

ಸಂತ ಅಲೋಶಿಯಸ್ ಅಂಗ್ಲ ಮಾಧ್ಯಮ ಶಾಲೆ ,ಉರ್ವಾ , ಮಂಗಳೂರು ವತಿಯಿಂದ ಕೊಂಕಣಿ ಮಾನ್ಯತಾ ದಿವಸವನ್ನು 31 ಆಗಸ್ಟ್ 2026ರಂದು ಬೆಳಿಗ್ಗೆ 11:15ಕ್ಕೆ ಉರ್ವ ಚರ್ಚ್ ಹಾಲ್ನಲ್ಲಿ ಅತ್ಯಂತ ಉತ್ಸಾಹ ಮತ್ತು ಸಂಭ್ರಮದಿಂದ ಆಚರಿಸಲಾಯಿತು.
ಕಾರ್ಯಕ್ರಮವು ಪ್ರಾರ್ಥನಾ ಗೀತೆಯೊಂದಿಗೆ ಆರಂಭವಾಯಿತು. ನಂತರ ವಿದ್ಯಾರ್ಥಿಗಳು ಸುಂದರವಾದ ಸ್ವಾಗತ ನೃತ್ಯವನ್ನು ಪ್ರದರ್ಶಿಸಿದರು. ಬಳಿಕ ಮುಖ್ಯ ಅತಿಥಿಗಳು ಹಾಗೂ ಗಣ್ಯರನ್ನು ವೇದಿಕೆಗೆ ಆತ್ಮೀಯವಾಗಿ ಆಹ್ವಾನಿಸಲಾಯಿತು.
ಸ್ವಾಗತ ಭಾಷಣವನ್ನು ಕು!ಸಾನ್ವಿ ಡಿಸೋಜಾ ಅವರು ಮಾಡಿದರು. ನಂತರ ದೀಪ ಬೆಳಗಿಸುವ ಹಾಗೂ ಗುಮ್ಟಾಂ ಬಾರಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಅಧ್ಯಕ್ಷರು ಮತ್ತು ಮುಖ್ಯ ಅತಿಥಿಗಳು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಶುಭಾರಂಭ ನೀಡಿದರು.
ಅನಂತರ ಕೊಂಕಣಿ ಧ್ವಜಾವನ್ನು ಪ್ರತೀಷ್ಟಾ ಪಿಸಲಾತು. ಎಲ್ಲರೂ ಸೇರಿ ಕೊಂಕಣಿ ಗೀತೆಯನ್ನು ಹಾಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶ್ರೀ ಲಾರೆನ್ಸ್ ಸಲ್ದಾನ್ಹಾ, ಅಧ್ಯಕ್ಷರಾಗಿ ರೆವರೆಂಡ್ ಫಾದರ್ ಬೆಂಜಮಿನ್ ಪಿಂಟೊ, ಮುಖ್ಯೋಪಾಧ್ಯಾಯರಾದ ಶ್ರೀ ಅಲೋಶಿಯಸ್ ಡಿಸೋಜಾ ಹಾಗೂ ಹಿರಿಯ ಶಿಕ್ಷಕಿಯಾದ ಶ್ರೀಮತಿ ಲವೀನಾ ಪಿಂಟೊ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ನಂದನ್ ನಾಯಕ್ ಮತ್ತು ಆನ್ಸಿಯಾ ಸೆರಾ ಮೊoತೆರೊ ಅವರು ಅಚ್ಚುಕಟ್ಟಾಗಿ ಕಾರ್ಯಕ್ರಮ ವನ್ನು ನಿರ್ವಹಿಸಿದರು.
ಮುಖ್ಯ ಅತಿಥಿಗಳಾದ ಹಿರಿಯ ಕೊಂಕಣಿ ಕಲಾವಿದ ಶ್ರೀ ಲಾರೆನ್ಸ್ ಸಲ್ದಾನ್ಹಾ ಅವರು ಕೊಂಕಣಿ ಭಾಷೆ, ಸಂಸ್ಕೃತಿ ಮತ್ತು ಪರಂಪರೆಯ ಮಹತ್ವದ ಕುರಿತು ಪ್ರೇರಣಾದಾಯಕ ಭಾಷಣ ಮಾಡಿದರು. ನಂತರ ಅವರನ್ನು ಶಾಲೆಯ ವತಿಯಿಂದ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳು ತಾವೇ ರಚಿಸಿದ ಸುಮಧುರವಾದ ಕೊಂಕಣಿ ಹಾಡಿನ ಮೂಲಕ ನೆರೆದಿದ್ದವರನ್ನು ರಂಜಿಸಿದರು.
ಕು!ಸ್ನೇಹಾ ಕುಡುವಾ ಅವರು ಕೊಂಕಣಿ ಮಾನ್ಯತಾ ದಿವಸದ ಮಹತ್ವದ ಕುರಿತು ಮಾತನಾಡಿದರು. ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನೃತ್ಯ, ಕಿರುನಾಟಕ ಮತ್ತು ಗುಮ್ಟಾ ಪ್ರದರ್ಶನಗಳು ನಡೆದವು .ಸೋನಿಯಾ ಫೇರಾವೊರವರು ಸರ್ವರಿಗೆ ಧನ್ಯವಾದ ನೀಡಿದರು. ಕೊನೆಗೆ ವಿದ್ಯಾರ್ಥಿಗಳಿಗೆ ಸಿಹಿ ತಿಂಡಿ ವಿತರಿಸಾಲಾಯಿತು.
Report Konkani Manyatha Diwas

Konkani Manyata Diwas celebrated at St. Aloysius English Medium School Urwa with great enthusiasm and pride on 31st August 2026 commemorating the rich heritage and culture significance of the Konkani language .
The programme was graced by Rev.Fr Benjamin Pinto, President as the distinguished dignitary. Mr Lawrence Saldanha was the Chief Guest ,Mr Aloysius D’Souza Headmaster and Mrs Lavina Pinto senior teacher were the present on the occasion.
The programme commenced with a prayer song followed by vitrant welcome dance which set a warm and festive tone for the celebration.
The welcome speech delivered by Shanvi D’Souza,who warmly welcome the dignitaries, teacher, parents and students.
The programme commenced with the ceremonial lighting of the lamp by all the dignitaries, symbolising the dispelling of darkness and the spreading of knowledge culture and enlightenment .After lighting the lamp ,the Chief Guest played Ghumta to mark the Inaugration of the event followed by hoisting of the Konkani Flag.
The celebration focused on creating awareness among students about the importance of Konkani language and culture by Sneha Kuduva.
A special felicitation ceremony was held to honour the Chief Guest,Mr.Lawrence Saldanha in recognition of his valuable contribution and service to the Konkani language and community.
The cultural programmes featured a vibrant array performances, including traditional dances,an engaging skit and a lively Ghumta performance showcasing the rich cultural heritage,traditions and artistic expression of the Konkani community.
The programme concluded with a heartfelt vote of thanks by Ms. Sonia Ferrao ,expressing gratitude to all gathered.
The proceedings of the Programme were gracefully compered by Nandan Nayak U and Ancia Monteiro. Sweets were distributed to all gathered as one family.




























