ಗಂಗೊಳ್ಳಿ: 20.11.2026 ರ ಶುಕ್ರವಾರ ಕೊಸೆಸಾಂವ್ ಮಾತೆಯ ದೇವಾಲಯ ಗಂಗೊಳ್ಳಿ, ಇಂಡಿಯನ್ ಕ್ಯಾನ್ಸರ್ ಸೊಸೈಟಿ ಕರ್ನಾಟಕ, ಸಮುದಾಯ ವೈದ್ಯಕೀಯ ವಿಭಾಗ, ಕೆ.ಎಂ.ಸಿ. ಮಣಿಪಾಲ ಹಾಗೂ ಆರೋಗ್ಯ ಆಯೋಗ, ಸ್ತ್ರೀ ಆಯೋಗ ಮತ್ತು ಸ್ಪರ್ಶ ಸಂಪದ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ಕ್ಯಾನ್ಸರ್, ಕಣ್ಣಿನ ಹಾಗೂ ಆರೋಗ್ಯ ತಪಾಸಣಾ ಶಿಬಿರವನ್ನು ಕೊಸೆಸಾಂವ್ ಮಾತೆಯ ಚರ್ಚ್ ಸಭಾಂಗಣದಲ್ಲಿ ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಸಂಪದದ ನಿರ್ದೇಶಕರಾದ ವಂದನೀಯ ಫಾ. ರೀಕ್ಸನ್ ಮೊಂತೆರೊ ಅವರು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಚರ್ಚಿನ ಧರ್ಮಗುರುಗಳಾದ ವಂದನೀಯ ಫಾ. ಥೋಮಸ್ ರೋಶನ್ ಡಿಸೋಜ ಅವರು, “ಆರೋಗ್ಯವೇ ಭಾಗ್ಯ, ಆರೋಗ್ಯವೇ ಮನುಷ್ಯನ ನಿಜವಾದ ಸಂಪತ್ತು” ಎಂಬ ಸಂದೇಶದೊಂದಿಗೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಡಾ. ತನ್ಮಯ್, ಪಾಲನಾ ಮಂಡಳಿಯ ಕಾರ್ಯದರ್ಶಿ ಶ್ರೀಮತಿ ಗ್ಲೋರಿಯಾ ಡಿಸೋಜ, 20 ಆಯೋಗಗಳ ಸಂಯೋಜಕಿ ಶ್ರೀಮತಿ ಜಸಿಂತ ಡಿಸೋಜ, ಸಚೇತಕಿಯಾದ ಧರ್ಮಭಗಿನಿ ಗ್ರೇಸಿ ಲೋಬೊ, ಸ್ವಸಹಾಯ ಸಂಘದ ಮಾರ್ಗದರ್ಶಕಿ ಶ್ರೀಮತಿ ಸಿಂತಿಯಾ ರೊಡ್ರಿಗಸ್, ಸ್ತ್ರೀ ಸಂಘಟನೆಯ ಅಧ್ಯಕ್ಷೆ ಶ್ರೀಮತಿ ಅನಿತಾ ಫೆರ್ನಾಂಡಿಸ್ ಹಾಗೂ ಶ್ರೀ ಸ್ಟ್ಯಾನ್ಲಿ ಫೆರ್ನಾಂಡಿಸ್ ಉಪಸ್ಥಿತರಿದ್ದರು.
ಶ್ರೀಮತಿ ಗ್ಲೋರಿಯಾ ಡಿಸೋಜ ಅವರು ಸ್ವಾಗತಿಸಿದರು. ಶ್ರೀಮತಿ ಐರಿನ್ ನಜರೆತ್ ಅವರು ಧನ್ಯವಾದ ಸಮರ್ಪಿಸಿದರು. ಶ್ರೀಮತಿ ರೀಟಾ ಡಾಯಸ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.
ಸುಮಾರು 70 ಮಂದಿ ಈ ಉಚಿತ ತಪಾಸಣಾ ಶಿಬಿರದ ಸದುಪಯೋಗ ಪಡೆದುಕೊಂಡರು.
[8:41 am, 21/11/2026] Renita Barnes: ಉಚಿತ ಕ್ಯಾನ್ಸರ್, ಕಣ್ಣಿನ ಹಾಗೂ ಆರೋಗ್ಯ ತಪಾಸಣಾ ಶಿಬಿರ
ಗಂಗೊಳ್ಳಿ: 20.11.2026 ನೇ ಶುಕ್ರವಾರ ಕೊಸೆಸಾಂವ್ ಮಾತೆಯ ದೇವಾಲಯ ಗಂಗೊಳ್ಳಿ, ಇಂಡಿಯನ್ ಕ್ಯಾನ್ಸರ್ ಸೊಸೈಟಿ ಕರ್ನಾಟಕ, ಸಮುದಾಯ ವೈದ್ಯಕೀಯ ವಿಭಾಗ, ಕೆ.ಎಂ.ಸಿ. ಮಣಿಪಾಲ ಹಾಗೂ ಆರೋಗ್ಯ ಆಯೋಗ, ಸ್ತ್ರೀ ಆಯೋಗ ಮತ್ತು ಸ್ಪರ್ಶ ಸಂಪದ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ಕ್ಯಾನ್ಸರ್, ಕಣ್ಣಿನ ಹಾಗೂ ಆರೋಗ್ಯ ತಪಾಸಣಾ ಶಿಬಿರವನ್ನು ಕೊಸೆಸಾಂವ್ ಮಾತೆಯ ಚರ್ಚ್ ಸಭಾಂಗಣದಲ್ಲಿ ಆಯೋಜಿಸಲಾಯಿತು.