

ಕುಂದಾಪುರ: ವ್ಯಕ್ತಿಯೊಬ್ಬರನ್ನು ಗುಂಡಿಕ್ಕಿ ಬರ್ಬರವಾಗಿ ಹತ್ಯೆಗೈದ ಘಟನೆ ಶುಕ್ರವಾರ ಬೆಳಿಗ್ಗೆ 3.30ರ ಸುಮಾರಿಗೆ ಕುಂದಾಪುರದ ಹೋಲಿ ರೋಸರಿ ಚರ್ಚ್ ಎದುರಿನ, ಕಾನ್ವೆಂಟ್ ಕ್ರಾಸ್ ನಲ್ಲಿ ರಸ್ತೆಯಲ್ಲಿ ನಡೆದಿದೆ.
ಮೂಲತಹ ಕೊಲೆಯಾದ ವ್ಯಕ್ತಿ ಅಜೆಕಾರಿನವರಾಗಿದ್ದು, ಹೆಬ್ರಿಯಲ್ಲಿ ವಾಸಿಸುತಿದ್ದರು. ಅವರ ತಾಯಿ ಹೆಬ್ರಿಯಲ್ಲಿ ವಾಸಿಸುತಿದ್ದು, ಕೊಲೆಯಾದ ಐವನ್ ರಿಚರ್ಡ್ ಮಸ್ಕರೆನ್ಹಾಸ್ (45) ಪತ್ನಿ ಎಂದು ಹೇಳಿಕೊಂಡ ಲಲಿತಾ ಜೊತೆ ಕೆಲವು ತಿಂಗಳ ಹಿಂದೆ ಬಾರ್ಕೂರಿನ ಹಾಳೆಕೋಡಿ ಹತ್ತಿರ ಬಾಡಿಗೆ ಮನೆಯಲ್ಲಿ ವಾಸಿಸುತಿದ್ದರು ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಕೊಲೆಯಾದ ವ್ಯಕ್ತಿ ಮತ್ತು ಗುಂಡಿಕ್ಕಿ ಹತ್ಯೆ ಮಾಡಿದ ವ್ಯಕ್ತಿ ಮಧ್ಯೆ ಹಣಕಾಸಿನ ವ್ಯವಹಾರ ಇದ್ದು ಗುರುವಾರ ರಾತ್ರಿ ಫೋನ್ ಸಂಭಾಷಣೆಯಲ್ಲಿ ಜಗಳ ನಡೆದಿದ್ದು, ಕೊಲೆ ಮಾಡಿದ ಆರೋಪಿಯು ಐವನ್ ರಿಚರ್ಡ್ ಮಸ್ಕರೆನ್ಹಾಸ್ ಅವರನ್ನು ಮಾತಿನಲ್ಲಿ ಕೆರಳಸಿ, ನೀನು ದಂ ಇದ್ದರೆ ಕುಂದಾಪುರಕ್ಕೆ ಬಾ ಎಂದು ಲೋಕೇಶನ್ ಕಳುಹಿಸಿದ್ದಾನೆ, ಸಿಟ್ಟು ತಡೆಯದೆ ಪತ್ನಿ ಎಂದು ಲಲಿತಾ ಮಸ್ಕರೆನ್ಹಾಸ್ ಕುಂದಾಪುರಕ್ಕೆ ಹೋಗುವುದನ್ನು ತಡೆದಿದ್ದಾಳೆ, ಆದರೂ ಕೇಳದೆ ಹೊರಡಿದಾಗ, ಕೊನೆಗೆ ಲಲಿತಾ ಮಸ್ಕರೆನ್ಹಾಸ್ ಕೂಡ ನಾನು ಬರುತ್ತೇನೆ ಎಂದು ಜೊತೆಗೆ ಬಂದಿದ್ದಾಳೆ, ಆರೋಪಿ ಹೇಳಿದ ಜಾಗಕ್ಕೆ ತೆರಳಿದಾಗ ಆರೋಪಿಯು ಸಣ್ಣ ಕೋವಿಯಿಂದ ಐವನ್ ರಿಚರ್ಡ್ ಮಸ್ಕರೆನ್ಹಾಸ್ ಅವರನ್ನು ಲಲಿತಾ ಮಸ್ಕರೆನ್ಹಾಸ್ ಎದುರಿನಲ್ಲೆ ಗುಂಡು ಹೊಡೆದು ಆರೋಪಿ ಪರಾರಿಯಾಗಿದ್ದಾನೆ” ಎಂದು ಲಲಿತಾ ಮಸ್ಕರೆನ್ಹಾಸ್ ಮಾಧ್ಯಮಕ್ಕೆ ತಿಳಿಸಿದ್ದಾಳೆ. ಐವನ್ ಅವರ ತಾಯಿ ಆರೋಪಿಯು ನನಗೆ ಬಹಳ ಹಣ ಕೊಡಲಿಕ್ಕೆ ಇದೆಯೆಂದು ಮಗ ತಿಳಿಸಿದ್ದ ಎಂದು ಕಣ್ಣಿರಿಟ್ಟು ಮಾಧಮಕೆ ತಿಳಿಸಿದರು.
ಐವನ್ ಅವರು ತಮ್ಮ ಮೊದಲ ಪತ್ನಿಯಾದ ಸೆಲ್ಮಾ ಮಸ್ಕರೆನ್ಸ್ ಅವರನ್ನು ತೊರೆದು ಲಲಿತಾ ಮಸ್ಕರೆನ್ಹಾಸ್ ಜೊತೆ ಸಂಸಾರ ನಡೆಸುತ್ತಿದ್ದರು ಎಂದು ಹೇಳಲಾಗಿದೆ.
ಐವನ್ ತೀವ್ರ ರಕ್ತಸ್ರಾವದಿಂದ ಐವನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಹಟನೆ ಕುಂದಾಪುರ ಚರ್ಚ್ ಎದುರಿನಲ್ಲೆ ಆದ ಕಾರಣ ಚರ್ಚ್ ಆವರಣದಲ್ಲಿ ಜನಸಾಗರ ತುಂಬಿತ್ತು. ಎರಡನೇ ಪತ್ನಿ ಎಂದು ಹೇಳಿಕೊಳ್ಳುವ ಲಲಿತಾ ಮಸ್ಕರೆನ್ಹಾಸ್ ಆರೋಪಿ ಯಾರೆಂದು ತಿಳಿಸಿದ್ದು, ಪೊಲೀಸರಿಗೆ ಹೇಳಿಕೆಯನ್ನು ನೀಡಿದ್ದಾಳೆ. ಪರಾರಿಯಾದ ಆರೋಪಿ ಕ್ರೈಸ್ತ ಧರ್ಮದವಾನಿಗಿದು, ಕೊಲೆಯಾದ ವ್ಯಕ್ತಿ ಜೊತೆ ಸಂಪರ್ಕ ಇಟ್ಟುಕೊಂಡಿದನು. ಅವನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಉಡುಪಿ ಎಸ್ಪಿ ಹರಿರಾಂ ಶಂಕರ್, ಹೆಚ್ಚುವರಿ ಎಸ್ಪಿ ಸುಧಾಕರ್ ನಾಯಕ್, ಡಿವೈಎಸ್ಪಿ ಎಚ್.ಡಿ. ಕುಲಕರ್ಣಿ, ಕುಂದಾಪುರ ನಗರ ಠಾಣೆ ಇನ್ಸ್ಪೆಕ್ಟರ್ ಜಯರಾಮ ಗೌಡ, ಪಿಎಸ್ಐಗಳಾದ ನಂಜಾ ನಾಯ್ಕ್, ಪುಷ್ಪಾ, ಅನೂಪ್ ನಾಯಕ್ ಮೊದಲಾದವರು ಭೇಟಿ ನೀಡಿದ್ದಾರೆ. ಕುಂದಾಪುರ ಚರ್ಚಿನಲ್ಲಿ ಮ್ರತ ಪಟ್ಟವನಿಗಾಗಿ ಪ್ರಾರ್ಥನೆ ಸಲ್ಲಿಸಲಾಯಿತು.









