

ಮಂಗಳೂರು; ಸಂತ ಅಲೋಶಿಯಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ಸಂಭ್ರಮ, ಸಡಗರದಿಂದ ಆಚರಿಸಲಾಯಿತು.
ಈ ಕಾರ್ಯಕ್ರಮವನ್ನು ಫಾ. ದೀಪಕ್ ಲೋಬೊ ಮತ್ತು ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷೆ ಶ್ರೀಮತಿ ಶೈಲಶ್ರಿ ಗಂಗೂಲಿ ಧ್ವಜಾರೋಹಣ ನೆರವೇರಿಸಿದರು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಯುತ ಅಲೋಶಿಯಸ್ ಡಿಸೋಜರವರು ಈ ದಿನದ ಮಹತ್ವವನ್ನು ತಿಳಿಸಿದರು.
ಈ ಕಾರ್ಯಕ್ರಮವನ್ನು ಶಿಕ್ಷಕರಾದ ಹರಿಣಾಕ್ಷಿ ಹಾಗೂ ಲವೀನಾ ಕೊರೆಯ ಅವರ ಸಂಯೋಜಕತ್ವದಲ್ಲಿ ಎಂಟನೇ ತರಗತಿಯ ವಿದ್ಯಾರ್ಥಿಗಳು ಕನ್ನಡ ನಾಡು ಕುರಿತ ಭಾಷಣ, ನೃತ್ಯ, ಕನ್ನಡ ಗೀತೆಗಳು, ಕಲೆ, ಸಾಹಿತ್ಯ ಮತ್ತು ಪರಂಪರೆಯನ್ನು ಬಿಂಬಿಸುವ ಕಾರ್ಯಕ್ರಮವನ್ನು ಪ್ರಸ್ತುತ ಪಡಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಶಿಕ್ಷಕರಾದ ಲವೀನಾ ಪಿಂಟೊ, ಲವೀನಾ ಡಿಕುನ್ಹ, ಶಿಕ್ಷಕರು, ಶಿಕಕೇತರ ಸಿಬ್ಬಂದಿ, ಹೆತ್ತವರು ಉಪಸ್ಥಿತರಿದ್ದರು.
ಎಂಟನೇ ತರಗತಿಯ ವಿದ್ಯಾರ್ಥಿಗಳಾದ ಉದ್ಬವ್ ಮತ್ತು ಚರೀಶ್ಮ ಕಾರ್ಯಕ್ರಮವನ್ನು ನಿರೂಪಿಸಿ, ಅನೀಶ ಮತ್ತು ಪುರುಷೋತ್ತಮ್ ಸ್ವಾಗತಿಸಿ, ಶ್ರೇಯಸ್ ಮತ್ತು ಲಕ್ಷ್ಮಿ ಧನ್ಯವಾದ ಸಮರ್ಪಿಸಿದರು.



















