ಪ್ಲಾಸ್ಟಿಕ್‍ನಿಂದ ತೊಂದರೆ ಉಂಟಾಗದಂತೆ ಎಚ್ಚರ ವಹಿಸಬೇಕು : ತಹಶೀಲ್ದಾರ್ ಶಿರಿನ್ ತಾಜ್

ಶ್ರೀನಿವಾಸಪುರ: ಪ್ಲಾಸ್ಟಿಕ್‍ನಿಂದ ತೊಂದರೆ ಉಂಟಾಗದಂತೆ ಎಚ್ಚರ ವಹಿಸಬೇಕು ಎಂದು ತಹಶೀಲ್ದಾರ್ ಶಿರಿನ್ ತಾಜ್ ಹೇಳಿದರು.
ಪಟ್ಟಣದ ಪುರಸಭೆ ಕಚೇರಿ ಆವರಣದಲ್ಲಿ ಪುರಸಭೆ ಹಾಗೂ ನೇತಾಜಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ಪ್ಲಾಸ್ಟಿಕ್ ಮುಕ್ತ ಜಾಗೃತಿ ಅಭಿಯಾನ ಕಾರ್ಯಾಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ಲಾಸ್ಟಿಕ್ ಪಟ್ಟಣದ ಸ್ವಚ್ಛ ಪರಿಸರಕ್ಕೆ ಮಾರಕವಾಗಿ ಪರಿಣಮಿಸಿದೆ. ನಾಗರಿಕರು ಎಸೆಯುವ ಪ್ಲಾಸ್ಟಿಕ್ ಕವರ್ ಮತ್ತಿತರ ವಸ್ತುಗಳು ಚರಂಡಿ ಸೇರಿ ನೀರು ಸರಾಗವಾಗಿ ಹರಿಯುವುದನ್ನು ತಡೆಯುತ್ತದೆ. ಕೆಲವು ಸಲ ಪ್ಲಾಸ್ಟಿಕ್ ವಸ್ತುಗಳು ಜಾನುವಾರು ಹೊಟ್ಟೆ ಸೇರಿ ಪ್ರಾಣಾಂತಿಕವಾಗುತ್ತದೆ. ಆದ್ದರಿಂದಲೆ ಪುರಸಭೆ ಪ್ಲಾಸ್ಟಿಕ್ ಬಳಕೆ ನಿಷೇಧಿಸಿದೆ. ನಿಯಮ ಬಾಹಿರರವಾಗಿ ಪ್ಲಾಸ್ಟಿಕ್ ವಸ್ತು ಮಾರಾಟ ಮಾಡುವ ಅಂಗಡಿಗಳ ಮೇಲೆ ದಾಳಿ ನಡೆಸಿ ವಶಪಡಿಸಿಕೊಳ್ಳುತ್ತಿದೆ. ದಂಡ ಹಾಕುತ್ತಿದೆ ಎಂದು ಹೇಳಿದರು.
ಪುರಸಭೆ ಸ್ವಚ್ಛತಾ ರಾಯಭಾರಿ ಮಾಯಾ ಬಾಲಚಂದ್ರ ಮಾತನಾಡಿ, ಪ್ಲಾಸ್ಟಿಕ್ ವಸ್ತುಗಳನ್ನು ಸುಡಬಾರದು. ಹಾಗೆ ಮಾಡುವುದರಿಂದ ಪರಿಸರಕ್ಕೆ ದೊಡ್ಡ ಪ್ರಮಾಣದಲ್ಲಿ ಹಾನಿ ಉಂಟಾಗುತ್ತದೆ. ಪರಿಸರ ಮಾಲಿನ್ಯ ತಡೆಯುವ ಸಲುವಾಗಿ ನಾಗರಿಕರು ಪ್ಲಾಸ್ಟಿಕ್ ಕವರ್ ಬಳಸದೆ, ಬಟ್ಟೆ ಬ್ಯಾಗ್ ಬಳಕೆ ಮಾಡಬೇಕು. ಮನೆಗಳಲ್ಲಿ ಹಸಿ ಕಸ ಹಾಗೂ ಒಣ ಕಸ ವಿಂಗಡಿಸಿ ಪೌರಕಾರ್ಮಿಕರಿಗೆ ನೀಡಬೇಕು ಎಂದು ಹೇಳಿದರು.
ನಾಗರಿಕರು ಆದಷ್ಟು ಪ್ಲಾಷ್ಟಿಕ್ ವಸ್ತುಗಳ ಬಳಕೆ ಕಡಿಮೆ ಮಾಡಬೇಕು. ಸಾಧ್ಯವಾದಷ್ಟು ಮರುಬಳಕೆ ಮಾಡಬೇಕು. ನಿರುಪಯುಕ್ತ ವಸ್ತುಗಳನ್ನು ಎಲ್ಲೆಂದರಲ್ಲಿ ಎಸೆಯದೆ ಪುನರ್ ಉತ್ಪಾದನೆ ಮಾಡಲು ನೀಡಬೇಕು. ಈ ನಿಯಮ ಪಾಲನೆಯಿಂದ ಹೆಚ್ಚಿನ ಪ್ರಯೋಜನವಾಗುತ್ತದೆ. ಮನೆಗಳಲ್ಲಿ ಬೀಳುವ ಹಸಿ ಕಸದಿಂದ ಸಾವಯವ ಗೊಬ್ಬರ ಯಾರಿಸಬಹುದು. ಈ ಬಗ್ಗೆ ಪಟ್ಟಣದ ನಾಗರಿಕರಿಗೆ ತರಬೇತಿ ನೀಡಲಾಗಿದೆ. ಹಾಗೆ ತಯಾರಿಸಿದ ಗೊಬ್ಬರ ಮಾಳಿಗೆ ಮೇಲೆ ಬೆಳೆಸಲಾಗುವ ತೊಟ ಅಥವಾ ಕೈ ತೋಟಕ್ಕೆ ಬಳಸಬಹುದಾಗಿದೆ ಎಂದು ಹೇಳಿದರು.
ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ, ವ್ಯವಸ್ಥಾಪಕ ನವೀನ್ ಚಂದ್ರ, ಆರೋಗ್ಯ ನಿರೀಕ್ಷಕ ಕೆ.ಜಿ.ರಮೇಶ್, ಕಂದಾಯ ಅಧಿಕಾರಿ ವಿ.ನಾಗರಾಜ್, ಕಂದಾಯ ನಿರೀಕ್ಷಕ ಎನ್.ಶಂಕರ್, ನೇತಾಜಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ನಾಗೇಂದ್ರರಾವ್, ಕೋಟೇಶ್, ಇಂದ್ರಕೃಷ್ಣಾರೆಡ್ಡಿ, ಸುನಿಲ್, ಸುಜಾತ, ಕೃಷ್ಣಾರೆಡ್ಡಿ ಇದ್ದರು.

ಫಲವತ್ತಾದ ಮಣ್ಣು ಭೂ ಸವಕಳಿ ಮೂಲಕ ಹಾಳಾಗದಂತೆ ಎಚ್ಚರವಹಿಸಬೇಕು : ಎಸ್.ಶಿವಕುಮಾರಿ

ಶ್ರೀನಿವಾಸಪುರ: ಫಲವತ್ತಾದ ಮಣ್ಣು ಭೂ ಸವಕಳಿ ಮೂಲಕ ಹಾಳಾಗದಂತೆ ಎಚ್ಚರವಹಿಸಬೇಕು ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್.ಶಿವಕುಮಾರಿ ಹೇಳಿದರು.
ಪಟ್ಟಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ನೆಹರು ಯುವ ಕೇಂದ್ರ, ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ ಮತ್ತು ಸ್ಥಳೀಯ ಪುರಸಭೆ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ತಾಲ್ಲೂಕು ಮಟ್ಟದ ನನ್ನ ಮಣ್ಣು ನನ್ನ ದೇಶ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಣ್ಣು ಅತ್ಯಂತ ಅಮೂಲ್ಯವಾದ ಸಂಪನ್ಮೂಲ. ಅರಣ್ಯ ನಾಶ, ಅವೈಜ್ಞಾನಿಕ ಉಳುಮೆ ಕಾರಣಗಳಿಂದ ಮಣ್ಣಿನ ಸವಕಳಿ ಹೆಚ್ಚಿದ. ಮಣ್ಣೀನ ಫಲವತ್ತಾದ ಮೇಲ್ಪದರ ಮಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಭೂಮಿ ಬರಡಾಗುತ್ತಿದೆ. ಈ ಪರಿಸ್ಥಿತಿ ಮುಂದುವರಿದರೆ ಬೆಳೆಗಳ ಬೆಳವಣಿಗೆ ಕುಂಠಿತಗೊಂಡು ಫಸಲಿನ ಇಳುವರಿ ಕುಸಿಯುತ್ತದೆ ಎಂದು ಹೇಳಿದರು.
ಸರ್ಕಾರ ಮಣ್ಣಿನ ಫಲವತ್ತತೆ ಕಾಪಾಡಲು ಪೂರಕವಾದ ಯೋಜನೆ ಜಾರಿಗೆ ತಂದಿದೆ. ಜಮೀನುಗಳಲ್ಲಿ ಬದುಗಳ ನಿರ್ಮಾಣದ ಮೂಲಕ ಹಾಗೂ ಗಿಡಮರ ಬೆಳೆಸುವುದರ ಮೂಲಕ ಭೂ ಸವಕಳಿ ತಡೆಯಲು ಪ್ರಯತ್ನಿಸಲಾಗುತ್ತಿದೆ. ರೈತರು ಈ ಯೋಜನೆ ಜಾರಿಗೆ ಸಹಕರಿಸಬೇಕು. ತಮ್ಮ ಜಮೀನಲ್ಲಿ ಮಣ್ಣು ಸಂಸರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಟ್ಟಣದ ಎಂಜಿ ರಸ್ತೆಯಲ್ಲಿ ಜಾಥಾ ನಡೆಸಿ ಮಣ್ಣಿನ ರಕ್ಷಣೆ ಕುರಿತು ಜಾಗೃತಿ ಮೂಡಿಸಲಾಯಿತು. ಪುರಸಭೆ ಆವರಣದಲ್ಲಿ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು.
ತಹಶೀಲ್ದಾರ್ ಶಿರಿನ್ ತಾಜ್, ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್, ಸಿಡಿಪಿಒ ಕಚೇರಿ ಅಧಿಕಾರಿ ನವೀನ್ ಕುಮಾರ್, ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಎನ್.ರಾಮಪ್ಪ, ಕೆ.ಎಂ.ಶ್ರೀನಾಥ್, ಚೇತನ್, ಅಂತರ ರಾಷ್ಟ್ರೀಯ ಕ್ರೀಡಾಪಟು ನಿಶಾಂತ್ ಕುಮಾರ್ ಇದ್ದರು.

ವಿದ್ಯಾರ್ಥಿಗಳು ಸೌರವ್ಯೂಹದ ವಿಶೇಷ ಅಧ್ಯಯನ ಮಾಡಿ ಹೊಸ ಬೆಳಕು ಚೆಲ್ಲಬೇಕು:ಇಸ್ರೋ ವಿಜ್ಞಾನಿ ಡಾ. ರಾಮಚಂದ್ರ

ಶ್ರೀನಿವಾಸಪುರ: ವಿದ್ಯಾರ್ಥಿಗಳು ಸೌರವ್ಯೂಹದ ವಿಶೇಷ ಅಧ್ಯಯನ ಮಾಡಿ ಹೊಸ ಬೆಳಕು ಚೆಲ್ಲಬೇಕು ಎಂದು ಇಸ್ರೋ ವಿಜ್ಞಾನಿ ಡಾ. ರಾಮಚಂದ್ರ ಹೇಳಿದರು.
ಪಟ್ಟಣದ ಭೈರವೇಶ್ವರ ವಿದ್ಯಾ ನಿಕೇತನದ ಆವರಣದಲ್ಲಿ ಬಿಜಿಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ಸಾಂಸ್ಕøತಿಕ ಹಾಗೂ ನೈತಿಕ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಬಾಹ್ಯಾಕಾಶ ಯುವ ವಿಜ್ಞಾನಿಗಳ ಆದ್ಯತಾ ಕ್ಷೇತ್ರವಾಗಿದೆ ಎಂದು ಹೇಳಿದರು.
ಭಾರತ ಕೈಗೊಂಡ ಚಂದ್ರಯಾನ-3 ವಿಶ್ವ ಮಟ್ಟದಲ್ಲಿ ದೇಶದ ಕೀರ್ತಿ ಪತಾಕೆ ಹಾರಿಸಿದೆ. ಚಂದ್ರಯಾನದ ಯಶಸ್ಸು ಇಸ್ರೋ ವಿಜ್ಞಾನಿಗಳ ಸಾಂಘಿಕ ಪ್ರಯತ್ನದ ಫಲ. ಯಶಸ್ಸಿನ ಗೌರವ ದೇಶದ ಎಲ್ಲ ನಾಗರಿಕರಿಗೆ ಸಲ್ಲುತ್ತದೆ. ಸೋಲು ಗೆಲುವಿನ ಮೆಟ್ಟಿಲು ಎಂಬುದಕ್ಕೆ ಚಂದ್ರಯಾನ-3 ಉತ್ತಮ ನಿದರ್ಶನವಾಗಿದೆ. ಯಾವುದೇ ರೀತಿಯ ಸೋಲಿಗೆ ಎದೆಗುಂದದೆ ಮುಂದುವರಿದಲ್ಲಿ ಗೆಲುವು ನಮ್ಮದಾಗುತ್ತದೆ ಎಂಬುದನ್ನು ಮರೆಯಬಾರದು ಎಂದು ಅಭಿಪ್ರಾಯಪಟ್ಟರು.
ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‍ನ ಮುಖ್ಯ ಆಡಳಿತಾಧಿಕಾರಿ ಡಾ. ಎನ್.ಶಿವರಾಮರೆಡ್ಡಿ ಮಾತನಾಡಿ, ಶಿಕ್ಷಕ ಸಮುದಾಯ ಯೋಜಿತ ಶಿಕ್ಷಣ ಕಾರ್ಯಕ್ರಮ ರೂಪಿಸಿ ಮಕ್ಕಳನ್ನು ತೊಡಗಿಸಬೇಕು. ಮಕ್ಕಳಲ್ಲಿ ರಚನಾತ್ಮಕ ಕನಸುಗಳನ್ನು ಬಿತ್ತಬೇಕು. ಕನಸು ನನಸಾಗಲು ಅಗತ್ಯವಾದ ವಾತಾವರಣ ನಿರ್ಮಿಸಬೇಕು ಎಂದು ಹೇಳಿದರು.
ಬಿಜಿಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ನಿರ್ದೇಶಕ ಎ.ವೆಂಕಟರೆಡ್ಡಿ ಮಾತನಾಡಿ, ವಿದ್ಯಾರ್ಥಿಗಳು ನೈತಿಕವಾಗಿ ಬೆಳೆಯಬೇಕು. ಮಾನವೀಯ ಮೌಲ್ಯ ಮೈಗೂಡಿಸಿಕೊಳ್ಳಬೇಕು. ಭಾರತೀಯ ಸಾಂಸ್ಕøತಿಕ ಪರಂಪರೆ ಮಸಕಾಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಒಕ್ಕಲಿಕರ ಸಂಘದ ನಿರ್ದೇಶಕ ಡಾ. ಡಿ.ಕೆ.ರಮೇಶ್, ಬಿಜಿಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಎಂ.ಶ್ರೀರಾಮರೆಡ್ಡಿ, ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ವೇಣುಗೋಪಾಲರೆಡ್ಡಿ, ಮಾಜಿ ಅಧ್ಯಕ್ಷ ಚಿನ್ನಪ್ಪರೆಡ್ಡಿ, ಪ್ರಗತಿಪರ ರೈತ ಚಂದ್ರಶೇಖರ್, ಪ್ರಾಂಶುಪಾಲ ಗಂಗಾಧರ ಗೌಡ, ಮುಖ್ಯ ಶಿಕ್ಷಕ ವೆಂಕಟರಮಣರೆಡ್ಡಿ ಇದ್ದರು.

ಕಂದಾವರದಲ್ಲಿ ರೇಬೀಸ್ ಲಸಿಕಾ ಶಿಬಿರ – 158 ಕ್ಕೂ ಮಿಕ್ಕಿ ಶ್ವಾನಗಳಿಗೆ ರೇಬೀಸ್ ನಿರೋಧಕ ಲಸಿಕೆ

ಉಡುಪಿ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಕುಂದಾಪುರ , ಗ್ರಾಮಪಂಚಾಯತ್ ಕಂದಾವರ ಮತ್ತು ಪಶು ಆಸ್ಪತ್ರೆ ಕುಂದಾಪುರ  ಇವರ ಜಂಟಿ ಸಹಭಾಗಿತ್ವದಲ್ಲಿ ಕಂದಾವರ  ಗ್ರಾಮಪಂಚಾಯತ್ ನಲ್ಲಿ  ರೇಬೀಸ್ ನಿರೋಧಕ ಲಸಿಕಾ ಶಿಬಿರವನ್ನು ಆಯೋಜಿಸಲಾಗಿತ್ತು.

   ಈ ಶಿಬಿರದ ಆಧ್ಯಕ್ಷತೆಯನ್ನು ವಹಿಸಿದ ಕಂದಾವರ ಗ್ರಾಮಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಅನುಪಮಾ ಯು ಶೆಟ್ಟಿ ಇವರು ದೀಪ ಬೆಳಗಿಸಿ ಶಿಬಿರವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಕುಂದಾಪುರ ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕರಾದ  ಡಾ. ಬಾಬಣ್ಣ ಪೂಜಾರಿಯವರು ಮಾತನಾಡುತ್ತ, ಇತ್ತೀಚಿನ ದಿನಗಳಲ್ಲಿ ಬೀದಿ ನಾಯಿಗಳ ಸಂತಾನಹರಣ ಕಾರ್ಯಕ್ರಮಗಳಿಂದ ನಾಯಿಗಳ ಸಂತತಿ ಕ್ಷೀಣಿಸುತ್ತಿದ್ದರೂ, ಆಗಾಗ ರೇಬೀಸ್ ಪ್ರಕರಣಗಳು ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿದ್ದು, ರೇಬೀಸ್ ಮುಕ್ತ ಸಮಾಜ ನಿರ್ಮಾಣವಾಗಬೇಕಾದರೆ, ನಾಯಿಗಳಿಗೆ ರೇಬೀಸ್ ನಿರೋಧಕ ಲಸಿಕೆಯನ್ನು ನೀಡುವುದು ಅತೀ ಅವಶ್ಯಕವಾಗಿದೆ ಎಂದರು.
    ಈ ಲಸಿಕಾ ಶಿಬಿರದಲ್ಲಿ ಕಂದಾವರ ಪಂಚಾಯತ್ ನ ವಿವಿಧ ಸ್ಥಳಗಳಲ್ಲಿ ಕರೆತರಲಾದ ಸುಮಾರು 158 ಕ್ಕೂ ಮಿಕ್ಕಿ ಶ್ವಾನಗಳಿಗೆ ಉಚಿತವಾಗಿ ರೇಬೀಸ್ ನಿರೋಧಕ ಲಸಿಕೆಯನ್ನು ನೀಡಲಾಯ್ತು. ಕಂದಾವರ ಪಂಚಾಯತ್ ನ ಅಭಿವೃದ್ಧಿ ಅಧಿಕಾರಿ ಶ್ರೀ ಚಂದ್ರಶೇಖರ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದು, ಕಾರ್ಯದರ್ಶಿ ಶ್ರೀ ಸಂಜೀವರವರು ಧನ್ಯವಾದ ಸಲ್ಲಿಸಿದರು.
ಪಶು ಆಸ್ಪತ್ರೆ ಕುಂದಾಪುರ ಸಿಬ್ಬಂದಿಯವರು, ಕಂದಾವರ ಪಶುಸಖಿ ಸುನೀತಾ, ಬಳ್ಕೂರು ಪಶುಸಖಿ ಸುನೀತಾ, ಪಂಚಾಯತ್ ಸಿಬ್ಬಂದಿಯವರಾದ ಮಹಾಬಲ, ಶ್ರೀಮತಿ ಪುಷ್ಬ ಮುಂತಾದವರು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಹಿರಿಯ ಪಂಚಾಯತ್ ಸದಸ್ಯರಾದ ಶ್ರೀ ಶೀನ ಪೂಜಾರಿ, ಶ್ರೀಮತಿ ಶೋಭಾ, ಶ್ರೀ ಅಭಿಜಿತ್ ಕೊಠಾರಿ,  ಶ್ರೀಮತಿ ಜ್ಯೋತಿ ಉಪಸ್ಥಿತರಿದ್ದರು.

ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಂತರ್ ಶಾಲಾ ರಸಪ್ರಶ್ನೆ ಸ್ಪರ್ಧೆ


ಕುಂದಾಪುರ : ‘ಮಗುವಿನ ಕೈಯಲ್ಲಿ ಗಡಿಯಾರ ನೀಡಿದಾಗ ಅದು ಮೊದಲು ತೆರೆದು ಅದರಲ್ಲಿರುವ ಮುಳ್ಳು ಹೇಗೆ ತಿರುಗುತ್ತದೆ ಮತ್ತು ಅದು ಹೇಗೆ ಕೆಲಸ ಮಾಡುತ್ತದೆ ಎಂದು ಆಶ್ಚರ್ಯದಿಂದ ನೋಡುತ್ತದೆ ಈ ಆಶ್ಚರ್ಯದಿಂದ ನೋಡುವುದನ್ನು ಎಲ್ಲಾ ಅವಿಷ್ಕಾರದ ತಾಯಿ ಹಾಗೂ ತಾವೂ ಆ ಕಾರ್ಯವನ್ನು ಮಾಡಿ ಅವಿಷ್ಕಾರ ಮಾಡಿ ಜೀವನದಲ್ಲಿ ಉತ್ತಮ ಸಾಧನೆ ಮಾಡಬೇಕೆಂದು’ ಹೋಲಿ ರೋಜರಿ ಚರ್ಚಿನ ಪ್ರಧಾನ ಧರ್ಮಗುರುಗಳು ಹಾಗೂ ಹೋಲಿ ರೋಜರಿ ಶಾಲೆಯ ಸಂಚಾಲಕರಾಗಿರುವ ಅತೀ ವಂದನೀಯ ಗುರು ಸ್ಟ್ಯಾನಿ ತಾವ್ರೊ ಹೇಳಿದರು.

ಅವರು ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆ ಇಲ್ಲಿ ಅಂತರ್ ಶಾಲಾ ರಸಪ್ರಶ್ನೆ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿರುವ ಕ್ಷೇತ್ರ ಸಂಪನ್ಮೂಲ್ ಕಛೇರಿಯ ಸಂಪನ್ಮೂಲ ವ್ಯಕ್ತಿಗಳಾಗಿರುವ ಅಶೋಕ್ ನಾಯ್ಕರವರು ರಸ ಪ್ರಶ್ನೆ ಸ್ಪರ್ಧೆಯಲ್ಲಿ ಜಯಗಳಿಸಿದ ತಂಡಗಳಿಗೆ ಬಹುಮಾನವನ್ನು ವಿತರಿಸಿ ವಿದ್ಯಾರ್ಥಿಗಳಿಗೆ ಅವಕಾಶವನ್ನು ಬಳಸಿಕೊಳ್ಳಬೇಕು ಹಾಗೂ ಈ ರಸಪ್ರಶ್ನೆ ಸ್ಪರ್ಧೆ ಅತ್ಯುತ್ತಮವಾಗಿ ಅಯೋಜನೆಗೊಂಡು ಭಾಗವಹಿಸಿದ ವಿದ್ಯಾರ್ಥಿಗಳಿಗಲ್ಲದೆ ಇತರ ವಿದ್ಯಾರ್ಥಿಗಳಿಗೂ ಕೂಡ ಸ್ಪೂರ್ತಿಯನ್ನು ನೀಡಿತೆಂಬುದಾಗಿ ತಿಳಿಸಿ ಈ ರೀತಿಯ ಸ್ಪರ್ಧೆಗಳು ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ನಡೆಸುವಂತಾಗಲಿ ಎಂದು ಹಾರೈಸಿದರು. ಸಹ ಶಿಕ್ಷಕಿ ಮಮತಾ ಸ್ವಾಗತಿಸಿದರು, ಸಹ ಶಿಕ್ಷಕಿ ಅಂಕಿತಾ ಧನ್ಯವಾದ ಸಮರ್ಪಿಸಿದರು, ಸಹ ಶಿಕ್ಷಕಿ ನಿಖಿತಾ ಕಾರ್ಯಕ್ರಮ ನಿರೂಪಿಸಿದರು.

Muller Medi EXPO Begins with young Scientists Innovations / ಮುಲ್ಲರ್ ಮೆಡಿ ಎಕ್ಸ್‌ಪೋ ಯುವ ವಿಜ್ಞಾನಿಗಳ ನಾವೀನ್ಯತೆಗಳೊಂದಿಗೆ ಆರಂಭ

Mangluru : The health exhibition courtesy Father Muller Medical College and Father Muller Research Centre in celebration of 25 years of MBBS programme commenced on 13 October at 9 am with an inaugural bringing in young scientists with their innovations.
The chief guest for the inaugural Professor Dr Sathyabodh M Kulkarni, Dean Research and Consultancy NITK Suratkal was overjoyed with the participation of students with over 120 models for display. He was proud of his association with the Father Muller Charitable Institutions in one form or the other from 1993 and that his daughter is an alumnus of the Father Muller Homoeopathic Medical College. The enthusiasm of the Management to bring young minds on a larger pedestal of scientific acumen needs to be appreciated. He strongly urged the students to inculcate scientific interests and work on any basic ideas for self and our countries growth.
Rev. Fr Richard Aloysius Coelho, Director FMCI was prod too at the large turnout of students who desired to do more for the country by being researchers and scientist. Chandrayan or Aditya mission was not possible without a vision and dream. Thus all students should dream and question and strive thus to find the answer. Any profession a person chooses should be their gem, polish it and make it shine.
Students from various schools gathered into the Muller Dine of the Father Muller Convention Centre from all parts of the district with their models. Many visitors too came in to see the exhibits. The EXPO is open from 9am – 3pm on Friday and Saturday to all the public and especially encourages parents and guardians to get their young ones to see the various models.
The EXPO also has paintings on exhibit by doctors. Dr Akther Hussain Former Dean Yenepoya Dental College has put on display many painting that reflect nature and cosmic drama. The EXPO has a nice feel giving it a winter wonderland touch.
Rev. Fr Ajith B Menezes Administrator FMMC/FMCP/FMCOAHS encourage the students, asking then questions on their models. Dr B Sanjeev Rai Chief of Research Father Muller Research Centre welcomed the gathered and students along with the Management Committee members of FMCI.

ಮುಲ್ಲರ್ ಮೆಡಿ ಎಕ್ಸ್‌ಪೋ ಯುವ ವಿಜ್ಞಾನಿಗಳ ನಾವೀನ್ಯತೆಗಳೊಂದಿಗೆ ಆರಂಭ

ಮಂಗಳೂರು: ಸೌಜನ್ಯಯುತ ಆರೋಗ್ಯ ಪ್ರದರ್ಶನ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಮತ್ತು ಫಾದರ್ ಮುಲ್ಲರ್ ಸಂಶೋಧನಾ ಕೇಂದ್ರವು 25 ವರ್ಷಗಳ MBBS ಕಾರ್ಯಕ್ರಮದ ಸಂಭ್ರಮಾಚರಣೆಯಲ್ಲಿ ಅಕ್ಟೋಬರ್ 13 ರಂದು ಬೆಳಿಗ್ಗೆ 9 ಗಂಟೆಗೆ ಯುವ ವಿಜ್ಞಾನಿಗಳನ್ನು ತಮ್ಮ ಆವಿಷ್ಕಾರಗಳೊಂದಿಗೆ ತರುವುದರೊಂದಿಗೆ ಪ್ರಾರಂಭವಾಯಿತು.
ಉದ್ಘಾಟನಾ ಸಮಾರಂಭಕ್ಕೆ ಮುಖ್ಯ ಅತಿಥಿಗಳಾದ ಡಾ ಸತ್ಯಬೋಧ ಎಂ ಕುಲಕರ್ಣಿ, ಡೀನ್ ರಿಸರ್ಚ್ ಮತ್ತು ಕನ್ಸಲ್ಟೆನ್ಸಿ ಎನ್‌ಐಟಿಕೆ ಸುರತ್ಕಲ್ 120 ಕ್ಕೂ ಹೆಚ್ಚು ಮಾದರಿಗಳೊಂದಿಗೆ ವಿದ್ಯಾರ್ಥಿಗಳು ಭಾಗವಹಿಸುವ ಮೂಲಕ ಹರ್ಷ ವ್ಯಕ್ತಪಡಿಸಿದರು. ಅವರು 1993 ರಿಂದ ಒಂದಲ್ಲ ಒಂದು ರೂಪದಲ್ಲಿ ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳೊಂದಿಗೆ ತಮ್ಮ ಒಡನಾಟದ ಬಗ್ಗೆ ಹೆಮ್ಮೆಪಟ್ಟರು ಮತ್ತು ಅವರ ಮಗಳು ಫಾದರ್ ಮುಲ್ಲರ್ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜಿನ ಹಳೆಯ ವಿದ್ಯಾರ್ಥಿನಿಯಾಗಿದ್ದಾರೆ. ವೈಜ್ಞಾನಿಕ ಕುಶಾಗ್ರಮತಿಯ ದೊಡ್ಡ ಪೀಠದ ಮೇಲೆ ಯುವ ಮನಸ್ಸುಗಳನ್ನು ತರಲು ಆಡಳಿತ ಮಂಡಳಿಯ ಉತ್ಸಾಹವನ್ನು ಪ್ರಶಂಸಿಸಬೇಕಾಗಿದೆ. ವೈಜ್ಞಾನಿಕ ಆಸಕ್ತಿಗಳನ್ನು ಬೆಳೆಸಲು ಮತ್ತು ಸ್ವಯಂ ಮತ್ತು ನಮ್ಮ ದೇಶಗಳ ಬೆಳವಣಿಗೆಗೆ ಯಾವುದೇ ಮೂಲಭೂತ ವಿಚಾರಗಳ ಮೇಲೆ ಕೆಲಸ ಮಾಡಲು ಅವರು ಬಲವಾಗಿ ವಿದ್ಯಾರ್ಥಿಗಳನ್ನು ಒತ್ತಾಯಿಸಿದರು.
FMCI ನಿರ್ದೇಶಕರಾದ Rev. Fr ರಿಚರ್ಡ್ ಅಲೋಶಿಯಸ್ ಕೊಯೆಲ್ಹೋ, ಸಂಶೋಧಕರು ಮತ್ತು ವಿಜ್ಞಾನಿಗಳ ಮೂಲಕ ದೇಶಕ್ಕಾಗಿ ಹೆಚ್ಚಿನದನ್ನು ಮಾಡಲು ಬಯಸುವ ವಿದ್ಯಾರ್ಥಿಗಳ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಿಕೆಗೆ ಸಹ ಪ್ರೋತ್ಸಾಹಿಸಿದರು. ದೃಷ್ಟಿ ಮತ್ತು ಕನಸು ಇಲ್ಲದೆ ಚಂದ್ರಯಾನ ಅಥವಾ ಆದಿತ್ಯ ಮಿಷನ್ ಸಾಧ್ಯವಿಲ್ಲ. ಹೀಗಾಗಿ ಎಲ್ಲಾ ವಿದ್ಯಾರ್ಥಿಗಳು ಕನಸು ಮತ್ತು ಪ್ರಶ್ನೆ ಮತ್ತು ಉತ್ತರ ಹುಡುಕಲು ಹೀಗೆ ಶ್ರಮಿಸಬೇಕು. ಒಬ್ಬ ವ್ಯಕ್ತಿಯು ಆರಿಸಿಕೊಳ್ಳುವ ಯಾವುದೇ ವೃತ್ತಿಯು ಅವರ ರತ್ನವಾಗಿರಬೇಕು, ಅದನ್ನು ಹೊಳಪು ಮತ್ತು ಹೊಳಪು ಕೊಡಬೇಕು.
ಫಾದರ್ ಮುಲ್ಲರ್ ಕನ್ವೆನ್ಷನ್ ಸೆಂಟರ್‌ನ ಮುಲ್ಲರ್ ಡೈನ್‌ಗೆ ಜಿಲ್ಲೆಯ ವಿವಿಧೆಡೆಯಿಂದ ವಿವಿಧ ಶಾಲೆಗಳ ವಿದ್ಯಾರ್ಥಿಗಳು ತಮ್ಮ ಮಾದರಿಗಳೊಂದಿಗೆ ಜಮಾಯಿಸಿದರು. ವಸ್ತುಪ್ರದರ್ಶನವನ್ನು ವೀಕ್ಷಿಸಲು ಸಾಕಷ್ಟು ಪ್ರವಾಸಿಗರು ಆಗಮಿಸಿದ್ದರು. EXPO ಶುಕ್ರವಾರ ಮತ್ತು ಶನಿವಾರದಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 3 ರವರೆಗೆ ಎಲ್ಲಾ ಸಾರ್ವಜನಿಕರಿಗೆ ತೆರೆದಿರುತ್ತದೆ ಮತ್ತು ವಿಶೇಷವಾಗಿ ಪೋಷಕರು ಮತ್ತು ಪೋಷಕರನ್ನು ತಮ್ಮ ಯುವಕರನ್ನು ವಿವಿಧ ಮಾದರಿಗಳನ್ನು ನೋಡಲು ಪ್ರೋತ್ಸಾಹಿಸುತ್ತದೆ.
ಎಕ್ಸ್‌ಪೋವು ವೈದ್ಯರ ಪ್ರದರ್ಶನದ ಮೇಲೆ ವರ್ಣಚಿತ್ರಗಳನ್ನು ಸಹ ಹೊಂದಿದೆ. ಡಾ ಅಕ್ತರ್ ಹುಸೇನ್ ಮಾಜಿ ಡೀನ್ ಯೆನೆಪೋಯ ದಂತ ಮಹಾವಿದ್ಯಾಲಯವು ಪ್ರಕೃತಿ ಮತ್ತು ಕಾಸ್ಮಿಕ್ ನಾಟಕವನ್ನು ಪ್ರತಿಬಿಂಬಿಸುವ ಅನೇಕ ಚಿತ್ರಕಲೆಗಳನ್ನು ಪ್ರದರ್ಶಿಸಿದೆ. ಎಕ್ಸ್‌ಪೋ ಚಳಿಗಾಲದ ವಂಡರ್‌ಲ್ಯಾಂಡ್ ಸ್ಪರ್ಶವನ್ನು ನೀಡುವ ಉತ್ತಮ ಅನುಭವವನ್ನು ಹೊಂದಿದೆ.
Rev. Fr Ajith B Menezes ನಿರ್ವಾಹಕರು FMMC/FMCP/FMCOAHS ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ, ನಂತರ ಅವರ ಮಾದರಿಗಳ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಾರೆ. ಫಾದರ್ ಮುಲ್ಲರ್ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ ಬಿ ಸಂಜೀವ್ ರೈ ಸ್ವಾಗತಿಸಿದರು ಮತ್ತು ವಿದ್ಯಾರ್ಥಿಗಳು ಮತ್ತು ಎಫ್‌ಎಂಸಿಐ ಆಡಳಿತ ಸಮಿತಿ ಸದಸ್ಯರು.

ಶ್ರೀ ಕೋಟಿಲಿಂಗೇಶ್ವರ ಕಲಾ ಬಳಗದಿಂದ ಮಕ್ಕಳ ಯಕ್ಷಗಾನದ ಪೂರ್ವ ತಯಾರಿ ಸಭೆ

ಶ್ರೀ ಕೋಟಿಲಿಂಗೇಶ್ವರ ಕಲಾ ಬಳಗ ಕೋಟೇಶ್ವರ ವತಿಯಿಂದ ಕೊಡಿ ಹಬ್ಬದ ಪ್ರಯುಕ್ತ ನಡೆಯುವ ಮಕ್ಕಳ ಯಕ್ಷಗಾನದ ಪೂರ್ವ ತಯಾರಿ ಸಭೆಯು ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ಕಲಾ ಬಳಗದ ಅಧ್ಯಕ್ಷ ಶ್ರೀಧರ್ ಉಡುಪ ಮಾತನಾಡಿ, ಯಕ್ಷಗಾನವನ್ನು ಮುಂದಿನ ಪೀಳಿಗೆಗೆ ಮುಂದುವರಿಸುವ ಬಗ್ಗೆ ಕಲಾ ಬಳಗದ ಪಾತ್ರದ ಬಗ್ಗೆ ವಿವರಿಸಿದರು.
ಸ್ಥಾಪಕಾಧ್ಯಕ್ಷ ಡಾ| ರಾಜೇಶ್ ಕುಮಾರ್ ಶೆಟ್ಟಿ ಹಾಗೂ ಕುಂದಾಪುರದ ವಕೀಲ ಹಂದಕುಂದ ಅಶೋಕ ಶೆಟ್ಟಿ ಮಾತನಾಡಿದರು.
ಗುತ್ತಿಗೆದಾರ ಪ್ರಭಾಕರ್ ಶೆಟ್ಟಿ ಯಕ್ಷ ಗುರು ಕಡ್ಲೆ ಗಣಪತಿ ಹೆಗ್ಡೆ ಉಪಸ್ಥಿತರಿದ್ದರು.
ಉಪಾಧ್ಯಕ್ಷ ನಾರಾಯಣ ಭಂಡಾರಿ ಬೀಜಾಡಿ ಸ್ವಾಗತಿಸಿ, ಕಾರ್ಯದರ್ಶಿ ಚಂದ್ರ ಮರಕಾಲ ವಂದಿಸಿದರು.

ಭಂಡಾರ್ಕಾರ್ಸ್ ಕಾಲೇಜು: ರೇಡಿಯೋ ಕುಂದಾಪ್ರ 89.6 ಎಫ್.ಎಂ ಸಮುದಾಯ ಬಾನುಲಿ ಕೇಂದ್ರದ ರೂಪುರೇಷೆಗಳ ಮಾಹಿತಿ ಕಾರ್ಯಕ್ರಮ

ಕುಂದಾಪುರ: ಅಕ್ಟೋಬರ್ 12ರಂದು ಇಲ್ಲಿನ ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಆರಂಭವಾಗುತ್ತಿರುವ “ರೇಡಿಯೋ ಕುಂದಾಪ್ರ 89.6 ಎಫ್.ಎಂ ಸಮುದಾಯ ಬಾನುಲಿ ಕೇಂದ್ರದ ರೂಪುರೇಷೆಗಳ ಮಾಹಿತಿ ಕಾರ್ಯಕ್ರಮ” ನಡೆಯಿತು.
ಕಾರ್ಯಕ್ರಮವನ್ನು ಭಂಡಾರ್ಕಾರ್ಸ್ ಕಾಲೇಜಿನ ವಿಶ್ವಸ್ಥ ಮಂಡಳಿಯ ಹಿರಿಯ ಸದಸ್ಯರಾದ ಕೆ.ಶಾಂತಾರಾಮ ಪ್ರಭು ಅವರು ಉದ್ಘಾಟಿಸಿ ಮಾತನಾಡಿ, ಸಮುದಾಯದ ಒಳಿತು ಮತ್ತು ಉನ್ನತಿಯ ಉದ್ದೇಶದ ನೆಲೆಯಲ್ಲಿ “ರೇಡಿಯೋ ಕುಂದಾಪ್ರ 89.6 ಎಫ್.ಎಂ ಸಮುದಾಯ ಬಾನುಲಿ ಆರಂಭಿಸುತ್ತಿದ್ದೇವೆ. ಇದರಿಂದ ಕುಂದಾಪುರದ ಜನತೆಗೆ ಮತ್ತು ವಿದ್ಯಾರ್ಥಿಗಳಿಗೆ ತಮ್ಮನ್ನು ತಾವು ಬೆಳೆಸಿಕೊಳ್ಳಲು ಅವಕಾಶವಿದೆ. ಜೊತೆಗೆ ಕುಂದಾಪುರ ಭಾಷೆ ಮತ್ತು ಸಂಸ್ಕøತಿಯನ್ನು ಉಳಿಸಿ ಬೆಳೆಸಬಹುದು ಎಂದು ಹೇಳಿದರು.
ವಿಶ್ವಸ್ಥ ಮಂಡಳಿಯ ಸದಸ್ಯರು ಹಾಗೂ ರೇಡಿಯೋ ಕುಂದಾಪ್ರ 89.6 ಎಫ್.ಎಂ ಸಮುದಾಯ ಬಾನುಲಿ ಕೇಂದ್ರದ ಮಾರ್ಗದರ್ಶಕರಾದ ಯು.ಎಸ್.ಶೆಣೈ ಮಾತನಾಡಿ, ಈ ಸಮುದಾಯ ಬಾನುಲಿ ಕೇಂದ್ರದ ಮೂಲಕ ಸಮಾಜಮುಖಿಯಾಗೋಣ. ಎಲ್ಲರೂ ಒಟ್ಟಾಗಿ ರೇಡಿಯೋ ಕುಂದಾಪ್ರ 89.6 ಎಫ್.ಎಂ ಮೂಲಕ ಜಗತ್ತಿನಾದ್ಯಂತ ಕುಂದಾಪುರದ ಕಂಪನ್ನು ಪಸರಿಸೋಣ ಎಂದು ಹೇಳಿದರು.ಮತ್ತು ವಿವಿಧ ಕಾರ್ಯಕ್ರಮಗಳನ್ನು ನೀಡಬಹುದು ಎಂಬುದರ ರೂಪುರೇಷೆಗಳ ಕುರಿತು ಮಾಹಿತಿ ನೀಡಿದರು.
ಭಂಡಾರ್ಕಾರ್ಸ್ ಕಾಲೇಜಿನ ವಿಶ್ವಸ್ಥ ಮಂಡಳಿಯ ಸದಸ್ಯರಾದ ರಾಜೇಂದ್ರ ತೋಳಾರ್ ಮಾತನಾಡಿ ಈ ಸಮುದಾಯ ಬಾನುಲಿ ಕೇಂದ್ರದ ಮೂಲಕ ನಾವು ಎಲ್ಲಾ ಸಮುದಾಯವನ್ನು ತಲುಪಬಹುದು ಎಂದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಶುಭಕರಾಚಾರಿ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ.ಜಿ.ಎಂ.ಗೊಂಡ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ.ಸತ್ಯನಾರಾಯಣ ಉಪಸ್ಥಿತರಿದ್ದರು.
ಭಂಡಾರ್ಕಾರ್ಸ್ ಕಾಲೇಜಿನ ಪ್ರಾಧ್ಯಾಪಕರುಗಳು ಮತ್ತು ವಿದ್ಯಾರ್ಥಿಗಳು “ರೇಡಿಯೋ ಕುಂದಾಪ್ರ 89.6 ಎಫ್.ಎಂ ಸಮುದಾಯ ಬಾನುಲಿ ಕೇಂದ್ರದ ಕಾರ್ಯಕ್ರಮ ನಿರ್ಮಾಣದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕಿ ಸುಮಲತಾ ಸುರೇಶ್ ಕಾರ್ಯಕ್ರಮ ನಿರ್ವಹಿಸಿ ಸ್ವಾಗತಿಸಿದರು. ರೇಡಿಯೋ ಕುಂದಾಪ್ರ 89.6 ಎಫ್.ಎಂ ಇದರ ಕಾರ್ಯಕ್ರಮಗಳ ನಿರ್ವಾಹಕರಾದ ಜ್ಯೋತಿ ಸಾಲಿಗ್ರಾಮ ವಂದಿಸಿದರು.

ಕೃಷ್ಣಮೂರ್ತಿ ಡಿಬಿ ಯವರು ಶ್ರೀ ಗುರುಕುಲ ತಿಲಕ ಪುರಸ್ಕಾರಕ್ಕೆ ಆಯ್ಕೆ

ಅಂತರರಾಷ್ಟ್ರೀಯ ಶಿಕ್ಷಕರ ದಿನಾಚರಣೆಯ (ಅಕ್ಟೋಬರ್ 5) ಪ್ರಯುಕ್ತ “ಬೆಳಗಾವಿಯ ಕಸ್ತೂರಿ ಸಿರಿಗನ್ನಡ ವೇದಿಕೆ (ರಿ) ಇವರು ಶೈಕ್ಷಣಿಕ ಸೇವೆಯನ್ನು ಪರಿಗಣಿಸಿ ನೀಡುವ
ಶ್ರೀ ಗುರುಕುಲ ತಿಲಕ ಪುರಸ್ಕಾರ ಕ್ಕೆ ಆರ್ ಎನ್ ಶೆಟ್ಟಿ ಸಂಯುಕ್ತ ಪದವಿ ಪೂರ್ವ ಕಾಲೇಜು ಕುಂದಾಪುರ ಇದರ ಕನ್ನಡ ವಿಭಾಗದ ಮುಖ್ಯಸ್ಥರಾದ ಕೃಷ್ಣಮೂರ್ತಿ ಡಿಬಿ ಯವರನ್ನು ಆಯ್ಕೆ ಮಾಡಿದೆ
.  ಪ್ರಶಸ್ತಿಗೆ ಆಯ್ಕೆಯಾದ ಶ್ರೀ ಕೃಷ್ಣಮೂರ್ತಿ ಡಿ.ಬಿ ಯವರು ಕಾಲೇಜಿನ ಸಂಚಾಲಕರಾದ ಶ್ರೀ ಬಿ.ಎಮ್. ಸುಕುಮಾರ್ ಶೆಟ್ಟಿಯವರು,  ಆಡಳಿತ ಮಂಡಳಿಯ ಸದಸ್ಯರು, ಕಾಲೇಜಿನ ಪ್ರಾಂಶುಪಾಲರಾದ ಶ್ರೀ ನವೀನ ಕುಮಾರ ಶೆಟ್ಟಿಯವರು ಹಾಗೂ ಬೋಧಕ- ಬೋಧಕೇತರ ಸಿಬ್ಬಂಧಿಗಳು ಅಭಿನಂದನೆಯನ್ನು ಸಲ್ಲಿಸಿರುತ್ತಾರೆ.