

Adding another glorious chapter to its legacy of educational excellence, St Aloysius Gonzaga School, Mangaluru, and its Principal, Rev. Fr. Rohan D’Almeida, SJ, have been conferred the prestigious Karnataka Shikshana Ratna Award 2026 by the Karnataka Book of Records at the Karnataka Rajyotsava Awards 2026 ceremony held on November 20 at Sir Puttanna Chetty Town Hall, Bengaluru. Notable dignitaries announced for the event included U. T. Khader (Speaker of the Karnataka Legislative Assembly) and Dr. Jitendra Kumar Mishra (Registrar, JAIN Deemed-to-be University)
The school received this recognition in the category of ‘Excellence in Global Citizenship & International Learning’, among 100 schools nominated for the award. International collaboration is a distinctive feature of St Aloysius Gonzaga School, which places considerable emphasis on providing students with meaningful global exposure through online collaborations, intercultural learning initiatives and student-exchange programmes with Jesuit schools across the world. These initiatives broaden students’ perspectives, foster cross-cultural understanding and prepare them to become responsible global citizens.
Rev. Fr. Rohan D’Almeida, SJ, was also individually honoured with the Karnataka Shikshana Ratna Award in recognition of his valuable contribution to education, dedicated service and commitment to society.
These dual honours mark a significant milestone for St Aloysius Gonzaga School, celebrating both the institution’s educational mission and the leadership of its Principal. They reaffirm the school’s commitment to providing quality, value-based education and nurturing academically accomplished, emotionally balanced, morally upright and socially responsible individuals.
The recognition is a matter of pride for the management, Principal, staff, students, parents and the entire St Aloysius Gonzaga School fraternity.

ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯ ಮುಡಿಗೆ ಎರಡು ಪ್ರತಿಷ್ಠಿತ ಪ್ರಶಸ್ತಿಗಳ ಕಿರೀಟ
ಮಂಗಳೂರು: ಶೈಕ್ಷಣಿಕ ಶ್ರೇಷ್ಠತೆಯ ಮೂಲಕ ಗುರುತಿಸಿಕೊಂಡಿರುವ ಮಂಗಳೂರಿನ ಸಂತ ಅಲೋಶಿಯಸ್ ಗೊನ್ಝಾಗ ಶಾಲೆ ಹಾಗೂ ಶಾಲೆಯ ಪ್ರಾಂಶುಪಾಲರಾದ ವಂ. ಫಾ. ರೋಹನ್ ಡಿ’ಅಲ್ಮೇಡಾ, ಎಸ್.ಜೆ. ಅವರು 2026ನೇ ಸಾಲಿನ ಪ್ರತಿಷ್ಠಿತ ‘ಕರ್ನಾಟಕ ಶಿಕ್ಷಣ ರತ್ನ ಪ್ರಶಸ್ತಿಗೆ’ ಭಾಜನರಾಗಿದ್ದಾರೆ.
ಬೆಂಗಳೂರಿನ ಸರ್ ಪುಟ್ಟಣ್ಣ ಚೆಟ್ಟಿ ಟೌನ್ ಹಾಲ್ನಲ್ಲಿ ನವೆಂಬರ್ 20ರಂದು ನಡೆದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ “ಕರ್ನಾಟಕ ಬುಕ್ ಆಫ್ ರೆಕಾರ್ಡ್ಸ್ “ವತಿಯಿಂದ ಈ ಪ್ರಶಸ್ತಿಗಳನ್ನು ಪ್ರಧಾನ ಮಾಡಲಾಯಿತು. ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷ ಯು.ಟಿ. ಖಾದರ್ ಹಾಗೂ ಜೈನ್ ಡೀಮ್ಡ್ ಟು ಬಿ ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಡಾ. ಜಿತೇಂದ್ರ ಕುಮಾರ್ ಮಿಶ್ರಾ ಸೇರಿದಂತೆ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
‘ಜಾಗತಿಕ ನಾಗರಿಕತ್ವ ಮತ್ತು ಅಂತರರಾಷ್ಟ್ರೀಯ ಕಲಿಕೆಯಲ್ಲಿ ಶ್ರೇಷ್ಠತೆ’ ವಿಭಾಗದಲ್ಲಿ ಪ್ರಶಸ್ತಿಗೆ ಆಯ್ಕೆಯಾದ 100 ಶಾಲೆಗಳ ಪೈಕಿ ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯೂ ಒಂದಾಗಿದೆ. ಅಂತರರಾಷ್ಟ್ರೀಯ ಸಹಯೋಗವು ಈ ಶಾಲೆಯ ಶೈಕ್ಷಣಿಕ ಚಟುವಟಿಕೆಗಳ ಪ್ರಮುಖ ವೈಶಿಷ್ಟ್ಯವಾಗಿದೆ. ಜಗತ್ತಿನ ವಿವಿಧ ದೇಶಗಳ ಜೆಸ್ವಿಟ್ ಶಾಲೆಗಳೊಂದಿಗೆ ಆನ್ಲೈನ್ ಸಹಯೋಗ, ಅಂತರ್ಸಾಂಸ್ಕೃತಿಕ ಕಲಿಕಾ ಚಟುವಟಿಕೆಗಳು ಹಾಗೂ ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ವಿದ್ಯಾರ್ಥಿಗಳಿಗೆ ಜಾಗತಿಕ ಮಟ್ಟದ ಅನುಭವವನ್ನು ಒದಗಿಸಲಾಗುತ್ತಿದೆ.
ಶಾಲೆಯ ಪ್ರಾಂಶುಪಾಲರಾದ ವಂ. ಫಾ. ರೋಹನ್ ಡಿ’ಅಲ್ಮೇಡಾ, ಎಸ್.ಜೆ. ಅವರಿಗೂ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಅಮೂಲ್ಯ ಕೊಡುಗೆ, ಸಮರ್ಪಿತ ಸೇವೆ ಹಾಗೂ ಸಮಾಜದ ಬಗೆಗಿನ ಬದ್ಧತೆಯನ್ನು ಗುರುತಿಸಿ ವೈಯಕ್ತಿಕವಾಗಿ “ಕರ್ನಾಟಕ ಶಿಕ್ಷಣ ರತ್ನ ಪ್ರಶಸ್ತಿ” ನೀಡಿ ಗೌರವಿಸಲಾಯಿತು.
ಗೊನ್ಝಾಗ ಶಾಲೆ ಹಾಗೂ ಶಾಲಾ ಪ್ರಾಂಶುಪಾಲರು ಒಂದೇ ಸಂದರ್ಭದಲ್ಲಿ ಎರಡು ಪ್ರತಿಷ್ಠಿತ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವುದು ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯ ಪಾಲಿಗೆ ಮಹತ್ವದ ಸಾಧನೆಯಾಗಿದೆ. ಗುಣಮಟ್ಟದ ಹಾಗೂ ಮೌಲ್ಯಾಧಾರಿತ ಶಿಕ್ಷಣ ನೀಡುವ ಮೂಲಕ ಶೈಕ್ಷಣಿಕವಾಗಿ ಸಾಧನೆಗೈದ, ಭಾವನಾತ್ಮಕವಾಗಿ ಸಮತೋಲನ ಹೊಂದಿದ, ನೈತಿಕ ಮೌಲ್ಯಗಳನ್ನು ಮೈಗೂಡಿಸಿಕೊಂಡ ಹಾಗೂ ಸಾಮಾಜಿಕ ಜವಾಬ್ದಾರಿಯುಳ್ಳ ವಿದ್ಯಾರ್ಥಿಗಳನ್ನು ರೂಪಿಸುವ ಶಾಲೆಯ ಬದ್ಧತೆಗೆ ಈ ಗೌರವ ಮತ್ತಷ್ಟು ಮೆರುಗು ನೀಡಿದೆ.
ಈ ಅವಳಿ ಪ್ರಶಸ್ತಿಗಳು ಶಾಲೆಯ ಆಡಳಿತ ಮಂಡಳಿ, ಪ್ರಾಂಶುಪಾಲರು, ಶಿಕ್ಷಕ ವೃಂದ, ವಿದ್ಯಾರ್ಥಿಗಳು, ಪೋಷಕರು ಹಾಗೂ ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯ ಸಂಪೂರ್ಣ ಕುಟುಂಬದಲ್ಲಿ ಹೆಮ್ಮೆಯ ಸಂಭ್ರಮ ಮೂಡಿಸಿವೆ.


