

ಉಡುಪಿ : ಧರ್ಮಪ್ರಾಂತ್ಯದ ಹಿರಿಯ ಧರ್ಮಗುರು ವಂ. ಚಾರ್ಲ್ಸ್ ಲೂವಿಸ್ ಗುರುವಾರ ನಿಧನರಾದರು. ಅವರಿಗೆ 81 ವರ್ಷ ವಯಸ್ಸಾಗಿತ್ತು.
ಉಡುಪಿ ಜಿಲ್ಲೆಯ ಕುಂದಾಪುರದ ಪಡುಕೋಣೆಯಲ್ಲಿ 1945 ನವೆಂಬರ್ 23ರಂದು ಜನಿಸಿದ್ದ ಅವರು, 1971 ರಲ್ಲಿ ಧರ್ಮಗುರುಗಳಾಗಿ ದೀಕ್ಷೆಯನ್ನು ಸ್ವೀಕರಿಸಿದ್ದರು.
1971ರಿಂದ 1972ರವರೆಗೆ ಬಜ್ಪೆಯಲ್ಲಿ ಹಾಗೂ 1972ರಿಂದ 1973ರವರೆಗೆ ಪುತ್ತೂರಿನಲ್ಲಿ ಸಹಾಯಕ ಧರ್ಮಗುರುಗಳಾಗಿ ತಮ್ಮ ಧಾರ್ಮಿಕ ಸೇವೆಯನ್ನು ಆರಂಭಿಸಿದರು. ಬಳಿಕ 1973ರಿಂದ 1974ರವರೆಗೆ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಾಪ್ಲೆನ್ ಆಗಿ ಸೇವೆ ಸಲ್ಲಿಸಿದರು. ತದನಂತರ 1974ರಿಂದ 1982ರವರೆಗೆ ಅದ್ಯಪಾಡಿ, 1982ರಿಂದ 1989ರವರೆಗೆ ಕೊಳಲಗಿರಿ, 1989ರಿಂದ 1990ರವರೆಗೆ ಅಗ್ರಾರ್, 1990ರಿಂದ 1997ರವರೆಗೆ ಕಾಟಿಪಳ್ಳ, 1997ರಿಂದ 2003ರವರೆಗೆ ಮೂಡುಬೆಳ್ಳೆ, 2003ರಿಂದ 2010ರವರೆಗೆ ಕುಂತಲನಗರ, 2010ರಿಂದ 2013ರವರೆಗೆ ಪಾಂಬೂರು ಹಾಗೂ 2015ರಿಂದ 2021ರವರೆಗೆ ತ್ರಾಸಿ ಚರ್ಚುಗಳಲ್ಲಿ ಧರ್ಮಗುರುಗಳಾಗಿ ಸೇವೆ ಸಲ್ಲಿಸಿದರು. 2013ರಿಂದ 2015ರವರೆಗೆ ಅತ್ತೂರಿನಲ್ಲಿ ಚಾಪ್ಲೆನ್ ಆಗಿ ಸೇವೆ ನಿರ್ವಹಿಸಿದರು.
ನಿವೃತ್ತಿಯ ಬಳಿಕ 2021ರಿಂದ 2023ರವರೆಗೆ ಬಸ್ರೂರಿನಲ್ಲಿ ವಾಸವಾಗಿದ್ದ ಅವರು, 2023ರಿಂದ ಕಲ್ಯಾಣಪುರದ ನಿವೃತ್ತ ಧರ್ಮಗುರುಗಳ ನಿವಾಸ ಮಿಲಾಗ್ರಿಸ್ ಹೋಮ್ನಲ್ಲಿ ನೆಲೆಸಿದ್ದರು.
ಧರ್ಮಗುರು ವಂ. ಚಾರ್ಲ್ಸ್ ಲೂವಿಸ್ ಅವರ ನಿಧನಕ್ಕೆ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ| ಡಾ| ಲೆಸ್ಲಿ ಕ್ಲಿಫರ್ಡ್ ಡಿಸೋಜಾ, ನಿವೃತ್ತ ಧರ್ಮಾಧ್ಯಕ್ಷರಾದ ಅತಿ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ, ಶ್ರೇಷ್ಠ ಗುರು ಮೊನ್ಸಿಂಜ್ಞೊರ್ ಫ್ರಾನ್ಸಿಸ್ ಲೂವಿಸ್, ಕುಲಪತಿ ವಂ|ಸ್ಟೀವನ್ ಡಿಸೋಜಾ ಸಂತಾಪ ಸೂಚಿಸಿದ್ದಾರೆ.
Senior Priest of Udupi Diocese Rev. Fr Charles Lewis Passes Away
Udupi: Senior priest of the Udupi Diocese, Rev. Fr Charles Lewis, passed away on Thursday. He was 81.
Born on November 23, 1945, at Padukone in Kundapur taluk of Udupi district, he was ordained a priest in 1971.
He began his priestly ministry as Assistant Priest at Bajpe from 1971 to 1972 and Puttur from 1972 to 1973. He then served as Chaplain at Father Muller’s Hospital, Mangaluru, from 1973 to 1974.
Subsequently, he served as Parish Priest at Adyapady (1974–1982), Kolalgiri (1982–1989), Agrar (1989–1990), Katipalla (1990–1997), Moodubelle (1997–2003), Kuntalnagar (2003–2010), Pamboor (2010–2013) and Trasi (2015–2021). He also served as Chaplain at Attur from 2013 to 2015.
After his retirement, he resided at Basrur from 2021 to 2023. From 2023, he had been staying at Milagres Home, the residence for retired priests at Kallianpur.
Bishop of Udupi Diocese Most Rev. Dr Leslie Clifford D’Souza, Bishop Emeritus Most Rev. Dr Gerald Isaac Lobo and Vicar General Mosgr Francis Lewis, Chancellor Rev Stephan D’Souza have expressed their condolences on the demise of Rev. Fr Charles Lewis.

