ಶ್ರೀನಿವಾಸಪುರ 4 : ದಾನಿಗಳು ನೀಡುವಂತಹ ಸಾಮಾಗ್ರಿಗಳನ್ನು ಸದ್ಭಳಕೆ ಮಾಡಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಬಿಇಓ ವಿ.ಉಮಾದೇವಿ ಸಲಹೆ ನೀಡಿದರು.ಶ್ರೀನಿವಾಸಪುರ ಪಟ್ಟಣದ ಸರ್ಕಾರಿ ಉರ್ದು ಮತ್ತು ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚಿಗೆ ಸಮಾಜ ಸೇವಕ ಸಾಧಿಕ್ ಅಹಮದ್ ಹಾಗು ಎಟಿಎಸ್ ರಿಜ್ವಾನ್ ರವರು ಮಕ್ಕಳಿಗೆ ಉಚಿತ ಪಠ್ಯ ಪರಿಕರಗಳು ವಿತರಣಾ ಕಾಯಕ್ರಮದಲ್ಲಿ ಮಾತನಾಡಿದರು.ಶಾಲೆಯಲ್ಲಿ 2 ಕೊಠಡಿಗಳ ಕೊರತೆ ಇದ್ದು, ಚುನಾವಣೆಯ ಸಂಬಂಧ ಯಾವುದೇ ಪ್ರಗತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಾಧ್ಯವಿಲ್ಲ ಆದ್ದರಿಂದ ಕಾಮಗಾರಿಗಾಗಿ ಟೆಂಡರ್ ಕರೆದು ಅತಿ ಶೀಘ್ರದಲ್ಲಿಯೇ […]

Read More

ಕೋಲಾರ,ಜು.4: ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಪತ್ರಕರ್ತರ ಆಪತ್ಕಾಲದ ವೇಳೆ ನೆರವಿಗಾಗಿ ಸ್ಥಾಪಿಸಿರುವ ಪತ್ರಕರ್ತರ ಕಲ್ಯಾಣನಿಧಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು 25 ಲಕ್ಷ ರೂಗಳನ್ನು ಮಂಜೂರು ಮಾಡಿದ್ದಾರೆ.ಜುಲೈ 1 ರಂದು ಕೋಲಾರದಲ್ಲಿ ನಡೆದ ಪತ್ರಿಕಾ ದಿನಾಚರಣೆಯಲ್ಲಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅವರಿಗೆ ಈ ಕುರಿತು ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಮನವಿ ಸಲ್ಲಿಸಿತ್ತು.ಈ ಮನವಿಯನ್ನು ಆಧರಿಸಿ ಕೆ.ವಿ.ಪ್ರಭಾಕರ್ ಅವರು ಜುಲೈ 3 ರಂದು ಸೋಮವಾರದಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಂದ ಕೋಲಾರ ಜಿಲ್ಲಾ ಕಾರ್ಯನಿರತ […]

Read More

ಕೋಲಾರ: ಕ್ರೀಡೆಗಳನ್ನು ಹಣ ನೀಡಿ ಖರೀದಿಸಲು ಸಾಧ್ಯವಿಲ್ಲ. ಕ್ರೀಡೆಗಳು ಅಭ್ಯಾಸ ಮತ್ತ ಶ್ರಮದಿಂದ ಮಾತ್ರ ಸಾಧನೆಗೈಯಲು ಸಾಧ್ಯ ಎಂದು ಕೋಲಾರ ಜಿಲ್ಲಾ ಅಥ್ಲೇಟಿಕ್ಸ್ ಅಸೋಸಿಯೇಷನ್ ನೂತನ ಅಧ್ಯಕ್ಷ ಎನ್. ಮುನಿಯಪ್ಪ ಅಭಿಪ್ರಾಯಪಟ್ಟರು.ನಗರದ ಪತ್ರಕರ್ತರ ಭವನದಲ್ಲಿನ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಕ್ರೀಡೆಗಳು ನಶಿಸಿ ಹೋಗುತ್ತಿದೆ. ಸಮರ್ಪಕವಾದ ಸೌಲಭ್ಯಗಳು ಹಾಗೂ ತರಭೇತಿಯ ಕೊರತೆಯಿಂದ ಜಿಲ್ಲೆಯಲ್ಲಿ ಉತ್ತಮವಾದ ಪ್ರತಿಭೆಗಳಿದ್ದರೂ ಹೊರಹೊಮ್ಮಲು ಸಾಧ್ಯವಾಗುತ್ತಿಲ್ಲ ಎಂದು ಕಳವಳ ವ್ಯಕ್ತ ಪಡೆಸಿದರು,ನಮ್ಮ ಜಿಲ್ಲೆಯಲ್ಲಿ ಕ್ರೀಡಾ ಪ್ರತಿಭೆಗಳಿಗೆ ಕೊರತೆಯಿಲ್ಲ ಅವರಿಗೆ ಉತ್ತಮವಾದ ತರಭೇತಿ ಹಾಗೂ ಮೂಲಭೂತ […]

Read More

ಶ್ರೀನಿವಾಸಪುರ:  ಸಡಗರ ಸಂಭ್ರಮದಿಂದ ಗುರು ಪೂರ್ಣಿಮೆ ಆಚರಿಸಲಾಯಿತು. ಜನರು ಸಾಯಿಬಾಬಾ ದೇವಾಲಯಕ್ಕೆ ಭೇಟಿ ನೀಡಿ ಸರದಿಯ ಸಾಲಿನಲ್ಲಿ ನಿಂತು ಬಾಬಾ ದರ್ಶನ ಪಡೆದರು.   ಗುರು ಪೂರ್ಣಿಮೆ ಪ್ರಯುಕ್ತ ಶಿರಿಡಿ ಸಾಯಿಬಾಬಾ ದೇವಾಲಯ ಹಾಗೂ ಬಾಬಾ ವಿಗ್ರಹಕ್ಕೆ ವಿಶೇಷ ಪುಷ್ಪಾಲಂಕಾರ ಮಾಡಲಾಗಿತ್ತು. ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ಭಕ್ತರು ಸಂಭ್ರಮಾಚಾರಣೆಯಲ್ಲಿ ಭಾಗವಹಿಸಿದ್ದರು.   ದೇವಾಲಯಕ್ಕೆ ಆಗಮಿಸಿದ್ದ ವಿವಿಧ ಸಾಂಸ್ಕೃತಿಕ ಸಂಘಟನೆಗಳ ಮಹಿಳೆಯರು ಬಾಬಾ ಗೀತೆಗಳನ್ನು ಹಾಡಿದರು. ಬಾಬಾ ದರ್ಶನ ಪಡೆದ ಭಕ್ತರಿಗೆ ಊಟದ ವ್ಯವಸ್ಥೆ  ಮಾಡಲಾಗಿತ್ತು. […]

Read More

ಕೋಲಾರ,ಜು.3: ದಲಿತ ಚಳವಳಿ ಒತ್ತಡದ ಗುಂಪಾಗಿಯೇ ಬೆಳೆಯಬೇಕು. ಪ್ರತಿ ತಾಲ್ಲೂಕಿನಲ್ಲಿ 100 ಯುವಕರು ಇದ್ದರೆ ಇಡೀ ಜಿಲ್ಲೆಯನ್ನು ನೈತಿಕ ಶಕ್ತಿಯಿಂದ ನಿಯಂತ್ರಿಸಬಹುದು. ದಲಿತರು, ಬಡವರು, ಶೋಷಿತರಿಗೆ ನ್ಯಾಯ ಕಲ್ಪಿಸಬಹುದು ಎಂದು ದಲಿತ ಮುಖಂಡ ಸಿ.ಎಂ.ಮುನಿಯಪ್ಪ ಅಭಿಪ್ರಾಯಪಟ್ಟರು.ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್‍ಗೆ ಭಾಜನರಾಗಿರುವ ಸಿ.ಎಂ.ಮುನಿಯಪ್ಪ ಅವರು ಸೋಮವಾರ ಪತ್ರಕರ್ತರ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.ಅಂಬೇಡ್ಕರ್ ಅವರನ್ನು ಕರ್ನಾಟಕಕ್ಕೆ ಪರಿಚಯಿಸಿದ್ದು ದಲಿತ ಚಳವಳಿ. ಹೋರಾಟಗಾರರಿಗೆ ನೈತಿಕ ಭಯ, ನೈತಿಕ ಎಚ್ಚರ ಇರಬೇಕು. […]

Read More

ಶ್ರೀನಿವಾಸಪುರ : ಮಾನವ ಸ್ವಾರ್ಥಕ್ಕಾಗಿ ಅರಣ್ಯ ನಾಶ ಮಾಡಿದ ಪರಿಣಾಮ ಕಾಲ – ಕಾಲಕ್ಕೆ ಮಳೆಯಾಗಿದೆ ಸಂಕಷ್ಟ ಎದುರಾಗಿದ್ದು, ಇಂದಿನ ಪರಿಸ್ಥತಿಯಲ್ಲಿ ಪರಿಸರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದ ಶಾಸಕ ಜಿ.ಕೆ ವೆಂಕಟಶಿವಾರೆಡ್ಡಿ ಹೇಳಿದರು.ತಾಲ್ಲೂಕಿನ ಹೊದಲಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಆರ್.ತಿಮ್ಮಸಂದ್ರ ಗ್ರಾಮದ ಸಮೀಪ ಡಾ|| ಬಿ.ಆರ್ ಅಂಬೇಡ್ಕರ್ ವಸತಿಶಾಲೆಯ ಆವರಣದಲ್ಲಿ ಶನಿವಾರ ವನಮಹೋತ್ಸವ ಹಾಗು ಕೋಟಿ ವೃಕ್ಷಾರೋಹಣ ಸಸಿ ನೆಡುವ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಪರಿಸರ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಬಾಲ್ಯದಿಂದಲೇ ಪರಿಸರದ […]

Read More

ರಚನೆ:- ಬಿ.ಆರ್. ರವೀಂದ್ರ,  ವಕೀಲರು ಮತ್ತು ಸಾಹಿತಿಗಳು ಕೋಲಾರ. ಡಿವಿಜಿ ಎಂಬ ಹೆಸರು ಕೇಳಿದ ತಕ್ಷಣ ನಮಗೆ ನೆನಪಾಗುವುದು ಅವರ “ಮಂಕುತಿಮ್ಮನ ಕಗ್ಗ” ಆ ಗ್ರಂಥಕ್ಕೆ ಈ ಹೆಸರು ಇಡುವಲ್ಲಿ ಅವರ ಜಾಣ್ಮೆಯನ್ನು ನಾವು ಕಾಣಬಹುದು. ಡಿವಿಜಿ ರವರು ಅದ್ಭುತ ವಿಚಾರವಂತರು, ಜ್ಞಾನಿಗಳು, ಅವರು ಸಾಹಿತ್ಯದಲ್ಲಿ ಕೈಯಾಡಿಸದೆ ಬಿಟ್ಟ ಪ್ರಕಾರವಿಲ್ಲ. ಶೈಕ್ಷಣಿಕವಾಗಿ ಅವರ ವಿದ್ಯಾಭ್ಯಾಸ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗದಿದ್ದರೂ ಸಹ ಕನ್ನಡ ಭಾಷೆಯ ಜೊತೆಗೆ ಅವರು ಇಂಗ್ಲಿಷ್ ಮತ್ತು ಸಂಸ್ಕೃತ ಭಾಷೆಯಲ್ಲಿ ಅದ್ಭುತ ಪಾಂಡಿತ್ಯವನ್ನು ಪಡೆದಿದ್ದವರು. ಕನ್ನಡ […]

Read More

ಶ್ರೀನಿವಾಸಪುರ: ಪಟ್ಟಣದಲ್ಲಿ ಮುಸ್ಲಿಮರು ಗುರುವಾರ ಶ್ರದ್ಧಾ ಭಕ್ತಿಯಿಂದ ಬಕ್ರೀದ್ ಆಚರಿಸಿದರು. ಪಟ್ಟಣದ ಹೊರವಲಯದಲ್ಲಿನ ಈದ್ಗಾ ಮೈದಾನಕ್ಕೆ ಮೆರವಣಿಗೆಯಲ್ಲಿ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.ಮುಸ್ಲಿಂ ಸಮುದಾಯದ ನಾಗರಿಕರು ಪರಸ್ಪರ ಬಕ್ರೀದ್ ಶುಭಾಶಯ ವಿನಿಮಯ ಮಾಡಿಕೊಂಡರು. ಪ್ರಾರ್ಥನೆ ಸಲ್ಲಿಸಿ ಹಿಂದಿರುಗುವಾಗ ಕೆಲವು ಮುಸ್ಲಿಂ ಸಮುದಾಯದವರು ತಂಪು ಪಾನೀಯ ವಿತರಿಸಿದರು.ಹಬ್ಬದ ಪ್ರಯುಕ್ತ ಬಡವರಿಗೆ ಮಾಂಸ ದಾನ ಮಾಡಲಾಯಿತು. ಮಾರುಕಟ್ಟೆಯಲ್ಲಿ ಕುರಿ ಮತ್ತು ಮೇಕೆ ಮಾಂಸಕ್ಕೆ ಹೆಚ್ಚಿನ ಬೇಡಿಕೆಯಿತ್ತು. ಮಧ್ಯಾಹ್ನದ ಹೊತ್ತಿಗೆ ಮಾಂಸದ ಅಂಗಡಿಗಳಲ್ಲಿ ಮಾಂಸ ಮುಗಿದುಹೋಗಿತ್ತು. ಮುಸ್ಲಿಂ ಸಮುದಾಯದಿಂದ ಮಾಂಸಕ್ಕೆ ಹೆಚ್ಚಿನ […]

Read More