

ಮಂಗಳೂರು: ಕ್ಯಾಥೋಲಿಕ್ ಅಸೋಸಿಯೇಷನ್ ಆಫ್ ಸೌತ್ ಕೆನರಾ (ಕಾಸ್ಕ್) ಸಂಘಟನೆಯ 2026–2028ನೇ ಸಾಲಿನ ಅಧ್ಯಕ್ಷರಾಗಿ ಡಾ. ಎರಿಕ್ ಲೋಬೋ ಆಯ್ಕೆಯಾಗಿದ್ದಾರೆ.
ಸೆ. 27ರಂದು ಮಂಗಳೂರಿನ ಸಂತ ಆಗ್ನೆಸ್ ಕಾಲೇಜಿನ ಅವಿಲಾ ಸಭಾಂಗಣದಲ್ಲಿ ನಡೆದ ಸಂಘಟನೆಯ 113ನೇ ವಾರ್ಷಿಕ ಮಹಾಸಭೆಯ ಬಳಿಕ ಚುನಾವಣಾಧಿಕಾರಿ ರೊನಾಲ್ಡ್ ಕ್ಯಾಸ್ಟೆಲಿನೊ ಅವರು ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಿದರು.
ಡಾ. ಎರಿಕ್ ಲೋಬೋ ಅವರು ಎಂ.ಎಸ್ಸಿ., ಪಿಎಚ್.ಡಿ., ಎಫ್ಐಎಫ್ಸಿಸಿ ಪದವೀಧರರಾಗಿದ್ದು, ಕ್ಲಿನಿಕಲ್ ಬಯೋಕೆಮಿಸ್ಟ್ ಹಾಗೂ ಶಿಕ್ಷಣ ತಜ್ಞರಾಗಿದ್ದಾರೆ. ವೈದ್ಯಕೀಯ ಶಿಕ್ಷಣ, ಸಂಶೋಧನೆ ಮತ್ತು ಕ್ಲಿನಿಕಲ್ ಪ್ರಯೋಗಾಲಯ ಸೇವಾ ಕ್ಷೇತ್ರದಲ್ಲಿ ಅವರು ವ್ಯಾಪಕ ಅನುಭವ ಹೊಂದಿದ್ದಾರೆ. ಪ್ರಸ್ತುತ ಮಂಗಳೂರಿನ ಯೆನೆಪೊಯ ವೈದ್ಯಕೀಯ, ದಂತ ವೈದ್ಯಕೀಯ, ನರ್ಸಿಂಗ್ ಮತ್ತು ಫಿಸಿಯೋಥೆರಪಿ ಕಾಲೇಜುಗಳಲ್ಲಿ ಬಯೋಕೆಮಿಸ್ಟ್ರಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಡಾ. ರೋಹನ್ ಮೊನಿಸ್ ಹಾಗೂ ಓಸ್ವಾಲ್ಡ್ ಡಿಸೋಜಾ ಉಪಾಧ್ಯಕ್ಷರಾಗಿ, ರೊನಾಲ್ಡ್ ಮೆಂಡೋನ್ಸಾ ಕಾರ್ಯದರ್ಶಿಯಾಗಿ, ಬ್ರಿಯಾನ್ ಜೆ. ಪಿಂಟೊ ಜಂಟಿ ಕಾರ್ಯದರ್ಶಿಯಾಗಿ ಹಾಗೂ ಆಶ್ವಿನ್ ಎ. ಡಿಸೋಜಾ ಖಜಾಂಚಿಯಾಗಿ ಆಯ್ಕೆಯಾಗಿದ್ದಾರೆ.
ಆಡಳಿತ ಮಂಡಳಿ ಸದಸ್ಯರಾಗಿ ಇಯಾನ್ ಲೋಬೋ, ಪೀಟರ್ ಆಂಥನಿ ಪಿಂಟೊ, ಶೆಲ್ಡನ್ ಕ್ರಾಸ್ತಾ, ಡ್ಯಾರಿಲ್ ಡಿಸೋಜಾ, ಜಾಕ್ಸನ್ ಸಲ್ದಾನ್ಹಾ, ಆಶ್ವಿನ್ ಎಂ. ಸಿಕ್ವೇರಾ, ಜಿಟಾ ಉಷಾ ಫೆರ್ನಾಂಡಿಸ್, ಡಾ. ಪಾಲ್ ಜಿ. ಅಕ್ವಿನಾಸ್, ಸಪ್ನಾ ನೊರೊನ್ಹಾ ಹಾಗೂ ನೆಲ್ಸನ್ ಕ್ಯಾಸ್ಟೆಲಿನೊ ಆಯ್ಕೆಯಾಗಿದ್ದಾರೆ. ರೊನಾಲ್ಡ್ ಗೋಮ್ಸ್ ಅವರು ನಿರ್ಗಮಿತ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ.
113ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆಯನ್ನು ನಿರ್ಗಮಿತ ಅಧ್ಯಕ್ಷ ರೊನಾಲ್ಡ್ ಗೋಮ್ಸ್ ವಹಿಸಿದ್ದರು. ಉಪಾಧ್ಯಕ್ಷ ಡಾ. ರೋಹನ್ ಮೊನಿಸ್ ಅವರು ಕಾಸ್ಕ್ ಶತಮಾನೋತ್ಸವ ಟ್ರಸ್ಟ್ಗೆ ಸಂಬಂಧಿಸಿದ ವಿಷಯ ಹಾಗೂ ನಡೆಯುತ್ತಿರುವ ಮಧ್ಯಸ್ಥಿಕೆ ಪ್ರಕ್ರಿಯೆಯ ಕುರಿತು ಸಭೆಯ ಗಮನಕ್ಕೆ ತಂದರು. ಕಾರ್ಯದರ್ಶಿ ಪೀಟರ್ ಆಂಥನಿ ಪಿಂಟೊ ಹಿಂದಿನ ಮಹಾಸಭೆಯ ನಡಾವಳಿಗಳನ್ನು ಮಂಡಿಸಿದರೆ, ಖಜಾಂಚಿ ರೊನಾಲ್ಡ್ ಮೆಂಡೋನ್ಸಾ ಆರ್ಥಿಕ ವರದಿಗಳನ್ನು ಮಂಡಿಸಿದರು.
ಚುನಾವಣಾಧಿಕಾರಿ ಹಾಗೂ ಮಂಗಳೂರು ಧರ್ಮಪ್ರಾಂತ್ಯದ ಪಿಆರ್ಒ ಮತ್ತು ಕಾಸ್ಕ್ನ ದಾನಿ ಸದಸ್ಯರಾಗಿರುವ ರೊನಾಲ್ಡ್ ಕ್ಯಾಸ್ಟೆಲಿನೊ ಚುನಾವಣಾ ಪ್ರಕ್ರಿಯೆ ನಡೆಸಿದರು. ಸಲ್ಲಿಕೆಯಾಗಿದ್ದ ನಾಮಪತ್ರಗಳನ್ನು ಪರಿಶೀಲಿಸಿ ಕ್ರಮಬದ್ಧವಾಗಿರುವುದನ್ನು ಖಚಿತಪಡಿಸಿಕೊಂಡ ಬಳಿಕ, ಯಾವುದೇ ಇತರ ನಾಮಪತ್ರಗಳು ಸಲ್ಲಿಕೆಯಾಗದ ಹಿನ್ನೆಲೆಯಲ್ಲಿ ಎಲ್ಲ ಅಭ್ಯರ್ಥಿಗಳನ್ನೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು.
ನೂತನ ತಂಡವನ್ನು ನಿರ್ಗಮಿತ ಅಧ್ಯಕ್ಷರು ಅಭಿನಂದಿಸಿದರು. ಬಳಿಕ ನೂತನ ಅಧ್ಯಕ್ಷ ಡಾ. ಎರಿಕ್ ಲೋಬೋ ಅವರು ಕಾಸ್ಕ್ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ಹಾಗೂ ಸಮುದಾಯ ಸೇವೆಯನ್ನು ಹೆಚ್ಚಿಸುವ ತಮ್ಮ ದೃಷ್ಟಿಕೋನವನ್ನು ಹಂಚಿಕೊಂಡರು. ಖಜಾಂಚಿಯಾಗಿ ಆಯ್ಕೆಯಾಗಿರುವ ಆಶ್ವಿನ್ ಎ. ಡಿಸೋಜಾ ವಂದಿಸಿದರು.
ಅನುಭವ ಹೊಂದಿರುವ ಕಾಸ್ಕ್ ಸದಸ್ಯರು ಹಾಗೂ ಯುವ ನಾಯಕತ್ವದ ಸಮನ್ವಯದೊಂದಿಗೆ ನೂತನ ತಂಡ ಅಸ್ತಿತ್ವಕ್ಕೆ ಬಂದಿದ್ದು, ಸಂಘಟನೆಯ ಮುಂದಿನ ಅವಧಿಯಲ್ಲಿ ನಿರಂತರತೆ, ಹೊಸ ಚಿಂತನೆ ಹಾಗೂ ಹೊಸ ಉತ್ಸಾಹದೊಂದಿಗೆ ಸಮುದಾಯ ಸೇವೆಗೆ ಹೆಚ್ಚಿನ ಒತ್ತು ನೀಡುವ ನಿರೀಕ್ಷೆಯಿದೆ.
Dr Eric Lobo elected CASK president

Mangaluru: Dr Eric Lobo has been elected president of the Catholic Association of South Kanara (CASK) for the 2026–2028 term.
The results were formally announced by election officer Ronald Castelino following the conclusion of the association’s 113th Annual General Body Meeting, held at Avila Hall, St Agnes College, Mangaluru, on September 27.
Dr Eric Lobo, M.Sc., Ph.D., FIFCC, is a clinical biochemist and academician with extensive experience in medical education, research and clinical laboratory services. He is presently professor of biochemistry at Yenepoya Medical, Dental, Nursing and Physiotherapy Colleges, Mangaluru.
Dr Rohan Monis and Oswald D’Souza were elected vice-presidents, while Ronald Mendonca was elected secretary, Brian J Pinto joint secretary and Ashwin A D’Souza treasurer.
The governing council members are Ian Lobo, Peter Anthony Pinto, Sheldon Crasta, Darryl D’Souza, Jackson Saldanha, Ashwin M Sequeira, Zita Usha Fernandes, Dr Paul G Aquinas, Sapna Noronha and Nelson Castelino. Ronald Gomes will serve as immediate past president.
The 113th AGBM was presided over by outgoing president Ronald Gomes. Vice-president Dr Rohan Monis placed on record a statement regarding the CASK Centenary Trust matter and the ongoing mediation process. Secretary Peter Anthony Pinto presented the minutes of the previous AGM, while treasurer Ronald Mendonca presented the financial reports.
Election officer Ronald Castelino, PRO of the Diocese of Mangalore and a benefactor member of CASK, conducted the election process. After scrutinising the nominations and finding them in order, he declared the nominated candidates elected unopposed, as no other nominations had been received.
Following the formal announcement, newly elected president Dr Eric Lobo shared his vision for strengthening CASK and enhancing its service to the community. Treasurer-elect Ashwin A D’Souza proposed the vote of thanks.
The new leadership brings together experienced CASK members and younger leaders, with the association beginning its new term with a focus on continuity, fresh perspectives and renewed commitment to the wider community.




