

ಮಂಗಳೂರು; ಸೈಂಟ್ ಅಲೋಶಿಯಸ್ ಶಾಲೆಯಲ್ಲಿ ರಾಷ್ಟ್ರೀಯ ಪೋಷಕರ ದಿನಾಚರಣೆಯ ಅಂಗವಾಗಿ ಕಬ್ಸ್ ಮತ್ತು ಬುಲ್ಬುಲ್ಸ್ ಮಕ್ಕಳಿಗಾಗಿ (Family Tree) ವಂಶವೃಕ್ಷ ಸ್ಪರ್ಧೆಯನ್ನು ಆಯೋಜಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಅಲೋಶಿಯಸ್ ಡಿ’ಸೋಜಾ ಅವರು ವಹಿಸಿದ್ದರು. ಅವರು ಮಕ್ಕಳನ್ನು ಉದ್ದೇಶಿಸಿ ಮಾತನಾಡಿ, ಕುಟುಂಬದ ಮೌಲ್ಯಗಳು ಹಾಗೂ ಕುಟುಂಬದ ಸದಸ್ಯರ ಬಗ್ಗೆ ತಿಳಿದುಕೊಳ್ಳುವ ಮಹತ್ವವನ್ನು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಕಬ್ಸ್ ಶಿಕ್ಷಕಿ ಶ್ರೀಮತಿ ಪೂರ್ಣಿಮಾ ಹಾಗೂ ಬುಲ್ಬುಲ್ಸ್ ಶಿಕ್ಷಕಿ ಶ್ರೀಮತಿ ತ್ರಿವೇಣಿ ಉಪಸ್ಥಿತರಿದ್ದು, ಸ್ಪರ್ಧೆಯನ್ನು ಯಶಸ್ವಿಯಾಗಿ ನಡೆಸಿಕೊಟ್ಟರು. ಮಕ್ಕಳು ಅತ್ಯಂತ ಉತ್ಸಾಹದಿಂದ ಹಾಗೂ ಸೃಜನಾತ್ಮಕವಾಗಿ ತಮ್ಮ ವಂಶವೃಕ್ಷಗಳನ್ನು ತಯಾರಿಸಿ ಪ್ರದರ್ಶಿಸಿದರು.
ಕಾರ್ಯಕ್ರಮವು ಮಕ್ಕಳಲ್ಲಿ ಕುಟುಂಬದ ಬಗ್ಗೆ ಅರಿವು, ಗೌರವ ಮತ್ತು ಸೃಜನಶೀಲತೆಯನ್ನು ಬೆಳೆಸುವಲ್ಲಿ ಯಶಸ್ವಿಯಾಯಿತು.

