ಶ್ರೀನಿವಾಸಪುರ : ನೀವು ಇದ್ದರೆ ಎಪಿಎಂಸಿ ಅಧಿಕಾರಿಗಳು ಹಾಗು ಏಜೆಂಟ್ಗಳು ಇಲ್ಲ. ನಿಮ್ಮ ಸಮಸ್ಯೆಗಳನ್ನು ಆಲಿಸಿ ಪರಿಹರಿಸಲು ನಾವು ಬಂದಿದ್ದೇವೆ ಎಂದು ಉಪ ಲೋಕಾಯುಕ್ತ ವೀರಪ್ಪ ರೈತರಿಗೆ ತಿಳಿಸಿದರು. ಪಟ್ಟಣದ ವಿವಿಧ ಸರ್ಕಾರಿ ಕಚೇರಿಗಳಿಗೆ ಸೋಮವಾರ ಅನಿರೀಕ್ಷಿತ ಭೇಟಿ ನೀಡಿ ಮಾತನಾಡಿದರು.ಇದೇ ಸಮಯದಲ್ಲಿ ರೈತರಾದ ತಿನ್ನಲಿ ರಾಮಚಂದ್ರಾರೆಡ್ಡಿ, ದೇವರಾಜ್ ನಮ್ಮ ಬಳಿ ಕಮೀಷನ್ 10 ರೂ ಪಡೆಯುತ್ತಾರೆ. ಆದರೆ ನಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಅಧಿಕಾರಿಯ ಬಗ್ಗೆ ದೂರಿದರು. ರೈತ ದೇವರೆಡ್ಡಿಹಳ್ಳಿ ಮಾರಪ್ಪರೆಡ್ಡಿ ಮಾತನಾಡಿ ಅಮೀರ್ಜಾನ್ ಎಂಬುವವರಿಗೆ […]
ಶ್ರೀನಿವಾಸಪುರ : ಗ್ರಾಮದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಈ ಮಹಾದ್ವಾರ ನಿರ್ಮಾಣ ಮಾಡಿರುವಂಥದ್ದು ತುಂಬಾ ಸಂತೋಷದ ವಿಷಯ ಒಂದು ಮನೆಗೆ ಮುಖ್ಯ ಬಾಗಿಲು ಎಷ್ಟು ಮುಖ್ಯವೋ ಗ್ರಾಮಕ್ಕೆ ಅದೇ ರೀತಿ ಮಹಾದ್ವಾರ ಅಷ್ಟೆ ಮುಖ್ಯ ಎಲ್ಲರೂ ಒಗ್ಗಟ್ಟಿನಿಂದ ಸಂತೋಷವಾಗಿರುವುದನ್ನು ಕಂಡು ತುಂಬಾ ಸಂತೋಷವಾಗುತ್ತಿದ್ದು ಇದೇ ರೀತಿಯಾಗಿ ಎಲ್ಲಾ ಗ್ರಾಮಗಳಲ್ಲಿಯೂ ಸಹ ಅಣ್ಣ ತಮ್ಮಂದಿರಂತೆ ಅಕ್ಕ ತಂಗಿಯರಂತೆ ಸೌಹಾರ್ದತೆಯಿಂದ ಬದುಕಬೇಕು ಎಂದು ತಹಶೀಲ್ದಾರ್ ಜಿ.ಎನ್.ಸುದೀಂದ್ರ ತಿಳಿಸಿದರು.ತಾಲೂಕಿನ ಬಂಗವಾದಿ ಗ್ರಾಮದಲ್ಲಿ ಭಾನುವಾರ ನಡೆದ ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯ ಜೀರ್ಣೋದ್ಧಾರ ಹಾಗೂ […]
ಶ್ರೀನಿವಾಸಪುರ : ದೇಶದ ಅತಿ ದೊಡ್ಡ ಮಾವು ಉತ್ಪಾದನಾ ಕ್ಷೇತ್ರವಾಗಿ ಪ್ರಸಿದ್ಧಿ ಪಡೆದಿರುವ ಶ್ರೀನಿವಾಸಪುರದಲ್ಲಿನ ಮಾವಿನ ಮಾರುಕಟ್ಟೆ ಈ ವರ್ಷದ ಮೇ 15ರಿಂದ ಅಧಿಕೃತವಾಗಿ ಆರಂಭಗೊಳ್ಳಲಿದೆ. ಈಗಾಗಲೇ ತಯಾರಿ ಕಾರ್ಯಗಳು ತೀವ್ರಗೊಂಡಿದ್ದು, ಎಪಿಎಂಸಿ ಹಾಗೂ ಖಾಸಗಿ ಮಾರುಕಟ್ಟೆಗಳ ಮಾಲೀಕರು, ರೈತರು ಮತ್ತು ವ್ಯಾಪಾರಸ್ಥರು ಸಜ್ಜಾಗುತ್ತಿದ್ದಾರೆ. ತಾಲೂಕಿನಲ್ಲಿ ಸುಮಾರು 57 ಸಾವಿರ ಎಕರೆ ಭಾಗದಲ್ಲಿ ಮಾವು ಬೆಳೆಯಲಾಗುತ್ತಿದೆ. ಈ ಹಿನ್ನೆಲೆ ಶ್ರೀನಿವಾಸಪುರ ‘ಮಾವಿನ ನಾಡು’, ‘ಮಾವಿನ ರಾಜಧಾನಿ’ ಎಂಬ ಹೆಸರನ್ನು ಸಂಪೂರ್ಣವಾಗಿ ಸ್ಥಾಪಿಸಿಕೊಂಡಿದೆ. ಇಲ್ಲಿನ ಮಾವಿಗೆ ರಾಜ್ಯದಷ್ಟೇ ಅಲ್ಲದೆ […]
ಶ್ರೀನಿವಾಸಪುರ. ಮೆ..1: ಕಾರ್ಮಿಕರ ಬೆವರ ಹನಿ ಮಾಸುವ ಮುನ್ನ ದುಡಿಮೆಯ ಹಣವನ್ನು ಕಾರ್ಮಿಕರಿಗೆ ಪಾವತಿಸುವ ಜೊತೆಗೆ ಕಾರ್ಮಿಕರ ಇಲಾಖೆಯಲ್ಲಿ ನಕಲಿ ದಾಖಲೆ ಸೃಷ್ಟಿ ಮಾಡಿ, ಕೋಟಿ ಕೋಟಿ ಲೂಟಿ ಮಾಡುವ ದಲ್ಲಾಳಿಗಳ ಹಾವಳಿಗೆ ಕಡಿವಾಣ ಹಾಕಬೇಕೆಂದು ರಾಜ್ಯ ರೈತ ಸಂಘದ ಮಹಿಳಾ ಜಿಲ್ಲಾಧ್ಯಕ್ಷ ಎ.ನಳಿನಿಗೌಡ ಸರ್ಕಾರಗಳನ್ನು ಒತ್ತಾಯಿಸಿದರು.ವಿಶ್ವ ಕಾರ್ಮಿಕರ ದಿನಾಚರಣೆಯನ್ನು ಪ್ರಗತಿಪರ ರೈತ ಮಹಿಳೆ ಸಶೀಲ ರವರು ಕೃಷಿ ಭೂಮಿಯಲ್ಲಿ ದುಡಿಯುವ ರೈತ ಮಹಿಳೆಯರಿಗೆ ಸಿಹಿ ಹಂಚಿ ಮಾತನಾಡಿದ ರವರು, ಕೃಷಿ ಕ್ಷೇತ್ರದಿಂದ ಪ್ರಾರಂಭವಾಗುವ ಕಾರ್ಮಿಕರ ದುಡಿಮೆ […]
ಕೋಲಾರ:- ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ರಾಜ್ಯ ಸರ್ಕಾರದ ಎರಡು ವರ್ಷಗಳ ಸಾಧನೆ ಸಮಾವೇಶವನ್ನು ದೇವನಹಳ್ಳಿಯಲ್ಲಿ ನಡೆಸಲಾಗಿದ್ದು,ಈ ಸಂದರ್ಭದಲ್ಲಿ ಇಡೀ ಸಂಪುಟದಲ್ಲೇ ಉತ್ತಮ ಸಾಧನೆ ತೋರಿರುವ ರಾಜ್ಯ ಆಹಾರ ಮತ್ತು ನಾಗರೀಕ ಸರಬರಾಜು, ಗ್ರಾಹಕ ಸಚಿವ ಕೆ.ಎಚ್.ಮುನಿಯಪ್ಪ ಅವರನ್ನು ಮುಖ್ಯಮಂತ್ರಿಗಳು ಸನ್ಮಾನಿಸಿದರು.ದೇವನಹಳ್ಳಿಯಲ್ಲಿ ನಡೆದ ರಾಜ್ಯ ಸರ್ಕಾರದ 2 ವರ್ಷಗಳ ಸಾಧನಾ ಸಮಾವೇಶದಲ್ಲಿ ರಾಜ್ಯ ಸಂಪುಟದ 36 ಸಚಿವರಲ್ಲಿ ಉತ್ತಮ ಸಾಧನೆ ತೋರಿರುವ ಹಿನ್ನಲೆಯಲ್ಲಿ ಮುಖ್ಯಮಂತ್ರಿಗಳು ಕೆ.ಎಚ್.ಮುನಿಯಪ್ಪರನ್ನು ಸನ್ಮಾನಿಸಿದರು.ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿಯಾಗಿ ಜಿಲ್ಲೆಯ ಎಲ್ಲಾ ಶಾಸಕರನ್ನು ಸಮನ್ವಯತೆಯಿಂದ ನಡೆಸಿಕೊಂಡಿರುವ […]
ಶ್ರೀನಿವಾಸಪುರ: ಪಟ್ಟಣದ ವಾರ್ಡ್ ಸಂಖ್ಯೆ 16 ಮತ್ತು 17ರಲ್ಲಿ ನೀರಿನ ತೀವ್ರ ಸಮಸ್ಯೆ ಉಂಟಾಗಿದ್ದು, ಸಮರ್ಪಕವಾಗಿ ಕುಡಿಯುವ ನೀರನ್ನು ಸರಬರಾಜು ಮಾಡದೆ ಇದ್ದ ಕಾರಣವಾಗಿ ವಾರ್ಡ್ನ ಮಹಿಳೆಯರು ಮತ್ತು ಪುರುಷರು ಸೇರಿ 50ಕ್ಕೂ ಹೆಚ್ಚು ಮಂದಿ ಪುರಸಭೆಗೆ ತೆರಳಿ ನೀರು ಸಮಸ್ಯೆ ಪರಿಹರಿಸಲು ಒತ್ತಾಯಿಸಿದರು. ಇತ್ತೀಚೆಗೆ ಪುರಸಭೆ ವತಿಯಿಂದ ಹೊಸದಾಗಿ ಕೊಲ್ವೇ ಬಾವಿಯನ್ನು ಕೊರೆಸಿದರೂ ಸಹ, ಸಮರ್ಪಕ ನೀರು ಸರಬರಾಜಿನಲ್ಲಿ ತಾರತಮ್ಯ ನಡೆಯುತ್ತಿದೆ ಎಂದು ಆರೋಪಿಸಿದರು. ಪುರಸಭೆ ಸದಸ್ಯ ಶಬ್ಬೀರ್ ಖಾನ್ ನೇತೃತ್ವದಲ್ಲಿ ನಿವಾಸಿಗಳು ಪ್ರತಿಭಟನೆ ನಡೆಸಿ […]
ಶ್ರೀನಿವಾಸಪುರ : ಇಲ್ಲಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಬುಧವಾರ ಧನ್ವಂತರಿ, ಗಣಪತಿ ಹಾಗೂ ಆಂಜನೇಯ ದೇವಾಲಯಗಳ ಪ್ರತಿಷ್ಠಾಪನಾ ಕಾರ್ಯಕ್ರಮ ಧಾರ್ಮಿಕ ಶ್ರದ್ಧೆ ಮತ್ತು ಸಾಂಸ್ಕೃತಿಕ ಸಂಭ್ರಮದೊಂದಿಗೆ ಜರುಗಿತು. ಪುರೋಹಿತರಾದ ಎಚ್.ಎನ್. ರಾಮೋಜಿಚಾರ್ ಮತ್ತು ಹರೀಶ್ ಅವರ ನೇತೃತ್ವದಲ್ಲಿ ಶಾಸ್ತ್ರೋಕ್ತ ವಿಧಿ ವಿಧಾನಗಳಂತೆ ಪ್ರತಿಷ್ಠಾಪನಾ ಕೈಂಕರ್ಯ ನೆರವೇರಿತು. ಈ ದೈವಿಕ ಕಾರ್ಯಕ್ರಮದ ಭಾಗವಾಗಿ ವೈದ್ಯರು ಹಾಗೂ ಸಿಬ್ಬಂದಿ ದೇವರ ದರ್ಶನ ಪಡೆದು ಆಶೀರ್ವಾದ ಸ್ವೀಕರಿಸಿದರು. ಪ್ರತಿಷ್ಠಾಪನೆಗೆ ಶ್ರಮಿಸಿದ ಆಸ್ಪತ್ರೆಯ ಸಿಬ್ಬಂದಿಗೆ ವಿಶ್ವಕರ್ಮ ಸಮುದಾಯದ ತಾಲೂಕು ಅಧ್ಯಕ್ಷರಾದ ಕೆ. […]
ಶ್ರೀನಿವಾಸಪುರ: ಬೆಂಗಳೂರು ಅರಮನೆ ಮೈದಾನದಲ್ಲಿ ಬಹುಭವ್ಯವಾಗಿ ನಡೆದ ರಾಜ್ಯಮಟ್ಟದ ಡಿಜಿ ಇಮೇಜ್ ವಸ್ತು ಪ್ರದರ್ಶನ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ಜನಸಾಗರದ ನಡುವೆ ಅದ್ಧೂರಿಯಾಗಿ ನೆರವೇರಿತು. ರಾಜ್ಯದ ಮೂಲೆಮೂಲೆಗಳಿಂದ ಆಯ್ಕೆಗೊಂಡ ಪ್ರತಿಭಾನ್ವಿತ ಛಾಯಾಗ್ರಾಹಕರಿಗೆ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. ಈ ಹೆಮ್ಮೆಮಯ ಸಂದರ್ಭದಲ್ಲಿ ಶ್ರೀನಿವಾಸಪುರ ಪಟ್ಟಣದ ಹೆಸರನ್ನು ಉಜ್ವಲಗೊಳಿಸಿದವರು ಶ್ರೀ ವಿನಾಯಕ ಡಿಜಿಟಲ್ ಸ್ಟುಡಿಯೋ (ಎಸ್ ಬಿ ಐ ಬ್ಯಾಂಕ್ ಹತ್ತಿರ, ಎಂ.ಜಿ.ರಸ್ತೆ ) ಇದರ ಮಾಲಿಕ ವೇಣುಗೋಪಾಲ ರೆಡ್ಡಿ. ತಮ್ಮ ದೀರ್ಘಕಾಲದ ಛಾಯಾಗ್ರಹಣ ಸೇವೆ, ಕಲಾತ್ಮಕ ದೃಷ್ಟಿಕೋನ […]
ಶ್ರೀನಿವಾಸಪುರ : ದುಖಃ ದುಮ್ಮಾನಗಳನ್ನು ದೂರವಿಟ್ಟುಕೊಳ್ಳಲು ಹಾಗೂ ಸಂತುಷ್ಟ ಜೀವನಕ್ಕಾಗಿ ಯೋಗ ಜೀವನ ಪ್ರತಿಯೊಬ್ಬರಿಗೂ ಇಂದು ಅತ್ಯವಶ್ಯಕವಾಗಿದೆ ಎಂದು ಸ ನೌ ಸಂ ಅಧ್ಯಕ್ಷ ಎಂ. ಭೈರೇಗೌಡ ಹೇಳಿದ್ದಾರೆ.ಪಟ್ಟಣದ ಯೋಗ ಮಂದಿರದಲ್ಲಿ ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ಆಯೋಜಿಸಿದ್ದ ಮಾತೃ ಭೋಜನ ಹಾಗೂ ಮಾತಾಪಿತೃಗಳ ಪಾದಪೂಜೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ತಾಯಂದಿರು ಮಕ್ಕಳನ್ನು ಭ್ರಾತೃತ್ವದ ಭಾವನೆಯಿಂದ ಬೆಳೆಸಿದರೆ, ಮಕ್ಕಳಲ್ಲಿ ಸಂಸ್ಕಾರ ಬೆಳೆದು, ಉತ್ತಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ ಎಂದರು.ಅವರು ಮುಂದುವರೆದು ಮಕ್ಕಳಿಗೆ ಆಟ, ಪಾಠಗಳೊಂದಿಗೆ ದೈನಂದಿನ ದೈಹಿಕ […]

