

ಕುಂದಾಪುರ ತುಳಸಿ ವಿದ್ಯಾ ಮಂದಿರ ಹಳ್ನಾಡಿನಲ್ಲಿ ದೇಶದ 80ನೇ ಸ್ವಾತಂತ್ರ್ಯ ದಿನಾಚರಣೆಯ ಅತ್ಯಂತ ಸಂಭ್ರಮವಾಗಿ ಹಾಗೂ ದೇಶಭಕ್ತಿ ಭಾವನೆಯೊಂದಿಗೆ ಆಚರಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾಜಿ ಇಂಡಿಯನ್ ಸರ್ವಿಸ್ ಅಧಿಕಾರಿ ಶ್ರೀ ಕರುಣಾಕರ ಗಾಣಿಗ ಹಾಗೂ ಶ್ರೀ ಕಾಮರಾಜ ಶೆಟ್ಟಿ ರಾಯಲ್ ವೆಂಟೇಜ್ ಹಲ್ನಾಡು ಇವರು ಉಪಸ್ಥಿತರಿದ್ದರು. ಶ್ರೀ ಕರುಣಾಕರ ಗಾಣಿಗ ಅವರು ದ್ವಜಾರೋಹಣ ನೆರವೇರಿಸಿದರು.
ವಿದ್ಯಾರ್ಥಿ ನಾಯಕ ಸಾಕ್ಷರ ಆರ್ ಶೆಟ್ಟಿ ಅವರು ಶ್ರೀ ಕರುಣಾಕರ್ ಗಾಣಿಗ ಅವರನ್ನು ಧ್ವಜಾರೋಹಣ ನೆರವೇರಿಸಿ ಕೊಡುವಂತೆ ಆತ್ಮೀಯವಾಗಿ ಆಹ್ವಾನಿಸಿದರು ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿ ಮುಖ್ಯಸ್ಥರಾದ ಸಿ.ಎ ಕೃಷ್ಣರಾಯ್ ಶಾನುಭಾಗ್ ಹಾಗೂ ಶಾಲಾ ಮುಖ್ಯೋಪಾಧ್ಯಾಯನಿಯಾಗಿರುವ ಶ್ರೀಮತಿ ರೇಷ್ಮಾ ಪ್ರದೀಪ್ ಅವರು ಉಪಸ್ಥಿತರಿದ್ದರು. ಮುಖ್ಯ ಅತಿಥಿಗಳು , ಆಡಳಿತ ಮಂಡಳಿಯ ಮುಖ್ಯಸ್ಥರು, ಮುಖ್ಯೋಪಾಧ್ಯಾಯವರು ಸ್ವಾತಂತ್ರ್ಯದ ಮಹತ್ವದ, ದೇಶಪ್ರೇಮದ ಕುರಿತು ಮಾತನಾಡಿದರು.
ಕಾರ್ಯಕ್ರಮದ ನಿರೂಪಣೆಯನ್ನು 9ನೇ ತರಗತಿಯ ವಿದ್ಯಾರ್ಥಿಗಳಾದ ಸಾಕ್ಷರ್ ಆರ್ .ಶೆಟ್ಟಿ ನೆರವೇರಿಸಿದರು ಮಾನ್ವಿ ಆಚಾರ್ ಸ್ವಾಗತಿಸಿದರು ಸುಶಾನ್ ಧನ್ಯವಾದ ಸಮರ್ಪಣೆಯನ್ನು ನೆರವೇರಿಸಿದರು.
ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಶಾಲೆಯಲ್ಲಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಮುಖ್ಯ ಅತಿಥಿಗಳು, ಶಾಲಾ ಆಡಳಿತ ಮಂಡಳಿಯ ಮುಖ್ಯಸ್ಥರು ಹಾಗೂ ಮುಖ್ಯೋಪಾಧ್ಯಾಯನಿಯವರು ಬಹುಮಾನ ವಿತರಿಸಿದರು.
ಶಾಲಾ ವಿದ್ಯಾರ್ಥಿಗಳ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಹಕರಿಸಿದರು. ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ಹಾಗೂ ಶಾಲಾ ಆಡಳಿತ ಮಂಡಳಿಯ ಸಕ್ರಿಯ ಸಹಭಾಗಿತ್ವದಿಂದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.


