ಶ್ರೀನಿವಾಸಪುರ: ಸಾರ್ವಜನಿಕರು ಪ್ಲಾಸ್ಟಿಕ್ ಮುಕ್ತ ಪಟ್ಟಣವನ್ನಾಗಿ ಮಾಡಲು ಸಹಕರಿಸಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ ಹೇಳಿದರು.ಪಟ್ಟಣದ ಪುರಸಭೆ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಪ್ಲಾಸ್ಟಿಕ್ ಮುಕ್ತ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ಲಾಸ್ಟಿಕ್ ಜಾನುವಾರುಗಳ ಪಾಲಿಗೆ ಯಮಪಾಷವಾಗಿದೆ. ಪಟ್ಟಣದಲ್ಲಿ ಸ್ವಚ್ಛ ಪರಿಸರ ನಿರ್ಮಾಣಕ್ಕೆ ಅಡ್ಡಿಯಾಗಿದೆ ಎಂದು ಹೇಳಿದರು.ಪುರಸಭೆ ಆರೋಗ್ಯ ನಿರೀಕ್ಷಕ ಕೆ.ಜಿ.ರಮೇಶ್ ಮಾತನಾಡಿ, ಸಾರ್ವಜನಿಕರು ಪ್ಲಾಸ್ಟಿಕ್ ಕವರ್‍ಗೆ ಬದಲಾಗಿ ಬಟ್ಟೆ ಚೀಲ ಬಳಸಬೇಕು. ಮಾಂಸ, ಮೀನು ಖರೀದಿಸಿ ಕೊಂಡೊಯ್ಯಲು ಸ್ಟೀಲ್ ಕ್ಯಾರಿಯರ್ ಬಳಸುವುದು ಕ್ಷೇಮಕರ. ಪ್ಲಾಸ್ಟಿಕ್ ವಸ್ತು ಸುಡುವುದರಿಂದ […]
ಕೋಲಾರ ತಾಲ್ಲೂಕಿನ ಹೊಗರಿ ಗೊಲ್ಲಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಶಿಕ್ಷಕ ಹಾಗೂ ದಾನಿ ಎಸ್.ಆರ್.ಧರ್ಮೇಶ್ ಸಮವಸ್ತ್ರ ನೀಡಿದರು.ಕೋಲಾರ: ಪ್ರತಿಯೊಬ್ಬರೂ ಮಕ್ಕಳಲ್ಲಿ ದೇವರನ್ನು ಕಾಣಬೇಕು. ಅವರ ಶೈಕ್ಷಣಿಕ ಅಭಿವೃದ್ಧಿಗೆ ಕೈಲಾದ ನೆರವು ನೀಡಬೇಕು ಎಂದು ಶಿಕ್ಷಕ ಹಾಗೂ ದಾನಿ ಎಸ್.ಆರ್.ಧರ್ಮೇಶ್ ಹೇಳಿದರು.ತಾಲ್ಲೂಕಿನ ಹೊಗರಿ ಗೊಲ್ಲಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಿ ಮಾತನಾಡಿದ ಅವರು, ಸರ್ಕಾರಿ ಶಾಲೆಗಳಲ್ಲಿ ಓದುವ ಹೆಚ್ಚಿನ ಸಂಖ್ಯೆಯ ಮಕ್ಕಳು ಬಡ ಕುಟುಂಬಗಳಿಗೆ ಸೇರಿದವರಾಗಿದ್ದಾರೆ. ಅವರಿಗೆ ಸರ್ಕಾರದಿಂದ […]
ಕೋಲಾರ : ಕೋಲಾರ ಜಿಲ್ಲೆಯ ಎಲ್ಲಾ ತಾಲ್ಲೂಕಿನಲ್ಲಿ ಜುಲೈ 17 , 2023 ರಿಂದ 24 , 2023 ರವರೆಗೆ ಆಟೋ ಪ್ರಚಾರ ಮೂಲಕ ಬಾಲ ಕಾರ್ಮಿಕ ಅನಿಷ್ಠ ಪದ್ದತಿಯನ್ನು ನಿರ್ಮೂಲನೆ ಮಾಡಲು ಜನ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು , ಈ ಸಂಬಂಧ ಇಂದು ಅಕ್ರಂ ಪಾಷ ಜಿಲ್ಲಾಧಿಕಾರಿಗಳು ಹಾಗೂ ಅಧ್ಯಕ್ಷರು , ಬಾಲಕಾರ್ಮಿಕ ಯೋಜನಾ ಸೊಸೈಟಿ , ಕೋಲಾರ ಜಿಲ್ಲೆ , ಕೋಲಾರ ಹಾಗೂ ಶ್ರೀಮತಿ ಪದ್ಮ ಬಸವಂತಪ್ಪ , ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ […]
ಶ್ರೀನಿವಾಸಪುರ: ತಾಲ್ಲೂಕಿನ ಕಲ್ಲೂರು ಗ್ರಾಮದಲ್ಲಿ ಭಾನುವಾರ ನೂತನವಾಗಿ ಪ್ರತಿಷ್ಠಾಪಿಸಲಾಗಿದ್ದ ನವನಾಗ ದೇವತಾ ವಿಗ್ರಹಕ್ಕೆ ಮಂಡಲ ಪೂಜೆ ಏರ್ಪಡಿಸಲಾಗಿತ್ತು.ಪೂಜಾ ಕಾರ್ಯಕ್ರಮದ ಅಂಗವಾಗಿ ಹಲವಾರು ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ನವನಾಗ ವಿಗ್ರಹಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು. ಶ್ರೀನಿವಾಸಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ಭಕ್ತರು ನಾಗ ದೇವತೆ ದರ್ಶನ ಪಡೆದರು.ಗ್ರಾಮದ ಹಿರಿಯ ಬಚ್ಚಿರೆಡ್ಡಿ ಮಾತನಾಡಿ, ಗ್ರಾಮದ ಪುರಾತನ ಚೌಡೇಶ್ವರಿ ದೇವಾಲಯ ಪ್ರಸಿದ್ಧಿ ಪಡೆದಿದೆ. ಹಾಗೆಯೇ ನವನಾಗ ದೇವತೆ ದೇವಾಲಯವೂ ನಾಗರಿಕರ ಗಮನ ಸೆಳೆದಿದೆ. ಹೆಚ್ಚಿನ ಸಂಖ್ಯೆಯ ಜನರು […]
ಶ್ರೀನಿವಾಸಪುರ : ಪಟ್ಟಣದ ನಾನಾ ಕಡೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಜನಸಾಮಾನ್ಯರು ಒಬ್ಬಂಟಿಯಾಗಿ ಓಡಾಡುವುದು ಕಷ್ಟಕರವಾಗಿದೆ. ಮೊಹಲ್ಲಾ , ಗಲ್ಲಿಗಳಲ್ಲಿ ತಿರುಗಾಡುತ್ತಿರುವ ಬೀದಿ ನಾಯಿಗಳ ಚಿಕ್ಕ ಮಕ್ಕಳು ಮೇಲೆ, ವಾಹನ ಸವಾರರ ಮೇಲೆ ದಾಳಿ ಮಾಡುತ್ತವೆ. ಕೆಲ ನಾಯಿಗಳು ಬೈಕ್, ಕಾರುಗಳ ಹಿಂದೆ ಓಡಿ ಬರುತ್ತಿರುವ ಪರಿಣಾಮ ವಾಹನ ಸವಾರರು ಆತಂಕ ಪಡಬೇಕಾಗಿದೆ. ರಸ್ತೆಯಲ್ಲಿ ಚಿಕ್ಕ ಮಕ್ಕಳು, ವಯೋವೃದ್ಧರು ಸಂಚಾರ ಮಾಡಲು ಹಿಂದೇಟು ಹಾಕುವಂತಾಗಿದೆ. ರಾತ್ರಿ ವೇಳೆ ಗಫರ್ ಖಾನ್ ಮೊಹಲ್ಲಾ, ಜಾಕಿರ್ ಹುಸೇನ್ ಮೊಹಲ್ಲಾ, […]
ಕೋಲಾರ,ಜು.15: ಏಡ್ಸ್ ಎಂಬ ವ್ಯಾದಿಯನ್ನು ಸಮಾಜದಿಂದ ಸಂಪೂರ್ಣ ಸಂಹಾರ ಮಾಡುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಬದ್ಧತೆಯಿಂದ ಕಾರ್ಯನಿರ್ವಹಿಸಬೇಕೆಂದು, ರಾಜ್ಯ ಏಡ್ಸ್ ನಿಯಂತ್ರಣ ಸಂಘದ ಯೋಜನಾ ನಿರ್ದೇಶಕರು ಆಗಿರುವ ಐ.ಎ.ಎಸ್.ಅಧಿಕಾರಿ ಎನ್.ಎಂ.ನಾಗರಾಜ ಅವರು ಸೂಚಿಸಿದರು.ನಗರದ ಎಸ್.ಎನ್.ಆರ್.ಆಸ್ಪತ್ರೆಗೆ ದಿಢೀರ್ ಭೇಟಿನೀಡಿ ಇಲ್ಲಿನ ಏಡ್ಸ್ ನಿಯಂತ್ರಣ ವಿಭಾಗ, ಎ.ಆರ್.ಟಿ.ಕೇಂದ್ರ, ಬ್ಲಡ್ ಬ್ಯಾಂಕ್ ಮತ್ತು ಪಿ.ಪಿ.ಟಿ.ಸಿ ಕೇಂದ್ರಗಳನ್ನು ಪರಿಶೀಲಿಸಿ, ದಾಖಲೆಗಳನ್ನು ವೀಕ್ಷಿಸಿ, ವೈದ್ಯಾಧಿಕಾರಿಗಳು, ತಜ್ಞ ಸಿಬ್ಬಂದಿ ಹಾಗೂ ನೌಕರರೊಡನೆ ಸಮಾಲೋಚನೆ ನಡೆಸಿದರು.ಜಿಲ್ಲೆಯಲ್ಲಿ ಏಡ್ಸ್ ಹಬ್ಬುವಿಕೆಯಲ್ಲಿ ಗಣನೀಯವಾಗಿ ಇಳಿಕೆಯಾಗಿದ್ದು, ಇದನ್ನು ಕೆಲವೇ ವರ್ಷಗಳಲ್ಲಿ ಶೂನ್ಯಕ್ಕೆ […]
ಶ್ರೀನಿವಾಸಪುರ 1 : ದೇಶಕ್ಕೆ ಬೆನ್ನೆಲುಬಾದ ಆರೋಗ್ಯವಂತ ಯುವಕರೇ ದೇಶದ ಆಸ್ತಿ , ದೇಶವು ಪ್ರಗತಿಯತ್ತಾ ಸಾಗಲು ಯುವ ಜನತೆ ಸತ್ಪ್ರಜೆಗಳಾದ ಮಾತ್ರ ಸಾಧ್ಯ . ಆದ್ದರಿಂದ ಆರೋಗ್ಯವಂತ ಸಮಾಜಕ್ಕೆ ಯುವ ಸಮುದಾಯ ಇರಲೇಬೇಕು ಎಂದು ಪಿಡಿಒ ನರೇಂದ್ರಬಾಬು ಹೇಳಿದರು.ರಾಯಲ್ಪಾಡು ಪ್ರೌಡಶಾಲೆಯಲ್ಲಿ ಗುರುವಾರ ಹೋಬಳಿಯ ಮಟ್ಟದ 2023-24 ನೇ ಸಾಲಿನ 6 ದಿನಗಳ ಕ್ರೀಡಾಕೂಟದ ಪೂರ್ವಭಾವಿ ಸಭೆಯನ್ನು ಉದ್ಗಾಟಿಸಿ ಮಾತನಾಡಿದರು.ಮಕ್ಕಳಿಗೆ ಶಿಕ್ಷಣದ ಜೊತೆಗೆ ಕ್ರೀಡೆಯು ಒಂದು ಅವಿಬಾಜ್ಯ ಅಂಗ ಕ್ರೀಡೆಯಲ್ಲಿ ಪಾಲ್ಗೂಳ್ಳುವುದರಿಂದ ವಿದ್ಯಾರ್ಥಿಗಳಿಗೆ ಓದುವುದಕ್ಕೆ ಮನಸ್ಸು ಉಲ್ಲಾಸವಾಗಿ […]
ಶ್ರೀನಿವಾಸಪುರ : ಬೆಂಗಳೂರಿನ ವಿಜಯ ಮೈನ್ಸ್ ಕಾಲೇಜುವತಿಯಿಂದ ಗುರುವಾರ ನಡೆದ ಸೈನ್ಸ್ ಕ್ಲೇ ಸ್ಪರ್ಧೆಯಲ್ಲಿ ಹಾಗು ಸೈನ್ಸ್ ಡಂಬ್‍ಷರಾಡ್ಸ್ ನಲ್ಲಿ ಪ್ರಥಮ ಬಹುಮಾನವನ್ನು ರಾಯಲ್ಪಾಡಿನ ಸಿ.ವಿ.ಸವಿತಾ ನೇತೃತ್ವದ ತಂಡ ಹರ್ಷಿತಾ, ಕೃಪಾವತಿ, ನೇತ್ರಾವತಿ, ಕಿರಣ್‍ಕುಮಾರ್ ರವರಿಗೆ ಪ್ರಾಂಶುಪಾಲರಾದ ಕೆ.ಎಸ್.ಶೈಲಜಾ ಬಹುಮಾನವನ್ನು ನೀಡಿ ಶುಭಕೋರಿದರು . ಉಪನ್ಯಾಸಕರಾದ ಡಾ. ಸುರೇಶ್, ಮೇಘನಾ, ಪ್ರಿಯದರ್ಶಿನಿ , ಜ್ಯೋತಿ, ಚೈತ್ರ , ಜೈಬಾ ಇದ್ದರು.
ವಿಕಲಚೇತನರಿಗಿಂತ ಹೆಚ್ಚಾಗಿ ಸಭ್ಯ ಸಮಾಜಕ್ಕೆ ಸುಲಭಲಭ್ಯತೆಯ ಕುರಿತು ಬೋಧಿಸಬೇಕಾದ ಅಗತ್ಯತೆ ಇದೆ: ಸಿ.ಎಸ್ ದ್ವಾರಕಾನಾಥ್ ‘ಸೇ ಎಸ್ ಟು ಆಕ್ಸೆಸ್’ ಅಭಿಯಾನದ ಪೋಸ್ಟರ್ ಬಿಡುಗಡೆ ‘ಎಪಿಡಿ’ಯಿಂದ ಮೂರು ದಿನಗಳ ರಾಜ್ಯಮಟ್ಟದ ಆಕ್ಸೆಸಿಬಿಲಿಟಿ ಕಾರ್ಯಾಗಾರಕ್ಕೆ ಚಾಲನೆ ಬೆಂಗಳೂರು: ವಿಕಲಚೇತನರ ಊನತೆಗಳನ್ನೇ ಕುಂಟ, ಕುರುಡ ಎಂದು ಬೈಗುಳಗಳನ್ನಾಗಿ ಪರಿವರ್ತಿಸಿಕೊಂಡಿರುವ ಸಭ್ಯ ಸಮಾಜಕ್ಕೆ ಇವತ್ತು ಸುಲಭ ಲಭ್ಯತೆಯ ಕುರಿತು ತಿಳಿ ಹೇಳಬೇಕಾದ ಅಗತ್ಯತೆ ಇದೆ ಎಂದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರಾದ ಡಾ. ಸಿ.ಎಸ್. ದ್ವಾರಕಾನಾಥ್‌ರವರು ಹೇಳಿದರು. ಅವರು ಬೆಂಗಳೂರಿನ […]

