

ಮಂಗಳೂರು:“ಪ್ರತಿಯೊಂದು ಭಾಷೆಯೂ ತನ್ನದೇ ಆದ ಸೌಂದರ್ಯವನ್ನು ಹೊಂದಿದೆ. ಕನ್ನಡ ಮಾತನಾಡಿ, ಕನ್ನಡ ಭಾಷೆಯ ಶ್ರೀಮಂತಿಕೆಯನ್ನು ಹೆಚ್ಚಿಸಿ. ಹಾಗೆಯೇ ಎಲ್ಲ ಭಾಷೆಗಳನ್ನೂ ಗೌರವಿಸಿ, ಆಚರಿಸಿ” ಎಂದು ತುಳುನಾಡಿನ ಹೆಸರಾಂತ ತುಳು ಚಲನಚಿತ್ರ ನಟ ಹಾಗೂ ರಂಗಭೂಮಿ ಕಲಾವಿದ ಶ್ರೀ ಮಂಜು ರೈ ಮೂಳೂರು ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಹೊಸ ಭಾಷೆಗಳನ್ನು ಕಲಿಯುವುದರ ಜೊತೆಗೆ ಕರ್ನಾಟಕದ ಭಾಷಾ ವೈವಿಧ್ಯತೆಯನ್ನು ಗೌರವಿಸುವಂತೆ ಅವರು ಪ್ರೇರೇಪಿಸಿದರು.
ಮಂಗಳೂರಿನ ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯಲ್ಲಿ ನವೆಂಬರ್ 1 ಮತ್ತು 3ರಂದು ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಯಿತು. ಕನ್ನಡ ನಾಡಿನ ಭಾಷಾ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸುವ ಶಾಲೆಯ ಬದ್ಧತೆಯನ್ನು ಈ ಆಚರಣೆಯು ಸಾರಿತು.
ನವೆಂಬರ್ 1ರಂದು ಮಾತೆ ಭುವನೇಶ್ವರಿಯ ಭಾವಚಿತ್ರದ ಮುಂದೆ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಶಾಲೆಯ ಪ್ರಾಂಶುಪಾಲರಾದ ವಂ. ಫಾ. ರೋಹನ್ ಡಿ’ಅಲ್ಮೇಡಾ ಎಸ್.ಜೆ. ಅವರು ಕರ್ನಾಟಕದ ವೈವಿಧ್ಯತೆ ಹಾಗೂ ಕನ್ನಡ ಭಾಷೆಯ ಹಿರಿಮೆಯನ್ನು ಶ್ಲಾಘಿಸಿದರು.
ನವೆಂಬರ್ 3ರಂದು ವಿದ್ಯಾರ್ಥಿಗಳ ಉತ್ಸಾಹಭರಿತ ಭಾಗವಹಿಸುವಿಕೆಯೊಂದಿಗೆ ರಾಜ್ಯೋತ್ಸವದ ಸಂಭ್ರಮ ಮುಂದುವರಿಯಿತು. ಗಣ್ಯರು ಡೊಳ್ಳು ಬಾರಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕನ್ನಡ ಭಾಷೆಯ ಶ್ರೀಮಂತಿಕೆಯನ್ನು ಸಾರುವ ಸುಮಧುರ ಗೀತೆಗಳು ಹಾಗೂ ಕರ್ನಾಟಕದ ನಾಡು, ನುಡಿ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ಆಕರ್ಷಕ ನೃತ್ಯ ಪ್ರದರ್ಶನಗಳು ಕಾರ್ಯಕ್ರಮಕ್ಕೆ ಮೆರುಗು ನೀಡಿದವು.
ಶಾಲೆಯ ಉಪಪ್ರಾಂಶುಪಾಲರಾದ ಶ್ರೀಮತಿ ಲಾರೆಲ್ ಡಿ’ಸೋಜಾ ಅವರು ಕರ್ನಾಟಕ ರಾಜ್ಯೋತ್ಸವದ ಉಗಮ ಮತ್ತು ಮಹತ್ವದ ಕುರಿತು ಮಾತನಾಡಿ, ಮಾತೃಭಾಷೆಯ ಬಗ್ಗೆ ಅಭಿಮಾನ ಬೆಳೆಸಿಕೊಳ್ಳುವುದರ ಜೊತೆಗೆ ಇತರ ಭಾಷೆಗಳನ್ನೂ ಗೌರವಿಸಬೇಕು ಹಾಗೂ ಕನ್ನಡ ನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಉಪಪ್ರಾಂಶುಪಾಲರಾದ ಶ್ರೀಮತಿ ಅಪರ್ಣಾ ಸುರೇಶ್, ಶೈಕ್ಷಣಿಕ ಸಂಯೋಜಕರಾದ ಶ್ರೀಮತಿ ದೀಪ್ತಿ ಕರ್ಕಡ, ಶ್ರೀಮತಿ ಕ್ಯಾರೆಲ್ ಟೀನಾ ರೋಡ್ರಿಗಸ್, ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
ಈ ರಾಜ್ಯೋತ್ಸವ ಆಚರಣೆಯು ವಿದ್ಯಾರ್ಥಿಗಳು ಮತ್ತು ಶಿಕ್ಷಕರಲ್ಲಿ ನಾಡು, ನುಡಿಯ ಬಗ್ಗೆ ಅಭಿಮಾನ, ಭಾಷಾ ಪ್ರೀತಿ, ಏಕತೆ ಹಾಗೂ ಸೌಹಾರ್ದತೆಯ ಭಾವನೆಯನ್ನು ಮೂಡಿಸುವಲ್ಲಿ ಯಶಸ್ವಿಯಾಯಿತು.
St. Aloysius Gonzaga School- Kannada Rajyotsava: Honouring Our Roots, Celebrating Our Heritage

“Every language has its own beauty. Speak Kannada and appreciate the richness of the Kannada language, while respecting and celebrating all languages,” said Mr Manju Rai Muloor, renowned Tulu actor and stage and drama artist of Tulunadu, while addressing the students of St. Aloysius Gonzaga School, Mangaluru, during the Kannada Rajyotsava celebrations.
Kannada Rajyotsava was celebrated with great pride and enthusiasm at St Aloysius Gonzaga School on 1 and 3 November 2026, reaffirming the institution’s commitment to preserving and celebrating Karnataka’s linguistic and cultural heritage.
The celebration on 1 November commenced with the ceremonial lighting of the lamp in honour of Mother Bhuvaneshwari, in the presence of the Principal, Rev. Fr Rohan D’Almeida, and the teaching and non-teaching staff.
The festivities continued on 3 November with the enthusiastic participation of students. The programme featured vibrant cultural performances, including melodious songs celebrating the richness and beauty of Kannada, and a captivating dance drama portraying love and pride for Karnataka and its linguistic heritage.
Addressing the gathering, the Chief Guest, Mr Manju Rai Muloor, emphasised the importance of communicating in one’s regional language while respecting all languages. He encouraged students to learn new languages and appreciate the linguistic diversity of Karnataka.
The Vice Principal, Ms Laurel D’Souza, spoke about the origin and significance of Kannada Rajyotsava. She encouraged students to communicate in Kannada and accord the language the same respect and recognition as other languages. Her words inspired students to take pride in their mother tongue and contribute towards preserving Karnataka’s rich linguistic and cultural heritage.
The celebration served as a meaningful reminder that language is an integral part of identity and culture, fostering a deep sense of pride, unity and belonging among students and staff.













