

ಸೆಪ್ಟೆಂಬೆರ್ 8 ರಂದು, ಕೋಟದ ಸಂತ ಜೋಸೆಫರ ಇಗರ್ಜಿಯುಲ್ಲಿ ಮಾತೆ ಮರಿಯಮ್ಮನವರ ಜಲ್ಮದಿನ ಹಾಗೂ “ತೆನೆ ಹಬ್ಬ” ಆಚರಣೆ ವಿಜ್ರಂಭಣೆಯಿಂದ ಆಚರಿಸಲಾಯಿತು. ಮಾತೆ ಮರಿಯಮ್ಮನವರ ವಿಗ್ರಹವನ್ನು ಮೆರವಣಿಗೆಯಲ್ಲಿ ಇಗರ್ಜಿಗೆ ತರಲಾಯಿತು. ದಾರಿಯುದ್ದಕ್ಕು ಮಕ್ಕಳು ಪುಶ್ಪಾರ್ಚರಣೆಗೈದರು.
ಇಗರ್ಜಿಯ ಧರ್ಮಗುರುಗಳಾದ ವಂದನೀಯ ಸ್ಟ್ಯಾನಿ ತಾವ್ರೊ ಅವರು ಪವಿತ್ರ ಬಲಿಪೂಜೆಯನ್ನು ಅರ್ಪಿಸಿದರು. ಭಕ್ತಾದಿಗಳು ಅಪಾರ ಸಂಖ್ಯೆಯಲ್ಲಿ ಬಲಿಪೂಜೆಯಲ್ಲಿ ಭಾಗವಹಿಸಿ ಆಶೀರ್ವಾದ ಪಡೆದು ಕೊಂಡರು. ಸಂಪ್ರದಾಯದಂತೆ ಹೊಸ ಭತ್ತದ ತೆನೆಗಳನ್ನು ಆಶೀರ್ವದಿಸಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಕ್ಕಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಕೊನೆಯಲ್ಲಿ ಲಘು ಉಪಹಾರದ ವ್ಯವಸ್ತೆಯನ್ನು ಮಾಡಲಾಗಿತ್ತು.

























































