


ಆಗಸ್ಟ್ 20 ಗುರುವಾರ ಬೆಳಿಗ್ಗೆ 11 ಗಂಟೆಗೆ ಕಣಜಾರು ಸೌಹಾರ್ದ ಭವನದಲ್ಲಿ “ಕೊಂಕಣಿ ಮಾನ್ಯತಾ ದಿವಸ್ – 2026″ ಹಾಗೂ ” ಪಾವ್ಸಿಲೆ ಖಾಣ್ ಜೆವಾಣ್ ” ಕಾರ್ಯಕ್ರಮವು ಹಮ್ಮಿಕೊಂಡಿದ್ದರು.
ಕಾರ್ಯಕ್ರಮವು ಕಣಜಾರು ಲೂರ್ಡ್ಸ್ ಮಾತೆಯ ದೇವಾಲಕ್ಕೆ ಒಳಪಟ್ಟ ಮಾತಮರಿಯ ಮಹಿಳಾ ಮಹಾಸಂಘದ ವತಿಯಿಂದ ಆಯೋಜಿಸಿದ್ದರು. ಸಭಾಕಾರ್ಯಕ್ರಮದ ಅಧ್ಯಕ್ಷರಾಗಿ ಲೂರ್ಡ್ಸ್ ಮಾತಾ ದೇವಾಲಯದ ಧರ್ಮಗುರುಗಳಾದ ಅತೀ ವಂದನೀಯ ಫಾ| ಹೆರಾಲ್ಡ್ ಪೀರೆರಾ, ಮುಖ್ಯ ಅತಿಥಿಯಾಗಿ ಕೊಂಕಣಿ ಶಿಕ್ಷಕರಾದ ಶ್ರೀ ರೋಬರ್ಟ್ ಮಿನೇಜಸ್ ಹಾಜರಿದ್ದರು.
ಅತಿಥಿಗಳಾಗಿ ನಿವೃತ್ತ ಗುರುಗಳಾದ ಫಾ| ಫೆಡ್ರಿಕ್ ಡಿಸೋಜ, ಸಂಪದ ಸಂಸ್ಥೆ ಉಡುಪಿ ಇದರ ಸಂಯೋಜಕರಾದ ಶ್ರೀ ಸ್ಟಾನ್ಲಿ ಫೆರ್ನಾಂಡೀಸ್, ಚರ್ಚ್ ಪಾಲನ ಮಂಡಳಿಯ ಉಪಾಧ್ಯಕ್ಷರಾದ ಶ್ರೀ ಸ್ಟಾನಿ ಸಲ್ಡಾನ್ನಾ, ಕಾರ್ಯದರ್ಶಿ ಶ್ರೀ ಅಂತೋನಿ ಮಿರಾಂದ, 20 ಆಯೋಗಗಳ ಸಂಯೋಜಕಿ ಶ್ರೀಮತಿ ಅನಿತಾ ಕ್ವಾಡ್ರಸ್, ಪ್ರಾಸ್ಸಿಸ್ಕನ್ ಸಂಘದ ಅಧ್ಯಕ್ಷ ಶ್ರೀ ಪಾಸ್ಕಲ್ ಬ್ರಿಟ್ಟೊ, ಭಾರತೀಯ ಕಥೋಲಿಕ್ ಯುವ ಸಂಚಾಲನದ ಅಧ್ಯಕ್ಷ ಶ್ರೀ ಎಲ್ಸನ್ ನೊರೊನ್ನ, ಸಂಪದ ಸಂಸ್ಥೆಯ ಕಾರ್ಯಕರ್ತೆ ಶ್ರೀಮತಿ ಪ್ರಿಯಾ ಕ್ವಾಡ್ರಸ್, ಮಾತಾಮರಿಯ ಮಹಿಳಾ ಮಹಾ ಸಂಘದ ಅಧ್ಯಕ್ಷ ಶ್ರೀಮತಿ ವಿಲ್ಮಾ ಮಿರಾಂದ, ಹಾಗೆಯೇ ಕಾರ್ಯದರ್ಶಿ ಟ್ರೇಸಿ ಮಿರಾಂದರವರು ವೇದಿಕೆಯಲ್ಲಿ ಹಾಜರಿದ್ದರು.
ವೇದಿಕೆ ಮುಂಭಾಗದಲ್ಲಿ ಸಂಘದ ಸದಸ್ಯರು, ಹಿತೈಷಿಗಳು, ಕೊಂಕಣಿ ಮಾತೃಭಾಷಾ ಪ್ರಿಯರು ಹಾಜರಿದ್ದರು.
ಕೊಂಕಣಿ ಮಾನ್ಯತ ದಿವಸ – 2026 ಇದರ ಅಂಗವಾಗಿ “ಕೊಂಕ್ಣಿ ಸ್ವಾದ್ ” ಎಂಬ ಸ್ಮರಣ ಸಂಚಿಕೆ ಪುಸ್ತಕ ಶ್ರೀಮಾನ್ ರೋಬರ್ಟ್ ಮಿನೇಜಸ್ ರವರು ಬಿಡುಗಡೆ ಮಾಡಿದರು.
ಕೊಂಕಣಿ ಬಾಷೆಯನ್ನು ಸಂವಿಧಾನದ ಎಂಟನೆಯ ಪರಿಚ್ಛೇದನಲ್ಲಿ ಸೆರ್ಪಡೆ ಯಾಗಿ 35 ವರ್ಷ ಗಳಾಗಿದ್ದು, ಕೊಂಕಣಿ ಬಾಷೆ ನಡೆದುಬಂದ ಹಾಗೂ ಕೊಂಕಣಿ ಬಾಷಿಗರ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು.
ಸಭಾದ್ಯಕ್ಷರಾದ ರೆ. ಪಾ.ಹೆರಾಲ್ಡ್ ಪಿರೇರಾರವರು ಕೊಂಕಣಿ ಭಾಷೆಯು ಒಂದು ಸಂಸ್ಕೃತಿಯಾಗಿ ಸೊಬಗಿದೆ ಹಾಗೂ ಸಡಗರದಿಂದ ಇನ್ನೂ ಮುಂದೆಯೂ ಸೊಬಗಲೆಂದು ಹಾರೈಸಿದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕೊಂಕಣಿ ಹಾಡುಗಳು ಸದಸ್ಯರು ಹಾಡಿದರು.
ಈ ಕಾರ್ಯಕ್ರಮಕ್ಕೆ 13 ಸ್ವ-ಸಂಘದ ಸದಸ್ಯರು 13 ವಿವಿದ ಬಗೆಯ ಸಾಂಪ್ರದಾಯಿಕ ತಿಂಡಿ ತಿನಿಸುಗಳನ್ನು ತಯಾರಿಸಿದ್ದರು.
ಮಹಾ ಸಂಘದ ಅದ್ಯಕ್ಷೆ ಶ್ರೀಮತಿ ವಿಲ್ಮಾ ಮಿರಾಂದಾ ಸ್ವಾಗತಿಸಿ ಶ್ರೀಮತಿ ಜೊವಿಟಾ ಮೆಂಡೊನ್ಸಾ ದನ್ಯವಾದವಿತ್ತರು. ಶ್ರೀಮತಿ ಸ್ಲೊಬಿನ್ ಸಲ್ಡಾನ್ನಾ ಕಾರ್ಯಕ್ರಮ ನಿರೂಪಿಸಿದರು.
ಹೀಗೆ ಕೊಂಕಣಿ ಮಾನ್ಯತಾ ದಿವಸ್ – 2026 ತುಂಬಾ ಅರ್ಥಪೂರ್ಣವಾಗಿ ನೇರವೇರಿಸಲಾಯಿತು.












