JANANUDI.COM NETWORK
ಕುಂದಾಪುರ: ಮಂಗಳೂರು ವಿಶ್ವವಿದ್ಯಾನಿಲಯ 2019ರ ಏಪ್ರಿಲ್‍ನಲ್ಲಿ ನಡೆಸಿದ ಅ0ತಿಮ ಪದವಿ ಪರೀಕ್ಷೆಯಲ್ಲಿ ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿಗೆ ಏಳು ರ್ಯಾಂಕ್‍ಗಳು ಬಂದಿವೆ.

SAHANA – BSC 3RD RANK

A AMBIKA RAO, BA 7TH RANK

PRATHWIK S BANGERA – BCA 4TH RANK

SHETTY PRIYANKA – BBA 6TH RANK

SWATHI – BCA 8TH RANK

RAMYA – BCA 9TH RANK

SUJAN – BCA 10TH RANK
ಕಾಲೇಜಿನ ಬಿ.ಸಿ.ಎ ಪದವಿಯಲ್ಲಿ ನಾಲ್ಕು ರ್ಯಾಂಕ್‍ಗಳು, ಮತ್ತು ಬಿ.ಎಸ್.ಸಿ, ಬಿ.ಬಿ.ಎ ಮತ್ತು ಬಿ.ಎ ಪದವಿಗೆ ತಲಾ ಒಂದು ರ್ಯಾಂಕ್‍ಗಳು ಬಂದಿವೆ.
ಕಾಲೇಜಿನ ಬಿ.ಎಸ್.ಸಿ. ಪದವಿಯಲ್ಲಿ 3ನೇ ರ್ಯಾಂಕ್ ಪಡೆದು ಕಾಲೇಜಿಗೆ ಮತ್ತು ಊರಿಗೆ ಕೀರ್ತಿ ತಂದಿರುವ ಸಹನಾ ಅವರು ಕುಂದಾಪುರದ ಬೀಜಾಡಿ ಗ್ರಾಮದ ನಾರಾಯಣ ದೇವಾಡಿಗ ಅವರ ಪುತ್ರಿಯಾಗಿದ್ದಾರೆ.
ಕಾಲೇಜಿನ ಬಿ.ಸಿ.ಎ ಪದವಿಯಲ್ಲಿ ಕುಂದಾಪುರದ ವಡೆರಹೋಬಳಿಯ ಸುರೇಶ.ಬಿ.ಬಂಗೇರ ಮತ್ತು ಪಾರ್ವತಿ ದಂಪತಿಗಳ ಪುತ್ರ ಪ್ರತ್ವಿಕ್ ಎಸ್.ಬಂಗೇರ ಅವರಿಗೆ ನಾಲ್ಕನೇ ರ್ಯಾಂಕ್, ಮೇಲ್‍ಹೊಸೂರು ಗ್ರಾಮದ ಚಂದ್ರಶೇಖರ ಅವರ ಪುತ್ರಿ ಸ್ವಾತಿಯವರಿಗೆ ಎಂಟನೇ ರ್ಯಾಂಕ್, ಚಿತ್ತೂರು ಗ್ರಾಮದ ನಾರಾಯಣ ಶೆಟ್ಟಿ ಮತ್ತು ರುದ್ರಮ್ಮ ದಂಪತಿಯ ಪುತ್ರಿ ರಮ್ಯ ಅವರಿಗೆ ಒಂಬತ್ತನೇ ರ್ಯಾಂಕ್, ಮತ್ತು ಆಲೂರು ಗ್ರಾಮದ ಭಾಸ್ಕರ ಅವರ ಪುತ್ರ ಸುಜನ್ ಅವರಿಗೆ 10ನೇ ರ್ಯಾಂಕ್ ಬಂದಿವೆ.
ಕಾಲೇಜಿನ ಬಿ.ಬಿ.ಎ ಪದವಿಯಲ್ಲಿ ಕುಂದಾಪುರದ ಕೆದೂರು ಗ್ರಾಮದ ಶಂಕರ ಶೆಟ್ಟಿ ಅವರಪುತ್ರಿ ಶೆಟ್ಟಿ ಪ್ರಿಯಾಂಕ ಶಂಕರ ಅವರುಆರನೇ ರ್ಯಾಂಕ್ ಪಡೆದಿದ್ದಾರೆ.
ಕಾಲೇಜಿನ ಬಿ.ಎ ಪದವಿಯಲ್ಲಿ ಬ್ರಹ್ಮಾವರದ ಹತ್ತಿರದ ಆರೂರು ಗ್ರಾಮದ ಆನಂದ ರಾವ್‍ರ ಪುತ್ರಿ ಎ.ಅಂಬಿಕಾ ರಾವ್‍ಅವರುಏಳನೇ ರ್ಯಾಂಕ್ ಪಡೆದಿದ್ದಾರೆ.
ಅವರೆಲ್ಲರಿ ಗೂ ಕಾಲೇಜಿನ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಅಭಿನಂದನೆಗಳನ್ನು ತಿಳಿಸಿದ್ದಾರೆ ಎಂದು ಕಾಲೇಜಿನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

