ಶಿರೂರು: ಟೋಲ್ ಪ್ರವೇಶ ದ್ವಾರದಲ್ಲಿ ಭೀಕರ ಅಂಬುಲೈನ್ಸ್ ಅಪಘಾತ ಮೂವರು ಗಂಭೀರ, ಓರ್ವನ ಸ್ಥಿತಿ ಚಿಂತಾಜನಕವಾಗಿದೆ. ಅಂಬುಲೈನ್ಸ್ ಶರ ವೇಗದಲ್ಲಿ ಬರುತ್ತಿರುವಾಗ ಶಿರೂರು ಟೋಲ್ ಗೇಟಿನ ಸಿಬಂದಿ ಹಾಕಿದ್ದ ಬ್ಯಾರಿಕೇಡ್ ಇಟ್ಟಿದ್ದು, ಅಂಬುಲೈನ್ಸ್ ವೇಗದಿಂದ ಬರುತಿದ್ದ ಅರಿತು ಅದನ್ನು ತ್ವರಿತವಾಗಿ ತೆರವು ಮಾಡಲು ಪ್ರಯತ್ನಿಸುತಿದ್ದ ವೇಳೆ ಅಂಬುಲೈನ್ಸ್ ಚಾಲಕ ವೇಗ ಕಡಿಮೆ ಮಾಡಲು ಪ್ರಯತ್ನಿಸಿದ ವೇಳೆ ಸ್ಕಿಡ್ ಆಗಿ ಸಿಬಂದಿಗೆ ಬಡಿಯಿತು.
ಗ್ರೀನ್ ಇಂಡಿಯಾ ಫೌಂಡೇಶನ್ ಸಹಯೋಗದೊಂದಿಗೆ ರೋಟರಿ ಕುಂದಾಪುರ ದಕ್ಷಿಣ ದ ಆಶ್ರಯದಲ್ಲಿ ಸಾರ್ವಜನಿಕ ರಿಗೆ ಹಾಗೂ ಸಂಘ ಸಂಸ್ಥೆಗಳ ಪ್ರತಿನಿಧಿಗಳಿಗೆ ಅಮೂಲ್ಯ ಗಿಡಮೂಲಿಕೆ ಹಾಗೂ ಹಣ್ಣುಗಳ ಸಸಿಗಳನ್ನು ವಿತರಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು , ರೋಟರಿ ಕುಂದಾಪುರ ದಕ್ಷಿಣ ದ ಅಧ್ಯಕ್ಷ ಸತ್ಯನಾರಾಯಣ ಪುರಾಣಿಕರು ವಹಿಸಿದ್ದರು.ಗ್ರೀನ್ ಇಂಡಿಯಾ ಫೌಂಡೇಶನ್ ಅಧ್ಯಕ್ಷ ಮುನಿಯಾಲ್ ಗಣೇಶ್ ಶೆಣೈ ಅಮೂಲ್ಯ ಸಸಿಗಳಿಂದಾಗುವ ಪ್ರಯೋಜನ ವಿವರಿಸಿದರು. ಸಂಸ್ಥೆಯ ವಿಶ್ವಸ್ಥ ಡಾ.ಉತ್ತಮಕುಮಾರ್ ಶೆಟ್ಟಿ ಫಲಾನುಭವಿಗಳ ವಿವರ ನೀಡಿದರು. ಕಾರ್ಯದರ್ಶಿ ಸಚಿನ್ ನಕ್ಕತ್ತಾಯ ವಂದಿಸಿದರು.
ನಮ್ಮೊಳಗಿನ ಶಕ್ತಿಯನ್ನು ಅರಿಯುವ ತನಕ ನಿಜಕ್ಕೂ ಸಾಧಿಸಲು ಸಾಧ್ಯವಾಗುವುದಿಲ್ಲ ಹಾಗಾಗಿ ನಾವೇನೆಂದು ನಮ್ಮ ಶಕ್ತಿ ಏನೆಂದು ಅರಿತರೆ ನಮ್ಮ ಗುರಿಯನ್ನು ತಲುಪಬಹುದು ಎಂದು ಮಂಗಳೂರು ಇಲ್ಲಿನ ಸೆಂಟರ್ ಫಾರ್ ಇಂಟಿಗ್ರೇಟೆಡ್ ಲರ್ನಿಂಗ್ ಇದರ ಕಾರ್ಯನಿರ್ವಾಹಕ ನಿರ್ದೇಶಕರಾದ ಶ್ರೀಮತಿ ಸಚಿತ ನಂದಗೋಪಾಲ್ ಹೇಳಿದರುಅವರು ಜುಲೈ,15 ರಂದು ಭಂಡರ್ಕಾರ್ಸ್ ಕಾಲೇಜಿನಲ್ಲಿ ಐಚ್ಛಿಕ ಭಾಷೆ ಇಂಗ್ಲಿಷ್ ಪತ್ರಿಕೋದ್ಯಮ ಮನಶಾಸ್ತ್ರ ವಿಭಾಗಗಳು ಸೇರಿ ಆಯೋಜಿಸಿದ್ದ “ಸ್ವಯಂ ಪ್ರತಿಫಲನ” ಎಂಬ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು . ಜೀವನದಲ್ಲಿ ಅನೇಕ ಬಾರಿ ಸೋಲು ಗೆಲುವು […]
ಕುಂದಾಪುರ: ಜುಲೈ 16ರಂದು ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನಲ್ಲಿ ಪ್ರತಿಭಾ ಪ್ರದರ್ಶನ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮವನ್ನು ನಾಗುರಿನ ಸಂದೀಪನ್ ಶಾಲೆಯ ಮುಖ್ಯೋಪಾಧ್ಯಾಯ ವಿಶ್ವೇಶ್ವರ ಅಡಿಗ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ.ಜಿ.ಎಂ.ಗೊಂಡ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.ವೇದಿಕೆಯಲ್ಲಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಪಾಲನಾಧಿಕಾರಿ ಡಾ.ಸರೋಜ ಎಂ.ಉಪಸ್ಥಿತರಿದ್ದರು.
ಕುಂದಾಪುರ: ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣ ಬೆಳೆದುಬಂದರೆ ಜೀವನದಲ್ಲಿ ಏನನ್ನು ಬೇಕಾದರೂ ಸಾಧಿಸಬಹುದು ಎಂದು ಕುಂದಾಪುರದ ಪ್ರಸಿದ್ಧ ವಕೀಲರಾದ ಶ್ರೀ ರವಿ ಶೆಟ್ಟಿ ಮಚ್ಚಟ್ಟುರವರು ಕಾಲೇಜಿನಲ್ಲಿ ವಿದ್ಯಾರ್ಥಿ ಸಂಸತ್ತು ಉದ್ಘಾಟನಾ ಕಾರ್ಯಕ್ರಮದಲ್ಲಿ ಹೇಳಿದರು. ಸೈಂಟ್ ಮೇರಿಸ್ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ನಡೆದ ವಿದ್ಯಾರ್ಥಿ ಸಂಸತ್ತು ಉದ್ಘಾಟನಾ ಕಾರ್ಯಕ್ರಮದಲ್ಲಿ ಕುಂದಾಪುರದ ಪ್ರಸಿದ್ಧ ವಕೀಲರಾದ ಶ್ರೀ ರವಿ ಶೆಟ್ಟಿ ಮಚ್ಚಟ್ಟುರವರು ಮುಖ್ಯ ಅತಿಥಿಯಾಗಿ ಭಾಗವಹಿಸಿ,ಅದ್ದೂರಿಯಾಗಿ ವಿದ್ಯಾರ್ಥಿ ಸಂಸತ್ತು ಉದ್ಘಾಟಿಸಿ ವಿದ್ಯಾರ್ಥಿಗಳಲ್ಲಿ ನಾಯಕತ್ವದ ಅರಿವು ಪ್ರಾಥಮಿಕ ಶಾಲೆಯಿಂದಲೇ ಆರಂಭವಾಗಬೇಕು,ಅಲ್ಲದೆ ಜವಾಬ್ದಾರಿಯುತ ಜೀವನ […]
ಕೋಟ: ಯುವ ಸಂಘಟನೆಗಳು ಸಮುದಾಯದ ಅಭಿವೃದ್ಥಿ ದುಡಿಯಬೇಕು. ಸಮಾಜಪರ, ಜನಪರ ಚಿಂತನೆಯ ಮೂಲಕ ಕೆಲಸ ಮಾಡುವ ಯುವ ಸಂಘಟನೆಗೆ ಎಲ್ಲರ ಪ್ರೋತ್ಸಾಹ ಅಗತ್ಯವಾಗಿದೆ. ಇಂದು ಸಹಾಯ ಪಡೆದ ವಿದ್ಯಾರ್ಥಿಗಳು ಮುಂದೆ ತಾವು ಉದ್ಯೋಗ ಪಡೆದಾಗ ಅದನ್ನು ಸಮಾಜಕ್ಕೆ ಹಿಂದಿರುಗಿಸಬೇಕು ಎಂದು ಮಾಬುಕಳ ಚೇತನಾ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಗಣೇಶ ಚೆಲ್ಲಿಮಕ್ಕಿ ಹೇಳಿದರು.ಅವರು ಭಾನುವಾರ ಕೋಟೇಶ್ವರ ಗಾಣಿಗ ಯುವ ಸಂಘಟನೆ, ಮಹಿಳಾ ಸಂಘಟನೆ ಕೋಟೇಶ್ವರ ಘಟಕದ ಆಶ್ರಯದಲ್ಲಿ ದಾನಿಗಳ ಸಹಕಾರದಲ್ಲಿ ಬೀಜಾಡಿ ಮಿತ್ರಸೌಧದಲ್ಲಿ ನಡೆದ ಉಚಿತ ನೋಟ್ಸ್ ಪುಸ್ತಕ,ಕೊಡೆ ವಿತರಣೆ,ಪ್ರತಿಭಾ […]
ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಘಟಕ ದಿಂದ ಶ್ರೀದೇವಿ ಆಸ್ಪತ್ರೆಯ ಅಂಬುಲೆನ್ಸಿಗೆ ಆಕ್ಸಿಜನ್ ಕೋನ್ಸೆಂಟ್ರೇಟರನ್ನು ದೇಣಿಗೆಯಾಗಿ ನೀಡಲಾಯಿತು. ಈ ದೇಣಿಗೆ ಯನ್ನು ಶ್ರೀ ಹಂದೆಯವರು ಸ್ವೀಕರಿಸಿದರು. ಸಭಾಪತಿ ಎಸ್ ಜಯಕರ ಶೆಟ್ಟಿ ಇದನ್ನು ಹಸ್ತಾಂತರಿಸಿದರು. ಕಾರ್ಯಕ್ರಮ ದಲ್ಲಿ ಕಾರ್ಯದರ್ಶಿ ವೈ. ಸೀತಾರಾಮ ಶೆಟ್ಟಿ, ಖಜಾಂಚಿ ಶಿವರಾಮ ಶೆಟ್ಟಿ, ಗಣೇಶ್ ಆಚಾರ್ಯ, ಶಾಂತಾರಾಮ್ ಪ್ರಭು, ನಾರಾಯಣ ದೇವಾಡಿಗ, ಸತ್ಯನಾರಾಯಣ ಪುರಾಣಿಕ ಮತ್ತು ಬಿ.ಎಮ್. ಚಂದ್ರಶೇಖರ ಉಪಸ್ಥಿತರಿದ್ದರು.
ಕುಂದಾಪುರ. ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಘಟಕ ದಿಂದ ಕಿಡ್ನಿ ಟ್ರಾನ್ಸಪ್ಲೆಂಟಿಗಾಗಿ ಹತ್ತು ಸಾವಿರ ರೂಪಾಯಿ ದೇಣಿಗೆ ನೀಡಲಾಯಿತು. ಕಿಡ್ನಿಯನ್ನು ನೀಡಲಿರುವ ರೋಗಿಯ ತಾಯಿ ಈ ದೇಣಿಗೆ ಯನ್ನು ಸ್ವೀಕರಿಸಿದರು. ಸಭಾಪತಿ ಎಸ್ ಜಯಕರ ಶೆಟ್ಟಿ ಇದನ್ನು ಹಸ್ತಾಂತರಿಸಿದರು. ಕಾರ್ಯಕ್ರಮ ದಲ್ಲಿ ಕಾರ್ಯದರ್ಶಿ ವೈ. ಸೀತಾರಾಮ ಶೆಟ್ಟಿ, ಖಜಾಂಚಿ ಶಿವರಾಮ ಶೆಟ್ಟಿ, ಗಣೇಶ್ ಆಚಾರ್ಯ, ಶಾಂತಾರಾಮ್ ಪ್ರಭು, ನಾರಾಯಣ ದೇವಾಡಿಗ, ಸತ್ಯನಾರಾಯಣ ಪುರಾಣಿಕ ಮತ್ತು ಬಿ.ಎಮ್. ಚಂದ್ರಶೇಖರ ಉಪಸ್ಥಿತರಿದ್ದರು.
PHOTOS : ANTONY DALMEIDA ಕುಂದಾಪುರ, ಜು.17: ಕೊಟೇಶ್ವರ ಕಟ್ಕರೆ ಕಾರ್ಮೆಲ್ ಮೇಳದ ಧರ್ಮಗುರುಗಳು ನಡೇಸುತ್ತಿರುವ ಬಾಲ ಯೇಸುವಿನ ಆಶ್ರಮದಲ್ಲಿ ತಮ್ಮ ಮೇಳದ ಪಾಲಕಿಯಾದ ಕಾರ್ಮೆಲ್ ಮಾತೆಯ ಹಬ್ಬವನ್ನು 16 ರಂದು ಭಕ್ತಿಪೂರ್ವಕ ಬಲಿದಾನ ಅರ್ಪಿಸುವ ಮೂಲಕ ಆಚರಿಸಲಾಯಿತು. ಹಬ್ಬದ ಈ ಬಲಿದಾನವನ್ನು ಉಡುಪಿ ಧರ್ಮಪ್ರಾಂತ್ಯದ ಧಾರ್ಮಿಕ ಎಪಿಸ್ಕೊಲ್ ಅ|ವಂ| ರೋಶನ್ ಮಿನೆಜೆಸ್ ಒ.ಎಫ್.ಎಮ್., ಕಾಪುಚಿನ್, ಇವರ ನೇತ್ರತ್ವದಲ್ಲಿ ನಡೆಯಿತು. ಅವರು ಕಾರ್ಮೆಲ್ ಮಾತೆಯ ವಿಶೇಷತೆಯನ್ನು ತಮ್ಮ ಸಂದೇಶದಲ್ಲಿ ತಿಳಿಸಿದರು. ಕುಂದಾಪುರ ವಲಯ ಪ್ರಧಾನರಾದ ಅ|ವಂ|ಸ್ಟ್ಯಾನಿ […]