ಸಾಸ್ತಾನ: ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ರಸ್ತೆಯ ಸಮಸ್ಯೆಗಳು ಹಾಗೂ ಸ್ಥಳೀಯರಿಗೆ ಶುಲ್ಕ ವಿಧಿಸುತ್ತಿರುವುದನ್ನು ವಿರೋಧಿಸಿ ನ.9 ರಂದು ಸಾಸ್ತಾನ ಟೋಲ್ ನಲ್ಲಿ ಪ್ರತಿಭಟನೆ ನಡೆಸಲಾಯಿತು ಹದಗೆಟ್ಟಿರುವ ಹೊಂಡ ಗುಂಡಿಗಳಿಂದ ತುಂಬಿರುವ ಹೆದ್ದಾರಿ, ಉರಿಯದ ಬೀದಿ ದೀಪಗಳು, ಪಾದಚಾರಿಗಳಿಗೆ ದಾರಿಯ ಸಮಸ್ಯೆ ಹಾಗೂ ಸ್ಥಳೀಯ ವಾಹನಗಳಲ್ಲಿ ಸಂಸ್ಥೆಯ ಹೆಸರಿನಲ್ಲಿ ನೋಂದಾಯಿಸಿರುವ ವಾಹನಗಳಿಗೆ ಟೋಲ್ ಶುಲ್ಕ ವಿಧಿಸುತ್ತಿರುವುದನ್ನು ಖಂಡಿಸಿ ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿ ವತಿಯಿಂದ ಸಾಸ್ತಾನ ಟೋಲ್ ಬಳಿ ಪ್ರತಿಭಟನೆ ನಡೆಯಿತು. ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿ ಅಧ್ಯಕ್ಷರಾದ […]
ಕುಂದಾಪುರ : ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಡಿಸೆಂಬರ್ 2ರಿಂದ 5ರ ತನಕ ನಡೆಯಲಿರುವ ಬ್ರಹತ್ ಶೈಕ್ಷಣಿಕ ಮಾಹಿತಿ ಮತ್ತು ವಸ್ತು ಪ್ರದರ್ಶನದ ಬಗ್ಗೆ ಪೂರ್ವಭಾವಿ ಸಭೆ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಅವರ ಅಧ್ಯಕ್ಷತೆಯಲ್ಲಿ ಕುಂದಾಪುರದ ತಾಲೂಕು ಪಂಚಾಯತ್ ಸಬಾಂಗಣದಲ್ಲಿ ನಡೆಯಿತು.ಕುಂದಾಪುರ –ಬೈಂದೂರು ವಿಧಾನಸಭಾ ಕ್ಷೇತ್ರದ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಸಾಮಾನ್ಯ ಜ್ಞಾನ ಶೈಕ್ಷಣಿಕ ಮಾಹಿತಿ , ವಸ್ತು ಪ್ರದರ್ಶನ, ವೃತ್ತಿ ಮಾರ್ಗದರ್ಶನ ನೀಡಲು ನಿರ್ಧರಿಸಲಾಗಿದ್ದು, […]
ಕುಂದಾಪುರ : ಟೀಚರ್ ಟ್ರೈನಿಂಗ್ ಅಕಾಡೆಮಿ, ಕುಂದಾಪುರ ಇಲ್ಲಿನ ಶಿಕ್ಷಕ ವಿದ್ಯಾರ್ಥಿಗಳಿಂದ ನ.9 ರಂದು ‘ಚಾಕ್ ಟಾಕ್’ ಎನ್ನುವ ಕಲಿಕಾ ಸಂಪನ್ಮೂಲಗಳ ಪ್ರದರ್ಶನ ನೆರವೇರಿತು.ಉದ್ಘಾಟಕರಾಗಿ ಆಗಮಿಸಿರುವ ಶ್ರೀಯುತ ಚಂದ್ರಶೇಖರ್ ಶೆಟ್ಟಿ ಸಹಾಯಕ ಮುಖ್ಯ ಶಿಕ್ಷಕರು ವಿಕೆಆರ್ ಆಂಗ್ಲ ಮಾಧ್ಯಮ ಶಾಲೆ ಇವರು ತರಗತಿ ಕೊಣೆಯಲ್ಲಿ ಕಲಿಕಾ ಸಾಮಗ್ರಿಗಳ ಪ್ರಾಮುಖ್ಯತೆಯ ಕುರಿತು ಮಾತನಾಡಿದರು. ಸಂಸ್ಥೆಯ ಪ್ರಾಂಶುಪಾಲೆಯಾಗಿರುವ ಡಾ. ಚಿಂತನಾ ರಾಜೇಶ್ ಹಾಗೂ ಎಲ್ಲಾ ಶಿಕ್ಷಕರು ಉಪಸ್ಥಿತಿಯಲ್ಲಿದ್ದರು.
ಮಂಗಳೂರು; ಸೇಂಟ್ ಆಗ್ನೆಸ್ ಪಿಯು ಕಾಲೇಜು ತನ್ನ ವಾರ್ಷಿಕ ಕ್ರೀಡಾ ದಿನವನ್ನು 8 ನವೆಂಬರ್ 2024 ರಂದು ನಡೆಸಿತು. ಇದು ಕ್ರಿಯಾತ್ಮಕ ಮತ್ತು ಉತ್ಸಾಹಭರಿತ ಕಾರ್ಯಕ್ರಮವಾಗಿದ್ದು, ಗೌರವಾನ್ವಿತ ಮುಖ್ಯ ಅತಿಥಿಗಳಾದ ಶ್ರೀ ಉಮೇಶ್ ಅಯ್ಯಪ್ಪ, ಕದ್ರಿ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಶ್ರೀ ಉಮೇಶ್ ಅಯ್ಯಪ್ಪ ಮತ್ತು ಗೌರವಾನ್ವಿತ ಬ್ಯಾಂಡ್ ಮತ್ತು ಗೌರವ ರಕ್ಷೆಯನ್ನು ಒಳಗೊಂಡಿತ್ತು ಡಾ ಶ್ರೀ ಮರಿಯಾ ರೂಪ, ಜಂಟಿ ಕಾರ್ಯದರ್ಶಿ, ಸೇಂಟ್ ಆಗ್ನೆಸ್ ಸಂಸ್ಥೆಗಳು, ವೈಸ್ ಪ್ರಿನ್ಸಿಪಾಲ್ ಶ್ರೀ ಜಾನೆಟ್ ಸಿಕ್ವೇರಾ, ಶ್ರೀಮತಿ ಜಯಶ್ರೀ, […]
ಉಡುಪಿ; ಹಬ್ಬದ ಅಂಗವಾಗಿ ಚಲಿಸುತ್ತಿರುವ ವಿಶೇಷ ರೈಲು ಸಂಖ್ಯೆ 91997/91998 ಮಡಗಾಂವ್‌ನಿಂದ ವೇಲಂಕಣಿಗೆ (ನಾಗಪಟ್ಟಣಂ) ರೈಲು ಸೇವೆಯನ್ನು ಕರ್ನಾಟಕ ಕರಾವಳಿ ಮಾರ್ಗವಾಗಿ ಅಲಿಸುವ ನಿಯಮಿತಗೊಳಿಸುವಂತೆ ಉಡುಪಿ – ಚಿಕ್ಕಮಗಳೂರು ಲೋಕ ಸಭಾ ಕ್ಷೇತ್ರದ ಸದಸ್ಯರಾದ ಕೋಟ ಶ್ರೀನಿವಾಸ್ ಪೂಜಾರಿಯರಲ್ಲಿ ಭಾರತೀಯ ಜನತಾ ಪಾರ್ಟಿ ಅಲ್ಪಸಂಖ್ಯಾತ ಮೋರ್ಚಾದವರು ಕೋರಿಕೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಮಾನ್ಯ ಲೋಕ ಸಭಾ ಕ್ಷೇತ್ರದ ಸದಸ್ಯರಾದ ಕೋಟ ಶ್ರೀನಿವಾಸ್ ಪೂಜಾರಿಯವರು ತಕ್ಷಣ ಸ್ಪಂದಿಸಿ ರೈಲ್ವೆ ಸಚಿವರಲ್ಲಿ ಮಾತನಾಡಿದ್ದಾರೆ ಏಂದು ಅಲ್ಪಸಂಖ್ಯಾತ ಮೋರ್ಚಾದ ಉಡುಪಿ […]
ಉಡುಪಿ; ತಾ 08-11-2024 ಶುಕ್ರವಾರ ಮಧ್ಯಾಹ್ನ 3-30 ರಿಂದ 4-30 ರ ವರೆಗೆ ಕರ್ನಾಟಕ ರಾಜ್ಯ ಹಿಂದು ಳಿದ ಆಯೋಗದ ಮಾಜಿ ಅಧ್ಯಕ್ಷರು, ಮಾಜಿ ಲೋಕಸಭಾ ಸದ್ಯಸರು, ಮಾಜಿ ಸಚಿವರು ಆಗಿರುವ ಸನ್ಮಾನ್ಯ ಶ್ರೀ ಜಯಪ್ರಕಾಶ್ ಹೆಗ್ಡೆ ರವರು ಉಡುಪಿ ಜಿಲ್ಲಾ ಕಾಂಗ್ರೆಸ್ ಭವನ ಕ್ಕೆ ಆಗಮಿಸಿ ಸಾರ್ವಜನಿಕ ರಿಂದ ಆಹವಾಲು ಸ್ವೀಕರಿಸಿ ಅವರ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ದೊರಕಿಸಿ ಕೊಟ್ಟರು.
ಕೋಟೇಶ್ವರದ ಸಂತ ಅಂತೋನಿಯವರ ದೇವಾಲಯದ ವಾರ್ಷಿಕ ಮಹೋತ್ಸವದ ಪ್ರಯುಕ್ತ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಸಂಜೆಯ ಭಾಗವಾಗಿ 06 ಬುಧವಾರ, 2024 ರಂದು ಸಂಜೆ 6.30ಗೆ ಕಟ್ಕೆರೆಯ ಕಾರ್ಮೆಲ್ ಆಶ್ರಮದಲ್ಲಿ ’ಅಮರ್ ಅಂತೋಣಿ’ ಎಂಬ ನೂತನ ಕೊಂಕಣಿ ಹಾಸ್ಯ ನಾಟಕ ಪ್ರದರ್ಶನಗೊಂಡಿತು. ಜೊ.ಸಿ.ಸಿದ್ದಕಟ್ಟೆ ವಿರಚಿತ ಹಾಗೂ ನಿರ್ದೇಶನದ ಈ ನಾಟಕ ಸಂತ ಅಂತೋಣಿ ದೇವಾಲಯದ ಕಲಾವಿದರಿಂದ ಪ್ರಸ್ತುತಗೊಳಿಸಲಾಯಿತು. ಸಂತೋಷ್ ಮಾರ್ಟಿಸ್, ಕೋಟೇಶ್ವರ ಸಹನಿರ್ದೇಶನ ಮಾಡಿದ್ದು ಪಾತ್ರಧಾರಿಯೂ ಆಗಿದ್ದರು. ಅವರೊಂದಿಗೆ ಸಹಕಲಾವಿದರಾದ ವಂ. ಪ್ರವೀಣ್ ಪಿಂಟೊ, ಉಲ್ಲಾಸ್ ಫೆರ್ನಾಂಡಿಸ್, ವಿಜಯ್ ಬಾರೆಟ್ಟೊ, […]
ಆಕಾಶ್ ಎಜುಕೇಶನ್ ಸಂಸ್ಥೆ ಸಂಪೂರ್ಣ ಭಾರತದಲ್ಲಿ ನೆಡೆಸುವ ಎಸ್ ಎಸ್ ಎಲ್ ಸಿ,ಹಾಗೂ ಫಸ್ಟ್ ಪಿಯುಸಿ, ಸೆಕೆಂಡ್ ಪಿಯುಸಿ ವೈದ್ಯಕೀಯ ಮತ್ತು ಇಂಜಿನಿಯರಿಂಗ್ ವಿಷಯಗಳ ಆಯ್ಕೆಯಲ್ಲಿ ಆನ್ಲೈನ್ ಮತ್ತು ಆಫ್ಲೈನ್ನಲ್ಲಿ ನಡೆಸುವ ಪರೀಕ್ಷೆಯಲ್ಲಿ ಇಂಜಿನಿಯರ್ ವಿಷಯನ್ನು ಆಯ್ದುಕೊಂಡು ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕುಂದಾಪುರ ಇಲ್ಲಿ ಹತ್ತನೇ ತರಗತಿಯಲ್ಲಿ ಓದುತ್ತಿರುವ ಆಕಾಶ್ ಈಶ್ವರ್ ಮೊಗವೀರ 80 ಪ್ರತಿಶತ ಅಂಕ ಪಡೆದು ಉಡುಪು ಜಿಲ್ಲೆಗೆ ತೃತೀಯ ರಾಂಕ್ ಸ್ಕಾಲರ್ಶಿಪ್ ಗೆ ಆಯ್ಕೆಯಾಗಿರುತ್ತಾರೆ. ಈತ ಹೆಮ್ಮಾಡಿ ಸುಳ್ಸೆ ಸುಗುಣ […]
ಉಡುಪಿ, ತಾ 06-11-2024 ಬುಧವಾರ ಸಂಜೆ 4-00 ಗಂಟೆಗೆ ಕರ್ನಾಟಕ ರಾಜ್ಯ ಹಿಂದುಳಿದ ಆಯೋಗದ ಮಾಜಿ ಅಧ್ಯಕ್ಷರು, ಮಾಜಿ ಲೋಕಸಭಾ ಸದಸ್ಯರು, ಮಾಜಿ ಸಚಿವರು ಆಗಿರುವ ಸನ್ಮಾನ್ಯ ಶ್ರೀ ಜಯಪ್ರಕಾಶ್ ಹೆಗ್ಡೆ ರವರು ಉಡುಪಿ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಅಹವಾಲು ಸ್ವೀಕರಿಸಿದರು. ಈ ಸಂಧರ್ಭದಲ್ಲಿ ಸಾರ್ವಜನಿಕರು,ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ಉಪಸ್ಥಿತರಿದ್ಧರು.