St. Aloysius Gonzaga School’s; Little Stars Shine at Pre-Primary Talent Thrillz

ಮಂಗಳೂರು: ಪ್ರತಿಯೊಬ್ಬರಲ್ಲಿಯೂ ವಿಶಿಷ್ಟವಾದ ಪ್ರತಿಭೆ ಅಡಗಿರುತ್ತದೆ. ಅದನ್ನು ಗುರುತಿಸಿ ಅನಾವರಣಗೊಳಿಸುವ ಪ್ರಯತ್ನ ನಮ್ಮದಾಗಬೇಕು. ಎಂದು ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯ ಪ್ರಾಂಶುಪಾಲರಾದ ವಂ. ಫಾ. ರೋಹನ್ ಡಿ’ಅಲ್ಮೇಡಾ ಎಸ್. ಜೆ ಹೇಳಿದರು.
ಅವರು ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯ ಪ್ರೀ-ಪ್ರೈಮರಿ ವಿಭಾಗದ ಟ್ಯಾಲೆಂಟ್ ಥ್ರಿಲ್ಸ್ ಕಾರ್ಯಕ್ರಮವನ್ನು ನವಂಬರ್ 6 ರಂದು ಗೊನ್ಝಾಗ ಸಭಾಂಗಣದಲ್ಲಿ ಉದ್ಘಾಟಿಸಿ ಮಾತನಾಡಿದರು.
ಮಕ್ಕಳು ತಮ್ಮ ಸಾಮರ್ಥ್ಯಗಳನ್ನು ಅನ್ವೇಷಿಸಿ, ತಮ್ಮ ಮೇಲೆಯೇ ನಂಬಿಕೆ ಇಟ್ಟುಕೊಂಡು, ಆತ್ಮವಿಶ್ವಾಸದಿಂದ ತಮ್ಮಲ್ಲಿರುವ ಪ್ರತಿಭೆಯನ್ನು ಹೊರತರಬೇಕಿದೆ ಎಂದರು. ಕಾರ್ಯಕ್ರಮದಲ್ಲಿ ಫ್ಯಾನ್ಸಿ ಡ್ರೆಸ್, ಬ್ಲಾಕ್ ಬಿಲ್ಡಿಂಗ್, ಒರಿಗಾಮಿ, ಕಥೆ ಹೇಳುವಿಕೆ ಹಾಗೂ ಹಣತೆ ಅಲಂಕಾರ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಪ್ರೀ-ಪ್ರೈಮರಿ ಟ್ಯಾಲೆಂಟ್ ಥ್ರಿಲ್ಸ್ ಕೇವಲ ಸ್ಪರ್ಧೆಯಾಗಿರದೆ, ಮಕ್ಕಳಲ್ಲಿನ ಸುಪ್ತ ಪ್ರತಿಭೆಯನ್ನು ಗುರುತಿಸಲು, ಆತ್ಮವಿಶ್ವಾಸವನ್ನು ಬೆಳೆಸಲು ಹಾಗೂ ಅವರಲ್ಲಿನ ಸೃಜನಶೀಲತೆಯನ್ನು ಸಂಭ್ರಮಿಸಲು ಸಹಕಾರಿಯಾದ ಒಂದು ಅರ್ಥಪೂರ್ಣ ಅನುಭವವಾಗಿ ಮೂಡಿಬಂದಿತು. ಪುಟ್ಟ ಮಕ್ಕಳ ಪ್ರತಿಭೆಗಳನ್ನು ಅನ್ವೇಷಿಸಲು, ಅಭಿವ್ಯಕ್ತಪಡಿಸಲು ಮತ್ತು ಪೋಷಿಸಲು ಸೂಕ್ತ ಅವಕಾಶಗಳನ್ನು ಕಲ್ಪಿಸುವುದು ಅವರ ಸರ್ವತೋಮುಖ ಬೆಳವಣಿಗೆಗೆ ಅತ್ಯಗತ್ಯ ಎಂಬ ಮಹತ್ವದ ಸಂದೇಶವನ್ನು ಕಾರ್ಯಕ್ರಮ ಸಾರಿದೆ.
St. Aloysius Gonzaga School’s; Little Stars Shine at Pre-Primary Talent Thrillz

“Each one of us has a talent; we just need to discover it and let it shine!” With this inspiring thought, Principal, Rev. Fr Rohan D’Almeida, began the inaugural address of Pre-Primary Talent Thrillz, held on 06 November 2026 at Gonzaga Hall. He highlighted that everyone possesses unique talents, but the key lies in discovering them. He encouraged the little ones to explore their abilities, believe in themselves and bring out the best in them. He also wished all the participants the very best.
The event featured a variety of competitions, including Fancy Dress, Block Building, Origami, Storytelling and Diya Decoration. These activities provided the children with opportunities to express their creativity, imagination and individual abilities.
The tiny Gonzagaites participated with great enthusiasm, showcasing their talents through colourful presentations, imaginative creations and confident performances. Their joyful involvement made the event a vibrant celebration of learning and self-expression.
Pre-Primary Talent Thrillz was more than a competition; it was an enriching experience that encouraged children to discover their potential, develop confidence and celebrate their talent.
The event reaffirmed the importance of providing young learners with opportunities to explore, express and nurture their talents.


