ಮಾಜಿ ಸ್ಪೀಕರ್ ರಮೇಶ್‍ ಕುಮಾರ್ ರವರು ಒತ್ತುವರಿ ಮಾಡಿಕೊಂಡ ಭೂಮಿ ಒಂದು ವಾರದೊಳಗೆ ತೆರೆವು ಗೊಳಿಸದಿದ್ದರೆ ರೈತ ಕ್ರಾಂತಿ ಮಾಡುತ್ತೆವೆ – ಬಂಗವಾದಿ ನಾಗರಾಜಗೌಡ ಎಚ್ಚರಿಕೆ

ಮದರ್ ತೆರೇಸಾ ಶಿಕ್ಷಣ ಸಂಸ್ಥೆಯಲ್ಲಿ ದ್ವಿತೀಯ ಪಿ ಯು ವಿದ್ಯಾರ್ಥಿಗಳಿಗೆ “ವೃತ್ತಿಮಾರ್ಗದರ್ಶನ ಮತ್ತು ಆಪ್ತಸಲಹೆ” ಕುರಿತು ಕಾರ್ಯಾಗಾರ

ಮದರ್ ತೆರೇಸಾ ಶಿಕ್ಷಣ ಸಂಸ್ಥೆಯಲ್ಲಿ ಆಳ್ವಾಸ್ ವಿಷುಯಲ್ ಆರ್ಟ್ಸ್ ಕಾಲೇಜು ವಿದ್ಯಾರ್ಥಿಗಳಿಂದ ಕಾರ್ಯಾಗಾರ

ಮದರ್ ತೆರೇಸಾ ಶಿಕ್ಷಣ ಸಂಸ್ಥೆಯ ಪಿ ಯು ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆ

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ-2024 ಮತ್ತು ಪುಸ್ತಕ ಬಹುಮಾನ-2024 ಅರ್ಜಿ ಆಹ್ವಾನ

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ-2024 ಮತ್ತು ಪುಸ್ತಕ ಬಹುಮಾನ-2024 ಅರ್ಜಿ ಆಹ್ವಾನ

  1. ಪುಸ್ತಕಬಹುಮಾನ- 2024

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು 2024 ರ ಕ್ಯಾಲೆಂಡರ್ ವರ್ಷದಲ್ಲಿ (2024 ಜನವರಿ 1 ರಿಂದ 2024 ಡಿಸೆಂಬರ್ 31) ಪ್ರಕಟಿತವಾದ (1) ಕೊಂಕಣಿ ಕವನ, (2) ಕೊಂಕಣಿ ಸಣ್ಣಕತೆ ಅಥವಾ ಕಾದಂಬರಿ. (3) ಕೊಂಕಣಿಗೆ ಭಾಷಾಂತರಿಸಿದ ಕೃತಿ (ಪ್ರಥಮ ಆದ್ಯತೆ) ಅಥವಾ ಲೇಖನ/ ಅಧ್ಯಯನ/ ವಿಮರ್ಶೆ ಬಗ್ಗೆ ಲೇಖಕರಿಂದ, ಪ್ರಕಾಶಕರಿಂದ ಪುಸ್ತಕ ಬಹುಮಾನಕ್ಕಾಗಿ ಪುಸ್ತಕದ 4 ಪ್ರತಿಗಳ ಜೊತೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಪುಸ್ತಕ ಬಹುಮಾನವು ರೂ.25,000/- ಗೌರವಧನ, ಹಾರ, ಪ್ರಮಾಣಪತ್ರ, ಫಲತಾಂಬೂಲವನ್ನು ಒಳಗೊಂಡಿದೆ.

  1. ಗೌರವ ಪ್ರಶಸ್ತಿ-2024

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ 2024ನೇ ಸಾಲಿನಲ್ಲಿ 1.ಕೊಂಕಣಿ ಸಾಹಿತ್ಯ, 2. ಕೊಂಕಣಿ ಕಲೆ(ಕೊಂಕಣಿ ನಾಟಕ, ಸಂಗೀತ, ಚಲನಚಿತ್ರ) 3. ಕೊಂಕಣಿ ಜಾನಪದ ಈ ಮೂರು ವಿಭಾಗಗಳಲ್ಲಿ ಜೀವಮಾನದ ಸಾಧನೆಗಾಗಿ ಅರ್ಹರಿಂದ ಗೌರವ ಪ್ರಶಸ್ತಿಗಾಗಿ ಅರ್ಜಿ ಕರೆಯಲಾಗಿದೆ. ಈ ಪ್ರಶಸ್ತಿಯು ರೂ 50,000/- ಗೌರವಧನ, ಶಾಲು, ಸ್ಮರಣಿಕೆ, ಹಾರ, ಪ್ರಮಾಣ ಪತ್ರ, ಫಲತಾಂಬೂಲವನ್ನು ಒಳಗೊಂಡಿದೆ. ಸಾಧಕರು ನೇರವಾಗಿ, ಸಂಘ ಸಂಸ್ಥೆಗಳು, ಸಾರ್ವಜನಿಕರೂ ಸಹ ಸಾಧಕರ ಹೆಸರು ಮತ್ತು ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಅರ್ಜಿಸಲ್ಲಿಸಬಹುದು. ಗೌರವ ಪ್ರಶಸ್ತಿಗೆ ಅರ್ಜಿಸಲ್ಲಿಸುವವರು ಲಕೋಟೆಯ ಮೇಲೆ “ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ-2024” ಹಾಗೂ ಪುಸ್ತಕ ಬಹುಮಾನಕ್ಕೆ ಅರ್ಜಿ ಸಲ್ಲಿಸುವವರು “ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ -2024” ಎಂದು ಕಡ್ಡಾಯವಾಗಿ ಬರೆದು,
ರಿಜಿಸ್ಟ್ರಾರ್, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ, ಮಹಾನಗರ ಪಾಲಿಕಾ ಕಟ್ಟಡ, ಲಾಲ್ಟಾಗ್, ಮಂಗಳೂರು 575003, ಇವರಿಗೆ ದಿನಾಂಕ 31.12.2024ರೊಳಗಾಗಿ ಕಳುಹಿಸಿಕೊಡುವಂತೆ ಕೋರಲಾಗಿದೆ.

ಬಾರ್ಕೂರು ನ್ಯಾಷನಲ್ ಪಿಯು ಕಾಲೇಜಿನಲ್ಲಿ ಕ್ರೀಡೋತ್ಸವ / Sports festival at Barkur National PU College

ಶ್ರೀನಿವಾಸಪುರ: ಹೊಸಹುಡ್ಯ ಜಿಗಲಕುಂಟೆ ಅರಣ್ಯ ಒತ್ತುವರಿ ಮಾಡಿರುವ ಮಾಜಿ ಸ್ಪೀಕರ್ ರಮೇಶ್‌ಕುಮಾರ್ ರವರ ಜಮೀನು ತೆರೆವುಗೊಳಿಸಲು ರೈತ ಸಂಘ ಒತ್ತಾಯ

ಭಾರತ ವಿದ್ಯಾರ್ಥಿ ಪಡರೇಷನ್ ಎಸ್ ಎಫ್ ಐ ಶ್ರೀನಿವಾಸಪುರ – 2020 ಎನ್‍ಇಪಿ ಜಾರಿಯಾದ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳ ಅಂಕ ಪಟ್ಟಿಗಳನ್ನು ವಿತರಿಸುವಂತೆ ಒತ್ತಾಯ

ಮೌಂಟ್ ರೋಸರಿ ಆಂಗ್ಲ ಮಾಧ್ಯಮ ಪ್ರೌಢಶಾಲೆ – 27ನೇ ಶಾಲಾ ದಿನಾಚರಣೆ – ‘ಉತ್ಸವ್ 2024’ – ಸಾಂಸ್ಕೃತಿಕ ಕಂಪನದ ಮಿಶ್ರಣ


Reported by: P. Archibald Furtado.