

ಅಕ್ಟೋಬರ್ 4 ಭಾನುವಾರ ಬೆಳಿಗ್ಗೆ 8.15 ರಿಂದ 9.15ರ ವರೆಗೆ ಕೆಲರೈ ಚರ್ಚಿನ ಸಭಾಂಗಣದಲ್ಲಿ ವಿವಿಧ ಸಂತರ ಹಾಗೂ ಮಾತೆ ಮರಿಯಮ್ಮನವರ ವೇಷ ಧಾರಣೆಯ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು ಇದರಲ್ಲಿ 40 ಮಕ್ಕಳು ಭಾಗವಹಿಸಿ ತಮ್ಮ ವೇಷಭೂಷಣಗಳಿಂದ ಎಲ್ಲರನ್ನೂ ಮಂತ್ರಮುಗ್ದರಾಗಿಸಿದರು.
ಕೆಲರೈ ಚರ್ಚಿನ ಗುರುಗಳಾದ ವಂದನೀಯ ಸಿಲ್ವೆಸ್ಟರ್ ಡಿಕೋಸ್ಟಾರವರ ಮಾರ್ಗದರ್ಶನದಲ್ಲಿ, ಸುವಾರ್ತೆ ಪ್ರಚಾರಕ ಸಮಿತಿಯ ಹಾಗೂ ವೈಸಿಎಸ್ ಕೆಲರೈ ಘಟಕದ ಸಹಭಾಗಿತ್ವದಲ್ಲಿ ಈ ಸ್ಪರ್ಧೆ ನಡೆಯಿತು.
ವಂದನೀಯ ಫಾದರ್ ಜೋವಿನ್ ವಿಶ್ವಾಸ್ ಸಿಕ್ವೇರಾ ಹಾಗೂ ವಂದನೀಯ ಫಾದರ್ ಸ್ಟ್ಯಾನಿ ಲಿಸ್ಟನ್ ಪಿಂಟೊ ಇವರು ತೀರ್ಪುದಾರರಾಗಿ ಸ್ಪರ್ಧೆಯ ಫಲಿತಾಂಶ ನೀಡಿದರು.
ಚರ್ಚ್ ಪಾಲನಾ ಸಮಿತಿಯ ಉಪಾದ್ಯಕ್ಷರಾದ ವೀಣಾ ಪಿಂಟೊ, ಕಾರ್ಯದರ್ಶಿ ಹೆರಾಲ್ಡ್ ಮೊಂತೇರೊ, ಫಾತಿಮಾ ಕಾನ್ವೆಂಟಿನ ಸುಪೀರಿಯರ್ ಸಿಸ್ಟರ್ ಐರಿನ್ ರೊಡ್ರಿಗಸ್, ಆಯೋಗಗಳ ಸಂಯೋಜಕಿ ಲಿಲ್ಲಿ ಚಂದ್ರನ್ ಉಪಸ್ಥಿತರಿದ್ದರು.
ಫಾದರ್ ಸಿಲ್ವೆಸ್ಟರ್ ಡಿಕೋಸ್ಟಾರವರು ಬೈಬಲ್ ಫ್ಯಾನ್ಸಿ ಡ್ರೆಸ್ಸಿನ ಕುರಿತು ಪ್ರಾಸ್ತವಿಕ ಭಾಷಣ ನೀಡಿ ಎಲ್ಲಾ ಸ್ಪರ್ಧಿಕರಿಗೆ ಶುಭ ಹಾರೈಸಿದರು. ವೈಸಿಎಸ್ ಸಚೇತಕರಾದ ಗೊಡ್ವಿನ್ ವಾಸ್ ಸ್ವಾಗತಿಸಿದರು. ವೈಸಿಎಸ್ ಅಧ್ಯಕ್ಷ ಸೋಹನ್ ಜೋಶ್ವಾ ಗಣ್ಯರಿಗೆ ಹೂಗುಚ್ಚ ನೀಡಿದರು. ರಯೋಲಾ ರೊಡ್ರಿಗಸ್ ಕಾರ್ಯಕ್ರಮ ನಿರೂಪಿಸಿದರು. ಅಶಲ್ ರಿಯೋನಾ ಹಾಗೂ ಸಿಯೋನ್ ಮೋನಿಸ್ ಸ್ಪರ್ಧೆ ನಿರ್ವಹಿಸಿದರು. ವೈಸಿಎಸ್ ಸದಸ್ಯರೆಲ್ಲರೂ ಉಪಸ್ಥಿತರಿದ್ದರು.
ಪ್ರಿನ್ಸಿಟಾ ಡಿಮೆಲ್ಲೊ ವಂದಿಸಿದರು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳು ಸಂತರ ಉಡುಪು ಹಾಕಿಯೇ ಪವಿತ್ರ ಬಲಿಪೂಜೆಗೆ ಹಾಜರಾದರು.
Bible Saints and Mother Mary Fancy Dress Competition Held at Kelarai Church

Mangaluru: A fancy dress competition featuring Biblical saints and Mother Mary was organised under the leadership of YCS Kelarai on Sunday, October 4, from 8.15 a.m. to 9.15 a.m. at the Kelarai Church Hall. Around 40 children participated in the competition, captivating everyone with their colourful and creative costumes depicting various saints and Mother Mary.
The competition was conducted under the guidance of Kelarai Parish Priest Rev. Fr. Sylvester D’Costa, in collaboration with the Evangelisation Commission and the YCS Kelarai unit.
Rev. Fr. Jovin Viswas Sequeira and Rev. Fr. Stany Liston Pinto served as judges and announced the results.
Vice President of the Parish Pastoral Council Veena Pinto, Secretary Harold Montero, Superior of Fatima Convent Sr. Irene Rodrigues and Commission Coordinator Lilly Chandran were present.
Rev. Fr. Sylvester D’Costa delivered the introductory address on the significance of the Biblical fancy dress competition and wished all the participants success. YCS Animator Godwin Vaz welcomed the gathering, while YCS President Sohan Joshua presented bouquets to the dignitaries.
Rayola Rodrigues compered the programme, while Ashal Riona and Sion Monis coordinated the competition. All YCS members were present.
Princita D’Mello proposed the vote of thanks.
A special feature of the event was that all the participating children attended the Holy Eucharistic celebration dressed as the saints they had portrayed in the competition.

