

ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯಲ್ಲಿ ಭಾರತದ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು 15 ಆಗಸ್ಟ್ 2026ರಂದು ದೇಶಭಕ್ತಿಯ ಉತ್ಸಾಹ ಮತ್ತು ಸಂಭ್ರಮದಿಂದ ಆಚರಿಸಲಾಯಿತು. ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ (CISF) ಅಧಿಕಾರಿ ಇನ್ಸ್ಪೆಕ್ಟರ್ ಮಿತೇಶ್ ಪ್ರಸಾದ್ ಅವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.
ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಇನ್ಸ್ಪೆಕ್ಟರ್ ಮಿತೇಶ್ ಪ್ರಸಾದ್ ಅವರು ವಿದ್ಯಾರ್ಥಿಗಳೇ ದೇಶದ ಭವಿಷ್ಯದ ನಿರ್ಮಾತೃಗಳು ಎಂದು ತಿಳಿಸಿದರು. ಉತ್ತಮ ವ್ಯಕ್ತಿತ್ವ, ಪ್ರಾಮಾಣಿಕತೆ, ಸಮರ್ಪಣಾ ಮನೋಭಾವ ಮತ್ತು ಶಿಸ್ತನ್ನು ಬೆಳೆಸಿಕೊಳ್ಳುವಂತೆ ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ಸ್ಮರಿಸಿದ ಅವರು, ವಿದ್ಯಾರ್ಥಿಗಳು ತಮ್ಮ ಗುರಿಯತ್ತ ಗಮನಹರಿಸಿ, ಅನಗತ್ಯ ವ್ಯಾಕುಲತೆಗಳಿಂದ ದೂರವಿದ್ದು, ದೇಶಕ್ಕೆ ಅರ್ಥಪೂರ್ಣ ಕೊಡುಗೆ ನೀಡಬೇಕು ಎಂದು ಪ್ರೇರೇಪಿಸಿದರು.
ಶಾಲೆಯ ಪ್ರಾಂಶುಪಾಲರಾದ ರೆ.ವಂ. ಫಾ. ರೋಹನ್ ಡಿ’ಅಲ್ಮೇಡಾ ಎಸ್. ಜೆ ಅವರು ಸ್ವಾತಂತ್ರ್ಯ ಎಂದರೆ ನಿಯಮಗಳು ಮತ್ತು ಕಟ್ಟುಪಾಡುಗಳ ಅನುಪಸ್ಥಿತಿ ಅಲ್ಲ; ಬದಲಾಗಿ ಅದು ಜವಾಬ್ದಾರಿಯೊಂದಿಗೆ ಕೂಡಿದೆ ಎಂದು ವಿದ್ಯಾರ್ಥಿಗಳಿಗೆ ನೆನಪಿಸಿದರು. ಸಾಮಾಜಿಕ ಜಾಲತಾಣಗಳು, ಮೊಬೈಲ್ ಫೋನ್ಗಳು ಮತ್ತು ಆನ್ಲೈನ್ ಆಟಗಳ ಮೇಲಿನ ತಮ್ಮ ಅವಲಂಬನೆಯ ಕುರಿತು ವಿದ್ಯಾರ್ಥಿಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ತಿಳಿಸಿದರು. “ನಾನು ನನ್ನ ದೇಶಕ್ಕೆ ಏನು ನೀಡುತ್ತಿದ್ದೇನೆ?” ಎಂಬ ಪ್ರಶ್ನೆಯನ್ನು ತಮ್ಮೊಳಗೆ ಕೇಳಿಕೊಳ್ಳುವಂತೆ ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು. 2047ರ ವೇಳೆಗೆ ತಾವು ನಿರ್ಮಿಸಲು ಬಯಸುವ ಭಾರತವನ್ನು ಕಲ್ಪಿಸಿಕೊಳ್ಳುವಂತೆ ಪ್ರೋತ್ಸಾಹಿಸಿದ ಅವರು, ದೇಶದ ಭವಿಷ್ಯವು ಯುವ ನಾಗರಿಕರ ಆಯ್ಕೆಗಳು ಮತ್ತು ಕಾರ್ಯಗಳ ಮೇಲೆ ಅವಲಂಬಿತವಾಗಿದೆ ಎಂದು ಹೇಳಿದರು.
ಗೌರವಾನ್ವಿತ ಅತಿಥಿಗಳನ್ನು ಎನ್. ಸಿ. ಸಿ ಕೆಡೆಟ್ಗಳು ಕಾರ್ಯಕ್ರಮದ ಸ್ಥಳಕ್ಕೆ ಗೌರವಪೂರ್ವಕವಾಗಿ ಕರೆತಂದರು. ತ್ರಿವರ್ಣ ಧ್ವಜಾರೋಹಣದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು. ನಂತರ ರಾಷ್ಟ್ರಗೀತೆ ಮತ್ತು ರಾಷ್ಟ್ರೀಯ ಗೀತೆಯನ್ನು ಹಾಡಲಾಯಿತು.
“ಸ್ವಾತಂತ್ರ್ಯದಿಂದ ಪ್ರಗತಿಯೆಡೆಗೆ: ನಾವೆಲ್ಲರೂ ಸೇರಿ ನಾಳೆಯನ್ನು ರೂಪಿಸೋಣ” ಎಂಬ ಆಶಯದೊಂದಿಗೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮವು ಭಾರತದ ಪಯಣವನ್ನು ಸುಂದರವಾಗಿ ಅನಾವರಣಗೊಳಿಸಿತು. ದೇಶದ ಭವಿಷ್ಯವನ್ನು ರೂಪಿಸುವಲ್ಲಿ ಯುವ ಪೀಳಿಗೆಯ ಜವಾಬ್ದಾರಿಯನ್ನು ಕಾರ್ಯಕ್ರಮವು ಪರಿಣಾಮಕಾರಿಯಾಗಿ ಬಿಂಬಿಸಿತು.
ST ALOYSIUS GONZAGA SCHOOL CELEBRATES 80TH INDEPENDENCE DAY

St Aloysius Gonzaga School celebrated India’s 80th Independence Day on 15 August 2026 with patriotic fervour and enthusiasm. Inspector Mitesh Prasad, Officer of the Central Industrial Security Force (CISF), Mangaluru International Airport, was the Chief Guest.
Addressing the students, Inspector Mitesh Prasad highlighted their role as nation-builders and urged them to cultivate character, integrity, dedication and discipline. Recalling the sacrifices of the freedom fighters, he encouraged the students to remain focused, avoid distractions and contribute meaningfully to the nation.
Rev. Fr. Rohan D’Almeida SJ reminded the students that freedom does not mean the absence of rules and regulations but comes with responsibility. He urged them to reflect on their dependence on social media, mobile phones and online games and asked them to consider, “What am I giving to my country?” He also encouraged them to envision the India they wish to build by 2047, reminding them that the future of the nation depends on the choices and actions of its young citizens.
The dignitaries were escorted to the venue by the NCC cadets. The ceremonial hoisting of the Tricolour marked the commencement of the celebration, followed by the National Song and the National Anthem.
The cultural programme, themed “From Freedom to Progress: Together We Shape Tomorrow,” beautifully portrayed India’s journey and highlighted the responsibility of the younger generation in shaping its future. The celebration concluded with a vote of thanks, followed by the distribution of sweets to the students.










