


ಮಂಗಳೂರಿನ ಪುರಭವನದಲ್ಲಿ ಮಾಂಡ್ ಸೊಭಾಣ್ ಸಂಸ್ಥೆಯು ದಿ. ಎರಿಕ್ ಒಝೇರಿಯೊರವರ ಸ್ಮರಣಾರ್ಥ ಹಮ್ಮಿಕೊಂಡ 12 ದಿನ 12 ಘಂಟೆ12 ನಿಮಿಷಗಳ ವಿಶ್ವ ಕೊಂಕಣಿ ಸಂಗೀತ ಮಹಾಮೇಳದಲ್ಲಿ ನಡೆಯುತ್ತಿರುವ ಕೊಂಕಣಿ ಮಾತೃಭಾಷಿಕರ ಕೊಂಕ್ಣಿ ನಿರಂತರಿ ಸಂಸಾರ್ ಸರಾಸರಿ ಗಿನ್ನಿಸ್ ದಾಖಲೆಯ ಪ್ರಯತ್ನದ ಕಾರ್ಯಕ್ರಮವು 100 ಘಂಟೆ ಪೂರ್ಣಗೊಂಡು ಗಿನ್ನೆಸ್ ದಾಖಲೆಯತ್ತ ಮುನ್ನುಗ್ಗುತ್ತಿದೆ.
100 ಘಂಟೆ ಪೂರ್ಣಗೊಂಡ ಸಂದರ್ಭದಲ್ಲಿ ಬೆಳಿಗ್ಗೆ 10.00 ಘಂಟೆಗೆ ಕೊಂಕಣಿ ಕಾರ್ಯಕರ್ತರು ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಿದರು.








