ಸಹ್ಯಾದ್ರಿ ಪದವಿ ಕಾಲೇಜಿನ ಚಿನ್ನದ ಪದಕ ವಿಜೇತರು

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ,ಜೂ.28: ಬೆಂಗಳೂರು ವಿಶ್ವವಿದ್ಯಾಲಯದ 56ನೇ ಘಟಿಕೋತ್ಸವದಲ್ಲಿ ಸಹ್ಯಾದ್ರಿ ಪದವಿ ಕಾಲೇಜಿನ ವಿದ್ಯಾರ್ಥಿನಿಯಾದ ನಾಜಿಯಾ ಅಂಜುಂ ರವರು ಬಿಸಿಎ ವಿಭಾಗದಲ್ಲಿ ವಿಶ್ವವಿದ್ಯಾಲಯಕ್ಕೆ 8ನೇ ರ್ಯಾಂಕ್ ಪಡೆದು ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ. ಹಾಗೂ ಬಿ.ಎಸ್‍ಸಿ ಭೌತ ರಸಾಯನಶಾಸ್ತ್ರ ವಿಷಯದಲ್ಲಿ ರೂಹಿ ಸುಲ್ತಾನ, ಅಕ್ಷಯ ಇಎಸ್ ಮತ್ತು ಮೈನ ಹೆಚ್.ಎ ಎಂಬ ಈ ಮೂರು ವಿದ್ಯಾರ್ಥಿಗಳು ಚಿನ್ನದ ಪದಕ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ಈ ಎಲ್ಲಾ ವಿದ್ಯಾರ್ಥಿಗಳಿಗೆ ಸಹ್ಯಾದ್ರಿ ಪದವಿ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕರು ಮತ್ತು ಸಿಬ್ಬಂದಿ ವರ್ಗದವರು ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ
.