ಕೋಲಾರ:- ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಇತ್ತೀಚೆಗೆ ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಜಯ ಸಾಧಿಸಿರುವ ಸಂಸದೆ ಪ್ರಿಯಾಂಕ ಗಾಂಧಿ ವಾದ್ರಾ ಅವರನ್ನು ರಾಜ್ಯ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಭೇಟಿಯಾಗಿ ಅಭಿನಂದನೆ ಸಲ್ಲಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರಿಯಾಂಕ ಗಾಂಧಿಯವರ ಗೆಲುವಿನಿಂದ ಕಾಂಗ್ರೆಸ್ ಪಕ್ಷದ ಶಕ್ತಿ ಇಮ್ಮಡಿಯಾಗಿದೆ, ರಾಹುಲ್ ಗಾಂಧಿಯವರೊಂದಿಗೆ ಪ್ರಿಯಾಂಕ ಗಾಂಧಿಯವರೂ ಲೋಕಸಭೆ ಪ್ರವೇಶಿಸಿರುವುದರಿಂದ ಕೇಂದ್ರ ಸರ್ಕಾರದ ಜನವಿರೋಧಿ ನಿಲುವುಗಳ ವಿರುದ್ದ ಹೋರಾಟ ನಡೆಸಲು ಬಲ ಬಂದಿದೆ ಎಂದು ಅಭಿಪ್ರಾಯಪಟ್ಟರು.ಮುಂದಿನ […]
ಶ್ರೀನಿವಾಸಪುರ : ತಾಲೂಕಿನ ಯಲ್ಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಬೀದಿ ದೀಪ ಹಾಗೂ ಚರಂಡಿ ಸ್ವಚ್ಛತೆ ಇವುಗಳನ್ನು ಸಮರ್ಪಕವಾಗಿ ಸಾರ್ವಜನಿಕರಿಗೆ ಒದಗಿಸಲು ಕ್ರಿಯಾಯೋಜನೆ ರೂಪಿಸಲಾಗಿದೆ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೆ. ಪಿ. ಶ್ರೀನಿವಾಸರೆಡ್ಡಿ ತಿಳಿಸಿದರು. ಶ್ರೀನಿವಾಸಪುರ ತಾಲೂಕಿನ ಯಲ್ಡೂರು ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಏರ್ಪಡಿಸಿದ್ದ ಗ್ರಾಮಸಭೆಯಲ್ಲಿ ಮಾತನಾಡುತ್ತಾ, ಇಂದಿನ ಸಭೆಯಲ್ಲಿ 2024-25ನೇ ಸಾಲಿನ ಎಮ್ ಎನ್ ಆರ್ ಇ ಜಿ ಎಯ ಅಂದಾಜು ಕ್ರಿಯಾಯೋಜನೆಗೆ ಹಾಗೂ ಗ್ರಾಮನೀರು […]
ಶ್ರೀನಿವಾಸಪುರ : ತಾಲ್ಲೂಕಿನ ಪುಲಗೂರಕೋಟೆ ಗ್ರಾಮ ಪಂಚಾಯತಿಯಲ್ಲಿ ಒಟ್ಟು 18 ಸದಸ್ಯರಿದ್ದು, ಅದರಲ್ಲಿ ಜೆಡಿಎಸ್ ಬೆಂಬಲಿತ 09 ಸದಸ್ಯರಿದ್ದು, ಕಾಂಗ್ರೆಸ್ ಬೆಂಬಲಿತ 09 ಸದಸ್ಯರಿದ್ದು, ಉಪಾಧ್ಯಕ್ಷರ ಸ್ಥಾನವು ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದು, ಅದರಲ್ಲಿ ಕಾಂಗ್ರೆಸ್ ಬೆಂಬಲಿತ ಉಪಾಧ್ಯಕ್ಷರ ಸ್ಥಾನಕ್ಕೆ ರೂಪಶ್ರೀನಿವಾಸ್ ರವರು ಒಬ್ಬರೇ ಇದಿದ್ದರಿಂದ ನಾಮಪತ್ರ ಸಲ್ಲಿಕೆ ಮಾಡಿದ್ದರು. ಇದರಿಂದಾಗಿ ಅವಿರೋಧವಾಗಿ ರೂಪಶ್ರೀನಿವಾಸ್ ರವರು ಗ್ರಾಮ ಪಂಚಾಯತಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ರಾಜೇಶ್ ತಿಳಿಸಿದರು .ಕಾಂಗ್ರೆಸ್ ಪಕ್ಷದ ಮುಖಂಡ ಕೆ.ಕೆ. ಮಂಜುನಾಥ ಮಾತನಾಡಿ ನೂತನವಾಗಿ ಉಪಾಧ್ಯಕ್ಷರಾಗಿರುವ […]
ಶ್ರೀನಿವಾಸಪುರ : ಜಾಗತಿಕವಾಗಿ ಆಹಾರ ಭದ್ರತೆಯ ಮೂಲ ಪರಿಕಲ್ಪನೆಯು ಎಲ್ಲಾ ಜನರು , ಎಲ್ಲಾ ಸಮಯದಲ್ಲೂ ತಮ್ಮ ಸಕ್ರಿಯ ಮತ್ತು ಆರೋಗ್ಯಕರ ಜೀವನಕ್ಕಾಗಿ ಬೇಕಾಗಿರುವ ಮೂಲಭೂತ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕು ಎಂದು ತಾಲೂಕು ಸಹಾಯಕ ಕೃಷಿ ಅಧಿಕಾರಿ ಕೆ.ಸಿ.ಮಂಜುನಾಥ್ ತಿಳಿಸಿದರು.ತಾಲೂಕಿನ ರಾಯಲ್ಪಾಡು ಗ್ರಾಮಪಂಚಾಯಿತಿ ವ್ಯಾಪ್ತಿಯ ಮಂಡ್ಯಾಲ ಗ್ರಾಮದಲ್ಲಿ ಕೃಷಿ ಇಲಾಖೆಯಿಂದ ಶನಿವಾರ 2024-25 ನೇ ಸಾಲಿನ ರಾಷ್ಟ್ರೀಯ ಆಹಾರ ಭದ್ರತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ರಾಷ್ಟ್ರೀಯ ಆಹಾರ ಭದ್ರತಾ ಮಿಷನ್ ಕೇಂದ್ರ ಪ್ರಾಯೋಜಿತ ಯೋಜನೆಯಾಗಿದೆ. ಸುಧಾರಿತ ಕೃಷಿ ವಿಸ್ತರಣಾ […]
ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಖಾಲಿ ಇದ್ದ ಅಂಗನವಾಡಿ ಕಾರ್ಯಕರ್ತೆ / ಸಹಾಯಕಿಯರ ನೇಮಕಾತಿ ಕುರಿತಂತೆ ಆಕ್ಷೇಪಣಾ ಅರ್ಜಿಗಳನ್ನು ಪರಿಶೀಲಿಸಿ , ಅಂತಿಮ ಆಯ್ಕೆ ಪಟ್ಟಿ ಪ್ರಕಟಣೆ ಸಂಬಂಧ ಜಿಲ್ಲಾ ಆಯ್ಕೆ ಸಮಿತಿ ಸಭೆಯನ್ನು ನಡೆಸಿದ್ದ ಜಿಲ್ಲಾಧಿಕಾರಿ ಅಕ್ರಂ ಪಾಷ.
ಕೋಲಾರ,ಡಿ.02 ನೌಕರರ ಸಂಘದ ಚುನಾವಣೆ ಹೆಸರಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ ಕೇಂದ್ರ ಸ್ಥಾನದಲ್ಲಿ ಕೆಲಸ ನಿರ್ವಹಿಸಿ ಮತ ಚಲಾಯಿಸಲು ಸೂಚನೆ ನೀಡಬೇಕೆಂದು ರೈತ ಸಂಘದಿಂದ ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿ ಒತ್ತಾಯಿಸಲಾಯಿತು.ಜನರ ಸೇವೆಯ ಕರ್ತವ್ಯದ ಹೊಣೆ ಹೊತ್ತ ನೌಕರರು ಕಚೇರಿಗಳಲ್ಲಿ ಕೆಲಸ ಮಾಡದೇ ಅವರ ಚುನಾವಣೆಗೆ ಆದ್ಯತೆ ನೀಡಿ, ರಾಜಕೀಯ ಪಕ್ಷಗಳಿಗೆ ಪೈಪೋಟಿ ನೀಡುವ ರೀತಿಯಲ್ಲಿ ರೆಸಾಟ್ರ್ವಾಸ, ಪ್ರವಾಸ,ಮೋಜು,ಮಸ್ತಿ ನಡೆಸಲು ಅವಕಾಶ ಕಲ್ಪಿಸುತ್ತಿದ್ದು, ಇದು ಕಾನೂನುಬಾಹಿರ ಜೊತೆಗೆ ಸಂವಿಧಾನದ ಆಶಯದಂತೆ ಭ್ರಷ್ರಚಾರ ರಹಿತ ಚುನಾವಣೆ ನಡೆಸಬೇಕಾದ […]
ಶ್ರೀನಿವಾಸಪುರ : ಪ್ರಾಚೀನ ಬಾಷೆಯಾದ ಕನ್ನಡವನ್ನು ನಮ್ಮ ರಾಜ್ಯದ ಗಡಿಬಾಗಗಳಲ್ಲಿ ಉಳಿಸಿಕೊಳ್ಳಲು ನಾವೆಲ್ಲರೂ ಪಣ ತೊಡಬೇಕು. ಕನ್ನಡ ಬಾಷೆಯನ್ನು ಉಳಿಸಿ ಬೆಳೆಸುವ ಆದ್ಯ ಕರ್ತವ್ಯ ನಮ್ಮ ನಿಮ್ಮೆಲ್ಲರ ಮೇಲೆ ಇದೆ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.ಪಟ್ಟಣದ ವಿವೇಕಾನಂದ ವೃತ್ತದಲ್ಲಿ ಚೈತನ್ಯ ಜನ ಜಾಗೃತಿ ವೇದಿಕೆ ವತಿಯಿಂದ ಶನಿವಾರ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಕನ್ನಡ ಧ್ವಜಾರೋಹಣ ಮಾಡಿ ಮಾತನಾಡಿದರು.ಗಡಿಬಾಗವಾದ ನಮ್ಮ ತಾಲ್ಲೂಕನ್ನು ಕನ್ನಡಬಾಷೆಗೆ ಹೆಚ್ಚು ಪ್ರಾಮುಖ್ಯತೆ ನೀಡಬೇಕು ನಮ್ಮ ನಾಡು-ನುಡಿ ಜಲವನ್ನು ಕಾಪಾಡಿಕೊಳ್ಳುವುದರ ಜೊತೆಗೆ ಪ್ರತಿಯೊಬ್ಬರೂ ಕನ್ನಡದ ಅಭಿಮಾನವನ್ನು […]
ಶ್ರೀನಿವಾಸಪುರ : ವಾಹನ ಚಾಲಕರು ಕಡುಬಡತನ ಕುಟುಂಬದವರು . ಸಾಮಾನ್ಯವಾಗಿ ವಾಹನ ಚಾಲಕರು ಕುಟುಂಬದ ನಿರ್ವಹಣೆಗಾಗಿ ತುಂಬಾ ಒತ್ತಡದಲ್ಲಿ ಜೀವನ ನಡೆಸುತ್ತಿದ್ದಾರೆ. ಮುಖ್ಯವಾಗಿ ಚಾಲಕರು ನಿಮ್ಮನ್ನೇ ನಂಬಿಕೊಂಡು ಕುಟುಂಬವಿದ್ದು, ವಾಹನ ಚಾಲನೆ ಮಾಡುವಾಗ ತುಂಬಾ ಎಚ್ಚರಿಕೆಯಿಂದ ಚಾಲನೆಮಾಡಬೇಕು . ಚಾಲಕರು ಎಚ್ಚರ ತಪ್ಪಿ ವಾಹನ ಚಾಲನೆ ಮಾಡಿದರೆ ನಿಮ್ಮ ಕುಟುಂಬವು ಬೀದಿಗೆ ಬೀಳುತ್ತದೆ ಆದ್ದರಿಂದ ವಾಹನವನ್ನು ಎಚ್ಚರಿಕೆಯಿಂದ ಚಾಲನೆ ಮಾಡುವಂತೆ ಪೊಲೀಸ್ ಇನ್ಸ್ಪೆಕ್ಟರ್ ಎಂ.ಬಿ. ಗೊರವನಕೊಳ್ಳ ಸಲಹೆ ನೀಡಿದರು. ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಶುಕ್ರವಾರ ಕರ್ನಾಟಕ […]
ಶ್ರೀನಿವಾಸಪುರ : ನಾರಮಾಕಲಪಲ್ಲಿ ಗ್ರಾಮದ ಕಾಲುವೆ ಕಾಮಗಾರಿ ನಡೆಸಲು ಜನವರಿ 17 -2024 ನನಗೆ ಆದೇಶ ಸಂಬಂದಪಟ್ಟ ಅಧಿಕಾರಿಗಳು ಆದೇಶ ಮಾಡಿದ್ದಾರೆ. ಅದಕ್ಕೆ ತಕ್ಕಂತೆ ಸಂಬಂದಿಸಿದ ಇಂಜಿನೀಯರ್ ಸ್ಥಳ ಪರಿಶೀಲನೆ ನಡೆಸಿ ಕಾಮಗಾರಿಗೆ ಅನುಮೋದನೆ ನೀಡಿದ್ದಾರೆ. ಅದರಂತೆ ಕಾಮಗಾರಿ ಮಾಡಲಾಗಿದೆ ಎಂದು ಗುತ್ತಿಗೆದಾರ ವಳಗೇರನಹಳ್ಳಿ ಶಿವಾರೆಡ್ಡಿ ಮಾಹಿತಿ ನೀಡಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ನಡೆದ ಪ್ರತಿಕಾ ಗೋಷ್ಟಿಯಲ್ಲಿ ಮಾತನಾಡಿದರು.ತಾಲೂಕಿನ ರೋಣೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ನಾರಮಾಕಲಪಲ್ಲಿ ಗ್ರಾಮದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ನರೇಗಾ […]

