ಚುನಾವಣಾ ತನಿಖಾ ಚೆಕ್ ಪೋಸ್ಟ್‍ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿಗೆ ಊಟ ತಿಂಡಿ ಕುಡಿಯುವ ನೀರು ಒದಗಿಸಲು ಮನವಿ

ಕೋಲಾರ ಏಪ್ರಿಲ್ 25 : ಕರ್ನಾಟಕ ರಾಜ್ಯದಾದ್ಯಂತ ಹೊರವಲಯದ ಚೆಕ್ ಪೋಸ್ಟ್‍ಗಳಲ್ಲಿ ಕರ್ನಾಟಕ ರಾಜ್ಯದ ಚುನಾವಣಾ ಕರ್ತವ್ಯವನ್ನು ನಿರ್ವಹಿಸುತ್ತಿರುವ ಪೊಲೀಸ್ ಹಾಗೂ ಇತರೆ ಸಿಬ್ಬಂದಿಗೆ ಊಟ, ತಿಂಡಿ, ಕಾಫಿ, ನೀರಿನ ವ್ಯವಸ್ಥೆಯನ್ನು ಜಿಲ್ಲಾಡಳಿತದಿಂದ ಅಥವಾ ಸರ್ಕಾರದ ವತಿಯಿಂದ ಒದಗಿಸುವಂತೆ ಜಿಲ್ಲಾಡಳಿತ ಮುಖಾಂತರ ಕರ್ನಾಟಕ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಚುನಾವಣಾಧಿಕಾರಿ ವಂದಿತಾ ಶÀರ್ಮಾ ರವರಿಗೆ ಮನವಿಯನ್ನು ಸಾಮಾಜಿಕ ಕಾರ್ಯಕರ್ತ ಗೌರಿಪೇಟೆ ಕೆ.ಎನ್.ರವೀಂದ್ರನಾಥ್, ಬೆಗ್ಲಿಹೊಸಹಳ್ಳಿ ಬಿ.ಎಂ.ಮುನಿಕೃಷ್ಣಯ್ಯ, ನಿವೃತ್ತ ಪಿಡಬ್ಲೂಡಿ ಅಧಿಕಾರಿ ಎನ್. ರಾಮಚಂದ್ರ ಮನವಿ ಮಾಡಿದ್ದಾರೆ.
ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ 2023ರ ಸಲುವಾಗಿ ರಾಜ್ಯದಾದ್ಯಂತ ವಿವಿಧ ಕಡೆಗಳಲ್ಲಿ ತನಿಖಾ ಚೆಕ್ ಪೋಸ್ಟ್‍ಗಳನ್ನು ತೆರೆದು ದಿನದ 24 ಗಂಟೆಗಳ ಕಾಲವೂ ಕಾರ್ಯನಿರ್ವಹಿಸುವಂತೆ ಕ್ರಮ ಕೈಗೊಳ್ಳಲಾಗಿರುವುದು ಸ್ವಾಗತಾರ್ಹವಾಗಿದೆ. ಆದರೆ ಇಂತಹ ತನಿಖಾ ಚಕ್‍ಪೋಸ್ಟ್‍ಗಳು ಊರುಗಳಿಂದ ಹೊರವಲಯದಲ್ಲಿ ನಿರ್ಮಿಸಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಹಾಗೂ ಇತರೆ ಸಿಬ್ಬಂದಿಗೆ ಉಪಹಾರ ಮತ್ತು ಊಟಕ್ಕೆ ತೊಂದರೆಯಾಗುತ್ತಿದೆ. ಮಾನವೀಯತೆಯ ದೃಷ್ಟಿಯಿಂದ ಇಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ವರ್ಗದವರಿಗೆ ಜಿಲ್ಲಾಡಳಿತ ಮತ್ತು ಸರ್ಕಾರದ ವತಿಯಿಂದ ಉಚಿತವಾಗಿ ತಿಂಡಿ, ಊಟ, ಕಾಫಿ, ಕುಡಿಯುವ ನೀರು ಹಾಗೂ ಇತರೆ ಮೂಲಭೂತ ವ್ಯವಸ್ಥೆಯನ್ನು ಮಾಡಬೇಕೆಂದು ಹಾಗೂ ಚುನಾವಣಾ ಕರ್ತವ್ಯಕ್ಕೆ ಹಾಜರಾಗಿರುವ ಇತರೆ ಇಲಾಖೆಗಳ ಸಿಬ್ಬಂದಿಗೆ ಸಿಗುವ ಸೌಲಭ್ಯವನ್ನು ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗೆ ಪೊಲೀಸ್ ವಿಶೇಷ ಭತ್ಯೆಯನ್ನು ಮಂಜೂರು ಮಾಡುವಂತೆ ಮನವಿಯಲ್ಲಿ ಕೋರಿದ್ದಾರೆ.

ಶ್ರೀನಿವಾಸಪುರ: ತಾಲ್ಲೂಕಿನ ರೈತರಿಗೆ ಕೆಸಿ ವ್ಯಾಲಿ ನೀರು ವರದಾನವಾಗಿದೆ:ಶಾಸಕ ಕೆ.ಆರ್.ರಮೇಶ್ ಕುಮಾರ್

ಶ್ರೀನಿವಾಸಪುರ: ತಾಲ್ಲೂಕಿನ ರೈತರಿಗೆ ಕೆಸಿ ವ್ಯಾಲಿ ನೀರು ವರದಾನವಾಗಿದೆ. ಕ್ಷೇತ್ರದ ಕೆರೆ ತುಂಬುವ ಕಾರ್ಯ ಪ್ರಗತಿಯಲ್ಲಿದ್ದು, ಅಂತರ್ಜಲ ಹೆಚ್ಚಿದೆ. ರೈತರು ನೆಮ್ಮದಿ ಜೀವನ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಹೇಳಿದರು.
ತಾಲ್ಲೂಕಿನ ಈತರಾಸನಹಳ್ಳಿ ಗ್ರಾಮದಲ್ಲಿ ಮಂಗಳವಾರ ಏರ್ಪಡಿಸಿದ್ದ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಡಿಸಿಸಿ ಬ್ಯಾಂಕ್ ವತಿಯಿಂದ ಮಹಿಳಾ ಸಂಘಗಳಿಗೆ ಬಡ್ಡಿರಹಿತ ಸಾಲ ನೀಡಲಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಸಾಲದ ಪ್ರಮಾಣ ಹೆಚ್ಚಿಸಲಾಗುವುದು ಎಂದು ಹೇಳಿದರು.
ನನ್ನ ಎದುರಾಳಿಗಳು ಕ್ಷೇತ್ರದಲ್ಲಿ ಯಾವ ಅಭಿವೃದ್ಧಿ ಕಾರ್ಯ ಮುಂದಿಟ್ಟುಕೊಂಡು ಮತ ಯಾಚನೆ ಮಾಡುತ್ತಿದ್ದಾರೆ ಎಂಬುದು ಗೊತ್ತಿಲ್ಲ. ಏಕೆಂದರೆ ಮತ ಕೇಳಲು ಅಭಿವೃದ್ಧಿ ಕಾರ್ಯ ಕೈಗೊಂಡಿರಬೇಕು. ಮತದಾರರು ತಮ್ಮ ಮತವನ್ನು ಜಾತಿಗೆ ಹಾಕಬಾರದು ದೇಶದ ಪ್ರಗತಿಗೆ ಹಾಕಬೇಕು. ಅಭಿವೃದ್ಧಿಗಾಗಿ ಶ್ರಮಿಸಿದ ಹಾಗೂ ಶ್ರಮಿಸುವ ವ್ಯಕ್ತಿಗಳಿಗೆ ಮತ ನೀಡಬೇಕು. ಚುನಾವಣೆ ವಿಷಯದಲ್ಲಿ ಗೊಂದಲಕ್ಕೆ ಅವಕಾಶ ಬೇಡ. ಪ್ರಗತಿಗೆ ಮತ ನೀಡಿ ಎಂದು ಹೇಳಿದರು.
ಮುಖಂಡರಾದ ಎನ್.ಜಿ.ಬೇಟಪ್ಪ, ಎಂ.ಗೋವಿಂದಗೌಡ, ಸೊಣ್ಣೇಗೌಡ, ವಿ.ವೆಂಕಟಸ್ವಾಮಿ, ಎನ್.ಮೋಹನ್, ವಿ.ಬಾಬು, ಐ.ಎಂ.ಮಂಜುನಾಥ್, ಎಂ.ಸಂಪತ್, ವೆಂಕಟೇಶರೆಡ್ಡಿ, ಸಂತೋಷ್ ಇದ್ದರು.

ಇನ್ನೊಮ್ಮೆ ಡಬಲ್ ಎಂಜಿನ್ ಸರ್ಕಾರ ಅಧಿಕಾರಕ್ಕೆ ತರಬೇಕು :ಕೇಂದ್ರ ಸಚಿವ ಅರ್ಜುನ್‍ರಾಮ್ ಮೇಘ್ವಾಲ್

ಶ್ರೀನಿವಾಸಪುರ: ಮತದಾರರು ವಿಧಾನಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ಅವರಿಗೆ ಶಕ್ತಿ ತುಂಬಬೇಕು. ಇನ್ನೊಮ್ಮೆ ಡಬಲ್ ಎಂಜಿನ್ ಸರ್ಕಾರ ಅಧಿಕಾರಕ್ಕೆ ತರಬೇಕು ಎಂದು ಕೇಂದ್ರ ಸಂಸದೀಯ ಹಾಗೂ ಸಂಸ್ಕøತಿ ಸಚಿವ ಅರ್ಜುನ್‍ರಾಮ್ ಮೇಘ್ವಾಲ್ ಹೇಳಿದರು.
ತಾಲ್ಲೂಕಿನ ಯಲ್ದೂರು ಗ್ರಾಮದಲ್ಲಿ ಮಂಗಳವಾರ ಏರ್ಪಡಿಸಿದ್ದ ಬಿಜೆಪಿ ಅಭ್ಯರ್ಥಿ ಪರ ರೋಡ್ ಶೋ ನಡೆಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಯೋಜನೆಗಳು ಸಮಾಜದ ಎಲ್ಲ ವರ್ಗದ ಜನರ ಆಶೋತ್ತರಗಳ ಈಡೇರಿಕೆಗೆ ಪೂರಕವಾಗಿವೆ ಎಂದು ಹೇಳಿದರು.
ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ, ಆಯುಷ್ಮಾನ್ ಭಾರತ್ ಯೋಜನೆಯಂಥ ಹಲವು ಯೋಜನೆಗಳು ರೈತರು, ಕಾರ್ಮಿಕರು, ಹಾಗೂ ಸಮಾಜದಲ್ಲಿನ ಕಟ್ಟ ಕಡೆ ವ್ಯಕ್ತಿಗೂ ತಲುಪಿವೆ. ರಾಜ್ಯ ಸರ್ಕಾರದ ಅಭಿವೃದ್ಧಿ ಯೋಜನೆಗಳ ಲಾಭ ಪಾರದರ್ಶಕವಾಗಿ ಅರ್ಹ ಫಲಾನುಭವಿಗಳಿಗೆ ತಲುಪಿಸಲಾಗಿದೆ. ಆದ್ದರಿಂದ ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ಬರಲು ಮತದಾರರು ಆಶೀರ್ವಾದ ಮಾಡಬೇಕು ಎಂದು ಹೇಳಿದರು.
ವಿಧಾನ ಪರಿಷತ್ ಮುಖ್ಯ ಸಚೇತಕ ವೈ.ಎ.ನಾರಾಯನಸ್ವಾಮಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪಕ್ಷಾತೀತವಾಗಿ ಅರ್ಹ ಫಲಾನುಭವಿಗಳಿಗೆ ಸೌಲಭ್ಯ ವಿತರಿಸುತ್ತಿವೆ. ರೈತರು, ಕೃಷಿಕರು, ಕೃಷಿ ಕಾರ್ಮಿಕರು ಹೀಗೆ ಸಮಾಜದ ಎಲ್ಲ ವರ್ಗದ ಜನರಿಗೆ ಮೂಲ ಸೌಕರ್ಯ ಕಲ್ಪಿಸಲಾಗಿದೆ ಎಂದು ಹೇಳಿದರು.
ಬಿಜೆಪಿ ಅಭ್ಯರ್ಥಿ ಜೆ.ಆರ್.ಶ್ರೀನಿವಾಸರೆಡ್ಡಿ, ಜಯಚಂದ್ರ, ಅಶೋಕರೆಡ್ಡಿ, ಎನ್.ರಾಜೇಂದ್ರ ಪ್ರಸಾದ್, ರಾಜೇಖರರೆಡ್ಡಿ, ಶಶಿಕುಮಾರ್ , ಆರ್.ನಾರಾಯಣಸ್ವಾಮಿ, ಆಂಜಪ್ಪ, ಟಿ.ಮಂಜುನಾಥರೆಡ್ಡಿ, ಪದ್ಮನಾಭ್, ಶ್ರೀರಾಮ್, ಶಂಷೀರ್ ಇದ್ದರು.

ಭಾರತೀಯ ರೆಡ್ ಕ್ರಾಸ್ ಸಂಸ್ಥೆಯು ಸಂತ ನಿರಂಕಾರಿ ಸತ್ಸಂಗ ನಾಗೂರು ಇಲ್ಲಿ ಬ್ರಹತ್ ರಕ್ತ ದಾನ ಶಿಬಿರ

25-4-22 ರಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯು ಸಂತ ನಿರಂಕಾರಿ ಸತ್ಸಂಗ ನಾಗೂರು ಇಲ್ಲಿ ಬ್ರಹತ್ ರಕ್ತ ದಾನ ಶಿಬಿರವನ್ನು ಆಯೋಜಿಸಿದರು. ಇದರ ಉದ್ಘಾಟನೆ ಯನ್ನು ಸಂತ ನಿರಂಕಾರಿ ಸಂಸ್ಥೆಯ ಆನಂದ್ ಚಾಬ್ರಿಯ ಮತ್ತು ರೆಡ್ ಕ್ರಾಸ್ ಸಭಾಪತಿ ಎಸ್ ಜಯಕರ ಶೆಟ್ಟಿ ಇವರು ಜಂಟಿಯಾಗಿ ಮಾಡಿದರು. ಕಾರ್ಯಕ್ರಮ ದಲ್ಲಿ ರೆಡ್ ಕ್ರಾಸ್ ಕಾರ್ಯದರ್ಶಿ ವೈ. ಸೀತಾರಾಮ ಶೆಟ್ಟಿ, ಖಜಾಂಚಿ ಶಿವರಾಮ ಶೆಟ್ಟಿ, ಕಾರ್ಯಕಾರಿ ಸಮಿತಿಯ ಸದಸ್ಯರಾದ ಗಣೇಶ್ ಆಚಾರ್ಯ, ಸತ್ಯನಾರಾಯಣ ಪುರಾಣಿಕ ಹಾಗೂ ಸಂತ ನಿರಂಕಾರಿ ಸಂಸ್ಥೆಯ ರಾಮ ಪೂಜಾರಿ, ರಾಮ ಮೊಗವೀರ, ಲಕ್ಷ್ಮಣ ಪೂಜಾರಿ, ನಿರಂಜನ ಪೈ, ಚಂದ್ರ ಚಂದನ್, ದಾಮೋದರ ಪೂಜಾರಿ ಇನ್ನಿತರರು ಉಪಸ್ಥಿತರಿದ್ದರು. ಒಟ್ಟು116 ಯುನಿಟ್ ರಕ್ತ ಸಂಗ್ರಹಿಸಲಾಯಿತು.

ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರ :ಅಹಮದ್ ಪಾಷಾ ಬೀದರ್ ನಲ್ಲಿನ ತನ್ನ ಕುಟುಂಬವನ್ನು ಮತ್ತೆ ಸೇರಿಕೊಂಡರು


ದಿನಾಂಕ 05.01.2023 ರಂದು ಹೊಸಂಗಡಿಯ ರಸ್ತೆಯಲ್ಲಿ ನಿರ್ಗತಿಕನಾಗಿ,ಕಳಪೆಯಾದ ಸ್ವಚ್ಛತೆ ಮತ್ತು ಖಿನ್ನತೆಗೆ ಒಳಗಾಗಿ
ಅಲೆದಾಡುತ್ತಿದ್ದ ಸುಮಾರು 39 ವರ್ಷ ಪ್ರಾಯದ ವ್ಯಕ್ತಿಯನ್ನು ಸಮಾಜ ಸೇವಕರಾದ ಶ್ರೀ ಇಬ್ರಾಹಿಂ ಅವರು ರಕ್ಷಿಸಿ ಮಂಜೇಶ್ವರದ
ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರಕ್ಕೆ ಆರೈಕೆ ಮತ್ತು ಚಿಕಿತ್ಸೆಗಾಗಿ ದಾಖಲಿಸಿದರು.
ಪ್ರಾಥಮಿಕ ಆರೈಕೆಯ ನಂತರ ಅವರಿಗೆ ಮನೋವೈದ್ಯಕೀಯ ಕಾಯಿಲೆ ಇರುವುದು ಪತ್ತೆಯಾಯಿತು ಮತ್ತು ಅವರು ತನ್ನನ್ನು
ಅಹ್ಮದ್ ಬಾಷಾ ಎಂಬುದಾಗಿ ತಿಳಿಸಿದರು . ಮನೋರೋಗ ತಜ್ಞರು ಮತ್ತು ಮನೋವೈದ್ಯಕೀಯ ಸಮಾಜ ಸೇವಕರ
ಮಾರ್ಗದರ್ಶನದಲ್ಲಿ ಅವರಿಗೆ ವಿವಿಧ ಚಿಕಿತ್ಸಕ ಚಟುವಟಿಕೆಗಳೊಂದಿಗೆ ಚಿಕಿತ್ಸೆಯನ್ನು ಪ್ರಾರಂಭಿಸಲಾಯಿತು.
ನಿಧಾನವಾಗಿ ಅವರು ತಮ್ಮ ಸ್ಥಿತಿಯನ್ನು ಸುಧಾರಿಸಿಕೊಂಡರು ಮತ್ತು ಅವರ ಸ್ಥಳೀಯ ವಿವರಗಳನ್ನು ಹಂಚಿಕೊಂಡರು. ಈ
ವಿವರಗಳ ಆಧಾರದ ಮೇಲೆ ಸ್ನೇಹಾಲಯ ತಂಡ ಸ್ಥಳೀಯ ಪೊಲೀಸ್ ಠಾಣೆ ಮತ್ತು ಪಂಚಾಯತ್ ನ್ನು ಸಂಪರ್ಕಿಸಿತು . ಇದರಂತೆ
ಕರ್ನಾಟಕದ ಬೀದರ್‌ನ ಅಮಲಾಪುರದ ಟಿಪ್ಪು ಸುಲ್ತಾನ್ ಕಾಲೋನಿಯಲ್ಲಿನ ಅವರ ಕುಟುಂಬವನ್ನು ಪತ್ತೆಹಚ್ಚುವಲ್ಲಿ ತಂಡ
ಯಶಸ್ವಿಯಾಯಿತು .ಸ್ನೇಹಾಲಯ ತಂಡವು ಅವರ ಕಿರಿಯ ಸಹೋದರ ಮೊಹಮ್ಮದ್ ಮುಕ್ತಾರ್ ಅವರನ್ನು ಸಂಪರ್ಕಿಸಿತು. ಇಂದು
ದಿನಾಂಕ 24.04.2023 ರಂದು ಅವರು ಮತ್ತು ದಲಿತ ಮತ್ತು ಮೈನಾರಿಟಿಸ್ ಸೇನೆಯ ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ಶ್ರೀ
ಮಹಮ್ಮದ್ ಸಲೀಂ ತಮ್ಮ ನಾಯಕರಾದ ಶ್ರೀ ಮೊಹಮ್ಮದ್ ಸಲೀಮ್ ಅವರೊಂದಿಗೆ ಸ್ನೇಹಾಲಯವನ್ನು ತಲುಪಿದರು. ಸುಮಾರು
8 ತಿಂಗಳ ಹಿಂದೆ ಕಾಣೆಯಾದ ಅಹ್ಮದ್ ಪಾಷಾ ಅವರನ್ನು ಮತ್ತೆ ಭೇಟಿ ಮಾಡಿ ಸಂತೋಷಪಟ್ಟರು.
ಅಹ್ಮದ್ ಪಾಷಾ ಟ್ರಾವೆಲ್ಸ್‌ನಲ್ಲಿ ಕೆಲಸ ಮಾಡುತ್ತಿದ್ದು, ಒಮ್ಮೆ ಅಪಘಾತಕ್ಕೀಡಾದರು ಮತ್ತು ತಲೆಗೆ ಆದ ಏಟಿಗೆ ಚಿಕಿತ್ಸೆ
ಪಡೆದರು ಎಂದು ಅವರು ತಿಳಿಸಿದರು . ತದನಂತರ ಅವರು ಮಾನಸಿಕ ಅಸ್ವಸ್ಥತೆಯನ್ನು ಹೊಂದಿದ್ದು ಚಿಕಿತ್ಸೆ ಪಡೆಯುತ್ತಿದ್ದು
ಇದ್ದಕ್ಕಿದ್ದಂತೆ ನಾಪತ್ತೆಯಾಗಿರುವುದಾಗಿ ಹಾಗೂ ಅವರೆಲ್ಲರು ಆತನಿಗಾಗಿ ಹುಡುಕಾಟ ನಡೆಸಿದ್ದಾಗಿ ತಿಳಿಸಿದರು .ಅಹ್ಮದ್
ಪಾಷಾರನ್ನು ಮತ್ತೆ ಭೇಟಿ ಮಾಡಿ ತಮ್ಮ ಊರಿಗೆ ಕರೆದೊಯ್ಯಲು ಸಂತೋಷಪಟ್ಟರು. ಅವರು ಸ್ನೇಹಾಲಯದ ಸೇವೆಯನ್ನು
ಶ್ಲಾಘಿಸಿದರು ಮತ್ತು ತಮ್ಮ ತಂಡಕ್ಕೆ ಮಾರ್ಗದರ್ಶನ ನೀಡಿದ ಸ್ನೇಹಾಲಯದ ಸಂಸ್ಥಾಪಕ ಸಹೋದರ ಜೋಸೆಫ್ ಕ್ರಾಸ್ತಾ
ಅವರಿಗೆ ಕೃತಜ್ಞತೆ ಸಲ್ಲಿಸಿದರು.

ಶ್ರೀನಿವಾಸಪುರ ಕ್ಷೇತ್ರದ ವಿಧಾನಸಭೆ ಚುನಾವಣೆಗೆ ಸೋಮವಾರ ಅಂತಿಮ ಪಟ್ಟಿ

ಶ್ರೀನಿವಾಸಪುರ 3: ಶ್ರೀನಿವಾಸಪುರ ಕ್ಷೇತ್ರದ ವಿಧಾನಸಭೆ ಚುನಾವಣೆಗೆ ಸೋಮವಾರ ಅಂತಿಮ ಪಟ್ಟಿಯನ್ನು ಮಾಡಲಾಗಿದ್ದು, ಅದರಲ್ಲಿ ಕಾಂಗ್ರೆಸ್ ಪಕ್ಷದಿಂದ ಕೆ.ಆರ್.ರಮೇಶ್‍ಕುಮಾರ್, ಜೆಡಿಎಸ್ ಪಕ್ಷದಿಂದ ಜಿ.ಕೆ.ವೆಂಕಟಶಿವಾರೆಡ್ಡಿ, ಬಿಜೆಪಿ ಪಕ್ಷದಿಂದ ಆರ್.ಶ್ರೀನಿವಾಸರೆಡ್ಡಿ, ಎಎಪಿ ಪಕ್ಷದಿಂದ ವೈ.ವಿ.ವೆಂಕಟಾಚಲ, ಕೆ.ಆರ್.ಪಕ್ಷದಿಂದ ಜಿ.ಕೆ.ಆನಂದ್ , ಪಕ್ಷೇತರ ಅಭ್ಯರ್ಥಿಗಳಾಗಿ ಎನ್.ಎಸ್.ರಮೇಶ್‍ಕುಮಾರ್, ಎಸ್.ರಮೇಶ್‍ಕುಮಾರ್, ವೆಂಕಟಶಿವಾರೆಡ್ಡಿ, ಟಿ.ಎನ್.ವೆಂಕಟಶಿವಾರೆಡ್ಡಿ ಅಂತಿಮ ಕಣದಲ್ಲಿ ಇದ್ದಾರೆ

ನಿಧನ : ಪಿ.ವಿ.ಚಂದ್ರಯ್ಯ ಶೆಟ್ಟಿ


ಶ್ರೀನಿವಾಸಪುರ: ಪಟ್ಟಣದ ವರ್ತಕ ಪಿ.ವಿ.ಚಂದ್ರಯ್ಯ ಶೆಟ್ಟಿ (87) ಭಾನುವಾರ ನಿಧನರಾದರು. ಅವರು ಕೆಲವು ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲಿದ್ದರು.
ಮೃತರಿಗೆ ನಾಲ್ವರು ಪುತ್ರರು ಹಾಗೂ ಒಬ್ಬ ಪುತ್ರಿ ಇದ್ದಾರೆ. ಏ.24 ರಂದು ಬೆಳಿಗ್ಗೆ ಪಟ್ಟಣದ ಹೊರವಲಯದ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ನಡೆಸಲಾಗುವುದು.

ಕ್ಷೇತ್ರದ ಅಭಿವೃದ್ಧಿಗೆ ನನ್ನ ಕೊಡುಗೆ ನೋಡಿ ಚುನಾವಣೆಯಲ್ಲಿ ಆಶೀರ್ವಾದ ಮಾಡಿ : ರಮೇಶ್ ಕುಮಾರ್

ಶ್ರೀನಿವಾಸಪುರ: ಕ್ಷೇತ್ರದ ಅಭಿವೃದ್ಧಿಗೆ ನನ್ನ ಕೊಡುಗೆ ನೋಡಿ ಚುನಾವಣೆಯಲ್ಲಿ ಆಶೀರ್ವಾದ ಮಾಡಿ ಎಂದು ರಮೇಶ್ ಕುಮಾರ್ ಹೇಳಿದರು.
ತಾಲ್ಲೂಕಿನ ಅರಿಕೆರೆ ಗ್ರಾಮದಲ್ಲಿ ಭಾನುವಾರ ಏರ್ಪಡಿಸಿದ್ದ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಸೂಟು ಬೂಟು ಹಾಕಿಕೊಂಡು ಬಂದು ಮತ ಕೇಳುತ್ತಾರೆ. ಕ್ಷೇತ್ರಕ್ಕೆ ಅವರ ಕೊಡುಗೆ ಏನೂ ಇರುವುದಿಲ್ಲ. ಎಂದೂ ನಿಮ್ಮ ಕಷ್ಟಕ್ಕೆ ಸ್ಪಂದಿಸಿದವರು ಅವರಲ್ಲ ಎಂದು ಹೇಳಿದರು.
ಸಂವಿಧಾನ ಸಮಾಜದ ಭಾವ ಬೆಸೆದಿದೆ. ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಕೊಡುಗೆಯಾದ ಸಂವಿಧಾನ ಶಾಂತಿಯುತ ಸಹಬಾಳ್ವೆಗೆ ಅನುವು ಮಾಡಿಕೊಟ್ಟಿದೆ. ಹಾಗಾಗಿ ನಾನು ಅಂಬೇಡ್ಕರ್ ಸಿದ್ಧಾತದಲ್ಲಿ ನಂಬಿಕೆಯುಳ್ಳವನು. ಅವರ ಮಾರ್ಗದಲ್ಲಿ ನಡೆಯುತ್ತಿದ್ದೇನೆ. ಕ್ಷೇತ್ರದ ಅಭಿವೃದ್ಧಿಯಲ್ಲಿ ಪಕ್ಷಪಾತ ಮಾಡಿಲ್ಲ. ಸರ್ಕಾರದ ಸೌಲಭ್ಯ ಪಕ್ಷಾತೀತವಾಗಿ ನೀಡಿದ್ದೇನೆ ಎಂದು ಹೇಳಿದರು.
ವಿಶೇಷ ಕಾಳಜಿ ವಹಿಸಿ ಕ್ಷೇತ್ರಕ್ಕೆ 23 ಸಾವಿರ ಮನೆ ತಂದಿದ್ದೇನೆ. ಕೆಸಿ ವ್ಯಾಲಿ ನೀರು ಕೆರೆಗಳಿಗೆ ಹರಿಸಿ ಅಂತರ್ಜಲ ವೃದ್ಧಿಸುವಂತೆ ಮಾಡಿದ್ದೇನೆ. ಕರೆ ಸುತ್ತಲಿನ ಗ್ರಾಮಗಳ ರೈತರು ಬೆಳೆ ಬೆಳೆದು ಜೀವನ ನಿರ್ವಹಿಸುತ್ತಿದ್ದಾರೆ. ಅವರಿಗೆ ಸಂತೋಷವಾಗಿದೆ. ಹಾಗಾಗಿ ನನಗೂ ಸಂತೋವಾಗಿದೆ. ಅರಿಕೆರೆ ನಾಗನಾಥೇಶ್ವರ ದೇವಾಲಯ ಪ್ರಸಿದ್ಧಿ ಪಡೆದಿದೆ. ಹಾಗಾಗಿ ಪ್ರವಾಸಿ ಕೇಂದ್ರವನ್ನಾಗಿ ಮಾಡಲಾಗುವುದು. ಗ್ರಾಮಕ್ಕೆ ಅಗತ್ಯವಿರುವ ಎಲ್ಲ ಸೌಲಭ್ಯ ಕಲ್ಪಿಸಲಾಗಿದೆ. ಇನ್ನೂ ಬೇಕಾದರೆ ಖಂಡಿತವಾಗಿಯೂ ಒದಗಿಸಲಾಗುವುದು ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಶ್ರೀನಿವಾಸನ್, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಆಶೋಕ್, ಮುಖಂಡರಾದ ಎಸ್.ವಿ.ಸುಧಾಕರ್, ಎನ್.ಜಿ.ಬ್ಯಾಟಪ್ಪ, ರಮೇಶ್, ಲಕ್ಷ್ಮಿದೇವಮ್ಮ, ಹರಿಕೃಷ್ಣ, ಜಗದೀಶ್, ಅಶೋಕ್, ಅಶೋಕ್, ಆನಂದ್, ಎಸ್.ವಿ.ವಿವೇಕ್ ಇದ್ದರು.
7

St Agnes PU College ; The overall pass percentage of 98 is also a remarkable one.

St Agnes PU College feels immensely proud of the heartwarming results garnered by the students in the Karnataka School Examination and Assessment Board 2023. Samruddhi D topped the Science stream with a praiseworthy total of 578 marks. From the Commerce stream Renisha Viola DSouza has secured an impressive 593 marks and a gratifying Centum in Accountancy, Statistics & Basic Maths. She is also the recipient of the 5th Rank at the State Level. The topper from the Arts stream is SamhitaPrabhuwho has got an outstanding total of 575 marks and scored hundred percent in Political Science. The overall pass percentage of 98 is also a remarkable one. We have an outstanding 222 Distinctions, 339 First Classes and 67 students have scored Centum in various subjects.

The Management, Principal SrNorineDSouza, Vice Principal Sr Janet Sequiera& the faculty congratulate the students for acing the exam and bringing laurels to the institution with their laudable academic accomplishment.