ನಾನು ಶಾಸಕನಾಗಿದ್ದಗಲೂ ನಂತರ ದಿನಗಳಲ್ಲಿಯೂ ಎಲ್ಲಾ ಸಮುದಾಯದವರಿಗೂ ಸ್ಪಂದಿಸಿದ್ದೇನೆ:ಜಿ.ಕೆ.ವೆಂಕಟಶಿವಾರೆಡ್ಡಿ

ಶ್ರೀನಿವಾಸಪುರ 1 : ನಾನು ಶಾಸಕನಾಗಿದ್ದ ಸಮಯದಲ್ಲೇ ಆಗಲಿ, ನಂತರ ದಿನಗಳಲ್ಲಿಯೇ ಆಗಲಿ ಎಲ್ಲಾ ಸಮುದಾಯದವರಿಗೂ ಕಷ್ಟ , ಸುಖಗಳಿಗೆ ಸ್ಪಂದಿಸಿ ಜನರೊಂದಿಗೆ ಉತ್ತಮ ಭಾಂದವ್ಯವನ್ನು ಹೊಂದಿದ್ದೇನೆ ಎಂದು ಜೆಡಿಎಸ್ ಮಾಜಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.
ತಾಲೂಕಿನ ರಾಯಲ್ಪಾಡು ಹೋಬಳಿಯ ಗುಡಿಪಲ್ಲಿ ಗ್ರಾಮದಲ್ಲಿ ಮಂಗಳವಾರ ನಡೆದ ಜೆಡಿಎಸ್ ಪಕ್ಷದ ಕಾರ್ಯಕರ್ತರ ಸಭೆ ಹಾಗೂ ಕಾಂಗ್ರೆಸ್ ಪಕ್ಷದಿಂದ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪಕ್ಷವು ಪಂಚರತ್ನ ಯೋಜನೆ ಮುಖಾಂತರ ಧರ್ಮಾತೀತ, ಜ್ಯಾತ್ಯಾತೀತವಾಗಿ ಶಿಕ್ಷಣ, ಉದ್ಯೋಗ, ಕೃಷಿ ಆರೋಗ್ಯ , ವಸತಿ, ಸಂಬಂದಿಸಿದ ಯೋಜನೆಗಳು ಜನರ ಮನ್ನಣೆ ಗಳಿಸಿದೆ. ಹಾಗೂ ಜಿಲ್ಲೆಗೆ ಶಾಶ್ವತ ನೀರಾವರಿ ಯೋಜನೆಯಂತಹ ಇನ್ನೂ ಅನೇಕ ಯೋಜನೆಗಳು ಜಾರಿಗೆ ತಂದು, ವಿಶೇಷವಾಗಿ ಜಿಲ್ಲೆಯನ್ನು ಅಭಿವೃದ್ಧಿ ಪಡಿಸುವ ಅನೇಕ ಯೋಜನೆಯನ್ನು ಎಚ್.ಡಿ.ಕುಮಾರಸ್ವಾಮಿ ಹಮ್ಮಿಕೊಂಡಿದ್ದು, ಅವರ ಕನಸು ನನಸು ಮಾಡುವ ದೃಷ್ಟಿಯಿಂದ ರಾಜ್ಯದಲ್ಲಿ ಎಚ್.ಡಿ.ಕುಮಾರ್‍ಸ್ವಾಮಿರವರ ನೇತೃತ್ವದ ಜೆಡಿಎಸ್ ಪಕ್ಷವು ಆಡಳಿತಕ್ಕೆ ಬರುಲು ನಿಮ್ಮೆಲ್ಲೆರ ಆರ್ಶೀವಾದ ಬೇಕಾಗಿದೆ ಎಂದು ಮನವಿ ಮಾಡಿದರು.
ರಾಜ್ಯದಲ್ಲಿ ಜೆಡಿಎಸ್ ಪಕ್ಷದ ಸಿದ್ದಾಂತಗಳನ್ನು ಮೆಚ್ಚಿರುವ ಮತದಾರರು ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಬೆಂಬಲಿಸುತ್ತಾರೆ. ಎಚ್.ಡಿ.ಕುಮಾರಸ್ವಾಮಿ ರವರನ್ನ ಮುಖ್ಯಮಂತ್ರಿ ಆಗುವುದು ಖಚಿತ ಎಂದು ಭರವಸೆ ನೀಡಿದರು.
ಶಾಸಕ ಕೆ.ಆರ್.ರಮೇಶ್‍ಕುಮಾರ್‍ರವರು ಅರಣ್ಯ ಇಲಾಖೆ ಹಾಗೂ ಸಣ್ಣ ರೈತರ ಜಮೀನನ್ನು ಆಕ್ರಮಸಿಕೊಂಡು, ಕ್ಷೇತ್ರದ ಅಭಿವೃದ್ಧಿಗಿಂತ ಸ್ವಂತ ಜಮೀನನ್ನು ಅಭಿವೃದ್ಧಿ ಪಡಿಸಿದ್ದಾರೆ ವಿನಃ ಕ್ಷೇತ್ರ ಅಭಿವೃದ್ಧಿಪಡಿಸಿಲ್ಲ ಎಂದು ಆರೋಪಿಸಿದರು.
ಮುಂದಿನ ಚುನಾವಣೆಯಲ್ಲಿ ನನಗೆ ಮತವನ್ನು ಹಾಕಿ ಗೆಲುವು ತಂದುಕೊಡುವ ಮೂಲಕ ರಾಜ್ಯದಲ್ಲಿ ಎಚ್.ಡಿ.ಕುಮಾರ್‍ಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ಸರ್ಕಾರವನ್ನು ಆಡಳಿತಕ್ಕೆ ತರೋಣ ಎಂದು ಮನವಿ ಮಾಡಿದರು.
ಗುಡಿಪಲ್ಲಿ ಶಿವಾರೆಡ್ಡಿ ನೇತೃತ್ವದಲ್ಲಿ 40 ಕುಟುಂಬಗಳು ಕಾಂಗ್ರೆಸ್ ಪಕ್ಷದಿಂದ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಗೊಂಡರು. ಜಿ.ಪಂ.ಮಾಜಿ ಅಧ್ಯಕ್ಷ ತೂಪಲ್ಲಿ ಆರ್.ನಾರಾಯಣಸ್ವಾಮಿ, ಕಸಬಾ ಹೋಬಳಿಯ ಜಿ.ಪಂ ಮಾಜಿ ಸದಸ್ಯ ಶ್ರೀನಿವಾಸ್, ಮುಖಂಡರಾದ ಬಿ.ವಿ.ಶಿವಾರೆಡ್ಡಿ, ಕೆ.ವಿ.ಶಿವಾರೆಡ್ಡಿ, ಸಿಮೆಂಟ್‍ನಾರಾಯಣಸ್ವಾಮಿ, ಕೊರ್ನಹಳ್ಳಿ ಆಂಜಿ, ಗೌನಿಪಲ್ಲಿ ರಾಮಮೋಹನ್, ಭೂಚಕ್ರರೆಡ್ಡಿ, ಮಹೇಶ್, ಅಶೋಕ್, ಸುಧಾಕರ, ಗುರುವಲ್ಲೋಲ್ಲಗಡ್ಡ ರಾಜ, ಶಿವಾರೆಡ್ಡಿ, ರಘುನಾಥಪುರ ಸುಬ್ರಮಣಿ, ಕೊತ್ತೂರುಶಿವ, ಅಮ್ಜದ್ ಇದ್ದರು.

ಗಂಟಾಲಕಟ್ಟೆ : ಆಶಾವಾದಿ ಪ್ರಕಾಶನ್ ಆನಿ ಐ.ಸಿ.ವೈ.ಎಮ್/ವೈ.ಸಿ.ಎಸ್ ಮಾಂಡುನ್ ಹಾಡ್ತಾ; ಕೊಂಕಣಿ ಸಾಹಿತಿಕ್ ತರ‍್ಭೆತೆ ಶಿಭಿರ್

ಆಶಾವಾದಿ ಪ್ರಕಾಶನ್ ಆನಿ ಐ.ಸಿ.ವೈ.ಎಮ್/ವೈ.ಸಿ.ಎಸ್ ಗಂಟಾಲಕಟ್ಟೆ ಮಾಂಡುನ್ ಹಾಡ್ತಾ; ಕೊಂಕಣಿ ಸಾಹಿತಿಕ್ ತರ‍್ಭೆತೆ ಶಿಭಿರ್
(ಸನ್ವಾರಾ 6 ಮಾಯ್ 2023, ಸಕಾಳಿಂ 9:30 ಥಾವ್ನ್ 3:30 ಪರ್ಯಾಂತ್)

1. ಖಬ್ರೊ ಬರಂವ್ಚಿ ತರ್ಭೆತ್ (ಮಾ|ರೊಯ್ಸನ್ ಫೆರ್ನಾಂಡಿಸ್, ಸಂ:ಉಜ್ವಾಡ್ ಪಂದ್ರಾಳೆಂ)
2. ಲೇಕನಾಂ ಬರಂವ್ಚಿ ತರ್ಭೆತ್ (ಮಾ|ಚೇತನ್ ಲೋಬೊ, ಸಂ:ಸೆವಕ್ ಮಯ್ನ್ಯಾಳೆಂ)
3. ಮೊಟ್ವ್ಯೊ ಕಥಾ ಬರಂವ್ಚಿ ತರ್ಭೆತ್ (ವಲ್ಲಿ ಕ್ವಾಡ್ರಸ್, ಸಂ: ಪಯ್ಣಾರಿ.ಕೊಮ್)

ಆಶಾವಾದಿ ಪ್ರಕಾಶನಾಚಿಂ ದೋನ್ ಪುಸ್ತಕಾಂ ಮೊಕ್ಳಿಕ್ ಜಾತಲಿಂ;
1. ಆಟ್ವೊ ಸುರ್ (ಸಲೊಮಿ ಮಿಯಾಪದವ್‌ಚೊ ಕವಿತಾಜಮೊ)
2. ಪಾನಾಂಚ್ ಫುಲಾಂ ಜಾತಾನಾ (ಮೊನಿಕಾ ಡೆ’ಸಾ ಮಥಾಯಸಾಚೊ ಕವಿತಾಜಮೊ)

ಕೊಂಕಣಿ ಕವಿಗೋಶ್ಟಿ ಮಾಂಡುನ್ ಚಲವ್ನ್ ವ್ಹರ್ತಾ ಆಂಡ್ಯೂ ಎಲ್. ಡಿ’ಕುನ್ಹಾ

ಮಾ|ರೊನಾಲ್ಡ್ ಡಿ’ಸೋಜಾಚ್ಯಾ ಅಧ್ಯಕ್ಷ್‌ಪಣಾಖಾಲ್ ಚಲ್ಚ್ಯಾ ಹ್ಯಾ ಕಾಮಾಸಾಳಾಂತ್ ಯುವ ಬರವ್ಪ್ಯಾಂನಿ ತಶೆಂಚ್ ಸಾಹಿತಿಕ್ ಅಭಿರುಚ್ ಆಸ್ಚ್ಯಾಂನಿ ಸಂಪರ್ಕ್ ಕರ್ಚೊ.

ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಉಪಾಧ್ಯಕ್ಷರನ್ನಾಗಿ ವೈ.ವಿ.ನರಸಿಂಹಮೂರ್ತಿ ನೇಮಕ

ಶ್ರೀನಿವಾಸಪುರ ತಾಲ್ಲೂಕಿನ ಪನಸಮಾಕನಹಳ್ಳಿ ಗ್ರಾಮದ ವೈ.ವಿ.ನರಸಿಂಹಮೂರ್ತಿ ಅವರನ್ನು, ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿದೆ.

ಶ್ರೀನಿವಾಸಪುರದ ಪುರಸಭಾ ಕಚೇರಿಯಲ್ಲಿ ಭಗವಾನ್ ಮಹಾವೀರ ಜನಯಂತಿ

ಶ್ರೀನಿವಾಸಪುರದ ಪುರಸಭಾ ಕಚೇರಿಯಲ್ಲಿ ಮಂಗಳವಾರ ಪುರಸಭಾ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ ನೃತೃತ್ವದಲ್ಲಿ ಭಗವಾನ್ ಮಹಾವೀರ ಜನಯಂತಿ ಆಚರಿಸಲಾಯಿತು.

ಮತದಾರರು ತಪ್ಪದೆ ಮತದಾನ ಮಾಡಬೇಕು. ಅತ್ಯಮೂಲ್ಯವಾದ ಮತ ವ್ಯರ್ಥವಾಗಲು ಬಿಡಬಾರದು:ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ

ಶ್ರೀನಿವಾಸಪುರ: ಮತದಾರರು ತಪ್ಪದೆ ಮತದಾನ ಮಾಡಬೇಕು. ಅತ್ಯಮೂಲ್ಯವಾದ ಮತ ವ್ಯರ್ಥವಾಗಲು ಬಿಡಬಾರದು ಎಂದು ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ ಹೇಳಿದರು.
ಪಟ್ಟಣದಲ್ಲಿ ಪುರಸಭೆ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಮತದಾರರ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜಾಗೃತ ಮತದಾರರಿಂದ ಮಾತ್ರ ಉತ್ತಮ ಅಭ್ಯರ್ಥಿ ಆಯ್ಕೆ ಸಾಧ್ಯವಾಗುತ್ತದೆ ಎಂದು ಹೇಳಿದರು.
ಚುನಾವಣಾ ಆಯೋಗ ಮತದಾನಕ್ಕೆ ಅಗತ್ಯವಾದ ಎಲ್ಲ ಸಿದ್ಧತೆ ಮಾಡುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿ ಮತದಾರನೂ ಮತ ಚಲಾಯಿಸಿದಾಗ ಮಾತ್ರ ವ್ಯವಸ್ಥೆ ಘನತೆ ಹೆಚ್ಚುತ್ತದೆ. ಚುನಾವಣೆ ಪ್ರಜಾಪ್ರಭುತ್ವದ ಹಬ್ಬ. ಈ ಹಬ್ಬದಲ್ಲಿ ಮತದಾರರು ಹುರುಪಿನಿಂದ ಭಾಗವಹಿಸಬೇಕು ಎಂದು ಹೇಳಿದರು.
ಪುರಸಭೆ ಸಿಬ್ಬಂದಿ ಪಟ್ಟಣದಲ್ಲಿ ಮೆರವಣಿಗೆ ನಡೆಸಿ ಜನರಲ್ಲಿ ಮತದಾನ ಕುರಿತು ಅರಿವು ಮೂಡಿಸಿದರು.
ಆರೋಗ್ಯ ನಿರೀಕ್ಷಕ ಕೆ.ಜಿ.ರಮೇಶ್, ಕಂದಾಯ ಅಧಿಕಾರಿ ಎನ್.ಶಂಕರ್ ಇದ್ದರು.

ವಿಶ್ವಕ್ಕೆ ಅಹಿಂಸೆಯ ಸಂದೇಶ ನೀಡಿದ ಮಹಾವೀರರ ಜಯಂತಿಗೂ ಕಾಡಿದ ನೀತಿ ಸಂಹಿತೆ : ಬೆಳ್ಳಿ ರಥದಲ್ಲಿ ಮಹಾವೀರರ ಮೆರವಣಿಗೆ-ಶ್ರದ್ಧಾಭಕ್ತಿಗಳಿಂದ ಅಹಿಂಸಾ ಮೂರ್ತಿಯ ಸ್ಮರಣೆ

ಕೋಲಾರ:- ವಿಶ್ವಕ್ಕೆ ಅಹಿಂಸೆ ಹಾಗೂ ಶಾಂತಿಯ ಸಂದೇಶ ಸಾರಿದ ಭಗವಾನ್ ಮಹಾವೀರರ ಜಯಂತಿಗೂ ಚುನಾವಣಾ ನೀತಿ ಸಂಹಿತೆಯ ಬಿಸಿ ತಟ್ಟಿತ್ತಾದರೂ, ಸಮುದಾಯದ ಜನತೆ ಅನುಮತಿ ಪಡೆದುಕೊಂಡು ಸಂಪ್ರದಾಯಬದ್ದವಾಗಿ ಮಂಗಳವಾರ ಶ್ರದ್ಧಾ-ಭಕ್ತಿಯಿಂದ ಜಯಂತಿ ಆಚರಿಸಿದರು.
ಪ್ರತಿವರ್ಷದ ಸಂಪ್ರದಾಯದಂತೆ ಜೈನ ಬಂಧುಗಳು ಇಡೀ ಮೆರವಣಿಗೆಯ ಉಸ್ತುವಾರಿಯನ್ನು ವಹಿಸಿದ್ದು, ಕೇಸರಿ ಪೇಟ ತೊಟ್ಟ ನೂರಾರು ಜೈನ ಬಂಧುಗಳು, ಮಹಿಳೆಯರೊಂದಿಗೆ ವೀರ ಮತ್ತು ರಾಜ ಎರಡು ಕುದುರೆಗಳೊಂದಿಗೆ ಮಹಾವೀರರ ಬೆಳ್ಳಿರಥದ ಭವ್ಯ ಮೆರವಣಿಗೆಗೆ ಜಿಲ್ಲಾ ಜೈನ ಸಂಘದ ಅಧ್ಯಕ್ಷ ಜಯಂತಿಲಾಲ್ ಚಾಲನೆ ನೀಡಿದರು.
ಸಮಾಜದಲ್ಲಿ ಶಾಶ್ವತ ಶಾಂತಿ, ಸಂಯಮ ಮೂಡಲು ಮಹಾವೀರರ ತತ್ವಗಳು ಇಂದು ಪ್ರಸ್ತುತವಾಗಿವೆ, ಅವರ ಹಾಕಿಕೊಟ್ಟ ಹಾದಿಯಲ್ಲಿ ಸಮಾಜ ಸಾಗಬೇಕಾಗಿದೆ ಎಂದು ತಿಳಿಸಿದ ಅವರು, ಬಂಧುಗಳಿಗೆ ಶುಭ ಕೋರಿದರು.
ವಿವಿಧ ಹೂವುಗಳಿಂದ ಅಲಂಕರಿಸಿದ್ದ ಮಹಾವೀರರ ಭಾವಚಿತ್ರವನ್ನು ತೆರೆದ ವಾಹನದಲ್ಲಿ ಪ್ರತಿಷ್ಠಾಪಿಸಿದ ಬಳಿಕ ನಾದಸ್ವರ ಹಾಗೂ ಜಯ ಘೋಷಣೆಯೊಂದಿಗೆ ಅಮ್ಮವಾರಿಪೇಟೆ ಮುಖ್ಯರಸ್ತೆಯಲ್ಲಿ ಮೆರವಣಿಗೆ ಮಾಡಲಾಯಿತು.
ಸಮವಸ್ತ್ರ ಧರಿಸಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಯುವಕ, ಯುವತಿಯರು ಬ್ಯಾಂಡ್‍ಸೆಟ್ ತಾಳಕ್ಕೆ ತಕ್ಕಂತೆ ಕುಣಿದು ಸಂಭ್ರಮಿಸಿದರು. ಮಹಾತ್ಮಗಾಂಧಿ ಚೌಕ, ದೊಡ್ಡಪೇಟೆ ರಸ್ತೆ, ಬ್ರಾಹ್ಮಣರ ಬೀದಿ, ಕಾಳಮ್ಮ ದೇವಸ್ಥಾನದ ಮಾರ್ಗವಾಗಿ ಸಾಗಿದ ಮೆರವಣಿಗೆ ಅಮ್ಮವಾರಿಪೇಟೆಯ ಭಗವಾನ್ ಮಹಾವೀರ ಜೈನ ಮಂದಿರದ ಬಳಿ ಕೊನೆಗೊಂಡಿತು.
ಜೈನ ಮಂದಿರದಲ್ಲಿ ಪ್ರಾರ್ಥನೆ, ಅಭಿಷೇಕ, ಪ್ರವಚನ ಮೊದಲಾದ ಕಾರ್ಯಕ್ರಮಗಳು ನಡೆದವು. ಜೈನ ಸಮಾಜ ಬಾಂಧವರು ಕುಟುಂಬ ಸದಸ್ಯರೊಂದಿಗೆ ಮಂದಿರಕ್ಕೆ ಆಗಮಿಸಿ ಮಹಾವೀರರಿಗೆ ಅಕ್ಕಿ, ಹಣ್ಣು, ಹಾಲು, ನೀರು ಮೊದಲಾದ ವಸ್ತುಗಳಿಂದ ವಿಶೇಷ ನೈವೇದ್ಯ ಪೂಜೆ ಸಲ್ಲಿಸುತ್ತಿದ್ದ ದೃಶ್ಯ ಕಂಡುಬಂತು. ಮಂದಿರದಲ್ಲಿ ನಡೆದ ಸಾಮೂಹಿಕ ಭಜನೆಯಲ್ಲಿ ನೂರಾರು ಭಕ್ತರು ಪಾಲ್ಗೊಂಡಿದ್ದರು. ರಾಘವೇಂದ್ರಸ್ವಾಮಿ ಮಠದಲ್ಲಿ ಅನ್ನದಾನ ನಡೆಸಲಾಯಿತು. ಮಹಾವೀರ ಜಯಂತಿ ಹಿನ್ನೆಲೆಯಲ್ಲಿ ನಗರದೆಲ್ಲೆಡೆ ಮಾಂಸದ ಅಂಗಡಿಗಳನ್ನು ಇಡೀ ದಿನ ಮುಚ್ಚಲಾಗಿತ್ತು.
ಮೆರವಣಿಗೆ ಚಾಲನೆ ನೀಡಿದ ಸಂದರ್ಭದಲ್ಲಿ ಸಮುದಾಯದ ಮುಖಂಡರಾದ ಜುವೇರಿಲಾಲ್, ಲಲಿತ್ ಕುಮಾರ್, ನೀರಜ್‍ಕುಮಾರ್, ದಿಲೀಪ್ ಕುಮಾರ್, ಸಾಗರ್, ಅಮಿತ್, ಮುಖಂಡರಾದ ರಂಜಿತ್, ರಮೇಶ್,ವಿಕ್ಕಿ ಅಶೋಕ್, ರತನ್ ಲೋಕ್ ಅಂಗಡಿಯ ಇಂದ್ರಚಂದ್, ಲಾಲ್ ಚಂದ್, ಸುನೀಲ್‍ಕುಮಾರ್, ಮಹೇಂದ್ರ ಕುಮಾರ್, ಉತ್ತಮ್ ಮತ್ತಿತರರು ಉಪಸ್ಥಿತರಿದ್ದರು.

ಅಂಗನವಾಡಿ ಕೇಂದ್ರಗಳಲ್ಲಿ ವಿತರಿಸುವ ಮೊಟ್ಟೆಯ ಬೆಲೆ ಹೆಚ್ಚಿಸಲು ಮನವಿ

ಕೋಲಾರ / ಏಪ್ರಿಲ್ 4 : ಕೋಲಾರ ಜಿಲ್ಲೆಯಲ್ಲಿ ಅಂಗನವಾಡಿ ಕೇಂದ್ರಗಳ ಫಲಾನುಭವಿಗಳಿಗೆ ನೀಡುತ್ತಿರುವ ಮೊಟ್ಟೆಯ ಧರ ಇಲಾಖೆಯಿಂದ ರೂ.6 ನೀಡುತ್ತಿದ್ದು, ಸದರಿ ಧರವನ್ನು 7.50ಕ್ಕೆ ಹೆಚ್ಚಿಸಲು ಕೋರಿ ಪ್ರಜಾ ಸೇವಾ ಸಮಿತಿ ಸಂಯೋಜಿತ ಕರ್ನಾಟಕ ರಾಜ್ಯ ಅಂಗವನಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಕ್ಷೇಮಾಭಿವೃದ್ಧಿ ಸಮಿತಿಯು ಕೋಲಾರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ನಡೆಯುತ್ತಿರುವ ಅಂಗನವಾಡಿ ಕೇಂದ್ರಗಳ ಮಕ್ಕಳಿಗೆ, ಗರ್ಭಿಣಿ, ಬಾಣಂತಿಯರಿಗೆ ಅಂಗನವಾಡಿ ಕೇಂದ್ರಗಳ ಮೂಲಕ ಮೊಟ್ಟೆ, ಫಲಾನುಭವಿಗಳಾದ ಗರ್ಭಿಣಿ, ಬಾಣಂತಿಯರಿಗೆ ವಾರಕ್ಕೆ 5 ದಿನ ಹಾಗೂ ಮಕ್ಕಳಿಗೆ ವಾರಕ್ಕೆ ಮಂಗಳವಾರ, ಶುಕ್ರವಾರ ಅಂದರೆ 2 ದಿನ ಮೊಟ್ಟೆ ನೀಡುತ್ತಿದ್ದು, ಇಲಾಖೆಯಿಂದ ನಿಗಧಿಪಡಿಸಿರುವ ಮೊಟ್ಟೆ ಧರ 1 ಮೊಟ್ಟೆಗೆ ರೂ.6/-ಗಳಿದ್ದು, ಗ್ರಾಮಾಂತರ ಪ್ರದೇಶದಲ್ಲಿ ಮತ್ತು ನಗರ ಪ್ರದೇಶದಲ್ಲಿ ಒಂದು ಮೊಟ್ಟೆಗೆ ರೂ. 7/- ರಿಂದ 7.50 ವರೆಗೆ ಧರ ನೀಡಿ ಅಂಗನವಾಡಿ ಕಾರ್ಯಕರ್ತೆಯರು ಖರೀದಿ ಮಾಡಬೇಕಾಗಿದೆ. ಕಾರ್ಯಕರ್ತರು ತಮ್ಮ ಸ್ವಂತ ಹಣ ಹೆಚ್ಚುವರಿಯಾಗಿ ರೂ.1 ರಿಂದ 1.50 ವರೆಗೂ ನೀಡಿ ಖರೀದಿ ಮಾಡಿ ವಿತರಿಸುತ್ತಿದ್ದಾರೆ.
ಆಗಾಗಿ ಎಲ್ಲಾ ಅಂಗನವಾಡಿ ಕೇಂದ್ರಗಳ ಫಲಾನುಭವಿಗಳಿಗೆ ನೀಡುತ್ತಿರುವ ಇಲಾಖಾ ಮೊಟ್ಟೆಯ ಧರ ರೂ. 6 ರಿಂದ 7.50ಕ್ಕೆ ಹೆಚ್ಚುವರಿ ಮಾಡಿ ಕಾರ್ಯಕರ್ತೆಯರು ಸ್ವಂತ ಹಣದಲ್ಲಿ ನೀಡುತ್ತಿರುವುದನ್ನು ತಪ್ಪಿಸಿ ಬಡ ಕಾರ್ಯಕರ್ತರಿಗೆ ಸಹಾಯ ಮಾಡಬೇಕೆಂದು ಮನವಿಯಲ್ಲಿ ಕೋರಿದ್ದಾರೆ.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಅಂಗವನಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಕ್ಷೇಮಾಭಿವೃದ್ಧಿ ಸಮಿತಿಯ ರಾಜ್ಯ ಸಂಸ್ಥಾಪಕ ಅಧ್ಯಕ್ಷ ಕಲ್ವಮಂಜಲಿ ಸಿ. ಶಿವಣ್ಣ, ರಾಜ್ಯ ಸಂಚಾಲಕಿ ನಾಗವೇಣಮ್ಮ, ರಾಜ್ಯ ಉಪಾಧ್ಯಕ್ಷೆ ವಿ.ಜಮುನಾರಾಣಿ, ರಾಜ್ಯ ಸಮಿತಿ ಸದಸ್ಯರಾದ ಪುಷ್ಪ, ಸರಸ್ಪತಿ, ರಾಧ ಮುಂತಾದವರು ಉಪಸ್ಥಿತರಿದ್ದರು.

ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : ಮತದಾನ ಜಾಗೃತಿ ಅಭಿಯಾನ, ಪ್ರತಿಜ್ಞಾ ವಿಧಿ ಬೋಧನೆ


ನಂದಳಿಕೆ : ಮತದಾನವು ಪ್ರಜಾಪ್ರಭುತ್ವದ ಕೇವಲ ರಾಜಕೀಯ ಹಕ್ಕಾಗಿರದೆ ಅದೊಂದು ಪವಿತ್ರ ಕರ್ತವ್ಯವೂ ಆಗಿದೆ. ಮತದಾನ ನಮ್ಮ ಅಮೂಲ್ಯ ಹಕ್ಕು, ಯಾವುದೇ ಆಮಿಷಗಳಿಗೆ ಬಲಿಯಾಗದೇ, ಸ್ವಾಭಿಮಾನವನ್ನು ಕಳೆದುಕೊಳ್ಳದೇ ತಮ್ಮ ಕೆಲಸದ ನಡುವೆ ಬಿಡುವು ಮಾಡಿಕೊಂಡು ತಪ್ಪದೇ ಮತದಾನ ಮಾಡಿ ಹಾಗೂ ತಮ್ಮ ಹಕ್ಕು ಚಲಾಯಿಸಿ ಎಂದು ಭಾರತ ಸರಕಾರದ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ ಹಾಗೂ ನೆಹರು ಯುವ ಕೇಂದ್ರ ಉಡುಪಿ, ನಂದಳಿಕೆ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಮತು ಜೇಸಿಐ ಬೆಳ್ಮಣ್ಣು ವತಿಯಿಂದ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ ಸಂಘದ ರಂಗಮಂದಿರದಲ್ಲಿ ನಡೆದ ಮತದಾನ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಬೆಳ್ಮಣ್ಣು ಜೇಸಿಐ ಘಟಕದ ಅಧ್ಯಕ್ಷರಾದ ಅಬ್ಬನಡ್ಕ ಸತೀಶ್ ಪೂಜಾರಿ ಮಾತನಾಡಿ ಸಂಘದ ಸದಸ್ಯರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ (ರಿ.)ನ ಅಧ್ಯಕ್ಷರಾದ ಪ್ರಶಾಂತ್ ಪೂಜಾರಿ ವಹಿಸಿದ್ದರು. ಈ ಸಂದರ್ಭದಲ್ಲಿ ಸಂಘದ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಬೀರೊಟ್ಟು ದಿನೇಶ್ ಪೂಜಾರಿ, ಮಹಿಳಾ ಸಂಘಟನಾ ಕಾರ್ಯದರ್ಶಿ ಪದ್ಮಶ್ರೀ ಪೂಜಾರಿ ಹಾಗೂ ಸಂಘದ ಸದಸ್ಯರು ಮೊದಲಾದವರು ಉಪಸ್ಥಿತಿತರಿದ್ದರು.

Holy Redeemer English Medium School inaugurated its 5 days Sports Summer Camp

Holy Redeemer English Medium School inaugurated its 5 days Sports Summer Camp on April 3rd at 9:30 am.

 Rev Fr. Thomas Sequeira, Parish Priest of St Anne’s Church, Nala was the chief guest. By lighting the lamp, camp was inaugurated. Fr Thomas Sequiera motivated students through his words of inspiration. Headmaster Rev Fr. Clifford Pinto encouraged participants to make good use of the camp with true sportsmanship.

Mr Walter Monis, Vice President of Parish Pastoral Council, Deacon Preetham Rego, Belthangady Church, Mr Bonaventure Pinto, Vice President of PTA and Coaches of various sports, Mr Krishnananda, Mr. Sugan, Mr. Nagaraj, Mr. Wilson, Mr. Rajesh and Mr Harsha Kumar, were present. Students Deepti welcomed, Praneeth Moras delivered vote of thanks and Rishel Bennis compered the event. Mr. Sarath Pinto, Physical Education Teacher well co-ordinated towards arranging the sports summer camp.