
ಶ್ರೀ ಚೌಡೇಶ್ವರಿ ದೇವಾಲಯದ ಕಾಂಪೌಂಡ್ ನಿರ್ಮಾಣ ಕಾಮಗಾರಿಗೆ ಚಾಲನೆ

ಶ್ರೀನಿವಾಸಪುರ: ಧಾರ್ಮಿಕ ಹಾಗೂ ಗುಣಾತ್ಮಕ ಜೀವನ ನಡೆಸುವುದೇ ಮನುಷ್ಯನಿಗೆ ನಿಜವಾದ ಸುಖ ಮತ್ತು ನೆಮ್ಮದಿಯನ್ನು ನೀಡುತ್ತದೆ. ಚಿಂತೆರಹಿತ ಹಾಗೂ ಸುಖ-ಸಂತೋಷದ ಜೀವನ ನಡೆಸಬೇಕೆಂಬ ದೃಢ ಸಂಕಲ್ಪ ಹೊಂದಿರುವವರು ಧರ್ಮದ ಹಾದಿಯಲ್ಲಿ ಸಾಗಬೇಕು ಎಂದು ಮಾಜಿ ಶಾಸಕ ಕೆ.ಆರ್. ರಮೇಶ್ ಕುಮಾರ್ ಹೇಳಿದರು.
ಪಟ್ಟಣದ ಶ್ರೀ ಚೌಡೇಶ್ವರಿ ದೇವಾಲಯದ ಆವರಣದಲ್ಲಿ ಎಂಎಲ್ಸಿ ಅನಿಲ್ ಕುಮಾರ್ ಅವರ ಅನುದಾನದಲ್ಲಿ ಕೈಗೆತ್ತಿಕೊಂಡಿರುವ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ 15 ಲಕ್ಷ ರೂ. ಹಾಗೂ ದಾನಿಗಳ ಸಹಕಾರದಿಂದ 12 ಲಕ್ಷ ರೂ. ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ಕಾಂಪೌಂಡ್ ನಿರ್ಮಾಣ ಕಾಮಗಾರಿಗೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.
ದೇವಾಲಯದ ಆವರಣದಲ್ಲಿ ಕೈಗೊಳ್ಳುವ ಅಭಿವೃದ್ಧಿ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು. ಗುತ್ತಿಗೆದಾರರು ಕಾಂಪೌಂಡ್ ಹಾಗೂ ಸಿಸಿ ರಸ್ತೆ ಕಾಮಗಾರಿಗಳನ್ನು ಉತ್ತಮ ಗುಣಮಟ್ಟದಲ್ಲಿ ನಿರ್ಮಿಸಬೇಕು. ಸಾರ್ವಜನಿಕರ ಹಣವನ್ನು ಸದ್ಬಳಕೆ ಮಾಡಿಕೊಂಡು ಅಭಿವೃದ್ಧಿ ಕಾರ್ಯಗಳನ್ನು ಸಮರ್ಪಕವಾಗಿ ಪೂರ್ಣಗೊಳಿಸಬೇಕು ಎಂದು ಸಲಹೆ ನೀಡಿದರು.
ದೇವಾಲಯದ ಅರ್ಚಕ ಸುಬ್ರಮಣ್ಯಂ ಸ್ವಾಮಿ ಅವರು ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಎಂಎಲ್ಸಿ ಅನಿಲ್ ಕುಮಾರ್, ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಮಾಯಕಲ್ ನಾರಾಯಣಸ್ವಾಮಿ, ಕೋಮುಲ್ ನಿರ್ದೇಶಕ ಹನುಮೇಶ್, ಕೆ.ಕೆ. ಮಂಜುನಾಥ್ ರೆಡ್ಡಿ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ್ ಅಶೋಕ್, ಮುಖಂಡರಾದ ಎನ್.ಜಿ. ಬ್ಯಾಟಪ್ಪ, ಕೃಷ್ಣೇಗೌಡ, ವೈ.ಆರ್. ಶಿವಪ್ರಕಾಶ್, ದಿವಾಕರ್, ಗೋಪಿನಾಥರಾವ್, ಬಿ.ಎಲ್. ಪ್ರಕಾಶ್, ಸೀತಾರಾಮರೆಡ್ಡಿ, ಜನಪ್ಪನಹಳ್ಳಿ ಜೆ.ಎನ್. ನವೀನ್ ಕುಮಾರ್, ಮುನಿವೆಂಕಟಪ್ಪ, ಡಾ. ಎಸ್. ಗೋವಿಂದಪ್ಪ, ಹೇಮಂತ್, ಚಲಪತಿ, ಗೋಪಾಲಗೌಡ, ಆರ್.ಕೆ.ಎಸ್. ಮಂಜುನಾಥರೆಡ್ಡಿ, ಆರ್.ಎಂ.ಸಿ. ವೇಣು, ರಮೇಶ್ ಹಾಗೂ ಹರೀಶ್ ಯಾದವ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

