

ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಖಾಲಿ ಇದ್ದ ಅಂಗನವಾಡಿ ಕಾರ್ಯಕರ್ತೆ / ಸಹಾಯಕಿಯರ ನೇಮಕಾತಿ ಕುರಿತಂತೆ ಆಕ್ಷೇಪಣಾ ಅರ್ಜಿಗಳನ್ನು ಪರಿಶೀಲಿಸಿ , ಅಂತಿಮ ಆಯ್ಕೆ ಪಟ್ಟಿ ಪ್ರಕಟಣೆ ಸಂಬಂಧ ಜಿಲ್ಲಾ ಆಯ್ಕೆ ಸಮಿತಿ ಸಭೆಯನ್ನು ನಡೆಸಿದ್ದ ಜಿಲ್ಲಾಧಿಕಾರಿ ಅಕ್ರಂ ಪಾಷ.




ಕೋಲಾರ,ಡಿ.02 ನೌಕರರ ಸಂಘದ ಚುನಾವಣೆ ಹೆಸರಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ ಕೇಂದ್ರ ಸ್ಥಾನದಲ್ಲಿ ಕೆಲಸ ನಿರ್ವಹಿಸಿ ಮತ ಚಲಾಯಿಸಲು ಸೂಚನೆ ನೀಡಬೇಕೆಂದು ರೈತ ಸಂಘದಿಂದ ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ಜನರ ಸೇವೆಯ ಕರ್ತವ್ಯದ ಹೊಣೆ ಹೊತ್ತ ನೌಕರರು ಕಚೇರಿಗಳಲ್ಲಿ ಕೆಲಸ ಮಾಡದೇ ಅವರ ಚುನಾವಣೆಗೆ ಆದ್ಯತೆ ನೀಡಿ, ರಾಜಕೀಯ ಪಕ್ಷಗಳಿಗೆ ಪೈಪೋಟಿ ನೀಡುವ ರೀತಿಯಲ್ಲಿ ರೆಸಾಟ್ರ್ವಾಸ, ಪ್ರವಾಸ,ಮೋಜು,ಮಸ್ತಿ ನಡೆಸಲು ಅವಕಾಶ ಕಲ್ಪಿಸುತ್ತಿದ್ದು, ಇದು ಕಾನೂನುಬಾಹಿರ ಜೊತೆಗೆ ಸಂವಿಧಾನದ ಆಶಯದಂತೆ ಭ್ರಷ್ರಚಾರ ರಹಿತ ಚುನಾವಣೆ ನಡೆಸಬೇಕಾದ ನೌಕರರೇ ಹಾದಿ ತಪ್ಪಿದರೆ ಇನ್ನೂ ಜನಸಾಮಾನ್ಯರಿಗೆ ನ್ಯಾಯ ಒದಗಿಸುವವರೇ ಎಂದು ರೈತ ಸಂಘದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಅವ್ಯವಸ್ಥೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರದ ಇಲಾಖೆಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂಬುದಕ್ಕೆ ನೌಕರರ ಸಂಘದ ಚುನಾವಣೆಯಲ್ಲಿ ಹರಿದಾಡುತ್ತಿರುವ ಹಣ,ಆಮಿಷಗಳೇ ಸಾಕ್ಷಿಯಾಗಿದೆ, ಸರ್ಕಾರಿ ನೌಕರರು ಕೇವಲ ಸಂಬಳ ಪಡೆಯುವುದು ಮಾತ್ರವಾದರೆ ಇಷ್ಟೊಂದು ಲಕ್ಷಲಕ್ಷ ಹಣ ಎಲ್ಲಿಂದ ತಂದು ಚುನಾವಣೆಯಲ್ಲಿ ಹಂಚಲು ಸಿದ್ದರಾಗಿದ್ದಾರೆ ಎಂಬುದರ ಕುರಿತು ಜಿಲ್ಲಾಧಿಕಾರಿಗಳು ತನಿಖೆಗೆ ಆಗ್ರಹಿಸಬೇಕು, ಲೋಕಾಯುಕ್ತರು ಇಂತಹ ಸಂದರ್ಭದಲ್ಲಿ ಮಧ್ಯೆ ಪ್ರವೇಶಿಸಿ ದುಡ್ಡು,ಆಮಿಷವೊಡ್ಡುವ ನೌಕರರ ಸಂಘದ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ನೌಕರರ ಸಂಘದ ಚುನಾವಣೆಯಲ್ಲಿ ರಾಜಕೀಯ ಹಸ್ತಕ್ಷೇಪ ಖಂಡನೀಯ, ನೌಕರರ ಸಂಘ ಚುನವಣೆ ಸ್ಪರ್ಧಿಸಿರುವ ಅಭ್ಯರ್ಥಿಗಳು ನೌಕರರ ಅಭಿವೃದ್ದಿ, ಸಮಸ್ಯೆಗಳಿಗೆ ಸ್ಪಂದಿಸುವ ಭರವಸೆ ನೀಡಬೇಕೇ ಹೊರತು ರಾಜಕೀಯ ವ್ಯಕ್ತಿಗಳ ಜೊತೆ ಸೇರಿಕೊಂಡು ಆ ಪಕ್ಷ ಈ ಪಕ್ಷ ಎಂದು ಚುನಾವಣೆಯನ್ನು ದಿಕ್ಕು ತಪ್ಪಿಸಿ ಮತ ಚಲಾಯಿಸುವ ನೌಕರರಿಗೆ ದ್ವಿಚಕ್ರವಾಹನ, ಚಿನ್ನದ ನಾಣ್ಯ ಮತ್ತಿತರ ಆಮಿಷಗಳನ್ನು ಒಡ್ಡಲಾಗುತ್ತಿದೆ ಎಂಬ ವದಂತಿಗಳು ಹರಿದಾಡುತ್ತಿವೆ, ಇದು ನಿಜವೇ ಆಗಿದ್ದಲ್ಲಿ ಅದನ್ನು ಪತ್ತೆಹಚ್ಚಿ ಇದನ್ನು ನೀಡುವ ಭ್ರಷ್ಟ ಕುಳಗಳ ವಿರುದ್ದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಜಿಲ್ಲಾದ್ಯಕ್ಷ ಈಕಂಬಳ್ಳಿ ಮಂಜುನಾಥ್ ಮಾತನಾಡಿ ಡಿ.4 ರಂದು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರ ಚುನಾವಣೆ ನಿಗಧಿಯಾಗಿರುವುದು ಸರಿಯಷ್ಟೆ. ಆದರೆ ಚುನಾವಣೆಗೆ ಮುನ್ನಾ ಅಭ್ಯರ್ಥಿಗಳು ನೌಕರರ ಸಂಘದ ನಿರ್ದೇಶಕರಿಗೆ ಹಣ,ಆಮಿಷವೊಡ್ಡಿ ಭ್ರಷ್ಟಾಚಾರಕ್ಕೆ ಕಾರಣವಾಗುತ್ತಿರುವ ಜೊತೆಗೆ ಕೋಟಿ ಕೋಟಿ ಹಣ ಸುರಿಯುತ್ತಿರುವ ನೌಕರ ಸಂಘದ ಆಭ್ಯರ್ಥಿಗಳಿಗೆ ಹಣದ ಮೂಲ ಯಾವುದು ಜನ ಸಾಮಾನ್ಯರನ್ನು ಹಿಂಸಿಸಿ ಹಣ ಮಾಡಿ ಚುನಾವಣೆಗೆ ಸುರಿಯುತ್ತಿದ್ದಾರೆಯೇ ಇಲ್ಲವೇ ರಾಜಕಾರಣಿಗಳು ಅಧಿಕಾರಿಗಳನ್ನು ತಮ್ಮ ಹಿಡಿತಕ್ಕೆ ಪಡೆದು ಗೆದ್ದ ನಂತರ ಸರ್ಕಾರಿ ಆಸ್ತಿಗಳನ್ನು ಕಬಳಿಸಲು ಬಂಡವಾಳ ಸುರಿಯುತ್ತಿದ್ದಾರೆಯೇ ಎಂದು ಅನುಮಾನ ವ್ಯಕ್ತಪಡಿಸಿದರು.
ಚುನಾವಣೆ ಡಿ.4 ರಂದು ನಡೆಯಲಿದ್ದು, ಅಂದುಹೋಗಿ ನೌಕರರ ಸಂಘದ ನಿರ್ದೇಶಕರಾಗಿರುವವರು ತಮ್ಮ ಹಕ್ಕು ಚಲಾಯಿಸಿ ನಂತರ ತಮ್ಮ ಇಲಾಖೆಯಲ್ಲಿನ ಜನಸೇವೆಯ ಕರ್ತವ್ಯ ಮುಂದುವರೆಸಲಿ ಅದು ಬಿಟ್ಟು ಮೂರು ದಿನಗಳ ಮೊದಲೇ ರೆಸಾರ್ಟ್,ಪ್ರವಾಸಕ್ಕೆ ಕರೆದುಕೊಂಡು ಹೋಗಿ ಮೋಜು,ಮಸ್ತಿ ಮಾಡುವ ಮೂಲಕ ರಾಜಕೀಯ ಪಕ್ಷಗಳಿಗಿಂತ ನಾವು ಏನೂ ಕಡಿಮೆ ಇಲ್ಲ ಎಂಬುದನ್ನು ನಿರೂಪಿಸಲು ಹೊರಟಿದ್ದಾರೆ ಎಂದು ಕಿಡಿಕಾರಿದರು.
ವಿಧಾನಸಭೆ,ಸಂಸತ್ ಸಾರ್ವತ್ರಿಕ ಚುನಾವಣೆಯಲ್ಲಿ ನಡೆಯುವ ಭ್ರಷ್ಟಾಚಾರ, ಹಣ,ಹೆಂಡ ಹಂಚಿಕೆ, ಆಮಿಷವೊಡ್ಡುವುದನ್ನು ತಡೆಯಲು ತನಿಖಾ ದಳದ ನೇತೃತ್ವ ವಹಿಸುವ ಸರ್ಕಾರಿ ನೌಕರರು, ಅಧಿಕಾರಿಗಳು ಇಂದು ತಾವೇ ನೌಕರರ ಸಂಘದ ಚುನಾವಣೆಗಾಗಿ ಇಂತಹ ಆಮಿಷಗಳಿಗೆ ಬಲಿಯಾಗುತ್ತಿರುವುದು ದುರಂತವೇ ಸರಿ.
ಸರ್ಕಾರಿ ಕಚೇರಿಗಳಲ್ಲಿ ರೈತರ ಕೆಲಸಗಳು ಆಗುತ್ತಿಲ್ಲ, ದಿನನಿತ್ಯ ಅನ್ನದಾತರು ತಮ್ಮ ಕೆಲಸ ಬಿಟ್ಟು ಅಲೆದಾಡಬೇಕಾಗಿದೆ, ನಮ್ಮ ತೆರಿಗೆಯಲ್ಲಿ ಸಂಬಳ ಪಡೆಯುವ ಈ ನೌಕರರು ತಮ್ಮ ಚುನಾವಣೆ ನೆಪವೊಡ್ಡಿ ವಾರಗಟ್ಟಲೇ ಕಚೇರಿಗಳಿಗೆ ಬಾರದೇ ರೆಸಾರ್ಟ್,ಪ್ರವಾಸ ಹೊರಟರೆ ಅಂತಹ ನೌಕರರಿಗೆ ನೋಟಿಸ್ ನೀಡಿ ಚುನಾವಣೆ ದಿನದಂದು ಮತ ಚಲಾಯಿಸಿ ಸಾರ್ವಜನಿಕ ಸೇವೆಗೆ ಹಾಜರಾಗುವಂತೆ ಆದೇಶ ನೀಡಬೇಕೆಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಮಾನ್ಯ ಜಿಲ್ಲಾಧಿಕಾರಿಗಳು ನೌಕರರ ಚುನಾವಣೆ ಸಮಾಜಕ್ಕೆ ಮಾದರಿಯಾಗಬೇಕಾದರೆ ಭ್ರಷ್ಟಚಾರ ರಹಿತವಾಗಿ ನಡೆಯಬೇಕು ಮತ ಹಾಕುವ ನೌಕರರಿಗೆ ಆಮಿಷಗಳನ್ನು ಒಡ್ಡುವ ಬಗ್ಗೆ ನಿಖರವಾದ ದೂರು ನೀಡಿದರೆ ಅಂತಹವರ ವಿರುದ್ದ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದರು.
ಮನವಿ ನೀಡುವಾಗಿ ರಾಜ್ಯ ಸಂಚಾಲಕ ಬಂಗವಾದಿ ನಾಗರಾಜಗೌಡ, ತಾ.ಅ ಮೂರಾಂಡಹಳ್ಳಿ ಶಿವಾರೆಡ್ಡಿ, ಮಂಗಸಂದ್ರ ತಿಮ್ಮಣ್ಣ, ಗೀರೀಶ್, ಶೈಲಜ, ರತ್ನಮ್ಮ, ಭಾಗ್ಯಮ್ಮ, ವೆಂಕಟಮ್ಮ, ಮುನಿರತ್ನ ಸೌಭಾಗ್ಯ ಮುಂತಾದವರಿದ್ದರು.



ಮಂಗಳೂರು ಧರ್ಮಪ್ರಾಂತ್ಯದ ಯಂಗ್ ಕ್ಯಾಥೋಲಿಕ್ ವಿದ್ಯಾರ್ಥಿಗಳು (YCS), ಮಂಗಳೂರಿನ ಸೇಂಟ್ ಅಲೋಶಿಯಸ್ (ಡೀಮ್ಡ್ ಟು ಬಿ ಯೂನಿವರ್ಸಿಟಿ) ಕ್ಯಾಂಪಸ್ನ ಸಹಯೋಗದೊಂದಿಗೆ 1ನೇ ಡಿಸೆಂಬರ್ 2024 ರಂದು ಚಿಲಿಪಿಲಿ ಋತು 1 ಅನ್ನು ಆಯೋಜಿಸಿದರು.
ಸೇಂಟ್ ಅಲೋಶಿಯಸ್ ಚಾಪೆಲ್ನಲ್ಲಿ ಬೆಳಿಗ್ಗೆ 8:00 ಗಂಟೆಗೆ ಪವಿತ್ರ ಮಾಸ್ನೊಂದಿಗೆ ದಿನವು ಪ್ರಾರಂಭವಾಯಿತು. ಬೆಳಿಗ್ಗೆ 9:00 ಗಂಟೆಯ ಸುಮಾರಿಗೆ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರಿನ ಸಂತ ಅಲೋಶಿಯಸ್ (ಡೀಮ್ಡ್ ಟು ಬಿ ಯೂನಿವರ್ಸಿಟಿ) ಯ ಉಪಕುಲಪತಿಗಳಾದ ವಂದನೀಯ ಡಾ.ಪ್ರವೀಣ್ ಮಾರ್ಟಿಸ್ ಎಸ್.ಜೆ. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕರ್ನಾಟಕ ಸರ್ಕಾರದ ವಿಧಾನ ಪರಿಷತ್ತಿನ ಸದಸ್ಯರಾದ ಶ್ರೀ ಐವನ್ ಡಿಸೋಜ ಆಗಮಿಸಿದ್ದರು. ಗೌರವ ಅತಿಥಿಗಳಾದ ಫಾ. ಲೂರ್ದ್ ರಾಜ್, ಕರ್ನಾಟಕ ಪ್ರಾದೇಶಿಕ ಯುವ ಆಯೋಗದ ಕಾರ್ಯದರ್ಶಿ; ಫಾ. ಅಶ್ವಿನ್ ಕಾರ್ಡೋಜಾ, ಯುವ ಆಯೋಗದ ಕಾರ್ಯದರ್ಶಿ, ಮಂಗಳೂರು; ಫಾ. ರೋಶನ್ ಡಿ’ಕುನ್ಹಾ, YCS/YSM ಮಂಗಳೂರು ಧರ್ಮಪ್ರಾಂತ್ಯದ ನಿರ್ದೇಶಕರು; ಜಾನೆಟ್ ಪಿಂಟೋ, ವೈ.ಸಿ.ಎಸ್/ವೈ.ಎಸ್.ಎಂ ಮಂಗಳೂರು ಧರ್ಮಪ್ರಾಂತ್ಯದ ಕೋ-ಆರ್ಡಿನೇಟರ್ ಎಂ.ಎಸ್. YCS/YSM ಮಂಗಳೂರು ಧರ್ಮಪ್ರಾಂತ್ಯದ ಅನಿಮೇಟರ್ ಶ್ರೀ ರೂಬೆನ್ ಡಿಸೋಜಾ; ಸೇಂಟ್ ಅಲೋಶಿಯಸ್ (ವಿಶ್ವವಿದ್ಯಾಲಯವೆಂದು ಪರಿಗಣಿಸಲಾಗಿದೆ) ಕಾಲೇಜಿನ PRO ಗಳು, ಶ್ರೀಮತಿ ಶಿಲ್ಪಾ ಮತ್ತು ಶ್ರೀಮತಿ ಶಾಂತಿ; ಮತ್ತು YCS ಮಂಗಳೂರು ಧರ್ಮಪ್ರಾಂತ್ಯದ ಅಧ್ಯಕ್ಷರಾದ ಶ್ರೀ ಡಿಯೋನ್ ಸಲ್ಡಾನ್ಹ ಇವರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಚಿಲಿಪಿಲಿ ಋತು1 ಸೃಜನಶೀಲತೆ ಮತ್ತು ಸಂತೋಷದ ಭವ್ಯವಾದ ಆಚರಣೆಯಾಗಿದೆ. ಕಾರ್ಯಕ್ರಮವು ಸಂಗೀತ, ನೃತ್ಯ ಮತ್ತು ವರ್ಣರಂಜಿತ ಪ್ರದರ್ಶನಗಳೊಂದಿಗೆ ವೇದಿಕೆಯು ಜೀವಂತವಾಗುವುದರೊಂದಿಗೆ ರೋಮಾಂಚಕ ವಾತಾವರಣದಲ್ಲಿ ಪ್ರದರ್ಶಕರು ಮತ್ತು ಪ್ರೇಕ್ಷಕರನ್ನು ಒಟ್ಟುಗೂಡಿಸಿತು. ಭಾಗವಹಿಸುವವರ ಶಕ್ತಿಯು ಸಾಂಕ್ರಾಮಿಕವಾಗಿತ್ತು, ಮತ್ತು ಪ್ರತಿ ಕಾರ್ಯವು ಪ್ರತಿಭೆ, ಉತ್ಸಾಹ ಮತ್ತು ಸಮರ್ಪಣೆಯನ್ನು ಪ್ರದರ್ಶಿಸಿತು. ಸಭಿಕರು ಚಪ್ಪಾಳೆ ತಟ್ಟಿ ಚಪ್ಪಾಳೆ ತಟ್ಟುವ ಮೂಲಕ ಪ್ರತಿಕ್ರಿಯಿಸಿದ್ದು ಕಾರ್ಯಕ್ರಮವನ್ನು ಇನ್ನಷ್ಟು ವಿಶೇಷಗೊಳಿಸಿತು.
ವೈವಿಧ್ಯಮಯ ಸ್ಪರ್ಧೆಗೆ ಮಂಗಳೂರು ಧರ್ಮಪ್ರಾಂತ್ಯದ ಆರು ಧರ್ಮಾಧಿಕಾರಿಗಳಿಂದ ತಂಡಗಳು ಬಂದಿದ್ದು, ಬ್ಯಾಟಲ್ ಆಫ್ ಬ್ಯಾಂಡ್ಗೆ ಧರ್ಮಪ್ರಾಂತ್ಯದ ನಾಲ್ಕು ತಂಡಗಳು ಭಾಗವಹಿಸಿದ್ದವು. YCS ಸದಸ್ಯರು ದಿನವಿಡೀ ತಮ್ಮ ಸೃಜನಶೀಲತೆ ಮತ್ತು ಉತ್ಸಾಹವನ್ನು ವ್ಯಕ್ತಪಡಿಸುವುದರೊಂದಿಗೆ ಕಾರ್ಯಾಗಾರಗಳು ಮತ್ತು ಚಟುವಟಿಕೆಗಳು ಉತ್ಸಾಹವನ್ನು ಹೆಚ್ಚಿಸಿದವು.
ಡಿಯೋಸಿಸನ್ ಎಕ್ಸಿಕ್ಯೂಟಿವ್ ಕೌನ್ಸಿಲ್ ಫ್ಲ್ಯಾಶ್ ಮಾಬ್ ಅನ್ನು ಪ್ರದರ್ಶಿಸಿತು, ಈವೆಂಟ್ಗೆ ವಿನೋದ ಮತ್ತು ಉತ್ಸಾಹಭರಿತ ಅಂಶವನ್ನು ಸೇರಿಸಿತು.
ವಂದನಾರ್ಪಣೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೆ.ಫಾ. ಮೆಲ್ವಿನ್ ಜೆ.ಪಿಂಟೋ ಎಸ್.ಜೆ., ಮಂಗಳೂರಿನ ಸೈಂಟ್ ಅಲೋಶಿಯಸ್ ಸಂಸ್ಥೆಗಳ ರೆಕ್ಟರ್. ಮುಖ್ಯ ಅತಿಥಿಗಳಾಗಿ ಶ್ರೀ ವಿಶ್ವಾಸ್ ರೆಬಿಂಬಸ್ ಭಾಗವಹಿಸಿದ್ದರು. ಗೌರವ ಅತಿಥಿಗಳಲ್ಲಿ YCS/YSM ಇಂಡಿಯಾದ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಅನ್ಸನ್ ನಜರೆತ್ ಸೇರಿದ್ದಾರೆ; ಶ್ರೀ ರಿಚರ್ಡ್ ಅಲ್ವಾರೆಸ್; ಫಾ. ರೋಶನ್ ಡಿ’ಕುನ್ಹಾ, YCS/YSM ಮಂಗಳೂರು ಧರ್ಮಪ್ರಾಂತ್ಯದ ನಿರ್ದೇಶಕರು; ಜಾನೆಟ್ ಪಿಂಟೋ, ವೈ.ಸಿ.ಎಸ್/ವೈ.ಎಸ್.ಎಂ ಮಂಗಳೂರು ಧರ್ಮಪ್ರಾಂತ್ಯದ ಕೋ-ಆರ್ಡಿನೇಟರ್ ಎಂ.ಎಸ್. YCS/YSM ಮಂಗಳೂರು ಧರ್ಮಪ್ರಾಂತ್ಯದ ಅನಿಮೇಟರ್ ಶ್ರೀ ರೂಬೆನ್ ಡಿಸೋಜಾ; ಸೇಂಟ್ ಅಲೋಶಿಯಸ್ (ಡೀಮ್ಡ್ ಟು ಬಿ ಯೂನಿವರ್ಸಿಟಿ) ಕಾಲೇಜಿನ PROಗಳು, ಶ್ರೀಮತಿ ಶಿಲ್ಪಾ ಮತ್ತು ಶ್ರೀಮತಿ ಶಾಂತಿ; ಮತ್ತು YCS ಮಂಗಳೂರು ಧರ್ಮಪ್ರಾಂತ್ಯದ ಅಧ್ಯಕ್ಷರಾದ ಶ್ರೀ ಡಿಯೋನ್ ಸಲ್ಡಾನ್ಹಾ. ಈ ಗಣ್ಯರು ವೇದಿಕೆಯಲ್ಲಿ ಅತಿಥಿಗಳೊಂದಿಗೆ ಬಂದರು. ವಿವಿಧ ಕಾರ್ಯಕ್ರಮಗಳಲ್ಲಿ ವಿಜೇತರಾದವರನ್ನು ಗಣ್ಯರು ಸನ್ಮಾನಿಸಿದರು.
ರೀಲ್ ಮೇಕಿಂಗ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಬೇಳ ತಂಡ, ದ್ವಿತೀಯ ಸ್ಥಾನ ಪೆರ್ಮನ್ನೂರು ತಂಡ, ತೃತೀಯ ಸ್ಥಾನವನ್ನು ಎಜಿಜಿ ತಂಡ ಪಡೆದುಕೊಂಡಿತು.
ವೆರೈಟಿ ಸ್ಪರ್ಧೆಯಲ್ಲಿ ಎಪಿಸ್ಕೋಪಲ್ ಸಿಟಿ ಡೀನರಿ ಪ್ರಥಮ ಸ್ಥಾನ ಪಡೆದರೆ, ಸಿಟಿ ಡೀನರಿ ದ್ವಿತೀಯ ಸ್ಥಾನ ಪಡೆದರು.
ಬ್ಯಾಟಲ್ ಆಫ್ ಬ್ಯಾಂಡ್ನಲ್ಲಿ, ಮೊದಲ ಸ್ಥಾನವನ್ನು ಟೀಮ್ ರಿದಮಿಕ್ ಹೆವೆನ್ ಗೆದ್ದುಕೊಂಡಿತು ಮತ್ತು ಎರಡನೇ ಸ್ಥಾನವನ್ನು ಟೀಮ್ ಕ್ರೆಸೆಂಡೋ ಪಡೆದುಕೊಂಡಿತು.
ಈ ಘಟನೆಯು ಜೀವನದುದ್ದಕ್ಕೂ ಉಳಿಯುವ ನೆನಪುಗಳನ್ನು ಸೃಷ್ಟಿಸಿತು. ಇದು ಪ್ರತಿಭೆಯನ್ನು ಮಾತ್ರವಲ್ಲದೆ ಏಕತೆ ಮತ್ತು ಸಂತೋಷವನ್ನು ಆಚರಿಸಿತು. ಚಿಲಿಪಿಲಿ ಸೀಸನ್ 1 ಭಾಗವಹಿಸಿದ ಪ್ರತಿಯೊಬ್ಬರಿಗೂ ನಿಜವಾಗಿಯೂ ಮರೆಯಲಾಗದ ಅನುಭವವಾಗಿದೆ.
CHILIPILI SEASON 1: A Celebration of Talent and Joy

The Young Catholic Students (YCS) of Mangalore Diocese, in collaboration with St. Aloysius (Deemed to be University) Campus, Mangalore, organized CHILIPILI SEASON 1 on 1st December 2024.
The day began with Holy Mass at 8:00 am at St. Aloysius Chapel. Around 9:00 am, the inaugural program was presided over by Rev. Dr. Praveen Martis SJ, Vice Chancellor of St. Aloysius (Deemed to be University), Mangalore. The Chief Guest for the event was Sri Ivan D’Souza, Member of the Legislative Council, Government of Karnataka. Guests of Honour included Fr. Lourd Raj, Secretary of the Karnataka Regional Youth Commission; Fr. Ashwin Cardoza, Secretary of the Youth Commission, Mangalore; Fr. Roshan D’Cunha, Director of YCS/YSM Mangalore Diocese; Ms. Janet Pinto, Co-ordinator of YCS/YSM Mangalore Diocese; Mr. Ruben D’Souza, Animator of YCS/YSM Mangalore Diocese; the PROs of St. Aloysius (Deemed to be University) College, Ms. Shilpa and Ms. Shanti; and Mr. Deyon Saldanha, President of YCS Mangalore Diocese, who were all present on the dais.
CHILIPILI SEASON 1 was a grand celebration of creativity and joy. The event brought together performers and audiences in a vibrant atmosphere, with the stage coming alive with music, dance, and colorful performances. The energy of the participants was infectious, and each act showcased talent, passion, and dedication. The audience responded with cheers and applause, which made the event even more special.
The teams for the variety competition came from six deaneries of the Mangalore Diocese, and for the Battle of Bands, there were four teams from the Diocese. Workshops and activities added to the excitement, with YCS members expressing their creativity and enthusiasm throughout the day.
The Diocesan Executive Council performed a flash mob, adding a fun and lively element to the event.
The Valedictory Program was presided over by Rev. Fr. Melwin J. Pinto SJ, Rector of St. Aloysius Institutions, Mangalore. The Chief Guest was Mr. Vishwas Rebimbus. The Guests of Honour included Mr. Anson Nazareth, National President of YCS/YSM India; Mr. Richard Alvares; Fr. Roshan D’Cunha, Director of YCS/YSM Mangalore Diocese; Ms. Janet Pinto, Co-ordinator of YCS/YSM Mangalore Diocese; Mr. Ruben D’Souza, Animator of YCS/YSM Mangalore Diocese; PROs of St. Aloysius (Deemed to be University) College, Ms. Shilpa and Ms. Shanti; and Mr. Deyon Saldanha, President of YCS Mangalore Diocese. These dignitaries accompanied the guests on the dais. The winners of various events were felicitated by the dignitaries.
In the Reel Making Competition, the first place was secured by Team Bela, the second place by Team Permannur, and the third place by Team AGG.
In the Variety Competition, the first place went to Episcopal City Deanery, while the second place was awarded to City Deanery.
In the Battle of Bands, the first place was won by Team Rhythmic Heaven, and the second place was taken by Team Crescendo.
The event created memories that will last a lifetime. It celebrated not just talent but also unity and joy. CHILIPILI SEASON 1 was truly an unforgettable experience for everyone involved.



















ಮಂಗಳೂರು; ಕರಾವಳಿ ಹಾಲುಮತ ಕುರುಬರ ಸಂಘ (ರಿ) ದ.ಕ ಜಿಲ್ಲೆ ಮಂಗಳೂರು ಇವರ ನೇತೃತ್ವದಲ್ಲಿ ದಾಸವರೇಣ್ಯ ದಾರ್ಶನಿಕ ಕವಿ ಸಂತ ಶ್ರೇಷ್ಠ ಶ್ರೀ ಕನಕದಾಸರ 537ನೇ ಜಯಂತೋತ್ಸವ ಕಾರ್ಯಕ್ರಮ ಭಾನುವಾರ ಚಿಲಿಂಬಿಯ ಶ್ರೀ ಶಿರಡಿ ಸಾಯಿಬಾಬಾ ಮಂದಿರದಿಂದ ಗೋಕರ್ಣನಾಥ ಕಾಲೇಜು ಸಭಾಭವನದವರೆಗೆ ಕನಕದಾಸರ ಭಾವಚಿತ್ರದೊಂದಿಗೆ ಡೊಳ್ಳು ಕುಣಿತ ಹಾಗೂ ಸಮಾಜದ ಹೆಣ್ಣು ಮಕ್ಕಳು ಕುಂಭ ಮೇಳದೊಂದಿಗೆ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು.
ಚಿಲಿಂಬಿಯ ಶ್ರೀ ಶಿರಡಿ ಸಾಯಿಬಾಬಾ ಮಂದಿರದ ಆಡಳಿತ ಮುಖ್ಯಸ್ಥರಾದ ಶ್ರೀಯುತ ವಿಶ್ವಾಸ್ ಕುಮಾರ್ ದಾಸ್ ರವರು ಮೆರವಣಿಗೆಯನ್ನು ಉದ್ಘಾಟಿಸಿದರು.
ಬಳಿಕ ಸಭಾ ಕಾರ್ಯಕ್ರಮ ಗೋಕರ್ಣನಾಥ ಕಾಲೇಜು ಸಭಾಭವನದಲ್ಲಿ ನೇರವೇರಿತು.
ಸಾಮರಸ್ಯ ವೇದಿಕೆ ಮಂಗಳೂರು ಇದರ ಅಧ್ಯಕ್ಷರಾದ ಶ್ರೀಮತಿ ಮಂಜುಳಾ ನಾಯಕ್ ರವರು ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಂಘದ ಅನಾವರಣವನ್ನು ಚಿಂತಕರು ,ಲೇಖಕರು ಶ್ರೀಯುತ ಎಂ.ಜಿ ಹೆಗ್ಡೆಯವರು ನೆರವೇರಿಸಿದರು.
ಸಭಾ ಕಾರ್ಯ್ರಮದಲ್ಲಿ SSLC ಹಾಗೂ ದ್ವಿತೀಯ ಠಿuಛಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಘರ್ಜನೆ (ರಿ.) ಕರ್ನಾಟಕ ರಾಜ್ಯ ಪ್ರ. ಕಾರ್ಯದರ್ಶಿ ಶ್ರೀ ಧನು ಬಿ.ಆರ್ ಗೌಡ ನಿರೂಪಿಸಿದರು.
ಸಭಾ ಕಾರ್ಯ್ರಮದಲ್ಲಿ ಕರಾವಳಿ ಹಾಲುಮತ ಕುರುಬರ ಸಂಘದ ಅದ್ಯಕ್ಷರಾದ ಶ್ರೀ ಚಂದ್ರಪ್ಪ.ಬಿ.ಕೆ , ಗೌರವಾಧ್ಯಕ್ಷರು, ಶ್ರೀ ಡಿ.ಎಸ್.ನಾಗರಾಳ , ಕಾರ್ಯಾಧ್ಯಕ್ಷರು, ಶ್ರೀ ಅರುಣ್ ಕುಮಾರ್ , ಮಾಜಿ ಅಧ್ಯಕ್ಷರು ಪುಟ್ಟಪ್ಪ ಕೆ.ಕೆ, ಗೌರವ ಸಲಹೆಗಾರರು ಹನುಮಂತ ರೋಣದ, ಉಪಾಧ್ಯಕ್ಷರಾದ ಹನುಮಂತ ಪ್ಪ.ವೈ. ನರಗುಂದ , ಲಕ್ಷ್ಮಿ ಹೀರೆ ಕುರುಬರ್ , ಪ್ರಾ.ಕಾರ್ಯದರ್ಶಿ ಯಮುನಪ್ಪ ಹೆಚ್ , ಸಹ ಕಾರ್ಯದರ್ಶಿ ಶರಣಪ್ಪ , ಕೋಶಾಧಿಕಾರಿ ಮಂಜುನಾಥ್, ಸಹ ಕೋಶಾಧಿಕಾರಿ ಬಸವರಾಜ , ಸಂಘಟನಾ ಕಾರ್ಯದರ್ಶಿ ಶಿವರಾಜ್ , ಹನುಮಂತ , ಸಾಬಣ್ಣ ಎಸ್ ಶಾಂತಪ್ಪನವರು ಮತ್ತಿತರು ಉಪಸ್ಥಿತರಿದ್ದರು.




































































ಬೆಂಗಳೂರು; ಬ್ರಹ್ಮಗಂಟು ಮತ್ತು ಇನ್ನಿತರ ಹಲವಾರು ಸೀರಿಯಲ್ ಗಳಲ್ಲಿ ನಟಿಸಿದ ಜನಪ್ರಿಯ ಕಿರುತೆರೆ ನಟಿ ಶೋಭಿತಾ ಶಿವಣ್ಣ ಅವರ ಪ್ರಕರಣಕ್ಕೆ ಒಂದು ದಿನದ ಬಳಿಕ ಮೇಜರ್ ಟ್ವಿಸ್ಟ್ ಸಿಕ್ಕಿದೆ. ಅನುಮಾನಾಸ್ಪದ ಸಾವಿನ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಹತ್ವದ ಸುಳಿವು ಪತ್ತೆ ಮಾಡಿದ್ದಾರೆ.
ಸುಧೀರ್ ಹಾಗೂ ಶೋಭಿತಾ ದಂಪತಿ ಹೈದರಾಬಾದ್ನ ಕೊಂಡಾಪುರ ಶ್ರೀರಾಮ ಕಾಲೋನಿಯಲ್ಲಿ ವಾಸವಾಗಿದ್ದರು. ಖಾಸಗಿ ಕಂಪನಿಯಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದ ಶೋಭಿತಾ ಪತಿ ಸುಧೀರ್ ಅವರು ಕೆಲಸದ ನಿಮಿತ್ತ ಲ್ಯಾಪ್ ಟಾಪ್ನಲ್ಲಿ ಕೆಲಸ ಮಾಡುತ್ತಾ ಹಾಲ್ನಲ್ಲಿ ನಿದ್ರೆಗೆ ಜಾರಿದ್ದರು. ಶೋಭಿತಾ ಅವರು ಬೆಡ್ ರೂಂನಲ್ಲಿ ಇದ್ದರು. ನವೆಂಬರ್ 29ರ ತಡರಾತ್ರಿ ಪತಿ ಸುಧೀರ್ ಮನೆಯಲ್ಲಿದ್ದಾಗಲೇ ಶೋಭಿತಾ ಅವರು ಸಾವಿಗೆ ಶರಣಾಗಿದ್ದಾರೆ ಎನ್ನಲಾಗಿದೆ.
ಶೋಭಿತಾ ಶಿವಣ್ಣ ಮಲಗಿದ್ದ ಬೆಡ್ರೂಂ ಪರಿಶೀಲನೆ ನಡೆಸಿದ ಪೊಲೀಸರಿಗೆ ಡೆತ್ ನೋಟ್ ಕೂಡ ಸಿಕ್ಕಿದೆ. ಎಲ್ಲವೂ ಪರಿಪೂರ್ಣವಾಗಿದೆ. ಆತ್ಮಹತ್ಯೆಯನ್ನು ನೀವು ಮಾಡಿಕೊಳ್ಳಬಹುದು ಎಂದು ಬರೆದಿರೋ ಶೋಭಿತಾ ಅವರು ದುಡುಕಿನ ನಿರ್ಧಾರ ತೆಗೆದುಕೊಂಡಿರುವ ಸಾಧ್ಯತೆ ಇದೆ. ಡೆತ್ ನೋಟ್ ವಶಕ್ಕೆ ಪಡೆದಿರೋ ಪೊಲೀಸರು ಇದನ್ನು ಬರೆದಿದ್ದು ಶೋಭಿತಾ ಅವರೇನಾ ಅಲ್ವಾ ಅನ್ನೋ ಆಯಾಮದಲ್ಲೂ ತನಿಖೆ ನಡೆಸುತ್ತಿದ್ದಾರೆ.


ಕುಂದಾಪುರ: ಹೆಜ್ಜೇನು ದಾಳಿಯಿಂದ ಐವರು ಗಂಭೀರ ಗಾಯಗೊಂಡ ಘಟನೆ ಕೋಟ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಣೂರಿನಲ್ಲಿ ಸಂಭವಿಸಿದೆ
ಹೆಜ್ಜೇನು ದಾಳಿಗೊಳಗಾದವರನ್ನು ಕಲ್ಲು ಕೆಲಸದ ಮೇಸ್ತ್ರಿ ಹಾಜಿ ಇಬ್ರಾಹಿಂ ಪಾರಂಪಳ್ಳಿ, ಕಾರ್ಮಿಕರಾದ ಮೊಹಮ್ಮದ್ ಪಾರಂಪಳ್ಳಿ, ಪ್ರಭಾಕರ, ಶೇಖರ್ ಪೂಜಾರಿ ಎಂದು ಗುರುತಿಸಲಾಗಿದೆ. ಕೋಟ ಮಣೂರಿನಲ್ಲಿ ಕಾಂಪೌಂಡ್ ಕೆಲಸ ಮಾಡುತ್ತಿದ್ದ ವೇಳೆ ಹೆಜ್ಜೇನು ಏಕಾಏಕಿ ದಾಳಿ ನಡೆಸಿದೆ. ಈ ಜೇನು ನೊಣಗಳ ಕಡಿತದಿಂದ ತಪ್ಪಿಸಿಕೊಂಡು ಐವರು ರಸ್ತೆಗೆ ಓಡಿ ಬಂದಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಂಭೀರ ಗಾಯಗೊಂಡವರನ್ನು ತಕ್ಷಣ ಕುಂದಾಪುರ ಆಸ್ಪತ್ರೆಗೆ ದಾಖಲಿಸಲಾಗಿದೆ.


ಶ್ರೀನಿವಾಸಪುರ : ಪ್ರಾಚೀನ ಬಾಷೆಯಾದ ಕನ್ನಡವನ್ನು ನಮ್ಮ ರಾಜ್ಯದ ಗಡಿಬಾಗಗಳಲ್ಲಿ ಉಳಿಸಿಕೊಳ್ಳಲು ನಾವೆಲ್ಲರೂ ಪಣ ತೊಡಬೇಕು. ಕನ್ನಡ ಬಾಷೆಯನ್ನು ಉಳಿಸಿ ಬೆಳೆಸುವ ಆದ್ಯ ಕರ್ತವ್ಯ ನಮ್ಮ ನಿಮ್ಮೆಲ್ಲರ ಮೇಲೆ ಇದೆ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.
ಪಟ್ಟಣದ ವಿವೇಕಾನಂದ ವೃತ್ತದಲ್ಲಿ ಚೈತನ್ಯ ಜನ ಜಾಗೃತಿ ವೇದಿಕೆ ವತಿಯಿಂದ ಶನಿವಾರ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಕನ್ನಡ ಧ್ವಜಾರೋಹಣ ಮಾಡಿ ಮಾತನಾಡಿದರು.
ಗಡಿಬಾಗವಾದ ನಮ್ಮ ತಾಲ್ಲೂಕನ್ನು ಕನ್ನಡಬಾಷೆಗೆ ಹೆಚ್ಚು ಪ್ರಾಮುಖ್ಯತೆ ನೀಡಬೇಕು ನಮ್ಮ ನಾಡು-ನುಡಿ ಜಲವನ್ನು ಕಾಪಾಡಿಕೊಳ್ಳುವುದರ ಜೊತೆಗೆ ಪ್ರತಿಯೊಬ್ಬರೂ ಕನ್ನಡದ ಅಭಿಮಾನವನ್ನು ಹೆಚ್ಚಿಸಿಕೊಳ್ಳಬೇಕು, ಪ್ರತಿ ಕನ್ನಡಿಗನ ಕರುನಾಡಿನ ಹೆಮ್ಮೆಯ ದಿನ ಕನ್ನಡ ರಾಜ್ಯೋತ್ಸವ ವಾಗಿದ್ದು ಕರ್ನಾಟಕ ಮೊದಲು ಮೈಸೂರು ಪ್ರಾಂತ್ಯವಾಗಿತ್ತು, ಎಂದ ಇವರು ನಮ್ಮ ರಾಜ್ಯದಲ್ಲಿ ಕನ್ನಡವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ತಿಳಿಸಿದರು.
ನಾಡಿನ ಸಮಸ್ತ ಜನತೆ ರಾಜ್ಯೋತ್ಸವದ ಶುಭಾಷಯಗಳನ್ನು ಕೋರಿದರು.
ಜಿ.ಪಂ ಮಾಜಿ ಅಧ್ಯಕ್ಷ ತೂಪಲ್ಲಿ ಆರ್.ನಾರಾಯಣಸ್ವಾಮಿ, ಸದಸ್ಯ ಇಂದಿರಾಭವನ್ ರಾಜಣ್ಣ, ಜೆಡಿಎಸ್ ಪಕ್ಷದ ರಾಜ್ಯ ಪ್ರದಾನ ಕಾರ್ಯದರ್ಶಿ ಬಿ.ವಿ.ಶಿವಾರೆಡ್ಡಿ, ಜೆಡಿಎಸ್ ಪಕ್ಷದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಗಾಯತ್ರಿ ಮುತ್ತಪ್ಪ, ನವ ಕರ್ನಾಟಕ ವೇದಿಕೆ ರಾಜ್ಯ ಕಾರ್ಯದರ್ಶಿ ಸಾದಿಕ್ ಅಹಮ್ಮದ್, ಜೆ.ತಿಮ್ಮಸಂದ್ರ ಗ್ರಾ.ಪಂ ಅಧ್ಯಕ್ಷ ಕೆ.ಎನ್.ಶಂಕರರೆಡ್ಡಿ, ಮುಖಂಡರಾದ ಅಂಬೇಡ್ಕರ್ ಪಾಳ್ಯ ರವಿ, ಶ್ರೀನಾಥಬಾಬು ಇದ್ದರು.



ಶ್ರೀನಿವಾಸಪುರ : ವಾಹನ ಚಾಲಕರು ಕಡುಬಡತನ ಕುಟುಂಬದವರು . ಸಾಮಾನ್ಯವಾಗಿ ವಾಹನ ಚಾಲಕರು ಕುಟುಂಬದ ನಿರ್ವಹಣೆಗಾಗಿ ತುಂಬಾ ಒತ್ತಡದಲ್ಲಿ ಜೀವನ ನಡೆಸುತ್ತಿದ್ದಾರೆ. ಮುಖ್ಯವಾಗಿ ಚಾಲಕರು ನಿಮ್ಮನ್ನೇ ನಂಬಿಕೊಂಡು ಕುಟುಂಬವಿದ್ದು, ವಾಹನ ಚಾಲನೆ ಮಾಡುವಾಗ ತುಂಬಾ ಎಚ್ಚರಿಕೆಯಿಂದ ಚಾಲನೆಮಾಡಬೇಕು .
ಚಾಲಕರು ಎಚ್ಚರ ತಪ್ಪಿ ವಾಹನ ಚಾಲನೆ ಮಾಡಿದರೆ ನಿಮ್ಮ ಕುಟುಂಬವು ಬೀದಿಗೆ ಬೀಳುತ್ತದೆ ಆದ್ದರಿಂದ ವಾಹನವನ್ನು ಎಚ್ಚರಿಕೆಯಿಂದ ಚಾಲನೆ ಮಾಡುವಂತೆ ಪೊಲೀಸ್ ಇನ್ಸ್ಪೆಕ್ಟರ್ ಎಂ.ಬಿ. ಗೊರವನಕೊಳ್ಳ ಸಲಹೆ ನೀಡಿದರು.
ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಶುಕ್ರವಾರ ಕರ್ನಾಟಕ ಸರ್ಕಾರ ಕಾರ್ಮಿಕ ಇಲಾಖೆ ವತಿಯಿಂದ ವಾಹನ ಚಾಲಕರಿಗೆ ಅರಿವು ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ವಾಣಿಜ್ಯ ವಾಹನ ಚಾಲಕರು, ಆಟೋ , ಟ್ಯಾಕ್ಸಿ, ಲಾರಿ ಮತ್ತು ಬಸ್ ಚಾಲಕರು, ನಿರ್ವಾಹಕರು ಸ್ವಚ್ಚತ್ತಾ ಕಾರ್ಮಿಕರು ಹಾಗು ಮೆಕಾನಿಕ್ ಮತ್ತು ಪಂಚ್ಚರ್ ಅಂಗಡಿ ಕಾರ್ಮಿಕರಿಗೆ ಕರ್ನಾಟಕ ಸರ್ಕಾರ ಸಾಮಾಜಿಕ ಭದ್ರತಾ ಯೋಜನೆ ಜಾರಿ ಗೊಳಿಸಿದ್ದು ಕಡ್ಡಾಯವಾಗಿ ನೊಂದಣಿ ಮಾಡಿಸುವಂತೆ ತಾಲೂಕು ಕಾರ್ಮಿಕ ನಿರೀಕ್ಷಕಿ ಆಶಾರಾಣಿ ಮಾಹಿತಿ ನೀಡಿದರು.
ಆರ್ಟಿಓ ಕಚೇರಿಯ ಅಧೀಕ್ಷಕರಾದ ದೇವರಾಜು ಮಾತನಾಡಿ ವಾಹನಕ್ಕೆ ಸಂಬಂದಪಟ್ಟ ಮತ್ತು ಚಾಲಕರಿಗೆ ಸಂಬಂದಪಟ್ಟ ಡಿಸಿ, ಆರ್ಸಿ, ಎಫ್ಸಿ ಮತ್ತು ಇತರೆ ಸಾರಿಗೆ ಸೇವೆಗಳ ಬಗ್ಗೆ ಮಾಹಿತಿ ನೀಡಿದರು.
ಕರ್ನಾಟಕ ಪ್ರದೇಶ ಅಸಂಘಟಿತ ಕಾರ್ಮಿಕ ಪರಿಷತ್ ರಾಜ್ಯಾಧ್ಯಕ್ಷ ಕೆ.ವಿ.ಸುರೇಶ್ಕಂದಾರ ಮಾತನಾಡಿ ಕಳೆದ ೨೫ ವರ್ಷಗಳ ಹೋರಾಟ ಫಲವಾಗಿ ಈಗ ಕರ್ನಾಟಕ ಸರ್ಕಾರ ಕಾರ್ಮಿಕ ಇಲಾಖೆಯ ಆಶ್ರಯದಲ್ಲಿ ಸಾಮಾಜಿಕ ಭದ್ರತಾ ಮಂಡಲಿಯನ್ನ ೨೦೦೪ ರಲ್ಲಿ ರಚನೆ ಮಾಡಿದ್ದು , ಇದರ ಅಡಿಯಲ್ಲಿ ೨೦೧೦ ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ವಾಣಿಜ್ಯ ವಾಹನ ಅಪೇಕ್ಷಿತ ಪರಿಹಾರ ಕ್ಷೇಮಾಭಿವೃದ್ಧಿ ಮಂಡಳಿಯನ್ನು ರಚನೆ ಮಾಡಿದೆ.
ಚಾಲಕರು , ನಿರ್ವಾಹಕರು , ಸ್ವಚ್ಚತಾ ಕಾರ್ಮಿಕರು, ಮತ್ತು ಮೆಕಾಮಿಕ್ ಹಾಗು ಪಂಚಕ ಅಂಗಡಿ ಕಾರ್ಮಿಕರಿಗೆ ಈ ಯೋಜನೆ ವಿಸ್ತರಿಸಿದ್ದು, ಚಾಲಕರು ಆರೋಗ್ಯ ರಕ್ಷಣೆ, ಮಕ್ಕಳ ವಿದ್ಯಾಬ್ಯಾಸಕ್ಕೆ ಬೇಕಾದ ನೆರವು ಪಡೆಯಲು ತಮ್ಮ ಹೆಸರು ಹಾಗು ಇತರೆ ದಾಖಲೆಗಳ ಬಗ್ಗೆ ಕಾರ್ಮಿಕ ಇಲಾಖೆಗೆ ಮಾಹಿತಿ ನೀಡಿ ನೋಂದಣಿ ಪಡೆಯುವಂತೆ ತಿಳಿಸಿದರು.
ಕರ್ನಾಟಕ ಪ್ರದೇಶ ಅಸಂಘಟಿತ ಕಾರ್ಮಿಕ ಪರಿಷತ್ ತಾಲೂಕು ಅಧ್ಯಕ್ಷ ಎ.ಎನ್.ಜಗದೀಶ್, ಉಪಾಧ್ಯಕ್ಷ ವೆಂಕಟೇಶ್, ಕಾರ್ಯದರ್ಶಿ ವೇಣು, ಪದಾಧಿಕಾರಿಗಳಾದ ರಿಜ್ವಾನ್, ದೇವೇಂದ್ರ, ಜಮೀರ್ ಮುಜಾಯಿದ್, ಶಿವ, ಜೆ.ವಿ.ಕಾಲೋನಿ ವೆಂಕಟೇಶ್, ಕಲ್ಲೂರು ನಾರಾಯಣಸ್ವಾಮಿ, ಅಜುಂ ಇದ್ದರು.


ಶ್ರೀನಿವಾಸಪುರ : ನಾರಮಾಕಲಪಲ್ಲಿ ಗ್ರಾಮದ ಕಾಲುವೆ ಕಾಮಗಾರಿ ನಡೆಸಲು ಜನವರಿ 17 -2024 ನನಗೆ ಆದೇಶ ಸಂಬಂದಪಟ್ಟ ಅಧಿಕಾರಿಗಳು ಆದೇಶ ಮಾಡಿದ್ದಾರೆ. ಅದಕ್ಕೆ ತಕ್ಕಂತೆ ಸಂಬಂದಿಸಿದ ಇಂಜಿನೀಯರ್ ಸ್ಥಳ ಪರಿಶೀಲನೆ ನಡೆಸಿ ಕಾಮಗಾರಿಗೆ ಅನುಮೋದನೆ ನೀಡಿದ್ದಾರೆ. ಅದರಂತೆ ಕಾಮಗಾರಿ ಮಾಡಲಾಗಿದೆ ಎಂದು ಗುತ್ತಿಗೆದಾರ ವಳಗೇರನಹಳ್ಳಿ ಶಿವಾರೆಡ್ಡಿ ಮಾಹಿತಿ ನೀಡಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ನಡೆದ ಪ್ರತಿಕಾ ಗೋಷ್ಟಿಯಲ್ಲಿ ಮಾತನಾಡಿದರು.
ತಾಲೂಕಿನ ರೋಣೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ನಾರಮಾಕಲಪಲ್ಲಿ ಗ್ರಾಮದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ನರೇಗಾ ಯೋಜನೆಯಡಿಯಲ್ಲಿ ಮಾಡಿರುವ ಕಾಮಗಾರಿಗೆ ಪುನಃ ಅದೇ ಕಾಮಗಾರಿಗೆ ಶಾಸಕರ ಅನುದಾನದಲ್ಲಿ ಪುನಃ 5 ಲಕ್ಷ ಹಣ ಪಡೆದಿರುವ ಬಗ್ಗೆ ನಾರಮಾಕಲಪಲ್ಲಿ ಗ್ರಾಮಸ್ಥರಾದ ವೆಂಕಟರಾಮರೆಡ್ಡಿ, ಅನಿಲ್ಕುಮಾರ್, ಹರೀಶ್ ಆರೋಪಿಸಿರುವುದು ಸುಳ್ಳು ಎಂದು ನುಡಿದರು.
ಇದೇ ಸಮಯದಲ್ಲಿ ಕಾಮಾಗಾರಿಗೆ ಸಂಬಂದಿಸಿದ ದಾಖಲೆಗಳ ಸಮೇತ ಮಾಹಿತಿ ನೀಡುತ್ತಾ ನಾನು ಯಾವುದೇ ಕಾರಣಕ್ಕೂ ಶಾಸಕ ಜಿ,ಕೆ,ವೆಂಕಟಶಿವಾರೆಡ್ಡಿ ರವರಿಂದ ಅಧಿಕಾರಿಗಳಿಗೆ ಒತ್ತಡ ಹಾಕಿ ನಾನು ಬಿಲ್ಲುನ್ನು ಮಾಡಿಸಿಕೊಂಡಿಲ್ಲ ಇದು ಸತ್ಯಕ್ಕೆ ದೂರ. ಸಂಬಂದ ಪಟ್ಟ ಅಧಿಕಾರಿಗಳು ಸ್ಥಳಕ್ಕೆ ಬೇಟಿ ನೀಡಿ ಕಾಮಗಾರಿ ಅಳತೆ ಮಾಡಿ ಬಿಲ್ಲು ಬಿಡುಗಡೆ ಮಾಡಿದ್ದಾರೆ ಹೊರತು ಶಾಸಕರ ಹಾಗು ಯಾವುದೇ ಮುಖಂಡರ ಕೈವಾಡವಿಲ್ಲ ಅಂದು ಮಾಹಿತಿ ನೀಡಿದರು. ನಾನು ನಿಯತ್ತಾಗಿ ಕಾಮಗಾರಿ ಮಾಡಿರುವುದರಿಂದ ದೈರ್ಯವಾಗಿ ದಾಖಲೆಗಳನ್ನು ಬಿಡುಗಡೆ ಮಾಡುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದರು.
ನನ್ನ ಏಳಿಗೆಯನ್ನ ಸಹಿಸಲಾರದ ಕೆಲ ವ್ಯಕ್ತಿಗಳು ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ನನ್ನ ಬಗ್ಗೆ ಯಾರು ಆರೋಪ ಮಾಡಿದ್ದಾರೆ. ಅವರು ಗ್ರಾಮಪಂಚಾಯಿತಿ ಕಚೇರಿಗಳಲ್ಲಿ ಅಧಿಕಾರಿಗಳ ಮೇಲೆ ದಮಕಿ ಹಾಕಿ ತಮ್ಮ ಕೆಲಸ ಕಾರ್ಯಗಳನ್ನು ಮಾಡಿಸಿಕೊಳ್ಳು ಪ್ರವೃತ್ತಿ. ಅವರದು ಎಂದು ಆರೋಪಿಸಿದರು.
ಈ ಸಮಯದಲ್ಲಿ ಮುಖಂಡರಾದ ತೂಪಲ್ಲಿ ಮಧುಸೂದನರೆಡ್ಡಿ, ಆನಂದರೆಡ್ಡಿ ಇದ್ದರು.