

ಕೋಟೇಶ್ವರ:ಎಲ್ಲೇ ಹೋದರು ನಮ್ಮ ಭಾಷೆಯನ್ನು ಪ್ರೀತಿಸಿದಾಗ, ಮಾತನಾಡಿದಾಗ ಜನರು ನಮ್ಮನ್ನು ಗುರುತಿಸುತ್ತಾರೆ. ವಿಶ್ವ ಕುಂದಾಪ್ರ ಕನ್ನಡ ದಿನವು ನಮ್ಮ ಭಾಷೆ ಮತ್ತು ಸಂಸ್ಕøತಿಯನ್ನು ಉಳಿಸಿ ಬೆಳೆಸಲು ಸಹಾಯ ಮಾಡಿದೆ ಎಂದು ಪ್ರಗತಿಪರ ಕೃಷಿಕ, ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕ ಕೆ.ಶಿವಮೂರ್ತಿ ಹೇಳಿದರು.
ಅವರು ಬುಧವಾರ ಬೀಜಾಡಿ ಮಿತ್ರಸೌಧದಲ್ಲಿ ಮಿತ್ರ ಸಂಗಮ ಬೀಜಾಡಿ-ಗೋಪಾಡಿ ಇವರ ಆಶ್ರಯದಲ್ಲಿ ರೋಟರಿ ಕ್ಲಬ್ ಕುಂದಾಪುರ ರಿವರ್ಸೈಡ್, ರೋಟರಿ ಸಮುದಾಯ ದಳ ಬೀಜಾಡಿ-ಗೋಪಾಡಿ, ಲಯನ್ಸ್ ಕ್ಲಬ್ ಕುಂದಾಪುರ ಸಿಟಿ ಸೆಂಟರ್ ಸಹಯೋಗದಲ್ಲಿ ನಡೆದ 8ನೇ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಆಧುನಿಕತೆಯಿಂದ ಗ್ರಾಮೀಣ ಕೃಷಿ ಬದುಕು ಮಾಯವಾಗುತ್ತಿದೆ.ಇಂತಹ ಕಾರ್ಯಕ್ರಮದ ಮೂಲಕ ಅವುಗಳನ್ನು ನೆನಪಿಸುವ ಕಾರ್ಯವಾಗಬೇಕು.ಈ ನಿಟ್ಟಿನಲ್ಲಿ ಮಿತ್ರ ಸಂಗಮದ ಕಾರ್ಯ ಶ್ಲಾಘನೀಯ ಎಂದರು.
ಇದೇ ಸಂದರ್ಭದಲ್ಲಿ ನಮ್ಮ ಮಣ್ಣಿನ ಸಾಧಕರಾದ ಕೃಷಿಕ ಮಹಿಳೆ ಮುತ್ತು ಪೂಜಾರಿ ಮರಿನಮನೆ, ಅಂಚೆ ವಿತರಕ ರಾಘವೇಂದ್ರ ಪೂಜಾರಿ, ಕರಕುಶಲ ಕರ್ಮಿ ಶಂಕರ ಶೆಟ್ಟಿಗಾರ್, ನಿವೃತ್ತ ಯೋಧ ಕರುಣಾಕರ ಗಾಣಿಗರ ಪತ್ನಿ ನಯನ ಗಾಣಿಗ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ರೋಟರಿ ಕ್ಲಬ್ ಕುಂದಾಪುರ ರಿವರ್ಸೈಡ್ ಅಧ್ಯಕ್ಷ ಸದಾನಂದ ಬಳ್ಕೂರ್, ಲಯನ್ಸ್ ಕ್ಲಬ್ ಕುಂದಾಪುರ ಸಿಟಿ ಸೆಂಟರ್ ಅಧ್ಯಕ್ಷ ಪ್ರಸಾದ್ ಕುಮಾರ್ ಕೋಡಿ ಶುಭ ಹಾರೈಸಿದರು.ಬೀಜಾಡಿ ಮಿತ್ರ ಸಂಗಮದ ಅಧ್ಯಕ್ಷ ವೇದಮೂರ್ತಿ ಶಂಕರನಾರಾಯಣ ಬಾಯರಿ, ಬೀಜಾಡಿ-ಗೋಪಾಡಿ ರೋಟರಿ ಸಮುದಾಯ ದಳ ಅಧ್ಯಕ್ಷ ಚಂದ್ರ ಬಿಎನ್, ಶುಭದೀಪಾನಂದ ಉಪಾಧ್ಯ ಉಪಸ್ಥಿತರಿದ್ದರು. ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯ ಪ್ರಯುಕ್ತ ನಡೆದ ಅದೃಷ್ಟವಂತರಾಗಿ ಆಯ್ಕೆಯಲ್ಲಿ ಮೊದಲ ಬಹುಮಾನವನ್ನು ರಾಧಿಕಾ ಉಪಾಧ್ಯ, ದ್ವಿತೀಯ ಉದಯ ಗಾಣಿಗ ಪಡೆದುಕೊಂಡರು. ಮಿತ್ರ ಸಂಗಮದ ಗೌರವಾಧ್ಯಕ್ಷ ಬಿ.ವಾದಿರಾಜ್ ಹೆಬ್ಬಾರ್ ಸ್ವಾಗತಿಸಿದರು. ಪ್ರತಿಮಾ ಚಂದ್ರಶೇಖರ ಪ್ರಾರ್ಥಿಸಿದರು. ಉಪಾಧ್ಯಕ್ಷ ಅನೂಪ್ ಕುಮಾರ್ ಬಿ.ಆರ್ ವಂದಿಸಿದರು.ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಬೀಜಾಡಿ,ಗ್ರಾಯತ್ರಿ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.
ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಮಯೂರಿ ನೃತ್ಯ ತಂಡ ಕುಂಭಾಶಿ ಇವರಿಂದ ನೃತ್ಯ ವೈಭವ ಜರುಗಿತು.
ಕುಂದಾಪ್ರ ಕನ್ನಡ ದಿನಾಚರಣೆ ಪ್ರಯುಕ್ತ ನಮ್ಮ ಮಣ್ಣಿನ ಸಾಧಕರಾದ ಕೃಷಿಕ ಮಹಿಳೆ ಮುತ್ತು ಪೂಜಾರಿ ಮರಿನಮನೆ, ಅಂಚೆ ವಿತರಕ ರಾಘವೇಂದ್ರ ಪೂಜಾರಿ, ಕರಕುಶಲ ಕರ್ಮಿ ಶಂಕರ ಶೆಟ್ಟಿಗಾರ್, ನಿವೃತ್ತ ಯೋಧ ಕರುಣಾಕರ ಗಾಣಿಗರ ಪತ್ನಿ ನಯನ ಗಾಣಿಗ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.

