

ಸಂತ ಅಲೋಶಿಯಸ್ ಉರ್ವದಲ್ಲಿ ಪೋಷಕರಿಗಾಗಿ ಕ್ರೀಡಾ ದಿನಾಚರಣೆಯನ್ನು ಬಹಳ ಉತ್ಸಾಹ, ಸಂತೋಷ ಸಂಭ್ರಮದಿಂದ ಆಯೋಜಿಸಲಾಯಿತು. ಈ ಕಾರ್ಯಕ್ರಮವನ್ನು ಮುಖ್ಯ ಅತಿಥಿಗಳಾದ ಶ್ರೀಯುತ ಡಾ. ಆನಂದವೇಲು ಟಿ ಎಂ ಉದ್ಘಾಟಿಸಿ ಹಿತನುಡಿಗಳನ್ನು ಹೇಳಿದರು.
ಕಾರ್ಯಕ್ರಮವು ಶಿಕ್ಷಕರು ಪೋಷಕರು ಹಾಗೂ ಶಾಲಾ ಸಿಬ್ಬಂದಿಯ ಉಪಸ್ಥಿತಿಯಲ್ಲಿ ಪ್ರಾರಂಭವಾಗಿ ವಿವಿಧ ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ನೀಡಿ ಅಭಿನಂದಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಶಾಲಾ ಸಂಚಾಲಕರಾದ ವಂ. ಬೆಂಜಮಿನ್ ಪಿಂಟೊ, ಮುಖ್ಯಶಿಕ್ಷಕರು ಶ್ರೀಯುತ ಅಲೋಶಿಯಸ್ ಡಿಸೋಜ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶ್ರೀ ಸುಧಾಕರ್ ನಿರೂಪಿಸಿ, ಶ್ರೀ ಪ್ರಮೋದ್ ಸ್ವಾಗತಿಸಿ, ಶ್ರೀಮತಿ ಹರಿಣಾಕ್ಷಿ ಅತಿಥಿಯನ್ನು ಪರಿಚಯಿಸಿದರು. ಶ್ರೀಮತಿ ಶೈಲಶ್ರೀ ಧನ್ಯವಾದ ಸಮರ್ಪಿಸಿದರು.



























