

ಕುಂದಾಪುರ, ಆ.4: ಹೋಲಿ ರೋಜರಿ ಚರ್ಚಿನಲ್ಲಿ ಸರ್ವ ಯಾಜಕ ಪಾಲಕ ಜೋನ್ ಮಾರೀ ವಿಯಾನ್ನಿ ಇಹ ಲೋಕ ತ್ಯಜಿಸಿದ ದಿನ ಅಗೋಸ್ತ್ 4 ರಂದು ಸ್ಮರಣೆಯನ್ನು ಆಚರಿಸಲಾಯಿತು. ಈ ಪ್ರಯುಕ್ತ ಕುಂದಾಪುರ ಚರ್ಚಿನ ವಂ। ಧರ್ಮಗುರು ಪ್ರಾಂಶುಪಾಲ ರೊಲ್ವಿನ್ ಫೆರ್ನಾಂಡಿಸ್ ಬಲಿಪೂಜೆಯನ್ನು ಅರ್ಪಿಸಿದರು. ಪ್ರಧಾನ ಧರ್ಮಗುರು ಅ|ವಂ|ಪಾವ್ಲ್ ರೇಗೊ ಸಹ ಬಲಿದಾನವನ್ನು ಅರ್ಪಿಸಿದರು.
ನಂತರ ನಡೆದ ಧರ್ಮಗುರುಗಳಿಗೆ ಅಭಿನಂದನ ಸಮಾರಂಭದಲ್ಲಿ ಸಂತ ಜೋಸೆಫ್ ಕಾನ್ವೆಂಟಿನ ಮುಖ್ಯಸ್ಥೆ ಭಗಿನಿ ಸುಗುಣ ಇವರು ಚರ್ಚಿನ ಪರವಾಗಿ ಧರ್ಮಗುರುಗಳು ಮಾಡುವ ಸೇವೆಯನ್ನು ತಿಳಿಸಿ ಅವರು ನಮಾಗಾಗಿ ಮಾಡುವ ಸೇವೆಯನ್ನು ವ್ಯಾಖನ್ನಿಸಿ, ಹ್ರತ್ಪೂರ್ವಕ ಕೃತಜ್ಞತೆ ಸಲ್ಲಿಸಿ, ಇಬ್ಬರೂ ಧರ್ಮಗುರುಗಳಿಗೆ ಹೂ ಗುಚ್ಚ ನೀಡಿ ಅಭಿನಂದಿಸಿದರು. ಗಾಯನ ಮಂಡಳಿ ಸದಸ್ಯರು ಅಭಿನಂದನ ಗೀತೆಯನ್ನು ಹಾಡಿದರು.
ಅಭಿನಂದಕ್ಕೆ ಉತ್ತರವಾಗಿ ಅ|ವಂ|ಪಾವ್ಲ್ ರೇಗೊ ‘ನಮ್ಮ ಪಾಲಕ ಜೋನ್ ಮಾರೀ ವಿಯಾನ್ನಿ, ಈ ಮೊದಲು ಸೆಕ್ಯೂಲರ್ ಮೇಳದ ಧರ್ಮಗುರುಗಳ ಪಾಲಕ ಮಾತ್ರವಾಗಿದ್ದರು, ಆದರೆ ಅವರ ಶ್ರೇಷ್ಠತೆ ಅವರ, ಕ್ಷಮದಾನ, ತ್ಯಾಗ, ದಯೆ, ಸರಳತೆ ಭಕ್ತಿಮಯ ಆದರ್ಶ ಜೀವನ ನೋಡಿ ಅವರನ್ನು ಇದೀಗ ಸರ್ವ ಯಾಜಕರ ಪಾಲಕರನ್ನಾಗಿ ಆರಿಸಿದ್ದಾರೆ ಎಂದು ತಿಳಿಸಿ, ಇಂದು ತುಂಬಾ ಮಳೆ ಇದ್ದರೂ ಸಾಕಷ್ಟು ಜನ ಪವಿತ್ರ ಬಲಿದಾನಕ್ಕೆ ಬಂದು ನಮಗಾಗಿ ಪ್ರಾಥಿಸಿದ್ದಿರಿ, ಬಲಿದಾನದನದ ಸಮಯದಲ್ಲಿ ಉತ್ತಮ ಪೀಠಿಕೆ ಜೊತೆ ಯಾಜಕರಿಗಾಗಿ ಉತ್ತಮ ಪ್ರಾರ್ಥನೆ ಸಲ್ಲಿಸಿದ್ದಿರಿ’ ಎಂದು ಎಲ್ಲರಿಗೂ ಧನ್ಯವಾದ ಅರ್ಪಿಸಿದರು.
ಈ ಸಂದರ್ಭದಲ್ಲಿ ಕಾನ್ವೆಂಟಿನ ಧರ್ಮಭಗಿನಿಯರು ಪಾಲನ ಮಂಡಳಿಯವರು, ಗುರಿಕಾರರು ಭಕ್ತಾಧಿಗಳು ಹಾಗೂ ಭಕ್ತಾಧಿಗಳು ಹಾಜರಿದ್ದು ಧರ್ಮಗುರುಗಳನ್ನು ಅಭಿನಂದಿಸಲಾಯಿತು.















