


ದಿನಾಂಕ 13-08-2026 ಗುರುವಾರ ಬೆಳ್ಳಿಗ್ಗೆ 10:30 ಕ್ಕೆ ನಡೆಯಬೇಕಾದ ಗ್ರಾಮಸಭೆಯು 11:15 ಸಮಯವಾದರು ಇಲಾಖಾಧಿಕಾರಿಗಳು ಗ್ರಾಮಸಭೆಗೆ ಬಾರದೆ ಇದ್ದ ಕಾರಣ ಸಭೆಯು
ಮುಂದೂಡಲಾಗಿತು. ಇಂದಿನ ಗ್ರಾಮಸಭೆಯ ನೋಡಲ್ ಅಧಿಕಾರಿಯಾಗಿ ಕೃಷ್ಣ, ಸಹಾಯಕ ನಿರ್ದೇಶಕರು ಕೃಷಿ ಇಲಾಖೆ ಮತ್ತು ಪಂಚಾಯತ್ ಆಡಳಿತಾಧಿಕಾರಿ ಶ್ರೀಮತಿ ಎಸ್.ಆರ್. ಗಿರಿಜಮ್ಮ ಹಾಗೂ ಪಿಡಿಒ ನಾಗರಾಜ್ ಎಂ.ಕೆ. ಹಾಜರಿದ್ದು
ಆರಂಭದಲ್ಲಿ ಪಿಡಿಓ ರವರು ಸ್ವಾಗತಿಸಿದರು. ತದನಂತರ ಗ್ರಾಮಸ್ಥರು ಹಲವು ಅದಿಕಾರಿಗಳು ಗೈರು ಹಾಜರಿಯಲ್ಲಿ ಗ್ರಾಮ ಸಭೆ ಆರಂಭಿಸುವಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಇಲಾಖಾಧಿಕಾರಿಗಳು ತಮ್ಮ ಇಲಾಖೆಯ ಬಗ್ಗೆ ಜವಾಬ್ದಾರಿಯನ್ನು ಹೊಂದಿಕೊಂಡು ವರ್ಷಕ್ಕೆ ಎರಡು ಸರಿ ಆಗುವ ಗ್ರಾಮಸಭೆಗೆ ಹಾಜರಾಗುವುದು ಅವರ ಕರ್ತವ್ಯ ಆದರೆ ಇಂದು ವೇದಿಕೆಯಲ್ಲಿ ಕೆಲವೇ ಇಲಾಖಾ ಅಧಿಕಾರಿಗಳು ಹಾಜರಿದ್ದು ಗ್ರಾಮಸ್ಥರಿಗೆ ಅಸಮಾನಧಾನವಾಗಿದೆ. ಇಂದು ವಲಯ ಅರಣ್ಯ ಅಧಿಕಾರಿ, ಸಮಾಜ ಕಲ್ಯಾಣ ಇಲಾಖೆ, ತೊಟಾಗಾರಿಕೆ ಇಲಾಖೆ, ಆಹಾರ ಇಲಾಖೆ, ಸಾಮಾಜಿಕ ಅರಣ್ಯ ಇಲಾಖೆ, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗದವರ ಗೈರು ಹಾಜರಿಯನ್ನು ಪ್ರಶ್ನಿಸಿದ ನಂತರ ಗ್ರಾಮಿ ಆಡಳಿತ ಅಧಿಕಾರಿಗಳು ಗ್ರಾಮಸಭೆ ಮುಂದೂಡಲಾಗಿದೆಂದು ಘೋಷಿಸಿದರು.





