

ಹಳೆಯಂಗಡಿ; ಹಳೆಯಂಗಡಿ ಶ್ರೀ ನಾರಾಯಣ ಸನಿಲ್ ಸರಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿ ಪಾರ್ಲಮೆಂಟಿನ ಮಂತ್ರಿ ಮಂಡಲ ಹಾಗೂ ವಿವಿಧ ಸಂಘಗಳ ವಾರ್ಷಿಕ ಕಾರ್ಯಕ್ರಮಗಳ ಉದ್ಧಾಟನಾ ಕಾರ್ಯಕ್ರಮ ದಿನಾಂಕ 09/07/2026 ರಂದು ನೆರವೇರಿತು.
ನಿವೃತ್ತ ಮುಖ್ಯಶಿಕ್ಷಕರು ಹಾಗೂ ಮೂಲ್ಕಿ ರೋಟರಿ ಕ್ಲಬ್ ಮಾಜಿ ಅಧ್ಯಕ್ಷರಾದ ಶ್ರೀ ಜಿನರಾಜ್ ಸಿ ಸಾಲ್ಯಾನ್ ಇವರು ದೀಪ ಬೆಳಗಿಸಿ ಶಾಲಾ ಸಂಸತ್ತು ಹಾಗೂ ವಿವಿದ ಸಂಘಗಳ ವಾರ್ಷಿಕ ಕಾರ್ಯಕ್ರಮಗಳನ್ನು ಉದ್ಭಾಟಿಸಿದರು. ಅವರು ಈ ಸಂದರ್ಭದಲ್ಲಿ ಮಾತನಾಡುತ್ತ ಚುಣಾವಣಾ ಪ್ರಕ್ರಿಯೆ ಅಚ್ಚುಕಟ್ಟಾಗಿ ಪಾಲಿಸುವುದರ ಜೊತೆಗೆ ಶಾಲಾ ವಿದ್ಯಾರ್ಥಿಗಳಿಗೆ ಸಂಸತ್ತಿನ ರಚನೆ ಮತ್ತು ಮತದಾನದ ಅರಿವನ್ನು ಮೂಡಿಸಿದಂತಾಗತ್ತದೆ. ಇದರ ಜೊತೆಗೆ ಮಕ್ಕಳು ಸ್ಪರ್ಧಾತ್ಮಕ ಗುಣಗಳನ್ನು ಅಳವಡಿಸಿಕೊಳ್ಳಲು ಈ ಶಾಲಾ ಸಂಸತ್ತು ರಚನೆ ಸಹಕಾರಿಯಾಗಿದೆ ಹಾಗೂ ಇದರ ಜೊತೆಗೆ ವಿದ್ಯಾರ್ಥಿಗಳ ನಾಯಕತ್ವ ಗುಣ ಅಭಿವೃದ್ಧಿಯಾಗುತ್ತದೆ ಎಂದು ಹೇಳಿದರು.
ಶಾಲಾ ಮುಖ್ಯ ಶಿಕ್ಷಕರಾದ ಮೈಕಲ್ ಡಿಸೋಜ ಇವರು ಸಮಾರಂಭದ ಅಧ್ಯಕ್ಷತೆ ವಹಿಸಿ ಶಾಲಾ ಪಾರ್ಲಿಮೆ೦ಟ್ ಮಂತ್ರಿಗಳಿಗೆ ಪ್ರಮಾಣ ವಚನ ಬೋದಿಸಿದರು ಅವರು ಈ ಸ೦ದರ್ಭದಲ್ಲಿ ಮಾತನಾಡುತ್ತ ಕೇವಲ ಪಠ್ಯ ಮಾತ್ರವಲ್ಲದೆ ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಅಗತ್ಯ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ತಿಳಿಯಲು ಮತ್ತು ಮುಖಂಡತ್ವ ಬೆಳೆಸಲು ಶಾಲಾ ಸಂಸತ್ತು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು.
ವಿದ್ಯಾರ್ಥಿ ಸಂಸತ್ತಿನ ಉಸ್ತುವಾರಿ ಶಿಕ್ಷಕಿ ಶ್ರೀಮತಿ ಜೂಲಿಯಟ್ ಫೆರ್ನಾ೦ಡೀಸ್ ಕಾರ್ಯಕ್ರಮ ನಿರ್ವಹಿಸಿರು. ಚೈತ್ರ ಎಂ.ಎಸ್. ಸ್ವಾಗತಿಸಿದರು. ಸುವಾಸಿನಿ ವಂದಿಸಿದರು. ಶಿಕ್ಷಕಿ ಮಾಲತಿ ಬಿ. ವಿನಯ, ಕುಮಾರಿ ಸುಜಾತ , ಶಾಲಾ ನಾಯಕಿ ಆಯಿಷ ಬೀಬಿ ವಿವಿಧ ಸಂಘಗಳ ಅಧ್ಯಕ್ಷರು ಉಪಸ್ಥಿತರಿದ್ದರು.



