ಶ್ರೀನಿವಾಸಪುರ: ಪಟ್ಟಣದ ಎಂಜಿ ರಸ್ತೆಯಲ್ಲಿ ಬೈಕ್‍ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮವಾಗಿ ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಗುರುವಾರ ನಡೆದಿದೆ.ಪಟ್ಟಣದ ರಕ್ಷಿತ್ (30) ಮೃತ ವ್ಯಕ್ತಿ.ಲಾರಿ ಚಾಲಕ ಲಾರಿಯನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ. ಪೊಲೀಸರು ಲಾರಿ ವಶಕ್ಕೆ ಪಡೆದು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.

Read More

ಶ್ರೀನಿವಾಸಪುರ: ಪಟ್ಟಣದ ಹೊರವಲಯದ ಅರಣ್ಯದಲ್ಲಿ ಗುರುವಾರವೂ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರಿಸಲಾಗಿತ್ತು. ಅರಣ್ಯ ಒತ್ತುವರಿ ಮಾಡಿಕೊಂಡು ಬೆಳೆಯಲಾಗಿದ್ದ ಮರಗಳನ್ನು ಜೆಸಿಬಿ ಬಳಸಿ ತೆರವುಗೊಳಿಸಲಾಯಿತು.ತೆರವುಗೊಳಿಸಲಾದ ಪ್ರದೇಶದ ಸುತ್ತ ಕಂದಕ ನಿರ್ಮಾಣ ಹಾಗೂ ಮಾವಿನ ಮರ ತೆರವುಗೊಳಿಸಿದ ಪ್ರದೇಶದಲ್ಲಿ ನೇರಳೆ, ಆಲ, ಬಿದಿರು, ಶ್ರೀಗಂಧ, ಬೇವು ಮತ್ತಿತರ ಜಾತಿಯ ಗಿಡ ನೆಡುವ ಕಾರ್ಯ ಭರದಿಂದ ಸಾಗಿತ್ತು. ಅರಣ್ಯ ಇಲಾಖೆ ನೇಮಿಸಿಕೊಂಡಿರುವ ದೊಡ್ಡ ಸಂಖ್ಯೆಯ ಕೂಲಿ ಕಾರ್ಮಿಕರು ಗಿಡ ನೆಟ್ಟು ನೀರು ಹಾಕುವ ಕಾರ್ಯದಲ್ಲಿ ನಿರತರಾಗಿದ್ದರು.‘ಇಂದು 120 ಎಕರೆ ಅರಣ್ಯ ಒತ್ತುವರಿ […]

Read More

ಶ್ರೀನಿವಾಸಪುರ : ಚಂದ್ರನ ದಕ್ಷಿಣ ಧ್ರುವದಲ್ಲಿ ನೌಕೆಯನ್ನು ಇಳಿಸಿದಂತಹ ಪ್ರಥಮ ರಾಷ್ಟ್ರವಾಗಿ ಭಾರತ ಹೊರಹೊಮ್ಮಿದೆ . ಇಡೀ ವಿಶ್ವದಲ್ಲೇ ಚಂದ್ರನ ಮೇಲೆ ನೌಕೆ ಇಳಿಸಿದಂತಹ ರಾಷ್ಟ್ರ. ಅಮೇರಿಕಾ , ಚೀನಾ, ರಷ್ಯಾ ದೇಶಗಳ ನಂತರ ನಮ್ಮ ದೇಶವು ಚಂದ್ರನ ಮೇಲೆ ವಿಕ್ರಂ-3 ಎಂಬ ನೌಕೆಯನ್ನು 42 ದಿನಗಳ ನಂತರ ಯಶಸ್ವಿಯಾಗಿ ಇಳಿಸಿದೆ. ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಡಾ|| ಎನ್.ವೇಣುಗೋಪಾಲ್ ಹೇಳಿದರು.ಪಟ್ಟಣದ ಇಂದಿರಾಭವನ್ ವೃತ್ತದಲ್ಲಿ ತಾಲೂಕು ಬಿಜೆಪಿ ಘಟಕದವತಿಯಿಂದ ನಡೆದ ಸಂಭ್ರಾಮಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದರು.ಇಂತಹ ಸಂದರ್ಭದಲ್ಲಿ ಯಶಸ್ವಿಯಾಗಿ ಕಾರ್ಯಚರಣೆಯನ್ನು […]

Read More

ಶ್ರೀನಿವಾಸಪುರ: ಅರಣ್ಯ ಹಾಗೂ ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ ಪಟ್ಟಣದ ಹೊರವಲಯದಲ್ಲಿ 120 ಎಕರೆ ಅರಣ್ಯ ಒತ್ತುವರಿ ತೆರವುಗೊಳಿಸಿತು.ಪಟ್ಟಣದ ಹೊರವಲಯದ ಅರಣ್ಯ ಒತ್ತುವರಿ ಪ್ರದೇಶಕ್ಕೆ ಬುಧವಾರ ಬೆಳಿಗ್ಗೆ ಸುಮಾರು ಮೂರು ಗಂಟೆ ಸಮಯದಲ್ಲಿ ಜೆಸಿಬಿ ಹಾಗೂ ಇಟಾಚಿಗಳನ್ನು ನುಗ್ಗಿಸಿ, ಕೆಲವರು ಅಕ್ರಮವಾಗಿ ಬೆಳೆಯಲಾಗಿದ್ದ ಮಾವು, ನೇರಳೆ, ಹೊಂಗೆ ಮತ್ತಿತರ ಮರಗಳನ್ನು ಉರುಳಿಸಲಾಯಿತು. ಮಾವಿನ ತೋಟಗಳಲ್ಲಿ ನಿರ್ಮಿಸಲಾಗಿದ್ದ 3 ಕೃಷಿ ಹೊಂಡ, ನಿರ್ಮಾಣ ಹಂತದಲ್ಲಿದ್ದ 2 ಕೋಳಿ ಫಾರಂ ಹಾಗೂ 3 ಶೆಡ್‍ಗಳನ್ನು ನೆಲಸಮಗೊಳಿಸಲಾಯಿತು.ಕಾರ್ಯಾಚರಣೆಯಲ್ಲಿ 15 ಜೆಸಿಬಿ, […]

Read More

ಶ್ರೀನಿವಾಸಪುರ, ಆ-23, ಬರದಿಂದ ಬಸವಳಿದಿರುವ ಕೃಷಿ, ನೀರಾವರಿ ಪಂಪ್‍ಸೆಟ್‍ಗಳಿಗೆ ಸಮರ್ಪಕ ವಿದ್ಯುತ್ ನೀಡದ ಬೆಸ್ಕಂ ಅಧಿಕಾರಿಗಳ ರೈತ ವಿರೋಧಿ ದೋರಣೆ ಖಂಡಿಸಿ ಗುಣಮಟ್ಟದ 12 ತಾಸು ವಿದ್ಯುತ್ ನೀಡುವಂತೆ ರೈತ ಸಂಘದಿಂದ ಬೆಸ್ಕಂ ಕಚೇರಿ ಮುಂದೆ ತಲೆ ಮೇಲೆ ಕಲ್ಲು ಒತ್ತು ಕಣ್ಣಿಗೆ ಕಪ್ಪು ಕಟ್ಟಿಕೊಂಡು ಹೋರಾಟ ಮಾಡಿ ಬೆಸ್ಕಂ ಅಧಿಕಾರಿಗಳಿಗೆ ಮನವಿ ನೀಡಿ ಒತ್ತಾಯಿಸಲಾಯಿತು.ಮುಂಗಾರು ಮಳೆ ಅಭಾವ ನೆಪದಲ್ಲಿ ಬೆಸ್ಕಂ ಅಧಿಕಾರಿಗಳು ಕೃಷಿ ಚಟುವಟಿಕೆಗಳಿಗೆ ಅಗತ್ಯ ವಿರುವ 12 ತಾಸು ವಿದ್ಯುತ್ ನೀಡದೆ ಲೋಡ್ ಷೆಡ್ಡಿಂಗ್ […]

Read More

ಶ್ರೀನಿವಾಸಪುರ: ತಾಲ್ಲೂಕಿನ ಯರ್ರಂವಾರಿಪಲ್ಲಿ ಗ್ರಾಮ ಪಂಚಾಯಿತಿಗೆ ಮಂಗಳವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಎಂ.ಎಸ್.ಸುಗುಣ ಹಾಗೂ ಉಪಾಧ್ಯಕ್ಷರಾಗಿ ನಾಗಮಣಿ ಆಯ್ಕೆಯಾಗಿದ್ದಾರೆ.ಅಧ್ಯಕ್ಷ ಸ್ಥಾನಕ್ಕೆ ಎಂ.ಎಸ್.ಸುಗುಣ, ವೈ.ಆರ್.ಶ್ರೀನಿವಾಸರೆಡ್ಡಿ, ಧರ್ಮ ನಾಮಪತ್ರ ಸಲ್ಲಿಸಿದ್ದರು. ಆದರೆ ವೈ.ಆರ್.ಶ್ರೀನಿವಾಸರೆಡ್ಡಿ ಮತ್ತು ಧರ್ಮ ತಮ್ಮ ನಾಮಪತ್ರ ವಾಪಸ್ ಪಡೆದ ಪರಿಣಾಮವಾಗಿ ಎಂ.ಎಸ್.ಸುಗುಣ ಅವರನ್ನು ಅವಿರೋಧ ಆಯ್ಕೆ ಮಾಡಲಾಯಿತು.ಒಟ್ಟು 16 ಮತಗಳ ಪೈಕಿ 9 ಮತ ಪಡೆದ ನಾಗಮಣಿ ಉಪಾಧ್ಯಕ್ಷರಾಗಿ ಗೆಲುವು ಸಾಧಿಸಿದರು. ಪ್ರತಿಸ್ಪರ್ದಿ ರವಣಮ್ಮ 7 ಮತ ಪಡೆದರು.ಚುನಾವಣಾಧಿಕಾರಿಯಾಗಿ ಕೃಷ್ಣಪ್ಪ, ಪಿಡಿಒ ಸಂಪತ್ […]

Read More

ಶ್ರೀನಿವಾಸಪುರ, ಆ.20: ಲೋಡ್ ಶೆಡ್ಡಿಂಗ್ ಹೆಸರಿನಲ್ಲಿ ಸಮರ್ಪಕ ವಿದ್ಯತ್ ನೀಡದೆ ಬೆಸ್ಕಾ ಅಧಿಕಾರಿಗಳ ರೈತ ವಿರೋದಿ ದೋರಣೆ ಖಂಡಿಸಿ ಗುಣಮಟ್ಟದ 10 ತಾಸು ವಿದ್ಯತ್‍ಗಾಗಿ ಆಗಸ್ಟ್ 23 ರ ಬುಧವಾರ ನಷ್ಟ ಬೆಳೆ ಸಮೇತ ಬೆಸ್ಕಾಂ ಇಲಾಖೆ ಮುತ್ತಿಗೆ ಹಾಕಲು ಪ್ರವಾಸಿ ಮಂದಿರದಲ್ಲಿ ಕರೆದಿದ್ದ ರೈತ ಸಂಘಧ ಸಭೆಯಲ್ಲಿ ತಿರ್ಮಾನಿಸಲಾಯಿತು.ಬರದಿಂದ ಬಸವಳಿದಿರುವ ರೈತರ ಕೃಷಿ ಪಂಪ್‍ಸೆಟ್‍ಗಳಿಗೆ 7 ತಾಸು ವಿದ್ಯುತ್ ಪೂರೈಕೆ ಮಾಡದೆ ರೈತರನ್ನು ಕಂಗೆಡಿಸುತ್ತಿರುವ ಲೋಡ್ ಶೆಡ್ಡಿಂಗ್ ಸೃಷ್ಠಿಸಿರುವ ಬೆಸ್ಕಾಂ ಅಧಿಕಾರಿಗಳ ವಿರುದ್ದ ರೈತ ಸಂಘದ […]

Read More

ಶ್ರೀನಿವಾಸಪುರ: ಶಿಸ್ತು, ಸಮಯ ಪಾಲನೆ ಹಾಗೂ ಪರಿಶ್ರಮ ಇದ್ದಲ್ಲಿ ಸಾಧನೆಯ ಹಾದಿಯಲ್ಲಿ ಸಾಗುವುದು ಸುಲಭವಾಗುತ್ತದೆ ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಏರ್ಪಡಿಸಿದ್ದ ಕಾಲೇಜು ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರಿ ಕಾಲೇಜುಗಳಲ್ಲಿ ಉತ್ತಮ ಶಿಕ್ಷಣ ದೊರೆಯುತ್ತಿದೆ. ವಿದ್ಯಾರ್ಥಿಗಳು ಅದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಹೇಳಿದರು.ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷನಾಗಿ, ಕಾಲೇಜಿನ ಸರ್ವತೋಮುಖ ಅಭಿವೃದ್ಧಿಗೆ ಅಗತ್ಯವಾದ ಸಹಕಾರ ನೀಡುತ್ತೇನೆ. ಗ್ರಾಮೀಣ ಪ್ರದೇಶದಿಂದ ಬರುವ ವಿದ್ಯಾರ್ಥಿಗಳು ಓದಿನಲ್ಲಿ ಹೆಚ್ಚಿನ ಆಸಕ್ತಿ ವಹಿಸಬೇಕು. […]

Read More

ಶ್ರೀನಿವಾಸಪುರ 1 : ವಿದ್ಯಾರ್ಥಿಗಳು ಪ್ರತಿ ದಿನ ಒಳ್ಳೇಯ ಪೌಷ್ಟಿಕ ಆಹಾರವನ್ನು ಪಡೆದು ಯೋಗಬ್ಯಾಸವನ್ನು ಮಡುತ್ತಾ , ಆರೋಗ್ಯವಂತ ಜೀವನವನ್ನು ನಡೆಸುವಂತೆ ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಸಲಹೆ ನೀಡಿದರು.ತಾಲೂಕಿನ ಲಕ್ಷ್ಮೀಪುರ ಪ್ರೌಡಶಾಲೆಯಲ್ಲಿ ಶುಕ್ರವಾರ ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್ ಕಾರ್ಯಕ್ರಮದಲ್ಲಿ ಮೊಟ್ಟೆ ವಿತರಣಾ ಕಾರ್ಯಕ್ರಮವನ್ನು ಉದ್ಗಾಟಿಸಿ ಮಾತನಾಡಿದರು.ಗ್ರಾಮೀಣ ಭಾಗದಲ್ಲಿ ಕಡುಬಡತನದಿಂದ ಇರುವ ವಿದ್ಯಾಥಿಗಳು ಹೆಚ್ಚು ಸರ್ಕಾರಿ ಶಾಲೆಗಳಲ್ಲಿ ಓದುತ್ತಿದ್ದು, ಆ ವಿದ್ಯಾಥಿಗಳ ಕುಟುಂಬಗಳು ಆರ್ಥಿಕವಾಗಿ ಹಿಂದುಳಿದ್ದು, ಆಹಾರಕ್ಕಾಗಿಯೂ ಪರದಾಡುತ್ತಿದ್ದು ಇದರಿಂದ ಮಕ್ಕಳಲ್ಲಿ ಅಪೌಷ್ಟಿಕತೆ ಹೆಚ್ಚುತ್ತಿದೆ ಎಂದು […]

Read More