Summer Camp Finale at Mount Carmel Central School

The 2023 Summer Camp at Mount Carmel Central School, Maryhill, Mangaluru which aimed at keeping the campers engaged, enthused, energetic by providing them an even platform to explore and express their creativity and curiosity came to a halt on 15th of April 2023. The valedictory programme commenced being grateful to the Almighty for the opportunities provided.

With every activity like zumba, dance, yoga, theatre and drama, fun with science, water games, art and craft, cooking without fire, outdoor games, clay modelling, mini mela, kite flying to watching a movie which the camp provided, the exuberant campers zealously participated and showcased their creativity. Thus achieving the motto of the camp ‘Involve and enrich’. The camp was earnestly appreciated and applauded by the campers and their parents. A few were happy to articulate their experiences of the camp during the valedictory programme.

The finale was an amalgamation of action song, yoga, zumba and drama followed by receiving the participation certificate. The auditorium was in a hustle and bustle as the campers bid bye-bye to the 2023 camp. The chief guest our own teacher Neetha, also the camp co-ordinator was heartily welcomed along with the administrator Sr Carissima. In her message, Sr Carissima acknowledged the presence of the parents, applauded the team work of the teachers and appreciated the involvement of the campers.The cherry on the cake was the mass zumba dance which showcased the life of the fifteen days camp.

Passed away Mrs. Rita Pinto  (80) Koteshwar

Mrs. Rita Pinto  (80) Koteshwar

W/o Late Jerome Pinto Koteshwar

M/O Felix, Lilly, Milly, Marshal, William, Michael & Late

Joel. Mother in law of David Siqueira

Funeral details,  her mortal remains will b brought to her residence in Koteshwar Behind Majestic Hall,  at 2.30pm and will be kept for final homage till 3.30pm followed by Mass at St. Antony’s Church Koteshwar 4.00pm

ಬೇಸಿಗೆಯಲ್ಲಿ ರೈತರ ಬೆಳೆ ರಕ್ಷಣೆಗೆ 10 ತಾಸು ಗುಣಮಟ್ಟದ ವಿದ್ಯುತ್ ನೀಡಬೇಕು- ಇಲಾಖೆಯಲ್ಲಿ ನಡೆಯುತ್ತಿರುವ ಭ್ರಹ್ಮಾಂಡ ಭ್ರಷ್ಟಾಚಾರ ತನಿಖೆ ಮಾಡಿ-ರೈತ ಸಂಘ

ಮುಳಬಾಗಿಲು-ಏ-20, ಬೇಸಿಗೆಯಲ್ಲಿ ರೈತರ ಬೆಳೆ ರಕ್ಷಣೆಗೆ 10 ತಾಸು ಗುಣಮಟ್ಟದ ವಿದ್ಯುತ್ ನೀಡುವ ಜೊತೆಗೆ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಹ್ಮಾಂಡ ಭ್ರಷ್ಟಾಚಾರ ತನಿಖೆ ಮಾಡಲು ವಿಶೇಷ ತಂಡ ರಚನೆ ಮಾಡಬೇಕೆಂದು ರೈತ ಸಂಘದಿಂದ ನಷ್ಠ ಬೆಳೆ ಸಮೇತ ಬೈರಕೂರು ವಿದ್ಯುತ್ ಉಪ ಕೇಂದ್ರದ ಮುಂದೆ ಹೋರಾಟ ಮಾಡಿ ಬೆಸ್ಕಂ ಅಧಿಕಾರಿ ಸಂತೋಷ್ ರವರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ದೇವರು ವರ ಕೊಟ್ಟರು ಪೂಜಾರಿ ನೀಡಲಿಲ್ಲ ಎಂಬ ಗಾದೆಯಂತೆ ಸರ್ಕಾರ ಬೇಸಿಗೆಯಲ್ಲಿ ರೈತರು ಬೆಳೆದ ಬೆಳೆಗಳ ರಕ್ಷಣೆಗೆ ನೀರು ಹಾಯಿಸಲು ಗುಣಮಟ್ಟದ 10 ತಾಸು ವಿದ್ಯುತ್ ನೀಡುತ್ತೇವೆಂದು ಭರವಸೆ ನೀಡಿದ್ದ ಇಂದನ ಸಚಿವರ ಆದೇಶ ವಿಧಾನ ಸೌಧದ ಕೊಠಡಿಗಳಲ್ಲೇ ಸುತ್ತಿತಿದೆ ಹೊರೆತು ಆಯಾ ವ್ಯಾಪ್ತಿಯ ಬೆಸ್ಕಂ ಅಧಿಕಾರಿಗಳ ಕಛೇರಿಗೆ ತಲುಪಿಲ್ಲ. ರೈತರ ಗೊಳು ತಪ್ಪುತ್ತಿಲ್ಲವೆಂದು ತಾಲ್ಲೂಕು ಅಧ್ಯಕ್ಷ ಯಲುವಳ್ಳಿ ಪ್ರಭಾಕರ್ ಬೆಸ್ಕಂ ಅಧಿಕಾರಿಗಳ ವಿರುದ್ದ ಆಕ್ರೊಷ ವ್ಯಕ್ತಪಡಿಸಿದರು.
ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಬೆಳೆದಂತಹ ಬೆಳೆ ಮಳೆಗಾಲದಲ್ಲಿ ಪ್ರಕೃತಿ ವಿಕೋಪಕ್ಕೆ ನಾಶವಾದರೆ ಬೇಸಿಗೆಯಲ್ಲಿ ಸಮೃದ್ದವಾದ ಬೆಳೆ ಕೈಗೆ ಬಂದು ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುವ ನಿರೀಕ್ಷೆಯಲ್ಲಿರುವ ರೈತನಿಗೆ ಬೆಳೆ ರಕ್ಷಣೆ ಮಾಡುವುದು ಅರ ಸಾಹಸವಾಗಿದೆ. ಬೆಸ್ಕಂ ಅಧಿಕಾರಿಗಳ ಬೇಜವಾಬ್ದಾರಿ ಹಾಗೂ ರೈತ ವಿರೋಧಿ ದೋರಣೆಯಿಂದ ಗುಣಮಟ್ಟದ ವಿದ್ಯುತ್ ನೀಡದೆ ಬೆಳೆಗಳಿಗೆ ನೀರು ಆಯಿಸಲಾಗದೆ ಕಣ್ಣು ಮುಂದೆಯೇ ಬೆಳೆ ಒಣಗಿ ಪಸಲು ನೆಲಕ್ಕೆ ಉದುರುವ ಮೂಲಕ ಹಾಕಿದ ಬಂಡವಾಳ ಕೈಗೆ ಸಿಗದೆ ಖಾಸಗಿ ಸಾಲಕ್ಕೆ ರೈತ ಸಿಲುಕಿ ಆತ್ಮಹತ್ಯ ಹತ್ತ ಮುಖ ಮಾಡುವ ಮಟ್ಟಕ್ಕೆ ಬೆಸ್ಕಂ ಅಧಿಕಾರಿಗಳು ನಡೆದುಕೊಳ್ಳುತ್ತಿದ್ದಾರೆಂದು ಆರೋಪ ಮಾಡಿದರು.
ರೈತ ಮೂರು ತಿಂಗಳು ಬೆವರು ಸುರಿಸಿ ಭೂಮಿಗೆ ಹಾಕಿದ ಬೀಜ ದ ಪಸಲು ರೈತನೇ ತಿನ್ನುವುದಿಲ್ಲ. ಎಲ್ಲಾ ಅಧಿಕಾರಿಗಳು ತಿನ್ನುವ ಮೊದಲು ತಾನು ರೈತರಿಗೆ ತೊಂದರೆ ಮಾಡಬಾರದೆಂಬ ಮನಸಾಕ್ಷಿ ಇರಬೇಕು. ಆದರೆ ಅಧಿಕಾರಿಗಳಿಗೆ ಮಾನವೀಯತೆ ಇಲ್ಲವೇ ಇಲ್ಲ. ಕಷ್ಟಾಪಡದ ಶ್ರೀಮಂತರ ಹಾಗೂ ರಾಜಕಾರಣಿಗಳ ಸಭೆ ಸಮಾರಂಭಗಳಿಗೆ ದಿನದ 24 ಗಂಟೆ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಸಭೆ ಮುಗಿಯವರೆಗೂ ಅಲ್ಲಿಯೇ ಇದ್ದು, ಯಾವುದೇ ತೊಂದರೆಯಾಗದ ರೀತಿ ಜಾಗೃತಿ ವಹಿಸುವ ಬೆಸ್ಕಂ ಅಧಿಕಾರಿಗಳೇ ರೈತರು ನಿಮಗೆ ಏನು ದ್ರೋಹ ಮಾಡಿದ್ದಾರೆ. ಕೊಡುವ ವಿದ್ಯುತ್‍ನ್ನು ಗಂಟೆಗೆ 800 ಬಾರಿ ತೆಗೆದು ರೈತರ ಬಾಳನ್ನು ಹಾಳು ಮಾಡುತ್ತಿದ್ದಾರೆಂದು ಅಸಮದಾನ ವ್ಯಕ್ತಪಡಿಸಿದರು.
ಬೆಸ್ಕಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ನೊಂದಿರುವ ರೈತ ನಂಗಲಿ ನಾಗೇಶ್ ಧರ್ಮ ಮಾತನಾಡಿ ಒಂದು ಎಕರೆ ತೋಟಕ್ಕೆ ನೀರು ಆಯಿಸಬೇಕಾದರೆ ರೈತ ಮನೆ ಹೆಂಡತಿ ಮಕ್ಕಳನ್ನು ಬಿಟ್ಟು ದಿನದ 24 ಗಂಟೆ ಕೊಳವೆಬಾವಿಯ ಹತ್ತಿರ ಸಂಸಾರ ಮಾಡಬೇಕಾದ ಪರಿಸ್ತಿತಿ ಇದೆ. ಅದರ ಜೊತೆಗೆ ಹೋಗಿ ಬರುವ ವಿದ್ಯುತ್‍ನಿಂದ ಕೊಳವೆಬಾವಿ ಮೋಟರ್‍ಗಳು ಸುಟ್ಟು ಅದನ್ನು ರಿಪೇರಿ ಮಾಡಿಲು 20 ಸಾವಿರ ಖರ್ಚು ಮಾಡಬೇಕಾದ ಪರಿಸ್ಥಿತಿ ಇದೆ. ಜೊತೆಗೆ ಟಿ.ಸಿ. ಏನಾದರೂ ಸುಟ್ಟರೆ ಅದನ್ನು ಸರಿಪಡಿಸಲು ರೈತರೇ ಹಣವನ್ನು ಹಾಕಿ ಲೈನ್‍ನಮ್ಯಾನ್‍ಗಳಿಗೆ ಕೊಡಬೇಕು. ಇಲ್ಲವಾಧರೆ ನೂರೊಂದು ನೆಪ ಹೇಳಿ ವಾರವಾದರು ಟಿ.ಸಿ. ಕೊಡುವುದಿಲ್ಲ. ಅಷ್ಟರ ಮಟ್ಟಿಗೆ ಇಲಾಖೆ ಹದಗೆಟ್ಟಿದೆ ಆಕ್ರೋಷ ವ್ಯಕ್ತಪಡಿಸಿದರು.
ಬೆಸ್ಕಂ ಇಲಾಖೆ ಎಂಬುದು ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ ಚಿನ್ನದ ಮೊಟ್ಟೆ ಇಡುವ ಇಲಾಖೆಯಾಗಿ ಮಾರ್ಪಟ್ಟಿದೆ. ಅವಶ್ಯಕತೆ ಇಲ್ಲದ ಟೆಂಡರ್‍ಗಳನ್ನು ಕರೆದು ಗುತ್ತಿಗೆದಾರರ ಜೊತೆ ಶಾಮೀಲಾಗಿ ಲಕ್ಷ ರೂಪಾಯಿ ಕಾಮಗಾರಿಗೆ 10 ಲಕ್ಷ ಅನುದಾನ ನೀಡಿ ಕೋಟಿ ಕೋಟಿ ಹಣವನ್ನು ಲೂಟಿ ಮಾಡುವ ಮೂಲಕ ಬೆಸ್ಕಂ ಇಲಾಖೆಯನ್ನು ಭ್ರಷ್ಟರ ಕೂಪವನ್ನಾಗಿ ಮಾಡಿದ್ದಾರೆಂದು ಆರೋಪ ಮಾಡಿದರು.
24 ಗಂಟೆಯಲ್ಲಿ ರೈತರಿಗೆ ಗುಣಮಟ್ಟದ 10 ತಾಸು ವಿದ್ಯುತ್‍ನ್ನು ಬೇಸಿಗೆ ಮುಗಿಯುವರೆಗೂ ನೀಡಬೇಕು. ಹಾಗೂ ಇಲಾಖೆಯಲ್ಲಿನ ಭ್ರಷ್ಟಾಚಾರತೆಗೆ ಕಡಿವಾಣ ಹಾಕಲು ವಿಶೇಷ ತಂಡ ರಚನೆ ಮಾಡಬೇಕು. ಇಲ್ಲವಾದರೆ ನಷ್ಟ ಬೆಳೆ ಸಮೇತ ರಾಷ್ಟ್ರೀಯ ಹೆದ್ದರಿ ಬಂದ್ ಮಾಡುವ ಎಚ್ಚರಿಕೆಯೊಂದಿ ಮನವಿ ನೀಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಬೆಸ್ಕಂ ಇಂಜನಿಯರ್ ಸಂತೋಷ್ ರವರು ಸ್ವಲ್ಪ ವಿದ್ಯುತ್ ಲೈನ್ ರಿಪೇರಿಯಿಂದ ಅಡೆತಡೆಯಾಗಿದೆ. ಯಾವುದೇ ಕಾರಣಕ್ಕೂ ರೈತರಿಗೆ ವಿದ್ಯುತ್ ನೀಡದೆ ಬೆಳೆ ನಷ್ಟವಾಗಲು ಬಿಡುವುದಿಲ್ಲ. ರೈತರ ಜೊತೆ ಬೆಸ್ಕಂ ಅಧಿಕಾರಿಗಳು ಇರುತ್ತೇವೆಂದು ಭರವಸೆ ನೀಡಿದರು.
ಮನವಿ ನೀಡುವಾಗ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ ಜಿಲ್ಲಾ ಕಾರ್ಯಾಧ್ಯಕ್ಷ ಹೆಬ್ಬಣಿ ಆನಂದರೆಡ್ಡಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಪಾರುಕ್‍ಪಾಷ, ಬಂಗಾರಿ ಮಂಜು, ಭಾಸ್ಕರ್, ರಾಜೇಶ್, ಸುನಿಲ್‍ಕುಮಾರ್, ಗುರುಮೂರ್ತಿ, ವಿಜಯ್‍ಪಾಲ್, ವಿಶ್ವ, ದೇವರಾಜ್, ಗಿರೀಶ್, ಮುಂತಾದವರು ಇದ್ದರು.

ಸಂತ ಪಿಯುಸ್ ಚರ್ಚಿನಲ್ಲಿ ಮಕ್ಕಳಿಗೆ ಬೇಸಿಗೆ ರಜೆ ಶಿಬಿರ

ಕುಂದಾಪುರ: ಸಂತ ಪಿಯುಸಿ ಇಗರ್ಜಿಯ ಸಭಾಭವನದಲ್ಲಿ ಎಪ್ರಿಲ್ ೧೯ ರಿಂದ ಮಕ್ಕಳಿಗೆ ಮೂರು ದಿನಗಳ ಬೇಸಿಗೆ ರಜೆ ಶಿಬಿರ ವನ್ನು ಇಗರ್ಜಿಯ ಧರ್ಮಗುರು ವಂದನೀಯ ಆಲ್ಬರ್ಟ್ ಕ್ರಾಸ್ತಾ ರವರು ಏರ್ಪಡಿಸಿದ್ದರು. ಒಂದರಿಂದ ದ್ವಿತೀಯ ಪಿಯುಸಿ ತನಕದ 85 ವಿದ್ಯಾರ್ಥಿಗಳು ಈ ಶಿಬಿರದಲ್ಲಿ ಭಾಗವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾದ ತ್ರಾಶಿ ಡಾನ್ ಬಾಸ್ಕೋ ವಿದ್ಯಾಲಯದ ಸಹಾಯಕ ಪ್ರಾಂಶುಪಾಲರಾದ ವಂದನೀಯ ರೊನಾಲ್ಡ್ ವಾಜ್ ರವರು ಹಾಗೂ ಹಾಸನ ಪ್ರಾಂತ್ಯದ ಧರ್ಮಭಗಿನಿ ಡಾಕ್ಟರ್ ಸೇವ್ರಿನ್ ಮಿನೆಜಸ್ ರವರು ಮಕ್ಕಳಿಗೆ ವಿವಿಧ ಚಟುವಟಿಕೆಗಳನ್ನು ಅಲ್ಲದೆ ಅವರ ವ್ಯಕ್ತಿತ್ವ ವಿಕಸನದ ಮಾಹಿತಿಗಳನ್ನು ನೀಡಿ ಗುಂಪು ಚಟುವಟಿಕೆಗಳ ಮೂಲಕ ಮಕ್ಕಳನ್ನು ಹುರಿದುಂಬಿಸಿ ಭವಿಷ್ಯಕ್ಕೆ ಉತ್ತಮ ನಾಂದಿಯನ್ನು ಹಾಕಿದರು. ಈ ಕಾರ್ಯಕ್ರಮದಲ್ಲಿ ಇಗರ್ಜಿಯ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಜೇಮ್ಸ್ ಡಿ ಮೆಲ್ಲೋ, ಕಾರ್ಯದರ್ಶಿ ರೇಷ್ಮಾ ಡಿಸೋಜಾ, 20 ಆಯೋಗಗಳ ಸಂಯೋಜಕಿ ಲೀನಾ ತಾವರೊ ಅವರು, ಕ್ರೈಸ್ತ ಶಿಕ್ಷಣ ಸಂಚಾಲಕಿ ಗ್ಲೀಮ ಗೊನ್ಸಾಲ್ವಿಸ್ ಹಾಗೂ ಕ್ರೈಸ್ತ ಶಿಕ್ಷಣ ಶಿಕ್ಷಕಿಯರು ಮತ್ತು ಧರ್ಮಭಾಗಿನಿಯರು ಉಪಸ್ಥಿತರಿದ್ದರು.

ಪಡುಕೋಣೆ ಸಂತ ಅಂತೋನಿ ಚರ್ಚ್ ವತಿಯಿಂದ ವಿಧ್ಯಾರ್ಥಿಗಳಿಗೆ 3 ದಿನಗಳ ಬೇಸಿಗೆ ಶಿಬಿರ

ಪಡುಕೋಣೆ, ಎಪ್ರಿಲ್ 22: ಪಡುಕೋಣೆ ಸಂತ ಅಂತೋನಿ ಚರ್ಚ್ ವತಿಯಿಂದ ಪಡುಕೋಣೆ ಶಾಲಾ ಸಭಾಭವನದಲ್ಲಿ ಎಪ್ರಿಲ್ 20 ರಿಂದ 22 ರ ವರೆಗೆ 3 ದಿನಗಳ ಕಾಲ 1 ರಿಂದ 10 ನೇ ತರಗತಿಯ ವಿಧ್ಯಾರ್ಥಿಗಳಿಗೆ ಬೇಸಿಗೆ ಶಿಬಿರವನ್ನು ಏರ್ಪಡಿಸಲಾಯಿತು.ಚರ್ಚಿನ ಧರ್ಮ ಗುರುಗಳಾದ  ವಂ ಫ್ರಾನ್ಸಿಸ್ ಕರ್ನೆಲಿಯೊ ರವರು ಶಿಬಿರವನ್ನು ದೀಪ ಬೆಳಗುವುದರೊಂದಿಗೆ ಉದ್ಘಾಟಿಸಿದರು. ಶಿಬಿರಗಳಲ್ಲಿ ಸಂಗೀತ ಅಭಿನಯ,ಆಟ,ಪಾಠ,ಮನೋರಂಜನೆ ಜೀವನ ಕೌಶಲಗಳ ಭೋಧನೆ, ವಿಧ್ಯಾಭ್ಯಾಸದ ಮುಂದಿನ ನೋಟ ಮಾರ್ಗದರ್ಶನ ಇತ್ಯಾದಿ ವಿಷಯಗಳು ಒಳಗೊಂಡಿರುವುದರಿಂದ ವ್ಯಕ್ತಿ ಯ ವ್ಯಕ್ತಿತ್ವ, ವಿಕಸನ, ಪ್ರತಿಭೆಗಳ ಪ್ರದರ್ಶನಕ್ಕೆ ಆಧಾರವಾಗಿವೆ ಎಂದು ಶುಭ ಹಾರೈಸಿದರು.

ಚರ್ಚಿನ ಪಾಲನ ಮಂಡಳಿಯ ಕಾರ್ಯದರ್ಶಿ ಶ್ರೀ. ಅಲೆಕ್ಸ್ ಡಿ’ಸೋಜ, 20 ಆಯೋಗಗಳ ಸಂಯೋಜಕ ಶ್ರೀ. ವಿನ್ಸೆಂಟ್ ಡಿ’ ಸೋಜ, ಸಂತ ಅಂತೋನಿ ಕಾನ್ವೆಂಟಿನ ಭಗಿನಿ ಸಿ| ಮರ್ಸಿ, ಪಾಲನಾ ಮಂಡಳಿ ಯ ಸದಸ್ಯರಾದ ಶ್ರೀ.ಗ್ರೇಶನ್ ಕ್ರಾಸ್ತಾ  ಹಾಗೂ ಶಿಬಿರದ ಸಂಪನ್ಮೂಲ ವ್ಯಕ್ತಿಗಳಾದ ಬ್ರ|ಶೋನ್ ಕೆಮ್ಮಣ್ಣು, ಬ್ರ|ಸ್ಟೀವನ್ ನೀಡ್ಪಳ್ಳಿ ಹಾಗೂ ಬ್ರ| ಕೆವಿನ್ ಪಡುಕೋಣೆ, ಉಪಸ್ಥಿತರಿದ್ದರು.

ಶಿಬಿರಾರ್ಥಿ ಕು|ಶೈನಿ ಆಲ್ಮೇಡಾ ಎಲ್ಲರನ್ನು ಸ್ವಾಗತಿಸಿದರು. ಕು| ರೊಯ್ಲಿನ್, ಕು| ಆಮ್ರತಾ, ಕು| ಆಶ್ಲಿಟಾ, ಹಾಗೂ ಕೆಲ್ವಿನ್ ಕ್ರಾಸ್ತಾ ಮುಂತಾದ ಶಿಬಿರಾರ್ಥಿಗಳು ಶಿಬಿರದ ಯಶಸ್ವಿಗೆ ಪ್ರಾರ್ಥನಾನಿಧಿ ನಡೆಸಿಕೊಟ್ಟರು. ಕು|ಪ್ರಿಯಾಂಕ ವಂದಿಸಿದರು ಶಿಕ್ಷಕಿ ಶ್ರೀಮತಿ ಐವಿ ಕಾರ್ಯಕ್ರಮ ನಿರೂಪಿಸಿದರು.

ಮಂಗಳೂರು ಬಿಷಪ್‍ ಪೀಟರ್ ಪಾವ್ಲ್ ಸಲ್ಡಾನ್ಹಾರಿಂದ ಮೂವರು ಅರ್ಹ ಉಮೇದ್ವಾರಾರಿಗೆ ಯಾಜಕ ದೀಕ್ಷೆ ನೀಡಿದರು

ವರದಿ: ಫಾ| ಅನಿಲ್ ಫೆರ್ನಾಂಡಿಸ್, ಚಿತ್ರಗಳು: ಸ್ಟಾನ್ಲಿ ಬಂಟ್ವಾಳ


ಮಂಗಳೂರು, ಏಪ್ರಿಲ್ ೨೦: ಮಂಗಳೂರಿನ ಬಿಷಪ್ ಆತೀ ವಂದನೀಯ ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾರವರು ನಗರದ ರೊಸಾರಿಯೊ ಕ್ಯಾಥೆಡ್ರಲ್‌ನಲ್ಲಿ ೨೦೨೩ರ ಏಪ್ರಿಲ್ ೨೦ರ ಗುರುವಾರದಂದು ಮೂವರು ಯಾಜಕ ಉಮೇದ್ವಾರಾರಿಗೆ ಯಾಜಕ ದೀಕ್ಷೆ ನೀಡಿದರು. ಈ ದೀಕ್ಷಾವಿಧಿಯು ನೆರೆದ ನೂರಾರು ಧರ್ಮಗುರುಗಳ, ಧಾರ್ಮಿಕ ಭಗಿನಿಯರ ಹಾಗೂ ವಿಶ್ವಾಸಿಗಳ ಸಮ್ಮುಖದಲ್ಲಿ ಅರ್ಥಪೂರ್ಣವಾಗಿ ನಡೆಯಿತು.
ಕಾಟಿಪಳ್ಳ ಚರ್ಚಿನ ವಂದನೀಯ ಅವಿನಾಶ್ ಲೆಸ್ಲಿ ಪಾಯ್ಸ್, ವೇಣೂರು ಚರ್ಚಿನ ವಂದನೀಯ ಲೋಹಿತ್ ಅಜಯ್ ಮಸ್ಕರೇನ್ಹಸ್, ಮತ್ತು ನೀರುಡೆ ಚರ್ಚಿನ ವಂದನೀಯ ರಾಬಿನ್ ಜಾಯ್ಸನ್ ಸಾಂತುಮಾಯರ್ ಅವರು ನೂತನವಾಗಿ ದೀಕ್ಷೆ ಸ್ವೀಕರಿಸಿದರು. ಮಂಗಳೂರು ಧರ್ಮಕ್ಷೇತ್ರದ ಸಮಸ್ತರು ಹೊಸದಾಗಿ ದೀಕ್ಷೆ ಪಡೆದ ಈ ಮೂವರು ನವ ಯಾಜಕರೊಂದಿಗೆ ಭಗವಂತನಿಗೆ ಧನ್ಯವಾದಗಳನ್ನು ಅರ್ಪಿಸಿದರು.
ಬಲಿಪೂಜೆಯ ಧರ್ಮೋಪದೇಶದಲ್ಲಿ ಬಿಷಪ್ ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು, “ಯಜಕತ್ವವು ಒಂದು ಕೊಡುಗೆ ಹಾಗೂ ರಹಸ್ಯವು. ದೇವರು ಈ ಭಾಗ್ಯವನ್ನು ಉಚಿತವಾಗಿ ನೀಡುವುದರಿಂದ ಆದು ಒಂದು ಕೊಡುಗೆ. ದೇವರು ಯಾಜಕರ ಆಯ್ಕೆ ಮತ್ತು ಕರೆಯನ್ನು ಹೇಗೆ ಮಾಡುತ್ತಾನೆ ಎಂದು ಯಾರಿಗೂ ತಿಳಿದಿಲ್ಲ. ಆದುದ್ದರಿಂದ ಅದು ನಿಗೂಢವಾಗಿದೆ” ಎಂದರು. “ಪ್ರತಿಯೊಬ್ಬ ದೀಕ್ಷೆ ಪಡೆದ ಯಜಕನು ಪವಿತ್ರತೆಗಾಗಿ ಕರೆಯಲ್ಪಟ್ಟವನು. ಯಜಕರು ಸಂಸ್ಕಾರಗಳನ್ನು ಆಚರಿಸುವ ಮೂಲಕ ಪವಿತ್ರರಾಗುತ್ತಾರೆ. ಯಜಕರ ಪವಿತ್ರತೆಯು ಅವನ ದೌರ್ಬಲ್ಯಗಳನ್ನು ತೆಗೆದುಹಾಕುವುದಿಲ್ಲ. ಆದ್ದರಿಂದ, ಅವನು ತನ್ನನ್ನು ತಾನು ದೇವರಿಗೆ ಒಪ್ಪಿಸುವ ಮೂಲಕ ಮತ್ತು ದೇವರ ಮೇಲೆ ಸಂಪೂರ್ಣವಾಗಿ ಅವಲಂಬಿಸುವ ಮೂಲಕ ತನ್ನ ದೌರ್ಬಲ್ಯಗಳಲ್ಲಿ ಶಕ್ತಿಯನ್ನು ಕಂಡುಕೊಳ್ಳಬೇಕು. ಇದು ಪವಿತ್ರತೆಯ ಹಾದಿಯಲ್ಲಿರುವ ಪ್ರತಿಯೊಬ್ಬ ಯಾಜಕನ ವೈಯಕ್ತಿಕ ಧ್ಯೇಯವಾಗುತ್ತದೆ” ಎಂದು ಬಿಷಪ್ ಹೇಳಿದರು,

ಬಲಿಪೂಜೆಯ ಕೊನೆಯಲ್ಲಿ ಜೆಪ್ಪು ಸಂತ ಜೋಸೆಫ್ ಸೆಮಿನರಿ ಪ್ರಾಧ್ಯಾಪಕ ವಂದನೀಯ ಡಾ. ರಾಜೇಶ್ ರೊಸಾರಿಯೊ ನೂತನವಾಗಿ ದೀಕ್ಷೆ ಪಡೆದ ಯಜಕರನ್ನು ಅಭಿನಂದಿಸಿದರು. ನವಯಾಜಕರಲ್ಲಿ ಒಬ್ಬರಾದ ವಂದನೀಯ ರಾಬಿನ್ ಸಾಂತುಮಾಯರ್ ಅವರು, “ನನ್ನ ಜೀವನದ ಈ ಮಹತ್ತರ ದಿನಕ್ಕೆ ಸಾಕ್ಷಿಯಾಗಲು ನನಗೆ ತುಂಬಾ ಸಂತೋಷವಾಗಿದೆ. ಯಾಜಕಾಭಿಷೇಕ ನನ್ನ ಜೀವನದಲ್ಲಿ ನಾನು ಪಡೆದ ದೊಡ್ಡ ವರ. ನನ್ನನ್ನು
ತನ್ನದಾಗಿಸಿಕೊಂಡ ಸರ್ವಶಕ್ತ ದೇವರಿಗೆ ಕೋಟ್ಯಂತರ ಧನ್ಯವಾದಗಳು. ನಾನು, ನನ್ನ ಸಹ ದೀಕ್ಷೆ ಪಡೆದ ಯಜಕರೊಂದಿಗೆ, ಬಿಷಪ್ ಮತ್ತು ಸಮಸ್ತ ಧರ್ಮಕ್ಷೇತ್ರಕ್ಕೆ ಕೃತಜ್ಞರಾಗಿರುತ್ತೇನೆ. ನನ್ನ ಸಂಪೂರ್ಣ ಜೀವನವನ್ನು ಯೇಸುವಿಗೆ ಮುಡಿಪಾಗಿಸುತ್ತೇನೆ.” ಬಿಷಪ್ ಪೀಟರ್ ಪೌಲ್ ಸಲ್ಡಾನ್ಹಾ ಅವರು ನವ ಯಾಜಕರ ಪೋಷಕರಿಗೆ, ತರಭೇತಿ ನೀಡಿದ ಗುರುಮಠದ ಪ್ರಾದ್ಯಪಕರಿಗೆ ಎಲ್ಲರಿಗೂ ಧನ್ಯವಾದ ಹೇಳಿದರು. ಧರ್ಮಕ್ಷೇತ್ರದ ಶ್ರೇಷ್ಠಗುರು ಮ್ಯಾಕ್ಸಿಮ್ ಎಲ್ ನೊರೊನ್ಹಾ, ಕುಲಾಧಿಪತಿ ಆತೀ ವಂದನೀಯ ಡಾ| ವಿಕ್ಟರ್ ಜಾರ್ಜ್ ಡಿಸೋಜಾ,
ಸೆಮಿನರಿ ರೆಕ್ಟರ್ ಅತೀ ವಂದನೀಯ ಡಾ. ರೊನಾಲ್ಡ್ ಸೆರಾವೊ, ಕ್ಯಾಥೆಡ್ರಲ್‌ನ ರೆಕ್ಟರ್ ವಂದನೀಯ ಆಲ್ಫ್ರೆಡ್ ಜೆ. ಪಿಂಟೊ, ಗುರುವೃಂದ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಫಾದರ್ ಮುಲ್ಲರ್ ಹೋಮಿಯೋಪಥಿ ಮಹಾವಿದ್ಯಾಲಯ, ದೇರಳಕಟ್ಟೆಯಲ್ಲಿ‘ ವಿಶ್ವ ಹೋಮಿಯೋಪಥಿ ದಿನಾಚರಣೆ’


ಹೋಮಿಯೋಪಥಿ ಜನಕ ಡಾಕ್ಟರ್ ಸ್ಯಾಮ್ಯುಯೆಲ್ ಹಾನ್ನಿಮನ್ನರ 268ನೇ ಜನ್ಮ ದಿನದ ನೆನಪಿಗಾಗಿ ದೇರಳಕಟ್ಟೆ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ದಿನಾಂಕ 19.04.2023 ರಂದು ವಿಶ್ವ ಹೋಮಿಯೋಪಥಿ ದಿನಾಚರಣೆಯನ್ನು ಕಾಲೇಜಿನ ಸಭಾಂಗಣದಲ್ಲಿ ಆಚರಿಸಲಾಯಿತು.
ಪರ್ಯಾಯ ವೈದ್ಯಕೀಯ ವ್ಯವಸ್ಥೆ ಮತ್ತು ವೈದ್ಯಕೀಯ ಜಗತ್ತಿಗೆ ಅದರ ಕೊಡುಗೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಈ ದಿನದ ಪ್ರಮುಖ ಗುರಿಯಾಗಿದೆ.
ಮುಖ್ಯ ಅತಿಥಿಗಳಾದ ಆಯುಷ್ ವಿಭಾಗ ಬೆಂಗಳೂರು ಇದರ ಉಪನಿರ್ದೇಶಕರಾದ ಡಾ.ಅಶ್ವತ್ ನಾರಾಯಣರವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಗೌರವಾನ್ವಿತ ಅತಿಥಿಗಳಾದ 1998ನೇ ಬ್ಯಾಚ್‍ನ ಹಳೆಯ ವಿದ್ಯಾರ್ಥಿ, ನ್ಯಾಶನಲ್ ಹೋಮಿಯೋಪಥಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಅನಾಟಮಿ ವಿಭಾಗದ ಅಸಿಸ್ಟೆಂಟ್ ಪೆÇ್ರಫೆಸರ್ ಡಾ.ಆನಂಂದ್ ಬಿಹಾರಿ ಸಿಂಗ್, ಕಾರ್ಯಕ್ರಮದ ಅಧ್ಯಕ್ಷರಾದ ಫಾದರ್ ಮುಲ್ಲರ್ ಸೇವಾ ಸಂಸ್ಥೆಯ ನಿರ್ದೇಶಕರಾದ ವಂದನೀಯ ರಿಚರ್ಡ್ ಅಲೋಶಿಯಸ್ ಕುವೆಲ್ಲೊರವರು, ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಆಡಳಿತಾಧಿಕಾರಿಗಳಾದ ವಂದನೀಯ ರೋಶನ್‍ಕ್ರಾಸ್ತಾ, ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲರಾದಡಾ. ಇ.ಎಸ್.ಜೆ.ಪ್ರಭುಕಿರಣ್, ಉಪಪ್ರಾಂಶುಪಾಲರಾದ ಡಾ.ವಿಲ್ಮಾ ಮೀರಾ ಡಿ’ಸೋಜ ಹಾಗೂ ಕಾರ್ಯಕ್ರಮ ಸಂಯೋಜಕರಾದ ಡಾ| ಜೋನ್ ಪೌಲ್‍ರವರು ಉದ್ಘಾಟನಾ ಸಮಾರಂಭದಲ್ಲಿ ಜೊತೆಗೂಡಿದರು. ಜಿಲ್ಲಾ ಆಯುಷ್ ಅಧಿಕಾರಿ ಡಾ| ಮೊಹಮ್ಮದ್ ಇಕ್ಬಾಲ್, ಹಾಗೂ ಡಾ| ಭಾತ್ರಾಸ್ ಹೋಮಿಯೋಪಥಿ, ಮುಂಬಯಿ ವಲಯದ ಮುಖ್ಯಸ್ಥ ಡಾ ಸಮೀರ್ ಚೌಕರ್ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಮುಖ್ಯ ಅತಿಥಿಗಳು ಪ್ರತಿಷ್ಟಿತ ‘ಡಾ| ಬಾತ್ರಾರವರು ಪ್ರಾಯೋಜಿಸಿದ ಬಾತ್ರಾ ವಿದ್ಯಾರ್ಥಿವೇತನ’ವನ್ನು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಕರ್ನಾಟಕ ನಡೆಸಿರುವ ಪರೀಕ್ಷೆಗಳಲ್ಲಿ ಅತ್ಯಧಿಕ ಅಂಕಗಳ ಮೂಲಕ ರ್ಯಾಂಕ್ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಾದ ಜಿದ್ದು ಸಾಯಿ ಅಖಿಲ, ಅಸ್ವಥಿ ದಿನೇಶ್ ಹಾಗೂ ಆರ್ದ್ರಾ ಗಣೇಶ್ ಜಿ. ರವರಿಗೆ ವಿತರಿಸಿ, ತಮ್ಮ ಅತಿಥಿ ಭಾಷಣದಲ್ಲಿ ವಿಶ್ವ ಹೋಮಿಯೋಪಥಿ ದಿನಾಚರಣಾ ಸಮಾರಂಭದಲ್ಲಿ ತಮ್ಮ ಉಪಸ್ಥಿತಿಯ ಬಗ್ಗೆ ಸಂತೋಷ ವ್ಯಕ್ತಪಡಿಸಿದರು ಹಾಗೂ ವಿದ್ಯಾರ್ಥಿಗಳನ್ನು ಸಂಶೋಧನಾ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿ ಕೊಳ್ಳುವಂತೆ ಪ್ರೇರೇಪಿಸಿದರು.
ಆಡಳಿತಾಧಿಕಾರಿಯಾದ ವಂದನೀಯ ಫಾದರ್ ರೋಶನ್ ಕ್ರಾಸ್ತಾರವರು ಸಮಾಜಕ್ಕೆ ಹೋಮಿಯೋಪಥಿ ಕ್ಷೇತ್ರದ ವೈದ್ಯರು ನೀಡಿರುವಂತಹ ಸೇವೆಯನ್ನು ಹೊಗಳಿ, ಈ ಕ್ಷೇತ್ರದಲ್ಲಿ ಇನ್ನಷ್ಟು ಸಂಶೋಧನೆಯ ಅಗತ್ಯ ಇರುವುದನ್ನು ಮನವರಿಸಿದರು ಹಾಗೂ ಸಮಾರಂಭದಲ್ಲಿ ಭಾಗವಹಿಸಿದ ಗಣ್ಯ ವ್ಯಕ್ತಿಗಳ ಸಾಧನೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ವಿದ್ಯಾರ್ಥಿಗಳು ಅವರ ಅನುಕರಣೆಯನ್ನು ತಮ್ಮ ಜೀವನದಲ್ಲಿಯೂ ಅಳವಡಿಸಿಕೊಳ್ಳುವಂತೆ ಹುರಿದುಂಬಿಸಿದರು.
ವಂದನೀಯ ರಿಚರ್ಡ್ ಅಲೋಶಿಯಸ್ ಕುವೆಲೊರವರು ತಮ್ಮ ಅಧ್ಯ ಕ್ಷೀಯ ಭಾಷಣದಲ್ಲಿ ನೆರೆದಿರುವ ಎಲ್ಲರಿಗೂ ವಿಶ್ವ ಹೋಮಿಯೋಪಥಿ ದಿನಾಚರಣೆಯ ಶುಭಾಶಯವನ್ನು ನೀಡಿದರು ಹಾಗೂ ಈ ದಿನವನ್ನು ಡಾ.ಸಾಮ್ಯುವೆಲ್ ಹಾನ್ನಿಮನ್ನ್ ಹಾಗೂ ಫಾದರ್ ಅಗಸ್ಟಸ್ ಮುಲ್ಲರ್‍ನಂತಹ ಶ್ರೇಷ್ಟವ್ಯಕ್ತಿಗಳಿಗೆ ಗೌರವ ಸಲ್ಲಿಸಲು ಹಾಗೂ ಅವರಿಂದ ಪ್ರೇರೇಪಣೆಗೊಳ್ಳಲು ಆಚರಿಸಲಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಗೌರವ ಅತಿಥಿ ತಮ್ಮ ಕ್ಲಿನಿಕಲ್ ಅನುಭವನ್ನು ನೆರೆದಿರುವವರೊಂದಿಗೆ ಹಂಚಿಕೊಂಡು ವಿದ್ಯಾರ್ಥಿಗಳನ್ನು ಹೋಮಿಯೋಪಥಿ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡುವಂತೆ ಪ್ರೇರೇಪಿಸಿದರು.

ಕಾರ್ಯಕ್ರಮದ ಸಂಯೋಜಕರಾದ ಡಾ| ಜೋನ್ ಪೌಲ್ ವಂದನಾರ್ಪಣೆಗೈದರು.

ವಿಶ್ವ ಹೋಮಿಯೋಪಥಿ ದಿನಾಚರಣೆಯ ಪ್ರಯುಕ್ತ ದಿನಾಂಕ 18.04.2023 ಹಾಗೂ 19.04.2023 ರಂದು ವಿವಿಧ ಸಾಹಿತ್ಯ ಸ್ಪರ್ದೆ ಹಾಗೂ ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು ವಿಜೇತರಿಗೆ ಬಹುಮಾನವನ್ನು ನೀಡಿ ಸನ್ಮಾನಿಸಲಾಯಿತು. ಡಾ. ರೆನಿಟಾ ಡಿ’ಸೋಜ ಹಾಗೂ ಡಾ. ವಿಗ್ನೇಶ್ ನಾಯಕ್ ಕಾರ್ಯಕ್ರಮವನ್ನು ನಿರೂಪಿಸಿದರು.

V. Rev. Fr. Joseph Silvestre D’Souza has been elected as the Provincial Superior of the Discalced

V. Rev. Fr. Joseph Silvestre D’Souza has been elected as the Provincial Superior of the Discalced Carmelites of Karnataka-Goa Province in the 15th Provincial Chapter being held at Pushpashrama, Mysuru on April 21, 2023. He succeeds Fr George Santhumayor, OCD.

V. Rev. Fr. Joseph Silvestre D’Souza hails from Nagoa, in the archdiocese of Goa and Daman. Born on April 22, 1971 to devout parents, he did his high school education at St. Joseph’s High School in Arpora, Goa and his pre-university studies at St. Xavier’s College in Mapusa, Goa. On June 14, 1988, he joined the Carmelite Order and was admitted to the aspirants’ house at Xellim, Goa. On October 15, 1990, he made his first religious commitment at the Carmelite Monastery in Margao. He obtained BA in psychology from Madras University while completing his philosophical studies at Pushpashrama, Institute of Philosophy and Religion, in Mysuru. And after a year of regency, he attended St. Joseph’s Inter-diocesan Seminary in Jeppu, Mangaluru, to complete his theological formation in view of the priesthood.

On May 26, 1996, he made his solemn profession at St. Joseph’s Monastery in Carmel Hill, Mangaluru. On October 16, 1997, at St. Joseph’s Inter Diocesan Seminary in Mangaluru, Most Rev. Bernard Moras, Bishop of Belgaum, ordained him a deacon. The Most Rev. Filipe Nerri Ferrao, the then Auxiliary Bishop of Goa and Daman, elevated him to the order of the priesthood on April 22, 1998 at Holy Trinity Church, Nagoa, Bardez, Goa.

Upon his ordination from 1998 to 2000, he was at the Carmelite Monastery in Margao. He pursued higher studies in dogmatic theology at the Northern Italy Faculty of Theology Milan, as well as assisted at Corpus Domini Church in Milan from 2000 to 2004. Then he was assigned to the community at Johannesburg in South Africa from 2004 to 2005 and rendered ministry of spiritual life to the cloistered sisters, as well as laity in the retreat house. In 2005 he was chosen to be the third Provincial Councillor. Then once again from 2008 until 2011, he rendered his pastoral service at Santa Teresa, Torino, Italy. From 2011 – 2020 he gradually moved up, from being the third councilor of the province, to be the second councilor. Then on he was given the total responsibility of the province secretariat. The 2020 Provincial Chapter elected him to lead the Carmelite Monastery in Margao.

Besides his competence in the beurocracy, he served also as the editor of the  magazine ‘Springs of Living Water’ as well as was a regular professor at various Formation houses and spirituality Institutes such as Dhyanavana, Dhyana Sadhana, Ryshivana as well as in other house of formation for women religious. He recently became Vice – President of the Goa CRI unit. Of late, since 2022, he is also a Member of Diocesan Council of Priests and Diocesan Pastoral Council (Goa and Daman).

Obviously he is a man who reads widely; and his competence on the papal documents is rich. He is diminutive in stature and soft spoken as a person and yet highly talented and musician with qualification from Trinity college of music in London. He combines a wealth of administrative knowledge with his skills as an orator and animator.

ಶ್ರೀನಿವಾಸಪುರ ಗಲ್‌ಪೇಟೆ – ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ – ಬಾಲಕ ಗಂಭೀರವಾಗಿ ಗಾಯಾಳು – ಬಾಲಕನ್ನು ರಕ್ಷಿಸಿದ ಪೊಲೀಸ್ ಪೇದೆ

ಶ್ರೀನಿವಾಸಪುರ : ಪೊಲೀಸ್ ಪೇದೆಯ ಸಾಹಸ ಮತ್ತು ಮಾನವೀಯತೆ ಮೆರೆದಿದ್ದು, ನಗರದ ಚಿಕ್ಕಬಳ್ಳಾಪುರ ರಸ್ತೆಯ ರಹಮತ್ ನಗರದಲ್ಲಿ ತಡರಾತ್ರಿಯಲ್ಲಿ ಈ ದುರ್ಘಟನೆ ಜರುಗಿದೆ.

ನಗರದ ಗಲ್‌ಪೇಟೆ ಪೊಲೀಸ್ ಠಾಣೆಯ ಪೇದೆ ಹೆಚ್.ರಾಜಣ್ಣ ಮತ್ತು ಚಾಲಕ ಡಿ.ಎ.ಆರ್‌ನ ಮಂಜುನಾಥಶೆಟ್ಟಿ ಅವರು ೧೧೨ ವಾಹನದಲ್ಲಿ ರಾತ್ರಿ ಗಸ್ತಿಗೆ ನಿಯೋಜನೆ ಗೊಂಡಿದ್ದರು.
ಶ್ರೀನಿವಾಸಪುರ ವೃತ್ತದಿಂದ ಅರಹಳ್ಳಿ ಕಡೆ ೧೧೨ ವಾಹನ ಹೋಗುತ್ತಿದ್ದ ಸಂದರ್ಭದಲ್ಲಿ ಶುಕ್ರವಾರ ಮುಂಜಾನೆ ೩.೨೬ರ ಸಮಯದಲ್ಲಿ ಸುಮಾರು ೨೦ ರಿಂದ ೨೫ ಬೀದಿ ನಾಯಿಗಳ ಗುಂಪೊದು ದಾಳಿಯ ದೃಶ್ಯ ಕಂಡು ಬಂದು ಇದರ ಜೊತೆಗೆ ಕಿರುಚಾಟದ ಶಬ್ದವೂ ಕೇಳಿಬಂತು.

ಈ ದೃಶ್ಯವನ್ನು ಕಂಡು ಕೇಳಿದ ಪೇದೆ ರಾಜಣ್ಣ ತಕ್ಷಣವೇ ವಾಹನದಿಂದ ಇಳಿದು ದಾಳಿ ಮಾಡಿದ್ದ ಬೀದಿ ನಾಯಿಗಳನ್ನು ಓಡಿಸಲು ಪ್ರಯತ್ನಿಸಿದ್ದಾರೆ.
ಈ ಸಂದರ್ಭದಲ್ಲಿ ಇದೇ ನಾಯಿಗಳು ಪೇದೆಯ ಮೇಲೆ ಪ್ರತಿದಾಳಿಗೆ ಮುಂದಾಗಿದ್ದು, ಇದ್ಯಾವುದನ್ನೂ ಲೆಕ್ಕಿಸದ ಪೇದೆ ರಾಜಣ್ಣ ಕಲ್ಲುಗಳಿಂದ ಹೊಡೆದು ಲಾಠಿಯಿಂದ ನಾಯಿಗಳನ್ನು ಅಟ್ಟಾಡಿಸಿ ಓಡಿಸಿದ್ದಾರೆ.

ಈ ಸಂದರ್ಭದಲ್ಲಿ ರಕ್ತದ ಮಡುವಿನಲ್ಲಿ ಬಾಲಕನೋರ್ವ ಕಂಡು ಬಂದಿದ್ದು ತೊಟ್ಟಿದ್ದ ಬಟ್ಟೆಗಳು ಕಿತ್ತುಬರುವಂತೆ ದೇಹದ ವಿವಿಧ ಭಾಗಗಳನ್ನು ಕಚ್ಚಿ ರಕ್ತಸ್ರಾವಕ್ಕೆ ಒಳಗಾಗಿದ್ದ ಬಾಲಕನನ್ನು ಬಾಚಿಕೊಂಡು ತಕ್ಷಣವೇ ಇಲಾಖೆಯ ವಾಹನದಲ್ಲಿ ನಗರದ ಎಸ್.ಎನ್.ಆರ್ ಆಸ್ಪತ್ರೆಗೆ ಕರೆತಂದು ಚಿಕಿತ್ಸೆಗೆ ದಾಖಲಿಸಿದ್ದಾರೆ.
ರಾತ್ರಿ ಕರ್ತವ್ಯದಲ್ಲಿದ್ದ ಡಾ.ಕೆ.ಎಂ.ವರ್ಣಶ್ರೀ ಅವರು ನಾಯಿಗಳ ದಾಳಿಯಿಂದ ಗಾಯಗೊಂಡಿದ್ದ ಬಾಲಕನಿಗೆ ತಕ್ಷಣವೇ ಅಗತ್ಯ ಪ್ರಾಥಮಿಕ ಚಿಕಿತ್ಸೆ ಕೊಟ್ಟು ಅಪಾಯದಿಂದ ಪಾರುಮಾಡಿದ್ದಾರೆ.
ಸದರಿ ಬಾಲಕನನ್ನು ವಿಚಾರಿಸಲಾಗಿ ಈತ ನಗರದ ರಹಮತ್ ನಗರದ ನಿವಾಸಿ ಅರಹಳ್ಳಿ ವೃತ್ತದಲ್ಲಿ ಟೀ ಅಂಗಡಿ ಇಟ್ಟುಕೊಂಡಿರುವ ಬಾಬು ಅವರ ಮಗ ೮ ವರ್ಷದ ಜಾಫರ್ ಎಂದು ತಿಳಿದು ಬಂದಿದೆ.  

ನಂತರ ಅವರು ಮನೆಯವರಿಗೆ ಮಾಹಿತಿ ನೀಡಲಾಗಿ ಆತ ರಂಜಾನ್ ಹಬ್ಬದ ಹಿನ್ನಲೆಯಲ್ಲಿ ನಮಾಜ್ ಮುಗಿಸಿ ಉಪವಾಸವಿದ್ದ ಈತ ತಡರಾತ್ರಿ ಗೆಳೆಯರ ಜೊತೆ ತಿರುಗಾಟಕ್ಕೆ ಹೋಗಿದ್ದು, ನಂತರ ಒಬ್ಬೊಂಟಿಯಾಗಿ ಬರುವಾಗ ಬೀದಿ ನಾಯಿಗಳ ದಾಳಿಗೆ ಒಳಗಾಗಿದ್ದು ತಿಳಿದುಬಂತು.
ಬೀದಿ ನಾಯಿಗಳ ದಾಳಿಗೆ ತುತ್ತಾದ ಒಬ್ಬೊಂಟಿ ಬಾಲಕನ ಜೀವ ಉಳಿಸಿದ ಪೇದೆ ರಾಜಣ್ಣ ಅವರ ಸಾಹಸ ಮತ್ತು ಮಾನವೀಯತೆಗೆ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.