ಕೋಲಾರ : ಪತ್ರಕರ್ತನಾದವನು ನಿರಂತರವಾಗಿ ಅಧ್ಯಯನ ಮಾಡುತ್ತಿರಬೇಕು ಹಾಗೂ ವಿಷಯದಲ್ಲಿನ ಸತ್ಯಾಸತ್ಯತೆಗಳ ಬಗ್ಗೆ ಪರಾಮರ್ಷೆ ಮಾಡುತ್ತಿರಬೇಕು ಎಂದು ಮಾನ್ಯ ಮುಖ್ಯ ಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ. ಪ್ರಭಾಕರ್ ಅವರು ಅಭಿಪ್ರಾಯಪಟ್ಟರು. ಇಂದು ಕರ್ನಾಟಕ ಮಾಧ್ಯಮ ಅಕಾಡೆಮಿ, ಕೋಲಾರ ಪತ್ರಿಕೆ ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘ, ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಯೋಗದಲ್ಲಿ ಕೋಲಾರ ಪತ್ರಿಕೆ ಸುವರ್ಣ ಸಂಭ್ರಮದ ಅಂಗವಾಗಿ ಯುವ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಪತ್ರಿಕೋದ್ಯಮ ಇಂದು-ಮುಂದು ತರಬೇತಿ ಕಾರ್ಯಾಗಾರವನ್ನು […]
ಕೋಲಾರ,ಫೆ.12: ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಸ್ನಾತಕೋತರ ಕೇಂದ್ರ ಮಂಗಸಂದ್ರ ಸಮಾಜ ಕಾರ್ಯ ವಿಭಾಗದ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳು ಹಾಗೂ ಬಸವಶ್ರೀ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ ಹಾಗೂ ಯುವಜನ ಮತ್ತು ಅಭಿವೃದ್ಧಿ ಸಂಸ್ಥೆ ಕೋಲಾರ್ ಸಹಯೋಗದೊಂದಿಗೆ ಮಾದಕ ವಸ್ತುಗಳ ವ್ಯಸನ ಮತ್ತು ಎಚ್.ಐ.ವಿ ಕುರಿತು ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮದಲ್ಲಿ ಸಮಾಜ ಕಾರ್ಯ ವಿಭಾಗದ ಉಪನ್ಯಾಸಕ ಶಿವರಾಜ್ ಕುಮಾರ್ ಪ್ರಾಸ್ತವಿಕವಾಗಿ ಮಾತನಾಡಿ, ಪ್ರಸ್ತುತದಲ್ಲಿ ಯುವಕರ ಪೀಳಿಗೆಯ ಬಗ್ಗೆ ಯುವಕರು ದುಚ್ಚಟಗಳಿಗೆ ಒಳಗಾಗಿದ್ದು, ದುಶ್ಚಟಗಳಿಂದ ಹೊರಬರಲು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ […]
ಶ್ರೀನಿವಾಸಪುರ : ಪಟ್ಟಣದಲ್ಲಿ ಈಗಾಗಲೇ ಇಬ್ಬರುಮೂವ್ವರ ಮೇಲೆ ದಾಳಿ ನಡೆಸಿ ಗಾಯಗೊಳಿಸಿದ್ದು, ಪುರಸಭೆವತಿಯಿಂದ ಬೀದಿ ನಾಯಿಗಳ ಹಾವಳಿಯನ್ನು ತಪ್ಪಿಸಲು ಮೂರು ಬಾರಿ ಟೆಂಡರ್ ಕರೆಯಲಾಗಿತ್ತು . ಬೀದಿ ನಾಯಿಗಳನ್ನು ಹಿಡಿದು ಜನ ಇಲ್ಲದ ಜಾಗಗಳಲ್ಲಿ ಆಗಲಿ, ಬೆಟ್ಟಗುಡ್ಡಗಳಲ್ಲಿ ಬಿಡಲು ಸಾಧ್ಯವಿಲ್ಲ. ಇದಕ್ಕೆ ಸರ್ಕಾರವು ಒಪ್ಪುವುದಿಲ್ಲ. ಸಧ್ಯ ಬೀದಿ ನಾಯಿಗಳಿಗೆ ಶಸ್ತ್ರ ಚಿಕಿತ್ಸೆಯ ಮೂಲಕ ನಾಯಿಗಳ ಸಂಖ್ಯೆಯನ್ನು ತಡೆಹಿಡಿಯುವುದು ಒಂದೇ ದಾರಿ ಎಂದು ಪುರಸಭೆ ಅಧ್ಯಕ್ಷ ಬಿ.ಆರ್.ಭಾಸ್ಕರ್ ತಿಳಿಸಿದರು .ಪಟ್ಟಣದ ಪುರಸಬೆ ಕಚೇರಿಯಲ್ಲಿ ಮಂಗಳವಾರ ನಡೆದ ಪ್ರತಿಕಾ ಗೋಷ್ಟಿಯಲ್ಲಿ […]
ಶ್ರೀನಿವಾಸಪುರ 3 : ಪಟ್ಟಣದ ತಹಶೀಲ್ದಾರ್ ಕಚೇರಿ ಮುಂಭಾಗ ಮಂಗಳವಾರ ಗ್ರಾಮ ಆಡಳಿತ ಅಧಿಕಾರಿಗಳು 2 ನೇ ಹಂತದ ಅನಿರ್ಧಿಷ್ಟಾವಧಿ ಮುಷ್ಕರ ಸ್ಥಳಕ್ಕೆ ಅಪರ ಜಿಲ್ಲಾಧಿಕಾರಿ ಎಸ್.ಎಂ.ಮಂಗಳ ಭೇಟಿ ನೀಡಿದರು.ಅಪರ ಜಿಲ್ಲಾಧಿಕಾರಿ ಎಸ್.ಎಂ.ಮಂಗಳ ಮಾತನಾಡಿ ಮುಷ್ಕರ ನಿರತರ ಬೇಡಿಕೆಗಳನ್ನು ಆಲಿಸಿ ಸರ್ಕಾರದ ಗಮನಕ್ಕೆ ತುರುವುದಾಗಿ ಭರವಸೆ ನೀಡುತ್ತಾ, ಗ್ರಾಮ ಆಡಳಿತ ಅಧಿಕಾರಿಗಳು ಕಾರ್ಯನಿರ್ವಹಿಸುವ ಗ್ರಾಮಗಳಲ್ಲಿ ಕಚೇರಿ ನಿರ್ಮಿಸಲು ಸ್ಥಳವನ್ನು ಗುರ್ತಿಸುವಂತೆ ಈಗಾಗಲೇ ಇಲಾಖೆಯಿಂದ ಸೂಚನೆ ನೀಡಲಾಗಿದೆ ಆದರೆ ಇದುವರೆಗೂ ಗ್ರಾಮ ಆಡಳಿತ ಅಧಿಕಾರಿಗಳು ಸ್ಥಳವನ್ನು ಗುರ್ತಿಸಿಲ್ಲವೆಂದರು. ಮುಂದಿನ […]
ಶ್ರೀನಿವಾಸಪುರ : ಈಗಲಾದರೂ ನಾವೆಲ್ಲರೂ ಒಗ್ಗಟ್ಟಿನಿಂದ ನಮ್ಮ ಸುತ್ತಮುತ್ತಲಿರುವ ನೈಸರ್ಗಿಕ ಸಂಪತ್ತುಗಳಾದ ಗಿಡ, ಮರ, ಕೆರೆ, ಕುಂಟೆ , ಗೋಮಾಳ ಹಾಗೂ ಅರಣ್ಯವನ್ನು ಸಂರಕ್ಷಣೆ ಮಾಡಿಕೊಂಡು ನಮ್ಮ ಜೀವನಾದಾರಗಳನ್ನು ಸುದಾರಣೆ ಮಾಡಿಕೊಳ್ಳಲು ಗ್ರಾಮೀಣ ವ್ಯವಸ್ಥೆಗಳನ್ನು ಬಲಪಡಿಸಬೇಕಾಗಿದೆ ಎಂದು ಅರ್.ಐ ಮುನಿರೆಡ್ಡಿ ಎಂದರು.ತಾಲ್ಲೂಕಿನ ಕಸಬಾ ಹೋಬಳಿ ಚಲ್ದಿಗಾನಹಳ್ಳಿ ವ್ಯಾಪ್ತಿಗೆ ಬರುವ ಮೊಗಿಲಹಳ್ಳಿ ಗ್ರಾಮದಲ್ಲಿ ಮಂಗಳವಾರ ಕೆರೆ ಒತ್ತುವರಿ ಜಾಗ ತೆರುವುಗೊಳಿಸುವ ಕಾರ್ಯಾಚರಣೆಗೆ ಚಾಲನೆ ನೀಡಿ ಮಾತನಾಡಿದರು .ಪಿ.ಡಿ.ಓ ಜಗದೀಶ್ ಕುಮಾರ್ ಮಾತನಾಡಿ ಮೊಗಿಲಹಳ್ಳಿ ಗ್ರಾಮದ ಸರ್ವೆ ನಂಬರ್ 92 […]
ಶ್ರೀನಿವಾಸಪುರ : ತಾಲೂಕಿನ ಬಂಗವಾದಿ ಗ್ರಾಮದಲ್ಲಿ ಭಾನುವಾರ ಕೆರೆ ಬಳಿ ಗುಂಪು ಕಟ್ಟಿಕೊಂಡು ಕೋಳಿ ಪಂದ್ಯವಾಡುತ್ತಿದ್ದವರ ಮೇಲೆ ದಾಳಿ ನಡೆಸಿ 4 ಜನರನ್ನು ವಶಕ್ಕೆ ಪಡೆದು, ಪಂದ್ಯಕ್ಕೆ ಪಣವಾಗಿ ಇಟ್ಟಿದ್ದ 3200 ರೂ ನಗದು, ಒಂದು ಕೋಳಿ ವಶಕ್ಕೆ ಪಡೆದು 4 ಜನರ ವಿರುದ್ಧ ಪ್ರಕರಣ ದಾಖಲಿಸಿ , ನ್ಯಾಯಂಗ ಬಂದನಕ್ಕೆ ಒಪ್ಪಿಸಲಾಗಿದೆ.ಎಸ್ಪಿ ನಿಖಿಲ್.ಬಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ರವಿಶಂಕರ್ ,ಜಗದೀಶ್ ಮಾರ್ಗದರ್ಶನದಲ್ಲಿ ಡಿವೈಎಸ್‍ಪಿ ನಂದಕುಮಾರ್ ನೇತೃತ್ವದಲ್ಲಿ ಪಿಐ ಎಂ.ಬಿ.ಗೊರವನಕೊಳ್ಳ, ಪಿಎಸ್‍ಐ ಜಯರಾಮ್, ಸಿಬ್ಬಂದಿಗಳಾದ ಸಂತೋಷ್, ಪತ್ರಿ […]
ಶ್ರೀನಿವಾಸಪುರ : ಪಟ್ಟಣದ ಮಾರತಿನಗರದಲ್ಲಿ ಸೋಮವಾರ ಅರಿಕೆರೆ ಲಕ್ಷ್ಮಮ್ಮ 65 ವರ್ಷದ ಮಹಿಳೆಗೆ ಬೀದಿ ನಾಯಿಗಳು ತಲೆಗೆ ತೀವ್ರಗಾಯವಾಗಿದೆ ಹಾಗು ದೇಹದ ಇತರೆ ಭಾಗಗಳಿಗೆ ಕಚ್ಚಿ ಗಾಯಗೊಳಿಸಿರುವ ಘಟನೆ ನಡೆದಿದೆ.ಅರಿಕೆರೆ ಲಕ್ಷ್ಮಮ್ಮ ಪಟ್ಟಣದಲ್ಲಿ ಮಾರತಿ ನಗರದ ತನ್ನ ತಂಗಿಯ ಮನೆಗೆ ಬಂದಿದ್ದು, ಮನೆಯ ಸಮೀಪ ನಿಂತಿದ್ದ ಸಮಯದಲ್ಲಿ ಬೀದಿ ನಾಯಿಗಳು ಕಚ್ಚಿ ಗಾಯಗೊಳಿಸಿದೆ. ಕಳೆದ ವರ್ಷ ನವಬಂರ್ ತಿಂಗಳಲ್ಲಿ ಬೀದಿನಾಯಿಗಳ ಕಾಟದಿಂದ ಬಡಾವಣೆಗಳಲ್ಲಿ ತಿಂಡಿ, ತಿನಿಸುಗಳನ್ನು ಹಿಡಿದು ಸಾಗುವ ಪುಟ್ಟ ಮಕ್ಕಳ ಮೈಮೇಲೆ ಬೀದಿ ನಾಯಿಗಳು ದಾಳಿ […]
ಕೋಲಾರ,ಫೆ.10: ಮಕ್ಕಳನ್ನು ಸಮಾಧಾನಪಡಿಸಲು ಹಾಗೂ ಲಾಲನೆ-ಪಾಲನೆ ಮಾಡುವ ಸಂದರ್ಭದಲ್ಲಿ ಮೊಬೈಲ್ ಬಳಕೆ ಮಾಡಿಕೊಳ್ಳುವುದು ಅಪಾಯಕಾರಿ ಎಂದು ಹೃದಯತಜ್ಞ ಡಾ.ಯಶ್ವಂತ್ ಪೋಷಕರನ್ನು ಎಚ್ಚರಿಸಿದರು.ನಗರದ ಸುವರ್ಣ ಕನ್ನಡ ಭವನದಲ್ಲಿ ಸರಸ್ಪತಿನಾರಾಯನ್ ಇಂಟರ್ ನ್ಯಾಷನಲ್ ಸ್ಕೂಲ್ (ಸ್ಮಾರ್ಟ್ ಕಿಡ್ಸ್ ಪ್ರಿ-ಸ್ಕೂಲ್)ನ ನಾಲ್ಕನೇ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಚಿಕ್ಕವಯಸ್ಸಿನಲ್ಲೇ ಮಕ್ಕಳಿಗೆ ಮೊಬೈಲ್ ಅವಲಂಭನೆ ಬೆಳೆಸಿದರೆ ಅದು ಅವರ ಮಾನಸಿಕ ಮತ್ತು ದೈಹಿಕ ಬೆಳವಣಿಗೆಯು ಕುಗ್ಗಲು ಕಾರಣವಾಗುತ್ತದೆ. ಅದರ ಬದಲು ಆಟೋಟಗಳ ಮೂಲಕ ಮಕ್ಕಳನ್ನು ಸಮಾಧಾನಪಡಿಸುವುದು ಎಲ್ಲಾ ರೀತಿಯಿಂದಲ್ಲೂ ಪ್ರಯೋಜನಕಾರಿಯಾದುದು ಎಂದು […]
ಶ್ರೀನಿವಾಸಪುರ: ಗ್ರಾಮೀಣ ಪ್ರದೇಶದ ಮಹಿಳೆಯರು ಉದ್ಯಮಶೀಲತಾ ತರಬೇತಿ ಶಿಬಿರದ ಲಾಭ ಪಡೆದು, ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಬಕ್ಷುಸಾಬ್ ಹೇಳಿದರು.ತಾಲ್ಲೂಕಿನ ಗೌನಿಪಲ್ಲಿ ಗ್ರಾಮದ ಮಾಲಿಕ್ ಫಂಕ್ಷನ್ ಹಾಲ್‌ನಲ್ಲಿ. ಬೆಂಗಳೂರಿನ ಉದ್ಯಮಶೀಲತಾ ಅಭಿವೃದ್ಧಿ ಸಂಸ್ಥೆ ಆಶ್ರಯದಲ್ಲಿ ಶುಕ್ರವಾರ ಮಹಿಳೆಯರಿಗಾಗಿ ಏರ್ಪಡಿಸಿದ್ದ ಕಿರು ಉದ್ಯಮಶೀಲತಾ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ವಿವಿಧ ಆರ್ಥಿಕ ಸಂಸ್ಥೆಗಳಿAದ ಪಡೆದುಕೊಂಡ ಸಾಲ ಸೌಲಭ್ಯ ಸದುಪಯೋಗ ಪಡಿಸಿಕೊಳ್ಳಬೇಕು.ಯಾವುದಾದರೂ ಉದ್ಯಮ ಪ್ರಾರಂಭಿಸಿ ಮಾದರಿಯಾಗಿ ಹಾಗೂ ಲಾಭದಾಯಕವಾಗಿ ಬೆಳೆಸಬೇಕು ಎಂದು ಹೇಳಿದರು.ಇಡಿಐಐ ಸಂಸ್ಥೆಯಿಂದ ಮಹಿಳೆಯರಿಗೆ […]

