನು ಕದಲೋದಿಲ್ಲ, ಜಿಲ್ಲಾಧಿಕಾರಿ ನನ್ನ ಮನವಿಯನ್ನು ಸ್ವೀಕರಿಸಬೇಕು ಎಂದು ಆಸೀಫ್ ಹೇಳಿದ್ದಾರೆ.

ಎರಡು ವರ್ಷಗಳ ಹಿಂದೆ ಹೆಜಮಾಡಿ ಟೋಲ್ ಗೇಟ್ ಆರಂಭಗೊಂಡರೂ, ಸುರತ್ಕಲ್ ಟೋಲ್ ಬಂದ್ ಮಾಡಲಿಲ್ಲ. ಟೋಲ್ ಗೇಟ್ ಸ್ಥಗಿತಗೊಳಿಸುವ ಬದಲು ಜನರನ್ನು ಲೂಟಿ ಮಾಡುವುದಕ್ಕಾಗಿಯೇ ಎರಡು ತಿಂಗಳ ಹಿಂದೆ ಮತ್ತೆ ಮೂರು ತಿಂಗಳ ಮಟ್ಟಿಗೆ ಲೈಸನ್ಸ್ ನವೀಕರಣ ಮಾಡಲಾಗಿತ್ತು ಎಂದು ಜನರ ಅಂಬೋಣ. ಒಂದು ಟೋಲ್ ಗೇಟ್ನಿಂದ ಮತ್ತೊಂದು ಟೋಲ್ ಗೇಟಿಗೇ ಇಂತಿಷ್ಟು ಅಂತರ ಇಡಬೇಕೆಂಬ ನಿಯಮವಿದೆ. ಈಗ 15 ಕಿಮೀ ನಡುವೆ ಎರಡೆರಡು ಕಡೆ ಟೋಲ್ ಕಟ್ಟುವ ಸ್ಥಿತಿ ವಾಹನ ಕಾಲಕರಾಗಿದೆ. ಜನರನ್ನು ಹಗಲು ದರೋಡೆ ಮಾಡಲಾಗುತ್ತಿದೆ. ಶಾಸಕರು, ಸಂಸದರ ಕೃಪೆಯಿಂದಲೇ ಈ ರೀತಿಯ ಲೂಟಿ ನಡೆಯುತ್ತಿದೆ ಅನ್ನುವ ಗಂಭೀರ ಆರೋಪ ಇದ್ದರೂ, ಜನಪ್ರತಿನಿಧಿಗಳು ಮೌನವಾಗಿರುವುದು ಆಕ್ರೋಶಕ್ಕೆ ಕಾರಣವಾಗಿದೆ.ಅದಕ್ಕೆ ಟೋಲ್ ವಿರೋಧಿಸಿ ವಿಶಿಷ್ಟ ರೀತಿಯ ಅಸಿಫ್ ಪ್ರತಿಭಟನೆ ಮಾಡುತ್ತಾ ಇದ್ದಾರೆ. ಜನ ಸಾಮಾಜ ಘಾತುಕ ಸಮಸ್ಯೆಗಳಿಗೆ ಬೆಂಬಲಿಸಿ ಸಮಾಜದಲ್ಲಿ ಅಶಾಂತಿ ವಾತಾವರಣ ಉಂಟು ಮಾಡುವ ಈ ಸಮಯದಲ್ಲಿ ಜನತೆಯ ಒಳ್ಳೆದಾಗಲಿ ಎಂದು ಪ್ರತಿಭಟಿಸುವ ಅಸಿಫ್ ಪ್ರತಿಭಟನೆಗೆ ಸಹಾಕಾರ ನೀಡಬೇಕು.

ವಕ್ಸ್ ಬೋರ್ಡ್ ನಿಂದ ಸೌಲಭ್ಯಗಳನ್ನು ಬಳಕೆ ಮಾಡಿ ಕೊಂಡು ಅಲ್ಪ ಸಂಖ್ಯಾತರು ಮುಖ್ಯವಾಹಿನಿಗೆ ಬರಬೇಕು :ಕೆ.ಆರ್ ರಮೇಶ್ ಕುಮಾರ್

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ : ವಕ್ಸ್ ಬೋರ್ಡ್ ನಿಂದ ಬರುವ ಎಲ್ಲಾ ಸೌಲಭ್ಯಗಳನ್ನು ಬಳಕೆ ಮಾಡಿಕೊಳ್ಳುವುದರ ಜೊತೆಗೆ ಮಸೀದಿ , ಈದ್ಯಾ , ಸ್ಮಶಾನಗಳನ್ನು ಅಭಿವೃದ್ಧಿಪಡಿಸಿಕೊಂಡು ಅಲ್ಪ ಸಂಖ್ಯಾತ ಬಂದುಗಳು ಸಮಾಜದ ಮುಖ್ಯವಾಹಿನಿಗೆ ಬರಬೇಕೆಂದು ಶಾಸಕ ಕೆ.ಆರ್ ರಮೇಶ್ ಕುಮಾರ್ ರವರು ತಿಳಿಸಿದ್ದಾರೆ . ಪಟ್ಟಣದ ಪುರಸಭೆ ಕಾರ್ಯಾಲಯದ ಆವರಣದಲ್ಲಿ ಅಲ್ಪ ಸಂಖ್ಯಾತರ ಸಭೆಯಲ್ಲಿ ರಮೇಶ್ ಕುಮಾರ್‌ ಮಾತನಾಡಿ ಪಟ್ಟಣ ಮತ್ತು ತಾಲ್ಲೂಕಿನ ಬಹುತೇಕ ಮುಸ್ಲಿಂ ಸಮಾಜ ವಿರುವ ಹಳ್ಳಿಗಳಲ್ಲಿ ಮಸೀದಿ , ಸ್ಮಶಾನ , ಈದ್ದಾ , ದರ್ಗಾ ಪ್ರಾರ್ಥನಾ ಮಂದಿರಗಳಿಗೆ ಈಗಾಗಲೇ ಅನುದಾನವನ್ನು ಬಿಡುಗಡೆ ಮಾಡಿದ್ದು ಕೆಲವು ಕಾಮಗಾರಿಗಳು ಪೂರ್ಣವಾಗಿದ್ದು ಕೆಲವು ಪ್ರಗತಿಯಲ್ಲಿದ್ದು ಬಾಕಿ ಇರುವ ಕೆಲಸಗಳ ಮಾಹಿತಿಯನ್ನು ಪಡೆದು ತಗಲುವ ವೆಚ್ಚವನ್ನು ಶೀಘ್ರವೇ ಸರ್ಕಾರದಿಂದ ಬಿಡುಗಡೆ ಮಾಡಿಸಿ ಮುಸ್ಲಿಂ ಮುದಾಯಕ್ಕೆ ಹೆಚ್ಚು ಹೊತ್ತು ನೀಡಲು ಬದ್ಧನಾಗಿದ್ದೇನೆ ಎಂದರು . ಜೊತೆಗೆ ಪಟ್ಟಣದ ಮುಸ್ಲಿಂ ಸಮಾಜದ ವಾರ್ಡಗಳು ಮತ್ತು ಹಳ್ಳಿಗಳಲ್ಲಿ ಮೂಲಭೂತ ಸೌಲಭ್ಯಗಳಿಗೆ ಆದ್ಯತೆ ನೀಡಿ ಬೀದಿ ದ್ವೀಪ , ಕುಡಿಯುವ ನೀರು , ರಸ್ತೆ- ಚರಂಡಿ ಇವೆಲ್ಲವೂ ಪೂರ್ಣಪ್ರಮಾಣದಲ್ಲಿ ಆಗಬೇಕು ನಿಮ್ಮ ಬೇಡಿಕೆ ಯಂತೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಅನುದಾನ ಬಿಡುಗಡೆ ಮಾಡಿಸುತ್ತೇನೆ , ಜೊತೆಗೆ ರೇಷ್ಮೆ ನೇಕಾರರಿಗೆ ಮತ್ತು ಗುಡಿ ಕೈಗಾರಿಕೆ ಮಾಡುವವರಿಗೆ ಬ್ಯಾಂಕಿನ ಮೂಲಕ ಸಾಲ ನೀಡುವ ವ್ಯವಸ್ತೆಯನ್ನು ಮಾಡಿಸುತ್ತೇನೆ ಇವುಗಳನ್ನು ಬಳಕೆ ಮಾಡಿಕೊಂಡು ಆರ್ಥಿಕ ಸ್ವಾವಲಂಬಿಗಳಾಗಬೇಕೆಂಬುವುದು ನನ್ನ ಗುರಿಯಾಗಿದೆ ಎಂದರು . ವಿಧಾನಪರಿಷತ್ ಸದಸ್ಯ ನಜೀರ್‌ ಅಹಮದ್‌ ಮಾತನಾಡಿ ನಮ್ಮ ಮುಸ್ಲಿಂ ಸಮಾಜ ಬೆಳಕಿಗೆ ಬರಲು ಬೆನ್ನೆಲಬಾಗಿ ನಿಂತಿರುವುದು ಈ ರಾಜ್ಯ ಮತ್ತು ದೇಶದಲ್ಲಿ ಕಾಂಗ್ರೆಸ್ ಪಕ್ಷ ಏಕೈಕವಾಗಿದ್ದು , ವಿಶೇಷವಾಗಿ ನಮ್ಮ ದರ್ಮದ ಸಿದ್ಧಾಂತಗಳನ್ನು ಅರಿತು ಸದಾ ನಮ್ಮ ಶ್ರೇಯಸ್ಸಿಗೆ ಶ್ರಮಿಸುವ ದೀಮಂತ ನಾಯಕ ಕೆ.ಆರ್ ರಮೇಶ್ ಕುಮಾರ್ ರವರಾಗಿದ್ದು ಇವರಿಗೆ ನಮ್ಮ ಸಮಾಜ ಸದಾ ಬೆಂಬಲವಾಗಿ ನಿಂತು ಅವರ ಕೈಬಲಪಡಿಸಲು ನಾವೆಲ್ಲರೂ ಒಂದಾಗೋಣ ಎಂದರು . ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ .ಶ್ರೀನಿವಾಸನ್ ಮಾತನಾಡಿ ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ದುಡಿದು ನಮ್ಮಜೊತೆ ಅಣ್ಣ ತಮ್ಮಂದಿರಹಾಗೆ ಬೆರೆತು ಜೀವನ ಸಾಗಿಸುತ್ತಿರುವ ಮುಸ್ಲಿಂ ಬಾಂದವರು ಅವರ ಬದುಕು ಹಸನಾಗಿಸಿಕೊಳ್ಳಲು ಅನೇಕ ವ್ಯಾಪಾರ , ವ್ಯವಸಾಯ ಗಳನ್ನು ಮಾಡಿಕೊಂಡು ಬದುಕುತ್ತಿದ್ದ ನಿಮಗೆ ಬಿಜೆಪಿ ಸರ್ಕಾರ ಬಂದಾಗಿನಿಂದ ಸಂಕಷ್ಟಕ್ಕೆ ಸಿಲುಕಿದ್ದೀರ ಮುಂದೆ ನಿಮ್ಮ ಜೀವನ ಹೇಗಿರಬೇಕು ಎಂಬುದು ನಿಮ್ಮ ಕೈಯಲ್ಲಿದೆ , ಈ ದೇಶದಲ್ಲಿ ದಲಿತರು ಮತ್ತು ಮುಸ್ಲಿಮರು ಒಂದಾದಾಗ ಮಾತ್ರ ನಮ್ಮನ್ನು ಯಾರೂ ಏನೂ ಮಾಡಲಾಗುವುದಿಲ್ಲಾ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕಷ್ಟಗಳನ್ನು ಅನುಭವಿಸುವ ಮೊದಲೇ ಹೆಚ್ಚೆತ್ತುಕೊಂಡು ನಾವು ಒಂದಾಗಬೇಕು ಎಂದು ಕಿವಿಮಾತು ತಿಳಿಸಿದರು . ರಾಜ್ಯ ವಕ್ಸ್ ಬೋರ್ಡ ಮಂಡಳಿ ಸದಸ್ಯ ರಿಯಾಜ್ ಅಹಮದ್ ಖಾನ್ ಮಾತನಾಡಿ ನಮ್ಮ ಬೋರ್ಡ ನಿಂದ ಬರುವ ಆದೇಶಗಳನ್ನು ನಮ್ಮ ಮಸೀದಿಗಳಲ್ಲಿ ನಿಯಮ ನಿಷ್ಠೆಯಿಂದ ಪಾಲಿಸಬೇಕು ಯಾವುದೇ ಅಹಿತಕರ ಘಟನೆಗಳಿಗೆ ಅನುವು ಮಾಡಿಕೊಡಬಾರದು , ತಾಲ್ಲೂಕು ಕಮಿಟಿ ಸದಸ್ಯ ಮಂಡಳಿಯ ಪದಾಧಿಕಾರಿಗಳು ಮಸೀದಿ ಸ್ಥಳಗಳಲ್ಲಿನ ಅಂಗಡಿಗಳನ್ನು ಬಾಡಿಗೆಗೆ ಕೊಡಬೇಕಾದರೆ ಪಲಾನುಭವಿಗಳಿಂದ ರಿಜಿಸ್ಟರ್ ಮಾಡಿಸಿಕೊಂಡು ಸಭೆಯ ತೀರ್ಮಾನ ದಂತೆ ಬಾಡಿಗೆ ಗಳನ್ನು ನಿಗದಿ ಪಡಿಸಿಕೊಳ್ಳಬೇಕು . ಪ್ರತಿಯೊಬ್ಬರೂ ಬ್ಯಾಂಕ್ ಖಾತೆ ಮಾಡಿಸಿಕೊಂಡು ಅದರಲ್ಲಿ ಆಧಾರ್ ಸಂಖ್ಯೆ ಮತ್ತು ಪೋನ್ ಸಂಖ್ಯೆಗಳನ್ನು ನಮೂದಿಸಿ ಕೊಳ್ಳಬೇಕು . ಮುಂಬರುವ ವಿಧಾನ ಸಭಾ ಚುನಾವಣೆಗೆ ಮತದಾರರ ಪಟ್ಟಿಗಳಲ್ಲಿ ಎಲ್ಲಾ 18 ವರ್ಷ ತುಂಬಿರುವವರನ್ನು ಸೇರಿಸಿ , ನಮ್ಮ ಜನಾಂಗದ ಬಗ್ಗೆ ಹಿತವನ್ನು ಬಯಸುವ ಅಂತಹವರನ್ನು ಆಯ್ಕೆ ಮಾಜಿಕೊಳ್ಳಲು ಸಲಹೆ ಸೂಚನೆ ಗಳನ್ನು ತಿಳಿಸಿದರು . ಈ ಸಭೆಯಲ್ಲಿ ತಾಲ್ಲೂಕು ಅಧ್ಯಕ್ಷ ಮುಜಾಯಿದ್ ಅನ್ಸಾರಿ , ರಾಜ್ಯ ವಕ್ಸ್ ಬೋರ್ಡ ಅಧಿಕಾರಿ ಜಾವೀದ್ ಅಹಮದ್‌ , ಮುಖ್ಯಾಧಿಕಾರಿ ಸತ್ಯನಾರಾಯಣ , ಹಿರಿಯ ಮುಖಂಡರಾದ ಅಮೀರ್ ಸಾಬ್ , ಬಿ.ಜಿ ಖಾದರ್ , ಅಕ್ಟರ್‌ ಷರೀಪ್ , ದಿಂಬಾಲ್ ಅಶೋಕ್ , ಸಂಜಯ್ ರೆಡ್ಡಿ , ಕೆಕೆ ಮಂಜುನಾಥ್ , ಗೋಪಾಲ್ , ಪುರಸಭೆ ಸದಸ್ಯರಾದ ಅನೀಸ್ ಅಹಮದ್ , ಇಪ್ಲಿಕಾರ್‌ ಅಹಮದ್ , ಮುನಿರಾಜ್ , ತಾಲ್ಲೂಕಿನ ಎಲ್ಲಾ ಮಸೀದಿಗಳ ಕಮಿಟಿ ಸದಸ್ಯರು ಹಾಗು ಮುತುವಲ್ಲಿಗಳು ಹಾಜರಿದ್ದರು .

ಕುಂದಾಪುರ್ :ಮಿಶಿನರಿ ಭುರ್ಗ್ಯಾಂಚ್ಯಾ ಮೆಳಾಚೊ ದೀಸ್ – ದೇವ್ ಆಪವ್ಣ್ಯಾಕ್ ಉಲೊ

JANANUDI.COM NETWORK


ಕುಂದಾಪುರ್, ಫೆ.13: ಕುಂದಾಪುರ್ ರೊಜಾರ್ ಮಾಯೆಚ್ಯಾ ಇಗರ್ಜೆ ಮಿಶಿನರಿ ಭುರ್ಗ್ಯಾಂಚ್ಯಾ ಮೆಳಾಚೊ ದೀಸ್ ಆಚರಣ್ ಕೆಲೊ.
ಉಡುಪಿ ದೇವ್ ಆಪವ್ಣೆ ಕೇಂದ್ರಾಚೊ ನಿರ್ದೇಶಕ್ ಮಾ|ಬಾ|ಅನಿಲ್ ಕರ್ನೆಲಿಯೊ ಆನಿ ಕುಂದಾಪುರ್ ರೊಜಾರ್ ಮಾಯ್ ಫಿರ್ಗಜೆಚೊ ಸಹಾಯಕ್ ವಿಗಾರ್ ಮಾ|ಬಾ|ವಿಜಯ್ ಜೊಯ್ಸನ್ ಡಿಸೋಜಾ ಹಾಣಿ ಪವಿತ್ರ್ ಬಲಿದಾನ್ ಭೆಟವ್ನ್ ದೀಸ್ ಆಚರಣ್ ಕೆಲೊ.
ಮಾ|ಬಾ|ಅನಿಲ್ ಕರ್ನೆಲಿಯೊನ್ ಸಂದೇಶ್ ದಿವ್ನ್ “ಆಮಿ ಪವಿತ್ರ್ ಸ್ನಾನ್ ಘೆತಲ್ಲಿ ಹರ್ಯೆಕ್ಲಿ ಯಾಜಕ್ ಜಾವ್ನಾಸಾತ್, ಆಮ್ಕಾ ಹರೆಯೆಕ್ಲ್ಯಾಕ್ ಪವಿತ್ರ್ ಸ್ನಾನ್ ದಿವ್ನ್ ತೇಲಾನ್ ಮಾಕ್ತಾನಾ, ಹಾಂವ್ ತುಕಾ ಯಾಜಕ್ ಜಾವ್ನ್ ಮಾಕ್ತಾ ಮ್ಹಣುನ್ ಸಾಂಗ್ತಾ, ಹೆಂ ಚೆಕ್ರ್ಯಾ ಭುಗ್ರ್ಯಾಂಕ್ ಮಾತ್ರ್ ನ್ಹಯ್, ಚೆಡ್ವಾಂ ಭುಗ್ರ್ಯಾಂಕ್‍ಯಿ ತುಂ ಯಾಜಕ್ ಮ್ಹಣುನ್ ಮಾಕ್ತಾ. ತಶೆಂಚ್ ದೆವಾಚಾ ದ್ರಷ್ಟೆಂತ್ ರೂಕ್ ಜಡಾಂ, ಗಾಯ್ರಾಂ ದೆವಾನ್ ರಚಲ್ಯಾ ಹರ್ಯೆಕ್ ವಸ್ತುಂಕ್ ಆನಿ ಜೀವಿಯಿ ಯಾಜಕ್ ಜಾವ್ನಾಸಾತ್, ತಾಣಿ ತಾಣಿ ತಾಂಚೆಂ ತಾಂಚೆಂ ಕರ್ತವ್ಯ್ ನಿರ್ವಹಣ್ ಕರುಂಕ್ ಆಸಾ.
ಪುಣ್ ಯಾಜಕೀ ದೀಕ್ಷಾ ಘೆತಲ್ಲೆಂ ಯಾಜಕ್ ನಿರ್ದಿಷ್ಟ್ ಜಾವ್ನ್ ಪೂರ್ಣ್ ಕಾಲಿಕ್ ಯಾಜಕ್ ಜಾವ್ನಾಸಾತ್, ಕಶೆಂ ಘರಾ ಆವಯ್ ಏಕ್ ರಾಂದ್ಪಿಣಿಚೆ ಕಾಮ್ ಕರ್ತಾಂ, ಆನಿ ಸಾಂಗಾತಾ ಹೇರ್ ಕಾಮಾಂ, ಸೆವಾ ಕರ್ತಾಂ, ಪುಣ್ ತಿ ಸಗ್ಳೊ ವೇಳ್ ನಿರ್ದಿಷ್ಟ್ ರಾಂದ್ಪಿಣ್ ಜಾವ್ನ್ ಕಾಮ್ ಕರಿನಾ, ಪುಣ್ ಹೋಟೆಲಾಂತ್ ಏಕ್ ರಾಂದ್ಪಿ ತೊ ನಿರ್ದಿಷ್ಟ್ ಥರಾನ್ ಪೂರ್ಣ್ ಕಾಲಿಕ್ ರಾಂದ್ಪಿ ವ ಬೊಟ್ಲೆರ್ ಜಾವ್ನ್ ಕಾಮ್ ಕರ್ತಾಂ. ತಶೆಂಚ್ ಯಾಜಕೀ ತರ್ಬೆತಿ ಘೆಂವ್ನ್ ಯಾಜಕಿ ದೀಕ್ಷಾ ಅಪ್ಣಾಯ್ಲೊ ಯಾಜಕ್ ಪೂರ್ಣ್ ಕಾಲಿಕ್ ನಿರ್ದಿಷ್ಟ್ ಯಾಜಕ್ ಜಾವ್ನಾಸ್ತಾ.
ಅಶೆಂ ಜಾಲ್ಯಾನ್ ದೆವಾಚ್ಯಾ ಶೆತಾಂತ್ ಸೆವಾ ದಿಂವ್ಕ್ ಚೆರ್ಕ್ಯಾನಿ ಆನಿ ಚೆಡ್ವಾನಿ ಮುಖಾರ್ ಯೆಜೆ. ಯಜಾಕಿ ಆನಿ ಧರ್ಮ್ ಭಯ್ಣ್ಯಾ ಚಿಂ ದಿಕ್ಷಾ ಜೊಡ್ಚೆಂ ಭೋವ್ ವರ್ತೆ ದೆಣೆ ಜಾವ್ನಸಾ.” ಮ್ಹಣುನ್ ತಾಣಿ ದೇವ್ ಆಪವ್ಣ್ಯಾಕ್ ಉಲೊ ದಿಲೊ.


ಸಹಾಯಕ್ ವಿಗಾರ್ ಮಾ|ಬಾ|ವಿಜಯ್ ಜೊಯ್ಸನ್ ಡಿಸೋಜಾನ್ ಸ್ವಾಗತ್ ಮಾಗ್ಲೊ, ಆನಿ ಧನ್ಯವಾದ್ ಪಾಠಯ್ತಾನಾ ಭುಗ್ರ್ಯಾಂ ಥಂಯ್ ದೇವ್ ಆಪವ್ಣಿ ಫುಲೊನ್ ಯೆಂವ್ಕ್ ಪ್ರೇರಾಣಾಚಿಂ ಉತ್ರಾಂ ಉಲಯ್ಲೊ “ಹಾಂವಯೀ ಲ್ಹಾನ್ ಆಸ್ತಾನಾ, ತುಮ್ಚೆಂ ಬರಿ ದೊತೊರ್ನಿಂತ್ ಆನಿ ಇಗರ್ಜೆಂತ್ ಅಸೊಚ್ ಬಸ್ತಾಲೊ, ಆನಿ ಯಾಜಾಕಾಂಚಿಂ ಪ್ರೇರಣಾಚಿಂ ಉತ್ರಾಂ ಆಯ್ಕೊನ್, ಹಾಂವ್ ಏಕ್ ಯಾಜಕ್ ಜಾಯ್ಜೆ ಮ್ಹಳೊ ನಿರ್ಧಾರ್ ಕರ್ನ್ ಆಜ್ ತುಮ್ಚೆಂ ಮುಕಾರ್ ಯಾಜಕ್ ಜಾವ್ನ್ ತುಮ್ಚೆಂ ಮುಕಾರ್ ಉಭೆ ಆಸಾ. ಯಾಜಕ್ ಜಾಂವ್ಚೆ ಏಕ್ ಭೋವ್ ಉತ್ತಿಮ್ ವಿಂಚವ್ಣಿ, ಯಾಜಕ್ ಜಾಲ್ಯಾಂಚಾ ಘರಾ ಕಾಂಯ್ಚ್ ಉಣೆಪಣ್ ಜಾಂವ್ಚೆ ನಾ. ದೇವ್ ತ್ಯಾ ಕುಟ್ಮಾಂತ್ ಆಶಿರ್ವಾದಾನಿ ಭರ್ತಾಲೊ. ಫಿರ್ಗಜ್ಗಾರಾಂ ಹರ್ಯೆಕ್ಲ್ಯಾಂಕ್ ಆಮ್ಕಾಂ ಬರೊ ಯಾಜಕ್ ಜಾಯ್ಜೆ ಮ್ಹಣುನ್ ತುಮ್ಚಿ ಆಶಾ ಆಸ್ತಾಂ, ತಶೆಂಚ್ ಫಿರ್ಗಜ್‍ಘರಾನಿಂ ತುಮ್ಚ್ಯಾ ಕುಟ್ಮಾ ಥಾವ್ನ್ ಯಾಜಕ್ ಫುಲೊನ್ ಯೆಂವ್ಕ್ ಪ್ರಯತನ್ ಕರಿಜೆ. ಮ್ಹಣುನ್ ಉಲೊ ದಿಲೊ.


ಬಲಿದಾನಾ ವೆಳಾರ್ ಭುರ್ಗ್ಯಾನಿಂಚ್ ದೇವ್ ಸ್ಥುತಿ ಆನಿ ಗಾಯಾನ್ ಚಲವ್ನ್ ವೆಲೆಂ. ಹ್ಯಾ ಸಂದರ್ಭಿ ವಿಗಾರ್ ಮಾ|ಬಾ|ಸ್ಟ್ಯಾನಿ ತಾವ್ರೊ, ಕ್ರಿಸ್ತಿ ಶಿಕ್ಷಣ್ ಶಿಕ್ಚಿಂ ಭುರ್ಗಿಂ, ಭುರ್ಗ್ಯಾಂಚಿ0 ವ್ಹಡಿಲಾಂ, ಸಭಾರ್ ಧರ್ಮ್ ಭಯ್ಣಿ ಆನಿ ಕ್ರಿಸ್ತಿ ಶಿಕ್ಷಣ್ ಶಿಕಂವ್ಚಿಂ ಶಿಕ್ಷಕಾಂ ಹಾಜರ್ ಆಸಲ್ಲಿ.

ಹೋಬಳಿ ಮಟ್ಟದಲ್ಲಿ ನಂದಿನಿ ಹಾಲು, ಉತ್ಪನ್ನಗಳ ಮಾರಾಟ ಮಳಿಗೆ, ಕೈಗೆ ಎಟುಕುವ ಉತ್ಪನ್ನಗಳು ಸಿಗುತ್ತವೆ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಹೋಬಳಿ ಮಟ್ಟದಲ್ಲಿ ನಂದಿನಿ ಹಾಲು ಹಾಗೂ ಹಾಲು ಉತ್ಪನ್ನಗಳ ಮಾರಾಟ ಮಳಿಗೆಗಳನ್ನು ತೆರೆಯಲಾಗುತ್ತಿದೆ. ಇದರಿಂದ ಕೈಗೆ ಎಟುಕುವ ಅಂತರದಲ್ಲಿ ಉತ್ತಮ ಗುಣಮಟ್ಟದ ಉತ್ಪನ್ನಗಳು ಸಿಗುತ್ತವೆ ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಹೇಳಿದರು.
ತಾಲ್ಲೂಕಿನ ಗೌನಿಪಲ್ಲಿ ಗ್ರಾಮದಲ್ಲಿ ಶುಕ್ರವಾರ ನಂದಿನಿ ಹಾಲು ಮತ್ತು ಹಾಲು ಉತ್ಪನ್ನಗಳ ಮಾರಾಟ ಮಳಿಗೆ ಉದ್ಘಾಟಿಸಿ ಮಾತನಾಡಿದ ಅವರು, ಹಾಲು ಜಿಲ್ಲೆಯ ರೈತರ ಜೀವನಾಡಿಯಾಗಿದೆ. ಗ್ರಾಮೀಣ ಪ್ರದೇಶದ ಆರ್ಥಿಕಾಭಿವೃದ್ಧಿಗೆ ಹೈನುಕಾರಿಗೆ ದೊಡ್ಡ ಕೊಡುಗೆ ನೀಡಿದೆ ಎಂದು ಹೇಳಿದರು.
ನಂದಿನಿ ಹಾಲು ಉತ್ಪನ್ನಗಳು ರುಚಿ ಮತ್ತು ಶುಚಿಗೆ ಹೆಸರಾಗಿರುವುದರಿಂದ, ಜನ ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ಅದು ರೈತರಿಗೆ ವರವಾಗಿ ಪರಿಣಮಿಸುತ್ತದೆ. ಅವರು ಹಾಲು ಉತ್ಪಾದನೆ ಹೆಚ್ಚಿಸಲು ಪ್ರೋತ್ಸಾಹ ದೊರೆಯುತ್ತದೆ ಎಂದು ಹೇಳಿದರು.
ಕೋಚಿಮುಲ್ ನಿರ್ದೇಶಕ ಎನ್.ಹನುಮೇಶ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಗೋವಿಂದಸ್ವಾಮಿ, ಮುಖಂಡರಾದ ನಾರಾಯಣಸ್ವಾಮಿ, ಕೆ.ಎಸ್.ಹರೀಶ್, ವಿ.ರಾಮಚಂದ್ರ, ರಾಮಾನುಜಸ್ವಾಮಿ, ರಮೇಶ್ ಬಾಬು, ಸಿ.ಅಶ್ವಥ್, ಅಮೀರ್ ಖಾನ್, ಬೈರೇಗೌಡ, ರಾಜಾರೆಡ್ಡಿ, ಪಿ.ವಿ.ಶ್ರೀನಿವಾಸ್, ನಂಜುಂಡಗೌಡ, ರಾಮೇಗೌಡ ಇದ್ದರು.

ವಿಮಾ ಪರಿಹಾರ ಚೆಕ್ ಪಡೆದ ಫಲಾನುಭವಿಗಳು ಕಡ್ಡಾಯವಾಗಿ ರಾಸುಗಳನ್ನು ಖರೀದಿಸಬೇಕು.

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ವಿಮಾ ಪರಿಹಾರ ಚೆಕ್ ಪಡೆದ ಫಲಾನುಭವಿಗಳು ಕಡ್ಡಾಯವಾಗಿ ರಾಸುಗಳನ್ನು ಖರೀದಿಸಬೇಕು. ಉತ್ತಮ ಗುಣಮಟ್ಟದ ಹಾಲು ಪೂರೈಸಬೇಕು ಎಂದು ಕೋಚಿಮುಲ್ ನಿರ್ದೇಶಕ ಎನ್.ಹನುಮೇಶ್ ಹೇಳಿದರು.
ಪಟ್ಟಣದ ಕೋಚಿಮುಲ್ ಶಿಬಿರ ಕಚೇರಿ ಸಬಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಹಾಲು ಉತ್ಪಾದಕರಿಗೆ ಮೃತಪಟ್ಟ ರಾಸುಗಳ ವಿಮಾ ಪರಿಹಾರ ಚೆಕ್ ವಿತರಿಸಿ ಮಾತನಾಡಿದ ಅವರು, ಹಸು ಕಳೆದುಕೊಂಡ ಐವರಿಗೆ ರೂ.2.80 ಲಕ್ಷ ವಿಮಾ ಪರಿಹಾರ ನೀಡಲಾಗಿದೆ. ಗೊರವಮಾಕಲಹಳ್ಳಿ ಸಾಮೂಹಿಕ ಹಾಲು ಕರೆಯುವ ಘಟಕಗಳಿಗೆ ರೂ.50 ಸಾವಿರ ಅನುದಾನ ನೀಡಲಾಗಿದೆ. ರೂ.2 ಲಕ್ಷ ಪ್ರೋತ್ಸಾಹ ಧನ ನೀಡಲಾಗಿದೆ. ಸೈಲೇಜ್ ಮತ್ತು ಅಜೋಲ್ಲಾ ಅನುದಾನವಾಗಿ ರೂ.18 ಸಾವಿರ ನೀಡಲಾಗಿದೆ ಎಂದು ಹೇಳಿದರು.
ಶಿಬಿರ ಕಚೇರಿ ಉಪ ವ್ಯವಸ್ಥಾಪಕ ಕೆ.ಎಸ್.ನರಸಿಂಹಯ್ಯ ಮಾತನಾಡಿ, ಹಾಲಿನ ಗುಣಮಟ್ಟ ಹೆಚ್ಚಿಸಲು ಹಸಿರು ಹಾಗೂ ಒಣ ಮೇವಿನ ಜತೆಗೆ ಪಶು ಆಹಾರ, ಖನಿಜ ಮಿಶ್ರಣ, ಗೋಧಾರ ಶಕ್ತಿ ಮತ್ತು ಟ್ರೈಯೊ ಎನ್‍ಬಿ ಸಾಕ್ ಪುಡಿ ಬಳಸಬೇಕು ಎಂದು ಹೇಳಿದರು.
ಉಪ ಕಚೇರಿ ವಿಸ್ತರಣಾಧಿಕಾರಿಗಳಾದ ಎಂ.ಜಿ.ಶ್ರೀನಿವಾಸ್, ಎನ್.ಶಂಕರ್, ಪಿ.ಕೆ.ನರಸಿಂಹರಾಜು, ಎಸ್.ವಿನಾಯಕ ಕೆ.ಪಿ.ಶ್ವೇತ ಇದ್ದರು.

ಉದ್ಯಾವರ : ಮೂರು ದಿನಗಳ ನಿರಂತರ್ ನಾಟಕೋತ್ಸವಕ್ಕೆ ಚಾಲನೆ

JANANUDI.COM NETWORK

ಉಡುಪಿ : ಕಲೆ, ಸಾಹಿತ್ಯ ಮತ್ತು ಕಲಾವಿದರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಆರಂಭವಾಗಿರುವ ನಿರಂತರ್ ಉದ್ಯಾವರ ಸಂಘಟನೆಯ ನಾಲ್ಕನೇ ವರ್ಷದ 3ದಿನಗಳ ನಿರಂತರ್ ನಾಟಕೋತ್ಸವಕ್ಕೆ ಚಾಲನೆ ದೊರಕಿತು.
ಉಡುಪಿ ಧರ್ಮಪ್ರಾಂತ್ಯದ ಕುಲಪತಿ ಮತ್ತು ಉದ್ಯಾವರ ಸಂತ ಫ್ರಾನ್ಸಿಸ್ ಝೇವಿಯರ್ ದೇವಾಲಯದ ಪ್ರಧಾನ ಧರ್ಮಗುರುಗಳಾದ ಅ. ವಂ. ಸ್ಟ್ಯಾನಿ ಬಿ ಲೋಬೋ ರವರು, ಕೊಂಕಣಿಯ ಏಕಮಾತ್ರ ಸಂಗೀತ ಸಾಧನ “ಗುಮಟ್” ಬಾರಿಸುವುದರೊಂದಿಗೆ 3ದಿನಗಳ ನಾಟಕೋತ್ಸವಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು 3 ವರ್ಷಗಳಿಂದ ವಿವಿಧ ನಾಟಕಗಳ ಮೂಲಕ ಕಲೆಯ ರುಚಿಯನ್ನು ಈ ಸಂಸ್ಥೆ ನಮಗೆ ನೀಡಿದೆ. ಇದರಿಂದ ನಮ್ಮ ಜ್ಞಾನ ಹೆಚ್ಚಾಗಿದೆ. ನಾಟಕವೊಂದು ಮಾಧ್ಯಮ. ನಾಟಕ ಬರಹಗಾರ ಮತ್ತು ನಾಟಕಕಾರ ತಮ್ಮ ಕಲೆಯ ಮೂಲಕ ಸಮಾಜದ ಮೇಲೆ ತಮ್ಮ ಪ್ರಭಾವ ಬೀರುತ್ತಾರೆ. ಸಮಾಜದಲ್ಲಿ ನಡೆಯುವ ಸರಿತಪ್ಪುಗಳನ್ನು ನಾಟಕಕಾರ ತನ್ನ ನಟನೆಯ ಮೂಲಕ ಸಮಾಜದ ಬದಲಾವಣೆಗೆ ಕಾರಣ ಮಾಡಿಸುತ್ತಾರೆ. ಇಂತಹ ನಾಟಕೋತ್ಸವಗಳ ಮೂಲಕ ಸಮಾಜವನ್ನು ಇನ್ನಷ್ಟು ಬಲಿಷ್ಠಗೊಳಿಸಬಹುದು. ಇಂತಹ ಸಂಘಟನೆಗಳಿಗೆ ಕಲಾಭಿಮಾನಿಗಳು ಸಹಕಾರ ನೀಡುವುದರಿಂದ ಸಮಾಜ ಬೆಳೆಯಲು ಸಾಧ್ಯ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಮೆಲ್ವಿನ್ ನೊರೊನ್ಹಾ ಮತ್ತು ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ಅಧ್ಯಕ್ಷ ಲ. ಗೋಡ್ಫ್ರಿ ಡಿಸೋಜ ಶುಭ ಹಾರೈಸಿದರು. ನಾಟಕೋತ್ಸವದ ಸಂಚಾಲಕ ರೊನಾಲ್ಡ್ ಡಿಸೋಜ, ಕಾರ್ಯದರ್ಶಿ ಒಲಿವೇರ ಮಥಾಯಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನಿರಂತರ್ ಅಧ್ಯಕ್ಷ ಸ್ಟೀವನ್ ಕುಲಾಸೊ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರೆ, ಕೋಶಾಧಿಕಾರಿ ರೋಶನ್ ಕ್ರಾಸ್ತಾ ಕಾರ್ಯಕ್ರಮ ನಿರೂಪಿಸಿದರು. ಮೊದಲ ದಿನ ನಾಟಕವನ್ನು 600ಕ್ಕೂ ಹೆಚ್ಚು ಕಲಾಭಿಮಾನಿಗಳು ವೀಕ್ಷಿಸಿದರು.
ಉದ್ಯಾವರದ ಐಸಿವೈಎಂ ಉದ್ಯಾವರ ಸುವರ್ಣಮಹೋತ್ಸವ ರಂಗ ಮಂಟಪದಲ್ಲಿ 3 ದಿನಗಳಲ್ಲಿ 4 ಕೊಂಕಣಿ ನಾಟಕಗಳು ಪ್ರದರ್ಶನವಾಗಲಿದೆ. ಮೊದಲ ದಿನ ‘ರಾಯಾಚಿ ಮುಸ್ತಾಯ್ಕಿ’, ‘ಮುಜ್ಯಾ ಪುತಾಚೊ ಕಿಣ್ಕುಳೊ’, ದ್ವಿತೀಯ ದಿನ ಡೆನಿಸ್ ಮೊಂತೆರ್ ನಿರ್ದೇಶನದ, ಅಸ್ತಿತ್ವ ತಂಡದ ಕಲಾವಿದರು ಪ್ರಸ್ತುತ ಪಡಿಸುತ್ತಿರುವ ‘ಹಾಂಡೊ ಉಟ್ಲಾ’ ಮತ್ತು ಕೊನೆಯ ದಿನ ಕ್ರಿಸ್ಟಿ ನೀನಾಸಂ ನಿರ್ದೇಶನದ ಅಸ್ತಿತ್ವ ತಂಡದಿಂದ ‘ಸಂಪದ್ಲೆ’ ನಾಟಕ ಪ್ರದರ್ಶನವಾಗಲಿದೆ.

ನಾಗೇಶ್ ಶ್ಯಾನುಭಾಗ್ ಕಿರಿಮಂಜೇಶ್ವರ ನಿಧನ

JANANUDI.COM NETWORK


ಕುಂದಪ್ರಭ ಪತ್ರಿಕಾ ಬಳಗದಲ್ಲಿ ದಶಕಗಳಿಂದ ಸೇವೆ ಸಲ್ಲಿಸುತ್ತಿದ್ದ, ಕಿರಿಮಂಜೇಶ್ವರದ ನಾಗೇಶ ಶ್ಯಾನುಭಾಗ್ (57) ಇವರು ಫೆ. 11 ರಂದು ಹೃದಯಾಘಾತದಿಂದ ನಿಧನರಾದರು.
ಸರಳತೆ, ಸಜ್ಜನಿಕೆ ಹಾಗೂ ಉತ್ತಮ ಜನಸಂಪರ್ಕದಿಂದ ಎಲ್ಲರ ಪ್ರೀತಿ, ಗೌರವ ಗಳಿಸಿದ್ದ ಇವರು ಸಹಕಾರಿ ಸಂಸ್ಥೆಗಳು, ಸೇವಾ ಸಂಘಟನೆಗಳೊಡನೆ ಉತ್ತಮ ಒಡನಾಟ ಹೊಂದಿದ್ದರು.
ಇವರು ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಇವರ ನಿಧನಕ್ಕೆ ಕುಂದಪ್ರಭ ಬಳಗ ತೀವ್ರ ಸಂತಾಪ ವ್ಯಕ್ತಪಡಿಸಿದೆ.

ಕುಂದಾಪುರದಲ್ಲಿ ಲೂರ್ದ್ ಮಾತೆಯ ಹಬ್ಬ ಭಕ್ತಿಭಾವದ ಜಪಮಾಲೆ

JANANUDI.COM NETWORK


ಕುಂದಾಪುರ, ಫೆ.12: ಲೂರ್ದ್ ಮಾತೆಯ ಹಬ್ಬದಂದು ಫೆಬ್ರವರಿ 11 ರಂದು ಸಂಜೆ ಅತ್ಯಂತ ಪ್ರಾಚೀನ ದೇವಾಲಯವಾದ ಹೋಲಿ ರೋಜರಿ ದೇವಾಲಯದ ವಠಾರದಲ್ಲಿರುವ ಲೂರ್ದ್ ಮಾತೆಯ ಗ್ರೊಟ್ಟೊದ ಎದುರುಗಡೆ ಲೂರ್ದ್ ಮಾತೆಯ ಹಬ್ಬದ ಪ್ರಯುಕ್ತ ಭಕ್ತಿಭಾವದ ಜಪಮಾಲ ಭಕ್ತಿಯನ್ನು ಆಚರಿಸಲಾಯಿತು.
ರೋಜರಿ ಚರ್ಚಿನ ಭಕ್ತರು ಜಪಮಾಲಾ ಭಕ್ತಿಯಲ್ಲಿ ಶ್ರದ್ದಾ ಭಕ್ತಿಯಿಂದ ಪಾಲ್ಗೊಂಡರು. “ರೋಜರಿ ಮಾತೆಯು ಫ್ರಾನ್ಸ್ ದೇಶದ ಲೌರ್ಡೆಸ್ ಎಂಬಲ್ಲಿ ಬರ್ನಾಡೇಟ್ ಸೌಬಿರಸ್ ಎಂಬ 14 ವರ್ಷದ ಹೆಣ್ಣು ಮಗಳಿಗೆ 1858 ರಲ್ಲಿ, 18 ಭಾರಿ ದರ್ಶನ ನೀಡಿದಳು, ರೋಜರಿ ಮಾತೆ ದರ್ಶನ ನೀಡಿದಾಗ, ಬಿಳಿ ಮುಸುಕು, ನೀಲಿ ಬಟ್ಟೆ ಧರಿಸಿದ ಅವಳ ಪಾದಗಳಲ್ಲಿ ಚಿನ್ನದ ಗುಲಾಬಿಗಳು ಮತ್ತು ಮುತ್ತುಗಳಿಂದ ಕೂಡಿದ ಜಪಮಾಲೆ ಇತ್ತೆಂದು ಬರ್ನಾಡೇಟ್ ಹೇಳುತ್ತಾಳೆ. ಇಲ್ಲಿ ನನಗಾಗಿ ದೊಡ್ಡ ಇಗರ್ಜಿ ಕಟ್ಟಬೇಕು, ಜಪಮಾಲೆಯ ಭಕ್ತಿ ಹೆಚ್ಚಬೇಕು ಎಂದು ಬರ್ನಾಡೇಟ್ ಗೆ ಹೇಳುತ್ತಾಳೆ. ಮುಂದೆ ಅದರಂತೆ ಆಗುತ್ತದೆ, ಲೌರ್ಡೆಸ್ ಉರಿನಲ್ಲಿ ದರ್ಶನ ನೀಡಿದಕ್ಕೆ ಮೇರಿ ಮಾತೆ ಅಲ್ಲಿ ಲೂರ್ದ್ ಮಾತೆಯೆಂದು ಕರೆಯಲ್ಪಟ್ಟರು. ಮುಂದೆ ಬರ್ನಾಡೇಟ್ ಇವಳಿಗೆ ಸೈಂಟ್ ಎಂದು ಘೋಶಿಸಲಾಗುತ್ತದೆ ಈಗ ಅಲ್ಲಿ ಮಿಲಿಯಾ ಕಟ್ಟಲೆ ಜನ ತಮ್ಮ ಆರೋಗ್ಯಕ್ಕಾಗಿ ಆರಾಧನೆಗೆಗಾಗಿ, ಉತ್ತಮ ಆರೋಗ್ಯಕ್ಕಾಗಿ, ರೋಗ ಋಜೀನಗಳನ್ನು ಗುಣ ಪಡಿಸಿಕೊಳ್ಳಲು ಆರಾಧಿಸಲು ಸೇರುತ್ತಾರೆ, ಅಲ್ಲಿ ಆರಾಧಿಸಿದ ಪ್ರತಿ ನೂರರಲ್ಲಿ ಇಬ್ಬರು ಗುಣ ಮುಖರಾಗುತ್ತಾರೆ, ನಮ್ಮಲ್ಲಿ ಕೆಲವರಿಗೆ ಅಷ್ಟು ದೂರ ಹೋಗಲು ಅಸಾಧ್ಯ, ಹಾಗಾಗಿ ಇಲ್ಲಿಯೆ ಅವಳ ಹೆಸರಿನಿಂದ ಪ್ರಾರ್ಥಿಸೋಣ’ ಎಂದು ಇಗರ್ಜಿಯ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ತಮ್ಮ ಪ್ರವಚನದಲ್ಲಿ ತಿಳಿಸಿದರು.
ಲೂರ್ದ್ ಮಾತೆಯನ್ನು ಬಣ್ಣದ ಮೇಣದ ಬತ್ತಿಗಳ ಮೂಲಕ ಮೆರವಣಿಗೆ ಮಾಡಿ, ಭಕ್ತಾಧಿಗಳಿಗೆ ಉತ್ತಮ ಆರೋಗ್ಯ, ರೋಗ ಋಜೀನಗಳನ್ನು ಗುಣ ಆಗುವಂತೆ ಅ|ವಂ|ಸ್ಟ್ಯಾನಿ ತಾವ್ರೊ ಮತ್ತು ಸಹಾಯಕ ಧರ್ಮಗುರು ವಂ| ವಿಜಯ್ ಡಿಸೋಜಾ ಆಶಿರ್ವದಿಸಿದರು.
ಜಪಮಾಲ ಭಕ್ತಿಯನ್ನು ಲೂರ್ದ್ ವಾಳೆಯವರು ನೇರವೆರಿಸಿದರು. ಉಪಾಧ್ಯಕ್ಷರಾದ ಎಲ್.ಜೆ. ಫೆರ್ನಾಂಡಿಸ್ ವಂದಿಸಿದರು.